Skip to main content

ಕರ್ಮಕ್ಕೆ ತಕ್ಕ ಫಲ

ಕರ್ಮಕ್ಕೆ ತಕ್ಕ ಫಲ ಮನುಷ್ಯ ಈ ಭೂಮಿಯ ಮೇಲೆ ಹುಟ್ಟುವುದು ಕೇವಲ ಸುಖ-ಸಂತೋಷವನ್ನು ಅನುಭವಿಸಲೆಂದೇ ಅಥವಾ ಪಾಪ ಕರ್ಮಗಳನ್ನು ಮಾಡಲೆಂದೆ. ಸಂತುಷ್ಠನಾದ ಪರಮಾತ್ಮನು ಕರ್ಮಾನುಷ್ಠಾನ ಪರನಾದ ಚೇತನಿಗೆ ಮೇಲೆ ಮೇಲೆ ಶ್ರೇಯೋಭಿವೃದ್ಧಿಯನ್ನು ಉಂಟು ಮಾಡುವ ಕರ್ಮಗಲಲ್ಲಿ (ಕೆಲಸದಲ್ಲಿ) ತೊಡಗುವಂತೆ ಬುದ್ಧಿಯನ್ನು ಕೊಟ್ಟು ಅನುಗ್ರಹಿಸುತ್ತಾನೆ. ವರ್ಣಾಶ್ರಮ ಧರ್ಮಗಳಲ್ಲಿ ಮಾಡುವ ನಿತ್ಯ ನೈಮಿತ್ತಿಕ ಕರ್ಮಗಳು ಚೇತನಿಗೆ ಕೆಲ ಪಾಪಗಳನ್ನು ನಿವೃತ್ತಿ ಮಾಡುವುದರೊಡನೆ ಸಮಾಜದ ಸುವ್ಯವಸ್ಥೆಗೂ ಕಾರಣವಾಗುತ್ತದೆ. ಇವುಗಳನ್ನು ಅನುಷ್ಠಾನ ಮಾಡದಿದ್ದರೆ ವೈಯಕ್ತಿವಾಗಿ ಪಾಪ ಭೂಮಿಷ್ಠನಾಗುವುದರೊಡನೆ ಸಮಾಜದ ಅಳಿವಿಗೂ ಕಾರಣನಾಗುತ್ತಾನೆ. ವರ್ಣಾಶ್ರಮ ಮಾಡುವ ಕರ್ಮಗಳೆಲ್ಲವೂ ಭಗವಂತನ ಆಜ್ಞೆ. ಈ ಜನ್ಮದಲ್ಲಿ ಮನುಷ್ಯನು ತಾನು ಹಿಂದೆ ಮಾಡಿರುವ ಪುಣ್ಯ ಪಾಪ ಕರ್ಮಪಲಗಳ ರೂಪದಲ್ಲಿ ಅವನಿಗೆ ಬರುವ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತಾನೆ. ಈ ರೀತಿಯಾದ ಫಲ ಕೊಡಲು ಆರಂಭಿಸಿರುವ ಕರ್ಮವನ್ನು 'ಪ್ರಾರಬ್ಧ' ಕರ್ಮ ಎನ್ನುತ್ತಾರೆ. ಮನುಷ್ಯನು ಹಿಂದೆಯೇ ಮಾಡಿರುವ ಕೆಲ ಕರ್ಮಗಳು ಇನ್ನು ಫಲವನ್ನೀಯದೆ ಇರುತ್ತವೆ. ಅವು ಮುಂದೆ ಎಂದೋ ಅವನಿಗೆ ಪಲ ಕೊಡಲು ಕಾದಿರುತ್ತವೆ. ಇವುಗಳನ್ನು 'ಆಗಾಮಿ' ಕರ್ಮ ಎನ್ನುತ್ತಾರೆ. ಜನ್ಮ ಪಡೆದ ಮನುಷ್ಯ ಪ್ರಾರಬ್ಧ ಕರ್ಮವನ್ನು ಅನುಭವಿಸುತ್ತಲೇ ಜತೆಜತೆಯಲ್ಲೇ ಮತ್ತೆ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಈ ರೀತಿ ಕರ್ಮಕ್ಕೆ ತಕ್ಷಣ ಫಲ ದೊರೆಯುವುದಿಲ್ಲ. ಮರದಲ್ಲಿ ಹುಟ್ಟಿದ ಹೂವು, ಕಾಯಾಗಿ ನಂತರ ಹನ್ಣಾಗುತ್ತದೋ ಅಥವಾ ಮಣ್ಣಾಗುತ್ತದೋ ಕಾದು ನೋಡಬೇಕು. ಹಾಗೆಯೇ ಈ ರೀತಿಯಾದ ಕರ್ಮಕ್ಕೆ 'ಸಂಚಿತ' ಕರ್ಮ ಎನ್ನುತ್ತಾರೆ. ಮನುಷ್ಯ ಬುದ್ಧಿಪೂರ್ವಕವಾಗಿ ಕರ್ಮ ಮಾಡುತ್ತಾನೋ ಅಥವಾ ಅಬುದ್ಧಿಪೂರ್ವಕವಾಗಿ ಕರ್ಮ ಮಾಡುತ್ತಾನೋ. ಈ ಎರಡೂ ತರಹದ ಕರ್ಮಗಳನ್ನು ಅನುಭವಿಸಿಯೇ ತೀರಬೇಕು. ತಿಳಿದೋ ತಿಳಿಯದೋ ದಶರಥ ಮಹಾರಾಜ ಮಹಾ ತೇಜಸ್ವಿಯಾದ. ವೃದ್ಧ ದಂಪತಿಗಳು ಕಾಡಿನಲ್ಲಿ ತಮ್ಮ ಏಕೈಕ ಪುತ್ರನ ಹೋಗುತ್ತಿದ್ದಾಗ ದಶರಥನ ಬಾಣಕ್ಕೆ ಗುರಿಯಾಗಿ ಮೃತ್ಯು ಹೊಂದಿದ್ದ, ನೊಂದ ವೃದ್ಧರು ತಮ್ಮ ಮಗನ ಹತ್ಯೆಯಾದದ್ದು ದಶರಥನ ಬಾಣದಿಂದ ಎಂದು ತಿಳಿಯಿತು. ಆಗ ವೃದ್ಧ ದಂಪತಿಗಳು ದಶರಥನಿಗೆ ಈ ರೀತಿ ಶಾಪವ ನೀಡಿದರು. ಪುತ್ರನ ವಿಯೋಗದಿಂದಾಗಿ ನಾವೀಗ ಎಂಥ ದುಃಖವನ್ನು ಅನುಭವಿಸುತ್ತಿರುವೇನೋ ಅದೇ ರೀತಿ ನೀನು ನಿನ್ನ ಕಡೆಗಾಲದಲ್ಲಿ ಪುತ್ರವಿಯೋಗ ದುಃಖವನ್ನು ಅನುಭವಿಸುವೆ ಮತ್ತು ಪುತ್ರ ವಿಯೋಗ ದುಃಖದಿಂದಲೇ ನಿನ್ನ ಪ್ರಾಣವು ತೊರೆಯುವುದು ಎಂ ಶಾಪಕ್ಕೆ ಗುರಿಯಾದ್ದರಿಂದಲೇ ದಶರಥನ ಮರಣ ಕಾಲದಲ್ಲಿ ಶ್ರೀರಾಮನು ಇಲ್ಲವಾದ. ಯಾವುದೇ ಕುಟುಂಬದಲ್ಲಿ ಪಿತೃಗಳಿಂದಾಗಲಿ ಪಪಕರ್ಮಗಳು ಜರುಗಿದ್ದರೆ ಪ್ರಾಯಶ್ಚಿತ್ತಕ್ಕೆ ಕೆಲ ಒಳ್ಳೆಯ ಕರ್ಮಗಳನ್ನು ಅಂದರೆ ಯಜ್ಞ, ಹೋಮ, ದಾನ ಧರ್ಮದಂತೆ ಕ್ರಿಯೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ನಿತಯ್ಯ ನೈಮಿತ್ತಿಕ ಪ್ರಾಯಶ್ಚಿತ್ತ ಕರ್ಮಾನುಷ್ಠಾನದಿಂದ ಮನುಷ್ಯನಿಗೆ ಪ್ರಾರಬ್ಧ, ಸಂಬಿತ ಮತ್ತು ಅಗಾಮಿ ಕರ್ಮಗಳಿಂದ ಸಂಭವಿಸಬಹುದಾದ ಪಪಕರ್ಮಫಲವೂ ನಷ್ಟವಾಗುತ್ತದೆ. - ರಾಮಸ್ವಾಮಿ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...