Skip to main content

ಮನಃಶಾಂತಿ ನೀಡುವ ನಕ್ಷತ್ರ ಎಲ್ಲ ನಕ್ಷತ್ರದವರು ಅತಿ ಮುಖ್ಯವಾಗಿ ಅಂಶಗಳು ಈ ರೀತಿ ಇವೆ.

ಮನಃಶಾಂತಿ ನೀಡುವ ನಕ್ಷತ್ರ ನಮ್ಮ ದೈನಂದಿನ ಚಟುವಟಿಕೆಗಳು ಸಫಲವಾಗಲು ಅಥವಾ ವಿಫಲವಾಗಲು ನಮ್ಮ ಜನ್ಮ ನಕ್ಷತ್ರ/ ನಾಮ ನಕ್ಷತ್ರಕ್ಕೂ ಆಯಾ ದಿನಗಳ ನಕ್ಷತ್ರಗಳ ಜತೆ ಇರುವ ಮೂಲ ಸಂಬಂಧವೇ ಕಾರಣ. ಹೀಗಾಗಿ ನಮ್ಮ ನಕ್ಷತ್ರಕ್ಕೂ ದಿನದ ನಕ್ಷತ್ರಕ್ಕೂ ಯಾವ ವಿಚಾರದಲ್ಲಿ ಸಂಬಂಧವಿರುತ್ತದೆ ಎಂಬುದನ್ನು ಅರಿಯಬೇಕು. ನಕ್ಷತ್ರ ಕಿರಣಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂಬ ಎರಡು ವಿಧಗಳಿವೆ. ಯಾವುದೇ ನಕ್ಷತ್ರದವರಿಗೆ ಸಕಾರಾತ್ಮಕ ಕಿರಣಗಳು ಅನುಕೂಲ. ನಕಾರಾತ್ಮಕ ಕಿರಣಗಳು ಪ್ರತಿಕೂಲ. ಈ ಕಿರಣಗಳು ಮನಸು, ಆರೋಗ್ಯ, ಹಣ, ಕಷ್ಟ-ನಷ್ಟ, ವೈರತ್ವ, ಸಾಧನೆ, ವ್ಯಾಪಾರ-ವ್ಯವಹಾರ, ಮೈತ್ರಿ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತವೆ. ಎಲ್ಲ ನಕ್ಷತ್ರದವರು ಅತಿ ಮುಖ್ಯವಾಗಿ ಅಂಶಗಳು ಈ ರೀತಿ ಇವೆ. ೧ನಿಮ್ಮ ಜನ್ಮ/ನಾಮ ನಕ್ಷತ್ರವಿರುವ ದಿನ ಅನುಕೂಲವಾಗಲಿ, ಅನನುಕೂಲವಾಗಲಿ ಇರುವುದಿಲ್ಲ. ಅಂದರೆ ಸಾಮಾನ್ಯ ಫಲ. ೨ನಿಮ್ಮ ನಕ್ಷತ್ರದ ಮುಂದಿನ ನಕ್ಷತ್ರವೇ ಸಂಪತ್ ತಾರೆ. ಇದು ಹಣ, ಆಭರಣ, ವ್ಯವಹಾರಗಳಿಗೆ ಅನುಕೂಲ. ಧನಲಕ್ಷ್ಮೀ ಪೂಜೆಗೆ ಶ್ರೇಷ್ಠ ದಿನ. ಬರಬೇಕಾಗಿದ್ದ ಹಣ ಬರುವುದು. ಗೌರವ, ಕೀರ್ತಿ, ಉಡುಗೊರೆ ಪ್ರಾಪ್ತವಾಗುವ ದಿನ. ಸಾಲ ಪಡೆಯಲು ಪ್ರಯತ್ನಪಟ್ಟಾಗ ಫಲದಾಯಕವಾಗುವ ದಿನ. 3.ನಿಮ್ಮ ನಕ್ಷತ್ರದಿಂದ 3ನೆಯ ನಕ್ಷತ್ರವೇ ವಿಪತ್ ತಾರೆ. ವಿಪತ್ ತಾರೆ ಇರುವ ದಿನ ಅಪಘಾತ, ಹೊಡೆತ, ಕಲಹ, ನಷ್ಟ ಮೊದಲಾದ ತೊಂದರೆಗಳಾಗುವುದು. ಮೇಲಧಿಕಾರಿಗಳ ಅವಕೃಪೆ ಉಂಟಾಗುವುದು. ವ್ಯಾಪಾರಿಗಳಾದರೆ ಹಾನಿ, ಮನಸ್ತಾಪಗಳಾಗುವುದು. ಯಾವ ಕೆಲಸ ಕಾರ್ಯ ಪ್ರಾರಂಭಕ್ಕೂ ಇದು ಸೂಕ್ತವಲ್ಲ. 4.ನಿಮ್ಮ ನಕ್ಷತ್ರದಿಂದ 4ನೇ ತಾರೆಯೇ ಕ್ಷೇಮ ತಾರೆ. ಯಾರಿಗಾಗಲೇ ಕ್ಷೇಮ ತಾರೆಯಿದ್ದ ದಿನ ಮಾನಸಿಕ ಶಾಂತಿ, ಆರೋಗ್ಯ, ಆಪ್ತರ ಭೇಟಿ ಮೊದಲಾದ ಅನುಕೂಲಗಳಿರುತ್ತವೆ. ಅಧಿಕಾರಿ ಭೇಟಿ, ಒಪ್ಪಂದ ಕಾರ್ಯ, ಶಸ್ತ್ರಚಿಕಿತ್ಸೆ, ಹೊಸ ಕಾರ್ಯ ಪ್ರಾರಂಭ, ಆರೋಗ್ಯ ತಪಾಸಣೆ, ಪ್ರಯಾಣ, ತಂಟೆ-ತಕರಾರುಗಳನ್ನು ಬಗೆಹರಿಸಿಕೊಳ್ಳಲು, ನ್ಯಾಯಾಲಯದ ವ್ಯವಹಾರಗಳಿಗೆ ಅನುಕೂಲಕರ. 5.ನಿಮ್ಮ ನಕ್ಷತ್ರದಿಂದ 5ನೇ ನಕ್ಷತ್ರವೇ ಪ್ರತ್ಯಕ್ ತಾರೆ. ಇದು ಯಾವ ಕೆಲಸ, ಕಾರ್ಯಗಳಿಗೂ ಅನುಕೂಲವಲ್ಲ. ನಿರೀಕ್ಷೆಗೆ ವಿರುದ್ಧವಾದ ಫಲಗಳು ಉಂಟಾಗುತ್ತವೆ. ಪ್ರತ್ಯಕ್ ತಾರೆ ಇರುವ ದಿನ ತಾಳ್ಮೆವಹಿಸಿ ಎಚ್ಚರಿಕೆಯಿಂದ ನಡೆದುಕೊಳ್ಳವುದರಿಂದ ತೊಂದರೆಗಳ ನಿವಾರಣೆ ಸಾಧ್ಯ. 6.ನಿಮ್ಮ ನಕ್ಷತ್ರದಿಂದ 6ನೇ ನಕ್ಷತ್ರವೇ ಸಾಧನ ತಾರೆ. ಈ ಸಾಧನ ತಾರೆಯಿರುವ ದಿನ ವಿದ್ಯಾಭ್ಯಾಸ, ಮಂತ್ರಸಿದ್ಧಿ, ಸಂಶೋಧನೆ, ಹೂಡಿಕೆ, ನೂತನ ಕಾರ್ಯ ಪ್ರಾರಂಭ, ಹೋರಾಟ, ಶುಭ ಕಾರ್ಯ, ಪ್ರೇಮ ವ್ಯವಹಾರಗಳಿಗೆ ಪ್ರಗತಿದಾಯಕ. 7.ನಿಮ್ಮ ನಕ್ಷತ್ರದಿಂದ 7ನೇ ನಕ್ಷತ್ರವೇ ನೈಧನ ತಾರೆ. ಇದು ಅತಿ ತೊಂದರೆದಾಯಕವಾಗಿರುವುದು. ನೈಧನ ತಾರೆಗೆ ವಧ ತಾರೆ ಎಂದೂ ಕರೆಯುವರು. ಯಾರಿಗೇ ಆಗಲಿ ನೈಧನ ತಾರೆಯಿದ್ದ ದಿನ ಕಷ್ಟ-ನಷ್ಟ, ಕಲಹ, ಅಪಘಾತ, ಶತ್ರು ಬಾಧೆ, ಅನಾರೋಗ್ಯ ಮೊದಲಾದ ತೊಂದರೆಗಳಾಗುತ್ತವೆ. ನಿಧನ ವಾರ್ತೆಗಳು ನೈಧನ ತಾರೆಯಿದ್ದಾಗಲೇ ಬರುವ ಸಾಧ್ಯತೆಗಳು ಹೆಚ್ಚು. ನೈಧನ ತಾರೆಯಿದ್ದಾಗಲೇ ಸಾವು ಉಂಟಾಗಿರುವ ಉದಾಹರಣೆಗಳು ಇವೆ. 8.ನಿಮ್ಮ ನಕ್ಷತ್ರದಿಂದ 8ನೇ ತಾರೆಯು ಮಿತ್ರ ತಾರೆಯಾಗುವುದು. ಈ ನಕ್ಷತ್ರವಿರುವ ದಿನ ಅಧಿಕಾರಿ ಭೇಟಿ, ಆಪ್ತರನ್ನು ಸಂಪರ್ಕಿಸಲು, ವ್ಯಾಪಾರ

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

12 ಲಗ್ನಗಳು,ಲಕ್ಷಣ ಫಲ, ದೋಷಗಳು

ವೃಷಭ ಲಗ್ನದ ಲಕ್ಷಣ ಫಲ, ದೋಷಗಳು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ವಷಭ ಲಗ್ನವು ರಾತ್ರಿ ಬಲ ರಾಶಿ, ಪ್ರಷ್ಠೋದಯ ರಾಶಿ, ಸ್ಥಿರ ರಾಶಿ, ಭೂ ತತ್ವ ರಾಶಿ, ಸ್ತ್ರೀ ಮತ್ತು ಯುಗ್ಮ ರಾಶಿ, ವೈಶ್ಯ ವರ್ಣ ರಾಶಿ, ರಜೋ ಗುಣ ರಾಶಿ. ವೃಷಭ ಮತ್ತು ವಶ್ಚಿಕ ರಾಶಿಗೆ ಶುಕ್ರಗ್ರಹ ಅಧಿಪತಿ. ವೃಷಭ ಲಗ್ನದಲ್ಲಿ ಹುಟ್ಟಿದವರು ವಿಶಾಲವಾದ ಹಣೆಯುಳ್ಳವರೂ, ಸ್ಥೂಲವಾದ ತುಟಿಯುಳ್ಳವರೂ, ಉಬ್ಬಿದ ಕೆನ್ನೆಗಳುಳ್ಳವರೂ ಆಗಿರುತ್ತಾರೆ. ಅವರಿಗೆ ಶರೀರದಲ್ಲಿ ಶೀತ, ವಾತ ಧಾತುಗಳೇ ಅಧಿಕ. ಉದಾರ ಗುಣವುಳ್ಳವರೂ, ಸಮಯ ಬಿದ್ದರೆ ಯಾರ ಲಂಗು ಲಗಾಮು ಇಲ್ಲದೇ ಖರ್ಚು ಮಾಡುವವ ಜನ ಇವರು. ಇವರಿಗೆ ಅಲ್ಪ ಪುತ್ರ ಸಂತಾನ ಇರುತ್ತದೆ. ಸ್ತ್ರೀ ಸಂತತಿ ಅಧಿಕವಾಗಿರುತ್ತದೆ. ತಂದೆ ತಾಯಿಗಳಿಂದ ದೂರವಾಗಿರುವವರೂ, ಅಧರ್ಮ ಕಾರ್ಯಗಳಲ್ಲಿ ತೊಡಗಿ ದ್ರವ್ಯಾರ್ಜನೆ ಮಾಡ ತಕ್ಕವರೂ ಆಗಿರುತ್ತಾರೆ. ಈ ಲಗ್ನದ ಹೆಣ್ಣು ಮಕ್ಕಳು ಸದಾ ಕಾಲ ಪತಿಯ ಸಮ್ಮುಖದಲ್ಲಿರಲು ಅಪೇಕ್ಷೆ ಪಡುತ್ತಾರೆ. ಸ್ವಜನ ಸಂಪರ್ಕ ಇಲ್ಲದವರೂ, ಬಂಧುಗಳಿಂದ ತಿರಸ್ಕರಿಸಲ್ಪಟ್ಟವರಾಗಿರುತ್ತಾರೆ. ಇವರ ಕೋಪ ಶೀಘ್ರವಾಗಿ ಶಮನವಾಗುವುದಿಲ್ಲ. ಇವರದ್ದು ಎದುರಾಳಿಗಳ ಮೇಲೆ ಬಿದ್ದು ಕಾದಾಡುವ ಸ್ವಭಾವ. ಸಾಧಾರಣ ಐಹಿಕ ಸುಖಾಭಿಲಾಷೆ, ಸ್ವತಂತ್ರ ಮನೋಭಾವ, ಹೆಚ್ಚಿನ ತಾಳ್ಮೆ ಯೂ ಇವರಗೆ ಸಿದ್ಧಿಸಿರುತ್ತದೆ. ಹೀಗಾಗಿ ಇನ್ನೊಬ್ಬರೊಂದಿಗೆ ಸಿಕ್ಕಿಕೊಳ್ಳುವುದೇ ಇಲ್ಲ. ಇವರು ಯಾವುದೇ ಕೆಲಸ ಕೈಗೊಂಡರೂ, ಬಹಳ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ