ಮೂಲ ನಕ್ಷತ್ರ ಸರಸ್ವತಿ ದೇವಿಯ ನಕ್ಷತ್ರ ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್
ರಾತ್ರಿ ಸಮಯದಲ್ಲಿ ನೀಲಾಂಬರವನ್ನು (ಆಕಾಶ) ನೋಡಿದರೆ ನಮಗೆ ಅಗಣಿತವಾದ ಮಿನುಗುವ ಚುಕ್ಕೆಗಳೂ, ತೇಜ ಪುಂಜರವಾದ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರ ಆಗುವುದು.
ಭಾರತೀಯ ವೇದಾಂಗ ಜ್ಯೋತಿಷ್ಯಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುವರು. ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ವಿಶೇಷತೆ ಕೊಟ್ಟಿರುತ್ತಾರೆ. ಅವು ಯಾವುವು ಎಂದರೆ ಮೂಲ, ಆಶ್ಲೇಷ, ವಿಶಾಖ ಮತ್ತು ಜ್ಯೇಷ್ಠ ನಕ್ಷತ್ರ. ಇವುಗಳನ್ನು ಸ್ತ್ರೀಯರಿಗೆ ಮಾತ್ರ ಬಹಳ ದೋಷಕಾರಿಗಳಾಗಿವೆ ಎಂದು ಹೇಳಿರುವರು.
ಮೂಲ ನಕ್ಷತ್ರದ ಬಗ್ಗೆ ಗಮನಹರಿಸಿದರೆ, ನಕ್ಷತ್ರಗಳನ್ನು 3 ಗುಂಪುಗಳಾಗಿ ಮಾಡಿರುತ್ತಾರೆ. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದತನಕ ಒಂದು ಗುಂಪು, ಮಖ ನಕ್ಷತ್ರದಿಂದ ಜ್ಯೇಷ್ಠ ನಕ್ಷತ್ರದತನಕ ಮತ್ತೊಂದು ಗುಂಪು, ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರದತನಕ ಮತ್ತೊಂದು ಗುಂಪು. ಇವುಗಳಲ್ಲಿ ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರ ಮೊದಲನೆ ನಕ್ಷತ್ರಗಳು. ಮೂಲ ನಕ್ಷತ್ರ ಮೊದಲನೆಯದು ಅಗಿದ್ದರಿಂದ ಅದಕ್ಕೆ ಋಷಿಮುನಿಗಳು ಮೂಲ ನಕ್ಷತ್ರ ಎಂದು ಕರೆದರು. ಇದರ ಅಧಿಪತಿ ಕೇತು ಗ್ರಹ.
ಮೂಲ ನಕ್ಷತ್ರದ 1ನೇ ಪಾದದಲ್ಲಿ ಹೆಣ್ಣುಮಗು ಜನಿಸಿದರೆ 8 ವರ್ಷದವರೆಗೆ ಮಗು ತಂದೆಯನ್ನು ನೋಡಬಾರದು ಎಂದು, 2ನೇ ಪಾದವಾದರೆ ತಾಯಿಗೆ ದೋಷ, 3ನೇ ಪಾದವಾದರೆ ತಂದೆಗೆ ಬರುವ ಆದಾಯದಲ್ಲಿ ನಷ್ಟ, 4ನೇ ಪಾದವಾದರೆ ಶುಭ ಎಂದು ಹೇಳಿರುವರು. ಮೂಲ ನಕ್ಷತ್ರದಲ್ಲಿ ಹೆಣ್ಣುಮಗು ಜನಿಸಿದರೆ ಮದುವೆಯ ನಂತರ ಪತ್ನಿಯ ತಂದೆಗೆ (ಮಾವ) ತೊಂದರೆ ಆಗುವುದು ಎಂದು ಹೇಳಿದೆ. ಜಾತಕದಲ್ಲಿ ಚಂದ್ರನಿಗೆ ಶುಭ ದೃಷ್ಟಿ ಇದ್ದರೆ, ಯಾವ ಭಾವಕ್ಕೆ ದೋಷ ಆಗಿದೆ ಆ ಭಾವದ ಅಧಿಪತಿ 9ನೇ ಮನೆಯಲ್ಲಿ ಆಗಲಿ ಅಥವಾ ಶುಭ ಸ್ಥಾನದಲ್ಲಿದ್ದರೆ, ಶುಭ ಗ್ರಹಗಳಿಂದ ದೃಷ್ಟಿಸಿದರೆ, ಚಂದ್ರನಾಗಲಿ, ಭಾವಾಧಿಪತಿಯಾಗಲಿ ಬಲಿಷ್ಠನಾಗಿದ್ದರೆ, ಚಂದ್ರನಿಗೆ ಗುರು ದೃಷ್ಟಿ ಇದ್ದರೆ, ಈ ಮೇಲಿನ ಮೂಲ ನಕ್ಷತ್ರದ ದೋಷಗಳಲ್ಲಿ ಪರಿಣಾಮವಾಗುವುದು. ಇದನ್ನು ಯಾರು ಗಣನೆಗೆ ತೆಗೆದುಕೊಳ್ಳದೆ ಮೂಲ ನಕ್ಷತ್ರ ಎಂದ ತಕ್ಷಣ ಕೆಟ್ಟ ನಕ್ಷತ್ರ ಎಂದು ನಿರ್ಧರಿಸುವುದು ಸರಿಯಲ್ಲ. ಸಾಕ್ಷಾತ್ ಸರಸ್ವತಿ ದೇವಿಯು ಜನನವಾಗಿದ್ದು ಈ ನಕ್ಷತ್ರದಲ್ಲಿಯೇ. ನವರಾತ್ರಿಯ ಸಮಯದಲ್ಲಿ ಮೂಲ ನಕ್ಷತ್ರದ ದಿನ ಜನಿಸಿದ ದಿನ ಎಂದು ಸರಸ್ವತಿಯನ್ನು ಆವಾಹನೆ ಮಾಡಿ ಪುಸ್ತಕಗಳನ್ನು ಇಟ್ಟು ಪೂಜಿಸುವರು. ಸರಸ್ವತಿ ದೇವಿಯದೇ ಮೂಲ ನಕ್ಷತ್ರವಾಗಿದ್ದರಿಂದ ಈ ನಕ್ಷತ್ರವನ್ನು ಒಳ್ಳೆಯ ನಕ್ಷತ್ರ ಎಂದೇ ಪರಿಗಣಿಸಬಹುದು.
ವಿವಾಹ, ವಿದ್ಯಾರಾಂಭ, ಯಾತ್ರೆ, ಸೀಮಂತ, ಶಿಶುವಿಗೆ ತೊಟ್ಟಿಲು ತೂಗಿಸುವುದು ಮುಂತಾದ ಶುಭ ಕಾರ್ಯಗಳನ್ನು ಈ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಆದ್ದರಿಂದ ಮೂಲ ನಕ್ಷತ್ರ ಶುಭ ನಕ್ಷತ್ರವೇ ಆಗಿದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments