Skip to main content

ಶನಿವಾರದಂದು ಈ 10 ಹೆಸರುಗಳಿಂದ ಶನಿದೇವರ ಪೂಜೆಯನ್ನು ಮಾಡಿ -ನವಗ್ರಹಗಳಿಗೆ ಯಾವ ಪುಷ್ಪ ಅರ್ಪಿಸಬೇಕು ಗೊತ್ತಾ ?

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ಮಂತ್ರ- ಓಂ ಎಂ ಹ್ರೀಂ ಶ್ರೀ ಶನೇಶ್ವರಾಯ ನಮಃ ಶನಿವಾರದಂದು ಈ 10 ಹೆಸರುಗಳಿಂದ ಶನಿದೇವರ ಪೂಜೆಯನ್ನು ಮಾಡಿ ಕೊಣಸ್ಥ ಪಿಂಗಲೊ ಬಭ್ರು: ಕೃಷ್ಣೋ ರೌದ್ರೋಂತ್ನಕೊ ಯಮಃ ಸೊರಿಃ ಶನೇಶ್ವರೋ ಮಂದಃ ಪಿಪ್ಪಲಾದೆನ ಸಂಸ್ತುತ್‌‌ ಯಾವುದೇ ವಿದ್ವಾನ ಬ್ರಾಹ್ಮಣರ ಸಹಾಯದಿಂದ ಅಥವಾ ನೀವೆ ಸ್ವತಃ ಈ ಕೆಳಗಿನ ವೈದಿಕ ಮಂತ್ರದಿಂದ ಜಪವನ್ನು 23000 ಮಾಡಿ ಅಥವಾ ಮಾಡಿಸಿ. ಇದರಿಂದ ಶನಿ ನಿಮ್ಮ ಹೆಗಲಿನಿಂದ ಕೆಳಗಿಳಿಯುತ್ತಾನೆ. ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ . ಅರಶಿಣದ ನೀರಿನ ಮಹತ್ವ ಅರಿಶಿಣ ಉತ್ತಮ ಔಷಧೀಯ ಗುಣ ಹೊಂದಿದೆ . ವಿದೇಶದಲ್ಲಿ ಕೂಡ ಅರಿಶಿಣದ ಬಗ್ಗೆ ಸಂಶೋಧನೆ ನಡೆದಿದೆ. ಇದರಲ್ಲಿ ಕರಕ್ಯೂಮಿನ್ ಹೆಸರಿನ ಒಂದು ರಸಾಯನಿಕ ವಸ್ತು ಇದೆ . ಈ ರಸಾಯನಿಕ ಸಾಕಷ್ಟು ರೋಗಗಳಿಗೆ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ಅಡುಗೆಯಲ್ಲಿ ಅರಿಶಿಣ ಬಳಸುವುದು ಸಾಮಾನ್ಯವಾಗಿದೆ. ಅರಶಿಣದ ನೀರಿನ ಮಹತ್ವ ಅರ್ಧ ಚಮಚ ಅರಿಶಿಣದ ಪುಡಿ ನೀರಿನಲ್ಲಿ ಬೆರೆಸಿ ಪ್ರತಿ ನಿತ್ಯ ಎರಡು ಬಾರಿ ಕುಡಿಯಿರಿ. ಭಾರತೀಯ ಆಯುರ್ವೇದದ ಪ್ರಕಾರ ಅರಿಶಿಣ ಎಲ್ಲಕ್ಕಿಂತ ಉತ್ತಮ ಟಾನಿಕ್‌‌ ಆಗಿದೆ. ಅರಿಶಿಣ ಆದಿವಾಸಿಗಳ ಪರಂಪರಾಗತ ಟಾನಿಕ್‌ ಆಗಿದೆ, ಈ ಮೂಲಕ ಈಡೀ ವಿಶ್ವದ ಎಲ್ಲಕ್ಕಿಂತ ಉತ್ತಮ ಟಾನಿಕ್‌ ಇದಾಗಿದೆ. ಹೃದಯ , ಲೀವರ್‌ , ಶ್ವಾಸಕೋಶಕ್ಕಾಗಿ ಅರಿಶಿಣಕ್ಕಿಂತ ಉತ್ತಮ ಟಾನಿಕ್‌ ಮತ್ತೊಂದಿಲ್ಲ. ಪ್ರತಿನಿತ್ಯ ಅರಿಶಿಣ ಕುಡಿಯಿರಿ, ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ನವಗ್ರಹಗಳಿಗೆ ಯಾವ ಪುಷ್ಪ ಅರ್ಪಿಸಬೇಕು ಗೊತ್ತಾ ? ಪುಷ್ಪಗಳು ದೇವತೆಗಳಿಗೆ ಮನುಷ್ಯನು ಸಮರ್ಪಣೆ ಮಾಡುವುದರಲ್ಲಿ ಪ್ರಧಾನವಾದ ಪಾತ್ರವನ್ನು ವಹಿಸಿವೆ. ಹೂಗಳನ್ನು ಅರ್ಪಿಸುವುವಾಗ ಅಥವಾ ಹಾರವಾಗಿ ತಮ್ಮ ಇಷ್ಟ ದೇವರಿಗೆ ತೊಡಿಸುವುವಾಗ ಭಕ್ತರಿಗೆ ಮನಸ್ಸಿಗೆ ಶಾಂತಿ ಲಭಿಸುವುದರೊಂದಿಗೆ ಸಂತೋಷವು ಪ್ರಾಪ್ತಿಯಾಗುವುದು. ಪ್ರತಿಯೊಂದು ದೇವರಿಗೂ ಪ್ರತ್ಯೇಕವಾದ ಪುಷ್ಪ ಮತ್ತು ಹಾರಗಳನ್ನು ಅರ್ಪಿಸಿದರೆ ಮಾತ್ರ ಅದರ ಪರಿಣಾಮ ಲಭಿಸುವುದು. ಹೂವಿನ ಬಣ್ಣ, ಸುವಾಸನೆ, ಗಾತ್ರ, ಔಷಧೀಯ ಗುಣ ಮೊದಲಾದುವುಗಳ ಆಧಾರದ ಮೇಲೆ ಪುಷ್ಪಾರ್ಪಣೆಯು ಪ್ರಧಾನ ಪಾತ್ರ ವಹಿಸುತ್ತದೆ. ಇದೇ ರೀತಿ ನವಗ್ರಹಗಳಿಗೆ ಯಾವ ತರದ ಹೂಗಳನ್ನು ಮತ್ತು ಹಾರಗಳನ್ನು ಅರ್ಪಿಸಬೇಕೆಂದು ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖನವನ್ನು ನೀಡಲಾಗಿದೆ. ಗ್ರಹಗಳಿಗೆ ಅರ್ಪಿಸಬೇಕಾದ ಹೂಗಳನ್ನು ಮತ್ತು ಹಾರಗಳನ್ನು ಕೆಳಗೆ ಕೊಡಲಾಗಿದೆ. ಗ್ರಹಗಳು : ಹೂವಿನ ಹಾರ 1. ಸೂರ್ಯ: ಕೆಂಪುತಾವರೆ, ದಾಸವಾಳಗಳಿಂದ ಹೆಣೆದ, ಕಿಸ್ಕಾರ ಹೂವಿನ ಹಾರ 2 ಚಂದ್ರ : ಮಲ್ಲಿಗೆ, ಮಂದಾರ, ಬಿಳಿ ದಾಸವಾಳ ಮೊದಲಾದ ಶ್ವೇತ ಪುಷ್ಪಗಳ ಹಾರ 3 ಗುರು :ಮಂದಾರ, ಸಂಪಿಗೆ ಹೂವಿನ ಮಾಲೆ 4.ಶುಕ್ರ : ಬಿಳಿದಾಸವಾಳ, ಬಿಳಿ ಶಂಖಪುಷ್ಪ, ಮಲ್ಲಿಗೆ ಹಾರ 5.ಶನಿ :ನೀಲಿ ಶಂಖಪುಷ್ಪ,ನೀಲಿ ದಾಸವಾಳಗಳ ಹಾರ 6.ಮಂಗಳ: ಕೆಂಪು ತಾವರೆ, ದಾಸವಾಳದ ಹಾರ 7.ಬುಧ : ಹಸಿರು ಬಣ್ಣದ ಹೂಗಳು ಮತ್ತು ತುಳಸಿ ಮಾಲೆ 8.ರಾಹು :ನೀಲಿ ದಾಸವಾಳದ ಮಾಲೆ 9.ಕೇತು : ಕೆಂದಾವರೆ,ಕಿಸ್ಕಾರ, ದಾಸವಾಳದ ಮಾಲೆ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...