ನವಗ್ರಹ ಸ್ಥಾನ-ಬಲಗಳು * ಕೆ.ಎನ್.ಸಂಜೀವ ಮೂರ್ತಿ
ಜಾತಕದಲ್ಲಿನ ಗ್ರಹಗಳ ಸ್ಥಾನ ದಶಾ ಭುಕ್ತಿ-ಅಂರ್ತದಶಾ ಭುಕ್ತಿ. ವರ್ಷ-ಭವಿಷ್ಯ, ಕಾಲ ಚಕ್ರ ನಿರ್ಣಯ ಇವುಗಳನ್ನು ಹೊಂದಿಸಿಕೊಂಡು ಹೇಳುವ ನಿರ್ಣಯ ಫಲವೇ ಭವಿಷ್ಯವೆಂದು ಜ್ಯೋತಿಷ್ಯ ಸಿದ್ಧಾಂತವು ಗ್ರಹ ಬಲ ವಿಚಾರದೊಂದಿಗೆ ನಿರ್ಣಯಿಸಿದೆ.
ನವಗ್ರಹಗಳಿಗೆ ಸ್ಥಾನ ಬಲ, ದಿಗ್ಬಲ, ಜ್ಯೇಷ್ಠಾ ಬಲ, ಕಾಲ ಬಲ ಎಂದು ನಾಲ್ಕು ಪ್ರಕಾರದ ಬಲಗಳಿವೆ.
ಸ್ಥಾನ ಬಲ
ಯಾವ ಗ್ರಹವಾದರೂ ತನ್ನ ಉಚ್ಚ ರಾಶಿಯಲ್ಲಿದ್ದರೆ ತನ್ನ ಮಿತ್ರರಾಶಿ ಹಾಗೂ ಸ್ವಕ್ಷೇತ್ರದಲ್ಲಿದ್ದರೆ ಅದರ ಮೂಲ ತ್ರಿಕೋಣ ಹಾಗೂ ನವಾಂಶದಲ್ಲಿದ್ದರೆ ಆ ಗ್ರಹಕ್ಕೆ ಸ್ಥಾನ ಬಲವಿದೆ.
ದಿಗ್ಬಲ
ಸೂರ್ಯನು ಮಂಗಳನು ದಕ್ಷಿಣ ದಿಕ್ಕಿನಲ್ಲಿದ್ದಾಗ ಚಂದ್ರ-ಶುಕ್ರರು ಉತ್ತರ ದಿಕ್ಕಿನಲ್ಲಿದ್ದಾಗ ಬುಧ-ಗುರುಗಳು ಪೂರ್ವ ದಿಕ್ಕಿನಲ್ಲಿದ್ದಾಗ ಶನಿಯು ಪಶ್ಚಿಮ ದಿಕ್ಕಿನಲ್ಲಿದ್ದಾಗ ದಿಗ್ಬಲ ಉಳ್ಳವರಾಗಿರುತ್ತಾರೆ.
ಜ್ಯೇಷ್ಠಾ ಬಲ
ಗ್ರಹಗಳಿಗೆ ವಕ್ರ, ಅತಿ ವಕ್ರ, ಕುಟಿಲ, ಮಂದಾ ಮಂದಾರಕ, ಸಮ, ಶೀಘ್ರ, ಅತಿ ಶೀಘ್ರ ಎಂಬ ಎಂಟು ಪ್ರಕಾರದ ಗಮನ ಅಥವಾ ಗತಿಗಳುಂಟು. ಆದರೆ ಗ್ರಹಗಳಿಗೆ ಯುದ್ಧ ಮುಂತಾದ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿರುವ ಗ್ರಹಗಳೇ ಬಲಶಾಲಿಗಳೆಂದು ನಿಯಮವಿದೆ. ಜಯಶಾಲಿಯಾದ ಗ್ರಹಕ್ಕೆ ಅಧಿಕ ಬಲವನ್ನು ಸೋತ ಗ್ರಹಕ್ಕೆ ಕ್ಷೀಣ ಬಲವನ್ನು ಕಲ್ಪಿಸಿ ಗ್ರಹ ಯುದ್ಧವನ್ನು ತಿಳಿದು ಅದಕ್ಕನುಗುಣವಾಗಿ ಗ್ರಹಗಳ ಬಲಾಬಲಗಳನ್ನು ಗೊತ್ತು ಮಾಡಿ ಫಲವನ್ನು ತಿಳಿದುಕೊಳ್ಳಬೇಕು.
ಕಾಲ ಬಲ
ಚಂದ್ರ-ಮಂಗಳ-ಶನಿ ಗ್ರಹಗಳು ರಾತ್ರಿ ಕಾಲದಲ್ಲಿ ಬಲವಾಗಿರುತ್ತಾರೆ. ಬುಧನು ಹಗಲು ಮತ್ತು ರಾತ್ರಿ ಎರಡು ಕಾಲಗಳಲ್ಲಿಯೂ ಬಲವಂತನಾಗಿರುತ್ತಾನೆ. ಉಳಿದ ರವಿ, ಗುರು, ಶುಕ್ರರು ಹಗಲಿನಲ್ಲಿ ಬಲವಂತರಾಗಿರುತ್ತಾರೆ. ಸೌಮ್ಯ ಗ್ರಹಗಳು ಶುಕ್ಲ ಪಕ್ಷದಲ್ಲಿಯೂ, ಕ್ರೂರ ಗ್ರಹಗಳು ಕೃಷ್ಣ ಪಕ್ಷದಲ್ಲಿಯೂ ಬಲವಂತರಾಗಿರುತ್ತಾರೆ.
ರಾಶಿಗಳ ದಿಕ್ಕು ಸಂಜ್ಞಾ
ಮೇಷ, ಸಿಂಹ, ಧನಸ್ಸು, ಪೂರ್ವದಿಕ್ಕಿನಲ್ಲಿಯೂ ವೃಷಭ, ಕನ್ಯಾ, ಮಕರ, ರಾಶಿಗಳು ದಕ್ಷಿಣ ದಿಕ್ಕಿನಲ್ಲಿಯೂ ಮಿಥುನ, ತುಲಾ, ಕುಂಭ ರಾಶಿಗಳು ಪಶ್ಚಿಮ ದಿಕ್ಕಿನಲ್ಲಿಯೂ ಕರ್ಕ, ವೃಶ್ಚಿಕ, ಮೀನ ರಾಶಿಗಳು ಉತ್ತರ ದಿಕ್ಕಿನಲ್ಲಿಯೂ ಇರುವವು. ಯಾವ ಗ್ರಹಗಳೇ ಆಗಲಿ ಉತ್ತರ ದಿಕ್ಕಿನಲ್ಲಿರುವ ರಾಶಿಗಳಲ್ಲಿದ್ದರೆ ಪೂರ್ಣ ಬಲವುಳ್ಳವರಾಗುತ್ತಾರೆ.
ಗ್ರಹಗಳ ಬಲಗಳ ಪರಿಣಾಮ:
ಸ್ಥಾನ ಬಲದ ಫಲ
ಗ್ರಹಗಳು ತಮ್ಮ ಸ್ವ ಕ್ಷೇತ್ರ, ಉಚ್ಚ ಕ್ಷೇತ್ರ ಮೂಲ ತ್ರಿಕೋಣ ಹಾಗೂ ಮಿತ್ರ ಕ್ಷೇತ್ರದಲ್ಲಿರುವಾಗ ಮನುಷ್ಯರಿಗೆ ಶ್ರೇಷ್ಠತೆಯನ್ನು, ಐಶ್ವರ್ಯ, ದೇಹಾರೋಗ್ಯವನ್ನು ಧನ-ಧಾನ್ಯ, ಸಂಪತ್ತು, ತೇಜಸ್ಸು, ಕೀರ್ತಿ, ಸಾಮಾಜಿ ಹಾಗೂ ರಾಜಕೀಯದಲ್ಲಿ ಉಚ್ಚ ಸ್ಥಾನವನ್ನು ಕರುಣಿಸುವರು. ಚಂದ್ರ-ಶುಕ್ರ ಸ್ತ್ರಿ ಕ್ಷೇತ್ರದಲ್ಲಿರುವಾಗಲೂ ಉಳಿದ ಗ್ರಹಗಳು ಪುರುಷ ಕ್ಷೇತ್ರದಲ್ಲಿದ್ದಾಗಲೂ ಉತ್ತಮ ಫಲಗಳನ್ನು ಕೊಡುವರು.
ದಿಗ್ಬಲದ ಫಲ
ದಿಗ್ಬಲವುಳ್ಳ ಗ್ರಹಗಳು ಮನುಷ್ಯರನ್ನು ತನ್ನ ದಿಕ್ಕಿನೆಡೆಗೆ ಬರ ಮಾಡಿಕೊಂಡು ಉತ್ತಮ ವಸ್ತ್ರಾಭರಣ, ವಾಹನ, ಸ್ಥಾನ, ಕೀರ್ತಿ, ಐಶ್ವರ್ಯ, ತೇಜಸ್ಸು ಮುಂತಾದ ಬಲಗಳನ್ನು ನೀಡುವರು.
ಜ್ಯೇಷ್ಠಾ ಬಲದ ಫಲ
ಗ್ರಹಗಳು ತಮ್ಮ ಜ್ಯೇಷ್ಠಾ ಬಲದಲ್ಲಿ ಮಾನವರಿಗೆ ಸ್ಥಾನ, ಕೀರ್ತಿ, ಗೌರವಮ ಸಂಪತ್ತು, ಯಶಸ್ಸು ಇವುಗಳನ್ನು ಕೊಡುವರು.
ಗ್ರಹ ಸೂಚಕ ಗುಣ ಸ್ವರೂಪಗಳು * ಆರ್. ಸೀತಾರಾಮಯ್ಯ
ಸತ್ವಗುಣ, ರಜೋಗುಣ ಮತ್ತು ತಮೋಗುಣಗಳು ಪ್ರಕೃತಿಯ ಕೊಡುಗೆಯಾಗಿದೆ. ಪ್ರತಿಯೊಂದು ಜೀವಿಗೂ ಈ ಗುಣಗಳು ಆವರಿಸಿಕೊಂಡಿರುತ್ತದೆ. ವ್ಯಕ್ತಿಯಲ್ಲಿ ಅಂತಃಕರಣ ಮತ್ತು ಇದ್ರಿಯಗಳಲ್ಲಿ ಚೈತನ್ಯ, ವಿವೇಕ ಶಕ್ತಿ, ಜ್ಞಾನದ ವೃದ್ಧಿಯನ್ನು ಉಂಟು ಮಾಡುವುದೇ ಸತ್ಯ ಗುಣ. ಲೋಭ ಪ್ರವೃತ್ತಿ, ಸ್ವಾರ್ಥ ಬುದ್ಧಿ, ಅಶಾಂತಿ ವಿಷಯ ಭೋಗಗಳ ಲಾಲಸೆಯನ್ನುಂಟು ಮಾಡುವುದೇ ರಜೋ ಗುಣ. ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಚೈತನ್ಯ ಶಕ್ತಿಯ ಅಭಾವ, ಕರ್ತವ್ಯ ಕರ್ಮಗಳಲ್ಲಿ ಅಪ್ರವೃತ್ತಿ ಪ್ರಮಾಧ, ಅಜ್ಞಾನ, ಮೋಹವನ್ನುಂಟು ಮಾಡುವುದೇ ತಮೋಗುಣ.
ಗ್ರಹಗಳೂ ಸಹ ಪ್ರವತ್ತಿ ಮತ್ತು ಗುಣಗಳ ಒಂದು ಭಾಗವಾಗಿದೆ. ಗುರು ಮತ್ತು ಬುಧ ಸತ್ವ ಗುಣ ಹೊಂದಿದೆ. ರವಿ, ಚಂದ್ರ, ಶುಕ್ರ ರಜೋ ಗುಣ ಹೊಂದಿದೆ. ಕುಜ, ಶನಿ, ರಾಹು, ಕೇತು, ತಮೋ ಗುಣ ಹೊಂದಿದೆ. ವ್ಯಕ್ತಿಯ ಕುಂಡಲಿಯಲ್ಲಿ ಗ್ರಹಗಳು ತಾವಿರುವ ಸ್ಥಾನಗಳ ಮೇಲೆ ಹಾಗೂ ಷಡ್ಬಲಗಳ ಮೇಲೆ ಗುಣಗಳು ವ್ಯತ್ಯಾಸವಾಗುತ್ತಿರುತ್ತದೆ. ರಜೋಗುಣ, ಸತ್ವಗುಣ ಕಡಿಮೆಯಾದಲ್ಲಿ ತಮೋಗುಣ ಹೆಚ್ಚಾಗುತ್ತದೆ. ಹಾಗೆಯೇ, ರಜೋಗುಣ, ತಮೋಗುಣ ಕಡಿಮೆಯಾದಲ್ಲಿ ಸತ್ವ ಗುಣ ಹೆಚ್ಚಾಗುತ್ತದೆ. ಹಾಗೆಯೇ ಸತ್ವಗುಣ, ತಮೋಗುಣ ಕಡಿಮೆಯಾದಲ್ಲಿ ರಜೋ ಗುಣ ಹೆಚ್ಚಾಗುತ್ತದೆ. ಇದೇ ರೀತಿ ವ್ಯಕ್ತಿಯಲ್ಲಿ ಯಾವ ಗುಣ ಹೆಚ್ಚಾಗಿದೆ ಎಂಬುದನ್ನು ಗುರುತಿಸಬಹುದು. ಫಲ ನಿರೂಪಣೆಗೆ ಅನುಕೂಲವಾಗುತ್ತದೆ.
ಗ್ರಹಗಳ ಅಧಿಪತ್ಯದಲ್ಲಿರುವ ನಕ್ಷತ್ರಗಳು ಸಹ ಆಯಾ ಗ್ರಹಗಳ ಗುಣವನ್ನೇ ಹೊಂದಿರುತ್ತವೆ.
ಗ್ರಹಗಳು ಯಾವ ನಕ್ಷತ್ರದಲ್ಲಿರುತ್ತವೆಯೋ ಆ ಆಧಾರದ ಮೇಲೆ ವ್ಯಕ್ತಿಯ ಗುಣವನ್ನು ನಿರ್ಧರಿಸಬಹುದು. ಸತ್ವ ಗುಣದ ಗ್ರಹಗಳು ಸತ್ವ ಗುಣದ ನಕ್ಷತ್ರದಲ್ಲಿದ್ದರೆ, ರಜೋ ಗುಣದ ನಕ್ಷತ್ರಗಳು ರಜೋಗುಣ ನಕ್ಷತ್ರದಲ್ಲಿದ್ದರೆ, ತಮೋಗುಣದ ಗ್ರಹಗಳು ತಮೋಗುಣದ ನಕ್ಷತ್ರದಲ್ಲಿದ್ದರೆ ಶುಭ ಫಲವನ್ನೇ ನೀಡುತ್ತವೆ.
ರಜೋಗುಣ ಗ್ರಹಗಳು ತಮೋಗುಣ ಗ್ರಹಗಳ ಸಂಯೋಗದೊಂದಿಗಾಗಲೀ, ನಕ್ಷತ್ರದಲ್ಲಾಗಲೀ ಇರಬಾರದು. ರಜೋಗುಣ ಗ್ರಹಗಳು ಸತ್ವಗುಣ ಗ್ರಹಗಳ ಸಂಯೋಗ ಅಥವಾ ನಕ್ಷತ್ರದಲ್ಲಿದ್ದರೆ ಹೆಚ್ಚು ಕೆಡುಕು ಉಂಟಾಗುವುದಿಲ್ಲ. ತಮೋಗುಣ ಗ್ರಹಗಳು ರಜೋಗುಣ ಗ್ರಹಗಳೊಂದಿಗೆ ಅಥವಾ ನಕ್ಷತ್ರದಲ್ಲಿರಬಾರದು. ಸತ್ವಗುಣ ಗ್ರಹ ರಜೋಗುಣ ಗ್ರಹದೊಂದಿಗೆ ಅಥವಾ ನಕ್ಷತ್ರದಲ್ಲಿದ್ದರೆ ಸಾಮಾನ್ಯ ಶುಭಫಲ ನೀಡುತ್ತದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments