ಅಶುಭ ಕಾಲ * ರತ್ನರಾಜ ಜೈನ್
ನವಗ್ರಹಗಳಲ್ಲಿ ಅತ್ಯಂತ ಶುಭ ಫಲಗಳನ್ನು ಕೊಡುವ ಗ್ರಹಗಳೆಂದರೆ ಗುರು ಮತ್ತು ಶುಕ್ರ. ಈ ಎರಡು ಗ್ರಹಗಳಲ್ಲಿ ಯಾವೊಂದು ಗ್ರಹ ಅಸ್ತನಾಗಿದ್ದರೂ ಆ ಸಮಯದಲ್ಲಿ ವಿವಾಹಾದಿ ಮಂಗಳ ಕಾರ್ಯ ಮಾಡಬಾರದು.
ಆದರೆ 'ಮಹಾತ್ಮ ದರ್ಪಣ'ದ ಫಲದಂತೆ ಫಲ ಹೀಗಿದೆ. ಗುರು ಅಸ್ತನಾದ ಕಾಲದಲ್ಲಿ ಶುಕ್ರನು ಸ್ವಂತ ಕ್ಷೇತ್ರಗಳಾದ ವೃಷಭ, ತುಲಾ ರಾಶಿಗಳಲ್ಲೂ ಅಥವಾ ಮಿತ್ರ ಕ್ಷೇತ್ರಗಳಾದ ಮಕರ, ಕುಂಭ, ಮಿಥುನ ರಾಶಿಗಳಲ್ಲಿದ್ದರೆ ವಿವಾಹ ಮಾಡಬಹುದು.
ಅದೇ ರೀತಿ ಶುಕ್ರ ಗ್ರಹ ಅಸ್ತನಾದ ಕಾಲದಲ್ಲಿ ಗುರುವು ಸ್ವಂತ ಕ್ಷೇತ್ರಗಳಾದ ಧನು ಮತ್ತು ಮೀನ ರಾಶಿಯಲ್ಲಿದ್ದರೆ, ಕರ್ಕಾಟಕ ರಾಶಿಯಲ್ಲಿದ್ದರೆ ಮಿತ್ರ ಕ್ಷೇತ್ರಗಳಾದ ಸಿಂಹ, ವೃಶ್ಚಿಕ ಮತ್ತು ಮೇಷ ರಾಶಿಗಳಲ್ಲಿದ್ದರೆ ವಿವಾಹ ಮಾಡಬಹುದು.
ಆದರೆ ಈಗ ಶುಕ್ರನು 2013, ಫೆಬ್ರವರಿ 27 ರಂದು ಶತಭಿಷಃ ಕುಂಭರಾಶಿಯಲ್ಲಿ ಅಸ್ತನಾಗಿ 2013, ಏಪ್ರಿಲ್ 24 ರಂದು ಮೇಷ ರಾಶಿ ಭರಣಿ ನಕ್ಷತ್ರದಲ್ಲಿ ಉದಯಿಸುವನು. ಈ ಸಮಯ ಶುಕ್ರ ಅಸ್ತಕಾಲ. ಯಾವುದೇ ವಿವಾಹ ಸಂಬಂಧ ಶುಭ ಕಾರ್ಯಗಳನ್ನು ಮಾಡುವ ಹಾಗಿಲ್ಲ. ಒಂದು ವೇಳೆ ವಿವಾಹ ಆದರೂ ದಾಂಪತ್ಯ ಜೀವನ ಉತ್ತಮ ಇರಲಾರದು. ಸತಿ-ಪತಿಯಲ್ಲಿ ಭಿನ್ನಭಿಪ್ರಾಯ ಉಂಟಾಗಿ, ಬೇರೆ ಬೇರೆ ಆಗುವ ಸಾಧ್ಯತೆ. ಹಾಗೆಯೇ ಸ್ತ್ರೀ ದೌರ್ಜನ್ಯಗಳು ಹೆಚ್ಚುವ ಸಾಧ್ಯತೆ ಇದೆ. ಸತಿ-ಪತಿ ಮಧ್ಯೆ ವಿರಸ ಉಂಟಾಗುವ ಸಾಧ್ಯತೆ.
ಶುಕ್ರನು ಅಸ್ತನಾದ ಕಾಲದಲ್ಲಿ ಗುರು ಮತ್ತು ಕ್ಷೇತ್ರ ಅಥವಾ ಸ್ವಕ್ಷೇತ್ರಗಳಲ್ಲಿ ಇಲ್ಲದೆ ವೈರಿ ಕ್ಷೇತ್ರ ಶುಕ್ರನ ವೃಷಭ ರಾಶಿಯಲ್ಲಿರುವನು. ಹೀಗಾಗಿ ವಿವಾಹಕ್ಕೆ ಸೂಕ್ತ ಕಾಲವಲ್ಲ ಎಂದು ತೋರುತ್ತದೆ.
ಅವಿವಾಹಿತ ಸ್ತ್ರೀಯರು ಬೇಗನೆ ವಿವಾಹವಾಗಲು ಈ ಕೆಳಗಿನ ಮಂತ್ರವನ್ನು ಪ್ರತಿದಿನ 9 ಬಾರಿ ಪಠಿಸಕ್ಕದ್ದು.
ಓಂ ಹ್ರೀಂ ಶ್ರೀಂ ದುರ್ಗ ಮಹಾ ಮಾತಾ ದೇವಾಯೈ ನಿವಾದ್ದ ದೋಷ ನಿವಾರಣಾಯ ಹೂಂ ಫಟ್ ಸ್ವಾಹಾ.
ಜಾತಕದಲ್ಲಿ ‘ಕುಂಡಲಿ’ ಏನಿದರ ವೈಶಿಷ್ಟ್ಯ
ಜಾತಕದಿಂದ ಶುಭ ಮತ್ತು ಅಶುಭ ಫಲಗಳನ್ನು ತಿಳಿಯಬಹುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿದೆ.
'ಜಾತಕ' ಎಂದರೆ ನಿರ್ದಿಷ್ಟ ಕಾಲ ಅಥವಾ ಘಳಿಗೆಯನ್ನು ಗೊತ್ತುಪಡಿಸಿ (ಜನನ ಸಮಯ) ಆಕಾಶದ ಗ್ರಹಗಳ ಮತ್ತು ನಕ್ಷತ್ರಗಳ ನಕ್ಷೆಯನ್ನು ಬರೆದು ತೋರಿಸುವುದೇ ಜಾತಕ. ಈ ಜಾತಕದಲ್ಲಿ ರಾಶಿಕುಂಡಲಿ ಎಂಬ 12 ಚೌಕಗಳನ್ನು (ಕುಂಡಲಿ) ಬರೆದಿರುವ ನಕ್ಷತ್ರ ಮತ್ತು ಲಗ್ನವನ್ನು ಬರೆದಿರುತ್ತಾರೆ. 'ಲಗ್ನ' ಎಂದರೆ ಮಗು ಜನನದ ಸಮಯಕ್ಕೆ ಉದಯವಾಗುವ ರಾಶಿ ಎಂದು. ಈ ಕುಂಡಲಿಯನ್ನು ಹಲವು ವಿಧದಲ್ಲಿ ಬರೆಯಬಹುದು. ಅವು ಯಾವುವು ಎಂದರೆ ರಾಶಿ ಕುಂಡಲಿ, ನವಾಂಶ ಕುಂಡಲಿ, ಹೋರ ಕುಂಡಲಿ,ದ್ರೇಶಾಣ ಕುಂಡಲಿ, ದ್ವಾದಶಾಂಶ ಕುಂಡಲಿ, ಚತುರ್ಷಾಂಶ ಕುಂಡಲಿ, ಸಪ್ತಾಂಶ ಕುಂಡಲಿ, ಷೋಡಶಾಂಶ ಕುಂಡಲಿ, ವಿಂಶಾಂಶ ಕುಂಡಲಿ, ತ್ರಿಂಷಾಂಶ ಕುಂಡಲಿ, ಅಕ್ಷ ವೇದಾಂಶ ಕುಂಡಲಿ, ಷಷ್ಟಾಂಶ ಕುಂಡಲಿ ಹೀಗೆ 150 ಕುಂಡಲಿಗಳನ್ನು ಬರೆಯಬಹುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿದೆ.
ಒಂದೊಂದು ಕುಂಡಲಿಯಿಂದ ವ್ಯಕ್ತಿಯ ಸಂಪತ್ತು, ಸಂತೋಷ, ಜ್ಞಾನ, ಬಲ, ವಿದ್ಯೆ, ದುರಾದೃಷ್ಟ, ಅಧ್ಯಾತ್ಮಿಕ, ಹಣ, ಸಂತಾನ ಎಲ್ಲ ಶುಭ ಮತ್ತು ಆಶುಭ ಫಲಗಳನ್ನು ನಮಗೆ ತಿಳಿಸುತ್ತದೆ. ರಾಶಿ ಕುಂಡಲಿಯಲ್ಲಿ ಲಗ್ನ ಯಾವ ರಾಶಿಯಲ್ಲಿ ಇರುವುದೋ ಅದೇ ಮೊದಲನೆ ಮನೆ. ಇದನ್ನು ತನು ಭಾವ ಎನ್ನುತ್ತಾರೆ. ಇದರಿಂದ ವ್ಯಕ್ತಿಯ ದೇಹದ ಆಕಾರ, ಬಣ್ಣ ತಿಳಿಯುತ್ತದೆ. ಎರಡನೇ ಮನೆಯಿಂದ ಮಾತು, ವಿದ್ಯಾಭ್ಯಾಸ, ಮರಣ, ಮೂರನೇ ಮನೆಯಿಂದ ಸೋದರ, ಸೋದರಿಯರ ಬಗ್ಗೆ, ನಾಲ್ಕನೇ ಮನೆಯಿಂದ ಸುಖ ಮತ್ತು ಕುಟುಂಬದ ಬಗ್ಗೆ, ಐದನೇ ಮನೆಯಿಂದ ಸಂತಾನ, 6ನೇ ಮನೆಯಿಂದ ರೋಗ, ಸಾಲ ತಿಳಿಯುವುದು, 7ನೇ ಮನೆಯಿಂದ ಮದುವೆ, 8ನೇ ಮನೆಯಿಂದ ಆಯಸ್ಸು, 9ನೇ ಮನೆಯಿಂದ ಭಾಗ್ಯ, 10ನೇ ಮನೆಯಿಂದ ಉದ್ಯೋಗ, 11 ನೇ ಮನೆಯಿಂದ ಲಾಭ, 12ನೇ ಮನೆಯಿಂದ ದುಃಖ, ವ್ಯಯ ಆಯಸ್ಸು ತಿಳಿಯುತ್ತದೆ.
ಕುಂಡಲಿಯಲ್ಲಿ ಎರಡನೇ ಮನೆಯಿಂದ ಮೇಷರಾಶಿ ಆರಂಭವಾಗಿ ಮೀನರಾಶಿಗೆ ಅಂತ್ಯವಾಗುತ್ತದೆ. ಮೇಷರಾಶಿ ಅಗ್ನಿತತ್ವ ರಾಶಿ, ಇದರಲ್ಲಿ ಕೃತ್ತಿಕಾ ನಕ್ಷತ್ರದ 1 ಮತ್ತು 2 ಪಾದಗಳು ಇರುತ್ತವೆ. ಮಿಥುನ ರಾಶಿ ವಾಯು ತತ್ವರಾಶಿ. ಇದರಲ್ಲಿ ಮೃಗಶಿರಾ ನಕ್ಷತ್ರದ 3 ಮತ್ತು 4ನೇ ಪಾದ ಆರ್ವಿದ್ರ 4 ಪಾದ ಮತ್ತು ಪುನರಸು 1, 2 ಮತ್ತು 3ನೇ ಪಾದ ಇರುತ್ತದೆ. ಕಟಕ ರಾಶಿ ಜಲ ತತ್ವರಾಶಿ. ಇದರಲ್ಲಿ ಪುನರಸು ನಕ್ಷತ್ರದ 4ನೇ ಪಾದ, ಪುಷ್ಯ 4 ಪಾದ ಮತ್ತು ಆಶ್ಲೇಷ ನಕ್ಷತ್ರದ 4 ಪಾದ ಇರುತ್ತದೆ.
ಸಿಂಹರಾಶಿ ಅಗ್ನಿತತ್ವರಾಶಿ. ಇದರಲ್ಲಿ ಮಖ ನಕ್ಷತ್ರದ 4 ಪಾದ ಪುಬ್ಬ ನಕ್ಷತ್ರದ 4 ಪಾದ, ಉತ್ತರೆ 1ನೇ ಪಾದ ಇರುತ್ತದೆ.
ಕನ್ಯಾ ರಾಶಿ ಭೂತತ್ವರಾಶಿ. ಇದರಲ್ಲಿ ಉತ್ತರ ನಕ್ಷತ್ರದ 2, 3, 4 ನೇ ಪಾದ ಹಸ್ತ 4 ಪಾದ ಮತ್ತು ಚಿತ್ರ 1 ಮತ್ತು 2ನೇ ಪಾದ ಇರುತ್ತದೆ. ತುಲಾ ರಾಶಿ ವಾಯುತತ್ವರಾಶಿ. ಇದರಲ್ಲಿ ಚಿತ್ರ ನಕ್ಷತ್ರ 3 ಮತ್ತು 4ನೇ ಪಾದ, ಸ್ವಾತಿ 4 ಪಾದ ವಿಶಾಖ 1, 2, 3 ಪಾದ ಇರುತ್ತದೆ. ವೃಶ್ಚಿಕರಾಶಿ ಜಲತತ್ವರಾಶಿ. ಇದರಲ್ಲಿ ವಿಶಾಖ ನಕ್ಷತ್ರದ 4 ನೇ ಪಾದ ಅನುರಾಧ 4 ಪಾದ ಜ್ಯೇಷ್ಠ ನಕ್ಷತ್ರದ 4 ಪಾದ ಇರುತ್ತದೆ. ಧನುಸ್ಸು ರಾಶಿ ಅಗ್ನಿತತ್ವರಾಶಿ. ಇದರಲ್ಲಿ ಮೂಲ ನಕ್ಷತ್ರದ 4 ಪಾದ, ಪೂರ್ವಾಷಾಢ 4 ಪಾದ ಮತ್ತು ಉತ್ತರಾಷಾಢ 1 ನೇ ಪಾದ ಇರುತ್ತದೆ. ಮಕರ ರಾಶಿ ಭೂತತ್ವರಾಶಿ. ಇದರಲ್ಲಿ ಉತ್ತರಾಷಾಢ 2, 3, 4 ಪಾದ, ಶ್ರವಣ 4 ಪಾದ ಮತ್ತು ಧನಿಷ್ಠ 3, 4 ಪಾದ, ಶತಭಿಷ 4 ಪಾದ ಪೂರ್ವಭಾದ್ರ 1, 2, 3 ಪಾದ ಇರುತ್ತದೆ. ಮೀನ ರಾಶಿ ಜಲತತ್ವರಾಶಿ. ಇದರಲ್ಲಿ ಪೂರ್ವಭಾದ್ರ 4ನೇ ಪಾದ ಉತ್ತರಾಭಾದ್ರ 4 ಪಾದ ಮತ್ತು ರೇವತಿ 4 ಪಾದಗಳು ಇರುತ್ತದೆ.
ಧನಸ್ಸು ರಾಶಿ ಅಗ್ನಿತತ್ವರಾಶಿ ಭೂತತ್ವರಾಶಿ ಇದರಲ್ಲಿ ಉತ್ತರಾಷಾಢ 2,3, 4 ಪಾದ, ಶ್ರವಣ 4 ಪಾದ ಮತ್ತು ಧನಿಷ್ಠ 1, 2 ಪಾದ, ಶತಭಿಷ 4 ಪಾದ ಪುರ್ವಭಾದ್ರ 1, 2, 3 ಪಾದ ಇರುತ್ತದೆ. ಮೀನ ರಾಶಿ ಜಲತತ್ವರಾಶಿ. ಇದರಲ್ಲಿ ಪೂರ್ವಭಾದ್ರ 4 ನೇ ಪಾದ ಉತ್ತರಾಭಾದ್ರ 4 ಪಾದ ಮತ್ತು ರೇವತಿ 4 ಪಾದಗಳು ಇರುತ್ತದೆ.
ಮೇಷ ಮತ್ತು ವೃಶ್ಚಿಕ ರಾಶಿಗೆ ಕುಜಗ್ರಹ ಅಧಿಪತಿ, ವೃಷಭ ಮತ್ತು ತುಲಾ ರಾಶಿಗೆ ಶುಕ್ರಗ್ರಹ ಅಧಿಪತಿ, ಮಿಥುನ ಮತ್ತು ಕನ್ಯಾ ರಾಶಿಗೆ ಬುಧ ಅಧಿಪತಿ, ಧನಸ್ಸು ಮತ್ತು ಮೀನರಾಶಿಗೆ ಗುರುಗ್ರಹ ಅಧಿಪತಿ, ಮಕರ ಮತ್ತು ಕುಂಭರಾಶಿಗೆ ಶನಿ ಅಧಿಪತಿ ಕಟಕ ರಾಶಿಗೆ ಚಂದ್ರ ಅಧಿಪತಿ, ಸಿಂಹ ರಾಶಿಗೆ ರವಿಗ್ರಹ ಅಧಿಪತಿಯಾಗಿರುತ್ತದೆ. ಮೇಷ, ಕಟಕ, ಕನ್ಯಾ ಮತ್ತು ಮಕರ ರಾಶಿಗಳು ಚರ ರಾಶಿಗಳು. ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಗಳು ಸ್ಥಿರ ರಾಶಿಗಳು. ಮಿಥುನ, ಕನ್ಯಾ, ಧನಸ್ಸು ಮತ್ತು ಮೀನ ರಾಶಿಗಳು ದ್ವಿಸ್ವಭಾವ ರಾಶಿಗಳು. ಹೀಗೆ ಕುಂಡಲಿಯಿಂದ ಹಲವು ವಿಷಯಗಳು ತಿಳಿಯುತ್ತದೆ. -
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments