ನವಗ್ರಹಗಳು ದೊಡ್ಡನೆಬೆಟ್ಟು ಕೋಟೇಶ್ವರ
ಈ ಭೂಮಿಯಲ್ಲಿ ವಾಸಿಸುವ ನಮ್ಮ ಮೇಲೆ ಸುತ್ತಲಿರುವ ಆಕಾಶಕಾಯಗಳು ವಿಶಿಷ್ಟ ಪರಿಪೂರ್ಣ ಬೀರುತ್ತವೆ. ಅಂತಹ ನವಗ್ರಹಗಳ ಹೆಸರು ನಿಮಗೆಲ್ಲ ಗೊತ್ತೇ ಇದೆ. ಆದರೆ ಅವುಗಳ ಸಂಪೂರ್ಣ ಪರಿಚಯ ಎಲ್ಲರಿಗೂ ಇರಲಾರದು. ಅವುಗಳ ಕಿರು ಪರಿಚಯವಿದು.
ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇವುಗಳೇ ಒಂಬತ್ತು ನವಗ್ರಹಗಳು. ಇವುಗಳಲ್ಲಿ ರಾಹು ಕೇತುಗಳಿಗೆ ಪ್ರಕಾಶವಿರುವುದಿಲ್ಲ. ಇವು ಕೇವಲ ಛಾಯಾಗ್ರಹಗಳು. ಬುಧ, ಗುರು, ಶುಕ್ರರು ಶುಭ ಗ್ರಹರು. ರವಿ, ಕುಜ, ಶನಿ, ರಾಹು, ಕೇತುಗಳು ಪಾಪ ಗ್ರಹರು. ಪೂರ್ಣಚಂದ್ರನಾದರೆ ಶುಭ, ಅದೇ ಚಂದ್ರ ಕ್ಷೀಣನಾದರೆ ಅಶುಭ ಫಲ ನೀಡುತ್ತಾನೆ.
ಮೊದಲಿಗೆ ರವಿ. ಇವನ ದಿಕ್ಕು ಪೂರ್ವ. ಇವನಿಗೆ ಪ್ರಿಯವಾದ ಬಣ್ಣ ಕೆಂಪು. ಪ್ರಿಯವಾದ ರತ್ನ ಮಾಣಿಕ್ಯ. ಇವನ ದೇವತೆ ಶಿವ. ಪ್ರಿಯವಾದ ಧಾನ್ಯ ಗೋಧಿ. ಈತನ ದೆಶೆ ಆರು ವರ್ಷ. ರವಿಗೆ ಪ್ರಿಯವಾದ ಸಸ್ಯ ಎಕ್ಕ.
ಎರಡನೆಯವನು ಚಂದ್ರ. ಇವನ ದಿಕ್ಕು ವಾಯವ್ಯ. ಪ್ರಿಯವಾದ ಬಣ್ಣ ಬಿಳಿ. ಇವನ ರತ್ನ ಮುತ್ತು. ಈತನ ದೇವತೆ ದುರ್ಗಾ ಮಾತೆ. ಈತನ ಪ್ರಿಯವಾದ ಧಾನ್ಯ ಅಕ್ಕಿ. ಇವನ ದೆಶೆ ಹತ್ತು ವರ್ಷ. ಚಂದ್ರನಿಗೆ ಪ್ರಿಯವಾದದ್ದು ಪಾಲಾಶ ವೃಕ್ಷ.
ಮೂರನೆಯವನು ಕುಜ (ಮಂಗಳ). ದಿಕ್ಕು ದಕ್ಷಿಣ. ಪ್ರಿಯವಾದ ಧಾನ್ಯ ತೊಗರಿ. ಇವನ ದೇವತೆ ಸುಬ್ರಹ್ಮಣ್ಯ. ಪ್ರಿಯವಾದ ರತ್ನ ಹವಳ. ಪ್ರಿಯವಾದ ವಸ್ತ್ರ ಕೆಂಪು. ಇವನ ದೆಶೆ ಏಳು ವರ್ಷ. ಕುಜನಿಗೆ ಪ್ರಿಯವಾದದ್ದು ಖದಿರ ವೃಕ್ಷ..
ಇನ್ನು ನಾಲ್ಕನೆಯವನು ಬುಧ. ಇವನ ದೇವತೆ ವಿಷ್ಣು. ದಿಕ್ಕು ಉತ್ತರ. ಧಾನ್ಯ ಹೆಸರುಕಾಳು. ಪ್ರಿಯವಾದ ರತ್ನ ಮರಕತ (ಪಚ್ಚೆ), ಇತನ ಪ್ರಿಯವಾದ ವಸ್ತ್ರ ಹಸಿರು. ಇವನ ದೆಶೆ ಹದಿನೇಳು ವರ್ಷವಾಗಿರುತ್ತದೆ. ಬುಧನಿಗೆ ಪ್ರಿಯವಾದದ್ದು ಉತ್ತರಣಿ.
ಐದನೆಯವನೇ ಗುರು. ಈತನ ದೇವತೆ ಶಿವ. ದಿಕ್ಕು ಈಶಾನ್ಯ, ಪ್ರಿಯವಾದ ಧಾನ್ಯ ಕಡಲೆ. ಪ್ರಿಯವಾದ ರತ್ನ ಪುಷ್ಯರಾಗ. ವಸ್ತ್ರ ಹಳದಿ, ಇವನ ದೆಶೆ ಹದಿನಾರು ವರ್ಷ. ಗುರುವಿಗೆ ಪ್ರಿಯವಾದದ್ದು ಅಶ್ವತ್ಥ.
ಆರನೆಯವನು ಶುಕ್ರ (ಭಾರ್ಗವ), ದಿಕ್ಕು ಆಗ್ನೇಯ. ಪ್ರಿಯ ದೇವತೆ ದುರ್ಗೆ, ಪ್ರಿಯವಾದ ಧಾನ್ಯ ಅವರೆ, ಪ್ರಿಯ ರತ್ನ ವಜ್ರ, ಬಣ್ಣ ಬಿಳಿ, ಇವನ ದೆಶೆ ಇಪ್ಪತ್ತು ವರ್ಷ. ಶುಕ್ರನಿಗೆ ಅತ್ತಿ ಮರ.
ಏಳನೇಯವನು ಶನಿದೇವ, ಈತನ ದೇವತೆಗಳು ತ್ರಿಮೂರ್ತಿಗಳು, ಪ್ರಿಯ ದಿಕ್ಕು ಪಶ್ಚಿಮ, ಪ್ರಿಯ ಧಾನ್ಯ ಎಳ್ಳು, ಪ್ರಿಯ ರತ್ನ ನೀಲ, ಪ್ರಿಯ ವಸ್ತ್ರ ಕಪ್ಪು, ದೆಶೆ ೧೯ ವರ್ಷವಾಗಿದ್ದು, ಶಮಿ ಇವನಿಗೆ ಪ್ರಿಯವಾದ ವೃಕ್ಷ. ನವಗ್ರಹರಲ್ಲೇ ಪ್ರಬಲವಾದವನು ಶನಿ.
ಎಂಟನೆಯ ಗ್ರಹ ರಾಹು, ಈತನ ದೇವತೆ ಸುಬ್ರಹ್ಮಣ್ಯ, ದಿಕ್ಕು ನೈರುತ್ಯ, ಧಾನ್ಯ ಉದ್ದು, ಪ್ರಿಯ ರತ್ನ ಗೋಮೇಧಿಕ, ವಸ್ತ್ರ ಬಣ್ಣ ಚಿತ್ರ ವಿಚಿತ್ರ, ದೆಶೆ ೧೮ ರಾಹುಗೆ ಗರಿಕೆ ಅತ್ಯಂತ ಪ್ರಿಯ.
ಒಂಬತ್ತನೆಯವನೇ ಕೇತು, ಈತನ ದೇವತೆ ಗಣಪತಿ, ದಿಕ್ಕು ನೈರುತ್ಯ, ಧಾನ್ಯ ಹುರುಳಿ, ಪ್ರಿಯ ರತ್ನ ವೈಢೂರ್ಯ, ವಸ್ತ್ರ ಚಿತ್ರವಿಚಿತ್ರ, ದೆಶೆ ಏಳು ವರ್ಷ. ಕೇತುಗೆ ದರ್ಭೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments