Skip to main content

ಯಜ್ಞ-ಯಾಗಾದಿಗಳು

ಯಜ್ಞ-ಯಾಗಾದಿಗಳು ಮಾನವರಾದ ನಾವುಗಳು ಎಷ್ಟು ಜನ್ಮವೆತ್ತಿ ಏನೇನು ಮಾಡಿ ಈ ಜನ್ಮದಲ್ಲಿ ಹೀಗಿದ್ದೇವೆ ಎಂಬುದು ನಮಗೆ ತಿಳಿಯದ ವಿಷಯ. ಆದರೆ ನಮ್ಮಲ್ಲಿರುವ ಆತ್ಮಚೈತನ್ಯಕ್ಕೆ ಎಲ್ಲವೂ ತಿಳಿದಿದೆ. ಆ ಚೇತನವು ಸುಮ್ಮನಿದ್ದು, ನಮ್ಮ ಕರ್ಮಫಲವು ನಮ್ಮಿಂದ ಒಳ್ಳೆಯದನ್ನು, ಕೆಟ್ಟದನ್ನು ಮಾಡಿಸುತ್ತದೆ.ಆದರೆ ಯಾವಾಗ ಕೆಟ್ಟಕರ್ಮದ ಫಲವು ಕಡಿಮೆ ಆಗುವುದೋ,ಆಗ ನಮ್ಮ ಸರ್ವಾಂಗೀಣ ಅಭಿವೃದ್ಧಿ ನಿಶ್ಚಿತ. ಅದಕ್ಕಾಗಿ ನಮಗೆ ಋಷಿ-ಮುನಿಗಳು ಅನೇಕ ಮಾರ್ಗದರ್ಶನಗಳನ್ನು ಮಾಡಿರುವರು.ಅವುಗಳಲ್ಲಿ ಮಹತ್ತರವಾದವುಗಳೆಂದರೆ ಯಜ್ಞ-ಯಾಗಾದಿಗಳು. ಇವುಗಳಲ್ಲಿ ಸೂರ್ಯ,ಗಣಪತಿ,ಅಂಬಿಕಾ,ಶಿವ,ವಿಷ್ಣುಗಳಾದ ಪಂಚಾಯತನ ದೇವತೆಗಳನ್ನು ಉದ್ದೇಶಿಸಿ ಮಾಡುವ ಜಪ,ಹೋಮ,ತರ್ಪಣ,ಮಾರ್ಜನ,ಬ್ರಾಹ್ಮಣ-ಭೋಜನಗಳಿಂದ ಮಾಡುವ ವಿಶೇಷ ಅನುಷ್ಠಾನಕ್ಕೆ ಯಜ್ಞ-ಯಾಗಾದಿಗಳು ಎನ್ನಬಹುದು. ೧. ಸೂರ್ಯ ಸಂತತಿ ಪ್ರಾಪ್ತಿಗಾಗಿ, ಮೋಕ್ಷ ಪ್ರಾಪ್ತಿಗಾಗಿ,ಲೋಕ ಕಲ್ಯಾಣಕ್ಕಾಗಿ,ರೋಗ ನಿವೃತ್ತಿಗಾಗಿ ಗಾಯತ್ರಿ ಪುರಶ್ಚರಣ ಯಾಗವನ್ನು ಮಾಡಬೇಕು. ಹೀಗೆ ಎಲ್ಲಾ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಈ ಯಾಗವನ್ನು ಮಾಡಬೇಕು. ೨. ಗಣಪತಿ ಸ್ವೀಕರಿಸಿದ ಕಾರ್ಯದಲ್ಲಿ ಬರುವಂತಹ ವಿಘ್ನ ನಿವಾರಣೆಗಾಗಿ, ಮಕ್ಕಳಿಗೆ ವಿದ್ಯಾಭ್ಯಾಸ ಸಲುವಾಗಿ,ಲಕ್ಷ್ಮೀ ಪ್ರಾಪ್ತಿಗಾಗಿ,ಉದ್ಯೋಗದಲ್ಲಿ ಯಶ; ಪ್ರಾಪ್ತಿಗಾಗಿ ಮತ್ತು ಈ ರೀತಿಯ ಎಲ್ಲ ಮನೋಕಾಮನೆಗಳನ್ನು ಪಡೆಯಲು ಚತುರ್ದ್ರವ್ಯ (ಮೋದಕ,ದೂರ್ವಾ,ಲಾಜಾ,ತುಪ್ಪ)ದಿಂದ ಗಣೇಶ ಯಾಗವನ್ನು ಮಾಡಬೇಕು. ೩.ದುರ್ಗಾಂಬಿಕಾ " ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾನ್ನ ಭವತಿ." ಎಂಬ ಶಂಕರರ ಉಕ್ತಿಯಂತೆ ತಾಯಿಯೇ ನಮಗೆ ಸರ್ವಸ್ವ. ತಾಯಿಯು ಮಕ್ಕಳ ಎಲ್ಲಾ ಮನೋಕಾಮನೆಗಳನ್ನು ಭಕ್ತಿಯಿಂದ ಬೇಡಿದಲ್ಲಿ ಅದನ್ನು ನಿಸ್ಸಂದೇಹವಾಗಿ ಪೂರೈಸುತ್ತಾಳೆ. ಆ ತಾಯಿಯನ್ನು ಒಲಿಸಿಕೊಳ್ಳಲು ಅನೇಕ ವಿಧವಾದ ಅನುಷ್ಠಾನಗಳಿವೆ. ಅವುಗಳಲ್ಲಿ ನವಚಂಡಿ,ಶತಚಂಡಿ,ಸಹಸ್ರಚಂಡಿ,ಆಯುತಚಂಡಿ ಯಾಗಗಳು ಪ್ರಮುಖವಾದವು.ಅದ್ದರಿಂದ ನಮ್ಮ ಶಕ್ತ್ಯಾನುಸಾರವಾಗಿ,ನಮ್ಮ ಮನೋಕಾಮನೆಗಳ ಪೂರ್ತಿಗಾಗಿ ಈ ಯಾಗಗಳನ್ನು ಮಾಡಬೇಕು. ೪.ಶಿವ ಈ ಜಗತ್ತಿನಲ್ಲಿ ಜನಿಸಿದ ಸರ್ವವು ಶಿವಾಧೀನ. ಹುಟ್ಟು-ಸಾವುಗಳೂ ಅವನದೇ. ಶಿವನೇ ತಂದೆ. ಹೀಗಾಗಿ ಎಲ್ಲಾವಿಧ ಪಾಪ ನಿವೃತ್ತಿಗಾಗಿ, ಸಂತತಿ ಪ್ರಾಪ್ತಿಗಾಗಿ,ಲಕ್ಷ್ಮಿ ಪ್ರಾಪ್ತಿಗಾಗಿ, ಸದ್ಗತಿ ಪ್ರಾಪ್ತಿಗಾಗಿ,ಧರ್ಮ,ಅರ್ಥ,ಕಾಮ.ಮೋಕ್ಷಾದಿಗಳನ್ನು ಪಡೆಯಲು ಶಿವನನ್ನೇ ಆರಾಧಿಸಬೇಕು.ಶಿವನನ್ನು ಒಲಿಸಲು ಅನೇಕ ವಿಧವಾದ ಆರಾಧನೆಗಳಿವೆ. ಶತರುದ್ರ ಪುರಶ್ಚರಣ,ಮಹಾರುದ್ರ ಪುರಶ್ಚರಣ,ಅತಿರುದ್ರ ಪುರಶ್ಚರಣ,ಕೈಲಾಸ ಯಂತ್ರ,ಸಹಸ್ರ ಲಿಂಗತೋ ಭದ್ರ ಮಹಾಯಂತ್ರ ಪ್ರಮುಖವಾದುದು. ೫.ವಿಷ್ಣು "ಸರ್ವದೇವ ನಮಸ್ಕರ:ಕೇಶವಂ ಪ್ರತಿಗಚ್ಚತಿ".ನಮ್ಮ ಸಂಸ್ಕೃತಿಯಲ್ಲಿ ಹಲವಾರು ದೇವತೆಗಳನ್ನು ಆರಾಧಿಸುತ್ತೇವೆ. ಆದರೆ ಎಲ್ಲಾ ದೇವತೆಗಳಿಗೂ ಮೂಲ ಮಹಾವಿಷ್ಣು. ವಿಷ್ಣು ಜ್ಞಾನದ ರೂಪ. ಧರ್ಮ,ಅರ್ಥ,ಕಾಮ,ಮೋಕ್ಷಎಲ್ಲಾ ಮನೋಕಾಮನೆಗಳ ಸಾಧನೆಗಾಗಿ ಮಹಾವಿಷ್ಣುವಿನ ದಶರೂಪಗಳನ್ನು ಆರಾಧಿಸುತ್ತೇವೆ. ಹೀಗೆ ಎಲ್ಲ ಮನೋಕಾಮನೆಗಳ ಪೂರ್ಣತೆಗಾಗಿ ವಿಷ್ಣು ಪ್ರೀತ್ಯರ್ಥವಾಗಿ ಪುರುಷ ಸೂಕ್ತ ಪುರಶ್ಚರಣ ಹೋಮ,ಸುದರ್ಶನ ಹೋಮ,ಉಗ್ರ ನರಸಿಂಹ ಹೋಮ,ರಾಮತಾರಕ ಹೋಮ,ಸುಂದರಕಾಂಡ,ಅಷ್ಟಾಕ್ಷರಿ ಮಹಾಮಂತ್ರ ಜಪ ಹೋಮಾದಿ ಮಾಡಿಸಬೇಕು. ೬.ಸೋಮ ಯಾಗ ಪಾಪ ನಿವೃತ್ತಿ ಮತ್ತು ಇಚ್ಛಿತ ಮನೋಕಾಮನೆ ಪ್ರಾಪ್ತಿಗಾಗಿ ಮಾಡಬೇಕು. ೭.ಪುತ್ರಕಾಮೇಷ್ಠಿ ಯಾಗ ಮಕ್ಕಳನ್ನು ಪಡೆಯಲು ಮಾಡುವ ಅತೀದೊಡ್ಡ ವಿಧಿ. ೮.ಗರುಡ ಚಯನ ಮಹಾಯಾಗ ಪಾಪ ನಿವೃತ್ತಿ, ಲೋಕಕಲ್ಯಾಣಾರ್ಥವಾಗಿ ಮಾಡಬೇಕು. ೯.ರಾಜ ಸೂಯಾಗ ಮತ್ತು ೧೦:ಅಶ್ವಮೇಧ ಯಾಗ ಇವುಗಳನ್ನು ಈಗ ಕಾಲದಲ್ಲಿ ಮಾಡಿಸುವುದಿಲ್ಲ. ಹಿಂದಿನ ಕಾಲದಲ್ಲಿ ಮಹಾರಾಜರುಗಳು ಮಾಡಿಸುತ್ತಿದ್ದರು. ೧೦.ಚಾಂದ್ರಾಯಣ ಪ್ರಯೋಗ ಘೋರ ಪಾಪಗಳಾದ ಮಾತೃ ಹತ್ಯೆ,ಪಿತೃ ಹತ್ಯೆ, ಗೋ ಹತ್ಯೆ, ಬ್ರಾಹ್ಮಣ ಹತ್ಯೆ ಮುಂತಾದ ಸರ್ವ ಘೋರ ಪಾಪಗಳನ್ನು ಮಾಡಿದಲ್ಲಿ ಇದನ್ನು ಮಾಡಬೇಕು. (ಇದು ತುಂಬಾ ಕಠಿಣವಾದ ಪ್ರಯೋಗವಾಗಿರುತ್ತದೆ)

Comments

Popular posts from this blog

ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:-

*ಐಂ*ಓಂ ಶ್ರೀ ಲಕ್ಷ್ಮಿವೆಂಕಟೇಶ್ವರಾಯ ನಮಃ* ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ರಚಿಸಿದವರು: ವಿದ್ಯಾವಿಶಾರದ ಕೀಳಾತ್ತೂರು ಶ್ರೀನಿವಾಸಾಚಾರ್ಯ,ಪಿ.ಓ.ಎಲ್ ಶಿರೋಮಣಿ ಮತ್ತು ಹಿಂದಿ ವಿಶಾರದ ಮುನ್ನುಡಿ:- ಜ್ಯೋತಿಷ್ಯ,ಹಸ್ತರೇಖೆ,ಸಂಖ್ಯಾ,ಈ ಮೂರು ಶಾಸ್ತ್ರಗಳು ಒಂದಕ್ಕೊಂದು ಹೆಣೆದುಕೊಂಡು ಇರುವ ಶಾಸ್ತ್ರಗಳು.ಕ್ರೈಸ್ತನಿಗಿಂತಲೂ ಪೂರ್ವದಲ್ಲಿಯೇ ಈ ಮೂರು ಶಾಸ್ತ್ರಗಳೂ ಭಾರತದಲ್ಲಿಯೂ ಗ್ರೀಸ್ ದೇಶದಲ್ಲಿಯೂ ಒಂದೇ ರೀತಿಯಾಗಿ ಅಭಿವೃದ್ದಿ ಹೊಂದುತ್ತಾ ಪ್ರಸಿದ್ದಿಗೆ ಬಂದಿತು. ಆದರೆ ಈ ಕಾಲದಲ್ಲಿ ಈ ಮೂರು ಶಾಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ,ಭವಿಷ್ಯ,ವರ್ತಮಾನ ಕಾಲಗಳ ಫಲಗಳನ್ನು ತಿಳಿಸುವ ಪಂಡಿತಮಣಿಗಳು ಅಮೇರಿಕಾ,ಬ್ರಿಟನ್,ಜರ್ಮನಿ,ಜಪಾನ್ ಮೊದಲಾದ ದೇಶಗಳಲ್ಲಿ ಈಗಲೂ ಇರುವರು,ಎಂದರೆ ಅತಿಶಯೋಕ್ತಿಯಾಗಲಾರದು. ಮಾನವನ ಭವಿಷ್ಯವನ್ನು ತಿಳಿಸುವ ಈ ಮೂರು ಶಾಸ್ತ್ರಗಳ ಮಹತ್ವವು ಸಮಾನವಾಗಿಯೇ ಇದ್ದರೂ ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡಕ್ಕಿಂತಲೂ ಸಂಖ್ಯಾ ಶಾಸ್ತ್ರ(ನ್ಯೂಮರಾಲಜಿ)ದಲ್ಲಿ ಮಾತ್ರ ಒಂದು ವೈಶಿಷ್ಟ್ಯ ಇದೆ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡೂ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರಾ ಆ ಬಗೆಯ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಗಳನ್ನು ಕೊಡುತ್ತದೆ. …

ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು

ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು ಅಯ್ಯಪ್ಪ ಗಾಯತ್ರಿ ಓಂ ಭೂತನಾತಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ಶಾಸ್ತ್ರ ಪ್ರಚೋದಯಾತ್ ಸುದರ್ಶನ ಗಾಯತ್ರಿ ಮಂತ್ರ ಓಂ ಸುದರ್ಶನಾಯ ವಿದ್ಮಹೇ ಮಹಾಜ್ವಾಲಾಯ ಧೀಮಹೀ ತನ್ನೋ ಚಕ್ರಪ್ರಚೋದಯಾತ್ ಓಂ ನಮೋ ಭಗವತಿ ರಾಜರಾಜೇಶ್ವರಿ ಸಾಗರತೀರೇ ಮಹಾಮದ್ಯರ್ನಿವಾಸಿನಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಅನ್ನಪೂರ್ಣ ಅಂಬೇ ಮಾತಾ ಉದಯೋಸ್ತು ಉದಯೋಸ್ತು ಐಂ ಹ್ರೀಂ ಶ್ರೀಂ ಯಾಂ ರಂ ಲಂ ಶಂ ದಂ ವಂ ತಂ ಓಂ ||ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ಸ್ವಾಹಾ|| ||ಓಂ ಹ್ರೀಂ ಹ್ರೀಂ ಹುಂ ಹುಂ ಕ್ರೀಂ ಕ್ರೀಂ ಕ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ || ||ಓಂ ನಮೋ ಭಗವತೇ ಮಹಾಕಾಲಬೈರವಾಯ (ಅಮುಕಂ) ಶತೃ ಮಾರಯ|ಕಾಲಾಗ್ನಿತೇಜಸೇ ಫೋತಯ ಹುಂ ಫಟ್ ಸ್ವಾಹಾ|| ಓಂ ಮಹಾಕಾಳೇಶ್ವರಾಯ ನಮಃ ಓಂ ಮಹಾಂ ಕಾಲಾಯ ನಮಃ ಅಮಾವಾಸ್ಯೆ ಹುಣ್ಣಿಮೆಯಂದು ರಾತ್ರಿ ಸ್ವಲ್ಪ ಅಕ್ಕಿ, ಮೊಸರು,ಗುಲಾಲ್ ಅನ್ನು ಒಂದು ಬಿಳಿ ಹಾಳೆಯಲ್ಲಿ ಹಾಕಿ ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ನೆತ್ತಿಯಿಂದ ಪಾದದ ವರೆಗೆ ೯ ಬಾರಿ ಅಥವ ಆ ವ್ಯಕ್ತಿಗೆ ಆಗಿರುವ ವಯಸ್ಸಿನಷ್ಟು ಸಲ ಇಳಿತಗೆದು ೪ದಾರಿ ಕೂಡಿರುವಕಡೇ ಎಸೆದು ಬರಬೇಕು. ಅಥವ ಮೊಟ್ಟೆಗಾತ್ರದ ಒಂದು ಉತ್ತಮವಾದ ನಿಂಬೆಹಣ್ಣು ತಗೆದುಕೊಂಡು ಮಾಟ ಆಗಿರುವ ವ್ಯಕ್ತಿಯನ್ನು ನೆ…

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ…