Skip to main content

ಜನ್ಮ ಕುಂಡಲಿಯಲ್ಲಿ ವಿವಾಹಯೋಗ

ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಿಂದ ಸತಿ ಪತಿಯರ ವಿಚಾರವನ್ನು ಪರಿಶೀಲಿಸಬೇಕು. *ಸಪ್ತಮೇಶನು ಶುಭ ಗ್ರಹವಾಗಿದ್ದರೆ ಶುಕ್ರನು ಸ್ವಕ್ಷೇತ್ರ ಅಥವ ಉಚ್ಚದಲ್ಲಿದ್ದರೆ ಜಾತಕನ ವಿವಾಹವು ೧೯ನೇ ವಯಸ್ಸಿನಲ್ಲಾಗುತ್ತದೆ *ರವಿಯು ಸಪ್ತಮದಲ್ಲಿದ್ದು ಶುಕ್ರನಿಂದ ಯುಕ್ತವಾಗಿದ್ದರೆ ೨೧ನೇ ವರ್ಷದೊಳಗೆ ವಿವಾಹವಾಗುತ್ತದೆ. *ಲಗ್ನ ಕುಂಡಲಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಟುಂಬ ಸ್ಥಾನ ವೆಂದು ಕರೆಯುತ್ತಾರೆ. *ಲಗ್ನದ ಸಪ್ತಮ ಸ್ಥಾನವನ್ನು ಪತ್ನಿಸ್ಥಾನ ವೆನ್ನುವರು ೨ ಮತ್ತು ೭ನೇ ಸ್ಥಾನದಲ್ಲಿ ಶುಭಗ್ರಹಗಳು ಇದ್ದರೆ ವಿವಾಹ ಜೀವನ ಸುಖವಾಗಿರುತ್ತದೆ ಗುರು ಶುಕ್ರ ಲಗ್ನ ಅಥವ ಸಪ್ತಮದಲ್ಲಿದ್ದರೆ ೨೦ನೇ ವರ್ಷಕ್ಕೆ ವಿವಾಹವಾಗುತ್ತದೆ. *೭ನೇ ಸ್ಥಾನಾಧಿಪತಿ ೧೧ನೇಲಾಭಸ್ಥಾನದಲ್ಲಿದ್ದರೆ ೨೦ನೇ ವರ್ಷಕ್ಕೆ ವಿವಾಹವಾಗುತ್ತದೆ ಎಂದು ತಿಳಿಯಬೇಕು. *ಶುಕ್ರ ಮತ್ತು ಏಕಾದಶದಲ್ಲಿರುವ ಸಪ್ತಮೇಶರು ಶುಭದಯಕವಾಗಿದ್ದರೆ ಶುಭಫಲ,ನೀಚರಾದರೆ ಅಶುಭಫಲ ವಿವಾಹವೇ ಆಗುವುದಿಲ್ಲವೆಂದು ಹೇಳಬೇಕು. *ಶುಕ್ರನು ಕೇಂದ್ರದಲ್ಲಿದ್ದು ಲಗ್ನಾಧಿಪತಿಯು ಕುಂಭ,ಮಕರ ರಾಶಿಯಲ್ಲಿದ್ದರೆ ೨೧ನೇ ವರ್ಷಕ್ಕೆ ವಿವಾಹವಾಗುತ್ತದೆ,ಎಂದು ತಿಳಿಯಬೇಕು. *ಕುಟುಂಬಸ್ಥಾನ,ಸಪ್ತಮಸ್ಥಾನ,ಶುಕ್ರಸ್ಥಾನ ಲಗ್ನೇಶಸ್ಥಾನಗಳಲ್ಲಿ ವಿವೇಚಿಸಬೇಕು.ಕೇಂದ್ರದಲ್ಲಿ ಶುಕ್ರನಿಂದ ಅವನ ೭ನೇಸ್ಥಾನದಲ್ಲಿ ಶನಿ ಇದ್ದರೆ ೨೯ನೇ ವರ್ಷಕ್ಕೆ ವಿವಾಹಯೋಗ ಎಂದು ನಿರ್ದರಿಸಬೇಕು. *ಚಂದ್ರನು ಸಪ್ತಮದಲ್ಲಿದ್ದು ಏಕಾಕ್ಷಿಯು (ಶುಕ್ರ)೭ನೇ ಸ್ಥಾನದಲ್ಲಿದ್ದು೭ನೇ ಸ್ಥಾನದಲ್ಲಿ ಶನಿಗ್ರಹ ಇದ್ದರೆ ೨೮ನೇ ವರ್ಷಕ್ಕೆ ವಿವಾಹ ಆಗುವುದೆಂದು ನಿರ್ದರಿಸಬೇಕು. *ಕುಟುಂಬ ಸ್ಥಾನಾಧಿಪತಿಯು(ದ್ವಿತಿಯಾದಿಪತಿಯು)ಏಕಾದಶದಲ್ಲಿದ್ದರೆ ಲಗ್ನೇಶನು ದಶಮದಲ್ಲಿದ್ದರೆ ೨೮ನೇ ವಯಸ್ಸಿನಲ್ಲಿ ವಿವಾಹವಾಗುತ್ತದೆ ಎಂದು ತಿಳಿಯಬೇಕು. *ಕುಟುಂಬಸ್ಥಾನಾದಿಪತಿ೧೧ರಲ್ಲಿ ಲಾಭ ಸ್ಥಾನಾಧಿಪತಿ ಕುಟುಂಬಸ್ಥಾನದಲ್ಲಿ ಪರಿವರ್ತನೆ ಗೊಂಡಿದ್ದರೆ ೨೩ನೇ ವರ್ಷದಲ್ಲಿ ವಿವಾಹವಾಗುತ್ತದೆ. *ಅಷ್ಟಮದಲ್ಲಿ ಶುಕ್ರ ಅಷ್ಟಮಾದಿಪತಿ ಮಂಗಳನಿಂದ ಮುಕ್ತನಾಗಿದ್ದರೆ ೨೭ನೇ ವರ್ಷದಲ್ಲಿ ವಿವಾಹವಾಗುತ್ತದೆ. *೭ನೇ ಮನೆಯ ಅಧಿಪತಿ ವ್ಯಯಸ್ಥಾನ,ಸಪ್ತಮಸ್ಥಾನದ ರಾಶಿಯ ನವಾಂಶದಲ್ಲಿ ಲಗ್ನವಿದ್ದರೆ ೩೩ರಿಂದ ೩೬ನೆಯ ವರ್ಷದಲ್ಲಿ ವಿವಾಹವಾಗುತ್ತದೆ. *ನವಾಂಶ ಕುಂದಲಿಯ ಲಗ್ನದಲ್ಲಿ ಶುಕ್ರನಿದ್ದು ನವಾಂಶದ ಅಷ್ಟಮಭಾವದ ರಾಶಿ ಲಗ್ನ ಕುಂಡಲಿಯ ಸಪ್ತಮ ಸ್ಥಾನವಾದರೆ ೩೨ ರಿಂದ ೩೫ನೇ ವಯಸ್ಸಿನಲ್ಲಿ ವಿವಾಹವಾಗುತ್ತದೆಂದು ತಿಳಿಯಬೇಕು. *ವ್ಯಯಸ್ಥಾನದಲ್ಲಿ ರಾಹು,ಪಂಚಮದಲ್ಲಿ ಶುಕ್ರನಿದ್ದರೆ ೪೦ರಿಂದ ೪೩ಕ್ಕೆ ವಿವಾಹವೆಂದು ತಿಳಿಯಬೇಕು. *ದ್ವಿತೀಯ ಮತ್ತು ಸಪ್ತಮ ಭಾವಗಳಿಂದ ವಿವಾಹ ನಿಶ್ಚಯ ಮಾಡಬೇಕು.ಶುಕ್ರನಿದ್ದ ರಾಶಿಯಿಂದ ಸಪತಮದಲ್ಲಿ ಶುಕ್ರನಿರಬೇಕು.ಕುಂಡಲಿಯಲ್ಲಿ ಶುಕ್ರನಿರುವ ರಾಶಿಯ ದ್ವಿತೀಯದಲ್ಲಿ ಶುಕ್ರನಿರಬೇಕು *ಶುಕ್ರ ಚಂದ್ರರು ಒಂದೇ ರಾಶಿಯಲ್ಲಿರಬೇಕು. *ಸಪ್ತಮೇಶನಿದ್ದ ರಾಶಿಯಿಂದ ೭ನೇ ಸ್ಥಾನದಲ್ಲಿ ಶುಕ್ರನಿರಬೇಕು. ಈ ರೀತಿ ಜಾತಕದಲ್ಲಿ ಲಗ್ನ ಕುಂಡಲಿಯಲ್ಲಿ ಗ್ರಹಗಳು ಇದ್ದರೆ ಶುಭಕಾರ್ಯಗಳು ಬೇಗನೆ ನೆರವೇರುತ್ತವೆ. -ಡಿ ಎಸ್ ಮಹೇಶ್ ಕುಮಾರ್ ಶಾಸ್ತ್ರಿ,ಹಿರಿಯೂರು

Comments