ಮೂತ್ರದಿಂದ ಬೇರ್ಪಟ್ಟು ಮೂತ್ರಕೋಶದಲ್ಲಿ ಒಂದೆಡೆ ಗಟ್ಟಿಯಾಗಿ ಸೇರ್ಪಡೆಗೊಳ್ಳುವ ವಸ್ತುಗಳು ಮೂತ್ರಕೋಶದ ಕಲ್ಲುಗಳು ಅಂದೆನಿಸಿಕೊಳ್ಳುತ್ತವೆ.
ಮೂತ್ರಕೋಶದಲ್ಲಿ ಕಲ್ಲುಗಳು ಬೆಳೆಯಲು ಹಲವಾರು ಕಾರಣಗಳಿವೆ. ಅವುಗಳೆಂದರೆ ಮೂತ್ರವು ಕ್ಯಾಲ್ಸಿಯಂ, ಆಕ್ಸಲೇಟ್, ಯೂರಿಕ್ ಆಸಿಡ್ ಮತ್ತು ಫಾಸ್ಫೇಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದು, ಮೂತ್ರದಲ್ಲಿ ನೀರಿನಂಶವು ಕಡಿಮೆಯಿರುವುದು, ಮೂತ್ರದಲ್ಲಿರುವ ಅಂಶಗಳು ಹೆಚ್ಚೆಚ್ಚು ಹೊರಹೋಗುವುದು, ವಾತಾವರಣದಲ್ಲಿ ಉಷ್ಣತೆ ಹೆಚ್ಚಿರುವುದು ಹಾಗೂ ನೀರನ್ನು ಕಡಿಮೆ ತೆಗೆದುಕೊಳ್ಳುವುದು, ಆಹಾರದಲ್ಲಿ ಪ್ರೋಟೀನ್, ಸೋಡಿಯಂ ಮತ್ತು ಕ್ಯಾಲ್ಸಿಯಂನ್ನು ಹೆಚ್ಚಾಗಿ ತೆಗೆದುಕೊಳ್ಳುವುದು, ಮೂತ್ರವನ್ನು ಸಮಯಕ್ಕೆ ಸರಿಯಾಗಿ ವಿಸರ್ಜಿಸದಿರುವುದು, ದೇಹದಲ್ಲಿ ಅತಿಹೆಚ್ಚು ಕ್ಯಾಲ್ಸಿಯಂ ಶೇಖರಣೆಗೊಂಡಿರುವುದು ಮೂತ್ರಕೋಶದಲ್ಲಿ ಕಲ್ಲು ಬೆಳೆಯಲು ಕಾರಣ.
ಮೂತ್ರದಲ್ಲಿ ಕ್ಯಾಲ್ಸಿಯಂ ಇರುವುದನ್ನು ಹೆಚ್ಚು ಉಪ್ಪಿನಂಶವನ್ನು ತಿನ್ನುವವರಲ್ಲಿ ಕಾಣಬಹುದು. ಮೂತ್ರದಲ್ಲಿ ಆಕ್ಸ್‌ಲೇಟ್ ಸಾಮಾನ್ಯವಾಗಿ ಕರುಳಿನ ತೊಂದರೆ, ಪ್ಯಾನ್ಕ್ರಿಯಾಸ್‌ನ ತೊಂದರೆಗಳಲ್ಲಿ ಕಾಣಬಹುದು. ಸ್ಟ್ರುವೈಟ್‌ನ ಕಲ್ಲುಗಳು ಯೂರಿಯಾವನ್ನು ವಿಭಜಿಸುವ ಜೀವಿಯಿಂದ ಬರುತ್ತದೆ. ಈ ಕಲ್ಲುಗಳು ಮೂತ್ರ ನಾಳದಲ್ಲಿ ನಿಂತು ಬಿಡುತ್ತವೆ. ಯೂರಿಕ್ ಆಸಿಡ್ ಕಲ್ಲುಗಳು ಮೂತ್ರದಲ್ಲಿ ಯೂರಿಕ್ ಆಸಿಡ್‌ನ ಅಂಶವು ಹೆಚ್ಚಿದ್ದರೆ ಮೂತ್ರದ ಆಮ್ಲತೆ ಹೆಚ್ಚಿರುತ್ತದೆ. ಮೂತ್ರಕೋಶದ ಕಲ್ಲುಗಳ ಲಕ್ಷಣಗಳೆಂದರೆ ಬೆನ್ನು ನೋವು, ಜ್ವರ, ಮೂತ್ರದಲ್ಲಿ ರಕ್ತ, ಹೊಟ್ಟೆ ಉಬ್ಬರಿಸುವುದು, ವಾಕರಿಕೆ, ವಾಂತಿ.
ಮೂತ್ರಕೋಶದ ತೊಂದರೆ
ಮೂತ್ರಕೋಶದ ಕಲ್ಲುಗಳಿಗೆ ಅಶ್ರದ್ಧೆ ವಹಿಸಿದರೆ ನೋವಿನ ತೀವ್ರತೆ ಹೆಚ್ಚುತ್ತದೆ. ಬೆಳೆಯುತ್ತಿರುವ ಕಲ್ಲು ಮೂತ್ರಕೋಶದ ಜೀವಕೋಶಗಳನ್ನು ಹಾಳು ಮಾಡುತ್ತದೆ. ಕಲ್ಲಿನ ಹೊರಭಾಗ ಹೆಚ್ಚು-ಕಡಿಮೆಯಿದ್ದರೆ ಮೂತ್ರಕೋಶದ ಭಾಗಕ್ಕೆ ತೊಂದರೆಯುಂಟಾಗಿ ನೀರು ಸೇರುವ ಸಾಧ್ಯತೆಯಿದೆ. ಈ ಕಲ್ಲುಗಳು ಕಿಡ್ನಿಯನ್ನು ಹಾಳು ಮಾಡಬಹುದು. ಕೆಲವು ಬಾರಿ ಕಲ್ಲುಗಳು ಮೂತ್ರನಾಳದಲ್ಲಿ ಸೇರಿ ಮೂತ್ರ ಹೊರಹೋಗದ ಹಾಗೆ ತೊಂದರೆ ಉಂಟು ಮಾಡಬಹುದು.
ಮೂತ್ರಕೋಶದ ಕಲ್ಲುಗಳ ನಿವಾರಣೆಗೆ
* ಕ್ಯಾಲ್ಸಿಯಂ-ಆಕ್ಸುಲೇಟ್ ಕಲ್ಲುಗಳ ನಿವಾರಣೆಗೆ ನೀವು ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು.
* ಆಹಾರದಲ್ಲಿ ನಾರಿನಂಶ ಹಾಗೂ ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. * ಬಾರ್ಲಿ, ಕುಚ್ಚಲಕ್ಕಿ, ಎಳನೀರು, ಬಾಳೆಹಣ್ಣಿನ ಸೇವನೆ ಉಪಯುಕ್ತ.
* ಬಾರ್ಲಿ ನೀರನ್ನು 1 ರಿಂದ 2 ಗ್ಲಾಸ್‌ನಷ್ಟು ತೆಗೆದುಕೊಳ್ಳಬೇಕು.* ಬಾಳೆದಿಂಡಿನ ರಸವನ್ನು 250 ರಿಂದ 400 ಮಿ.ಲೀ. ನಷ್ಟು ಸೇವಿಸಬೇಕು.
* ನೀರನ್ನು ಒತ್ತಡದಿಂದ (ಡುಶ್) ಕೆಳಭಾಗದ ಬೆನ್ನು ಮತ್ತು ಹೊಟ್ಟೆಯ ಮೇಲ್ಭಾಗಕ್ಕೆ ಬಿಡಬೇಕು.
* ಟೀ, ಕೋಕೊ, ಪಾಲಕ್, ಕರಿಎಲೆ, ಪಾರ್ಸ್ಲಿ, ಕೋಸು, ಚಾಕೋಲೇಟ್, ಆಲೂಗಡ್ಡೆ, ಹೆಚ್ಚು ಕೊಬ್ಬು ಮತ್ತು ಪ್ರೋಟಿನ್ ಇರುವ ಆಹಾರ ಬೇಡ.
* ಕ್ಯಾಲ್ಸಿಯಂ-ಫಾಸ್ಫೇಟ್ ಕಲ್ಲುಗಳಿದ್ದಾಗ ದಿನಕ್ಕೆ 2 ಲೋಟ ಬಾಳೆದಿಂಡಿನ ರಸ ಕುಡಿಯಬೇಕು. * ಎಳನೀರು 1 ರಿಂದ 2 ಲೋಟ ಕುಡಿಯಬೇಕು.
* ಸೋಡಿಯಂ, ಕ್ಯಾಲ್ಸಿಯಂ, ಫಾಸ್ಪರಸ್ ಅನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು. * ಉಗುರು ಬೆಚ್ಚನೆಯ ಕಟಿಸ್ನಾನ ಮಾಡಬೇಕು.
* ಸ್ಟ್ರುವೈಟ್ ಕಲ್ಲುಗಳಿದ್ದಾಗ ಹೆಚ್ಚು ನೀರು ಕುಡಿಯಬೇಕು. * ಕಲ್ಲಂಗಡಿ, ಪಪ್ಪಾಯ, ದ್ರಾಕ್ಷಿ, ಪೈನಾಪಲ್, ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ಬಳಸಬೇಕು.
* ತುಳಸಿ ಎಲೆಯ ರಸ + ಜೇನುತುಪ್ಪ ಸೇರಿಸಿ ಸೇವಿಸಬೇಕು. * ದಿನಕ್ಕೆ ಎರಡು ಬಾರಿ ಬೆಚ್ಚನೆಯ ಕಟಿಸ್ನಾನ ಮಾಡಿ.
* ಯೂರಿಕ್ ಆಸಿಡ್ ಮತ್ತು ಸಿಸ್ಟೈನ್ ಕಲ್ಲುಗಳಿದ್ದರೆ ಬಾರ್ಲಿ ನೀರು, ಬೂದುಗುಂಬಳಕಾಯಿ ರಸ ಅಥವಾ ಎಳನೀರನ್ನು ದಿನಕ್ಕೆ 2 ರಿಂದ 3 ಲೋಟ ತೆಗೆದುಕೊಳ್ಳಬೇಕು.
* ಬೆಚ್ಚನೆಯ ನೀರಿನ ಬ್ಯಾಗನ್ನು ಕೆಳಬೆನ್ನಿನ ಭಾಗಕ್ಕೆ ಮತ್ತು ಮಂಜುಗಡ್ಡೆಯ ಬ್ಯಾಗನ್ನು ಹೊಟ್ಟೆಯ ಭಾಗಕ್ಕಿರಿಸಿ ತೆಳುವಾದ ಪಟ್ಟಿಯಿಂದ ಸುತ್ತಿ ನಂತರ ಉಣ್ಣೆಯ ಬಟ್ಟೆಯನ್ನು ಸುತ್ತಬೇಕು.
-ಡಾ. ಗಂಗಾಧರ ವರ್ಮಾ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments