ಜ್ಯೋತಿಷ್ಯ ನಂಬಿ ಕೆಡಬೇಡಿ * ದೈವಜ್ಞ ಹರೀಶ್ ಕಾಶ್ಯಪ್
ಇತ್ತೀಚೆಗೆ ಜನರು ಜ್ಯೋತಿಷ್ಯದ ಮೊರೆ ಹೋಗುವುದು ಹೆಚ್ಚಾಗುತ್ತಿದೆ. ಇದನ್ನರಿತ ಕಪಟ ಜ್ಯೋತಿಷ್ಯರು ಇದನ್ನೇ ಬಂಡವಾಳವಾಗಿ ಮಾಡುತ್ತಿದ್ದಾರೆ. ಹೀಗಾಗಿ ಹಾದಿ ಬೀದಿಯಲ್ಲಿ ಜ್ಯೋತಿಷ್ಯರು ಕಂಡು ಬರುತ್ತಿದ್ದಾರೆ. ಜ್ಯೋತಿಷ್ಯ ಇಂದು ಬಿಕರಿಯ ವಸ್ತುವಾಗಿದೆ. ವಿಜ್ಞಾನ ವಾಹಿಯಾಗಿ ಉಳಿದಿಲ್ಲ. ಜ್ಯೋತಿಷ್ಯವನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ? ಸಿದ್ಧತೆಗಳೇನು? ಅವುಗಳ ಬಗ್ಗೆ ತಿಳಿದುಕೊಳ್ಳೋಣ.
* ಜ್ಯೋತಿಷ್ಯ ಶಾಸ್ತ್ರಕ್ಕೂ ಮಾಟ ಮಂತ್ರ ಪ್ರಯೋಗಗಳಿಗೂ ಸಂಬಂಧವಿಲ್ಲ. ಹಾಗೆಯೇ ನಾಡಿ, ಶಕುನ, ಕೊರವಂಜಿ, ಗಿಳಿ ಹೆಸರಿನ ಸೋಗಿಗೂ ಜ್ಯೋತಿಷ್ಯಕ್ಕೂ ಸಂಬಂಧವಿಲ್ಲ. ಧಾರ್ಮಿಕ ಗೊಡ್ಡು ವೇಷ ಧರಿಸಿ ಹೀಗೆ ಮಾಡುವವರೆಲ್ಲ 'ಜ್ಯೋತಿಷ್ಯ' ಎಂದು ನಂಬಬೇಡಿ.
* ಜ್ಯೋತಿಷ್ಯ ಶಾಸ್ತ್ರದಿಂದ ಯಾರಿಗೂ ಕೆಡುಕು ಮಾಡಲಾಗದು. ಆ ಹೆಸರಿನಿಂದ ದುರಾಚಾರ ಮಾಡುವವರಿಂದ ದೂರವಿರಿ. ಇತರರನ್ನೂ ದೂರವಿರಿಸಿ.
* ಮಹಾಜ್ಞಾನ ಪೀಠಗಳಾದ (ಅದ್ವೈತ, ದ್ವೈತ, ವಿಶಿಷ್ಟಾದ್ವೈತ) ಮಠಗಳ ಘನತೆ ಇರುವ ಪೀಠಾಧಿಪತಿಗಳಿಂದ ಪೋಷಿತರಾದ ಯೋಗ್ಯ ಜ್ಯೋತಿಷಿಗಳಿಗೆ ನಿಮ್ಮ ಮನ್ನಣೆ ಇರಲಿ.
* ಅನೂಜಾನವಾಗಿ ಅಧ್ಯಯನ ಮಾಡಿದ ಮತ್ತು ಶಾಸ್ತ್ರೋಕ್ತ ವಿಧಿ ವಿಧಾನ ತಿಳಿದವರೆಂದು ನೋಡಿ ಮಾರ್ಗದರ್ಶನ ಪಡೆಯಿರಿ. ಸುಮ್ಮನೆ ಢಾಳತನ, ಆಟಾಟೋಪ ಢೋಂಗಿ, ದೊಡ್ಡ ಬೋರ್ಡ್ಗಳ ಹಿಂದೆ ಹೋಗಬೇಡಿ.
* ಹೀಗೆ ಅರಸಿ ಯೋಗ್ಯರಲ್ಲೂ ನಿಮ್ಮ ನಡೆಯು ಉದಾರವಾಗಿರಲಿ. ಅವರನ್ನು ಆಧರಿಸಿ, ಮೆಚ್ಚಿಸಿ ಅದರಿಂದ ಅವರಲ್ಲಿರುವ ಆ ವಿಜ್ಞಾನವು ನಿಮ್ಮೆಡೆ ಉದಾರವಾಗಿ ತೆರೆದುಕೊಳ್ಳುವುದು.
* ಮದುವೆ ವಿಚಾರ: ಜನರು ಇಂದು ವಿಚಾರ ತತ್ವ್ತಹೀನರಾಗಿ ಬರಿದೇ ಜಾತಕ ಪೇಪರ್ಗಳು ಕೊಡಿಸಹೋಗುವವರೇ ಹೊರತು, ಮನುಷ್ಯ ಸಂಬಂಧಗಳನ್ನಲ್ಲ. ಒಬ್ಬ ಜಾತಕ ಕೂಡುವುದೆಂದರೆ ಮತ್ತೊಬ್ಬ ಕೂಡದು ಎನ್ನುವ. ಇದರ ಮಧ್ಯೆ ಮಾತಾಪಿತರು ಅಪ್ಪಚ್ಚಿಯಾಗುತ್ತಿರುವರು.
* ರಾಶಿ, ನಕ್ಷತ್ರ, ಗಣ, ಯೋಗಿ, ಸಪ್ತಮ-ಭಾಗ್ಯ ಭಾವಾದಿಗಳ ವಿಚಾರವು ಜ್ಯೋತಿಷ್ಯಶಾಸ್ತ್ರದಲ್ಲಿ ಇದೆ. ಆದರೆ ಅವು ರಚಿಸಿದ ಕಾಲಮಾನ ಮತ್ತು ಜನತಂತ್ರಕ್ಕೂ ನಾವು ಇಂದಿರುವ ಜನ ವ್ಯವಸ್ಥೆಗೂ ವ್ಯತ್ಯಾಸವಿದೆ.
* ಬ್ರಾಹ್ಮಣಾದಿ ಜಾತುವರ್ಣ ವ್ಯವಸ್ಥೆಯಲ್ಲಿ ಋಷಿಗೋತ್ರ, ಕುಲ ಮತ್ತು ಆಚಾರ ಸಿದ್ಧಾಂತಗಳಿರುವ ಜನ ಸಮೂಹಕ್ಕೆ ಮಾತ್ರ ಈ 'ಜಾತಕ ಕೂಟ'ಗಳು ಲಾಗೂ ಆಗುತ್ತವೆ ಹೊರತು, ಇಂದಿನ ಸಂಕ್ರಾಮಿಕ ಮತ್ತು ಅವ್ಯವಸ್ಥಿತ ಸಮಾಜಕ್ಕೆ ಅಲ್ಲ.
* ವಧು, ವರರ ಕುಟುಂಬ ಹಿನ್ನೆಲೆ, ಸ್ಥಿತಿಗತಿ ಮತ್ತು ಪರಸ್ಪರ ಒಪ್ಪಿಗೆ ಪ್ರಧಾನವಾಗಲಿ. ಜಾತಕ ಮೇಳೈಕೆ ಅಲ್ಲ.
* ಯೋಗ್ಯ ಆಚಾರ್ಯರಲ್ಲಿ ಜಾತಕ ತೋರಿಸಿ. ಪ್ರತಿ ಜಾತಕದಲ್ಲೂ ಏನಾದರೂ ತೊಂದರೆ ಇರುತ್ತದೆ. ಪ್ರತಿ ತೊಂದರೆಗೂ ಶಾಸ್ತ್ರದಲ್ಲಿ ಉಪಾಯ ಇರುತ್ತದೆ. ಆ ಉಪಾಯ ಪರಿಹಾರ ನಡೆಸಿ ಮದುವೆ ಮಾಡಿರಿ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments