ಜೇಬಿನಲ್ಲಿ ದುಡ್ಡಿಲ್ವಾ? ಜಾತಕ ತೋರಿಸಿ! * ಸ್ಟೀವನ್ ರೇಗೊ, ದಾರಂದಕುಕ್ಕು
ಉತ್ತಮ ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಆರೋಗ್ಯ, ಶಾಂತಿ, ಸಮಾಧಾನದ ಜತೆಗೆ ಬೇಡುವುದು ಹಣ. ಈ ಹಣ ನಿಮ್ಮ ಜೇಬು ತುಂಬಿತ್ತಿಲ್ಲ ಎಂದಾದರೆ ಅದು ನಿಮ್ಮ ಜನ್ಮಕುಂಡಲಿಯ ಸಮಸ್ಯೆ ಎನ್ನೋದು ಜ್ಯೋತಿಷ್ಯದ ಮಾತು.
ಹಣ ಯಾರಿಗೆ ತಾನೇ ಬೇಡ ಹೇಳಿ. ಎಲ್ಲರೂ ದಿನನಿತ್ಯ ಒದ್ದಾಡೋದು ಬರೀ ಹಣಕ್ಕಾಗಿ ಎನ್ನುವ ಸಾರ್ವಕಾಲಿಕ ಸತ್ಯ ಎಲ್ಲರಿಗೂ ಗೊತ್ತು. ಒಂದರ್ಥದಲ್ಲಿ ಉತ್ತಮ ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಆರೋಗ್ಯ, ಶಾಂತಿ, ಸಮಾಧಾನದ ಜತೆಗೆ ಬೇಡುವುದು ಹಣ. ಎಲ್ಲರ ಆರ್ಥಿಕ ಸ್ಥಿತಿಯೂ ಒಂದೇ ತೆರನಾಗಿದ್ದರೆ ದೇಶ ಹೀಗೆ ಇರುತ್ತಿರಲಿಲ್ಲ ಎನ್ನುವ ಆರ್ಥಿಕ ತಜ್ಞರು ಹೇಳುವ ಮಾತು ಒಪ್ಪಲೇಬೇಕು.
ಅಂದಹಾಗೆ ಆರ್ಥಿಕ ಸ್ಥಿತಿ ಅವರವರ ಜನ್ಮ ಕುಂಡಲಿಯನ್ನೂ ಅವಲಂಬಿಸಿದೆ ಅನ್ನುವ ಸತ್ಯ ಈಗ ಬೆಳಕಿಗೆ ಬಂದಿದೆ. ಹಾಗಾದರೆ ಪ್ರತಿಯೊಬ್ಬರ ಜನ್ಮ ಕುಂಡಲಿಯಲ್ಲಿ ಆಯಾ ಸ್ಥಾನ ಅರ್ಥಾತ್ ಆರ್ಥಿಕ ಸ್ಥಾನ ಎಲ್ಲಿದೆ ಮತ್ತು ಹೇಗಿರುತ್ತದೆ ಎಂಬುದಕ್ಕೆ ಮುಂದೆ ಓದಿ ನೋಡಿ...
ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಅರ್ಥಾತ್ ಜಾತಕದಲ್ಲಿ ಎರಡನೇ ಅಥವಾ 11ನೇ ಭಾವವನ್ನು ಆರ್ಥಿಕ ಸ್ಥಿತಿಯನ್ನು ಸೂಚಿಸುತ್ತದೆ. ಈ ಭಾವವನ್ನು ನೋಡುವ ಜತೆಜತೆಗೆ ನಾಲ್ಕನೇ ಹಾಗೂ 10ನೇ ಭಾವದಲ್ಲಿ ಶುಭವಿದೆಯೋ ಅಶುಭವಿದೆಯೋ ಎಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಈ ಸ್ಥಾನಗಳು ಪ್ರಬಲವಾಗಿದ್ದರೆ, ಖಂಡಿತ ಅವುಗಳ ಪರಿಣಾಮ ಜೀವನದಲ್ಲಿ ತಿಳಿದೇ ತಿಳಿಯುತ್ತದೆ. ತೀರಾ ದುರ್ಬಲವಾದರೂ ಪರಿಣಾಮ ಕಾಣುತ್ತದೆ. ವಿಶೇಷವಾಗಿ ಧನೇಶ, ಸುಖೇಶ ಹಾಗೂ ಲಾಭೇಶ ಆರನೇ, ಎಂಟನೇ ಹಾಗೂ 12ನೇ ಸ್ಥಾನಗಳಲ್ಲಿ ಕಂಡುಬಂದರೆ, ಆ ಜಾತಕ ಹೊಂದಿದವರಿಗೆ ಯಾವಾಗಲೂ ಆರ್ಥಿಕ ಅಭಾವ ಹಾಗೂ ಆರ್ಥಿಕವಾಗಿ ಕಷ್ಟನಷ್ಟಗಳು ಜೀವನದಲ್ಲಿ ಕಂಡುಬರುತ್ತವೆ.
ಧನಲಾಭ, ಸುಖ ಅಥವಾ ಕರ್ಮ ಸ್ಥಾನ ಪ್ರಬಲವಾಗಿದ್ದರೂ, ಆರ್ಥಿಕ ಸ್ಥಿತಿ ದೇಶ, ಸಮಾಜ ಹಾಗೂ ಪರಿವಾರದ ಮೇಲೂ ಪ್ರಭಾವ ಬೀರುತ್ತದೆ. ಇದರ ಸ್ಥಾನ ಗ್ರಹಗಳ ಮೇಲೂ ಪ್ರಭಾವ ಬೀರುತ್ತದೆ.
1. ಶನಿ- ಮಂಗಳ ಯೋಗಕಾರಕನಾಗಿದ್ದರೆ ಅಂತಹ ವ್ಯಕ್ತಿ ಸಾಧಾರಣ ಧನವಂತನಾಗಿರುತ್ತಾನೆ.ಕಷ್ಟನಷ್ಟಗಳಿಲ್ಲದಿದ್ದರೂ ಆರಕ್ಕೇರದ, ಮೂರಕ್ಕಿಳಿಯದ ಅನ್ನುತ್ತಾರಲ್ಲ ಹಾಗೆ, ಮೇಲು ಅಲ್ಲದ ಕೀಳು ಅಲ್ಲದ ಸಾಧಾರಣ ಆರ್ಥಿಕ ಸ್ಥಿತಿ ಇರುತ್ತದೆ.
2. ಸೂರ್ಯ- ಚಂದ್ರ ಯೋಗಕಾರಕರಾಗಿರುವ ಜಾತಕದ ವ್ಯಕ್ತಿಗಳು ಲಕ್ಷಾಧಿಪತಿಗಳಾಗುತ್ತಾರೆ. ಇಂಥವರಿಗೆ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ. ತೊಂದರೆ ಎಂದೂ ಬಾಧಿಸದು.3. ಬುಧ, ಬಹಸ್ಪತಿ ಹಾಗೂ ಶುಕ್ರನ ಪ್ರಭಾವ ಇದ್ದರೆ ಧನ ಸಂಪತ್ತಿನ ಲಾಭವಾಗುತ್ತದೆ.
ಧನಲಾಭ ಯೋಗ
ಕುಂಡಲಿಯಲ್ಲಿ 11ನೇ ಸ್ಥಾನವನ್ನು ಆರ್ಥಿಕ ಸ್ಥಾನವೆಂದೇ ಹೇಳಲಾಗುತ್ತದೆ. ಈ ಸ್ಥಾನದಲ್ಲಿರುವ ಗ್ರಹ ಅಥವಾ ರಾಶಿಯನ್ನು ಅವಲಂಬಿಸಿ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ.
11ನೇ ಸ್ಥಾನದ ಅಧಿಪತಿ ದುರ್ಬಲನಾಗಿದ್ದರೆ ಆರ್ಥಿಕ ಸ್ಥಿತಿ ಚೆನ್ನಾಗಿರುವುದಿಲ್ಲ ಎಂದರ್ಥ. ಈ ಸ್ಥಾನದಲ್ಲಿ ಶುಭ ರಾಶಿ ಇದ್ದರೆ ಆರ್ಥಿಕ ಸ್ಥಿತಿ ಸರಿಯಾಗಿದೆ ಎಂದರ್ಥ. ಈ ಸ್ಥಾನದ ಮೇಲೆ ಪಾಪ ಪ್ರಭಾವ ಇದ್ದರೆ ಕೆಟ್ಟ ಮಾರ್ಗದ ಮೂಲಕ ಹಣ ಸಂಗ್ರಹವಾಗುತ್ತಿದೆ ಎಂದರ್ಥ.
ವಿಶೇಷವೆಂದರೆ, ಆಯೇಶ ಹಾಗೂ ಧನೇಶ ದುರ್ಬಲರಾಗಿದ್ದರೆ, ಅಲ್ಲಿರುವ ಗ್ರಹಗಳನ್ನು ಸ್ವಲ್ಪ ಮಟ್ಟಿಗೆ ಬಲಯುತರನ್ನಾಗಿ ಮಾಡಲು ಜ್ಯೋತಿಷ್ಯದಲ್ಲಿ ಮಾರ್ಗಗಳಿವೆ. ಹೀಗೆ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಆರ್ಥಿಕ ಬದಲಾವಣೆ ಜೀವನದಲ್ಲಿ ಕಾಣಲು ಸಾಧ್ಯವಿದೆ ಎನ್ನೋದು ಜ್ಯೋತಿಷ್ಯ ಶಾಸ್ತ್ರದ ಮಾತು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments