ಸುತ ಭಾವದ ಚಂದ್ರನಿಂದ ಪುತ್ರ ಸಂತತಿಗೆ ತಡೆ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
ಪಂಚಮದಲ್ಲಿ ಚಂದ್ರನಿದ್ದರೆ ಇವರಿಗೆ ಹೆಂಗಸರ ಬುದ್ಧಿ ಇರುತ್ತದೆ. ಬಹಳ ಶ್ರಮ ಪಟ್ಟು ಹಣ ಸಂಪಾದನೆ ಮಾಡುತ್ತಾರೆ. ಪಂಚಮದಲ್ಲಿ ಚಂದ್ರನಿದ್ದು, ಬೇರೆ ಗ್ರಹಗಳು ಇಲ್ಲದಿದ್ದರೆ ಇವರಿಗೆ ಕನ್ಯಾ ಸಂತತಿ ಮಾತ್ರ ಇರುತ್ತದೆ. ಪುತ್ರ ಸಂತತಿ ಇರುವುದಿಲ್ಲ. ಚಂದ್ರನು ಕ್ಷೀಣಯುತನಾದರೆ ಚಂಚಲ ಪುತ್ರಿಯನ್ನು ಹೊಂದುತ್ತಾರೆ. ಇವರು ರೋಗಿಯೂ, ಭಯಾನಕರೂ ಆಗುವರು. ಪಂಚಮದ ಚಂದ್ರನು ಆರನೇ ವರ್ಷದಲ್ಲಿ ಅಗ್ನಿ ಯಾ ಬಿಸಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ. ಇದರಲ್ಲಿ ಚಂದ್ರನಿರಲು ಧೈರ್ಯ, ಒಳ್ಳೆಯ ಬುದ್ಧಿ, ಅಭಿವೃದ್ಧಿ ಹೊಂದುತ್ತಾರೆ. ಇವರದ್ದು ದೊಡ್ಡ, ಚೆಲುವಾದ ದೇಹ. ತೇಜಸ್ವಿ, ಮುಕ್ತ ವಿಚಾರಶೀಲರೂ ಆಗುತ್ತಾರೆ. ಇವರು ರಾಜಕೀಯದಲ್ಲಿ ಬಹಳ ಹೆಸರು ಮಾಡುತ್ತಾರೆ. ನಾಲ್ಕರ ಚಂದ್ರ ವಿಲಾಸ, ವಿನೋದ, ಮನೋರಂಜನೆಯಲ್ಲಿ ಆಸಕ್ತಿ ಇರುವವರೂ, ಮಕ್ಕಳಲ್ಲಿ, ಹೆಂಗಸರಲ್ಲಿ ಮೆಚ್ಚುಗೆ ಗಳಿಸುವವರೂ ಆಗುತ್ತಾರೆ. ಇವರ ಮಕ್ಕಳು ಚೆಲುವಾದ ದೇಹವನ್ನು ಹೊಂದುತ್ತಾರೆ. ಚಂದ್ರ ಬಲಿಷ್ಠನಾಗಿದ್ದರೆ ಇವರು ಮಟ್ಕಾ, ಜುಗಾರಿಯಲ್ಲಿ ಭಾರಿ ಲಾಭ ಪಡೆಯುತ್ತಾರೆ.
ಚತುರ್ಥಮ ದ್ವಿಭಾವ ರಾಶಿಯಾಗಿದ್ದರೆ ಇವರಿಗೆ ಅವಳಿ ಜವಳಿ ಮಕ್ಕಳಾಗುತ್ತದೆ. ಪಂಚಮದ ಚಂದ್ರನನ್ನು ಶನಿ ನೋಡುತ್ತಿದ್ದರೆ ಇವರು ವಂಚಕ, ಕಪಟ ಬುದ್ಧಿಯುಳ್ಳವರಾಗಿರತ್ತಾರೆ. ಮಾತಿನಿಂದ ಮರಳುಗೊಳಿಸಿ ಆಪ್ತ ಜನರನ್ನು ಕಷ್ಟಕ್ಕೆ ಈಡು ಮಾಡಿ ಹಣ ಸಂಗ್ರಹ ಮಾಡುತ್ತಾರೆ. ಈ ರಾತ್ರಿ ಚಂದ್ರ ಸಂತಾನ ಫಲ ಕೊಡುತ್ತಾನೆ. ಚಂದ್ರನೊಂದಿಗೆ ಕುಜನಿದ್ದರೆ ಇವರು ಸಾಹಸ ಮನೋವೃತ್ತಿಯುಳ್ಳವರಾಗುತ್ತಾರೆ. ಚಂದ್ರನು ಪಂಚಮದಲ್ಲಿ ಬಲಿಷ್ಠನಾಗಿದ್ದರೆ ಮಕ್ಕಳು ಭಾಗ್ಯವಂತರಾಗುತ್ತಾರೆ. ಇವರು ಮೇಧಾವಿ, ಮೆಲ್ಲ ಮೆಲ್ಲನೇ ನಡೆಯುವ ಮಂತ್ರಿಯಾಗುತ್ತಾರೆ. ಪಂಚಮ ಸ್ಥಾನವು ವೃಷಭ, ಕನ್ಯಾ, ಮಕರವಾದರೆ ಇವರಿಗೆ ಹೆಣ್ಣು ಮಕ್ಕಳು ಜಾಸ್ತಿಯಾಗುತ್ತರೆ. ಇವರಿಗೆ ವಿಳಂಬವಾಗಿ ನಲ್ವತ್ತೆರಡು ಪ್ರಾಯವಾಗುವಾಗ ಒಂದು ಗಂಡು ಮಗುವಾಗುವುದು. ಪಂಚಮವು ಮಿಥುನ, ತುಲಾ, ಕುಂಭವಾಗಿ ಅಲ್ಲಿ ಚಂದ್ರನಿದ್ದರೆ ಇವರಿಗೆ ಗಂಡು ಸಂತತಿಯಾಗಲು ದೋಷ ಇದ್ದು, ಸ್ತ್ರೀ ಸಂತಾನ ಇರುತ್ತದೆ. ಪಂಚಮ ಕರ್ಕಾಟಕ, ವಶ್ಚಿಕ, ಮೀನ, ಮೇಷ, ಸಿಂಹ, ಧನುಗಳ ಚಂದ್ರ ಪುತ್ರ ಸಂತಾನಕ್ಕೆ ಅನಿಷ್ಟದಾಯಕನಾಗುತ್ತಾನೆ. ಮೊದಲನೆಯ ಪುತ್ರ ಸಂತಾನ ನಷ್ಟವಾಗಿ ಬಳಿಕ ಸ್ತ್ರೀ ಸಂತಾನ ಹೊಂದಿ ಬಳಿಕ ಪುತ್ರ ಸಂತಾನವಾಗುವುದು.
ಅನ್ಯರ ಮನಸ್ಸನ್ನು ಬದಲುಗೊಳಿಸುವ ಪೌರುಷ ಸಾಧನೆ ಚಂದ್ರನಿಂದಾಗುವುದು. ಕಲಾವಿದರು ನಾಟಕದಲ್ಲಿ ಪೌರುಷ ತೋರಿಸುವುದು ಚಂದ್ರನಿಂದಾಗಿ. ನಪುಂಸಕತ್ವದ ಚಂದ್ರ, ಮಿಥುನ, ತುಲಾ, ಕುಂಭವು ಪಂಚಮ ಭಾವವಾದರೆ ಆಗುವ ಸಂಭವ ಇದೆ. ಪಂಚಮವು ಪುರುಷ ರಾಶಿ ಅಂದರೆ ಮೇಷ, ಮಿಥುನ, ಸಿಂಹ, ತುಲಾ, ಧನು ಮತ್ತು ಕುಂಭ ಈ ಭಾವವು ಶುಭ ಫಲವನ್ನು ಹೊಂದುತ್ತದೆ. ಮೇಷ, ಸಿಂಹ, ಧನು ರಾಶಿಗಳು ಪಂಚಮವಾಗಿ ಅಲ್ಲಿ ಚಂದ್ರನಿದ್ದು, ಅದಕ್ಕೆ ಕುಜನ ದೃಷ್ಟಿ ಇದ್ದರೆ ಇವರಿಗೆ ಅಗ್ನಿ ಬಾಧೆಗಳು ಬರುತ್ತದೆ. ಪಂಚಮವು ಮೇಷ, ಸಿಂಹ, ಧನು ರಾಶಿಗಳಾಗಿ ಅದರಲ್ಲಿ ಚಂದ್ರನು ಇದ್ದವರ ವಿದ್ಯೆಯು ಅಪೂರ್ಣವಾಗುವುದು. ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯು ಚೆನ್ನಾಗಿರುವುದಿಲ್ಲ. ವೃಷಭ, ಕನ್ಯಾ, ಮಕರ ಇದು ಪಂಚಮವಾಗಿ ಇಲ್ಲಿ ಚಂದ್ರನಿದ್ದರೆ ಇವರ ವಿದ್ಯಾಭ್ಯಾಸವು ಮೊಟಕುಗೊಳ್ಳುವುದು. ಇವರು ಸಾರ್ವಜನಿಕ ಹಿತ ಖಾತೆ, ಬ್ಯಾಂಕ್, ಅಂಚೆ ಕಚೇರಿಯಲ್ಲಿ ಉದ್ಯೋಗ ಹೊಂದುವರು. ಕರ್ಕಾಟಕ, ವಶ್ಚಿಕ, ಮೀನ ರಾಶಿಗಳು ಪಂಚಮವಾಗಿ ಅಲ್ಲಿ ಚಂದ್ರನಿದ್ದರೆ ಇವರು ವಕೀಲರೂ, ವೈದ್ಯರೂ ಆಗುತ್ತಾರೆ. ಜೀವನ ಮಾರ್ಗದಲ್ಲಿ ಜನತೆಯಲ್ಲಿ ಮುಂದುವರಿದು ಬರುವ ಮಹತ್ವಾಕಾಂಕ್ಷೆ ಇವರಲ್ಲಿ ತುಂಬಿರುತ್ತದೆ. ಮಿಥುನ, ತುಲಾ, ಕುಂಭ ಪಂಚಮವಾಗಿ ಅಲ್ಲಿ ಚಂದ್ರನಿದ್ದರೆ ಇವರ ಕೆಲಸವು ಜಯವಾಗುವುದು. ಹಣಕಾಸಿನ ಆಸೆ ಜಾಸ್ತಿಯಾಗಿ ದಾಂಪತ್ಯ ವಿಷಯಾಸಕ್ತಿಗಳಿಂದ ದೂರಗೊಳ್ಳುತ್ತಾರೆ. ಸಂತಾನ ವಿಷಯದಲ್ಲಿ ಈ ಚಂದ್ರ ಶುಭನಾಗಿರುವುದಿಲ್ಲ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments