Skip to main content

ವೈದ್ಯಕೀಯ ಶಿಕ್ಷಣದಲ್ಲಿ ನವಗ್ರಹಗಳ ಪಾತ್ರ

ವೈದ್ಯಕೀಯ ಶಿಕ್ಷಣದಲ್ಲಿ ನವಗ್ರಹಗಳ ಪಾತ್ರ * ಡಾ.ಎಸ್ .ಎನ್. ಶೈಲೇಶ್, ಬಾಣಾವರ ರೀತಿಯ ಕೆಲಸ ಕಾರ್ಯಗಳು ಆಗುತ್ತವೆ ಮತ್ತು ಯಾವ್ಯಾವ ಸಾಧನೆಗಳನ್ನು ನಾವು ಮಾಡಲು ಸಾಧ್ಯ ಎಂದು ಹೇಳುತ್ತವೆ. ಅದೇನೆಂದು ನಿಮಗೆ ಗೊತ್ತಾ ? ಇತ್ತೀಚಿನ ದಿನಗಳಲ್ಲಿ ಪಿಯುಸಿ ಪರೀಕ್ಷೆಯ ನಂತರ ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕೆಂದು ತಂದೆ ತಾಯಿಯರು ಚಿಂತಿಸತೊಡಗುತ್ತಾರೆ. ಕೆಲವು ಮಕ್ಕಳು ಇಂಜಿನಿಯರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ಕಲೆ, ವಾಣಿಜ್ಯ, ಹೀಗೆ ಹತ್ತು ಹಲವಾರು ಬಗೆಯ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಮಾತ್ರ ವೈದ್ಯಕೀಯ ಶಿಕ್ಷಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರೂ ವೈದ್ಯರಾಗಲು ಸಾಧ್ಯವಿಲ್ಲ. ಎಲ್ಲರೂ ಎಂಜಿನಿಯರ್ ಆಗಲು ಸಾಧ್ಯವಿಲ್ಲ. ಆದರೆ ಜಾತಕದ ಅನುಸಾರವಾಗಿ ಕುಂಡಲಿಯಲ್ಲಿ ಯಾವ ಯಾವ ಗ್ರಹಗಳು ಯಾವ ಮನೆಯಲ್ಲಿದೆ ಎಂಬುದನ್ನು ನಿರ್ಧರಿಸಿ ಮುಂದೆ ಅವರ ಶಿಕ್ಷಣ ಯಾವ ವಿಚಾರದ ಬಗ್ಗೆ ಇರುವುದೆಂದು ತಿಳಿದುಕೊಳ್ಳಬಹುದು. ಅನಾದಿಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ಹಾಗೂ ವೈದ್ಯಕೀಯ ಶಾಸ್ತ್ರಕ್ಕೆ ನಿಕಟ ಸಂಬಂಧವಿದೆ. ಈಶ್ವರನ ಮುಖದಿಂದ ಪ್ರಪಂಚದ ಸಕಲ ಜೀವಿಗಳ ಉದ್ಧಾರಕ್ಕಾಗಿ ವೇದಗಳು ಸೃಷ್ಟಿಯಾದವು. ವೇದಗಳಲ್ಲಿ ಕಲೆ, ವಿಜ್ಞಾನ, ಜ್ಞಾನ, ವಿದ್ಯೆಗಳು ಅಡಕವಾಗಿವೆ. ಅಥರ್ವಣ ವೇದದ ಮೂಲಕ ಆಯುರ್ವೇದದ ವಿಚಾರಗಳನ್ನು ಸಂಗ್ರಹಿಸಿ ಚರ್ತುಮುಖ ಬ್ರಹ್ಮದೇವನು ಮಾನವನ ಕಲ್ಯಾಣಕ್ಕಾಗಿ ಬ್ರಹ್ಮ ಸಂಹಿತೆ ಎಂಬ ವೈದ್ಯ ರಹಸ್ಯ ರಚಿಸಿದ್ದಾನೆ. ಈ ಆಯುರ್ವೇದವನ್ನು ಮಹಾ ಮುನಿಗಳಾದ ಶ್ರಿ ಶುಶ್ರುತ , ಶ್ರೀ ಚರಕ , ಮುನಿ ಶ್ರೀ ಮತ್ತು ವಾಗ್ಭಟ ಮುಂತಾದವರು ಅಭ್ಯಾಸ ಮಾಡಿ ಆಯುರ್ವೇದ ಶಾಸ್ತ್ರವನ್ನು ಬೆಳೆಸಿದರು. ಹಾಗೂ ಸುಪ್ರಸಿದ್ಧ ವೈದ್ಯರಾದರು. ಈಗ ವೈದ್ಯಕೀಯ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿ ಹೋಮಿಯೋಪಥಿ ಆಯುರ್ವೇದ, ಯುನಾನಿ, ಅಲೋಪತಿ, ವೈದ್ಯ ಪದ್ಧತಿ ಮುಂದುವರೆದು ಸಾಕಷ್ಟು ಬದಲಾವಣೆಗಳಾಗುತ್ತಿವೆ. ಒಬ್ಬ ವ್ಯಕ್ತಿ ವೈದ್ಯನಾಗಬೇಕಾದರೆ ಆತನ ಜಾತಕವನ್ನು ಪರಿಶೀಲಿಸಿ ಆತನ ಭವಿಷ್ಯ ಹೇಳಬೇಕಾಗುತ್ತದೆ. ಮೊದಲಿಗೆ ರಾಶಿಗಳಿಗೆ ಸಂಬಂಧಿಸಿದಂತೆ ಯಾವ ವಿಭಾಗದಲ್ಲಿ ಪರಿಣತಿ ಹೊಂದುತ್ತಾರೆಂದು ನೋಡೋಣ. ಮೇಷ ಹಾಗೂ ವೃಶ್ಚಿಕ: ಈ ರಾಶಿಗಳಿಗೆ ಸಂಬಂಧಿಸಿದಂತೆ ಮೇಷ ರಾಶಿ ತಲೆ ಹಾಗೂ ಮಸ್ತಕಕ್ಕೆ ಸಂಬಂಧಿಸಿದೆ. ಹಾಗೂ ವೃಶ್ಚಿಕ ರಾಶಿ ಗುಹೇಂದ್ರಿಯ ಹಾಗೂ ಮೂತ್ರಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಕುಜನಾಗಿದ್ದು , ಈ ಕುಜನು ಬಲಿಷ್ಠನಾಗಿದ್ದರೆ ಮೆದುಳಿಗೆ ಸಂಬಂಧಿಸಿದ ಪರಿಣಿತಿ ವೈದ್ಯರಾಗುತ್ತಾರೆ. ನುರಿತ ಶಸ್ತ್ರಚಿಕಿತ್ಸಕರಾಗುತ್ತಾರೆ ಹಾಗೂ ಒಳ್ಳೆಯ ದಂತ ವೈದ್ಯರಾಗುತ್ತಾರೆ ಮತ್ತು ನುರಿತ ದಾದಿಯರಾಗುತ್ತಾರೆ. ಗುಪ್ತರೋಗ ತಜ್ಞರಾಗುತ್ತಾರೆ. ವೃಷಭ ಹಾಗೂ ತುಲಾ ರಾಶಿ: ಈ ರಾಶಿಗಳಿಗೆ ಸಂಬಂಧಿಸಿದಂತೆ ವೃಷಭ ರಾಶಿ ಮುಖಕ್ಕೆ ಸಂಬಂಧಿಸಿದೆ. ತುಲಾ ರಾಶಿ ತೊಡೆ ಹಾಗೂ ವೀರ್ಯಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಶುಕ್ರನಾಗಿದ್ದು ಈ ಶುಕ್ರನು ಬಲಿಷ್ಠನಾಗಿದ್ದರೆ ದಂತ ವೈದ್ಯರು, ನುರಿತ ಶಸ್ತ್ರ ಚಿಕಿತ್ಸಕರೂ ಆಗುತ್ತಾರೆ. ಮಿಥುನ ಹಾಗೂ ಕನ್ಯಾ: ಈ ರಾಶಿಗಳಿಗೆ ಸಂಬಂಧಿಸಿದಂತೆ ಮಿಥುನ ರಾಶಿ ಕೈಗಳು ಹಾಗೂ ಕುತ್ತಿಗೆ ಸಂಬಂಧಿಸಿದೆ. ಕನ್ಯಾ ರಾಶಿ ಸೊಂಟ ಹೊಟ್ಟೆಯ ಕೆಳಭಾಗಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಬುಧ. ಈ ಬುಧನು ಬಲಿಷ್ಠನಾಗಿದ್ದರೆ ವೈದ್ಯಶಾಸ್ತ್ರದಲ್ಲಿ ಪಾಂಡಿತ್ಯ ಹೊಂದುವರು ಹಾಗೂ ವೈದ್ಯಕೀಯ ವಿಚಾರ, ವಿಷಯಗಳಲ್ಲಿ ಅನೇಕ ಸಂಶೋಧನೆ ನಡೆಸುವರು. ಕಟಕ: ಈ ರಾಶಿಯು ಹೃದಯ, ಎದೆ, ಹೊಟ್ಟೆಗೆ ಸಂಬಂಧಿಸಿದೆ. ಈ ರಾಶಿಯ ಅಧಿಪತಿ ಚಂದ್ರ. ಈತ ಬಲಿಷ್ಠನಾಗಿದ್ದರೆ ಪ್ರತಿಭಾನ್ವಿತ ಅನುಭವಿ, ಹೃದಯ ತಜ್ಞ ಹಾಗೂ ನುರಿತ ಶಸ್ತ್ರಚಿಕಿತ್ಸಕ ಹಾಗೂ ನುರಿತ ದಾದಿಯರಾಗುವರು. ಸಿಂಹ: ಈ ರಾಶಿಯ ಉದರಕ್ಕೆ ಸಂಬಂಧಿಸಿದೆ. ಈ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಬಲಿಷ್ಠನಾಗಿದ್ದರೆ ಉಚ್ಛ ಕ್ಷೇತ್ರದಲ್ಲಿದ್ದರೆ, ನುರಿತ ಶಸ್ತ್ರಚಿಕಿತ್ಸಕ, ವೈದ್ಯ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಔಷಧ ಶಾಸ್ತ್ರದಲ್ಲಿ ಪರಿಣಿತಿ ಹೊಂದುವರು. ಧನಸ್ಸು ಹಾಗೂ ಮೀನ: ಧನಸ್ಸು ರಾಶಿಯು ತೊಡೆ, ಮೊಣಕಾಲುಗಳಿಗೆ ಸಂಬಂಧಿಸಿದೆ. ಮೀನ ರಾಶಿಯ ಕಾಲುಗಳು, ಪಾದಗಳಿಗೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಗುರು. ಗುರು ಬಲಿಷ್ಠನಾಗಿದ್ದರೆ ನುರಿತ ದಾದಿಯರಾಗುತ್ತಾರೆ. ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಮುಖ್ಯಸ್ಥರಾಗುವರು. ಮೂಳೆ ವೈದ್ಯ ಹಾಗೂ ಶಸ್ತ್ರಚಿಕಿತ್ಸಕರಾಗುವರು. ಮಕರ ಹಾಗೂ ಕುಂಭ: ಮಕರ ರಾಶಿಯು ಮೊಣಕಾಲಿಗೆ ಸಂಬಂಧಿಸಿದೆ. ಕುಂಭ ಮಂಡಿಗೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಶನೇಶ್ವರನು ಅಧಿಪತಿ. ಈತ ಬಲಿಷ್ಠನಾಗಿದ್ದರೆ ಮೂಳೆ ತಜ್ಞ , ನುರಿತ ಶಸ್ತ್ರಚಿಕಿತ್ಸಕರಾಗುವರು. ಸೂರ್ಯ ಹಾಗೂ ರಾಹು ಕಾರಕಾಂಶದಲ್ಲಿದ್ದು ಶುಭಗ್ರಹಗಳು ನೋಡುತ್ತಿದ್ದರೆ ಅರಿವಳಿಕೆ ತಜ್ಞರಾಗುತ್ತಾರೆ ಹಾಗೂ ಸುಪ್ರಸಿದ್ಧ ಔಷಧಿ ವ್ಯಾಪಾರಿಗಳಾಗುತ್ತಾರೆ. ಬುಧ ರಾಹು ಮನೆ ವೈದ್ಯ ವೃತ್ತಿಗೆ ಕಾರಕರು. ಸೂರ್ಯ ಕುಜರು ಅಗ್ನಿ ರಾಶಿಗಳಲ್ಲಿ ಅಥವಾ ಉಚ್ಛ ಸ್ವಮಿತ್ರ ಕ್ಷೇತ್ರಗಳಲ್ಲಿ ಇದ್ದರೆ ಯಶಸ್ವಿ ವೈದ್ಯರಾಗುತ್ತಾರೆ. ಯಾವ ವೈದ್ಯನೇ ಆಗಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಥವಾ ವೃತ್ತಿಯಲ್ಲಿ ಒಳ್ಳೆಯ ಪರಿಣಿತಿ ಹೊಂದಿ ಯಶಸ್ವಿ ವೈದ್ಯನಾಗಬೇಕಾದರೆ ಕಾರಕ ಗ್ರಹಗಳು ಹೆಚ್ಚಾಗಿ ಪುರುಷ ರಾಶಿಗಳಲ್ಲಿ ಇರಬೇಕು. ಪುರುಷ ರಾಶಿಗಳೆಂದರೆ ಸೂರ್ಯ, ಕುಜ ಹಾಗೂ ಗುರು ಪುರುಷ ಗ್ರಹಗಳಾಗಿವೆ. ಸಿಂಹ, ಮೇಷ, ಧನಸ್ಸು ಇವು ಪುರುಷ ರಾಶಿಗಳಾಗಿರುತ್ತವೆ. ಕುಂಡಲಿಯಲ್ಲಿ ಚಂದ್ರನು ಪುರುಷ ರಾಶಿಯಲ್ಲಿ ಇದ್ದರೆ ಅಂತಹ ವ್ಯಕ್ತಿಗಳು ಸುಪ್ರಸಿದ್ಧ ವೈದ್ಯರಾಗಿರುತ್ತಾರೆ. ಜತೆಗೆ ಕೀರ್ತಿ ಸನ್ಮಾನಕ್ಕೆ ಪಾತ್ರರಾಗಿರುತ್ತಾರೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...