Skip to main content

ಅಡಿಗೆ ಅರಮನೆ

ಬಿಸಿಬೇಳೆ ಹುಳಿ ಅನ್ನ ಬೇಕಾದ ಪದಾರ್ಥಗಳು, ಅಕ್ಕಿ ಒಂದುಸೇರು ತುಗರಿಬೇಳೆ ಒಂದು ಸೇರು ಕೊತ್ತಂಬರಿ ಬೀಜ ಅರ್ದಪಾವು ಬ್ಯಾಡಗಿ ಮೆಣಸಿನಕಾಯಿ ೨೫ ಮೆಣಸು ಒಂದು ಟೀಚಮಚ ಮೆಂತ್ಯ ಒಂದು ಟೀಚಮಚ ಹುಣಸೇಹಣ್ಣು ಒಂದು ಕಿತ್ತಳೆ ಹಾಣ್ಣಿನಷ್ಟುಗಾತ್ರ ಬೆಲ್ಲ ಒಂದು ಟೇಬಲ್ ಚಮಚ ಕೊಬ್ಬರಿ ಒಂದು ಉಂಡೆ ಅರಿಸಿನ ಪುಡಿ ೨ಟೀಚಮಚ ಕಡಲೇ ಬೇಳೆ ೨ಟೇಬಲ್ ಚಮಚ ಲವಂಗ+ದಾಲ್ಚಿನ್ನಿ ೮+೮ ಜೀರಿಗೆ ೧ಟೀಚಮಚ ಇಂಗು ಒಂದು ಕಡಲೇ ಕಾಳಿನಷ್ಟು ಗಸಗಸೆ ೧ಟೇಬಲ್ ಚಮಚ. ಮಾಡುವ ವಿಧಾನ, ಪುಳಿಯೋಗರೆ; ಬೇಕಾದ ಪದಾರ್ಥಗಳು, ಅಕ್ಕಿ ೧ಸೇರು ಎಣ್ಣೆ ಒಂದುವರೆಪಾವು ಹುಣಸೇಹಣ್ಣು ಒಂದು ಕಿತ್ತಳೆ ಹಣ್ಣಿನಷ್ಟುಗಾತ್ರ ಕಡಲೇ ಬೇಳೆ ೧೦೦ಗ್ರಾಂ ಇಂಗು ೧ಕಡ್ಲೇಕಾಳಿನಷ್ಟು ಬೆಲ್ಲ ೨ಟೀ ಸ್ಪೂನ್ ಕೊಬ್ಬರಿ ೧ಉಂಡೆ ಕೊತ್ತಂಬರಿಬೀಜ ೧೦೦ಗ್ರಾಂ ಬ್ಯಾಡಗಿಮೆಣಸಿನ ಕಾಯಿ ೨೫ಕಾಯಿ ಮೆಂತ್ಯ+ಜೀರಿಗೆ ೧ಟೀಸ್ಪೂನ್ ಮೆಣಸು ಒಂದೊವರೆ ಟೀಸ್ಪೂನ್ ಸಾಸಿವೆ+ಕರಿಬೇವು (ಒಗ್ಗರಣೆಗೆ) ಮಾಡುವ ವಿಧಾನ. ವಾಂಗಿ ಬಾತ್ ಅಕ್ಕಿ ೧ಸೇರು ಕೊತ್ತಂಬರಿಬೀಜ ೧೦೦ಗ್ರಾಂ ಬ್ಯಾಡಗಿಮೆಣಸಿನ ಕಾಯಿ ೨೫ಕಾಯಿ ಕಡಲೇ ಬೇಳೆ ೧೦೦ಗ್ರಾಂ ಉದ್ದಿನಬೇಳೆ ೧೦೦ಗ್ರಾಂ ಕೊಬ್ಬರಿ ೧ಉಂಡೆ ಎಣ್ಣೆ ಒಂದುವರೆಪಾವು(೨೫೦ಗ್ರಾಂ) ತುಪ್ಪ ಒಂದುವರೆಪಾವು(೨೦೦ಗ್ರಾಂ) ತರಕಾರಿಗಳು ಒಂದುವರೆ ಕಿಲೋ(೧೫೦೦ಗ್ರಾಂ) ಲವಂಗ+ದಾಲ್ಚಿನ್ನಿ ೮+೮ ಇಂಗು ಕಡ್ಲೆಕಾಳಿನಷ್ಟು ಅರಿಸಿನಪುಡಿ ೨ಟೀಸ್ಪೂನ್ ಸಕ್ಕರೆ ೨ಟೀ ಸ್ಪೂನ್ ನಿಂಬೆಹಣ್ಣು ೧ಹಣ್ಣು ಹುಣಸೇಹಣ್ಣು ೧ನಿಂಬೆಹಣ್ಣಿನಗಾತ್ರ ಮಾಡುವ ವಿಧಾನ, ಸೌತೇಕಾಯಿ ದೋಸೆ, ಬೇಕಾದ ಸಾಮಗ್ರಿಗಳು, ಅಕ್ಕಿ ೧ಸೇರು ಉದ್ದಿನಬೇಳೆ ೨೦೦ಗ್ರಾಂ(ಒಂದುಪಾವು) ತೆಂಗಿನಕಾಯಿ ಒಂದು ಹೋಳು ಸೋಡಾಪುಡಿ ಅರ್ದ ಟೀ ಸ್ಪೂನ್ ಮೆಂತ್ಯ ೧ಟೀಸ್ಪೂನ್ ಇಂಗು ಒಂದು ಕಡಲೇಕಾಳಿನಷ್ಟು ಸೌತೇಕಾಯಿ ದೊಡ್ಡದ್ದು ಒಂದು ಉಪ್ಪು ಒಂದುಕಾಲು ಟೇಬಲ್ ಸ್ಪೂನ್ ಹಸಿಮೆಣಸಿನಕಾಯಿ ೧೦ ಕೊತ್ತಂಬರಿಸೊಪ್ಪು ೨ಕಟ್ಟು (ಐದುರೂಪಾಯಿದು) ಮಾಡುವ ವಿಧಾನ, ಮೆಂತ್ಯ,ಅಕ್ಕಿ ಉದ್ದಿನಬೇಳೆಯನ್ನು ನೆನೆಸಿ ರುಬ್ಬಿಕೊಳ್ಳುವುದು,ಮಾರನೆದಿನ ಸೌತೇಕಾಯಿ ಸಿಪ್ಪೆತೆಗೆದು ತುರಿದು ದೋಸೆಹಿಟ್ಟಿಗೆಹಾಕಿ ತೆಂಗಿನಕಾಯಿ ತುರಿಯನ್ನು ಹಾಕಿ ಹಸಿಮೆಣಸಿನತುರಿ ಕೊತ್ತಂಬರಿ ಇಂಗನ್ನು ಸೇರಿಸಿ ದೋಸೆ ಹಾಕಿಕೊಳ್ಳಿ ಮೃದುವಾಗಿ ರುಚಿಯಾಗಿರುತ್ತದೆ. ಅಕ್ಕಿ ಕೋಡುಬಳೆ ಬೇಕಾದ ಸಾಮಗ್ರಿಗಳು. ಅಕ್ಕಿ ೧ಕಿಲೋ ತೆಂಗಿನಕಾಯಿ ೧ದೊಡ್ಡದ್ದು ಉಪ್ಪು ಒಂದುವರೆ ಟೀಸ್ಪೂನ್ ತುಪ್ಪ ೨ಟೇಬಲ್ ಸ್ಪೂನ್ ಕೊತ್ತಂಬರಿಸೊಪ್ಪು ೨ಕಟ್ಟು (ಸಣ್ಣವು) ಜೀರಿಗೆ ೨ಟೀಸ್ಪೂನ್ ಇಂಗು ಒಂದು ಕಡಲೇ ಕಾಳಿನಷ್ಟು ಹಸಿಮೆಣಸಿನಕಾಯಿ ೧೨ಕಾಯಿ ಕಾರದ ಪುಡಿ ೧ಟೀಸ್ಪೂನ್ ಸೋಡಾಪುಡಿ ¼ ಕಾಲು ಟೀಸ್ಪೂನ್ ಮಾಡುವ ವಿಧಾನ. ನಿಪ್ಪಟ್ಟು ಬೇಕಾದ ಸಾಮಗ್ರಿಗಳು. ಹುರಿಗಡಲೆ ೧೫೦ಗ್ರಾಂ(ಕಾಲುಪಾವು) ಅಕ್ಕಿಹಿಟ್ಟು ೨ಪಾವು(೨೫೦ಗ್ರಾಂ) ಮೈದಾಹಿಟ್ಟು ೧೫೦ಗ್ರಾಂ(ಕಾಲುಪಾವು) ಕಡಲೆಹಿಟ್ಟು ೧೫೦ಗ್ರಾಂ(ಕಾಲುಪಾವು) ಸೋಡಾ ¼ ಕಾಲುಟೀಸ್ಪೂನ್ ಕಡಲೆಬೀಜ ೧೫೦ಗ್ರಾಂ(ಕಾಲುಪಾವು) ಉಪ್ಪು 1½ ಒಂದೂವರೆ ಟೀಸ್ಪೂನ್ ತುಪ್ಪ ೨ಟೇಬಲ್ ಸ್ಪೂನ್ ಕಾರದ ಪುಡಿ 1ಟೇಬಲ್ ಸ್ಪೂನ್ ತೆಂಗಿನಕಾಯಿ ಒಂದು ಮಾಡುವ ವಿಧಾನ, 8ಗೋದಿ ಹಲ್ವ ಬೇಕಾಗುವ ಪದಾರ್ಥಗಳು:- ಗೋಧಿ ½ ಸೇರು ಸಕ್ಕರೆ 2½ ಪಾವು ದ್ರಾಕ್ಷಿ+ಬಾದಾಮಿ ¼ಪಾವು ಏಲಕ್ಕಿ 12 ಕಾಯಿ ಕೇಸರಿ 1 ಟೀ ಸ್ಪೂನ್ ತುಪ್ಪ 1 ಪಾವು ಹಾಲು 2 ಪಾವು ಮಾಡುವ ವಿಧಾನ: ಗೋಧಿಯನ್ನು ೪-೫ಸಲ ನೀರಿನಿಂದ ಚೆನಾಗಿ ತೊಳೆಯಬೇಕು ಮಾರನೆಯದಿನ ನುಣ್ಣಗೆ ಅರೆದು ಶೋಧಿಸಿ ಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಹಾಕಿ ಹಾಲು ಸಕ್ಕರೆ,ತುಪ್ಪ ಹಾಕಿ ಏಲಕ್ಕಿ ಪುಡಿ ಹಾಕಿ ಕೇಸರಿಯನ್ನು ಹಾಕಿ ಪಾತ್ರೆಯಲ್ಲಿರುವ ಗೋಧಿಹಾಲನ್ನು ಒಲೆಯ ಮೇಲೆ ಇಟ್ಟು ತಳಸೀಯದಂತೆ ಕಲಕುತ್ತಿರಬೇಕು ಹಾಲು ಗಟ್ಟಿಯಾಗುತ್ತಾ ಬಂದು ಅದರ ಮೇಲೆ ತುಪ್ಪ ಕಾಣಿಸುವವರೆಗೂ ಕೆದಕುತ್ತಿರಬೇಕು. 9ಅಕ್ಕಿ ತೆಂಗಿನಕಾಯಿ ಹಲ್ವ ಬೇಕಾಗುವ ಪದಾರ್ಥಗಳು:- ಅಕ್ಕಿ 1 ½ ಪಾವು ತೆಂಗಿನಕಾಯಿ 1ಕಾಯಿ ತುಪ್ಪ ½ ಪಾವು ಸಕ್ಕರೆ 2 ಪಾವು ದ್ರಾಕ್ಷಿ+ಗೋಡಂಬಿ ¼ಪಾವು ಏಲಕ್ಕಿ 12 ಕಾಯಿ ಕೇಸರಿ 1 ಟೀ ಸ್ಪೂನ್ ಮಾಡುವ ವಿಧಾನ: ಅಕ್ಕಿ ತೆಂಗಿನಕಾಯನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ ಹಿಟ್ಟಿನ ಜರಡಿಯಲ್ಲಿ ಶೋಧಿಸಿಕೊಳ್ಳಿ.ತುಪ್ಪ ಬಿಸಿ ಮಾಡಿಕೊಂಡು ಏಲಕ್ಕಿ,ಗೋಡಂಬಿ,ದ್ರಾಕ್ಷಿ ಹಾಕಿ ನಂತರ ಶೋಧಿಸಿದ ಅಕ್ಕಿ,ತೆಂಗಿನ ಮಿಶ್ರಣವನ್ನು ಹಾಕಿ ಕೇಸರಿ ಕಲೆಸಿ ಸ್ವಲ್ಪ ಸಮಯದ ನಂತರ ಸಕ್ಕರೆಹಾಕಿ ಚೆನಾಗಿ ತಿರುವಿ ಕೆಳಗಿಳಿಸಿಕೊಂಡು ನಿಮಗೆ ಬೇಕಾದ ರೀತಿಯಲ್ಲಿನ ಪಾತ್ರೆ ಅಥವ ತಟ್ಟೆಯಲ್ಲಿ ಹಾಕಿಕೊಳ್ಳಿ ರುಚ್ಚಿಯಾದ ಅಕ್ಕಿ ಹಲ್ವ ಸಿದ್ದವಾಗುತ್ತದೆ. ೧೦.ರಸಗುಲ್ಲ. ಬೇಕಾಗುವ ಪದಾರ್ಥಗಳು:- ಹಾಲು 2 ಸೇರು ರವೆ ¼ಪಾವು ಸಕ್ಕರೆ 1 ½ ಪಾವು ನಿಂಬೆ ಹಣ್ಣು 1 ಹೋಳು ಮಾಡುವ ವಿಧಾನ: ಪಾತ್ರೆಯನ್ನು ಒಲೆಯಮೇಲಿಟ್ಟು ಹಾಲು ಹಾಕಿ ಕಾಯಿಸಿ ಉಕ್ಕಿಬರುವಾಗ ನಿಂಬೆಹಣ್ಣಿನ ರಸವನ್ನು ಹಾಕಿ ಚೆನಾಗಿ ಕಲಸಿ ಕುದಿ ಬಂದಮೇಲೆ ಕೆಳಗಿಳಿಸಿ ತಣ್ನಗಾದನಂತರ ಬಿಳಿಬಟ್ಟೆಯಿಂದ ಹಾಲನ್ನು ಶೋಧಿಸುವುದು ಈ ಹಾಲಿನ ಪಾತ್ರೆಯಲ್ಲಿ ಹುರಿದಿಟ್ಟುಕೊಂಡ ರವೆಯನ್ನು ಸೇರಿಸಿ ಚೆನ್ನಾಗಿ ಕಲೆಸಿ ಉಂಡೆಗಳನ್ನಾಗಿ ಮಾಡಿಕೊಳ್ಳಿ ಉಂಡೆಗಳು ದೊಡ್ಡ ನೆಲ್ಲಿಕಾಯಿ ದಪ್ಪಇರಲಿ ಈ ಉಂಡೆಗಳನ್ನು ಸಿದ್ದಮಾಡಿಕೊಳ್ಳಿ(ಸಕ್ಕರೆಪಾಕ ಮಾಡುವ ವಿಧಾನ.೨ಪಾವು ಕುದಿಯುವ ನೀರನ್ನು ಪಾಕದಲ್ಲಿರುವ ೩ಸೇರು ಹಿಡಿಯುವ ಪಾತ್ರೆಯಲ್ಲಿ ೧ಪಾವು ನೀರು ಹಾಕಿ ಸಕ್ಕರೆ ಪಾಕ ಮಾಡುವುದು )ಉಂಡೆಗಳ ಮೇಲೆ ನಿಧಾನವಾಗಿ ಹಾಕಬೇಕು ಉಂಡೆಗಳು ಕುದಿದು ಮೇಲೆ ಬರುತ್ತವೆ. ೧೫,ಚನ್ನ ಬಟೂರ. ಜೀರಿಗೆ,ಮೆಣಸು,ಒಣ ಮೆನಸಿನಕಾಯಿ,ದನಿಯ ಕುಟ್ಟಿಕೊಂಡು ಬೆಳ್ಳುಳ್ಳಿ ಸೇರಿಸಿ ರುಬ್ಬಿ ಒಗ್ಗರಣೆಗೆ ಚಕ್ಕೆ ಲವಂಗ ಈರುಳ್ಳಿ ಟಮೋಟೋ ಹಾಕಿ. ಚೆನ್ನಾಜೊತೆಗೆ ಉಪ್ಪು,ಮಸಾಲೆಹಾಕಿ ಕುದಿಸಬೇಕು,ಬಟೂರ ಮೈದಾಹಿಟ್ಟು,ಹುಳಿಮೊಸರು.ಎಣ್ಣೆಹಾಕಿ ಕಲಸಿ,ಪೂರಿಯ ತರಹ ಕರಿಯ ಬೇಕು. ಚನ್ನ ಮಸಾಲ; ಹಸಿಮೆನಸಿನಕಾಯಿ,ಕೊತ್ತಂಬರಿಸೊಪ್ಪು,ಬೆಳ್ಳುಳ್ಳಿ ಶುಂಠಿ,ಒಣಮೆಣಸಿನಕಾಯಿ,ಜೀರಿಗೆ ಧನಿಯಾ,ಚಕ್ಕೆಲವಂಗ ಯಾಲಕ್ಕಿ,ಜಾಕಾಯಿ,ಪುಡಿಮಾಡಿಕೊಳ್ಳಬೇಕು ನೆನೆಸಿದ ಚೆನ್ನಾಗೆ ಉಪ್ಪುಹಾಕಿ ಬೇಯಿಸಿ ನಮ್ತರ ಸೋಸಿ ಅದಕ್ಕೆ ನೆನೆಸಿದ ಕಡ್ಲೆಬೇಳೆ,ಹಸಿಮಸಾಲೆ,ಒಣಮಸಾಲೆ ಪುಡಿ ಹಾಕಿ ಬೆರಸಿ ಬಾಣಲಿಗೆ ಎಣ್ಣೆಹಾಕಿ ಈರುಳ್ಳಿ ಹುರಿದು ಅದಕ್ಕೆ ಬೇಯಿಸಿದ ಚನ್ನಾ ಹಾಕಿ ಸೋಸಿದ ನೀರನ್ನು ಹಾಕಿ ಬೇಯಿಸಿ ಇಳಿಸಿದಮೇಲೆ ೧ಸ್ಪೂನ್ ಚೆನ್ನಾಗಿ ಕಾಯ್ದ ಎಣ್ನೆಯನ್ನು ಹಾಕಿ. ಪಾವ್ ಬಜ್ಜಿ ಬೇಕಾಗುವ ಸಾಮಾನುಗಳು. ಬೆಣ್ಣೆ ¼ಕಿ ಗ್ರಾಂ ಎಣ್ಣೆ 1೦೦ಗ್ರಾಂ ಈರುಳ್ಳಿ ½ಕಿ ಗ್ರಾಂ ಪಾವ್ ಬಜ್ಜಿ ಮಸಾಲಾ ೨ಸ್ಪೊನ್ ಖಾರದ ಪುಡಿ 1ಸ್ಪೂನ್ ಟಮೋಟೋ ½ ಕಿ ಗ್ರಾಂ ಶುಂಠಿ 5೦ಗ್ರಾಂ ಪೇಸ್ಟ್ ಬೆಳ್ಳುಳ್ಳಿ 7-8 ಎಸಳು ಆಲೂಗಡ್ಡೆ ½ಕಿಲೋ ಕೊತ್ತಂಬರಿ ಸೊಪ್ಪು 1 ಕಟ್ಟು ಮಾಡುವವಿಧಾನ; ಪಾತ್ರೆಯನ್ನು ಒಲೆಯಮೇಲಿಟ್ಟು ಕಾದನಂತರ ಎಣ್ನೆಮತ್ತು ಬೆಣ್ಣೆ ಎರಡನ್ನು ಸಮನಾಗಿ ಹಾಕಿ ಕಾಯಿಸಿ ಅದಕ್ಕೆ ಈರುಳ್ಳಿ ಹಾಕಿ ಕೆಂಪಗೆ ಹುರಿಯಬೇಕು ಶುಂಠಿ,ಬೆಳ್ಳುಳ್ಳಿ ಪೇಷ್ಟ್ ಅನ್ನು ಅದಕ್ಕೆ ಸೇರಿಸಬೇಕು ೨ಸ್ಪೊನ್ ಪಾವ್ ಬಜ್ಜಿ ಮಸಾಲವನ್ನು ಹಾಕಬೇಕು ೧ಸ್ಪೂನ್ ಖಾರದ ಪುಡಿ ಹಾಕಿ ಅದರ ಜೊತೆಯಲ್ಲಿ ಸಣ್ಣದಾಗಿ ಕತ್ತರಿಸಿರುವ ಟಮೋಟೋ ಸೇರಿಸುವುದು.೧೦ ನಿಮಿಷ ಕುದಿಸುವುದು ಉಪ್ಪನ್ನು ಹಾಕಿ ನೀರನ್ನು ಸ್ವಲ್ಪ ಸೇರಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿ ನಿಂಬೆಹಣ್ಣನ್ನು ರಸ ಹಿಂಡುವುದು. ಮೆಣಸಿನ ಕಾಯಿ ಚಟ್ನಿ; ಬೇಕಾಗುವ ಸಾಮಾನುಗಳು. ಮೆಣಸಿನಕಾಯಿ 1೦೦ಗ್ರಾಂ ಈರುಳ್ಳಿ 4-5ಗೆಡ್ಡೆ ಬೆಳ್ಳುಳ್ಳಿ 1ಗೆಡ್ಡೆ ಕೊತ್ತಂಬರಿಸೊಪ್ಪು ತಕ್ಕಷ್ಟು ಕರಿಬೇವು ಹೊಗ್ಗರಣೆಗೆ ತಕ್ಕಷ್ಟು ಬೆಲ್ಲ ½ ಅಚ್ಚು ಹುಣಸೇಹಣ್ಣು ಒಂದು ನಿಂಬೆಹಣ್ಣಿನ ಗಾತ್ರ ಮಾಡುವ ವಿಧಾನ; ಮೆಣಸಿನಕಾಯಿ,ಈರುಳ್ಳಿಯನ್ನು ಬೇರೆ ಬೇರೆಯಾಗಿ ಹುರಿಯುವುದು ನಂತರ ಎಲ್ಲವನ್ನು ಹಾಕಿ ರುಬ್ಬುವುದು ಎಣ್ಣೆಯನ್ನು ಜಾಸ್ತಿ ಹಾಕಿ ಸ್ವಲ್ಪ ಹೊತ್ತು ಹುರಿಯುವುದು. ತುಂಬಿದ ಬದನೆ; ಬೇಕಾಗುವ ಸಾಮಾನುಗಳು. ಹುರಿಗಡಲೆ ಪುಡಿ, ಹುಚ್ಚಳ್ಳ ಪುಡಿ ಕಡಲೇಕಾಯಿ ಬೀಜದ ಪುಡಿ ಅಕ್ಕಿಹಿಟ್ಟು ತೆಂಗಿನಕಾಯಿ ಈರುಳ್ಳಿ ಹುಣಸೇ ಹಣ್ಣು ಸಾರಿನ ಪುಡಿ+ಉಪ್ಪಿನ ಪುಡಿ ಹುಣಸೇಹಣ್ಣಿನ ನೀರಲ್ಲಿ ಈ ಎಲ್ಲಾ ಪುಡಿಗಳನ್ನು ಕಲೆಸುವುದು,ಬದನೆಕಾಯಲ್ಲಿ ತುಂಬುವುದು.ನಂತರ ಒಗ್ಗರಣೆಗೆ ಎಣ್ಣೆಯನ್ನು ಜಾಸ್ತಿ ಹಾಕಿ ಈ ತುಂಬಿದ ಬದನೆಕಾಯಿಯನ್ನು ಹಾಕಿ ಕುಕ್ಕರ್ ನಲ್ಲಿ ೩ಸಲ ಕೂಗಿಸುವುದು ನಂತರ ಮುಚ್ಚಳತೆಗೆದು 1೦ನಿಮಿಷ ಕುದಿಸುವುದು. ಮಾವಿನ ಕಾಯಿ ಚಟ್ನಿ ತುರಿದಿರುವ ಮಾವಿನಕಾಯಿ 1 ½ ಕಪ್ಪು ಸಕ್ಕರೆ 1 ½ ಕಪ್ಪು ಮೆಣಸಿನ ಪುಡಿ ೨ ಟೇಬಲ್ ಸ್ಪೊನ್ ಹಳದಿ ½ ಸ್ಪೂನ್ ಜೀರಿಗೆ ಪುಡಿ 1 ಸ್ಪೂನ್ ವಿಧಾನ. ಮಾವಿನಕಾಯನ್ನು ತುರಿದಿಟ್ಟುಕೊಂಡು ಅದಕ್ಕೆ ಉಪ್ಪು ಸಕ್ಕರೆ,ಹಳದಿಯನ್ನು ಸೇರಿಸಿ 1ದಿನ ಇಡುವುದು (ಮೇಲೆ ಬಟ್ಟೆಕಟ್ಟಿ) ನಂತರ ೭ದಿವಸ ಬಿಸಿಲಿಗೆ ಇಟ್ಟು ತೆಗೆಯುವುದು ನಂತರ್ ಮೆಣಸಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ ತಿನ್ನುವುದು. ಸೆಟ್ ದೋಸೆ ಅಕ್ಕಿ 4ಲೋಟ ಅವಲಕ್ಕಿ 1 ಲೋಟ ಉದ್ದಿನ ಬೇಳೆ 2ಟೀಸ್ಪೂನ್ ಬೆಳ್ಳುಳ್ಳಿ ಚೆಟ್ನಿ ಬೆಳ್ಳುಳ್ಳಿ ತುಪ್ಪದಲ್ಲಿ ಹುರಿದು,ಕೊಬ್ಬರಿತುರಿ ಹುಣಸೇಹಣ್ಣು(ಹಳೇಯದು) ಉಪ್ಪು,ಬೆಲ್ಲ ಒಣಮೆಣಸಿನಕಾಯಿ ಇಂಗು ಹಾಕಿ ನೀರಿಲ್ಲದೆ ರುಬ್ಬಿಕೊಳ್ಳಿ. ಬಾದಾಮಿ ಹಲ್ವ ಹಾಲು 1 ಸೌಟು ಕೋವ 25 ಗ್ರಾಂ ಬಾದಾಮ್ ಪೌಡರ್ 2೦೦ಗ್ರಾಂ ತುಪ್ಪ 1 ½ ಸೌಟು ತರಕಾರಿ ಕೂಟು(1೦೦ ಜನಕ್ಕೆ) ತುಗರಿಬೇಳೆ 1ಕಿಲೋ(ಸೇರು) ಕಡಲೇ ಬೇಳೆ ½ ಅರ್ಧ ಪಾವು (ತಲೆ ಹೊಡೆದು) ಉದ್ದಿನಬೇಳೆ ½ ಅರ್ಧ ಪಾವು (ತಲೆ ಹೊಡೆದು) ದನಿಯ ¾ ಮುಕ್ಕಾಲು ಪಾವು ಬ್ಯಾಡಗಿ ಮೆಣಸಿನಕಾಯಿ 12೦ ಮೆಣಸು 4ಟೀ ಸ್ಪೂನ್ ಜೀರಿಗೆ 2ಟೀಸ್ಪೂನ್ ತೆಂಗಿನಕಾಯಿ 1 ½ (ಒಂದೂವರೆ )ಕಾಯಿ ಇಂಗು 1ಸ್ಪೂನ್ ೧೦ ಕಿಲೋ ತರಕಾರಿ. * * * ½ ¼ ¾ 1 2 3 4 5 6 7 8 9 ಹೆಸರು ಬೇಳೆ ½ ಅರ್ಧ ಕಿಲೋ ಸೌತೇಕಾಯಿ 1ದೊಡ್ಡದು ಹುರುಳಿಕಾಯಿ 2ಕಿಲೋ ಆಲೂಗೆಡ್ಡೆ 2ಕಿಲೋ * * * ರಸಂಗೆ ಅರ್ಧ ಪಾವು ಬೇಳೆ ತೆಂಗಿನಕಾಯಿ,ಟಮೋಟೋ,ಬೇಯಿಸಿದ ಬೇಳೆ,ಜೀರಿಗೆ,ಮೆಣಸು.ಇಂಗು. ಬೂದುಕುಂಬಳಕಾಯಿ ಹಲ್ವಕ್ಕೆ ೧೬ ಕಿಲೋ ಬೇಕಾಗುತ್ತದೆ.೧೫೦ ಬಾದೂಷಾಗೆ ೨ಕಿಲೋ ಮೈದಾ ಹಿಟ್ಟು ಬೇಕು. ಅನಾನಸ್ ಗೊಜ್ಜು ಅನಾನಸ್ ೧ ದೊಡ್ಡದು ಕಡಲೇ ಬೇಳೆ ೨ಟೀ ಸ್ಪೂನ್ ಉದ್ದಿನಬೇಳೆ ೨ಟೀ ಸ್ಪೂನ್ ಕೊತ್ತಂಬರಿ ಬೀಜ ೨ಟೀಸ್ಪೂನ್ ಮೆಣಸು ½ ಅರ್ಧ ಟೀಸ್ಪೂನ್ ಜೀರಿಗೆ ½ ಟೀಸ್ಪೂನ್ ಮೆಂತ್ಯ ೧ಟೀಸ್ಪೂನ್ ಕೊಬ್ಬರಿ ೧ ಬಟ್ಟಲು ಬೆಲ್ಲ ೧ ಅಚ್ಚು ಅರಿಸಿನ ½ ಟೀಸ್ಪೂನ್ ಸಾಸಿವೆ ೧ ಟೀಸ್ಪೂನ್ ಮೆಣಸಿನ ಕಾಯಿ ೪೦ ಮಾಡುವ ವಿಧಾನ:- ಅನಾನಸ್ ಸಣ್ಣದಾಗಿ ಹೆಚ್ಚಿಕೊಂಡು ಬೆಲ್ಲ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೇಯಿಸುವುದು ನಂತರಮೇಲೆ ಹೇಳಿರುವ ಮಸಾಲೆಗಳನ್ನು ಹುರಿದು ಪುಡಿಮಾಡಿಟ್ಟುಕೊಂಡು ಅನಾನಸ್ ಚೆನ್ನಾಗಿ ಬೆಂದನಂತರ ಅದಕ್ಕೆ ಸೇರಿಸಿ ಕುದಿಸುವುದು. ಬಾದೂಷಾ ಮೈದಾಹಿಟ್ಟು ೧ಕಿಲೋ ಡಾಲ್ಡ ೪೦೦ಗ್ರಾಂ ಬಾಕಿಟ್ ಪೌಡರ್ ೧ ½ ಟೀಸ್ಪೂನ್ ಸಕ್ಕರೆ ೩ಕಿಲೋ ತುಪ್ಪ ೧ಬಟ್ಟಲು ಹುಳಿಮೊಸರು ೧ ಬಟ್ಟಲು ಮೈದಾಹಿಟ್ಟು ೪ಬಟ್ಟಲು ಸಕ್ಕರೆ ೪ಬಟ್ಟಲು ನೀರು ೪ಬಟ್ಟಲು ಉದ್ದಿನ ಹಪ್ಪಳ ಉದ್ದಿನ ಹಿಟ್ಟು ೧ಸೇರು ಮೆಂಣಸಿನಕಾಯಿ ೧ಹಿಡಿ ಮೆಣಸು ೧ಹಿಡಿ ಜೀರಿಗೆ ಅರ್ಧ ಹಿಡಿ ಹಪ್ಪಳದ ಕಾರ ೧ನಿಂಬೆಹಣ್ಣಿನ ಗಾತ್ರ ಬೆಳಗಾರ ೧ಗೋಲಿ ಗಾತ್ರ ನಿಂಬೆಹಣ್ಣು ೧ ಮಜ್ಜಿಗೆ ಹಾಕಿ ಗಟ್ಟಿಯಾಗಿ ಕಲೆಸುವುದು. ಬಿಳಿ ಚಕ್ಕುಲಿ ಅಕ್ಕಿ ೨ಪಾವು ಉದ್ದಿನ ಬೇಳೆ ೧ಪಾವು ಬೆಳಗಾರ ೧ಸೇರು ಹಿಟ್ಟಿಗೆ ೧ಟೀ ಸ್ಪೂನ್ ಹಾಕಬೇಕು ಉಪ್ಪು ರುಚಿಗೆ ತಕ್ಕಷ್ಟು ಎಳ್ಳು,ಡಾಲ್ಡ ೫೦+೫೦ಗ್ರಾಂ ಅಕ್ಕಿಯನ್ನು ತೊಳೆದು ನೆರಳಿನಲ್ಲಿ ಒಣಗಿಸಬೇಕು ಉದ್ದಿನ ಬೇಳೆಯನ್ನು ಕೆಂಪಾಗಿ ಹುರಿಯಬೇಕು. ಬೂದು ಕುಂಬಳಕಾಯಿ ಹಲ್ವ ಬೂದು ಕುಂಬಳಕಾಯಿ ೪ ಕಿಲೋ ಕೋವಾ ಅರ್ಧ ಕಿಲೋ ತುಪ್ಪ ಅರ್ಧ ಕಿಲೋ ಸಕ್ಕರೆ ಒಂದೂಕಾಲು ಕಿಲೋ ಚಿರೋಟಿ ರವೆ ಅರ್ಧ ಪಾವು ವಿಧಾನ:- ಕುಂಬಳ ಕಾಯನ್ನು ತುರಿದು ಆ ನೀರಿನ ಸಮೇತ ಕುಕ್ಕರಿನಲ್ಲಿಡುವುದು ಅದು ಬೆಂದ ನಂತರ ಆರಿಸಿಕೊಂಡು ಬಸಿದು ಎಲ್ಲವನ್ನು ಚೆನ್ನಾಗಿ ಹಿಂಡಿ ಒಂದು ಚೂರೂ ನೀರಿನಂಶ ಇಲ್ಲದಂತೆ ಹಿಂಡಿಕೊಳ್ಳುವುದು.ರವೆಯನ್ನು,ದ್ರಾಕ್ಷಿ,ಗೋಡಂಬಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳುವುದು. ಆನಂತರ ಬೇಯಿಸಿದ ಕುಂಬಳಕಾಯ ತುರಿಗೆ ಸಕ್ಕರೆಯನ್ನು ಸೇರಿಸಿ ಅಂಟು ಬರುವ ವರೆಗೆ ಕಲೆಸಿ ನಂತರ ಕೋವಾ ಮತ್ತು ರವೆಯನ್ನು ಚೆನ್ನಾಗಿ ಕಲೆಸಿ ಎಲ್ಲವನ್ನು ಕೂಡಿಸಿ ತುಪ್ಪವನ್ನು ಹಾಕಿ ಕೆಳಗಿಳಿಸುವುದು. ಮದ್ದೂರು ವಡೆ ಚಿರೋಟಿ ರವೆ ೨ಲೋಟ ಅಕ್ಕಿ ಹಿಟ್ಟು ೧ಲೋಟ ಮೈದಾಹಿಟ್ಟು ೧ಟೇಬಲ್ ಸ್ಪೂನ್ ಸೋಡಾ ಕಾಲು ಟೀಸ್ಪೂನ್ ಈರುಳ್ಳಿ ೫ದಪ್ಪ ಗೆಡ್ಡೆ ಹಸಿ ಮೆಣಸಿನಕಾಯಿ ೧೦ ಅಚ್ಚಕಾರದ ಪುಡಿ ೧ಟೀಸ್ಪೂನ್ ಕೊತ್ತಂಬರಿ,ಕರಿಬೇವು ಹುರಿದ ಕಡಲೇ ಕಾಯಿ ಬೀಜದ ಪುಡಿ ಒಂದು ಹಿಡಿ,ಕಾಯಿಸಿದ ಎಣ್ಣೆ ೧ಸಾರಿನ ಸೌಟು ಈ ಎಲ್ಲವನ್ನೂ ಬೆರೆಸಿ ಸ್ವಲ್ಪ ನೀರು ಹಾಕಿಕೊಂಡು ಕಲೆಸಿ ವಡೆಯಂತೆ ತಟ್ಟಿ ಬೇಯಿಸುವುದು ಹಿಟ್ಟನ್ನು ನಾದಬಾರದು. ಅಂಟಿನ ಉಂಡೆ ಖರ್ಜೂರ ಕಾಲು ಕಿಲೋ ಒಣ ದ್ರಾಕ್ಷಿ ೧೦೦ಗ್ರಾಂ ಗೋಡಂಬಿ ೧೦೦ಗ್ರಾಂ ಬಾದಾಮಿ ೫೦ಗ್ರಾಂ ಅಂಟು ೧೨೫ಗ್ರಾಂ ಲವಂಗ ೧೦ ಕೊಬ್ಬರಿ ಕಾಲು ಕಿಲೋ ತುಪ್ಪ ೧ಬಾಟಲ್(೧ಕಿಲೋ) ಗಸಗಸೆ ೧೦೦ಗ್ರಾಂ ಸಕ್ಕರೆ ಮುಕ್ಕಾಲು ಕಿಲೋ ಉದ್ದಿನ ಹಪ್ಪಳ ಉ ಬೇಳೆ ೧ಕಿಲೋ ಹೆ ಬೇಳೆ ಅರ್ಧ ಕಿಲೋ ಜೀರಿಗೆ ಸ್ವಲ್ಪ ಬೆಳಗಾರ ೫೦ಗ್ರಾಂ ಸೋಡಾ ಅರ್ಧ ಟೀಸ್ಪೂನ್ ಉಪ್ಪು ೧ಹಿಡಿ ಮೆಣಸು ೧ಹಿಡಿ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...