ಜ್ಯೋತಿಷ್ಯ, ಜಾತಕ, ಕುಂಡಲಿಗಳಿಂದ ಭವಿಷ್ಯವಷ್ಟೇ ತಿಳಿಯುವುದಿಲ್ಲ. ಹುಟ್ಟಿನ ಸಮಯವನ್ನು ಆಧರಿಸಿ ಜಾತಕನ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಜನ್ಮದಿನಕ್ಕೆ ಅನುಗುಣವಾದ ರಾಶಿ ಯೋಗವನ್ನು ಅರ್ಥ ಮಾಡಿಕೊಳ್ಳುವ ಮೂಲಕ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಆರೋಗ್ಯದಲ್ಲಿ ಸಮತೋಲನತೆ ಕಾಪಾಡಿಕೊಳ್ಳಬಹುದು. ನಿಮ್ಮ ರಾಶಿಗೆ ಉಪಯುಕ್ತವಾದ ಯೋಗ, ವ್ಯಾಯಾಮ ಯಾವುದು ಎಂದು ತಿಳಿದುಕೊಳ್ಳುವ ಬಯಕೆ ನಿಮಗಿದ್ದರೆ ಅವುಗಳ ವಿವರ ಇಲ್ಲಿದೆ.
ಮೇಷ (ಮಾರ್ಚ್ 21-ಏಪ್ರಿಲ್ 20):
ಹೇರಳ ಶಕ್ತಿಯನ್ನು ಹೊಂದಿರುತ್ತಾರೆ. ಇವರು ದೈನಂದಿನ ಚಟುವಟಿಕೆಯನ್ನು ದ್ವೇಷಿಸುತ್ತಾರೆ ಮತ್ತು ಒಂದೇ ಕಸುಬಿನಲ್ಲಿ ಅಂಟಿಕೊಂಡಿರುವುದು ಬೋರ್ ಎನಿಸುತ್ತದೆ. ಹೀಗಾಗಿ ಸ್ಪರ್ಧಾತ್ಮಕ ಆಟವಾದ ಟೆನ್ನಿಸ್, ಫುಟ್ಬಾಲ್ ಮತ್ತು ವೇಟ್ ಲಿಫ್ಟಿಂಗ್ ತರಬೇತಿ ನೀಡುವುದು ಮೊದಲಾದವುಗಳನ್ನು ಮಾಡಬಹುದು.
ಆದರೆ ಇವರು ಯಾವುದೇ ರೀತಿಯ ವ್ಯಾಯಾಮಗಳಿಂದ ದೂರವಿದ್ದಾರಾ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾಕೆಂದರೆ ಇವು ಅವರಲ್ಲಿ ಕೋಪ ಹೆಚ್ಚಿಸಿ ಅಧಿಕ ರಕ್ತದೊತ್ತಡ ಮತ್ತು ತಲೆನೋವು ತರುತ್ತದೆ.
ವೃಷಭ (ಏಪ್ರಿಲ್ 21-ಮೇ 21)
ಈ ವ್ಯಕ್ತಿತ್ವದ ವಿಶೇಷ ಗುಣವೆಂದರೆ ನಿಧಾನವಾದ ಮೆಟಬಾಲಿಸಂ. ಆದ್ದರಿಂದ ದಿನಚರಿಯಲ್ಲಿ ಕಠಿಣವಾದ ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ ಡ್ಯಾನ್ಸ್, ರನ್ನಿಂಗ್ ಮತ್ತು ಜಾಗಿಂಗ್.
ಈ ರಾಶಿಯವರಿಗೆ ಕುತ್ತಿಗೆ ಮತ್ತು ಗಂಟಲು ಸಮಸ್ಯೆ ಇರುವುದರಿಂದ ಪ್ರತಿನಿತ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಸಾಜ್ ಮಾಡಿದರೆ ಕೂಡ ಸಹಕಾರಿಯಾಗುತ್ತದೆ.
ಮಿಥುನ (ಮೇ 22-ಜೂನ್ 21)
ಇವರು ಕೈ, ತೋಳು ಮತ್ತು ಶ್ವಾಸಕೋಶದ ಸಮಸ್ಯೆಗೆ ಒಳಗಾಗಿರುತ್ತಾರೆ. ಇವರಿಗೆ ತಂಡದೊಂದಿಗೆ ವ್ಯಾಯಾಮ ಮಾಡುವುದು, ಕ್ರೀಡೆ ಮತ್ತು ಜಿಮ್ನಾಸ್ಟಿಕ್ ಅತ್ಯುತ್ತಮ ಆಯ್ಕೆ. ವ್ಯಾಯಾಮ ಮಾಡುವ ಸ್ನೇಹಿತರನ್ನು ಹುಡುಕಬೇಕು. ಅವರೊಂದಿಗೆ ವ್ಯಾಯಾಮ ಮಾಡಿದರೆ ಆಹ್ಲಾದ ನೀಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ ಮತ್ತು ಧ್ಯಾನ ಮಾಡಬಹುದು
ದಿನನಿತ್ಯದ ಕೆಲಸ ಇವರಿಗೆ ಬೇಸರವನ್ನುಂಟು ಮಾಡಬಹುದು. ಹೀಗಾಗಿ ಒಂದಕ್ಕಿಂತ ಹೆಚ್ಚಿನ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಬೋರ್ ಆಗುವುದಿಲ್ಲ.
ಕರ್ಕಾಟಕ (ಜೂನ್22-ಜುಲೈ 22)
ಇವರ ದೇಹದ ಮಧ್ಯ ಭಾಗದಲ್ಲಿ ತೂಕ ಹೆಚ್ಚಾಗುವ ಸಂಭವ ಅಧಿಕ. ಹೀಗಾಗಿ ವ್ಯಾಯಾಮ ಮಾಡಿದರೆ ತೂಕ ಇಳಿಸಬಹುದು. ಇವರು ಜಲ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು.
ಇವರ ಸಮಸ್ಯೆಯು ಹೊಟ್ಟೆಯ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಆದರೆ ನಿತ್ಯ ವ್ಯಾಯಾಮ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಧ್ಯಾನ ಮಾಡಬಹುದು.
ಸಿಂಹ (ಜುಲೈ 23-ಆಗಸ್ಟ್ 22)
ಬಹಳಷ್ಟು ಶಕ್ತಿಶಾಲಿ, ಅಧಿಕ ತೀವ್ರವಾದ ಜೀವನ ಕ್ರಮ ಇವರಾದಾಗಿರುತ್ತದೆ. ಒಳ್ಳೆಯ ತರಬೇತಿಯು ಇವರಿಗೆ ಮಾದರಿಯಾಗಿದೆ. ರಕ್ತ ಸಂಚಾರವನ್ನು ಉತ್ತಮಪಡಿಸುವುದಕ್ಕಾಗಿ ಹೃದಯ ಸಂಬಂಧಿ ವ್ಯಾಯಾಮ ಇವರಿಗೆ ಒಳ್ಳೆಯದು. ಪಿಲ್ಯಟ್ಸ್ ಮತ್ತು ಸ್ಟ್ರೆಚ್ ವ್ಯಾಯಾಮ ಮಾಡುವುದು ಒಳ್ಳೆಯದು. ಸಿಂಹ ರಾಶಿಯವರಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಜಾಗಿಂಗ್ ಮತ್ತು ಬ್ರಿಸ್ಕ್ ವಾಕಿಂಗ್ ನಿತ್ಯದ ದಿನಚರಿಯಲ್ಲಿ ಇರಲೇಬೆಕು. ಸಿಂಹ ರಾಶಿಯವರ ಹೃದಯ ಮತ್ತು ಬೆನ್ನುಮೂಳೆ ದುರ್ಬಲವಾಗಿರುತ್ತದೆ. ಹೀಗಾಗಿ ವಿಶೇಷವಾದ ಗಮನ ನೀಡುವುದು ಅಗತ್ಯ.
ಕನ್ಯಾ (ಆಗಸ್ಟ್ 23-ಸೆಪ್ಟೆಂಬರ್ 22)
ಹೈಪರ್ ಕ್ರಿಯಾಶೀಲತೆಯನ್ನು ಶಾಂತಗೊಳಿಸಲು ಧ್ಯಾನ ಮತ್ತು ವಿಶ್ರಾಂತಿ ಆಧರಿತ ವ್ಯಾಯಮ ನೆರವಾಗುವುದು. ಸೈಕ್ಲಿಂಗ್, ಬ್ಯಾಡ್ಮಿಂಟನ್, ರನ್ನಿಂಗ್ ಮತ್ತು ಸ್ಟ್ರೆಚಿಂಗ್ ಮೊದಲಾದ ವ್ಯಾಯಾಮವು ಇವರ ನಿತ್ಯ ದಿನಚರಿಯಾಗಲಿ. ಕೆಲವು ಹವ್ಯಾಸಗಳು ಇವರಲ್ಲಿ ಆತಂಕ ಮತ್ತು ಒತ್ತಡವನ್ನು ಪ್ರಚೋದಿಸಬಹುದು.
ತುಲಾ (ಸೆಪ್ಟೆಂಬರ್ 23-ಅಕ್ಟೋಬರ್ 22)
ತುಲಾ ರಾಶಿಯವರು ತೂಕ ಹೆಚ್ಚಿಸಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಹೃದಯಕ್ಕೆ ಒತ್ತಡ ಕಡಿಮೆ ಬೀಳುವ ಮತ್ತು ಸ್ಟ್ರೆಚ್ಚಿಂಗ್ ವ್ಯಾಯಾಮ ಇವರಿಗೆ ಸೂಕ್ತವಾದುದು. ಬೆನ್ನಿನ ಕೆಳಭಾಗವನ್ನು ಗಟ್ಟಿಗೊಳಿಸಲು ಬ್ಯಾಕ್ ಸ್ಟ್ರೆಚ್ ವ್ಯಾಯಾಮವನ್ನು ಪ್ರತಿನಿತ್ಯ ಬೆಳಗ್ಗೆ ಮಾಡಬೇಕು.
ಆದರೆ ಅಧಿಕ ತೂಕ ಎತ್ತುವುದು ಅಥವಾ ಕೆಳ ಬೆನ್ನಿಗೆ ಒತ್ತಡ ಬೀಳುವಂತಹ ಕೆಲಸವನ್ನು ಮಾಡಲೇ ಬಾರದು.
ವೃಶ್ಚಿಕ (ಅಕ್ಟೋಬರ್ 23-ನವೆಂಬರ್ 21)
ಸಾಹಸಮಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬಹುದು. ಶ್ರಮದಾಯಕ ಮತ್ತು ಸ್ಪರ್ಧಾತ್ಮಕ ವ್ಯಾಯಾಮ ಇವರಿಗೆ ಒಳ್ಳೆಯದು. ಬಾಕ್ಸಿಂಗ್, ಸಮರ ಕಲೆಗಳು ಮತ್ತು ಮ್ಯಾರಥಾನ್ ಮೊದಲಾದವುಗಳು ಸ್ನಾಯುಗಳನ್ನು ಬಲಗೊಳಿಸುತ್ತದೆ. ಶ್ರಮದಾಯಕವಾದ ವ್ಯಾಯಾಮ ಲಿಗಮೆಂಟ್ ಮೇಲೆ ಹಾನಿ ಉಂಟು ಮಾಡಬಹುದು ಅಥವಾ ಒತ್ತಡವನ್ನು ಉಂಟು ಮಾಡಬಹುದು.
ಧನಸ್ಸು (ನವೆಂಬರ್ 22-ಡಿಸೆಂಬರ್ 21)
ಇವರಿಗೆ ಸೊಂಟ, ನಡು ಮತ್ತು ತೊಡೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಇವರು ನಿಯಮಿತ ವ್ಯಾಯಾಮ ಮಾಡುವುದು ಅಗತ್ಯ. ಸೈಕ್ಲಿಂಗ್, ರನ್ನಿಂಗ್ ಮತ್ತು ಜಾಗಿಂಗ್ ಉತ್ತಮ ವ್ಯಾಯಾಮ. ತೊಡೆಯಲ್ಲಿ ಶೇಖರಣೆಯಾಗಿರುವ ಬೊಜ್ಜು ಕರಗಿಸಲು ವಾರಕ್ಕೆ ಐದು ದಿನ ಜಿಮ್‌ಗೆ ಹೋಗುವುದು ಸೂಕ್ತ.
ಆದರೆ ಲೆಕ್ಕಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಹಾಗೆ ಮಾಡಿದರೆ ಮಂಡಿರಜ್ಜು ಮತ್ತು ಬೆನ್ನಿನ ಸ್ನಾಯುಗಳಿಗೆ ಪೆಟ್ಟಾಗುವ ಸಾಧ್ಯತೆ ಹೆಚ್ಚು.
ಮಕರ (ಡಿಸೆಂಬರ್ 22-ಜನವರಿ 19)
ಇವರಿಗೆ ವಯಸ್ಸಾಗುತ್ತಿದ್ದಂತೆ ಸಂಧಿ ನೋವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ನಿಮ್ಮ ದೇಹದ ಸಾಮರ್ಥ್ಯವನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನ ವಹಿಸಬೇಕು. ಹೀಗಾಗಿ ಇವರು ಪಾದಯಾತ್ರೆ, ರಾಕ್ ಕ್ಲೈಬಿಂಗ್, ಜಾಗಿಂಗ್, ವಾಕಿಂಗ್ ಮತ್ತು ಸೈಕ್ಲಿಂಗ್ ಆಧಾರಿತ ವ್ಯಾಯಾಮ ಮಾಡುವುದು ಒಳ್ಳೆಯದು.
ಇವರ ಸಂಧಿಗಳು ಗಡುಸಾಗುವುದನ್ನು ತಪ್ಪಿಸಲು ನಿಯಮಿತವಾಗಿ ವ್ಯಾಯಾಮ ಅತ್ಯವಶ್ಯಕ.
ಕುಂಭ (ಜನವರಿ 20-ಫೆಬ್ರವರಿ 18)
ಇವರಿಗೆ ಫಿಟ್ನೆಸ್ ಚಟುವಟಿಕೆಗಳು ಅಧಿಕವಾಗಿ ಬೇಕು. ಡ್ಯಾನ್ಸ್ ಮತ್ತು ಕಠಿಣ ಕ್ರೀಡೆಗಳಾದ ಮ್ಯಾರಥಾನ್ ಮತ್ತು ಈಜು ಸೂಕ್ತವಾದುದು. ಇವರು ಏರೋಬಿಕ್ಸ್ ಕೂಡ ಮಾಡಬಹುದು. ತೂಕ ಕಡಿಮೆ ಮಾಡಿಕೊಳ್ಳಲು ಸೂಕ್ತ ಮಾರ್ಗವಾಗಿದೆ. ಇದರ ಜತೆಗೆ ಇವರು ಸಾಹಸಿ ಕ್ರೀಡೆಗಳಾದ ಸ್ಕೈಡೈವಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಮಾಡಬಹುದು.
ಮೀನ (ಫೆಬ್ರವರಿ 19-ಮಾರ್ಚ್ 20)
ಇವರಿಗೆ ಒತ್ತಡದಿಂದ ಮುಕ್ತಗೊಳ್ಳಲು ಮತ್ತು ಶಾಂತವಾಗಿರಲು ಯೋಗ ಮತ್ತು ಶಾಸ್ತ್ರೀಯ ನೃತ್ಯ ಒಳ್ಳೆಯದು. ಕುಳಿತುಕೊಳ್ಳುವ ಕೆಲವು ಭಂಗಿಗಳು ನಿಮ್ಮ ನರಗಳನ್ನು ದೃಢಗೊಳಿಸುತ್ತದೆ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಶ್ರಮದಾಯಕ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು. ಆದರೆ ಹೊರಗೆ ಹೋಗಲು ಇಷ್ಟಪಡುವವರು ಈಜು ಮತ್ತು ರನ್ನಿಂಗ್ ವ್ಯಾಯಾಮ ಮಾಡಬಹುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments