Skip to main content

ಜನನಾಂಗ ನಿಮಿರುವಿಕೆ ಸಮಸ್ಯೆಗೆ 15 ಪ್ರಾಕೃತಿಕ ಪರಿಹಾರಗಳು

ಜನನಾಂಗ ನಿಮಿರುವಿಕೆ ಸಮಸ್ಯೆಗೆ 15 ಪ್ರಾಕೃತಿಕ ಪರಿಹಾರಗಳು ಲಿಂಗ ನಿಮಿರುವಿಕೆ ಸಮಸ್ಯೆಯು ಸಾಮಾನ್ಯವಾಗಿ ವಯಸ್ಸಾದ ಗಂಡಸರಲ್ಲಿ ಕಂಡು ಬರುವ ದೋಷವಾಗಿದೆ. ಇದಕ್ಕೆ ವಯಸ್ಸಾದ ಗಂಡಸರಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿಯುವ ಟೆಸ್ಟೊಸ್ಟಿರೋನ್ ಮಟ್ಟದಿಂದಾಗಿ ಈ ಸಮಸ್ಯೆಗೆ ಮುಖ್ಯ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಇದು 40 ವರ್ಷ ದಾಟಿದ ಗಂಡಸರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ,45 ವರ್ಷವಾಗಿರುವವರಲ್ಲಿ ಲಿಂಗ ನಿಮಿರುವಿಕೆಯ ದೋಷವು ಶೇ. 5 ರಷ್ಟು ಕಂಡು ಬಂದರೆ, 60 ವರ್ಷ ವಯಸ್ಸಾದವರಲ್ಲಿ ಇದರ ಪ್ರಮಾಣವು ಶೇ. 20-25 ಪ್ರಮಾಣದಷ್ಟು ಕಂಡು ಬರುತ್ತದೆಯಂತೆ. ಕೆಲವೊಂದು ವೈಧ್ಯಕೀಯ ಚಿಕಿತ್ಸೆಗಳು ಈ ಲಿಂಗ ನಿಮಿರುವಿಕೆಯ ನ್ಯೂನತೆಗಳನ್ನು ಪರಿಹರಿಸಿದರು, ಪ್ರಾಕೃತಿಕ ಪರಿಹಾರೋಪಾಯಗಳೇ ಈ ಸಮಸ್ಯೆಯಿಂದ ನಿಮ್ಮನ್ನು ಸದಾ ಕಾಲಕ್ಕೆ ಕಾಪಾಡಬಲ್ಲವು. ಈ ಅಂಕಣದಲ್ಲಿ ನಾವು ಲಿಂಗ ನಿಮಿರುವಿಕೆ ದೋಷವನ್ನು ಪರಿಹರಿಸುವ ನೈಸರ್ಗಿಕ ಪರಿಹಾರೋಪಾಯಗಳ ಕುರಿತಾಗಿ ಗಮನ ಹರಿಸೋಣ. ನಾವು ಒಂದೊಮ್ಮೆ ಪ್ರಾಕೃತಿಕ ಪರಿಹಾರೋಪಾಯಗಳ ಕುರಿತಾಗಿ ಇಲ್ಲಿ ಹೇಳುತ್ತಿದ್ದರೂ, ಈ ಅಂಕಣವು ಪುರುಷರಲ್ಲಿ ಕಂಡು ಬರುವ ನಿರ್ವೀರ್ಯದ ಬಗೆಗೆ ಎಂದರೆ ಪುರುಷ ಬಂಜೆತನದ ಬಗೆಗು ಗಮನಹರಿಸುತ್ತದೆ. ಬನ್ನಿ ಹಾಗಾದರೆ ಲಿಂಗ ನಿಮಿರುವಿಕೆ ಮತ್ತು ನಿರ್ವೀರ್ಯದಿಂದ ಪಾರಾಗಲು ಇರುವ ಪ್ರಾಕೃತಿಕ ಪರಿಹಾರೋಪಾಯಗಳತ್ತ ಒಮ್ಮೆ ಗಮನ ಹರಿಸೋಣ. ಇದಕ್ಕಾಗಿ ನಮಗೆ 15 ಮಾರ್ಗೋಪಾಯಗಳು ದೊರೆಯುತ್ತವೆ. *ಬೆಳ್ಳುಳ್ಳಿ ಲಿಂಗ ನಿಮಿರುವಿಕೆಯ ಸಮಸ್ಯೆಗೆ ಪ್ರಮುಖ ಕಾರಣ ಜನನಾಂಗಕ್ಕೆ ರಕ್ತದ ಪೂರೈಕೆಯ ಕೊರತೆ ಇರುವುದು. ಬೆಳ್ಳುಳ್ಳಿಯು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ, ಆದ್ದರಿಂದ ಜನನಾಂಗವು ಉದ್ರೇಕಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಖನಿಜಗಳು ಇರುತ್ತವೆ. ಇವು ಪುರುಷರಲ್ಲಿ ವೀರ್ಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. *ಗೋಮಾಂಸ ಯಥೇಚ್ಛವಾದ ಸತುವನ್ನು ಹೊಂದಿರುವ ಗೋಮಾಂಸವು ಲಿಂಗ ನಿಮಿರುವಿಕೆಯ ನ್ಯೂನತೆಯನ್ನು ಪರಿಹರಿಸುವ ಪ್ರಮುಖ ಪ್ರಾಕೃತಿಕ ಪರಿಹಾರೋಪಾಯವಾಗಿದೆ. ಇದು ವೀರ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಇದು ಲಿಂಗ ನಿಮಿರುವಿಕೆಯಲ್ಲಿನ ಅತ್ಯುತ್ತಮ ಪರಿಹಾರೋಪಾಯವಾಗಿ ಗುರುತಿಸಲ್ಪಟ್ಟಿದೆ. *ದಾಳಿಂಬೆ ದಾಳಿಂಬೆಯು ಹಲವಾರು ಕಾರಣಗಳಿಂದ ಸೂಪರ್ ಫುಡ್ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಇದರಲ್ಲಿ ಸಮೃದ್ಧವಾದ ಖನಿಜಾಂಶಗಳು ಮತ್ತು ವಿಟಮಿನ್‍ಗಳು ಇದ್ದು, ಪ್ರಾಕೃತಿಕವಾಗಿ ನಿರ್ವೀರ್ಯತೆಯನ್ನು ಹೋಗಲಾಡಿಸುತ್ತದೆ. ದಾಳಿಂಬೆಯಲ್ಲಿರುವ ಯಥೇಚ್ಛ ಆಂಟಿ ಆಕ್ಸಿಡೆಂಟ್‍ಗಳು ಪುರುಷರಲ್ಲಿ ವೀರ್ಯಗಳು ವೃದ್ಧಿಯಾಗುವಂತೆ ಮಾಡುತ್ತವೆ. *ಡಾರ್ಕ್ ಚಾಕೊಲೇಟ್ ಡಾರ್ಕ್ ಚಾಕೊಲೇಟ್ ಲಿಂಗ ನಿಮಿರುವಿಕೆಯ ಸಮಸ್ಯೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಡಾರ್ಕ್ ಚಾಕೊಲೇಟ್‍ನಲ್ಲಿ ಫ್ಲಾವೊನಯ್ಡ್‌ಗಳು ಇರುತ್ತವೆ. ಇವು ರಕ್ತ ಪರಿಚಲನೆಯನ್ನು ಸುಗಮಗೊಳಿಸಲು ನೆರವಾಗುತ್ತವೆ. ಇದರ ಜೊತೆಗೆ ಇದು ಕೊಲೆಸ್ಟ್ರಾಲನ್ನು ಸಹ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಲಿಂಗ ನಿಮಿರುವಿಕೆಯ ನ್ಯೂನತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುತ್ತದೆ. *ಬಾಳೆಹಣ್ಣುಗಳು ಬಾಳೆಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಲಿಂಗ ನಿಮಿರುವಿಕೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಬಾಳೆಹಣ್ಣುಗಳಲ್ಲಿ ಬ್ರೊಮೆಲೈನ್ ಎಂಬ ಎನ್‍ಜೈಮ್ ಇರುತ್ತದೆ. ಇದು ನಮ್ಮ ದೇಹದಲ್ಲಿರುವ ಸೆಕ್ಸ್ ಹಾರ್ಮೊನುಗಳನ್ನು ಸಕ್ರಿಯಗೊಳಿಸುತ್ತದೆ ಎಂಬುದನ್ನು ಖಚಿತಪಡಿಸಿದೆ. ಇದರ ಜೊತೆಗೆ ಬಾಳೆಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಬಿ1 ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಗಂಡಸರಲ್ಲಿ ಸಾಮರ್ಥ್ಯವನ್ನು ತುಂಬುವುದರ ಜೊತೆಗೆ, ಲೈಂಗಿಕಾಸಕ್ತಿಯನ್ನು ಸಹ ಹೆಚ್ಚಿಸುತ್ತದೆ. *ಒಯಿಸ್ಟರ್‌ಗಳು ಇದು ವೀರ್ಯಗಳ ಉತ್ಪಾದನೆಯನ್ನು ಗಣನಿಯವಾಗಿ ಹೆಚ್ಚಿಸುವ ಅದ್ಭುತ ಆಹಾರವಾಗಿದೆ. ಇದರ ಜೊತೆಗೆ ಇದು ಹಾಳಾಗಿರುವ ವೀರ್ಯವನ್ನು ಸಹ ಸರಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ. *ವಾಲ್‍ನಟ್‍ಗಳು ವಾಲ್‍ನಟ್‍ಗಳಲ್ಲಿ ಅರ್ಗನೈನ್ ಎಂಬ ಘಟಕಾಂಶವು ಇರುತ್ತದೆ. ಇದು ಸ್ವಾಭಾವಿಕವಾಗಿ ವೀರ್ಯಗಳ ವೃದ್ಧಿಗೆ ಸಹಕರಿಸುವ ಒಣ ಹಣ್ಣಾಗಿದೆ. ಅರ್ಗನೈನ್ ವೃಷಣಗಳಲ್ಲಿ ವೀರ್ಯವನ್ನು ಉತ್ಪಾದಿಸುವ ಪ್ರಕ್ರಿಯೆಗೆ ಸಹಕರಿಸುತ್ತದೆ. ವಾಲ್‍ನಟ್‍ಗಳು ಬಲವಾದ ನಿಮಿರುವಿಕೆಯೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಇದರ ಜೊತೆಗೆ ವಾಲ್‍ನಟ್‍ಗಳಲ್ಲಿರುವ ಒಮೆಗಾ-3 ಎಂಬ ಕೊಬ್ಬಿನ ಆಮ್ಲವು ನಮ್ಮ ದೇಹದಲ್ಲಿರುವ ರಕ್ತವನ್ನು ಪುರುಷರ ಜನನಾಂಗಗಳತ್ತ ಸಾಗಲು ನೆರವು ನೀಡುತ್ತದೆ. *ಬೆಣ್ಣೆ ಹಣ್ಣು ನಾವೆಲ್ಲರು ಇದಕ್ಕಾಗಿ ಕಾಯುತ್ತಿದ್ದೇವು, ಅಲ್ಲವೆ? ಬೆಣ್ಣೆ ಹಣ್ಣು ಅದ್ಭುತವಾದ ಆರೋಗ್ಯಕಾರಿ ಪರಿಹಾರಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಒಣ ಹಣ್ಣಾಗಿದೆ. ಇವುಗಳಲ್ಲಿ ವೀರ್ಯದ ಉತ್ಪಾದನೆಯನ್ನು ಹೆಚ್ಚಿಸುವ ಫೊಲಿಕ್ ಆಸಿಡ್, ವಿಟಮಿನ್‍ಗಳು ಮತ್ತು ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಲಿಂಗ ನಿಮಿರುವಿಕೆಯನ್ನು ಪರಿಹರಿಸುವಲ್ಲಿ ಇವುಗಳು ಅತ್ಯುತ್ತಮವಾದ ಪ್ರಾಕೃತಿಕ ಪರಿಹಾರೋಪಾಯವಾಗಿ ಗುರುತಿಸಲ್ಪಟ್ಟಿದೆ. *ಶತಾವರಿ (Asparagus) ಶತಾವರಿ ಎಂಬುದು ಒಂದು ಸಮೃದ್ಧವಾದ ಆಂಟಿ ಆಕ್ಸಿಡೆಂಟ್‍ ಆಗಿದ್ದು, ಹಲವಾರು ಆರೋಗ್ಯಕಾರಿ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಇದು ಗಂಡಸರಲ್ಲಿ ವೀರ್ಯವನ್ನು ಉತ್ಪಾದಿಸುವ ಅತ್ಯಂತ ಪರಿಣಾಮಕಾರಿ ಆಹಾರವಾಗಿದೆ. *ವ್ಯಾಯಾಮ ಈಗ ನಾವು ನಿರ್ವೀರ್ಯತೆಗೆ ಕಾರಣವಾಗಿರುವ ಸಮಸ್ಯೆಗಳ ಮೂಲವನ್ನು ಗಮನಿಸೋಣ. ಜೊತೆಗೆ ಇನ್ನಿತರ ಪ್ರಾಕೃತಿಕ ಪರಿಹಾರಗಳ ಕುರಿತಾಗಿ ಸಹ ಆಲೋಚಿಸೋಣ. ಈ ವಿಚಾರದಲ್ಲಿ ವ್ಯಾಯಾಮವು ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಒಂದು ವೇಳೆ ನಿಮ್ಮ ದೇಹದಲ್ಲಿ ಅಧಿಕ ಪ್ರಮಾಣದ ಕೊಬ್ಬು ಇಲ್ಲವಾದಲ್ಲಿ, ನಿಮ್ಮ ವೀರ್ಯ ಉತ್ಪಾದನಾ ಸಾಮರ್ಥ್ಯವು ಸಹಜವಾಗಿ ಹೆಚ್ಚಿಗೆ ಇರುತ್ತದೆ. ಅದಕ್ಕಾಗಿ ನೀವು ತೆಳ್ಳಗೆ ಮತ್ತು ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳಿ. ಇದಕ್ಕೂ ಮೇಲಾಗಿ, ವ್ಯಾಯಾಮವು ನಿಮ್ಮ ರೋಗ ನಿರೋಧಕ ಯೋಗ ಯೋಗವು ಲಿಂಗ ನಿಮಿರುವಿಕೆಯನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿರುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಜನನಾಂಗಗಳನ್ನು ಉದ್ದೀಪನಗೊಳಿಸುತ್ತದೆ. *ಪಾಲಾಕ್ ಸೊಪ್ಪು ಮತ್ತು ಇನ್ನಿತರ ಹಸಿರು ತರಕಾರಿಗಳು ಪಾಲಾಕ್ ಸೊಪ್ಪು ಮತ್ತು ಇನ್ನಿತರ ಹಸಿರು ತರಕಾರಿಗಳಲ್ಲಿ ಸತು, ಆಂಟಿ ಆಕ್ಸಿಡೆಂಟ್‍ಗಳು ಯಥೇಚ್ಛವಾಗಿರುತ್ತವೆ. ಇವುಗಳಲ್ಲಿರುವ ಪೋಷಕಾಂಶಗಳು ಲಿಂಗ ನಿಮಿರುವಿಕೆಯ ಲೋಪ ದೋಷಗಳನ್ನು ಸರಿಪಡಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಬೀನ್ಸ್ ಹುರುಳಿಕಾಳುಗಳು, ಅದರಲ್ಲೂ ಹಣ್ಣು ಹುರುಳಿ ಕಾಳುಗಳಲ್ಲಿ ಸತುವಿನ ಪ್ರಮಾಣ ಅಧಿಕವಾಗಿರುತ್ತದೆ. ಇವುಗಳು ಲಿಂಗ ನಿಮಿರುವಿಕೆ ಮತ್ತು ನಿರ್ವೀರ್ಯತೆಯನ್ನು ಪ್ರಾಕೃತಿಕವಾಗಿ ಪರಿಹರಿಸಲು ನೆರವಾಗುತ್ತವೆ. *ಅಣಬೆಗಳು ಲಿಂಗ ನಿಮಿರುವಿಕೆ ಸಮಸ್ಯೆಯನ್ನು ಪರಿಹರಿಸುವ ಮತ್ತೊಂದು ಅದ್ಭುತ ಆಹಾರ ಪದಾರ್ಥವೆಂದರೆ, ಅದು ಅಣಬೆ. ಇದರಲ್ಲಿಯೂ ಸಹ ಸತು ಮತ್ತು ಇನ್ನಿತರ ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. *ಬಾದಾಮಿಗಳು ವಾಲ್‍ನಟ್‍ಗಳಂತೆಯೆ, ಬಾದಾಮಿಯು ಸಹ ಲಿಂಗ ನಿಮಿರುವಿಕೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಈ ಎಲ್ಲಾ ವಿಚಾರಗಳ ಜೊತೆಗೆ ಇವುಗಳಿಂದ ನಿಮ್ಮ ಲಿಂಗ ನಿಮಿರುವಿಕೆಯ ದೋಷವು ದೂರವಾಗುತ್ತದೆ ಎಂಬ ಧನಾತ್ಮಕ ಮನೋಭಾವವನ್ನು ತಾಳಿ. ಧನಾತ್ಮಕ ಮನೋಭಾವ ಮತ್ತು ಆತ್ಮ ವಿಶ್ವಾಸಗಳು ಲಿಂಗ ನಿಮಿರಲು ಅತ್ಯಾವಶ್ಯಕ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...