Skip to main content

ಜಪ-ಮಂತ್ರ-ಅನುಷ್ಠಾನ, ಹೋಮಗಳು

ಜಪ-ಮಂತ್ರ-ಅನುಷ್ಠಾನ ವಿಭಾಗಃ| ಈ ಜಗತ್ತು ದೇವತೆಗಳ ಅಧೀನ. ದೇವತೆಗಳು ಮಂತ್ರದ ಅಧೀನ. ಆದ್ದರಿಂದ ನಾವು ಶ್ರದ್ಧಾ-ಭಕ್ತಿ ಮತ್ತು ಛಲದಿಂದ ಜಪ ಮತ್ತು ಮಂತ್ರಗಳ ಅನುಷ್ಠಾನ ಮಾಡಬೇಕು. ಜಪ ಹಾಗೂ ಮಂತ್ರಗಳನ್ನು ಗುರು ಮುಖದಿಂದ ಉಪದೇಶ ಪಡೆದು ಅನುಷ್ಠಾನ ಮಾಡಬೇಕು. ಜಪ-ತಂತ್ರ-ಮಂತ್ರಗಳನ್ನು ಒಳ್ಳೆಯ ಕಾರ್ಯಕ್ಕಾಗಿ ಮಾತ್ರ ಬಳಸಬೇಕು. ಬೇರೆಯವರಿಗೆ ಕೆಡುಕಾಗುವಂತೆ ಮಾಡಬಾರದು. ಇದು ಕೊನೆಯಲ್ಲಿ ನಮಗೇ ಮಾರಕವಾಗುತ್ತದೆ. ಭಗವತ್ ಶಕ್ತಿಯನ್ನು ಒಲಿಸಿಕೊಳ್ಳುವುದಕ್ಕಿಂತ ಅಸುರೀ ಶಕ್ತಿಯನ್ನು ಒಲಿಸಿಕೊಳ್ಳುವುದು ಅತಿ ಕಠಿಣ. ಆದರೆ ಕೆಲವರು ಅಸುರೀ ಶಕ್ತಿಯನ್ನೇ ಆರಾಧಿಸುತ್ತಾರೆ. ಇದು ಒಳ್ಳೆಯದಲ್ಲ. ಜಪಗಳು: ಒಂದೊಂದು ಬೀಜಾಕ್ಷರಗಳಿಗೂ ಅತಿಯಾದ ಶಕ್ತಿಗಳಿರುತ್ತದೆ. ಋಷಿ- ಛಂದಸ್ಸು-ಸ್ಯಾಸ-ಧ್ಯಾನ ಮಂತ್ರ ಹೀಗೇ ಕ್ರಮವಾಗಿ ಎಲ್ಲವನ್ನೂ ಮಾಡಿ ನಂತರ ಜಪವನ್ನು ಮಾಡಬೇಕು. ನ್ಯಾಸದ ಮೂಲಕ ಮೊದಲು ನಮ್ಮಲ್ಲಿ ಜಪಿಸುವ ದೇವರನ್ನು ಸ್ಥಾಪಿಸಿಕೊಂಡು ನಂತರ ಜಪವನ್ನು ಮಾಡಬೇಕು. ಕೆಲವು ಜಪಗಳಲ್ಲಿ ಮಾರಣ-ಮೋಹನ-ಸ್ಥಂಬನ-ವಿಚ್ಛಾಟನಾದಿ ಶಕ್ತಿಗಳಿರುತ್ತದೆ. ಆದ್ದರಿಂದ ಯಾವುದೇ ಜಪವನ್ನು ಗುರುಮುಖದಿಂದ ಉಪದೇಶ ಪಡೆದು ಒಳ್ಳೆಯದಕ್ಕಾಗಿ ಉಪಯೋಗಿಸಬೇಕು. ಆಗ ಒಳ್ಳೆಯದಾಗುತ್ತದೆ. ಓದಲು ಬರುತ್ತದೆ ಎಂದು ಪುಸ್ತಕವನ್ನೊ ಅಥವಾ ಇನ್ನಾವುದನ್ನೋ ನೋಡಿ ಜಪಾದಿಗಳನ್ನು ಮಾಡಬೇಡಿರಿ. ಇದಕ್ಕೆ ಫಲ ಸಿಗಲಾರದು. ಜಪ ಅನುಷ್ಠಾನಗಳಲ್ಲಿ ದೇಶ-ಕಾಲ ಅನುಸಾರದಂತೆ ತುಂಬಾ ವಿಧಗಳಿವೆ. ಆದರೆ ನಾವಿಲ್ಲಿ ಕೆಲವನ್ನು ಮಾತ್ರ ತಿಳಿಸಿರುತ್ತೇವೆ. ಅವಶ್ಯಕತೆ ಇದ್ದಲ್ಲಿ ಮಂತ್ರಮಹಾರ್ಣವ, ಮಂತ್ರಮಹೋದಧಿ, ಪ್ರಪಂಚ ಸಾರ, ಶಾರದ ತಿಲಕ ಮುಂತಾದ ಗ್ರಂಥಗಳಿಂದ ತಿಳಿಯಬೇಕಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಬೇಕು. ಕಷ್ಟ ನಿವಾರಣೆ ಆಗಬೇಕು ಎಂಬ ಉದ್ದೇಶದಿಂದ ಸೂಚಿಸಿದ ಕ್ರಮದಂತೆ ಅನುಷ್ಠಾನ ಮಾಡಿರಿ, ಒಳ್ಳೆಯದಾಗುವುದು. || ಬಾಲ ಗಣಪತಿ ಮಂತ್ರಃ ಓಂ ಶಕ್ತಿ ಋಷಿಃ| ಗಾಯತ್ರಿ ಛಂದಃ| ಬಾಲಗಣಪತಿರ್ದೇವತಾ| ಓಂ ಗರ್ಗರ್ಲ ಹ್ರಾಂ ಹೃದಯಾಯ ನಮಃ| ಓಂ ಗರ್ಗರ್ಲ ಹ್ರೀಂ ಶಿರಸೆ ಸ್ವಾಹಾ| ಓಂ ಗರ್ಗರ್ಲ ಹ್ರುಂ ಶಿಖಾಯೈ ವಷಟ್| ಓಂ ಗರ್ಗರ್ಲ ಹ್ರೈಂ ಕವಚಾಯ ಹುಮ್| ಓಂ ಗರ್ಗರ್ಲ ಹ್ರೋಂ ನೇತ್ರತ್ರಯಾಯ ವೌಷಟ್| ಓಂ ಗರ್ಗರ್ಲ ಹ್ರಃ ಅಸ್ತ್ರಾಯ ಫಟ್| ಓಂ ಭೂರ್ಭುವಃ ಸ್ಸುವರೋಂ ಇತಿ ದಿಗ್ಭಂಧಃ|| ಧ್ಯಾನಂ: ಬಾಲಪ್ರಸೂತ ಮಾತ್ರೋಯಂ ಅಂಬಿಕಾಮ್ಬೆ ನಿವೇಶಿತಃ ಅತಿರಕ್ತೋ ಗಜಮುಖಃ ದ್ವಿರದೋ ರಕ್ತ ಭೂಷಣಃ| ಚಶಂಕ ಪುಷ್ಕರೇ ಬಿಭ್ರತ್ ಸ್ತಣೀ ಪಾಶೌ ಕರದ್ವಯೇ ದ್ವಾಭ್ಯಂ ಕಲ್ಪಲತಾಂ ದೊರ್ಭ್ಯಾ ಗೊಮಯನ್ ರತ್ನ ದರ್ಶಿಣೀಮ್|| ಮಂತ್ರ: ಓಂ ಐಂ ಹ್ರೀಂ ಗರ್ಗರ್ಲ ರೀಂ ಹ್ರೀಂ ಸೌಂ ಸ್ವಾಹಾ|| (ಹರಿದ್ರಾ ಚೂರ್ಣ ನಾಳಿಕೇರ ಕದಳೀ ಫಲ ಶರ್ಕರ ಮಧು ಮಿಶ್ರೈಃ ಪೂರ್ವಾಜ್ಯ ಅಪರಾಜ್ಯ ಸಹಿತೈಃ ಅಷ್ಟೋತ್ತರ ಸಹಸ್ರಂ ಜೂಹೂಯಾತ್||)|| ಮಹಾಗಣಪತಿ ಮಂತ್ರಃ ಅಸ್ಯ ಶ್ರೀ ವಲ್ಲಭಾಮಹಾಗಣಪತಿಮಹಾಮಂತ್ರಸ್ಯ| ಗಣಕ ಋಷಿಃ| ನಿಚೃದ್ಗಾಯತ್ರೀ ಛಂದಃ | ಶ್ರೀ ವಲ್ಲಭಾಮಹಾಗಣಪತಿರ್ದೇವತಾ|| ಗಾಂ ಬೀಜಂ| ಗೀಂ ಶಕ್ತಿಃ| ಗೂಂ ಕೀಲಕಮ್|| ಶ್ರೀ ವಲ್ಲಭಮಹಾಗಣಪತಿ ...... ವಿನಿಯೋಗಃ|| ಓಂ ಗಾಂ- ಅಂಗುಷ್ಟ - ಹೃದಯ - ಓಂ ಗೀಂ- ತರ್ಜನೀ - ಶಿರಸೇ - ಓಂ ಗೂಂ- ಮಧ್ಯಮ - ಶಿಖಾಯೈ - ಓಂ ಗೈಂ- ಅನಾಮಿಕ - ಕವಚ - ಓಂ ಗೌಂ - ಕನಿಷ್ಠಿಕ - ನೇತ್ರತ್ರಯಾಯ - ಓಂ ಗಃ - ಕರತಲಕರ - ಅಸ್ತ್ರಾಯ - (ಏವಂ ಅಂಗನ್ಯಾಸಂ ಹೃದಯಾದಿ ನ್ಯಾಸಂ ಕುರ್ಯಾತ್) ಧ್ಯಾನಂ: ಬೀಜಾಪೂರ ಗದೇಕ್ಷು ಕಾರ್ಮುಕಜೌ ಚಕ್ರಾಬ್ಜ ಪಾಶೋತ್ಪಲ ವ್ರೀಹ್ಯಹ್ರಸ್ವ ವಿಷಾಣರತ್ನ ಕಲಶ ಪ್ರೋಧ್ಯುಕ್ತ ರಾಂಭೋರುಹೈಃ| ಧ್ಯೇಯೋ ವಲ್ಲಭ ಯಾಚ ಪದ್ಮಕರಯಾ ಶ್ಲಿಷ್ಟೋಜ್ವಲದ್ಭೂಷಯಾ ವಿಶ್ವೋತ್ಪತ್ತಿ ವಿನಾಶ ಸಂಸ್ಥಿತ ಕರೋ ವಿಘ್ನೋ ವಿಶಿಷ್ಟಾರ್ಥದಃ|| (’ಲಂ’ ಇತ್ಯಾದಿ ಪಂಚೋಪಚಾರಪೂಜಾಂ ಕುರ್ಯಾತ್) ಮಂತ್ರ: ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರವರದ ಸರ್ವಜನಂ ಮೇ ವಶಮಾನಯ ಸ್ವಾಹಾ|| ಹೋಮಗಳು ಯಾವ ಮನೋಕಾಮನೆಗಳಿಗೆ ಯಾವ ಯಾವ ಹೋಮಗಳನ್ನು ಮಾಡಬೇಕು? ೧. ಗಣಹೋಮ ಎಲ್ಲಾ ಕಷ್ಟಗಳನ್ನು ಮತ್ತು ಕಾರ್ಯದಲ್ಲಿ ಬರುತ್ತಿರುವ ವಿಘ್ನಗಳನ್ನು ನಿವಾರಣೆಗೊಳಿಸಲು. ೨. ವಲ್ಲಭ ಗಣಪತಿ ಹೋಮ ಗಣಪತಿ ಅನುಗ್ರಹ ಪ್ರಾಪ್ತಿಗಾಗಿ. ೩. ಶ್ರೀ ಶಕ್ತಿ ಗಣಪತಿ ಹೋಮ ಗಣಪತಿ ಅನುಗ್ರಹ ಪ್ರಾಪ್ತಿಗಾಗಿ. ೪. ಶೀಘ್ರ ವಿವಾಹ ಪ್ರಾಪ್ತಿಗಾಗಿ ಹರಿದ್ರಾ ಗಣಪತಿ ಹೋಮ ಬಾಲ ಗಣಪತಿ ಹೋಮ ತ್ರೈಲೋಕ್ಯ ಮೋಹನ ಗಣಪತಿ ಹೋಮ ಜಾತಕದಲ್ಲಿ ಸೂಚಿಸಿದಂತೆ, ವಿವಾಹವಾಗುವಲ್ಲಿ ಬರುವ ವಿಘ್ನನಿವಾರಣೆಗೆ ಆಚರಿಸಬೇಕು. ೫. ಲಕ್ಷ್ಮೀಗಣಪತಿ ಹೋಮ ಲಕ್ಷ್ಮಿ ಪ್ರಾಪ್ತಿಗಾಗಿ ಆಚರಿಸಬೇಕು. ೬. ಚಿಂತಾಮಣಿ ಗಣಪತಿ ಹೋಮ ಮನಸ್ಸಿನ ಎಲ್ಲಾ ಕಾಮನೆಗಳನ್ನು ಪಡೆಯಲು ಈ ಹೋಮ ಮಾಡಬೇಕು. ೭. ವಿದ್ಯಾ ಪ್ರಾಪ್ತಿಗಾಗಿ ಮೇಧಾ ಗಣಪತಿ ಹೋಮ ಬುದ್ಧಿ ಗಣಪತಿ ಹೋಮ ಸಿದ್ಧಿ ಗಣಪತಿ ಹೋಮ ಅಷ್ಟ ದ್ರವ್ಯ ಗಣಹೋಮ ಜಾತಕದ ಸೂಚನೆಯಂತೆ ಆಚರಿಸಬೇಕು. ೮. ಸಾಲದ ಬಾಧೆ ನಿವಾರಣೆಗೆ ಋಣ ಹರಣ ಗಣಪತಿ ಹೋಮ ಕ್ಷಿಪ್ರ ಗಣಪತಿ ಹೋಮ ಸ್ವರ್ಣ ಗಣಪತಿ ಹೋಮ ಸಂಕಟಹರ ಗಣಪತಿ ಹೋಮ ಗುರುಗಳ ಆದೇಶದಂತೆ ಆಚರಿಸಬೇಕು. ೯. ವಿನಾಯಕ ಶಾಂತಿ ಮಾಡುತ್ತಿರುವ ಕಾರ್ಯದಲ್ಲಿ ವಿಘ್ನ ಬರದಿರಲೆಂದು ಈ ಹೋಮವನ್ನು ಆಚರಿಸಬೇಕು. ೧೦. ವಿದ್ಯಾ ಪ್ರಾಪ್ತಿಯಲ್ಲಿ ಬರುತ್ತಿರುವ ದೋಷ ನಿವಾರಣೆಗಾಗಿ ವಾಕ್ ಸರಸ್ವತಿ ಹೋಮ ನೀಲಾ ಸರಸ್ವತಿ ಹೋಮ ದಕ್ಷಿಣಾ ಮೂರ್ತಿ ಹೋಮ ಗುರುಗಳ ಅನುಮತಿಯಂತೆ ಆಚರಿಸಬೇಕು. ೧೧. ಗ್ರಹ ಬಾಧೆಯಿಂದ ಜೀವನದಲ್ಲಿ ಬರುವ ರೋಗ ಪೀಡಾ ಪರಿಹಾರಕ್ಕಾಗಿ ಮತ್ತು ಅಕಾಲ ಮೃತ್ಯು ನಿವಾರಣೆಗಾಗಿ ಮಾಡಬೇಕಾದ ಹೋಮಗಳು ಮಹಾ ಮ್ರತ್ಯುಂಜಯ ಹೋಮ ಅಮೃತ ಮ್ರತ್ಯುಂಜಯ ಹೋಮ ಅಭಯಾಯುಷ್ಯ ಹೋಮ ಉಗ್ರ ನರಸಿಂಹ ಹೋಮ ದೂರ್ವಾ ಮೃತ್ಯುಂಜಯ ಹೋಮ ಆಯುಷ್ಯ(ಚರು)ಹೋಮ ೧೨. ವಿರೋಧಿಗಳು ಮಾಡುವ ಮಂತ್ರ, ತಂತ್ರ,ಯಂತ್ರಾದಿ ದುಷ್ಕರ್ಮ ಉಚ್ಛಾಟನೆಗಾಗಿ,ರಕ್ಷೆಗಾಗಿ ಮಹಾ ಸುದರ್ಶನ ಹೋಮ ಅಘೋರಾಸ್ತ್ರ ಹೋಮ ಪ್ರತ್ಯಂಗಿರಾ ಹೋಮ ಬಗಲಾಮುಖಿ ಹೋಮ ಶರಭೇಶ್ವರ ಹೋಮ ಶೂಲಿನಿ ದುರ್ಗಾ ಹೋಮ ದತ್ತಾತ್ರೇಯ ಮಾಲಾಮಂತ್ರ ಹೋಮ ಆಂಜನೇಯ ಮಂತ್ರ ಹೋಮ ೧೩. ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿ ಮತ್ತು ಉದ್ಯೋಗ, ವ್ಯವಹಾರ ಜಯ ಪ್ರಾಪ್ತಿಗಾಗಿ . ಶ್ರೀಸೂಕ್ತ ಹೋಮ ಲಕ್ಷ್ಮೀ ಹೋಮ(ಕಮಲದ ಹೂವಿನಿಂದ) ಲಕ್ಷ್ಮಿ ನೃಸಿಂಹ ಹೋಮ ಲಕ್ಷ್ಮಿ ನಾರಾಯಣ ಹೃದಯ ಹೋಮ ಕುಬೇರ ಲಕ್ಷ್ಮೀ ಹೋಮ ಚಂಡಿಕಾ ಹೋಮ(ನವ,ಶತ,ಸಹಸ್ರ) ೧೪. ರೋಗ ನಿವೃತ್ತಿಗಾಗಿ ಮಾಡಬೇಕಾದ ಹೋಮಗಳು ಧನ್ವಂತರಿ ಹೋಮ ಅಪಸ್ಮಾರ ದಕ್ಷಿಣಾಮೂರ್ತಿ ಹೋಮ ನವಗ್ರಹ ಹೋಮ(ಪ್ರತ್ಯೇಕ ಗ್ರಹಶಾಂತಿ) ಸುಬ್ರಹ್ಮಣ್ಯ ಹೋಮ ಜಾತಕದಲ್ಲಿ ಸೂಚಿಸಿದಂತೆ ರೋಗಕ್ಕೆ ಅನುಸಾರವಾಗಿ ಮಾಡಬೇಕು. ೧೫. ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ, ಆತಂಕಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು ಮಾಡಬೇಕಾದ ಹೋಮ ಉಗ್ರ ನೃಸಿಂಹ ಹೋಮ(೨೮ ಸಾವಿರ ಜಪ ಮಾಡಬೇಕು) ಸ್ವಯಂವರ ಪಾರ್ವತಿ ಹೋಮ(೧೦ ಸಾವಿರ ಜಪ ಮಾಡಬೇಕು) ಬಾಣೇಶಿ ಹೋಮ(೧೦ ಸಾವಿರ ಜಪ ಮಾಡಬೇಕು) ಅಶ್ವಾರೂಢ ಪಾರ್ವತಿ ಹೋಮ(೧೦ ಸಾವಿರ ಜಪ ಮತ್ತು ಹೋಮ ಮಾಡಬೇಕು) ೧೬. ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮದ ಫಲವಾಗಿ ಮಕ್ಕಳು ಆಗದೆ ಇದ್ದಾಗ ಮಾಡಬೇಕಾದ ಹೋಮಗಳು ಸಂತಾನ ಗೋಪಾಲಕೃಷ್ಣ ಹೋಮ ನಾಗರಾಜ ಮಂತ್ರ ಹೋಮ ಪುರುಷ ಸೂಕ್ತ ಹೋಮ ಶ್ರೀ ವಿದ್ಯಾ ಹೋಮ ಶ್ರೀ ರುದ್ರ ಹೋಮ(ಲಘು ರುದ್ರ,ಶತ ರುದ್ರ,ಮಹಾ ರುದ್ರ,ಅತಿ ರುದ್ರ) ಜಾತಕವನ್ನು ಪರಿಶೀಲಿಸಿ ಯೋಗ್ಯ ಸಲಹೆ ಪಡೆದು ಆಚರಿಸಬೇಕು. ೧೭. ಕಳೆದು ಹೋದ ವಸ್ತು ಪ್ರಾಪ್ತಿಗಾಗಿ ಈ ಹೋಮವನ್ನು ಮಾಡಬೇಕು. ಕಾರ್ತವೀರ್ಯಾರ್ಜುನ ಜಪ ಹೋಮ ೧೮. ನಮ್ಮ ಕ್ಷೇತ್ರಗಳನ್ನು, ಬೆಳೆಗಳನ್ನು ರಕ್ಷಿಸಲು, ದುಷ್ಟ ಪ್ರಾಣಿಗಳು ಮತ್ತು ದುರ್ಜನರಿಂದ ರಕ್ಷಣೆ ಪಡೆಯಲು ಮಾಡಬೇಕಾದ ಹೋಮಗಳು. ವನ ದುರ್ಗಾ ಹೋಮ ಭೂ ವರಾಹ ಹೋಮ ರಾಮತರಕ ಹೋಮ ಹನೂಮನ್ಮನ್ತ್ರ ಹೋಮ

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ