Skip to main content

ಫಲಜ್ಯೋತಿಷ್ಯದ ಸೂತ್ರಗಳು

ಜನ್ಮ ಕುಂಡಲಿಯಲ್ಲಿ ಗ್ರಹಗಳ ಸ್ಥಿತಿಯನ್ನು ಅಭ್ಯಸಮಾಡಿಕೊಂಡು ಈ ಕೆಳಗಿನ ಸೂತ್ರಗಳನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಬಹುದು. ೧.ಮಕರಸ್ಥ ಚಂದ್ರನು ಕುಂಡಲಿಯ ಯಾವ ಭಾವದಲ್ಲಿದ್ದರೂ ಜಾತಕನು ಜೀವನದಲ್ಲಿ ಒಂದು ಭಯಂಕರ ವೈಪಲ್ಯವನ್ನು ಅನುಭವಿಸಬೇಕಾಗುತ್ತದೆ.ಮತ್ತು ಅದರಿಂದ ಜನರಿಗೆ ತನ್ನ ಮುಖತೋರಿಸಲು ಸಂಕೋಚವಾಗುತ್ತದೆ. ೨.ಶನಿ,ರಾಹು,ಅಥವ ಕುಜ ರಾಹು ಗಳಂತಹ ದುಷ್ಟಗ್ರಹಗಳು ಚಂದ್ರನೊಂದಿಗೆ ಒಂದೇ ಭಾವದಲ್ಲಿದ್ದರೆ ಜಾತಕನು ಹುಚ್ಚನಾಗುವ ಮಟ್ಟಿಗೆ ಮಾನಸಿಕ ವೇದನೆಯನ್ನು ಅನುಭವಿಸುತ್ತಾನೆ. ೩.ಚಂದ್ರನು ಶನಿ,ರಾಹು,ಕೇತು ಕುಜರಲ್ಲಿ ಯಾವುದಾದರೂ ಎರಡುಗ್ರಹಗಳೊಂದಿಗೆ ಯಾವುದೇ ಭಾವದಲ್ಲಿರಬಹುದು,ಎರಡು ಅಥವ ಹೆಚ್ಚು ದುಷ್ಟಗ್ರಹಗಳು ಅನ್ಯ ಬಾವಗಳಲ್ಲಿದ್ದು ಚಂದ್ರನ ಮೇಲೆ ದೃಷ್ಟಿ ಬೀರುತಿದ್ದರೆ ಮಿಶ್ರ ಫಲಗಳಿರುತ್ತವೆ. ಎರಡು ದುಷ್ಟಗ್ರಹಗಳು ಚಂದ್ರನ ಜೊತೆಯಲ್ಲಿರದೆ ಚಂದ್ರನ ಹಿಂದೆ-ಮುಂದೆ ಇದ್ದರೆ ಮತ್ತು ಚಂದ್ರನ ಮೇಲೆ ಕ್ರೂರದೃಷ್ಟಿ ಬೀರುತ್ತಿದ್ದರೆ ಜಾತಕನು ಮಾನಸಿಕ ಯಾತನೆಯ ಅನುಭವವನ್ನು ಪಡೆಯುವುದು ಖಚಿತ. ೩.ಯಾವುದೇ ಜನ್ಮ ಕುಂಡಾಲಿಯಲ್ಲಿ ಕುಜ ಶುಕ್ರ ಒಂದೇ ಭಾವದಲ್ಲಿದ್ದರೆ ಜಾತಕನಿಗೆ ವಿವಾಹೇತರ ಸಂಭಂದವಿರುವ ಸಂಭವ ಇರುತ್ತದೆ.ಜಾತಕನು ಸಂಯಮಿ,ಸದಾಚಾರಿ ಮತ್ತು ವಿಹೀನರಾಗಿದ್ದರೂ ಸಂಭವನೀಯವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ೪,ಶನಿಯು ತುಲಾ ಲಗ್ನದಲ್ಲಿರುವಾಗ(ಉಚ್ಚನಾಗಿರುವಾಗ)ಜಾತಕನು ಪ್ರಥಮ ದರ್ಜೆಯ ವಿದ್ಯಾರ್ಥಿಯಾಗಿರುತ್ತಾನೆ ಮತ್ತು ವಿದ್ವಾಂಸನಾಗುತ್ತಾನೆ. ೫.ಗುರುವು ಕರ್ಕ ಲಗ್ನದಲ್ಲಿದ್ದರೆ ಜಾತಕನು ವಿಶ್ವಾಸಯೋಗ್ಯ,ಉದಾರ ಹೃದಯ,ಸರಳಜೀವಿ,ಸತ್ಯಪ್ರಿಯ,ಚಾರಿತ್ರ್ಯವಂತ,ವಿದ್ವಾಂಸನಾಗಿರುತ್ತಾನೆ,ಗುರುವು ಪಂಚಮ ಅಥವ ನವಮದಲ್ಲಿದ್ದರೂ ಇದೇ ಫಲಗಳು ಉಂಟಾಗುತ್ತವೆ. ೬.ಲಗ್ನದಲ್ಲಿ ಯಾವುಡೇ ರಾಶಿ ಸ್ಥಿತ ಮಂಗಳನಿದ್ದರೆ ವ್ಯಕ್ತಿಯು ಶೀಘ್ರಕೋಪಿಯಾಗುತ್ತಾನೆ. ೭.ಕರ್ಕ ಲಗ್ನದಲ್ಲಿ ಅಥವ ನವಮ ಭಾವದಲ್ಲಿ ಕರ್ಕರಾಶಿಯಲ್ಲಿ ಗುರು ಚಂದ್ರರಿದ್ದರೆ ವ್ಯಕ್ತಿಯು ಮಹಾನ್ ನೇತಾರ ಮತ್ತು ಸತ್ಯವಾದಿ ಯಾಗಿದ್ದು ಕೀರ್ತಿವಂತನಾಗುತ್ತಾನೆ. ೮.ಕುಜನು ಯಾವುಡೆ ರಾಶಿಯಲ್ಲಿದ್ದು ತೃತೀಯ ಭಾವದಲ್ಲಿದ್ದರೆ ಜಾತಕನು ಪರಾಕ್ರಮಿ ಮತ್ತು ಸಾಹಸಿಯಾಗಿರುತ್ತಾನೆ,ಮತ್ತು ಯುದ್ದ ಸಂಘರ್ಷಗಳಲ್ಲಿ ಬಾಗವಹಿಸಲು ಹಿಂಜರಿಯುವುದಿಲ್ಲ. ೯.ಯಾವುದೇ ಭಾವದಲ್ಲಿ ಮಕರ ರಾಶಿಯಲ್ಲಿ ೪ ಅಥವ ಅದಿಕಗ್ರಹಗಳಿದ್ದರೆ ಜಾತಕನು ಕಳಂಕ ಅಥವ ಪರಾಜಯದ ಬಾವನೆಯಿಂದ ಗ್ರಸಿತನಾಗಿರುತ್ತಾನೆ ಮತ್ತು ಸಮಾಜ ಅಥವ ಉನ್ನತ ವರ್ಗದ ಎದುರಿಗೆ ಪ್ರಕಟವಾಗಲು ಅಸಮರ್ಥನಾಗಿರುತ್ತಾನೆ.ಮಹಾಯೋಧ, ರಾಣಾ ಪ್ರತಾಪನ ಕುಂಡಲಿಯಲ್ಲಿ ತೃತೀಯ ಭಾವದಲ್ಲಿ ಮಕರ ರಾಶಿಯಲ್ಲಿ ೫ಗ್ರಹಗಳಿದ್ದ ಕಾರಣ ಅವನಿಗೆ ದೊರೆಯ ಬೇಕಾದ ಸಪಲತೆ,ಜಯ ಪ್ರಾಪ್ತವಾಗಲಿಲ್ಲ,ಆದರೆ ತೃತೀಯ ಭಾವದಲ್ಲಿ ೫ಗ್ರಹಗಳಿದ್ದ ಕಾರಣ ಅದ್ವೀತಿಯ ಪರಾಕ್ರಮಿಯಾದರು. ೧೦.ಯಾವುದೇ ಭಾವದಲ್ಲಿ ರಾಹು ಚಂದ್ರರ ಯತಿಯು ಜಾತಕನಿಗೆ ಕಾರಾಗೃಹ ವಾಸ,ಗಂಭೀರ ಆರೋಪಗಳಿಂದ ಉನ್ಪನ್ನ ಮೊಕದ್ದಮ್ಮೆಗಳು ಪರಿವಾರದಲ್ಲಿ ಪೋಷಕನ ಆಕಸ್ಮಿಕ ಮತ್ತು ದುಖಃದಾಯಕ ಮೃತ್ಯುವಿನ ಕಾರಣ ಅನಾಥಾವಸ್ಥೆ,ಶಾರೀರಿಕ ಅಪಘಾತಾದಿ ಘೋರ ಆಪತ್ತುಗಳನ್ನು ಉಂಟುಮಾಡುತ್ತದೆ. ೧೧.ಯಾವುದೇ ಭಾವದಲ್ಲಿ ಕರ್ಕ ರಾಶಿಯಲ್ಲಿ ಗುರು-ಚಂದ್ರ ಅಥವ ಶುಕ್ರ-ಚಂದ್ರರಿದ್ದರೆ ಜಾತಕನು ಅತ್ಯಂತ ಸುಂದರ ಮತ್ತು ಆರೋಗ್ಯವಂತನಾಗಿರುತ್ತಾನೆ. ಈ ಯತಿಯು ಲಗ್ನದಲ್ಲಿದ್ದಎ ಜಾತಕನ ತಾಯಿ,ದಶಮದಲ್ಲಿದ್ದರೆ ತಂದೆ,ಮತ್ತು ಸಪ್ತಮದಲ್ಲಿದ್ದರೆ ಪತ್ನಿ ಅಥವ ಪತಿ ಸುಂದರ ವ್ಯಕ್ತಿತ್ವ ಉಳ್ಳವರಾಗಿರುತಾರೆ. ೧೨.ಚತುರ್ಥದಲ್ಲಿ ಚಂದ್ರ-ಶನಿ ಯತಿಯಿದ್ದರೆ ಜಾತಕನಿಗೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯಲ್ಲಿ ಘೋರ ಆಪತ್ತುಗಳು ಉಂಟಾಗುವುದು.ನಂತರದ ಜೀವನದಲ್ಲಿಯು ಆಕಸ್ಮಿಕ ಧನಹಾನಿ ಅಥವ ಉದ್ಯೋಗಹಾನಿ ಸಂಬವಿಸಬಹುದು.ಮಿಥುನದಲ್ಲಿ ಚಂದ್ರ ಕರ್ಕದಲ್ಲಿ ಶನಿ ಇರುವಾಗಲು ಇದೇ ಪರಿಣಾಮಗಳುಂಟಾಗುತ್ತವೆ. -(ಶ್ರೀಪಾದ ಆರ್ ಕುಲಕರ್ಣಿ,ಬಾಗಲಕೋಟೆ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...