Skip to main content

ಯಾರಿಗೆ ಯಾರು ಮಿತ್ರರು?----ನವಗ್ರಹಗಳ ಫಲಾಫಲಗಳು

ಯಾರಿಗೆ ಯಾರು ಮಿತ್ರರು? *ರವಿಗೆ ಚಂದ್ರ, ಕುಜ, ಗುರು, ಕೇತು ಮಿತ್ರರು. *ಚಂದ್ರನ ಮಿತ್ರರು ರವಿ, ಕೇತು, ಬುಧ. *ಕುಜನಿಗೆ ರವಿ, ಚಂದ್ರ, ಗುರು, ಕೇತು ಮಿತ್ರರು. *ಬುಧನ ಮಿತ್ರರು ರವಿ, ಶುಕ್ರ, ರಾಹು. *ಗುರುವಿಗೆ ರವಿ, ಚಂದ್ರ, ಕುಜ, ಕೇತು ಮಿತ್ರರು. *ಶುಕ್ರನ ಮಿತ್ರರು ಬುಧ, ಶನಿ, ರಾಹು. *ಶನಿಗೆ ಬುಧ, ಶುಕ್ರ, ರಾಹು ಮಿತ್ರರು. *ರಾಹುವಿನ ಮಿತ್ರರು ಬುಧ, ಶುಕ್ರ, ಶನಿ. *ಕೇತುವಿಗೆ ರವಿ, ಚಂದ್ರ, ಕುಜ, ಗುರು ಮಿತ್ರರು. ಶತ್ರುಗಳು *ರವಿಗೆ ಶುಕ್ರ, ಶನಿ, ರಾಹು ಶತ್ರುಗಳು. *ಚಂದ್ರನ ಶತ್ರು ರಾಹು. *ಕುಜನಿಗೆ ರಾಹು, ಬುಧ ಶತ್ರುಗಳು. *ಬುಧ ಶತ್ರು ಚಂದ್ರ. *ಗುರುವಿಗೆ ಬುಧ ಶುಕ್ರ ಶತ್ರುಗಳು. *ಶುಕ್ರನ ಶತ್ರುಗಳು ರವಿ, ಚಂದ್ರ, ಕೇತು. *ಶನಿಗೆ ರವಿ, ಚಂದ್ರ, ಕುಜ, ಕೇತುಗಳು ಶತ್ರುಗಳು. *ರಾಹುವಿನ ಶತ್ರುಗಳು ರವಿ, ಚಂದ್ರ, ಕುಜ. *ಕೇತುವಿಗೆ ಶುಕ್ರ, ಶನಿ ಶತ್ರುಗಳು. ಇಂತಹ ನವಗ್ರಹಗಳು ತಮ್ಮ ಅವಧಿಯಲ್ಲಿ (ದಶಾ ವರ್ಷಗಳಲ್ಲಿ) ಮನುಷ್ಯನ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ ಆಯಾ ದೆಶೆಗಳಲ್ಲಿ ತಮ್ಮ ಜಾತಕ ಪರಿಶೀಲಿಸಿಕೊಂಡು ಸೂಕ್ತ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು. ನವಗ್ರಹಗಳ ಫಲಾಫಲಗಳು ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಕರ್ಮ ಭಾವವು ಜಾತಕನ ವತ್ತಿ, ಮಾನ, ಗೌರವ, ಕೀರ್ತಿಗಳನ್ನು ತಿಳಿಸುತ್ತದೆ. ದಶಮದ ಶನಿಯು ಶುಭಕಾರಿಯಲ್ಲ. ಶನಿಯು ಅಶುಭ ಹಾಗೂ ಕ್ರೂರ ಗ್ರಹ. ದಶಮದ ಶನಿಯಿಂದ ಸಂಬಂಧಪಟ್ಟ ಜಾತಕರು ಉದ್ಯೋಗದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ. ಶನಿ ಮತ್ತು ರವಿ ಯುಕ್ತರಾಗಿದ್ದರೆ, ಜಾತಕನು ಕಳಂಕವನ್ನು ಅನುಭವಿಸುತ್ತಾನೆ. ತುಲಾ ರಾಶಿ, ದಶಮವಾಗಿದ್ದು, ಅಲ್ಲಿ ಶನಿ ಇದ್ದರೆ ಜಾತಕನು ಶ್ರೀಮಂತನಾಗುತ್ತಾನೆ. ದಶಮದಲ್ಲಿಯ ಗುರುವು ಯಶಸ್ಸನ್ನು ತರುತ್ತಾನೆ. ದಶಮದಲ್ಲಿ ಗುರು, ಮಂಗಳ ಯುಕ್ತನಾಗಿದ್ದರೆ ಜಾತಕನು ಕೆಲಸವನ್ನು ಕಳೆದುಕೊಳ್ಳುತ್ತಾನೆ. ದಶಮದಲ್ಲಿ ಗುರು, ಶನಿ ಇದ್ದರೆ ಎಲ್ಲವನ್ನೂ ನಿಷ್ಫಲ ಮಾಡುತ್ತಾರೆ. ದಶಮದಲ್ಲಿ ಮಂಗಳ, ಗುರು ಇದ್ದರೆ ಜಾತಕನು ತೊಂದರೆಗೆ ಸಿಲುಕುತ್ತಾನೆ. ದಶಮದಲ್ಲಿ ರವಿ, ಚಂದ್ರರ ಯೋಗ ಇದ್ದರೆ ಜಾತಕನಿಗೆ ಸಮಾಜದಲ್ಲಿ ಉಚ್ಛ ಸ್ಥಾನ ಸಿಗುವುದಿಲ್ಲ. ದಶಮವು ಕನ್ಯಾ ರಾಶಿಯಾಗಿದ್ದು, ಅಲ್ಲಿ ಗುರು ಇದ್ದರೆ, ಜಾತಕನಿಗೆ ಕೆಳ ಮಟ್ಟದ ಹುದ್ದೆ ಸಿಗುತ್ತದೆ. ದಶಮವು ಕರ್ಕಾಟಕ ರಾಶಿಯಾಗಿದ್ದು, ಅಲ್ಲಿ ಗುರು, ಕರ್ಕಾಟಕ, ನವಾಂಶದಲ್ಲಿ ಗುರು ಇದ್ದರೆ, ಜಾತಕನು ಸರಕಾರದ ಪರ ವಕೀಲನಾಗುತ್ತಾನೆ. ಕರ್ಕಾಟಕ ಲಗ್ನವಿದ್ದು, ದಶಮ ಮೇಷ ರಾಶಿಯಾಗುವುದು. ಈ ಲಗ್ನದ ಧನಾಧಿಪನಾದ ರವಿಯು ದಶಮ ಸ್ಥಾನದಲ್ಲಿದ್ದರೆ, ಆ ಜಾತಕನಿಗೆ ಹಣದ ಚಿಂತೆಯೇ ಇರುವುದಿಲ್ಲ. ಲಗ್ನ ರಾಶಿಯಾದ ಮೇಷ, ಸಿಂಹ, ಧನು ರಾಶಿಗಳಲ್ಲಿ ರವಿಯು ಬಹಳ ಬಲಿಷ್ಠನಾಗುತ್ತಾನೆ. ಮೀನ ಲಗ್ನದವರಿಗೆ ಧನು ರಾಶಿಯು ದಶಮವಾಗುವುದು. ಈ ರಾಶಿಯಲ್ಲಿ ರವಿಯು ದಷ್ಟನಾಗಿದ್ದರೆ ಜಾತಕನಿಗೆ ಅಹಂಕಾರವು ವಿಪರೀತ ಇರುತ್ತದೆ. ಜಾತಕನ ದಶಮ ಸ್ಥ್ಥಾನದಲ್ಲಿ ಶುಕ್ರನಿದ್ದರೆ, ಆತನಿಗೆ ಪ್ರತಿ ಕಾರ್ಯದಲ್ಲಿಯೂ ಶುಭವಾಗುತ್ತದೆ. ನಪುಂಸಕ ಗ್ರಹನಾದ ಬುಧನು ದಶಮದಲ್ಲಿ ಇದ್ದರೆ, ತಾನಿದ್ದ ರಾಶಿಯ ಗುಣದಂತೆ ಫಲವನ್ನು ಕೊಡುತ್ತಾರೆ. ದಶಮದಲ್ಲಿಯ ಬುಧನು ವ್ಯವಹಾರಕ್ಕೆ ಬಹಳ ಅನುಕೂಲ. ಶುಭ ಗ್ರಹದೊಂದಿಗೆ ಇದ್ದರೆ ಒಳ್ಳೆಯದು. ದಶಮದ ಅಧಿಪತಿಯು ಬುಧನಿದ್ದರೆ, ಜಾತಕನು ಸ್ವಂತ ಉದ್ಯೋಗವನ್ನು ಮಾಡುತ್ತಾನೆ. ಚಂದ್ರನು ದಶಮದಲ್ಲಿದ್ದರೆ, ಜಾತಕನು ಒಂದೇ ಹುದ್ದೆಯಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ. ಚಂದ್ರನು ಪಾಪಗ್ರಹಗಳೊಂದಿಗೆ ಇದ್ದರೆ, ಜಾತಕನಿಗೆ ಅಪಕೀರ್ತಿ ಬರುತ್ತದೆ. ಚಂದ್ರನು ಶುಭ ಗ್ರಹಗಳೊಂದಿಗೆ ಇದ್ದರೆ, ಜಾತಕನು ತನ್ನ ಸ್ವಂತಕ್ಕೆ ಮಾತ್ರ ಉದ್ಯೋಗ ಮಾಡುತ್ತಾನೆ. ಚಂದ್ರನು ಗುರು ಚಂದ್ರರ ಯೋಗದಲ್ಲಿ ಇದ್ದರೆ ಜಾತಕನು ಬಹಳ ಶ್ರೀಮಂತನಾಗುತ್ತಾನೆ. ದಶಮ ಲಗ್ನ ರಾಶಿಯಾಗಿದ್ದು, ಅಲ್ಲಿ ಗ್ರಹಗಳು ಜಾಸ್ತಿ ಇದ್ದರೆ, ಜಾತಕನು ಜ್ಞಾನಿಯಾಗುತ್ತಾನೆ. ಅವನಿಗೆ ವಿಶೇಷ ಕಲ್ಪನಾ ಶಕ್ತಿ ಇರುತ್ತದೆ. ವಾಯು ರಾಶಿಯು ದಶಮವಾಗಿದ್ದರೆ ಲೇಖನಗಳನ್ನು, ಗ್ರಂಥಗಳನ್ನು ಬರೆಯುತ್ತಾನೆ. ಉದ್ಯೋಗ ಇಲ್ಲದಿದ್ದರೆ ಲೇಖನಗಳನ್ನು ಬರೆದು ಜೀವಿಸುತ್ತಾನೆ. ಜಲ ರಾಶಿಯು ದಶಮವಾಗಿದ್ದರೆ, ಜಲಕ್ಕೆ ಸಂಬಂಧಿಸಿದ ಪೆಟ್ರೋಲ್, ಸೀಮೆ ಎಣ್ಣೆ, ನೀರಿನ ಉದ್ಯೋಗ ಮಾಡಿ ಜೀವಿಸುತ್ತಾನೆ. ಚರ ರಾಶಿಗಳಾದ ಮೇಷ, ಕರ್ಕಾಟಕ, ತುಲಾ ಮತ್ತು ಮಕರ ರಾಶಿಗಳಲ್ಲಿ ಹೆಚ್ಚಾಗಿ ಗ್ರಹ ಇದ್ದರೆ, ಸಾರ್ವಜನಿಕ ಕ್ಷೇತ್ರದಲ್ಲಿ ಜಾತಕನಿಗೆ ಯಶಸ್ಸು ದೊರೆಯುತ್ತದೆ. ಸ್ಥಿರ ರಾಶಿಗಳಾದ ವಷಭ, ಸಿಂಹ, ವಶ್ಚಿಕ ಮತ್ತು ಕುಂಭ ರಾಶಿಗಳಲ್ಲಿ ಹೆಚ್ಚಾಗಿ ಗ್ರಹ ಇದ್ದರೆ, ಜಾತಕನು ವೈದ್ಯನಾಗುತ್ತಾನೆ. ಇಲ್ಲವೇ ವೈದ್ಯಕೀಯ ವತ್ತಿಯಲ್ಲಿ ಇರುತ್ತಾನೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...