Skip to main content

ಸ್ತ್ರೀಯ ಕುಂಡಲಿಯಂತೆ ಪತಿಯ ಸ್ವಭಾವ

ಸ್ತ್ರೀಯ ಕುಂಡಲಿಯಂತೆ ಪತಿಯ ಸ್ವಭಾವ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಸ್ತ್ರೀಯರ ಜಾತಕದಲ್ಲಿ ಯಾವ ಯಾವ ಗ್ರಹಗಳು ಎಲ್ಲೆಲ್ಲಿರುತ್ತವೆ ಎಂಬುದರ ಆಧಾರದ ಮೇಲೆ ಆಕೆಯ ಪತಿಯ ಸ್ವಭಾವ ಹೇಗಿರುತ್ತದೆ ಎಂಬುದನ್ನು ನಿರ್ಧರಿಸಬಹುದಾಗಿದೆ. ಬನ್ನಿ, ಸ್ತ್ರೀಯ ಕುಂಡಲಿಯಂತೆ ಪತಿಯ ಸ್ವಭಾವ ಹೇಗಿರುತ್ತದೆ ಎಂದು ನೋಡೋಣ. ಅಪ್ರಯೋಜಕ ಗಂಡ: ಜನ್ಮ ಲಗ್ನದಿಂದಾಗಲೀ, ಚಂದ್ರ ಲಗ್ನದಿಂದಾಗಲೀ ಸಪ್ತಮ ರಾಶಿಯಲ್ಲಿ ಗ್ರಹಗಳು ಇರುವುದಿಲ್ಲ. ಅಲ್ಲದೆ ಸಪ್ತಮವು ಬಲಹೀನವಾಗಿ ಶುಭಗ್ರಹಗಳ ದಷ್ಟಿಯೂ ಸಹ ಇರುವುದಿಲ್ಲ. ಇಂಥ ವೇಳೆ ಆಕೆಯ ಗಂಡನು ಪ್ರಯೋಜನಕ್ಕೆ ಬಾರದವನಾಗುತ್ತಾನೆ. ಸ್ತ್ರೀಯರ ಏಳನೆಯ, ಎಂಟನೆಯ ಮನೆಗಳು ಪಾಪ ಗ್ರಹಗಳ ದಷ್ಟಿಗೊಳಗಾಗಿದ್ದರೆ ಗಂಡ ಹೆಂಡತಿಯರಿಗೆ ಪರಸ್ಪರ ನಷ್ಟ ಉಂಟಾಗುತ್ತದೆ. ಸ್ತ್ರೀಯರ ಜಾತಕದಲ್ಲಿ ಶನಿ ಬುಧರು ಸಪ್ತಮದಲ್ಲಿದ್ದರೆ ಇವರು ವಿಧುರ ಗಂಡನನ್ನು ಕೈ ಹಿಡಿಯುತ್ತಾರೆ. ಸ್ತ್ರೀಯರ ಸಪ್ತಮ ರಾಶಿಯಲ್ಲಿ ಬುಧ ಶನಿಗಳಿದ್ದರೆ ಅಂತಹ ಸ್ತ್ರೀಯರ ಗಂಡ ನಪುಂಸಕರಾಗುವರು. ಸ್ತ್ರೀಯರ ಜಾತಕದಲ್ಲಿ ದುರ್ಬಲನೂ, ಪೀಡಿತನೂ ಆದ ಶುಕ್ರನು ಏಳನೆಯ ಮನೆಯಲ್ಲಿ ಇದ್ದರೆ ಗಂಡನು ನಪುಂಸಕನಾಗುತ್ತಾನೆ. ಸ್ತ್ರೀಯರ ಜಾತಕದಲ್ಲಿ ಸಪ್ತಮರ ಅಧಿಪತಿ ಅಥವಾ ಶುಕ್ರ ರಾಹುವಿನ ಸಂಗಡ ಇದ್ದು ಪಾಪ ವೀಕ್ಷಿತನಾಗಿದ್ದರೆ ಇವರ ಗಂಡ ವ್ಯಭಿಚಾರಿಯಾಗುತ್ತಾನೆ. ಸ್ತ್ರೀಯರ ಕುಂಡಲಿಯಲ್ಲಿ ಲಗ್ನ ಅಥವಾ ಚಂದ್ರ ರಾಶಿಯಿಂದ ಸಪ್ತಮ ಸ್ಥಾನಗಳು ಚರ ರಾಶಿಗಳಾದರೆ ಅಂತಹ ಸ್ತ್ರೀಯರ ಗಂಡನು ವತಾ ಅಲೆದಾಟ ಮಾಡುವವನೂ, ಸ್ಥಿರ ರಾಶಿಯಾಗಿದ್ದರೆ ಒಂದೇ ಸ್ಥಳದಲ್ಲಿ ನಿಲ್ಲತಕ್ಕವನೂ, ದ್ವಿಸ್ವಭಾವ ರಾಶಿಯಾದರೆ ಕೆಲವು ಸಮಯ ವತಾ ಅಲೆದಾಟ ಮಾಡುವವನೂ ಆಗಿರುತ್ತಾನೆ. ಇನ್ನು ಕೆಲವರು ಸ್ಥಿರವಾಗಿ ನಿಲ್ಲತಕ್ಕವರೂ ಆಗುತ್ತಾರೆ. ಲಗ್ನದಿಂದ, ಶುಕ್ರನಿರುವ ಸಪ್ತಮದ ಅಧಿಪತಿಯು ಬಲಯುತವಾಗಿ ಸಪ್ತಮದಲ್ಲಿದ್ದರೆ ಮತ್ತು ಸಪ್ತಮವು ಬಲಿಷ್ಠ ಗ್ರಹಗಳ ಸಂಬಂಧ ಹೊಂದಿದರೆ ಇಂತಹ ಜಾತಕರು ಗಂಡ ಹೆಂಡತಿಯೊಂದಿಗೆ ಸಾಯುತ್ತಾರೆ. ಸ್ತ್ರೀಯರ ಜನ್ಮ ರಾಶಿಯಿಂದ ಅಥವಾ ಜನ್ಮ ಲಗ್ನದಿಂದ ಸಪ್ತಮ ರಾಶಿಯಲ್ಲಿ ಪಾಪಗ್ರಹ ವೀಕ್ಷಿತನಾದ ವರ ಇದ್ದ ಪಕ್ಷದಲ್ಲಿ ಆ ಸ್ತ್ರೀಯು ಗಂಡನಿಂದ ಬಿಡುಗಡೆ ಹೊಂದುತ್ತಾಳೆ. ಸ್ತ್ರೀಯ ಜಾತಕದಲ್ಲಿ ಸಪ್ತಮ ಭಾವದಲ್ಲಿ ಶುಭಾಶುಭ ಗ್ರಹಗಳಿದ್ದರೆ ಇಂತಹವರು ಮೊದಲನೆಯ ಗಂಡನನ್ನು ಬಿಟ್ಟು ಎರಡನೆಯ ಮದುವೆಯಾಗುತ್ತಾರೆ. ಸಪ್ತಮದಲ್ಲಿ ದುರ್ಬಲ ಪಾಪಗ್ರಹಗಳಿದ್ದರೆ ಅದಕ್ಕೆ ಶುಭ ಗ್ರಹಗಳ ದಷ್ಟಿ ಇದ್ದರೆ ಅವಳ ಗಂಡನನ್ನು ಬಿಡುತ್ತಾಳೆ. ಸ್ತ್ರೀಯರ ಜಾತಕದಲ್ಲಿ ಪಾಪಗ್ರಹಗಳು ಏಳರಲ್ಲೋ, ಎಂಟರಲ್ಲೋ ಇದ್ದು, ಶುಭ ಗ್ರಹಗಳು ಒಂಭತ್ತನೆಯ ಮನೆಯಲ್ಲಿದ್ದರೆ ಗಂಡ ಹೆಂಡತಿಯರಿಬ್ಬರೂ ಸುಖಮಯ ಜೀವನ ಮಾಡುತ್ತಾರೆ. ಸ್ತ್ರೀಯರ ಜಾತಕದಲ್ಲಿ ಗುರು ಬಲಿಷ್ಠವಾಗಿದ್ದರೆ ಅಂತಹ ಸ್ತ್ರೀಯರ ಗಂಡನು ಬಹಳ ದಢಚಿತ್ತನಾಗಿರುತ್ತಾನೆ. ಸ್ತ್ರೀಯರ ಲಗ್ನದಿಂದ, ಚಂದ್ರ ಲಗ್ನದಿಂದ ಏಳನೆಯ ಮನೆಯ ಅಧಿಪತಿಗಳ ರಾಹು ಪೀಡಿತನಾಗಿದ್ದರೆ ಲಗ್ನದಿಂದ ಸಪ್ತಮದ ಅಧಿಪತಿಯು ಹನ್ನೊಂದರಲ್ಲಿ ರಾಹು ಸಮೇತರಾಗಿದ್ದರೆ ಇದರಿಂದ ಆ ಸ್ತ್ರೀಯ ಗಂಡನಿಗೆ ಇನ್ನೊಬ್ಬಳು ವಿವಾಹಿತ ಪತ್ನಿ ಇರುತ್ತಾಳೆ. ಸ್ತ್ರೀಯರ ಸಪ್ತಮ ಸ್ಥಾನದಲ್ಲಿ ಪಾಪ ದಷ್ಟಿಯನ್ನು ಹೊಂದಿದ ಶನಿ ಇದ್ದರೆ ಮದುವೆ ಆಗುವುದು ಕಷ್ಟವಾಗುತ್ತದೆ. ಸ್ತ್ರೀಯರ ಜಾತಕದಲ್ಲಿ ಎಂಟರಲ್ಲಿ ಏಳರ ಅಧಿಪತಿಯಾದ ಕುಜ ಇರುವುದು ಇದಕ್ಕೆ ರಾಹುವಿನ ಸಂಬಂಧ ಇರುವ ಶನಿಯ ದೃಷ್ಟಿ ಇದ್ದರೆ ಇವರ ಪತಿಯು ಮದುವೆಯಾದ ಕೆಲವೇ ವರ್ಷದಲ್ಲಿ ತೊಂದರೆಗೆ ಈಡಾಗುತ್ತಾರೆ. ಸಪ್ತಮ ಸ್ಥಾನದಲ್ಲಿ ಪಾಪ ವೀಕ್ಷಿತನಾದ ಕುಜನಿದ್ದ ಪಕ್ಷದಲ್ಲಿ ಆ ಸ್ತ್ರೀಯು ಬಾಲ್ಯದಲ್ಲಿಯೇ ಗಂಡನನ್ನು ಕಳೆದು ವಿಧವೆಯಾಗುವಳು. ಸ್ತ್ರೀಯರ ಜಾತಕದಲ್ಲಿ ದ್ವಿಸ್ವಭಾವ ರಾಶಿಯಲ್ಲಿ ಚಂದ್ರ ದ್ವಿಸ್ವಭಾವ ರಾಶಿಯಾದ ಏಳನೆಯ ಮನೆಯಲ್ಲಿ ನಾಲ್ಕು ಗ್ರಹಗಳಿರುವುದು ಕಾರಕ ಶುಕ್ರನು ಏಳರಲ್ಲಿದ್ದು ಚಂದ್ರನಿಂದ ಏಳನೆಯ ಹನ್ನೊಂದನೆಯ ಮನೆಗಳಿಗೆ ಸಂಬಂಧ ಉಂಟಾದರೆ ಅಂತಹ ಸ್ತ್ರೀಯರ ಗಂಡನಿಗೆ ತೊಂದರೆಯಾಗಿ ಆ ಸ್ತ್ರೀಗೆ ಎರಡನೆಯ ಮದುವೆಯಾಗಬಹುದು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...