ಧ್ಯಾನ ಮತ್ತು ಯೋಗ ಕೇವಲ ಪವಾಡ ಪುರುಷರು ಮತ್ತು ಯೋಗಿಗಳಿಗೆ ಮಾತ್ರವೆಂಬುದು ಹಲವಾರ ನಂಬಿಕೆಯಾಗಿದೆ. ಧ್ಯಾನವು ಒಂದು ಧಾರ್ಮಿಕ ಅನುಭವವಲ್ಲ. ಇದೊಂದು ಧಾರ್ಮಿಕ ಕ್ರಿಯೆಯಾಗಿದೆ ಎಂದು ನೀವು ಹೇಳಬಹುದು ಆದರೆ ಇದು ಆರೋಗ್ಯದ ದೃಷ್ಟಿಯಿಂದ ಪವಾಡ ಸದೃಶವಾದುದು. ನಿಮಗೆ ತಿಳಿಯದೇ ಇರುವ ಕೆಲವೊಂದು ಮಹತ್ವಕಾರಿ ಪ್ರಯೋಜನಗಳು ಧ್ಯಾನದಿಂದ ಇದೆ. ಇದು ನಿಮ್ಮ ಆಂತರಿಕ ಆರೋಗ್ಯವನ್ನು ಮಾತ್ರ ಸುಧಾರಿಸದೇ ಬಾಹ್ಯ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಏಕೆಂದರೆ ನಿಮ್ಮ ಆಂತರಿಕ ಆರೋಗ್ಯವನ್ನು ನಿರ್ವಹಿಸುವುದು ನಿಮ್ಮ ದೈಹಿಕ ಸ್ವಾಸ್ಥ್ಯವಾಗಿದೆ. ಒತ್ತಡ ನಿವಾರಣೆಗಾಗಿ ಧ್ಯಾನವನ್ನು ಅಭ್ಯಾಸ ಮಾಡುವುದು ಈ ದಿನಗಳಲ್ಲಿ ಆರೋಗ್ಯಕಾರಿ ಅಂಶಗಳಲ್ಲಿ ಒಂದು. ಪ್ರತಿಯೊಬ್ಬರೂ ತೂಕ ಇಳಿಸುವುದಕ್ಕಾಗಿ, ಒತ್ತಡ ನಿವಾರಣೆಗಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ. ಧ್ಯಾನವನ್ನು ಸರಿಯಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮಹತ್ವಪೂರ್ಣವಾಗಿದೆ. ನೀವು ಇದನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರವೇ ಧ್ಯಾನ ನಿಮಗೆ ಪರಿಣಾಮಕಾರಿಯಾಗಿರುವುದು. ಇಲ್ಲದಿದ್ದರೆ ಇದು ಬರಿಯ ವ್ಯಾಯಾಮ ಎಂದೆನಿಸುತ್ತದೆ. ನೀವು ಧ್ಯಾನವನ್ನು ಮಾಡುವಾಗ ಪೂರ್ಣ ಏಕಾಗ್ರತೆಯಲ್ಲಿರುವುದು ಅತೀ ಅಗತ್ಯವಾಗಿದೆ. ಫೋನ್ ಕರೆಗಳನ್ನು, ಇಮೇಲ್ ಸ್ವೀಕರಿಸಲು, ಸಂದೇಶ ರವಾನಿಸಲು ಹೀಗೆ ಪ್ರತೀ ಐದು ನಿಮಿಷಗಳಿಗೊಮ್ಮೆ ನಿಮ್ಮ ಫೋನ್ ಅನ್ನು ಪರಿಶೀಲಿಸುವ ಚಂಚಲ ಮನಸ್ಸು ನಿಮ್ಮದಾಗಿರಬಾರದು. ಪರಿಪೂರ್ಣ ಏಕಾಗ್ರತೆ ಧ್ಯಾನಕ್ಕೆ ಅತೀ ಅಗತ್ಯವಾದುದು. ಹಾಗಿದ್ದರೆ ಇಂದಿನ ಲೇಖನದಲ್ಲಿ ಧ್ಯಾನದ ಕೆಲವೊಂದು ಪ್ರಯೋಜನಗಳನ್ನು ಅರಿತುಕೊಳ್ಳೋಣ. ಸುಖ ನಿದ್ರೆಗೆ ಮಾಡಬೇಕಾದ ಯೋಗಾಸನಗಳು
ಒತ್ತಡ ನಿವಾರಣೆ ಧ್ಯಾನದಿಂದ ಒತ್ತಡ ನಿವಾರಣೆಯಾಗುತ್ತದೆ. ನೀವು ಧ್ಯಾನ ಮಾಡಿದಾಗ ಮನದಲ್ಲಿರುವ ಒತ್ತಡ ನಿವಾರಣೆಯಾಗಿ ದೇಹ ಹಗುರವಾಗುತ್ತದೆ. ನಿಮ್ಮ ದೇಹದಲ್ಲಿರುವ ಒತ್ತಡವನ್ನುಂಟುಮಾಡುವ ಹಾರ್ಮೋನುಗಳು ಹೊರಹೋಗುತ್ತವೆ. ಧ್ಯಾನವನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರವೇ ಈ ಅನುಭವ ನಿಮಗುಂಟಾಗುತ್ತದೆ.
ನಿದ್ರೆ ಮಾಡಲು ಸಹಾಯಕ ಒತ್ತಡದಿಂದ ನಿದ್ರೆ ನಿಮ್ಮ ಬಳಿ ಸುಳಿಯುವುದಿಲ್ಲ. ರಾತ್ರಿ ಆಗಾಗ್ಗೆ ನಾವು ಎಚ್ಚರಗೊಳ್ಳುವುದರಿಂದ ನಮಗೆ ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ಧ್ಯಾನವು ಈ ನಿದ್ರೆಯನ್ನು ಬರಿಸಲು ಒಂದು ನೈಸರ್ಗಿಕ ಪರಿಹಾರವಾಗಿದೆ.
ಸಿಟ್ಟನ್ನು ನಿಯಂತ್ರಿಸುತ್ತದೆ ಕೋಪ, ಸಿಟ್ಟು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ನೀವು ಕೋಪಗೊಂಡಾಗ ನಿಮ್ಮ ನ್ಯೂರೋನ್‌ಗಳು ಹಾನಿಯಾಗುತ್ತವೆ ಮತ್ತು ನಿಮ್ಮ ರಕ್ತದೊತ್ತಡ ಅಧಿಕವಾಗುತ್ತದೆ. ನೀವು ನಿಯಮಿತವಾಗಿ ಯೋಗವನ್ನು ಮಾಡಿದಾಗ ಈ ಕೋಪ ನಿಯಂತ್ರಣಕ್ಕೆ ಬರುತ್ತದೆ.
ನಿಮ್ಮನ್ನು ಫಲವಂತನ್ನಾಗಿಸುತ್ತದೆ ನೀವು ವಿರಾಮ ಹೊಂದಿದಾಗ ನೀವು ಫಲವತ್ತಾಗಿರುವ ಸಾಧ್ಯತೆ ಹೆಚ್ಚು ಇದೆ. ಹೆಚ್ಚಾಗಿ ಮಹಿಳೆಯರಲ್ಲಿ, ನೀವು ಧ್ಯಾನ ಮತ್ತು ಒತ್ತಡರಹಿತರಾಗಿ ಇದ್ದಾಗ ಗರ್ಭಧಾರಣೆ ಹೆಚ್ಚಾಗುತ್ತದೆ.
ರಕ್ತದೊತ್ತಡ ಕಡಿಮೆ ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆ ಮಾಡುವ ಚಿಕಿತ್ಸೆ ಎಂದರೆ ಯೋಗವಾಗಿದೆ. ಇದು ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡಿ ನಿಮ್ಮ ಮನಸ್ಸನ್ನು ನಿರಾಳವಾಗಿಸುತ್ತದೆ.
ಭಾವನಾತ್ಮಕ ಸುದೃಢತೆ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಖಿನ್ನತೆಗೆ ಧ್ಯಾನವು ಒಂದು ಉತ್ತಮ ಪರಿಹಾರವಾಗಿದೆ.
ಉಸಿರಾಟ ತೊಂದರೆಗಳ ನಿವಾರಣೆ ನೀವು ಧ್ಯಾನ ಮಾಡಿದಾಗ, ನೀವು ನಿಧಾನವಾಗಿ ಏಕಪ್ರಕಾರವಾಗಿ ಉಸಿರಾಡುತ್ತೀರಿ. ಉಸಿರಾಟ ಸಮಸ್ಯೆಗಳನ್ನು ಹೊಂದಿರುವವರಿ ಧ್ಯಾನ ಮಾಡುವಿಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಹೆಚ್ಚುವರಿ ಆಮ್ಲಜನಕವನ್ನು ಈ ಸಮಯದಲ್ಲಿ ಸೇವಿಸುವುದರಿಂದ ಇದು ಪ್ರಯೋಜನಕಾರಿಯಾಗಿದೆ.
ರೋಗನಿರೋಧಕ ಶಕ್ತಿ ನೀವು ನಿಮಯಮಿತವಾಗಿ ಯೋಗ ಮಾಡುವುದು, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ನೀವು ಧ್ಯಾನಸ್ಥಿತಿಯಲ್ಲಿದ್ದಾಗ ಹೆಚ್ಚು ಆಳವಾಗಿ ಉಸಿರಾಡುತ್ತೀರಿ ಮತ್ತು ಹೆಚ್ಚು ಆಮ್ಲಜನಕವನ್ನು ಪಡೆದುಕೊಳ್ಳುತ್ತೀರಿ.
ಸ್ನಾಯು ಸೆಳೆತವನ್ನು ನಿವಾರಿಸುತ್ತದೆ ಒತ್ತಡವು ನಿಮ್ಮ ಸ್ನಾಯುಗಳನ್ನು ತೀವ್ರ ನೋವುಂಟು ಮಾಡುತ್ತದೆ. ಧ್ಯಾನವು ನಿಮ್ಮ ಒತ್ತಡವನ್ನು ನಿವಾರಿಸಿ ಸ್ನಾಯು ಸೆಳೆತವನ್ನು ದೂರಮಾಡುತ್ತದೆ.
ಸ್ಮರಣ ಶಕ್ತಿ ಹೆಚ್ಚಳ ನಿಮ್ಮ ಗ್ರಹಣ ಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಧ್ಯಾನವು ಹೆಚ್ಚಿಸುತ್ತದೆ. ಇದು ಮರೆವಿನ ಕಾಯಿಲೆಯನ್ನು ನಿವಾರಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಿತ್ಯವೂ ಯೋಗ ಮಾಡುವುದು ನಿಮ್ಮ ಗ್ರಹಣ ಶಕ್ತಿಯನ್ನು ಹೆಚ್ಚಿಸಿ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments