ಮುಖ ಮನಸ್ಸಿನ ಕನ್ನಡಿ ಇದ್ದಂತೆ. ಮನಸ್ಸಿನಲ್ಲಿ ಕ್ಷಣಕ್ಷಣವೂ ಹೊಮ್ಮುವ ಭಾವನೆಗಳು ವ್ಯಕ್ತಿಯ ಮುಖದ ಮೇಲೆ ಪ್ರತಿಬಿಂಬಿತವಾಗಿರುತ್ತವೆ. ಮನುಷ್ಯನು ತನ್ನ ಮನೋದ್ವೇಗಗಳನ್ನು ಮಾತಿನಿಂದ ಹೇಳಲಾಗದಿದ್ದರೂ ಅವನ ಮುಖವು ಎಲ್ಲವನ್ನೂ ವ್ಯಕ್ತಪಡಿಸುತ್ತದೆ. ನಾವೆಷ್ಟೇ ಪ್ರಯತ್ನ ಮಾಡಿದರೂ ನಮ್ಮ ಮುಖವು ಮನಸ್ಸಿನ ಭಾವನೆಗಳನ್ನು ತಡೆದುಕೊಳ್ಳುವಂತೆ ಮಾಡಿಕೊಳ್ಳಲು ಆಗುವುದಿಲ್ಲ. ಮುಖಾಕೃತಿಯಿಂದ ಮನುಷ್ಯನ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಮುಖದ ಆಕಾರದ ಮೇಲೆ ವ್ಯಕ್ತಿತ್ವನ್ನು ಈ ಕೆಳಗೆ ತಿಳಿಸಲಾಗಿದೆ.
ಮುಖಾಕೃತಿಗಳನ್ನು ಆರು ವಿಧವಾಗಿ ವರ್ಗೀಕರಣ ಮಾಡಲಾಗಿದೆ.
1. ಅಂಡಾಕಾರ ಮುಖ
2. ಅಗಲವಾದ ಮುಖ
3. ನೀಳ ಮುಖ
4. ಗುಂಡು ಮುಖ
5. ವರ್ಗಾಕಾರ ಮುಖ
6. ಮರಸೇಬಿನಂತಹ ಮುಖ
1.ಅಂಡಾಕಾರ ಮುಖ:
ಇದು ಕೋಳಿಮೊಟ್ಟೆಯ ಆಕಾರದಲ್ಲಿರುವ ಮುಖ. ಹಣೆಗಿಂತ ಕಣ್ಣುಗಳಿರುವ ಜಾಗ ಅಗಲವಾಗಿರುತ್ತದೆ. ಬರಬರುತ್ತಾ ಅಗಲ ಕಡಿಮೆಯಾಗುತ್ತಾ ಬರುತ್ತದೆ. ಗದ್ದ ಚಿಕ್ಕದಾಗಿರುತ್ತದೆ. ಸ್ತ್ರೀಯರಿಗೆ ಈ ರೀತಿಯ ಮುಖ ಸುಂದರವೂ, ಆಕಷರ್ಕವೂ ಆಗಿರುತ್ತದೆ. ಈ ಮುಖವು ಸ್ತ್ರೀಯರಿಗೆ ಸುಗುಣವನ್ನು ಸೂಚಿಸುತ್ತದೆ. ಪುರುಷರಿಗೆ ಈ ಮುಖವು ಸುಸಂಸ್ಕೃತ, ಸೌಹಾರ್ದತೆಯನ್ನು ಸೂಚಿಸುತ್ತದೆ. ಅಂಡಾಕಾರ ಮುಖವುಳ್ಳವರಿಗೆ ಒಂದುವೇಳೆ ಮೂಗು ದೃಢವಾಗಿದ್ದು, ಹಣೆ ಎತ್ತಿದ್ದರೆ ಅವರದು ಓಜಸ್ವಿ ವ್ಯಕ್ತಿತ್ವವಾಗುತ್ತದೆ. ಇದರೊಂದಿಗೆ ಗದ್ದ ಪ್ರಭಾವಹೀನವಾದರೆ ಜಾತಕರು ಮುಂದೆ ಬರುವುದರಲ್ಲಿ ಹಿಂದುಳಿಯುತ್ತಾರೆ.
2. ಅಗಲವಾದ ಮುಖ:
ಅಗಲವಾದ ಮುಖವುಳ್ಳವರ ಮುಖದ ಮೇಲ್ಭಾಗ, ಕೆಳಭಾಗ ಹಾಗೂ ಮುಖದ ಎರಡೂ ಬದಿಗಳು ಸಮಾನವಾಗಿ ಅ ಗಲವಾಗಿರುತ್ತದೆ. ಇವರು ತೆರೆದ ಹೃದಯದವರು ಹಾಗೂ ಉದಾರ ಮನಸ್ಸಿನವರೂ ಆಗಿರುತ್ತಾರೆ, ಇವರದು ಸಂಕುಚಿತ ಮನೋಭಾವವಾಗಿರುವುದಿಲ್ಲ. ಇವರು ಚಿಕ್ಕ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ. ವ್ಯರ್ಥವಾದ ಮಾತುಗಳನ್ನಾಡುವುದಾಗಲೀ, ಬೇರೆಯವರ ಬಗ್ಗೆಯೇ ಚಿಂತಿಸುತ್ತಿರುವುದಾಗಲೀ ಇವರಿಗೆ ಆಗುವುದಿಲ್ಲ. ಇವರು ಬೇರೆಯವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವವರಾಗಿರುತ್ತಾರೆ; ಕ್ಷಮಿಸುವ ಗುಣವನ್ನು ಹೊಂದಿರುತ್ತಾರೆ. ಇತರರಿಗೆ ಉಪಕಾರ ಮಾಡಿ ಮರೆತುಬಿಡುತ್ತಾರೆ. ಇವರು ಎಂದಿಗೂ ಉದಾಸರಾಗುವುದಿಲ್ಲ. ಯಾವ ವಿಷಯ ಅವರಿಗೆ ಹಿಡಿಸುವುದಿಲ್ಲವೋ ಅದನ್ನು ಅವರು ನಗುನಗುತ್ತಲೇ ತಳ್ಳಿಹಾಕಿಬಿಡುತ್ತಾರೆ. ಸುಸಂಸ್ಕೃತ ಹಾಗೂ ಉದಾರ ಮನಸ್ಸಿನವರಾಗಿದ್ದು ಅವರ ನಡತೆಯಲ್ಲಿ ದೃಢತೆ ಇರುತ್ತದೆ. ಇವರು ಮುಖಂಡರಾಗಲು ಯೋಗ್ಯರಾಗಿರುತ್ತಾರೆ. ಆದೇಶಗಳನ್ನು ಪಾಲಿಸುವುದರಲ್ಲಿ ನಿಸ್ಸೀಮರು. ಇವರಲ್ಲಿ ಅಸ್ಥಿರತೆ ಇರುವುದಿಲ್ಲ. ಇವರು ಪ್ರಾರಂಭಿಸಿದ ಕೆಲಸವನ್ನು ಮುಗಿಸದೇ ಬಿಡುವುದಿಲ್ಲ. ಹಾಗಾಗಿ ಇವರು ಆಡಳಿತ ಕ್ಷೇತ್ರದಲ್ಲಿ ಪೂರ್ಣರೂಪವಾಗಿ ಸಫಲರಾಗುತ್ತಾರೆ.
* ನೀಳ ಮುಖ:
ಇವರಿಗೆ ಶ್ರದ್ಧೆ, ಸಹನೆ ಜನ್ಮದಿಂದ ಬಂದಿರುತ್ತದೆ. ಇವರು ಯಾವುದೇ ಕೆಲಸವನ್ನು ಮಧ್ಯದಲ್ಲಿ ನಿಲ್ಲಿಸುವುದಿಲ್ಲ.
ಇವರು ತೊಂದರೆ ತಾಪತ್ರಯಗಳಿಗೆ ಹೆದರುವುದಿಲ್ಲ. ಸದಾ ಆಶಾವಾದಿಗಳಾಗಿರುತ್ತಾರೆ. ಅವರು ಮಾಡುವಂತಹ
ಕೆಲಸಗಳಲ್ಲಿ ಸಂಪೂರ್ಣ ವಿಶ್ವಾಸವನ್ನಿಟ್ಟುಕೊಂಡಿರುತ್ತಾರೆ. ಅವರು ಸಂಕಲ್ಪಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾರೆ. ಅದು ಅವರಿಗೆ ಕರಗತವಾಗಿರುತ್ತದೆ.
4. ದುಂಡು ಮುಖ:
ದುಂಡು ಮುಖದ ವ್ಯಕ್ತಿಯ ಶರೀರವೂ ಗುಂಡಗೆ ಇರುತ್ತದೆ. ಅವರು ಯಾವಾಗಲೂ ಏನಾದರೂ ಮಾಡುತ್ತಿರುತ್ತಾರೆ. ಅವರು ಯಾವಾಗಲೂ ಸಂತೋಷದಿಂದಲೂ, ಹಾಸ್ಯ ಮಾಡಿಕೊಂಡೂ ಇರುತ್ತಾರೆ. ಇಂತಹವರೇ ಬೇಸರಿಸಿದವರಿಗೆ ಉಲ್ಲಾಸ ಕೊಡುವವರಾಗಿರುತ್ತಾರೆ. ಇತರರಲ್ಲಿ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳ
ಜನ್ಮವು ಜೀವನ ಶೈಲಿಯನ್ನು ಪ್ರಶಸ್ತಗೊಳಿಸುವುದಕ್ಕೋಸ್ಕರವೇ ಆಗಿರುತ್ತದೆ.
5. ವರ್ಗಾಕಾರ ಮುಖ:
ವರ್ಗಾಕಾರ ಮುಖವುಳ್ಳವರ ದವಡೆ ಗಟ್ಟಿಯಾಗಿ ದೊಡ್ಡದಾಗಿರುತ್ತದೆ. ಇದು ದೃಢ ನಿಶ್ಚಯ ಪ್ರಕೃತಿಯ ದ್ಯೋತಕವಾಗಿದೆ. ಇಂತಹ ವ್ಯಕ್ತಿಗಳ ಇಚ್ಛಾಶಕ್ತಿ ಪ್ರಬಲವಾಗಿರುತ್ತದೆ. ಅವರನ್ನು ನೋಡಿದೊಡನೆಯೇ ಇವರು ಅಂದುಕೊಂಡಿದ್ದನ್ನು ಮಾಡಿಯೇ ಮಾಡುವರು ಎಂದೆನಿಸುತ್ತದೆ. ಕ್ರಿಯಾಶೀಲತೆ ಮತ್ತು ತೀವ್ರಗತಿ ಇವರ ಸ್ವಭಾವದ ಪ್ರಮುಖ ವಿಶೇಷತೆಗಳು. ಇವರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಅವರು ಜೀವನದಲ್ಲಿ ಏನನ್ನಾದರೂ ಸಾಧಿಸುವ ಸಲುವಾಗಿಯೇ ಜನ್ಮ ತಳೆದಿರುವರೆಂದು ನಂಬಿರುತ್ತಾರೆ. ತಮ್ಮ ಮುಂದಿನ ದಾರಿಯನ್ನು ತಾವೇ ನೋಡಿಕೊಂಡು ನಡೆಯುವವರಾಗಿರುತ್ತಾರೆ.
6. ಮರಸೇಬಿನಂತಹ ಮುಖ:
ಇವರ ಹಣೆ ಭಾಗ ಅಗಲವಾಗಿದ್ದು ಗದ್ದದವರೆಗೆ ಬರುತ್ತಿದ್ದಂತೆ ಅಗಲ ಕಡಿಮೆಯಾಗುತ್ತಾ ಚೂಪಾಗಿರುತ್ತದೆ.
ಇವರು ಬಹಣ ತೀಕ್ಷ್ಣ ಮತಿಗಳಾಗಿರುತ್ತಾರೆ. ಕುಶಲ ಚಿತ್ರಕಾರರು ಹಾಗೂ ಮಹಾನ್ ಕವಿಗಳು, ಲೇಖಕರು ಸಾಮಾನ್ಯ
ವಾಗಿ ಇಂತಹ ಮುಖವನ್ನು ಹೊಂದಿದವರಾಗಿರುತ್ತಾರೆ
- ಡಾ.ಅನುಸೂಯ ಎಸ್. ರಾಜೀವ್
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments