ಸಂತಾನಹೀನತೆ -ಒಂದು ಒಳನೋಟ.
ಪ್ರನಾಳ ಶಿಶು ಎಂದರೆ, ತಾಯಿಯ ದೇಹ ದಿಂದ ಹೊರಗೆ ಪ್ರಯೋಗಾಲಯದಲ್ಲಿ ಶಿಶು ವಿನ ಭ್ರೂಣಾವಸ್ಥೆ ಆರಂಭಗೊಂಡಿರುವ ಸ್ಥಿತಿ. ಮೊದಲ ಪ್ರನಾಳ ಶಿಶು ಸಾಧ್ಯವಾದದ್ದು 1978ರಲ್ಲಿ ಇಂಗ್ಲೆಂಡಿನಲ್ಲಿ. ಆ ಬಳಿಕ ಈಗ ವಿಶ್ವದಾದ್ಯಂತ ಸುಮಾರು 25,000 ಕ್ಕೂ ಮಿಕ್ಕಿ ಪ್ರನಾಳ ಶಿಶುಗಳಿದ್ದಾರೆ. ಈ ಪ್ರಕ್ರಿಯೆಯನ್ನು ಇನ್‌ವಿಟ್ರೊ (ದೇಹದ ಹೊರಗೆ) ಫಲೀಕರಣ ಎನ್ನುತ್ತಾರೆ. ಇದನ್ನು ಸರಳವಾಗಿ ವಿವರಿಸಬೇಕೆಂದರೆ, ತಾಯಿಯ ಅಂಡಾಶಯದಿಂದ ಅಂಡಾಣುಗಳನ್ನು ತೆಗೆದು, ತಂದೆಯ ವೀರ್ಯಾಣುಗಳ ಜೊತೆ ಪ್ರಯೋಗಾಲಯದಲ್ಲಿ ಕೃತಕ ಗರ್ಭಾಶಯದಲ್ಲಿ ಸಂಯೋಜಿಸಲಾಗುತ್ತದೆ. ಈ ಫಲೀಕರಣದ ಬಳಿಕ ""ಭ್ರೂಣಪೂರ್ವ' ಸಂಯೋಜಿತ ಕಣವನ್ನು 2-4 ಬಾರಿ ವಿಭಜನೆಗೊಳ್ಳಲು ಅನುವು ಮಾಡಿ ಕೊಟ್ಟು, ಆ ಬಳಿಕ ಭ್ರೂಣವನ್ನು ತಾಯಿಯ ಗರ್ಭಾಶಯದಲ್ಲಿ ಇರಿಸಿ ನೈಸರ್ಗಿಕವಾಗಿ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ತಾಯಿ ಅಥವಾ ತಂದೆಗೆ ಸಂತಾನ ಹೀನತೆ ಸಂಬಂಧಿ ತೊಂದರೆಗಳಿರುವಾಗ ನೈಸರ್ಗಿಕ ವಿಧಾನದಲ್ಲಿ ಗರ್ಭಧಾರಣೆ ಸಾಧ್ಯವಾಗದಿದ್ದಾಗ ಬಳಸಲಾಗುವ ಸಹಕರಿತ ಪ್ರಜನನ ತಂತ್ರಗಳಲ್ಲಿ (Assisted reprodutive technologies ART) ಇದೂ ಒಂದು ವಿಧಾನ.ಗರ್ಭಧಾರಣೆ ಯಾವತ್ತಿಗೂ ಅದೃಷ್ಟದಾಟ. ನೈಸರ್ಗಿಕವಾಗಿ ಗರ್ಭಧಾರಣೆ ಸಂಭವಿಸಲು ಯೋನಿಯಲ್ಲಿ ಸಂಭೋಗದ ವೇಳೆ ಸಂಗ್ರಹಿತವಾದ ವೀರ್ಯಾಣುಗಳು ಗರ್ಭಕೋಶದ ಕತ್ತು, ಗರ್ಭಾಶಯ, ಫೆಲೋಪಿಯನ್ ನಾಳದ ಹಾದಿಯಲ್ಲಿ ಈಜಿಕೊಂಡು ಸಾಗಿ, ಫೆಲೋಪಿಯನ್ ನಾಳಗಳಲ್ಲಿ ಸ್ತ್ರೀಯ ಬಲಿತ ಅಂಡಾಣುವನ್ನು ತಲುಪಬೇಕು. ಅಂಡಾಶ ಯದಿಂದ ಫೆಲೋಪಿಯನ್ ನಾಳಗಳ ನಡು ಭಾಗಕ್ಕೆ ಈ ವೇಳೆಗೆ ಬಲಿತ ಅಂಡಾಣು ತಲುಪಿ ರುತ್ತದೆ. ಈ ಮಿಲನದಿಂದ ಉಂಟಾಗುವ ಭ್ರೂಣ (ನಿಜಕ್ಕೆಂದರೆ ಇದಿನ್ನೂ ""ಭ್ರೂಣಪೂರ್ವ ಸ್ಥಿತಿ - pre embryo) ವು ಮೂರು ದಿನಗಳ ಕಾಲ ಅದೇ ಫೆಲೋಪಿಯನ್ ನಾಳದಲ್ಲಿ ಬಲಿಯುತ್ತದೆ. ಅಲ್ಲಿಂದ ಅದು ಗರ್ಭಾಶಯವನ್ನು ತಲುಪಿ, ಅಲ್ಲಿ ತೇಲುತ್ತಾ 3-4 ದಿನಗಳನ್ನು ಕಳೆಯುತ್ತದೆ ಮತ್ತು ಆ ಬಳಿಕ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುತ್ತದೆ. ಇಲ್ಲಿಗೆ ಗರ್ಭಧಾರಣೆ ಆದಂತೆ. ಮುಟ್ಟು ಆಗದೇ ನಿಂತ ಕೆಲವು ದಿನಗಳ ಮೊದಲು ಗರ್ಭಧಾರಣೆಯಾಗಿದೆಯೇ ಎಂದು ರಕ್ತ ತಪಾಸಣೆ ನಡೆಸಿದರೆ ಫಲಿತಾಂಶ ಧನಾ ತ್ಮಕವಾಗಿರುತ್ತದೆ. ಅಂಡಾಣು ವೀರ್ಯಾಣು ಮಿಲನದ ಒಂದು ವಾರದ ಬಳಿಕ ಫಲೀಕೃತ ಕಣವು ಗರ್ಭಾಶಯದಲ್ಲಿ ಸ್ಥಿರಗೊಂಡು "ಭ್ರೂಣ' ಅನ್ನಿಸಿ ಕೊಂಡಾಗ ಅದರಲ್ಲಿ ಬೆರಳೆಣಿಕೆಯ ಕೋಶಗಳು ಮಾತ್ರ ಭ್ರೂಣವಾಗಿ ಬೆಳೆಯುವಂತಹವಾಗಿರುತ್ತವೆ. ಉಳಿದೆಲ್ಲವೂ ಪ್ಲಾಸೆಂಟಾ ಆಗಿ ಮಾರ್ಪಡುತ್ತವೆ (ಮಾಸು)ಸಾಮಾನ್ಯವಾಗಿ ದಂಪತಿಗಳಲ್ಲಿ ಫಲವತ್ತತೆಯ ತೊಂದರೆಗಳಿಗೆ ಕಾರಣಗಳು ಈ ಕೆಳಗಿನಂತಿವೆ. ಕೆಲವರಲ್ಲಿ ಅಲ್ಪ ಪ್ರಮಾಣದ ತೊಂದರೆಗಳಿದ್ದರೆ ಇನ್ನು ಕೆಲವರು ಸಂಪೂರ್ಣವಾಗಿ ಸಂತಾನ ಹೀನತೆ ಸಂಬಂಧಿ ತೊಂದರೆಗಳನ್ನು ಹೊಂದಿರಬಹುದು.
1. ಅಂಡಾಣು ಬಿಡುಗಡೆಯಲ್ಲಿ ತೊಂದರೆ:ಮುಟ್ಟೇ ಆಗದಿರುವವರಲ್ಲಿ ( mehorrhoea) ಸಂಪೂರ್ಣ ಪ್ರಮಾಣದ ಸಂತಾನ ಹೀನತೆ ತೊಂದರೆ ಇರುತ್ತದೆ. ಆದರೆ ಇವರಲ್ಲಿ ಹೆಚ್ಚಿನವರಿಗೆ ಹಾರ್ಮೋನು ಅಥವಾ ಔಷಧಿ ಚಿಕಿತ್ಸೆಗಳು ಲಭ್ಯವಿವೆ. ಆದರೆ ಅಂಡಾಶಯದಲ್ಲಿ ಫಲವಂತಿಕೆ ಸಾಮರ್ಥ್ಯ ಇರುವ ಅಂಡಾಣುಗಳು ಇಲ್ಲದೇ ಹೋದರೆ ಇರುವ ಏಕೈಕ ಸಂಭಾವ್ಯ ಚಿಕಿತ್ಸೆ ಎಂದರೆ ಬೇರಾರಾದರೂ ಅಂಡಾಣು ಅಥವಾ ಭ್ರೂಣವನ್ನು ದಾನ ನೀಡುವುದು.
2. ವೀರ್ಯಾಣು ಉತ್ಪಾದನೆಯಲ್ಲಿ ತೊಂದರೆ: ಸ್ಖಲನದ ವೇಳೆ ವೀರ್ಯಾಣುಗಳೇ ಇಲ್ಲದಿರುವ ಸ್ಥಿತಿ ಇದ್ದರೆ, ಇದು ಸಂಪೂರ್ಣ ಪ್ರಮಾಣದ ಸಂತಾನಹೀನತೆ ತೊಂದರೆಗೆ ಕಾರಣವಾಗುತ್ತದೆ. ಆದರೆ ಇಂದು ಅಡ್ಡಿಗಳ ಕಾರಣದಿಂದಾಗಿ (ವೀರ್ಯಗಳ ಚಲನೆಗೆ ಅಡ್ಡಿ) ಉಂಟಾಗುವ ತೊಂದರೆಗಳಿಗೆ ಸಹಕರಿತ ಫಲೀಕರಣ ಚಿಕಿತ್ಸೆಗಳು ಲಭ್ಯ.
3. ಯೋನಿ - ಅಂಡಾಶಯಗಳ ನಡುವೆ ಅಡ್ಡಿ: ಯೋನಿಯಿಂದ ವೀರ್ಯಾಣು ಅಂಡಾಣುಗಳ ಬಳಿ ತಲುಪುವ ಹಾದಿಯಲ್ಲಿ ಅಡ್ಡಿಗಳಿದ್ದಾಗ (ಹೆಚ್ಚಾಗಿ ಫೆಲೋಪಿಯನ್ ನಾಳಗಳಲ್ಲಿ ಈ ರೀತಿಯ ಅಡಿ ಕಂಡು ಬರುತ್ತದೆ) ಇವನ್ನು ಕೆಲವೊಮ್ಮೆ ಸೂಕ್ಷ್ಮ ಶಸ್ತ್ರಕ್ರಿಯೆಗಳ ಮೂಲಕ ದುರಸ್ತಿ ಮಾಡಬಹುದು. ಅದು ಸಾಧ್ಯವಾಗದಲ್ಲಿ ಸಹಕರಿತ ಫಲೀಕರಣ ಸೌಲಭ್ಯ.
4. ಎಂಡೊಮೆಟ್ರಿಯಾಸಿಸ್: ಗರ್ಭಾಶಯದ ಒಳಗೋಡೆಯ ಅಂಗಾಂಶಗಳು (ಎಂಡೊಮೆಟ್ರಿಯಂ) ಗರ್ಭಾಶಯದಿಂದ ಹೊರಗೆ ಬೆಳೆಯಲಾರಂಭಿಸುವ ಸ್ಥಿತಿ ಇದು. ಹಾಗಾದಾಗ ಫಲೀಕರಣ - ಗರ್ಭಧಾರಣೆಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳಿಗೆ ತೊಂದರೆ ಸಂಭವಿಸುತ್ತದೆ. ಇದಕ್ಕೆ ಔಷಧಿಗಳು, ಶಸ್ತ್ರಕ್ರಿಯೆ ಅಥವಾ ಸಹಕರಿತ ಪ್ರಜನನದ ಚಿಕಿತ್ಸೆಗಳಿರುತ್ತವೆ. ಇದು ಆಂಶಿಕ ಸಂತಾನಹೀನತೆ ತೊಂದರೆಯ ಸ್ಥಿತಿ
ತಪಾಸಣೆಗಳು:
ಸಂತಾನಹೀನತೆ ತೊಂದರೆಗಳಿಗೆ ಈ ಕೆಳಗಿನ ತಪಾಸಣೆಗಳಿವೆ.
ರಕ್ತದಲ್ಲಿನ ಹಾರ್ಮೋನುಗಳ ಮಟ್ಟ ತಪಾಸಣೆ
ವೀರ್ಯಾಣು ಸಂಖ್ಯೆ (ವೀರ್ಯಾಣು ವಿಶ್ಲೇಷಣೆ)
ಗರ್ಭಾಶಯ ಮತ್ತು ಫೆಲೋಪಿಯನ್ ನಾಳಗಳ ಕ್ಷಕಿರಣ ಬಿಂಬ ತಪಾಸಣೆ (ಹಿಸ್ಟೆರೊಸಾಲ್ಫಿಂಗೊಗ್ರಾಂ) ಅಥವಾ
ಎಂಡೊಮೆಟ್ರಿಯಾಸಿಸ್, ಅಂಡನಾಳಗಳ ಅಡ್ಡಿಗಳ ತಪಾಸಣೆಗಾಗಿ ಲ್ಯಾಪ್ರೊಸ್ಕೋಪಿ.
ಈ ತಪಾಸಣೆಗಳಿಂದ ಈ ಕೆಳಗಿನ ಫಲಿತಾಂಶಗಳು ದೊರೆಯಬಹುದು.
ಎ ಸಂಪೂರ್ಣ ಸಂತಾನಹೀನತೆ (sterility)
ಅಂಡಾಶಯ ವೈಫಲ್ಯ, ಅಂಡಾಣು ಉತ್ಪಾದನೆ
ವೀರ್ಯಾಣುಗಳೇ ಇಲ್ಲದಿರುವಿಕೆ (azoospermia); ಅಥವಾ
ಆ. ಅಶಿಕ ಸಂತಾನಹೀನತೆ (Relative)
ಅಂಡಾಣು ಉತ್ಪಾದನೆ ನಿಯಮಿತವಾಗಿ ಆಗದಿರುವುದು ಅಥವಾ ಆಗದೇ ಇರುವುದು; ಇದನ್ನು ಚಿಕಿತ್ಸೆಯ ಮೂಲಕ ಆಂಶಿಕವಾಗಿ ಸರಿಪಡಿಸಬಹುದು.
ವೀರ್ಯಾಣು ಸಂಖ್ಯೆ ಹೆಚ್ಚಿಲ್ಲದಿರುವುದು.
ಫೆಲೋಪಿಯನ್ ನಾಳದಲ್ಲಿ ಅಡ್ಡಿ ಅಥವಾ ಅಂಡಾಶಯ ಅಥವಾ ನಾಳಗಳಲ್ಲಿ ಜಖಂ ಅಂಗಾಂಶಗಳ ಕಾರಣದಿಂದಾಗಿ ಅಡ್ಡಿ.
ಯಾವುದೇ ದರ್ಜೆಯ ಎಂಡೊಮೆಟ್ರಿಯಾಸಿಸ್
ಗರ್ಭಾಶಯದಲ್ಲಿ ಫೈಬ್ರಾಯ್ಡ ಗೆಡ್ಡೆಗಳು, ಪಾಲಿಪ್‌ಗ್ಳು ಅಥವಾ ಗರ್ಭಾಶಯದ ಗೋಡೆಯಲ್ಲಿ ಜಖಂ ಅಂಗಾಂಶಗಳು.
ಈ ಹಿಂದೆ ಕೋನ್ ಬಯಾಪ್ಸಿ ಆಗಿರುವುದು ಅಥವಾ ಉರಿಯೂತ ಆಗಿರುವ ಕಾರಣದಿಂದಾಗಿ ಗರ್ಭಾಶಯದ ಕತ್ತಿನಲ್ಲಿ ಅಸಹಜತೆಗಳು.
ವೀರ್ಯಾಣುಗಳನ್ನು ಸ್ತ್ರೀಯ ಅಥವಾ ಪುರುಷನ ದೇಹದ ರೋಗ ನಿರೋಧಕ ವ್ಯವಸ್ಥೆ ಶತ್ರುವೆಂದು ಭ್ರಮಿಸಿ ನಾಶ ಮಾಡುವುದು. ಫೆಲೋಪಿಯನ್ ನಾಳಗಳಲ್ಲಿ ಕೆಲವು ತೊಂದರೆಗಳು. ಈ ಎಲ್ಲ ಅಸಹಜತೆಗಳಿಗೂ ಚಿಕಿತ್ಸೆ ಸುಲಭವಲ್ಲ. ಅಲ್ಲದೆ, ಈ ತೊಂದರೆಗಳು ಒಂದಕ್ಕಿಂತ ಹೆಚ್ಚು ಇರುವಾಗ ಚಿಕಿತ್ಸೆಗಳೂ ಪರಿಣಾಮಕಾರಿ ಆಗದೆ ಹೋಗಬಹುದು. ಒಂದಕ್ಕೆ ನೀಡುವ ಚಿಕಿತ್ಸೆ ಇನ್ನೊಂದಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು. ಕೆಲವರಲ್ಲಿ ಯಾವುದೋ ಅಸಹಜತೆ ಪತ್ತೆ ಆಗದಿರಬಹುದು. "ವಿವರಿಸಲು ಸಾಧ್ಯವಾಗದ ಸಂತಾನಹೀನತೆ ತೊಂದರೆ' ಎಂದು ಕರೆಯಲಾಗುವ ಈ ಸ್ಥಿತಿ ಕೂಡ ಆಂಶಿಕ ಸಂತಾನ ಹೀನತೆಯ ತೊಂದರೆ. ಕೆಲವು ತೊಂದರೆಗಳಿಗೆ ಸರಳವಾದ ಔಷಧಿ ಚಿಕಿತ್ಸೆ ಸಾಕಾಗುತ್ತದೆ. ಅಥವಾ ಸಣ್ಣ ಶಸ್ತ್ರ ಕ್ರಿಯೆ ಸಾಕಾಗುತ್ತದೆ. ಈ ಚಿಕಿತ್ಸೆಗಳ ಉದ್ದೇಶ ಗರ್ಭ ಧರಿಸುವ ಸಾಮರ್ಥ್ಯವನ್ನು ಸಹಜಗೊಳಿಸುವುದು. ಹೀಗಾದಾಗಲೂ ಸಹಜವಾಗಿ ಗರ್ಭಧಾರಣೆ ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಇದು ಸಾಧ್ಯವಾಗದಿದ್ದರೆ ಸಹಕರಿತ ಪ್ರಜನನ ತಂತ್ರ ಬಳಸಬೇಕಾಗುತ್ತದೆ. ಈ ಸಹಕರಿತ ಪ್ರಜನನ ತಂತ್ರಗಳು ಅದನ್ನು ನೀಡಲಾದ ತಿಂಗಳಿನಲ್ಲಿ ಗರ್ಭಧಾರಣೆಯ ಸಾಧ್ಯತೆಗಳನ್ನು ಗಮರ್ನಾಹವಾಗಿ ಹೆಚ್ಚಿಸುತ್ತವೆ.
ಸಹಕರಿತ ಪ್ರಜನನ ವಿಧಾನಗಳುಗರ್ಭಾಶಯಕ್ಕೆ ವೀರ್ಯಾಣು ತಲುಪಿಸುವುದು (ಐnಠಿrಚ uಠಿಛಿrಜಿnಛಿ ಜಿnsಛಿಞಜಿnಚಠಿಜಿಟn ಐಖೀಐ)ಇಂದು ಸರಳ ತಂತ್ರವಾಗಿದ್ದು ಇಲ್ಲಿ ಪತಿಯ ಅಥವಾ ಆವಶ್ಯಕತೆ ಇದ್ದಲ್ಲಿ ದಾನಿಯ ವೀರ್ಯಾಣುವನ್ನು ಒಂದು ಕ್ಯಾಥೆಟರ್ ಮೂಲಕ ಗರ್ಭಾಶಯಕ್ಕೆ ತಲುಪಿಸಲಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಅಥವಾ ವಿವರಿಸಲು ಸಾಧ್ಯವಾಗದ ಸಂತಾನ ಹೀನತೆ ಇದ್ದಾಗ ಈ ತಂತ್ರಬಳಕೆ ಆಗುತ್ತದೆ. ಪ್ರಯೋಗಾಲಯದಲ್ಲಿವೀರ್ಯಾಣು ವನ್ನು ವೀರ್ಯದ್ರವದಿಂದ ಪ್ರತ್ಯೇಕಿಸಿ, ಅಲ್ಪ ಪ್ರಮಾಣದ ಕ್ರಿಮಿಮುಕ್ತ ಮಾಧ್ಯಮವೊಂದ ರಲ್ಲಿ ಇರಿಸಲಾಗುತ್ತದೆ. ಅಲ್ಲಿ ವೀರ್ಯಾಣು ಜೀವಂತ, ಚಲನಶೀಲವಾಗಿ ಉಳಿಯುತ್ತದೆ. ದೇಹದ ಹೊರಗಡೆ ಫಲೀಕರಣ ಫೆಲೋಪಿಯನ್ ನಾಳಗಳಲ್ಲಿ ಚಿಕಿತ್ಸೆ ನೀಡಲಾಗದ ಅಡ್ಡಿ ಅಥವಾ ಅಂಡನಾಳಗಳೇ ಇಲ್ಲದ ಸ್ಥಿತಿಗಳಲ್ಲಿ ಈ ಚಿಕಿತ್ಸಾ ವಿಧಾನ ಬಳಕೆಯಾಗುತ್ತದೆ. ಬೇರೆ ವಿಧಾನಗಳು ವಿಫಲಗೊಂಡಾಗ ಅಥವಾ ವಿವರಿಸಲಾಗದ ಸಂತಾನ ಹೀನತೆ ತೊಂದರೆ ಇರುವಾಗಲೂ ಈ ವಿಧಾನ ಬಳಕೆಯಾಗುತ್ತದೆ. ಐVಊ ಗೆ ಅಗತ್ಯ.ಇರುವಷ್ಟು ಅಂಡಾಣುಗಳನ್ನು ಪಡೆಯಲು ಎರಡು ವಾರಗಳ ತನಕ ಹಾರ್ಮೋನು ನೀಡಿ ಅಂಡಾಶಯಗಳನ್ನು ಪ್ರಚೋದಿಸಲಾಗಿರುತ್ತದೆ. ಫಲೀಕರಣಕ್ಕೆ 2 ಗಂಟೆಗಳ ಮೊದಲು ನೇರವಾಗಿ ಅಂಡಾಶಯದಿಂದ ಅಂಡಾಣುಗಳನ್ನು ಪಡೆಯಲಾಗುತ್ತದೆ. ಅಲ್ಟ್ರಾಸೌಂಡ್ ತಂತ್ರ ಬಳಸಿ ಯೋನಿಯ ಮೂಲಕ ಹೀರಿ ಅಂಡಾಣುಗಳನ್ನು ತೆಗೆಯಲಾಗುತ್ತದೆ. ಅದನ್ನು ಪ್ರಯೋಗಾಲಯದ ಸೂಕ್ತ ವಾತಾವರಣದಲ್ಲಿ ವೀರ್ಯಾಣುಗಳ ಜೊತೆ ಸಂಯೋಜಿಸಲಾಗುತ್ತದೆ. 2 ದಿನಗಳ ಬಳಿಕ ಅವುಗಳಲ್ಲಿ ಭ್ರೂಣ ಪೂರ್ವ ಸ್ಥಿತಿ ತಲುಪಿರುವ ಕೆಲವು ಫಲೀಕೃತ ಕಣಗಳನ್ನು ಗರ್ಭಕೋಶದ ಕತ್ತಿನ ಮೂಲಕ ಗರ್ಭಾಶಯಕ್ಕೆ ತಲುಪಿಸಲಾಗುತ್ತದೆ. ವೀರ್ಯಾಣುಗಳು ನೇರವಾಗಿ ಮತ್ತು ಕ್ಷಿಪ್ರವಾಗಿ ಅಂಡಾಣುಗಳ ಬಳಿ ತಲುಪುವುದರಿಂದ ಫಲೀಕರಣ ಬಹು ತೇಕ ಖಚಿತವಾಗಿ ಆಗುತ್ತದೆ. ಮತ್ತು ಬೆಳೆದ ಭ್ರೂಣಗಳನ್ನು ಗರ್ಭಾಶಯಕ್ಕೆ ತಲುಪಿಸಲಾಗುತ್ತದೆ. ಈ ಒಂದು ಚಿಕಿತ್ಸಾ ವಧಿಯಲ್ಲಿ ಗರ್ಭಾಶಯ ತಲುಪಿದ ಭ್ರೂಣ ಅಲ್ಲಿ ಕಚ್ಚಿ ನಿಂತು ಗರ್ಭಧಾರಣೆಗೆ ಹಾದಿಯಾಗುವ ಸಾಧ್ಯತೆ 40%. ಇದಕ್ಕೆ ಮಹಿಳೆಯ ಪ್ರಾಯ ಕೂಡ ಬಹಳ ಮುಖ್ಯವಾದ ಪೂರಕ ಅಂಶ. ವೀರ್ಯಾಣುಗಳಲ್ಲಿ ತೀವ್ರ ತೊಂದರೆ ಇದ್ದಾಗ, ಅಂದರೆ ವಿಶೇಷವಾಗಿ ಸ್ಖಲನದಿಂದ ಕೆಲವೇ ಕೆಲವು ಆರೋಗ್ಯ ವಂತ ವೀರ್ಯಾಣುಗಳನ್ನು ಮಾತ್ರ ಬೇರ್ಪಡಿಸಲು ಸಾಧ್ಯವಾದರೆ (ಕೆಲವೊಮ್ಮೆ ವೀರ್ಯಾಣುಗಳನ್ನು ನೇರವಾಗಿ ವೃಷಣಗಳಿಂದಲೇ ತೆಗೆದುಕೊಳ್ಳಬೇಕಾಗಬಹುದು) ಆಗ ಸೂಕ್ಷ್ಮ ಕಾರ್ಯಾಚರಣೆ ತಂತ್ರ (ಞಜಿcrಟಞಚnಜಿಟulಚಠಿಜಿಟn) ಬಳಸಿ ವೀರ್ಯಾಣುವನ್ನು ನೇರ ವಾಗಿ ಅಂಡಾಣುವಿನೊಳಗೆ ತಲುಪಿಸು ವುದು ಸಾಧ್ಯವಿದೆ. ಇದನ್ನು ಇಂಟ್ರಾ ಸೈಟೊಪ್ಲಾಸ್ಮಿಕ್ ಸ್ಟರ್ಮ್ ಇಂಜೆಕ್ಷನ್ ಐಇಖಐ ಎಂದು ಕರೆಯಲಾಗುತ್ತದೆ. ಅಂಡಾಶಯ ಕಾರ್ಯಾಚರಿಸದ ಮತ್ತು 40 ವರ್ಷ ಪ್ರಾಯ ದಾಟಿದ್ದು, ಅಂಡಾಣು ಗುಣಮಟ್ಟ ಚೆನ್ನಾಗಿಲ್ಲದಿರುವ ಮಹಿಳೆಯರಿಗೆ ದಾನಿಗಳ ವೀರ್ಯಾಣು, ಅಂಡಾಣು ಬಳಕೆಯನ್ನು ಸೂಚಿ ಸಲಾಗುತ್ತದೆ. ಅವರು ತಮ್ಮ ಸಹೋ ದರಿಯ ಅಂಡಾಣು ಅಥವಾ ಬೇರೊಬ್ಬ ಮಹಿಳೆಯ ಅಂಡಾಣುವನ್ನು ಬಳಸಬಹುದು. ಅದೇ ರೀತಿ ಜೀನು ಸಂಬಂಧಿ ತೊಂದರೆಗಳಿರುವ, ವೀರ್ಯಾಣು ಗಳೇ ಇಲ್ಲದ ಪುರುಷರಿಗೆ ವೀರ್ಯಾಣು ಬ್ಯಾಂಕ್ ಸೌಲಭ್ಯ ಕೂಡ ಇದೆ. ರೋಗಿಗಳಿಗೆ ತಮ್ಮ ತೊಂದರೆ ಮತ್ತು ಅದರ ಚಿಕಿತ್ಸೆಗಳಲ್ಲಿ ಇರುವ ಮಿತಿಗಳ ಬಗ್ಗೆ ಅರ್ಥವಾದರೆ, ವೈದ್ಯರಿಗೆ ತಮ್ಮ ರೋಗಿಗಳ ಜೊತೆ ವ್ಯವಹರಿಸುವುದು ಸುಲಭವಾಗುತ್ತದೆ. ಈ ಚಿಕಿತ್ಸೆಗಳಲ್ಲೂ ಫಲಿತಾಂಶ ನೂರಕ್ಕೆ ನೂರು ಖಚಿತವಲ್ಲ. ಇವೆಲ್ಲದರ ಅರಿವಿದ್ದಾಗ ಮಾತ್ರ ಸುಸಂಬದ್ಧ ವೈದ್ಯಕೀಯ ಚಿಕಿತ್ಸಾ ನಿರ್ಧಾರಗಳನ್ನು ಕೈಗೊಳ್ಳುವುದು ಸಾಧ್ಯ. IVF ಅಥವಾ ICSI ತಂತ್ರಗಳು ಗರ್ಭಧಾರಣೆಯ ಸಾಧ್ಯತೆಯನ್ನು 4-5 ಪಟ್ಟು ಹೆಚ್ಚಿಸಬಲ್ಲವು. ಅದು ಆ ಚಿಕಿತ್ಸೆ ಆದ ತಿಂಗಳಿಗೆ ಮಾತ್ರ ಅನ್ವಯ. ಈ ಚಿಕಿತ್ಸೆ ಗರ್ಭಧಾರಣೆಗೆ ಕಾರಣ ಆಗುತ್ತದೆಯೇ ಎಂಬುದು ಚಿಕಿತ್ಸೆ ಇಲ್ಲದ ಸ್ಥಿತಿಯಷ್ಟೇ ಅನಿರ್ದಿಷ್ಟ ಮತ್ತು ಭಾಗಶಃ ಅದೃಷ್ಟ ಆಧರಿತ. ಈ ಪ್ರತಿಯೊಂದು ನಿರ್ಧಾರಗಳೂ ಆವಶ್ಯಕತೆ, ಆತಂಕ ಆದ್ಯತೆಗಳು ಮತ್ತು ಪರ್ಯಾಯಗಳನ್ನು ಆಧರಿಸಿ ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಾದವು. ಮಹಿಳೆ ಈ ನಿರ್ಧಾರವನ್ನು ತನ್ನ ಸಂಗಾತಿ, ಕುಟುಂಬ ಹಾಗೂವೈದ್ಯರ ಜೊತೆ ಚರ್ಚಿಸಿ ತೆಗೆದುಕೊಳ್ಳಬೇಕಾಗುತ್ತದೆ. ಹೀಗಿದ್ದೂ, ಆಧುನಿಕ ತಂತ್ರಜ್ಞಾನವು ಸಂತಾನ ಹೀನತೆಯ ನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದು, ಹಲವು ದಂಪತಿಗಳಿಗೆ ಸಂತಾನ ಪಡೆಯುವಲ್ಲಿ ಸಹಕರಿಸಿದೆ.
-ಡಾ| ಪ್ರತಾಪ್ ಕುಮಾರ್ ಪ್ರೊಫೆಸರ್ ಹೆರಿಗೆ ಮತ್ತು ಸ್ತ್ರೀ ರೋಗಗಳ ವಿಭಾಗ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments