Skip to main content

Posts

Showing posts from June, 2013

ಚಂದ್ರನ ಮಹತ್ವ?

ಲಗ್ನದ ಚಂದ್ರನ ಮಹತ್ವ? ಕುಂಡಲಿಯ ಲಗ್ನದಲ್ಲಿ ಪೂರ್ಣಿಮಾ ಚಂದ್ರನು ಇದ್ದರೆ ಇಂತಹ ಜಾತಕದವರು ಉತ್ತಮ ರೂಪ, ಮೃದುತ್ವದ ದೇಹ ಹೊಂದಿರುತ್ತಾರೆ. ವೃಷಭ, ಮೇಷ ಕರ್ಕಾಟಕ ಲಗ್ನವಾಗಿ ಇಲ್ಲಿ ಚಂದ್ರನಿದ್ದರೆ ಇವರು ರೂಪವಂತರೂ, ಹಣವಂತರೂ ಆಗುತ್ತಾರೆ. ಬೇರೆ ರಾಶಿಗಳಲ್ಲಿ ಚಂದ್ರನಿದ್ದರೆ ಇವರು ಜಡತೆ ರೋಗ, ಬಡತನವನ್ನು ಅನುಭವಿಸುತ್ತಾರೆ. ಕರ್ಕಾಟಕ, ವೃಷಭ, ಮೇಷ ಲಗ್ನದಲ್ಲಿ ಚಂದ್ರನಿದ್ದರೆ ದಯೆ, ದಾಕ್ಷಿಣ್ಯ, ಚತುರತೆ, ಸುಂದರ, ಧನಿಕ, ಗುಣವಂತರು ಆಗಿರುತ್ತಾರೆ. ಲಗ್ನದಲ್ಲಿರುವ ಚಂದ್ರನಿಂದ ಇಪ್ಪತ್ತೇಳನೇ ವರ್ಷದಲ್ಲಿ ಕಾಯಿಲೆಗಳು ಬರುತ್ತವೆ. ಲಗ್ನದಲ್ಲಿ ಚಂದ್ರ ಪಾಪಗ್ರಹ ಯುತನಾಗಿದ್ದರೆ ಇವರಿಗೆ ಆಗಾಗ ಶೀತ ಬಾಧೆ ಇರುತ್ತದೆ. ಲಗ್ನದಲ್ಲಿ ಬಲಿಷ್ಠವಾದ ಚಂದ್ರನು ಇದ್ದರೆ ಇಂತಹ ಜಾತಕದವರು ಮಹಾ ಚತುರರೂ, ಅಲ್ಲದೆ ಮುಖಂಡತ್ವವನ್ನು ವಹಿಸುವವರೂ ಆಗಿರುತ್ತಾರೆ. ಸ್ತ್ರೀಯರಿಂದ ಗೌರವ, ಸ್ಥಾನಮಾನಗಳು ಸಿಗುತ್ತದೆ. ಇವರು ಪರಾಕ್ರಮಿಗಳಾಗಿದ್ದು, ರಾಜ ವೈಭವವನ್ನು ಹೊಂದುತ್ತಾರೆ. ಚಂದ್ರನು ಚರ ರಾಶಿ ಅಥವಾ ಉಭಯ ರಾಶಿ ಗತನಾದರೆ ಸಂಚಾರಿ, ಸ್ಥಿರ ಇಲ್ಲದ ಬುದ್ಧಿ, ಸ್ತ್ರೀಯರ ಸ್ವಭಾವ, ಮಿತ್ರ ವತ್ಸಲ, ದಯಾಳು, ಸಮಾಜದೊಂದಿಗೆ ಬೆರೆತುಕೊಂಡಿರುತ್ತಾರೆ. ಸ್ತ್ರೀಯರಿಗೆ ಪ್ರಿಯನಾಗಿದ್ದು, ಮಿತ್ರರೊಂದಿಗೆ ಇರುವವನೂ, ಉದಾರಿಯೂ, ಸಜ್ಜನನೂ ಆಗಿರುತ್ತಾನೆ. ಸಾರ್ವಜನಿಕ ಹಿತಾಸಕ್ತಿಯುಳ್ಳವನಾಗಿದ್ದು, ಬಹು ಜನರೊಂದಿಗೆ ಬೆರೆತು ನೀಚ ಜನರಿಂದ ಮಾನ್ಯತೆ ಪಡೆಯುತ್ತಾರೆ. ...

ಮೂಲ ನಕ್ಷತ್ರ ಸರಸ್ವತಿ ದೇವಿಯ ನಕ್ಷತ್ರ

ಮೂಲ ನಕ್ಷತ್ರ ಸರಸ್ವತಿ ದೇವಿಯ ನಕ್ಷತ್ರ ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್ ರಾತ್ರಿ ಸಮಯದಲ್ಲಿ ನೀಲಾಂಬರವನ್ನು (ಆಕಾಶ) ನೋಡಿದರೆ ನಮಗೆ ಅಗಣಿತವಾದ ಮಿನುಗುವ ಚುಕ್ಕೆಗಳೂ, ತೇಜ ಪುಂಜರವಾದ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರ ಆಗುವುದು. ಭಾರತೀಯ ವೇದಾಂಗ ಜ್ಯೋತಿಷ್ಯಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುವರು. ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ವಿಶೇಷತೆ ಕೊಟ್ಟಿರುತ್ತಾರೆ. ಅವು ಯಾವುವು ಎಂದರೆ ಮೂಲ, ಆಶ್ಲೇಷ, ವಿಶಾಖ ಮತ್ತು ಜ್ಯೇಷ್ಠ ನಕ್ಷತ್ರ. ಇವುಗಳನ್ನು ಸ್ತ್ರೀಯರಿಗೆ ಮಾತ್ರ ಬಹಳ ದೋಷಕಾರಿಗಳಾಗಿವೆ ಎಂದು ಹೇಳಿರುವರು. ಮೂಲ ನಕ್ಷತ್ರದ ಬಗ್ಗೆ ಗಮನಹರಿಸಿದರೆ, ನಕ್ಷತ್ರಗಳನ್ನು 3 ಗುಂಪುಗಳಾಗಿ ಮಾಡಿರುತ್ತಾರೆ. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದತನಕ ಒಂದು ಗುಂಪು, ಮಖ ನಕ್ಷತ್ರದಿಂದ ಜ್ಯೇಷ್ಠ ನಕ್ಷತ್ರದತನಕ ಮತ್ತೊಂದು ಗುಂಪು, ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರದತನಕ ಮತ್ತೊಂದು ಗುಂಪು. ಇವುಗಳಲ್ಲಿ ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರ ಮೊದಲನೆ ನಕ್ಷತ್ರಗಳು. ಮೂಲ ನಕ್ಷತ್ರ ಮೊದಲನೆಯದು ಅಗಿದ್ದರಿಂದ ಅದಕ್ಕೆ ಋಷಿಮುನಿಗಳು ಮೂಲ ನಕ್ಷತ್ರ ಎಂದು ಕರೆದರು. ಇದರ ಅಧಿಪತಿ ಕೇತು ಗ್ರಹ. ಮೂಲ ನಕ್ಷತ್ರದ 1ನೇ ಪಾದದಲ್ಲಿ ಹೆಣ್ಣುಮಗು ಜನಿಸಿದರೆ 8 ವರ್ಷದವರೆಗೆ ಮಗು ತಂದೆಯನ್ನು ನೋಡಬಾರದು ಎಂದು, 2ನೇ ಪಾದವಾದರೆ ತಾಯಿಗೆ ದೋಷ, 3ನೇ ಪಾದವಾದರೆ ತಂದೆಗೆ ಬರುವ ಆದಾಯದಲ್ಲಿ ನಷ್ಟ, 4ನೇ ಪಾದವಾದರೆ ಶು...

ಕರ್ಮಕ್ಕೆ ತಕ್ಕ ಫಲ

ಕರ್ಮಕ್ಕೆ ತಕ್ಕ ಫಲ ಮನುಷ್ಯ ಈ ಭೂಮಿಯ ಮೇಲೆ ಹುಟ್ಟುವುದು ಕೇವಲ ಸುಖ-ಸಂತೋಷವನ್ನು ಅನುಭವಿಸಲೆಂದೇ ಅಥವಾ ಪಾಪ ಕರ್ಮಗಳನ್ನು ಮಾಡಲೆಂದೆ. ಸಂತುಷ್ಠನಾದ ಪರಮಾತ್ಮನು ಕರ್ಮಾನುಷ್ಠಾನ ಪರನಾದ ಚೇತನಿಗೆ ಮೇಲೆ ಮೇಲೆ ಶ್ರೇಯೋಭಿವೃದ್ಧಿಯನ್ನು ಉಂಟು ಮಾಡುವ ಕರ್ಮಗಲಲ್ಲಿ (ಕೆಲಸದಲ್ಲಿ) ತೊಡಗುವಂತೆ ಬುದ್ಧಿಯನ್ನು ಕೊಟ್ಟು ಅನುಗ್ರಹಿಸುತ್ತಾನೆ. ವರ್ಣಾಶ್ರಮ ಧರ್ಮಗಳಲ್ಲಿ ಮಾಡುವ ನಿತ್ಯ ನೈಮಿತ್ತಿಕ ಕರ್ಮಗಳು ಚೇತನಿಗೆ ಕೆಲ ಪಾಪಗಳನ್ನು ನಿವೃತ್ತಿ ಮಾಡುವುದರೊಡನೆ ಸಮಾಜದ ಸುವ್ಯವಸ್ಥೆಗೂ ಕಾರಣವಾಗುತ್ತದೆ. ಇವುಗಳನ್ನು ಅನುಷ್ಠಾನ ಮಾಡದಿದ್ದರೆ ವೈಯಕ್ತಿವಾಗಿ ಪಾಪ ಭೂಮಿಷ್ಠನಾಗುವುದರೊಡನೆ ಸಮಾಜದ ಅಳಿವಿಗೂ ಕಾರಣನಾಗುತ್ತಾನೆ. ವರ್ಣಾಶ್ರಮ ಮಾಡುವ ಕರ್ಮಗಳೆಲ್ಲವೂ ಭಗವಂತನ ಆಜ್ಞೆ. ಈ ಜನ್ಮದಲ್ಲಿ ಮನುಷ್ಯನು ತಾನು ಹಿಂದೆ ಮಾಡಿರುವ ಪುಣ್ಯ ಪಾಪ ಕರ್ಮಪಲಗಳ ರೂಪದಲ್ಲಿ ಅವನಿಗೆ ಬರುವ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತಾನೆ. ಈ ರೀತಿಯಾದ ಫಲ ಕೊಡಲು ಆರಂಭಿಸಿರುವ ಕರ್ಮವನ್ನು 'ಪ್ರಾರಬ್ಧ' ಕರ್ಮ ಎನ್ನುತ್ತಾರೆ. ಮನುಷ್ಯನು ಹಿಂದೆಯೇ ಮಾಡಿರುವ ಕೆಲ ಕರ್ಮಗಳು ಇನ್ನು ಫಲವನ್ನೀಯದೆ ಇರುತ್ತವೆ. ಅವು ಮುಂದೆ ಎಂದೋ ಅವನಿಗೆ ಪಲ ಕೊಡಲು ಕಾದಿರುತ್ತವೆ. ಇವುಗಳನ್ನು 'ಆಗಾಮಿ' ಕರ್ಮ ಎನ್ನುತ್ತಾರೆ. ಜನ್ಮ ಪಡೆದ ಮನುಷ್ಯ ಪ್ರಾರಬ್ಧ ಕರ್ಮವನ್ನು ಅನುಭವಿಸುತ್ತಲೇ ಜತೆಜತೆಯಲ್ಲೇ ಮತ್ತೆ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಈ ರೀತಿ ಕರ್ಮಕ್ಕೆ ...

ಅಶುಭ ಕಾಲ---ಜಾತಕದಲ್ಲಿ ‘ಕುಂಡಲಿ’ ಏನಿದರ ವೈಶಿಷ್ಟ್ಯ

ಅಶುಭ ಕಾಲ * ರತ್ನರಾಜ ಜೈನ್ ನವಗ್ರಹಗಳಲ್ಲಿ ಅತ್ಯಂತ ಶುಭ ಫಲಗಳನ್ನು ಕೊಡುವ ಗ್ರಹಗಳೆಂದರೆ ಗುರು ಮತ್ತು ಶುಕ್ರ. ಈ ಎರಡು ಗ್ರಹಗಳಲ್ಲಿ ಯಾವೊಂದು ಗ್ರಹ ಅಸ್ತನಾಗಿದ್ದರೂ ಆ ಸಮಯದಲ್ಲಿ ವಿವಾಹಾದಿ ಮಂಗಳ ಕಾರ್ಯ ಮಾಡಬಾರದು. ಆದರೆ 'ಮಹಾತ್ಮ ದರ್ಪಣ'ದ ಫಲದಂತೆ ಫಲ ಹೀಗಿದೆ. ಗುರು ಅಸ್ತನಾದ ಕಾಲದಲ್ಲಿ ಶುಕ್ರನು ಸ್ವಂತ ಕ್ಷೇತ್ರಗಳಾದ ವೃಷಭ, ತುಲಾ ರಾಶಿಗಳಲ್ಲೂ ಅಥವಾ ಮಿತ್ರ ಕ್ಷೇತ್ರಗಳಾದ ಮಕರ, ಕುಂಭ, ಮಿಥುನ ರಾಶಿಗಳಲ್ಲಿದ್ದರೆ ವಿವಾಹ ಮಾಡಬಹುದು. ಅದೇ ರೀತಿ ಶುಕ್ರ ಗ್ರಹ ಅಸ್ತನಾದ ಕಾಲದಲ್ಲಿ ಗುರುವು ಸ್ವಂತ ಕ್ಷೇತ್ರಗಳಾದ ಧನು ಮತ್ತು ಮೀನ ರಾಶಿಯಲ್ಲಿದ್ದರೆ, ಕರ್ಕಾಟಕ ರಾಶಿಯಲ್ಲಿದ್ದರೆ ಮಿತ್ರ ಕ್ಷೇತ್ರಗಳಾದ ಸಿಂಹ, ವೃಶ್ಚಿಕ ಮತ್ತು ಮೇಷ ರಾಶಿಗಳಲ್ಲಿದ್ದರೆ ವಿವಾಹ ಮಾಡಬಹುದು. ಆದರೆ ಈಗ ಶುಕ್ರನು 2013, ಫೆಬ್ರವರಿ 27 ರಂದು ಶತಭಿಷಃ ಕುಂಭರಾಶಿಯಲ್ಲಿ ಅಸ್ತನಾಗಿ 2013, ಏಪ್ರಿಲ್ 24 ರಂದು ಮೇಷ ರಾಶಿ ಭರಣಿ ನಕ್ಷತ್ರದಲ್ಲಿ ಉದಯಿಸುವನು. ಈ ಸಮಯ ಶುಕ್ರ ಅಸ್ತಕಾಲ. ಯಾವುದೇ ವಿವಾಹ ಸಂಬಂಧ ಶುಭ ಕಾರ್ಯಗಳನ್ನು ಮಾಡುವ ಹಾಗಿಲ್ಲ. ಒಂದು ವೇಳೆ ವಿವಾಹ ಆದರೂ ದಾಂಪತ್ಯ ಜೀವನ ಉತ್ತಮ ಇರಲಾರದು. ಸತಿ-ಪತಿಯಲ್ಲಿ ಭಿನ್ನಭಿಪ್ರಾಯ ಉಂಟಾಗಿ, ಬೇರೆ ಬೇರೆ ಆಗುವ ಸಾಧ್ಯತೆ. ಹಾಗೆಯೇ ಸ್ತ್ರೀ ದೌರ್ಜನ್ಯಗಳು ಹೆಚ್ಚುವ ಸಾಧ್ಯತೆ ಇದೆ. ಸತಿ-ಪತಿ ಮಧ್ಯೆ ವಿರಸ ಉಂಟಾಗುವ ಸಾಧ್ಯತೆ. ಶುಕ್ರನು ಅಸ್ತನಾದ ಕಾಲದಲ್ಲಿ ಗುರು ಮತ...

ಭಾರತೀಯ ಕ್ರಮದಲ್ಲಿ ಋತುಗಳು

ಭಾರತೀಯ ಕ್ರಮದಲ್ಲಿ ಋತುಗಳು * ಗುರುರಾಜ ಪೋಶೆಟ್ಟಿಹಳ್ಳಿ ಆರು ವಿಧದ ಕಾಲ ವಿಭಾಗದಲ್ಲಿ ಮೂರನೆಯ ವಿಭಾಗ ಋತು. ಇದರ ಪರಮಾಣ ವರ್ಷದ ಆರನೆಯ ಒಂದು ಭಾಗ ಎಂದರೆ ಎರಡು ತಿಂಗಳುಗಳ ಕಾಲ ಅಥವಾ ಅರವತ್ತು ದಿವಸಗಳು. ಒಂದು ವರ್ಷದಲ್ಲಿ ಒಟ್ಟು ಆರು ಋತುಗಳಿವೆ. ಚೈತ್ರ ಶುಕ್ಲ ಪ್ರಥಮ ದಿವಸದಿಂದ ವಸಂತ ಋತು ಪ್ರಾರಂಭವಾಗುತ್ತದೆ. ಇದು ವೈಶಾಖ ಮಾಸ ಅಮಾವಾಸ್ಯೆಯಂದು ಮುಗಿಯುತ್ತದೆ. ಜ್ಯೇಷ್ಠ ಶುಕ್ಲ ಪಾಡ್ಯದಿಂದ ಆಷಾಢ ಅಮಾವಾಸ್ಯೆಯತನಕ ಗ್ರೀಷ್ಮ ಋತು. ಶ್ರಾವಣ ಶುಕ್ಲ ಪ್ರಥಮದಿಂದ ಪುಷ್ಯ ಅಮಾವಾಸ್ಯೆಯತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆಯತನಕ ಶಿಶಿರ ಋತು. ಈ ಆರು ಋತುಗಳಲ್ಲಿ ಸಾಮಾನ್ಯವಾಗಿ ಶಿಶಿರ, ವಸಂತ ಗ್ರೀಷ್ಮ ಋತುಗಳು ಉತ್ತರಾಯಣಕ್ಕೂ ವರ್ಷ, ಶರತ್, ಹೇಮಂತ ಋತುಗಳು ದಕ್ಷಿಣಾಯಣಕ್ಕೂ ಹೀಗೆ ಶುಕ್ಲ ಪಕ್ಷಾದಿಯಿಂದ ಅಮಾವಾಸ್ಯೆಯವರೆಗೆ ಕಾಲಗಣನೆ ಮಾಡುವ ಋತು ವಿಭಾಗಕ್ಕೆ ಚಾಂದ್ರ ಋತುಗಳೆಂದು ಹೆಸರು. ವಸಂತದಿಂದ ಶಿಶಿರದವರೆಗೆ:ಋತುಚರ್ಯೆಗೆ ಅನುಗುಣವಾಗಿಯೇ ಜೀವನ ಕ್ರಮ ರೂಪಿತವಾಗಿದ್ದು ಧರ್ಮ ಇದನ್ನು ನಿರ್ದೇಶಿಸುತ್ತದೆ. ಪ್ರತಿ ಭಾರತೀಯ ಆಚರಣೆ ಹಿಮದೆಯೂ ಜೀವನ್ಮುಖಿ ಅರ್ಥವಿದೆ. ಸೂರ್ಯನ ಪಥ ಸಂಚಲನೆಯಿಂದ ಪ್ರಕೃತಿಯ ಪರಿವರ್ತನೆ. ಪ್ರಕೃತಿಯ ಈ ಪರಿವರ್ತನೆಯ ಪ್ರವೃತ್ತಿಯನ್ನು ಋತುಗಳೆಂದು ಕರೆದರು. ಒಂದು ವರ್ಷಾವಧಿಯಲ್ಲಿ ಎರಡು ಮಾಸಗಳಿಗೊಂದರಂತೆ ಆರು ಋತು...

ನಾಡಿ ದೋಷ ವಿವೇಚನೆ

ನಾಡಿ ದೋಷ ವಿವೇಚನೆ * ಶ್ರೀಪಾದ ಆರ್. ಕುಲಕರ್ಣಿ ವಿವಾಹಕ್ಕೆ ಅನುಮತಿ ಕೊಡುವ ಮೊದಲು ವಧು-ವರರ ಜಾತಕಗಳನ್ನು ಪರಿಶೀಲಿಸಿ ಕೂಟ ಸಾಲಾವಳಿ, ದೋಷ ಸಾಮ್ಯ, ಆಯುಷ್ಯ, ಸಂತಾನ ಗೋತ್ರ, ಪ್ರವರ, ವಯಸ್ಸು, ವಂಶ, ಚಾರಿತ್ರ್ಯ, ದುರ್ಯೋಗಗಳು ಇತ್ಯಾದಿಗಳನ್ನು ವಿಚಾರಿಸಬೇಕಾಗುತ್ತದೆ. ಈ ಕೂಟ ಸಾಲಾವಳಿಗಳಲ್ಲಿ 8 ರಿಂದ 24ರವರೆಗೆ ಕೂಟಗಳಿರುತ್ತವೆ. ಆದರೆ ದಾಂಪತ್ಯ ಜೀವನಕ್ಕೆ ವರ್ಣ ಕೂಟ, ವಶ್ಯ ಕೂಟ, ತಾರಾ ಕೂಟ, ಯೋನಿ ಕೂಟ, ಗ್ರಹ ಮೈತ್ರಿ ಕೂಟ, ಗಣ ಕೂಟ, ರಾಶಿ ಕೂಟ, ನಾಡಿ ಕೂಟ ಈ ಎಂಟು ಕೂಟಗಳು ಮುಖ್ಯವಾಗಿವೆ. ಪ್ರತಿಯೊಂದು ಕೂಟವು ವಧುವಿನಿಂದ ವರನಿಗೆ ಗಣನೆಯು. ನಕ್ಷತ್ರಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಜ್ಯೇಷ್ಠಾ, ಉತ್ತರಾ, ಆರ್ದ್ರಾ, ಶತಭಿಷಾ, ಮೂಲಾ, ಹಸ್ತಾ, ಪುನರ್ವಸು, ಪೂರ್ವಭಾದ್ರಾ, ಅಶ್ವಿನಿ ಇವು ಆದ್ಯ ನಾಡಿಗಳು. ಪುಷ್ಯ, ಮೃಗಶಿರ, ಚಿತ್ರಾ, ಅನುರಾಧಾ, ಭರಣಿ, ಧನಿಷ್ಠ, ಪೂರ್ವಾಷಾಢ, ಹುಬ್ಬಾ, ಉತ್ತರ ಭಾದ್ರ ಇವು ಮಧ್ಯ ನಾಡಿ ನಕ್ಷತ್ರಗಳು. ಸ್ವಾತಿ, ಕೃತ್ತಿಕಾ, ಆಶ್ಲೇಷಾ, ಉತ್ತರಾಷಾಢ, ವಿಶಾಖಾ, ರೋಹಿಣಿ, ಮಘ, ಶ್ರವಣ, ರೇವತಿ ಇವು ಅಂತ್ಯ ನಾಡಿಗಳು. ವಧು-ವರರು ಏಕ ನಾಡಿಯಾದರೆ ಅಶುಭ. ಇಬ್ಬರದೂ ಮಧ್ಯ ನಾಡಿಯಾದರೆ ಮೃತ್ಯು. ಆದ್ಯ ನಾಡಿ ವಿಯೋಗಕರ. ಮಧ್ಯದ ಏಕ ನಾಡಿ ಮೃತ್ಯು ಪದ. ಅಂತ್ಯದ ಏಕ ನಾಡಿಯಾದರೆ. ದುಃಖಕರ ಭಿನ್ನ ನಾಡಿಯಾದರೆಉತ್ತಮ, ಸುಖ ದಾಂಪತ್ಯ. ಇವು ಸಾಮಾನ್ಯ ನಿಯಮಗಳ...

ಸುತ ಭಾವದ ಚಂದ್ರನಿಂದ ಪುತ್ರ ಸಂತತಿಗೆ ತಡೆ

ಸುತ ಭಾವದ ಚಂದ್ರನಿಂದ ಪುತ್ರ ಸಂತತಿಗೆ ತಡೆ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಪಂಚಮದಲ್ಲಿ ಚಂದ್ರನಿದ್ದರೆ ಇವರಿಗೆ ಹೆಂಗಸರ ಬುದ್ಧಿ ಇರುತ್ತದೆ. ಬಹಳ ಶ್ರಮ ಪಟ್ಟು ಹಣ ಸಂಪಾದನೆ ಮಾಡುತ್ತಾರೆ. ಪಂಚಮದಲ್ಲಿ ಚಂದ್ರನಿದ್ದು, ಬೇರೆ ಗ್ರಹಗಳು ಇಲ್ಲದಿದ್ದರೆ ಇವರಿಗೆ ಕನ್ಯಾ ಸಂತತಿ ಮಾತ್ರ ಇರುತ್ತದೆ. ಪುತ್ರ ಸಂತತಿ ಇರುವುದಿಲ್ಲ. ಚಂದ್ರನು ಕ್ಷೀಣಯುತನಾದರೆ ಚಂಚಲ ಪುತ್ರಿಯನ್ನು ಹೊಂದುತ್ತಾರೆ. ಇವರು ರೋಗಿಯೂ, ಭಯಾನಕರೂ ಆಗುವರು. ಪಂಚಮದ ಚಂದ್ರನು ಆರನೇ ವರ್ಷದಲ್ಲಿ ಅಗ್ನಿ ಯಾ ಬಿಸಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ. ಇದರಲ್ಲಿ ಚಂದ್ರನಿರಲು ಧೈರ್ಯ, ಒಳ್ಳೆಯ ಬುದ್ಧಿ, ಅಭಿವೃದ್ಧಿ ಹೊಂದುತ್ತಾರೆ. ಇವರದ್ದು ದೊಡ್ಡ, ಚೆಲುವಾದ ದೇಹ. ತೇಜಸ್ವಿ, ಮುಕ್ತ ವಿಚಾರಶೀಲರೂ ಆಗುತ್ತಾರೆ. ಇವರು ರಾಜಕೀಯದಲ್ಲಿ ಬಹಳ ಹೆಸರು ಮಾಡುತ್ತಾರೆ. ನಾಲ್ಕರ ಚಂದ್ರ ವಿಲಾಸ, ವಿನೋದ, ಮನೋರಂಜನೆಯಲ್ಲಿ ಆಸಕ್ತಿ ಇರುವವರೂ, ಮಕ್ಕಳಲ್ಲಿ, ಹೆಂಗಸರಲ್ಲಿ ಮೆಚ್ಚುಗೆ ಗಳಿಸುವವರೂ ಆಗುತ್ತಾರೆ. ಇವರ ಮಕ್ಕಳು ಚೆಲುವಾದ ದೇಹವನ್ನು ಹೊಂದುತ್ತಾರೆ. ಚಂದ್ರ ಬಲಿಷ್ಠನಾಗಿದ್ದರೆ ಇವರು ಮಟ್ಕಾ, ಜುಗಾರಿಯಲ್ಲಿ ಭಾರಿ ಲಾಭ ಪಡೆಯುತ್ತಾರೆ. ಚತುರ್ಥಮ ದ್ವಿಭಾವ ರಾಶಿಯಾಗಿದ್ದರೆ ಇವರಿಗೆ ಅವಳಿ ಜವಳಿ ಮಕ್ಕಳಾಗುತ್ತದೆ. ಪಂಚಮದ ಚಂದ್ರನನ್ನು ಶನಿ ನೋಡುತ್ತಿದ್ದರೆ ಇವರು ವಂಚಕ, ಕಪಟ ಬುದ್ಧಿಯುಳ್ಳವರಾಗಿರತ್ತಾರೆ. ಮಾತಿನಿಂದ ಮರಳುಗೊಳಿಸಿ ಆಪ್ತ ಜನರನ್ನು ಕಷ್ಟಕ್ಕೆ ಈಡು ಮಾಡಿ ಹ...

ದುಃಖವಿಲ್ಲದೆ ಸುಖವಿಲ್ಲ ಪಾಪವಿಲ್ಲದೆ ಪುಣ್ಯವಿಲ್ಲ

ದುಃಖವಿಲ್ಲದೆ ಸುಖವಿಲ್ಲ ಪಾಪವಿಲ್ಲದೆ ಪುಣ್ಯವಿಲ್ಲ * ರಾಮಸ್ವಾಮಿ ಮಾತೃ ಪ್ರೇಮವಿಲ್ಲದೆ ಸೃಷ್ಟಿ ಮುಂದುವರಿಯುವುದಿಲ್ಲ. ಯಾವುದೂ ಕೇವಲ ಔತಿಕವೂ ಅಲ್ಲ ಅಥವಾ ಅಚೌತಿಕವೂ ಅಲ್ಲ. ಒಂದು ಮತ್ತೊಂದನ್ನು ಸೂಚಿಸುವುದು. ಈ ಪ್ರಪಂಚಕ್ಕೆ ಒಂದು ಹಿನ್ನೆಲೆ ಇದೆ. ಮಾನವ ದೇಹ ಭಾವನೆಯನ್ನು ಮೀರಿ ಹೋದಾಗ, ಹಿಂದೂಗಳು, ಕ್ರೈಸ್ತರು, ಮಹಮದೀಯರು ಅಥವಾ ಬೌದ್ಧರು ಯಾವುದೇ ಪಂತಕ್ಕೆ ಸೇರಿದವರಾದರೂ ಎಲ್ಲರಿಗೂ ಒಂದೇ ಅನುಭವ ಆಗುತ್ತದೆ. ಅನುಭವವೇ ನಮ್ಮ ನಿಜವಾದ ಜ್ಞಾನ ಅಥವಾ ಧರ್ಮ. ನಾವು ಅನೇಕ ಶತಮಾನಗಳಿಂದ ಅದರ ವಿಷಯವಾಗಿ ಮಾತನಾಡುತ್ತಿದ್ದರೂ ನಮ್ಮ ಆತ್ಮವು ನಮಗೇ ತಿಳಿಸಲಾರದು. ಚಂಚಲತೆ ಇಲ್ಲದೆ ಮಾನವ ಶಕ್ತಿಯನ್ನು ಏಕಾಗ್ರಹಗೊಳಿಸುವುದೊಂದೇ ದೇವರನ್ನು ಅಥವಾ ಅವನ ಶಕ್ತಿಯನ್ನು ನೋಡುವ ಏಕಮಾತ್ರ ಉಪಕರಣ. ಧರ್ಮವು ನಿಮಗೆ ಏನನ್ನು ಕೊಡುವುದಿಲ್ಲ. ಅದು ಇರುವ ಆತಂಕಗಳನ್ನು ನಿವಾರಿಸಿ ನಿಮ್ಮ ಆತ್ಮವನ್ನು ನೋಡಲು ಅವಕಾಶ ಮಾಡಿಕೊಡುವುದು. ಅನಾರೋಗ್ಯವೇ ಮೊದಲನೇ ಆತಂಕ. ಆರೋಗ್ಯವಾದ ದೇಹವೇ ಅತಿ ಮುಖ್ಯವಾದ ಉಪಕರಣ. ನಾವು ದಾಟಲಾರದಂತ ಅಂಶವೆಂದರೆ ಖಿನ್ನತೆ, ಸಂಶಯ, ದೃಢತೆ ಇಲ್ಲದೇ ಇರುವುದು. ನಮ್ಮ ಪೂರ್ವಿಕರು ದೇವರು, ಧರ್ಮ, ನೀತಿ ಮುಂತಾದವುಗಳನ್ನು ಕುರಿತು ಚಿಂತಿಸುತ್ತಿದ್ದರು. ಆದ ಕಾರಣವೇ ನಮ್ಮ ಬುದ್ಧಿ ಅವುಗಳನ್ನೇ ಕುರಿತು ಚಿಂತಿಸುತ್ತದೆ. ಚಿಂತಿಸುವಾಗ ಲೌಕಿಕ ಪ್ರಯೋಜನಕ್ಕೆ ತವಕಪಟ್ಟರೆ ಅವನ್ನು (ದೇವರು, ನೀತಿ ಇವುಗಳನ್ನು) ಪುನಃ ಕಳೆದುಕೊಂಡರೂ ಕಳೆದುಕೊ...

ಮನುಷ್ಯನ ದೀರ್ಘಾಯಸ್ಸು 120 ವರ್ಷಗಳು

ಮನುಷ್ಯನ ದೀರ್ಘಾಯಸ್ಸು 120 ವರ್ಷಗಳು * ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್. ಮಹಾಭಾರತದಲ್ಲಿ ಬರುವ ವಿಧುರ ನೀತಿ ಹೇಗೆ ಹೇಳುತ್ತದೆ, ಪೂರ್ವ ವಯಸ್ಸಿನ ನಮ್ಮ ಕಾರ್ಯ ಚಟುವಟಿಕೆಗಳು ಹೇಗೆ ಇರಬೇಕೆಂದರೆ ಬದುಕಿನ ಪ್ರಾರಂಭದಲ್ಲೇ ನಾವು ವೃದ್ಧಾಪ್ಯವನ್ನು ಎದುರಿಸಲು ಮನಸ್ಸನ್ನು ಸಿದ್ಧಗೊಳಿಸಬೇಕು. ಮನುಷ್ಯನು ನಿಷ್ಕ್ರಯನಾಗಿದ್ದರೆ ನಾನಾ ರೋಗಗಳು ಆಹ್ವಾನಿಸುತ್ತದೆ. ಆದ್ದರಿಂದ ಅಂಗಾಂಗಗಳೆಲ್ಲವೂ ಲವಲವಿಕೆಯಂದಿರುವಂತೆ ಕಾರ್ಯ ನಿರತರಾಗಿರಬೇಕು. ಆಗ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 120 ವರ್ಷಗಳ ಕಾಲ ಜೀವಿಸಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದೊಂದು ಗ್ರಹಕ್ಕೂ ದಶ ವರ್ಷ ಮತ್ತು 3 ನಕ್ಷತ್ರಕ್ಕೆ ಒಂದು ಗ್ರಹ ಅಧಿಪತಿ ಎಂದು ನಿಗದಿ ಮಾಡಿರುವರು. ಅವು ಯಾವುವು ಎಂದರೆ, * ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರಕ್ಕೆ ಕೇತು ಗ್ರಹ ಅಧಿಪತಿ ಇದ್ದರೆ ದೆಸೆ 7 ವರ್ಷಗಳು. * ಭರಣಿ, ಪುಬ್ಬೆ ಮತ್ತು ಪೂರ್ವಾಷಾಢ ನಕ್ಷತ್ರಕ್ಕೆ ಶುಕ್ರ ಗ್ರಹ ಅಧಿಪತಿ ಇದರ ದೆಸೆ 20 ವರ್ಷಗಳು. * ಕೃತ್ತಿಕಾ, ಉತ್ತರೆ ಮತ್ತು ಉತ್ತರಾಷಾಢ ನಕ್ಷತ್ರಕ್ಕೆ ರವಿ ಗ್ರಹ ಅಧಿಪತಿ ಇದ್ರ ದೆಸೆ6 ವರ್ಷಗಳು. * ರೋಹಿಣಿ, ಹಸ್ತ ಮತ್ತು ಶ್ರವಣ ನಕ್ಷತ್ರಕ್ಕೆ ಚಂದ್ರ ಗ್ರಹ ಅಧಿಪತಿ. ಇದರ ದೆಸೆ 10 ವರ್ಷಗಳು. * ಮೃಗಶಿರಾ, ಚಿತ್ತ ಮತ್ತು ಧನಿಷ್ಠ ನಕ್ಷತ್ರಕ್ಕೆ ಕುಜ ಗ್ರಹ ಅಧಿಪತಿ ಇದರ ದೆಸೆ 7 ವರ್ಷಗಳು. * ಆರಿರ್ದ್ರಾ, ಸ್ವಾತಿ ಮತ್ತು ಶತಭಿಷ ನಕ್ಷತ್ರಕ್ಕೆ ರಾಹು ಅಧಿಪತಿ ಇದರ ದೆಸೆ 18...

ಜ್ಯೋತಿಷ್ಯ ನಂಬಿ ಕೆಡಬೇಡಿ

ಜ್ಯೋತಿಷ್ಯ ನಂಬಿ ಕೆಡಬೇಡಿ * ದೈವಜ್ಞ ಹರೀಶ್ ಕಾಶ್ಯಪ್ ಇತ್ತೀಚೆಗೆ ಜನರು ಜ್ಯೋತಿಷ್ಯದ ಮೊರೆ ಹೋಗುವುದು ಹೆಚ್ಚಾಗುತ್ತಿದೆ. ಇದನ್ನರಿತ ಕಪಟ ಜ್ಯೋತಿಷ್ಯರು ಇದನ್ನೇ ಬಂಡವಾಳವಾಗಿ ಮಾಡುತ್ತಿದ್ದಾರೆ. ಹೀಗಾಗಿ ಹಾದಿ ಬೀದಿಯಲ್ಲಿ ಜ್ಯೋತಿಷ್ಯರು ಕಂಡು ಬರುತ್ತಿದ್ದಾರೆ. ಜ್ಯೋತಿಷ್ಯ ಇಂದು ಬಿಕರಿಯ ವಸ್ತುವಾಗಿದೆ. ವಿಜ್ಞಾನ ವಾಹಿಯಾಗಿ ಉಳಿದಿಲ್ಲ. ಜ್ಯೋತಿಷ್ಯವನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ? ಸಿದ್ಧತೆಗಳೇನು? ಅವುಗಳ ಬಗ್ಗೆ ತಿಳಿದುಕೊಳ್ಳೋಣ. * ಜ್ಯೋತಿಷ್ಯ ಶಾಸ್ತ್ರಕ್ಕೂ ಮಾಟ ಮಂತ್ರ ಪ್ರಯೋಗಗಳಿಗೂ ಸಂಬಂಧವಿಲ್ಲ. ಹಾಗೆಯೇ ನಾಡಿ, ಶಕುನ, ಕೊರವಂಜಿ, ಗಿಳಿ ಹೆಸರಿನ ಸೋಗಿಗೂ ಜ್ಯೋತಿಷ್ಯಕ್ಕೂ ಸಂಬಂಧವಿಲ್ಲ. ಧಾರ್ಮಿಕ ಗೊಡ್ಡು ವೇಷ ಧರಿಸಿ ಹೀಗೆ ಮಾಡುವವರೆಲ್ಲ 'ಜ್ಯೋತಿಷ್ಯ' ಎಂದು ನಂಬಬೇಡಿ. * ಜ್ಯೋತಿಷ್ಯ ಶಾಸ್ತ್ರದಿಂದ ಯಾರಿಗೂ ಕೆಡುಕು ಮಾಡಲಾಗದು. ಆ ಹೆಸರಿನಿಂದ ದುರಾಚಾರ ಮಾಡುವವರಿಂದ ದೂರವಿರಿ. ಇತರರನ್ನೂ ದೂರವಿರಿಸಿ. * ಮಹಾಜ್ಞಾನ ಪೀಠಗಳಾದ (ಅದ್ವೈತ, ದ್ವೈತ, ವಿಶಿಷ್ಟಾದ್ವೈತ) ಮಠಗಳ ಘನತೆ ಇರುವ ಪೀಠಾಧಿಪತಿಗಳಿಂದ ಪೋಷಿತರಾದ ಯೋಗ್ಯ ಜ್ಯೋತಿಷಿಗಳಿಗೆ ನಿಮ್ಮ ಮನ್ನಣೆ ಇರಲಿ. * ಅನೂಜಾನವಾಗಿ ಅಧ್ಯಯನ ಮಾಡಿದ ಮತ್ತು ಶಾಸ್ತ್ರೋಕ್ತ ವಿಧಿ ವಿಧಾನ ತಿಳಿದವರೆಂದು ನೋಡಿ ಮಾರ್ಗದರ್ಶನ ಪಡೆಯಿರಿ. ಸುಮ್ಮನೆ ಢಾಳತನ, ಆಟಾಟೋಪ ಢೋಂಗಿ, ದೊಡ್ಡ ಬೋರ್ಡ್ಗಳ ಹಿಂದೆ ಹೋಗಬೇಡಿ. * ಹೀಗೆ ಅರಸಿ ಯೋಗ್ಯರಲ್ಲೂ ನಿಮ್ಮ ನಡೆಯು ಉದಾ...

ಜಾತಕದಲ್ಲಿ ಪಾಪಗ್ರಹದ ಫಲ

ಜಾತಕದಲ್ಲಿ ಪಾಪಗ್ರಹದ ಫಲ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಗ್ರಹದೋಷದಿಂದ ಜನ ತೊಂದರೆ ಅನುಭವಿಸುತ್ತಾರೆ. ಉದ್ಯೋಗದಲ್ಲಿ ಸಮಸ್ಯೆ, ಅಪಮಾನ, ವೈರಿಕಾಟ ಆಗುತ್ತದೆ. ಸುತ್ತಲಿರುವ ಜನರಿಂದ ತೊಂದರೆ, ವಿನಾಕಾರಣ ಅಪವಾದಗಳು ಬರುತ್ತವೆ. ಗ್ರಹದೋಷ ಅಪಕೀರ್ತಿ ಹಾಗೂ ಕೆಲ ವೇಳೆ ಆಯುಷ್ಯಕ್ಕೂ ಕಂಟಕವಾಗುತ್ತದೆ. ವ್ಯಯ ಸ್ಥಾನದಲ್ಲಿ ಶನಿ, ರಾಹು ಯಾವುದಾದರೂ ಒಂದು ಗ್ರಹ ಇದ್ದರೂ, ಇವರಿಗೆ ದಾರಿದ್ರ್ಯ ಯೋಗವಾಗುತ್ತದೆ. ಇಂತಹವರಿಗೆ ಜೀವನ ಪೂರ್ತಿ ಬಡತನ ಬರುತ್ತದೆ. ವ್ಯಯ ಸ್ಥಾನದಲ್ಲಿ ಶನಿಯು ಬಹಳ ಕೆಟ್ಟ ಫಲವನ್ನು ಕೊಡುತ್ತದೆ. ಇಂತಹವರಿಗೆ ಅಧಿಕಾರದಲ್ಲಿ ತೊಂದರೆಯಾಗುತ್ತದೆ. ಇತರ ಕೆಲಸಗಳಲ್ಲಿ ಅಡೆತಡೆಯಾಗಿ ಕೆಲಸವನ್ನೇ ಕಳಕೊಳ್ಳುವ ಪ್ರಸಂಗವೂ ಬರಬಹುದು. ಶನಿ ಮಂಗಳದಿಂದ ಪಾಪಗ್ರಹಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪ್ರಬಲರಾಗಿದ್ದರೆ ಇವರು ಯಾವುದಾದರೂ ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೆ ಒಳಗಾಗುತ್ತಾರೆ. ವ್ಯಯ ಸ್ಥಾನದಲ್ಲಿ ರವಿಯು ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಬಿಡದೆ ಅರ್ಧಕ್ಕೆ ನಿಂತು ಹೋಗುವಂತೆ ಮಾಡುತ್ತದೆ. ವ್ಯಯ ಸ್ಥಾನದಲ್ಲಿ ಮಂಗಳನಿದ್ದರೆ ಇಂತಹವರ ಹೆಂಡತಿ ಮರಣ ಹೊಂದುತ್ತಾರೆ. ಗ್ರಹಗಳಿಗೆ ಸ್ಥಾನ ರಾಶಿ ಮತ್ತು ಯೋಗ ಹೀಗೆ ನಾಲ್ಕು ಬಗೆಯ ಫಲಗಳು ಇರುವವು. ಮೇಲಿನ ವರದಿಂದ ಸ್ಥಾನ ಬಲದ ಫಲ, ಪಾಪಗ್ರಹಗಳ ರಾಶಿಯಲ್ಲಿ ಪಾಪಗ್ರಹಗಳ ಫಲವು ಬಹಳ ತೀಕ್ಷ್ಣ ರೀತಿಯಿಂದ ಇರುತ್ತದೆ. ಕುಂಡಲಿಯಲ್ಲಿ ಕೇಂದ್ರದಲ್ಲಿರುವ ಗ್ರಹಗಳ ಫಲವು ಹೆಚ್...

ಸ್ತ್ರೀಯ ಕುಂಡಲಿಯಂತೆ ಪತಿಯ ಸ್ವಭಾವ

ಸ್ತ್ರೀಯ ಕುಂಡಲಿಯಂತೆ ಪತಿಯ ಸ್ವಭಾವ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಸ್ತ್ರೀಯರ ಜಾತಕದಲ್ಲಿ ಯಾವ ಯಾವ ಗ್ರಹಗಳು ಎಲ್ಲೆಲ್ಲಿರುತ್ತವೆ ಎಂಬುದರ ಆಧಾರದ ಮೇಲೆ ಆಕೆಯ ಪತಿಯ ಸ್ವಭಾವ ಹೇಗಿರುತ್ತದೆ ಎಂಬುದನ್ನು ನಿರ್ಧರಿಸಬಹುದಾಗಿದೆ. ಬನ್ನಿ, ಸ್ತ್ರೀಯ ಕುಂಡಲಿಯಂತೆ ಪತಿಯ ಸ್ವಭಾವ ಹೇಗಿರುತ್ತದೆ ಎಂದು ನೋಡೋಣ. ಅಪ್ರಯೋಜಕ ಗಂಡ: ಜನ್ಮ ಲಗ್ನದಿಂದಾಗಲೀ, ಚಂದ್ರ ಲಗ್ನದಿಂದಾಗಲೀ ಸಪ್ತಮ ರಾಶಿಯಲ್ಲಿ ಗ್ರಹಗಳು ಇರುವುದಿಲ್ಲ. ಅಲ್ಲದೆ ಸಪ್ತಮವು ಬಲಹೀನವಾಗಿ ಶುಭಗ್ರಹಗಳ ದಷ್ಟಿಯೂ ಸಹ ಇರುವುದಿಲ್ಲ. ಇಂಥ ವೇಳೆ ಆಕೆಯ ಗಂಡನು ಪ್ರಯೋಜನಕ್ಕೆ ಬಾರದವನಾಗುತ್ತಾನೆ. ಸ್ತ್ರೀಯರ ಏಳನೆಯ, ಎಂಟನೆಯ ಮನೆಗಳು ಪಾಪ ಗ್ರಹಗಳ ದಷ್ಟಿಗೊಳಗಾಗಿದ್ದರೆ ಗಂಡ ಹೆಂಡತಿಯರಿಗೆ ಪರಸ್ಪರ ನಷ್ಟ ಉಂಟಾಗುತ್ತದೆ. ಸ್ತ್ರೀಯರ ಜಾತಕದಲ್ಲಿ ಶನಿ ಬುಧರು ಸಪ್ತಮದಲ್ಲಿದ್ದರೆ ಇವರು ವಿಧುರ ಗಂಡನನ್ನು ಕೈ ಹಿಡಿಯುತ್ತಾರೆ. ಸ್ತ್ರೀಯರ ಸಪ್ತಮ ರಾಶಿಯಲ್ಲಿ ಬುಧ ಶನಿಗಳಿದ್ದರೆ ಅಂತಹ ಸ್ತ್ರೀಯರ ಗಂಡ ನಪುಂಸಕರಾಗುವರು. ಸ್ತ್ರೀಯರ ಜಾತಕದಲ್ಲಿ ದುರ್ಬಲನೂ, ಪೀಡಿತನೂ ಆದ ಶುಕ್ರನು ಏಳನೆಯ ಮನೆಯಲ್ಲಿ ಇದ್ದರೆ ಗಂಡನು ನಪುಂಸಕನಾಗುತ್ತಾನೆ. ಸ್ತ್ರೀಯರ ಜಾತಕದಲ್ಲಿ ಸಪ್ತಮರ ಅಧಿಪತಿ ಅಥವಾ ಶುಕ್ರ ರಾಹುವಿನ ಸಂಗಡ ಇದ್ದು ಪಾಪ ವೀಕ್ಷಿತನಾಗಿದ್ದರೆ ಇವರ ಗಂಡ ವ್ಯಭಿಚಾರಿಯಾಗುತ್ತಾನೆ. ಸ್ತ್ರೀಯರ ಕುಂಡಲಿಯಲ್ಲಿ ಲಗ್ನ ಅಥವಾ ಚಂದ್ರ ರಾಶಿಯಿಂದ ಸಪ್ತಮ ಸ್ಥಾನಗಳು ಚರ ರಾಶಿಗಳಾದರೆ ಅಂತಹ ಸ್ತ್ರ...

ಜೇಬಿನಲ್ಲಿ ದುಡ್ಡಿಲ್ವಾ? ಜಾತಕ ತೋರಿಸಿ!

ಜೇಬಿನಲ್ಲಿ ದುಡ್ಡಿಲ್ವಾ? ಜಾತಕ ತೋರಿಸಿ! * ಸ್ಟೀವನ್ ರೇಗೊ, ದಾರಂದಕುಕ್ಕು ಉತ್ತಮ ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಆರೋಗ್ಯ, ಶಾಂತಿ, ಸಮಾಧಾನದ ಜತೆಗೆ ಬೇಡುವುದು ಹಣ. ಈ ಹಣ ನಿಮ್ಮ ಜೇಬು ತುಂಬಿತ್ತಿಲ್ಲ ಎಂದಾದರೆ ಅದು ನಿಮ್ಮ ಜನ್ಮಕುಂಡಲಿಯ ಸಮಸ್ಯೆ ಎನ್ನೋದು ಜ್ಯೋತಿಷ್ಯದ ಮಾತು. ಹಣ ಯಾರಿಗೆ ತಾನೇ ಬೇಡ ಹೇಳಿ. ಎಲ್ಲರೂ ದಿನನಿತ್ಯ ಒದ್ದಾಡೋದು ಬರೀ ಹಣಕ್ಕಾಗಿ ಎನ್ನುವ ಸಾರ್ವಕಾಲಿಕ ಸತ್ಯ ಎಲ್ಲರಿಗೂ ಗೊತ್ತು. ಒಂದರ್ಥದಲ್ಲಿ ಉತ್ತಮ ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಆರೋಗ್ಯ, ಶಾಂತಿ, ಸಮಾಧಾನದ ಜತೆಗೆ ಬೇಡುವುದು ಹಣ. ಎಲ್ಲರ ಆರ್ಥಿಕ ಸ್ಥಿತಿಯೂ ಒಂದೇ ತೆರನಾಗಿದ್ದರೆ ದೇಶ ಹೀಗೆ ಇರುತ್ತಿರಲಿಲ್ಲ ಎನ್ನುವ ಆರ್ಥಿಕ ತಜ್ಞರು ಹೇಳುವ ಮಾತು ಒಪ್ಪಲೇಬೇಕು. ಅಂದಹಾಗೆ ಆರ್ಥಿಕ ಸ್ಥಿತಿ ಅವರವರ ಜನ್ಮ ಕುಂಡಲಿಯನ್ನೂ ಅವಲಂಬಿಸಿದೆ ಅನ್ನುವ ಸತ್ಯ ಈಗ ಬೆಳಕಿಗೆ ಬಂದಿದೆ. ಹಾಗಾದರೆ ಪ್ರತಿಯೊಬ್ಬರ ಜನ್ಮ ಕುಂಡಲಿಯಲ್ಲಿ ಆಯಾ ಸ್ಥಾನ ಅರ್ಥಾತ್ ಆರ್ಥಿಕ ಸ್ಥಾನ ಎಲ್ಲಿದೆ ಮತ್ತು ಹೇಗಿರುತ್ತದೆ ಎಂಬುದಕ್ಕೆ ಮುಂದೆ ಓದಿ ನೋಡಿ... ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಅರ್ಥಾತ್ ಜಾತಕದಲ್ಲಿ ಎರಡನೇ ಅಥವಾ 11ನೇ ಭಾವವನ್ನು ಆರ್ಥಿಕ ಸ್ಥಿತಿಯನ್ನು ಸೂಚಿಸುತ್ತದೆ. ಈ ಭಾವವನ್ನು ನೋಡುವ ಜತೆಜತೆಗೆ ನಾಲ್ಕನೇ ಹಾಗೂ 10ನೇ ಭಾವದಲ್ಲಿ ಶುಭವಿದೆಯೋ ಅಶುಭವಿದೆಯೋ ಎಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸ್ಥಾನಗಳು ಪ್ರಬಲವಾಗಿದ್ದರೆ, ಖಂಡಿತ ಅವುಗಳ ಪರ...

ರಾಹು ಕೇತುಗಳ ಶುಭ ಫಲಗಳು

ರಾಹು ಕೇತುಗಳ ಶುಭ ಫಲಗಳು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು? ರಾಹು ಕೇತುಗಳಿಂದ ಶುಭ ಅಶುಭ ಫಲಗಳು ಇದ್ದೇ ಇರುತ್ತವೆ. ಕೆಲವರು ರಾಹು ಕೇತುಗಳಿಗೆ ಹೆದರುತ್ತಾರೆ. ರಾಹುವನ್ನು ಕಾಲ ರುದ್ರನೆಂದೂ, ಕೇತುವನ್ನು ಕ್ರಮಕಾರಕನೆಂದೂ ಹೇಳುತ್ತಾರೆ. ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ. ಕೇತುಗೆ ಧನು ರಾಶಿ ಉಚ್ಚವಾಗಿದೆ. ಮಿಥುನ ನೀಚ ಸ್ಥಾನ. ಅದರ ಸ್ವಕ್ಷೇತ್ರ ಮೀನ ರಾಶಿ. ಕೇತುನ ಮೂಲ ತ್ರಿಕೋಣ ಸಿಂಹ. ರಾಹು ಅಥವಾ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಿಪತಿ ಇಲ್ಲವೇ ಸಪ್ತಮಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ಆ ದೆಸೆಯಲ್ಲಿ ಯಾವುದೇ ಒಳ್ಳೆಯ ಫಲವನ್ನು ಕೊಡುವುದಿಲ್ಲ. 1, 4, 7, 10 ಕೇಂದ್ರ ಸ್ಥಾನ 5, 9 ತ್ರಿಕೋಣ ಸ್ಥಾನದೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಆ ಗ್ರಹಗಳ ದೆಸೆಯಲ್ಲಿ ಅಧಿಕಾರ, ಸಂಪತ್ತು ದೊರೆಯುವುದು. ವಷಭ, ಸಿಂಹ, ವಶ್ಚಿಕ...

ಮೇಷಾದಿಗಳ ಯೋಗ

ಮೇಷಾದಿಗಳ ಯೋಗ ಮೇಷ: ಲಗ್ನಕ್ಕೆ ಪಂಚಮಾಧಿಪತಿ ರವಿ ಹಾಗೂ ಅಷ್ಟಮಾಧಿಪತಿ ಸ್ವಯಂ ಕುಜ. ಹಾಗಾಗಿ ಇಬ್ಬರೂ ಯೋಗಕಾರಕರೇ. ವೃಷಭ: ಪಂಚಮಾಧಿಪತಿ ಬುಧ. ಶುಕ್ರನ ಮಿತ್ರ ಯೋಗವಿತ್ತರೆ, ಅಷ್ಟಮಾಧಿಪತಿ ಗುರು ಅವಯೋಗಿ ಶುಕ್ರನ ಶತೃ. ಮಿಥುನ: ಪಂಚಮಾಧಿಪತಿ ಶುಕ್ರ, ಅಷ್ಟಮಾಧಿಪತಿ ಶನಿ ಇಬ್ಬರೂ ಬುಧನ ಮಿತ್ರರು, ಯೋಗಕಾರಕು. ಕಟಕ: ಪಂಚಮಾಧಿಪತಿ ಕುಜ ದಶಮಾಧಿಪತಿ ಹಾಗೂ ಈ ಲಗ್ನ ರಾಜ ಯೋಗಕಾರಕ. ಆದರೆ ಶನಿ ಅಷ್ಟಮಾಧಿಪತ್ಯ ಹೊಂದಿದರೂ ಶತ್ರು ಗ್ರಹ. ಸಿಂಹ: ಪಂಚಮ-ಅಷ್ಟಮಗಳೆರಡೂ ಗುರು, ರವಿಯ ಮಿತ್ರ ಯೋಗಕಾರಕ. ಕನ್ಯಾ: ಪಂಚಮದ ಶನಿ ಬುಧನ ಮಿತ್ರ ಯೋಗವೀಯುವ ಆದರೆ ಅಷ್ಟಮಾಧಿಪತಿ ಕುಜ ಬುಧನ ಪರಮ ಶತ್ರು. ತುಲಾ: ಶನಿಯು ಪಂಚಮವಲ್ಲದೇ ಚತುರ್ಥನೂ ಹೌದು. ಅಂತೆಯೇ ಅಷ್ಟಮಾಧಿಪತಿ ಸ್ವಯಂ ಶುಕ್ರ ಎರಡೂ ಉತ್ತಮ. ವೃಶ್ಚಿಕ: ಪಂಚಮಾಧಿಪತಿ ಗುರು ಕುಜನ ಮಿತ್ರ ಯೋಗದಾಯಕ, ಅಷ್ಟಮಾಧಿಪತಿ ಬುಧ ಪರಮ ಶತ್ರು. ಧನಸ್ಸು: ಗುರುವಿಗೆ ಪಂಚಮ-ಅಷ್ಟಮಾಧಿಪತಿಗಳಾದ ಕುಜ ಚಂದ್ರರಿಬ್ಬರೂ ಮಿತ್ರರು. ಇಬ್ಬರೂ ಯೋಗಕಾರಕರೇ. ಮಕರ: ಪಂಚಮಾಧಿಪತಿ ಶುಕ್ರ ಮಿತ್ರ ಉತ್ತಮದಾಯಕ. ಆದರೆ ಅಷ್ಟಮಾಧಿಪತಿ ರವಿ ಶತ್ರುಗ್ರಹ. ಕುಂಭ: ಪಂಚಮ ಬುಧ, ಅಷ್ಟಮನೂ ಬುಧನ ಯೋಗದಾಯಕ. ಮೀನ: ಪಂಚಮಾಧಿಪತಿ ಚಂದ್ರ ಉತ್ತಮ. ಆದರೆ ಅಷ್ಟಮಾಧಿಪತಿ ಶುಕ್ರ, ಗುರುವಿನ ಶತ್ರು (ಅವಯೋಗಿ.)

ಧನಯೋಗ, ಜಾತಕ ಮತ್ತು ಹಣ ಸಂಪಾದನೆ

ಧನಯೋಗ, ಜಾತಕ ಮತ್ತು ಹಣ ಸಂಪಾದನೆ * ಡಿ.ವಿ. ಸುಬ್ಬಣ್ಣ ಪ್ರತಿಯೊಂದು ಜಾತಕದಲ್ಲಿ ಹಣ ಸಂಪಾದನೆಯನ್ನು ಪ್ರತಿಪಾದಿಸುವ ಸ್ಥಾನಗಳು ಲಗ್ನಾತ್ 2-8-11. ದ್ವಿತೀಯ ಭಾವ, ಸ್ವಯಾರ್ಜಿತ, ಶ್ರಮದ ದುಡಿಮೆಯಿಂದ ಬರುವ ಹಣವನ್ನು ಅಷ್ಟಮ ಭಾವ, ಕಳತ್ರ (ಪತಿ, ಪತ್ನಿ) ಮೂಲದ ಹಣವನ್ನು ಹಾಗೂ ಲಾಭ ಸ್ಥಾನವೆನಿಸಿರುವ 11ನೇ ಮನೆಯು ನಿರಾಯಾಸವಾಗಿ ಉಂಟಾಗುವ ಲಾಭವನ್ನು ಸೂಚಿಸುತ್ತದೆ. ಇದರೊಂದಿಗೆ ಆಕಸ್ಮಿಕ ಧನಾಗಮನವನ್ನು ಜಾತಕದಲ್ಲಿ ಕೂರಿಸುವ ಸ್ಥಾನಗಳು ಎಂದರೆ, ಐದು ಹಾಗೂ ಎಂಟು. ಈ ಪಂಚಮ ಅಷ್ಟಮ ಭಾವಾಧಿಪತಿಗಳು ಜತೆಗೂಡಿಯೋ ಪರಸ್ಪರ ದೃಷ್ಟಿಕರಾಗಿಯೋ ಇದ್ದಲ್ಲಿ ದಶಾಭುಕ್ತಿ ಕಾಲ ಉಂಟಾದರಂತೂ ಖಂಡಿತ ಆಕಸ್ಮಿಕ ಧನ ಯೋಗ ಉಂಟಾಗುತ್ತದೆ. ಆ ಧನಯೋಗವು ಗ್ರಹಗಳ ಬಲಾಬಲಗಳು ಹಾಗೂ ಶತ್ರು ಮಿತ್ರತ್ವವನ್ನು ಆಧರಿಸಿರುತ್ತದೆ. ಪಂಚಮ ಹಾಗೂ ಅಷ್ಟಮಾಧಿಪತಿಗಳು ಶುಭಗ್ರಹಗಳಾದಲ್ಲಿ ಸಾವಯ ರೀತಿಯ ಸಂಪಾದನೆಯೂ, ಅಶುಭರಾದಲ್ಲಿ ಅಶುಭ ರೀತಿಯಿಂದಲೂ ಉಂಟಾಗುವುದು. ಅಷ್ಟಮವೂ ಮರಣಪತ್ರ (ಉಯಿಲು), ಕೋರ್ಟು ಕಚೇರಿಗಳಿಂದ ಉಂಟಾಗುವ ಲಾಭ ಹಾಗೂ ಭೂಮ್ಯಾಂತರ್ಗತ ನಿಧಿ ಇವುಗಳಿಂದಾಗುವ ಧನಲಾಭವನ್ನು ಸೂಚಿಸುತ್ತದೆ. ರಾಹು-ಕೇತುಗಳಂತ ಅಶುಭ ಹಾಗೂ ಭಯ ಗ್ರಹಗಳು ಲಾಭ ಸ್ಥಾನದಲ್ಲಿ ಸ್ಥಿತರಾದಲ್ಲಿ ಅನಿರೀಕ್ಷಿತ ಧನ ಪ್ರಾಪ್ತಿಯಾದರೂ, ಒಮ್ಮೆಲೆಗೆ ಅನಿಷ್ಟವು ಒದಗಿ, ಎಲ್ಲ ಹಾಳಾಗುವ ಸಂಭವವುಂಟು. ಅದರಲ್ಲಿಯೂ ರಾಹು ಗ್ರಹವು ಸಟ್ಟಾ, ಜೂಜುಗಳಿಂದ ಉಂಟಾಗುವ ನಷ್ಟಕ್ಕೆ ಕಾರಕನು.

ವೈದ್ಯಕೀಯ ಶಿಕ್ಷಣದಲ್ಲಿ ನವಗ್ರಹಗಳ ಪಾತ್ರ

ವೈದ್ಯಕೀಯ ಶಿಕ್ಷಣದಲ್ಲಿ ನವಗ್ರಹಗಳ ಪಾತ್ರ * ಡಾ.ಎಸ್ .ಎನ್. ಶೈಲೇಶ್, ಬಾಣಾವರ ರೀತಿಯ ಕೆಲಸ ಕಾರ್ಯಗಳು ಆಗುತ್ತವೆ ಮತ್ತು ಯಾವ್ಯಾವ ಸಾಧನೆಗಳನ್ನು ನಾವು ಮಾಡಲು ಸಾಧ್ಯ ಎಂದು ಹೇಳುತ್ತವೆ. ಅದೇನೆಂದು ನಿಮಗೆ ಗೊತ್ತಾ ? ಇತ್ತೀಚಿನ ದಿನಗಳಲ್ಲಿ ಪಿಯುಸಿ ಪರೀಕ್ಷೆಯ ನಂತರ ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕೆಂದು ತಂದೆ ತಾಯಿಯರು ಚಿಂತಿಸತೊಡಗುತ್ತಾರೆ. ಕೆಲವು ಮಕ್ಕಳು ಇಂಜಿನಿಯರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ಕಲೆ, ವಾಣಿಜ್ಯ, ಹೀಗೆ ಹತ್ತು ಹಲವಾರು ಬಗೆಯ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಮಾತ್ರ ವೈದ್ಯಕೀಯ ಶಿಕ್ಷಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರೂ ವೈದ್ಯರಾಗಲು ಸಾಧ್ಯವಿಲ್ಲ. ಎಲ್ಲರೂ ಎಂಜಿನಿಯರ್ ಆಗಲು ಸಾಧ್ಯವಿಲ್ಲ. ಆದರೆ ಜಾತಕದ ಅನುಸಾರವಾಗಿ ಕುಂಡಲಿಯಲ್ಲಿ ಯಾವ ಯಾವ ಗ್ರಹಗಳು ಯಾವ ಮನೆಯಲ್ಲಿದೆ ಎಂಬುದನ್ನು ನಿರ್ಧರಿಸಿ ಮುಂದೆ ಅವರ ಶಿಕ್ಷಣ ಯಾವ ವಿಚಾರದ ಬಗ್ಗೆ ಇರುವುದೆಂದು ತಿಳಿದುಕೊಳ್ಳಬಹುದು. ಅನಾದಿಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ಹಾಗೂ ವೈದ್ಯಕೀಯ ಶಾಸ್ತ್ರಕ್ಕೆ ನಿಕಟ ಸಂಬಂಧವಿದೆ. ಈಶ್ವರನ ಮುಖದಿಂದ ಪ್ರಪಂಚದ ಸಕಲ ಜೀವಿಗಳ ಉದ್ಧಾರಕ್ಕಾಗಿ ವೇದಗಳು ಸೃಷ್ಟಿಯಾದವು. ವೇದಗಳಲ್ಲಿ ಕಲೆ, ವಿಜ್ಞಾನ, ಜ್ಞಾನ, ವಿದ್ಯೆಗಳು ಅಡಕವಾಗಿವೆ. ಅಥರ್ವಣ ವೇದದ ಮೂಲಕ ಆಯುರ್ವೇದದ ವಿಚಾರಗಳನ್ನು ಸಂಗ್ರಹಿಸಿ ಚರ್ತುಮುಖ ಬ್ರಹ್ಮದೇವನು ಮಾನವನ ಕಲ್ಯಾಣಕ್ಕಾಗಿ ಬ್ರಹ್ಮ ಸಂಹಿತೆ ಎಂಬ ವೈದ್ಯ ರಹಸ್ಯ ರಚಿಸಿದ್ದಾನೆ....

ಪಂಚ ಮಹಾಪುರುಷ ಯೋಗ - -ತ್ರಿಗ್ರಹ ಯೋಗ ಇದರ ಫಲವೇನು ?

ಪಂಚ ಮಹಾಪುರುಷ ಯೋಗ - ವಿದ್ವಾನ್ ಸುಬ್ರಹ್ಮಣ್ಯ ಶರ್ಮಾ ತನಗೆ ಸುಖ ಮಾತ್ರ ಬರಬೇಕು, ದುಃಖ ಎಂದಿಗೂ ಬರಬಾರದು ಎಂಬುದಾಗಿ ಪ್ರತಿಯೊಬ್ಬರೂ ಯೋಚಿಸುತ್ತಾರೆ. ಆದರೆ ಕರ್ಮಫಲಗಳೇ ಬೇರೆ. ಈ ಜನ್ಮದಲ್ಲಿ ನವಗ್ರಹಗಳ ಮೂಲಕ ಜನ್ಮಾಂತರದ ಕರ್ಮಫಲಗಳಿಂದ ಶುಭಾಶುಭಗಳು ಉಂಟಾಗುತ್ತವೆ. ಅಂತಹ ಗ್ರಹಗಳು ಕೆಲವೊಂದು ಮಹಾಯೋಗಗಳನ್ನು ಉಂಟುಮಾಡುತ್ತವೆ. ಸಾಮಾನ್ಯರ ಪ್ರಕಾರ ಯೋಗವೆಂದರೆ ಕೇವಲ ಒಳ್ಳೆಯದು ಮಾತ್ರ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಳ್ಳೆಯದರ ಜತೆಗೆ ಕೆಟ್ಟ ಯೋಗಗಳೂ ಇರುತ್ತವೆ. ಶುಭಯೋಗದಲ್ಲಿ ಹುಟ್ಟಿದವರು ವಿದ್ಯೆ, ಕೀರ್ತಿ, ಸುಖ, ದೀರ್ಘಾಯುಷ್ಯವೇ ಮೊದಲಾದ ಉತ್ತಮ ಫಲಗಳನ್ನು ಪಡೆಯುತ್ತಾರೆ. ಆದರೆ ಅಶುಭಯೋಗದಲ್ಲಿ ಜನಿಸಿದವರು ದುಷ್ಕರ್ಮಿಗಳಾಗಿ, ದುಃಖಿತರಾಗಿ, ಅನಾರೋಗ್ಯಾದಿಗಳಿಂದ ಪೀಡಿತರಾಗಿ ಕಷ್ಟಪಡುತ್ತಾರೆ. ಇಲ್ಲಿ ಐದು ಶುಭಯೋಗಗಳ ಕುರಿತು ನೋಡೋಣ. ರುಚಕ ಭದ್ರಕ ಹಂಸಕ ಮಾಲವಾಃ ಸ ಶಶಕಾ ಇತಿ ಪಂಚ ಚ ಕೀರ್ತಿತಾಃ ಸ್ವಭವನೋಚ್ಚಗತೇಷು ಚತುಷ್ಟಯೇ ಕ್ಷಿತಿಸುತಾದಿಷು ತಾನ್ ಕ್ರಮಶೋ ವದೇತ್ ಎಂದು ಈ ಯೋಗಗಳ ಬಗ್ಗೆ ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ರುಚಕ, ಭದ್ರಕ, ಹಂಸಕ, ಮಾಲವ, ಶಶ ಎನ್ನುವ ಈ ಪಂಚ ಮಹಾಪುರುಷ ಯೋಗಗಳು ಕ್ರಮವಾಗಿ ಮಂಗಳ, ಬುಧ, ಗುರು, ಶುಕ್ರ, ಶನಿ ಗ್ರಹಗಳಿಂದ ಉಂಟಾಗುತ್ತವೆ. ೧. ರುಚಕ ಯೋಗ ಮಂಗಳ ಗ್ರಹನು ತನ್ನ ಕ್ಷೇತ್ರವಾದ ಮೇಷ ಮತ್ತು ವೃಶ್ಚಿಕ ರಾಶಿಯಲ್ಲಿ ಅಥವಾ ಉಚ್ಚ ಕ್ಷೇತ್ರವಾದ ಮಕರ ರಾಶಿಯಲ್ಲಿ ಇರಬೇ...

ಗ್ರಹಗಳ ಕಾರಕಗಳು ಮತ್ತು ದ್ವಾದಶಭಾವಗಳು

ಗ್ರಹಗಳ ಕಾರಕಗಳು ಮತ್ತು ದ್ವಾದಶಭಾವಗಳು *ನಾರಾಯಣಾಚಾರ್ಯ ಜೋಶಿ ಮಳ್ಳಿ ನಾವು ಇಂಥ ರಾಶಿಯಲ್ಲೇ ಹುಟ್ಟಬೇಕೆಂದು ಕೇಳಿಕೊಂಡು ಹುಟ್ಟಲು ಆಗಲ್ಲ. ನಾವು ಹುಟ್ಟಿದ ಕ್ಷಣ ನಮ್ಮ ರಾಶಿಯನ್ನು ನಿರ್ಧರಿಸುತ್ತದೆ. ಹಾಗೆಯೇ ಆಯಾ ರಾಶಿಯ ಮೇಲೆ ನಮ್ಮ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎನ್ನುವುದು ಜ್ಯೋತಿಷ್ಯದ ನಂಬಿಕೆ. ಯಾವುದೇ ವ್ಯಕ್ತಿಯ ಕುಂಡಲಿಯನ್ನು ಪರಿಶೀಲಿಸಿದಾಗ ಅದರಲ್ಲಿ ಮುಖ್ಯವಾಗಿ ದ್ವಾದಶ ಭಾವಗಳು ಅದಕ್ಕೆ ಸಂಬಂಧಪಟ್ಟ ಗ್ರಹಗಳು ಮತ್ತು ಕಾರಕಗಳು ಎಂಬ ವಿಷಯ ಬಹಳ ಮುಖ್ಯವಾದದ್ದು. ಭಾವ ಮತ್ತು ಕಾರಕಗಳೆಂದರೆ ಏನೆಂಬ ವಿಷಯ ತಿಳಿಯುವುದು ಬಹಳ ಮುಖ್ಯ. ದ್ವಾದಶ ಅಂದರೆ ಹನ್ನೆರಡು ಭಾವಗಳು ಅಂದರೆ ಹನ್ನೆರಡು ಸ್ಥಾನಗಳು. ಇವುಗಳಲ್ಲಿ ಮೊದಲನೆಯ ಭಾವ ಅಥವಾ ಸ್ಥಾನವನ್ನು ತನು ಸ್ಥಾನವೆಂದು ಕರೆಯುತ್ತಾರೆ. ಲಗ್ನ ಅಥವಾ ರಾಶಿಯಿಂದ ಅಂದರೆ ಅದೇ ಸ್ಥಾನವನ್ನು ತನು ಎಂದರೆ ಮನುಷ್ಯನ ವ್ಯಕ್ತಿತ್ವ, ರೂಪ, ಬಣ್ಣ, ಮನಸ್ಸು, ಧೈರ್ಯ ಇವುಗಳನ್ನು ತನು ಅಥವಾ ಪ್ರಥಮ ಭಾವದಿಂದ ಹೇಳಲಾಗುತ್ತದೆ. ಆ ಭಾವದಲ್ಲಿ ಶುಭ ಗ್ರಹಗಳಿದ್ದರೆ ಅಥವಾ ಸ್ವಕ್ಷೇತ್ರ ಉಚ್ಚರಾಶಿಯ ಗ್ರಹಗಳಿದ್ದರೆ ಒಳ್ಳೇ ಶರೀರ, ಆತ್ಮ ವಿಶ್ವಾಸ, ಆರೋಗ್ಯ, ರೂಪವಂತಿಕೆ, ಗುಣವಂತಿಕೆಯನ್ನು ಆ ವ್ಯಕ್ತಿ ಹೊಂದಿರುತ್ತಾನೆ. ಪಾಪ ಗ್ರಹಗಳಿದ್ದರೆ ವಿರುದ್ಧ ಫಲಗಳನ್ನು ಹೇಳಲಾಗುತ್ತದೆ. ದ್ವಿತೀಯ ಅಥವಾ ಧನಭಾವವೆಂದು ಕರೆಯುವ ಎರಡನೆಯ ಸ್ಥಾನದ ಅಧಿಪತಿ ಮತ್ತು ಅದಕ್ಕೆ ಸಂಬಂಧಪಟ್ಟ ಗ್ರಹಗಳಿಂದ ಮನುಷ್...

ಯಾವ ರಾಶಿಗೆ ಯಾವ ದೇವರ ಪೂಜೆ?

ಯಾವ ರಾಶಿಗೆ ಯಾವ ದೇವರ ಪೂಜೆ? ಮೇಷ, ವೃಶ್ಚಿಕ ರಾಶಿಯವರಿಗೆ ರಾಶ್ಯಾಧಿಪತಿ ಕುಜ. ಈ ಗ್ರಹವನ್ನು ಪ್ರತಿನಿಧಿಸುವ ದೇವತೆಗಳು ಸುಬ್ರಹ್ಮಣ್ಯ, ದುರ್ಗೆ. ಈ ದೇವತೆಗಳ ಪೂಜೆಯಿಂದ ಕಷ್ಟಗಳು ನಿವೃತ್ತಿಯಾಗುತ್ತವೆ. ವೃಷಭ ಹಾಗೂ ತುಲಾ ರಾಶಿಗಳಿಗೆ ಶುಕ್ರ ಅಧಿಪತಿ. ಶುಕ್ರನನ್ನು ಅಧಿಕರಿಸುವ ದೇವತೆ ಲಕ್ಷ್ಮಿ. ಈ ರಾಶಿಯವರು ಲಕ್ಷ್ಮಿಯನ್ನು ಆರಾಧಿಸಿದರೆ ಶೀಘ್ರವಾಗಿ ಇಷ್ಟಾರ್ಥಗಳನ್ನು ಪಡೆಯಬಹುದು. ಮಿಥುನ, ಕನ್ಯಾ ರಾಶಿಯವರಿಗೆ ರಾಶ್ಯಾಧಿಪತಿ ಬುಧ. ಬುಧನನ್ನು ಅಧಿಕರಿಸುವ ದೇವತೆ ವಿಷ್ಣು. ಈ ರಾಶಿಯವರು ವಿಷ್ಣುವನ್ನು ಆರಾಧಿಸಿ ಶುಭವನ್ನು ಹೊಂದಬಹುದು. ಕರ್ಕ ರಾಶಿಗೆ ಚಂದ್ರನು ಅಧಿಪತಿಯಾಗಿದ್ದಾನೆ. ಚಂದ್ರನ ಸಂಪ್ರೀತಿಗಾಗಿ ಸ್ತ್ರೀದೇವತೆಯಾದ ಲಕ್ಷ್ಮೀ ಅಥವಾ ದುರ್ಗೆಯ ಆರಾಧನೆ ಮಾಡುವುದು ಉತ್ತಮ. ಸಿಂಹರಾಶಿಯ ಅಧಿಪತಿ ರವಿ. ರವಿಯನ್ನು ಪ್ರತಿನಿಧಿಸುವ ದೇವತೆ ಶಿವ. ಶಿವನ ಆರಾಧನೆ ಮಾಡಿ ಈ ರಾಶಿಯವರು ಸಂತಸವನ್ನು ಹೊಂದಬಹುದು. ಶನಿ ಗ್ರಹನು ಮಕರ ಹಾಗೂ ಕುಂಭ ರಾಶಿಗಳ ಅಧಿಪತಿ. ಶನಿಯನ್ನು ಅಧಿಕರಿಸುವ ದೇವತೆ ಮೃತ್ಯುಂಜಯ. ಮೃತ್ಯುಂಜಯನನ್ನು ಆರಾಧಿಸಿ ಈ ಗ್ರಹದ ಪೀಡೆಯಿಂದ ಪಾರಾಗಬಹುದು.

ಗ್ರಹಗಳ ಆಧಿಪತ್ಯ

ಗ್ರಹಗಳ ಆಧಿಪತ್ಯ ವಿದ್ವಾನ್ ನಾಗಪತಿ ಭಟ್ ನಾವೆಲ್ಲರೂ ಹುಟ್ಟುವ ಸಮಯದಲ್ಲಿ ನಮಗೆ ಸಂಬಂಧಿಸಿರುವ ನಕ್ಷತ್ರಗಳ ಸ್ಥಾನಕ್ಕೆ ಅನುಗುಣವಾಗಿ ನಮ್ಮ ಭವಿಷ್ಯ ನಿರ್ಮಾಣವಾಗುತ್ತದೆ. ಜನ್ಮಕಾಲದಲ್ಲಿರುವ ನಕ್ಷತ್ರಗಳನ್ನು ಜನ್ಮನಕ್ಷತ್ರವೆನ್ನುತ್ತೇವೆ. ಈ ನಕ್ಷತ್ರಗಳು ಯಾವ ರಾಶಿಯಲ್ಲಿರುವುದೊ ಅದನ್ನು ಅನುಸರಿಸಿ ರಾಶಿಗಳನ್ನು ಹೆಸರಿಸುತ್ತೇವೆ. ಅಶ್ವಿನಿ ನಕ್ಷತ್ರದಿಂದ ಆರಂಭಿಸಿ ರೇವತಿ ನಕ್ಷತ್ರದ ತನಕ ಇರುವ ಇಪ್ಪತ್ತೇಳು ನಕ್ಷತ್ರಗಳು ಹನ್ನೆರಡು ರಾಶಿಗಳಲ್ಲೇ ವಿಭಕ್ತವಾಗಿರುತ್ತದೆ. ಮೇಷಾದಿ ಹನ್ನೆರಡು ರಾಶಿಗಳಿಗೆ ನವಗ್ರಹಗಳೇ ಅಧಿಪತಿಗಳು. ಮೇಷ, ವೃಶ್ಚಿಕ ರಾಶಿಗಳಿಗೆ ಕುಜ ಅಧಿಪತಿ. ಹಾಗೆಯೇ ವೃಷಭ, ತುಲಾ ರಾಶಿಗಳಿಗೆ ಶುಕ್ರ. ಮಿಥುನ, ಕನ್ಯಾಗಳಿಗೆ ಬುಧ. ಕರ್ಕ ರಾಶಿಗೆ ಚಂದ್ರ. ಸಿಂಹಕ್ಕೆ ರವಿ. ಧನು ಮತ್ತು ಮೀನಗಳಿಗೆ ಗುರು ಹಾಗೂ ಮಕರ, ಕುಂಭಗಳಿಗೆ ಶನೈಶ್ಚರ ಅಧಿಪತಿಗಳಾಗಿದ್ದಾರೆ ಇವರಲ್ಲಿ ಗುರು, ಶುಕ್ರ ಹಾಗೂ ಪಾಪಗ್ರಹಗಳ ಜತೆಗೆ ಇಲ್ಲದ ಬುಧ ಹಾಗೂ ಬಲಿಷ್ಠ ಚಂದ್ರ ಇವರು ಶುಭಗ್ರಹಗಳು. ಹೀಗಾಗಿಯೇ ಧನು, ಮೀನ, ವೃಷಭ, ತುಲಾ, ಕನ್ಯಾ, ಮಿಥುನ, ಕರ್ಕ ಈ ರಾಶಿಗಳನ್ನು ಶುಭ ರಾಶಿಗಳು ಎನ್ನಬಹುದು. ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭಗಳು ಇದಕ್ಕಿಂತ ಭಿನ್ನವಾದವುಗಳು. ಹಾಗಿದ್ದರೂ ಈ ರಾಶಿಗಳನ್ನು ಅಶುಭ ಎನ್ನಲು ಸಾಧ್ಯವಿಲ್ಲ. ಅವುಗಳಲ್ಲಿರುವ ಗ್ರಹಸ್ಥಿತಿಯನ್ನು ಅನುಸರಿಸಿ ಅವು ಶುಭವೋ ಅಶುಭವೋ ಅಂತ ಹೇಳಬೇಕಾಗುತ್ತದೆ.

12 ಲಗ್ನಗಳು,ಲಕ್ಷಣ ಫಲ, ದೋಷಗಳು

ವೃಷಭ ಲಗ್ನದ ಲಕ್ಷಣ ಫಲ, ದೋಷಗಳು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ವಷಭ ಲಗ್ನವು ರಾತ್ರಿ ಬಲ ರಾಶಿ, ಪ್ರಷ್ಠೋದಯ ರಾಶಿ, ಸ್ಥಿರ ರಾಶಿ, ಭೂ ತತ್ವ ರಾಶಿ, ಸ್ತ್ರೀ ಮತ್ತು ಯುಗ್ಮ ರಾಶಿ, ವೈಶ್ಯ ವರ್ಣ ರಾಶಿ, ರಜೋ ಗುಣ ರಾಶಿ. ವೃಷಭ ಮತ್ತು ವಶ್ಚಿಕ ರಾಶಿಗೆ ಶುಕ್ರಗ್ರಹ ಅಧಿಪತಿ. ವೃಷಭ ಲಗ್ನದಲ್ಲಿ ಹುಟ್ಟಿದವರು ವಿಶಾಲವಾದ ಹಣೆಯುಳ್ಳವರೂ, ಸ್ಥೂಲವಾದ ತುಟಿಯುಳ್ಳವರೂ, ಉಬ್ಬಿದ ಕೆನ್ನೆಗಳುಳ್ಳವರೂ ಆಗಿರುತ್ತಾರೆ. ಅವರಿಗೆ ಶರೀರದಲ್ಲಿ ಶೀತ, ವಾತ ಧಾತುಗಳೇ ಅಧಿಕ. ಉದಾರ ಗುಣವುಳ್ಳವರೂ, ಸಮಯ ಬಿದ್ದರೆ ಯಾರ ಲಂಗು ಲಗಾಮು ಇಲ್ಲದೇ ಖರ್ಚು ಮಾಡುವವ ಜನ ಇವರು. ಇವರಿಗೆ ಅಲ್ಪ ಪುತ್ರ ಸಂತಾನ ಇರುತ್ತದೆ. ಸ್ತ್ರೀ ಸಂತತಿ ಅಧಿಕವಾಗಿರುತ್ತದೆ. ತಂದೆ ತಾಯಿಗಳಿಂದ ದೂರವಾಗಿರುವವರೂ, ಅಧರ್ಮ ಕಾರ್ಯಗಳಲ್ಲಿ ತೊಡಗಿ ದ್ರವ್ಯಾರ್ಜನೆ ಮಾಡ ತಕ್ಕವರೂ ಆಗಿರುತ್ತಾರೆ. ಈ ಲಗ್ನದ ಹೆಣ್ಣು ಮಕ್ಕಳು ಸದಾ ಕಾಲ ಪತಿಯ ಸಮ್ಮುಖದಲ್ಲಿರಲು ಅಪೇಕ್ಷೆ ಪಡುತ್ತಾರೆ. ಸ್ವಜನ ಸಂಪರ್ಕ ಇಲ್ಲದವರೂ, ಬಂಧುಗಳಿಂದ ತಿರಸ್ಕರಿಸಲ್ಪಟ್ಟವರಾಗಿರುತ್ತಾರೆ. ಇವರ ಕೋಪ ಶೀಘ್ರವಾಗಿ ಶಮನವಾಗುವುದಿಲ್ಲ. ಇವರದ್ದು ಎದುರಾಳಿಗಳ ಮೇಲೆ ಬಿದ್ದು ಕಾದಾಡುವ ಸ್ವಭಾವ. ಸಾಧಾರಣ ಐಹಿಕ ಸುಖಾಭಿಲಾಷೆ, ಸ್ವತಂತ್ರ ಮನೋಭಾವ, ಹೆಚ್ಚಿನ ತಾಳ್ಮೆ ಯೂ ಇವರಗೆ ಸಿದ್ಧಿಸಿರುತ್ತದೆ. ಹೀಗಾಗಿ ಇನ್ನೊಬ್ಬರೊಂದಿಗೆ ಸಿಕ್ಕಿಕೊಳ್ಳುವುದೇ ಇಲ್ಲ. ಇವರು ಯಾವುದೇ ಕೆಲಸ ಕೈಗೊಂಡರೂ, ಬಹಳ...

ನವಗ್ರಹ ಸ್ಥಾನ-ಬಲಗಳು ---ಸ್ಥಾನ ಬಲದ ಫಲ----ಗ್ರಹ ಸೂಚಕ ಗುಣ ಸ್ವರೂಪಗಳು

ನವಗ್ರಹ ಸ್ಥಾನ-ಬಲಗಳು * ಕೆ.ಎನ್.ಸಂಜೀವ ಮೂರ್ತಿ ಜಾತಕದಲ್ಲಿನ ಗ್ರಹಗಳ ಸ್ಥಾನ ದಶಾ ಭುಕ್ತಿ-ಅಂರ್ತದಶಾ ಭುಕ್ತಿ. ವರ್ಷ-ಭವಿಷ್ಯ, ಕಾಲ ಚಕ್ರ ನಿರ್ಣಯ ಇವುಗಳನ್ನು ಹೊಂದಿಸಿಕೊಂಡು ಹೇಳುವ ನಿರ್ಣಯ ಫಲವೇ ಭವಿಷ್ಯವೆಂದು ಜ್ಯೋತಿಷ್ಯ ಸಿದ್ಧಾಂತವು ಗ್ರಹ ಬಲ ವಿಚಾರದೊಂದಿಗೆ ನಿರ್ಣಯಿಸಿದೆ. ನವಗ್ರಹಗಳಿಗೆ ಸ್ಥಾನ ಬಲ, ದಿಗ್ಬಲ, ಜ್ಯೇಷ್ಠಾ ಬಲ, ಕಾಲ ಬಲ ಎಂದು ನಾಲ್ಕು ಪ್ರಕಾರದ ಬಲಗಳಿವೆ. ಸ್ಥಾನ ಬಲ ಯಾವ ಗ್ರಹವಾದರೂ ತನ್ನ ಉಚ್ಚ ರಾಶಿಯಲ್ಲಿದ್ದರೆ ತನ್ನ ಮಿತ್ರರಾಶಿ ಹಾಗೂ ಸ್ವಕ್ಷೇತ್ರದಲ್ಲಿದ್ದರೆ ಅದರ ಮೂಲ ತ್ರಿಕೋಣ ಹಾಗೂ ನವಾಂಶದಲ್ಲಿದ್ದರೆ ಆ ಗ್ರಹಕ್ಕೆ ಸ್ಥಾನ ಬಲವಿದೆ. ದಿಗ್ಬಲ ಸೂರ್ಯನು ಮಂಗಳನು ದಕ್ಷಿಣ ದಿಕ್ಕಿನಲ್ಲಿದ್ದಾಗ ಚಂದ್ರ-ಶುಕ್ರರು ಉತ್ತರ ದಿಕ್ಕಿನಲ್ಲಿದ್ದಾಗ ಬುಧ-ಗುರುಗಳು ಪೂರ್ವ ದಿಕ್ಕಿನಲ್ಲಿದ್ದಾಗ ಶನಿಯು ಪಶ್ಚಿಮ ದಿಕ್ಕಿನಲ್ಲಿದ್ದಾಗ ದಿಗ್ಬಲ ಉಳ್ಳವರಾಗಿರುತ್ತಾರೆ. ಜ್ಯೇಷ್ಠಾ ಬಲ ಗ್ರಹಗಳಿಗೆ ವಕ್ರ, ಅತಿ ವಕ್ರ, ಕುಟಿಲ, ಮಂದಾ ಮಂದಾರಕ, ಸಮ, ಶೀಘ್ರ, ಅತಿ ಶೀಘ್ರ ಎಂಬ ಎಂಟು ಪ್ರಕಾರದ ಗಮನ ಅಥವಾ ಗತಿಗಳುಂಟು. ಆದರೆ ಗ್ರಹಗಳಿಗೆ ಯುದ್ಧ ಮುಂತಾದ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿರುವ ಗ್ರಹಗಳೇ ಬಲಶಾಲಿಗಳೆಂದು ನಿಯಮವಿದೆ. ಜಯಶಾಲಿಯಾದ ಗ್ರಹಕ್ಕೆ ಅಧಿಕ ಬಲವನ್ನು ಸೋತ ಗ್ರಹಕ್ಕೆ ಕ್ಷೀಣ ಬಲವನ್ನು ಕಲ್ಪಿಸಿ ಗ್ರಹ ಯುದ್ಧವನ್ನು ತಿಳಿದು ಅದಕ್ಕನುಗುಣವಾಗಿ ಗ್ರಹಗಳ ಬಲಾಬಲಗಳನ್ನು ಗೊತ್ತು ಮಾಡಿ ಫಲವನ...

ಯಾರಿಗೆ ಯಾರು ಮಿತ್ರರು?----ನವಗ್ರಹಗಳ ಫಲಾಫಲಗಳು

ಯಾರಿಗೆ ಯಾರು ಮಿತ್ರರು? *ರವಿಗೆ ಚಂದ್ರ, ಕುಜ, ಗುರು, ಕೇತು ಮಿತ್ರರು. *ಚಂದ್ರನ ಮಿತ್ರರು ರವಿ, ಕೇತು, ಬುಧ. *ಕುಜನಿಗೆ ರವಿ, ಚಂದ್ರ, ಗುರು, ಕೇತು ಮಿತ್ರರು. *ಬುಧನ ಮಿತ್ರರು ರವಿ, ಶುಕ್ರ, ರಾಹು. *ಗುರುವಿಗೆ ರವಿ, ಚಂದ್ರ, ಕುಜ, ಕೇತು ಮಿತ್ರರು. *ಶುಕ್ರನ ಮಿತ್ರರು ಬುಧ, ಶನಿ, ರಾಹು. *ಶನಿಗೆ ಬುಧ, ಶುಕ್ರ, ರಾಹು ಮಿತ್ರರು. *ರಾಹುವಿನ ಮಿತ್ರರು ಬುಧ, ಶುಕ್ರ, ಶನಿ. *ಕೇತುವಿಗೆ ರವಿ, ಚಂದ್ರ, ಕುಜ, ಗುರು ಮಿತ್ರರು. ಶತ್ರುಗಳು *ರವಿಗೆ ಶುಕ್ರ, ಶನಿ, ರಾಹು ಶತ್ರುಗಳು. *ಚಂದ್ರನ ಶತ್ರು ರಾಹು. *ಕುಜನಿಗೆ ರಾಹು, ಬುಧ ಶತ್ರುಗಳು. *ಬುಧ ಶತ್ರು ಚಂದ್ರ. *ಗುರುವಿಗೆ ಬುಧ ಶುಕ್ರ ಶತ್ರುಗಳು. *ಶುಕ್ರನ ಶತ್ರುಗಳು ರವಿ, ಚಂದ್ರ, ಕೇತು. *ಶನಿಗೆ ರವಿ, ಚಂದ್ರ, ಕುಜ, ಕೇತುಗಳು ಶತ್ರುಗಳು. *ರಾಹುವಿನ ಶತ್ರುಗಳು ರವಿ, ಚಂದ್ರ, ಕುಜ. *ಕೇತುವಿಗೆ ಶುಕ್ರ, ಶನಿ ಶತ್ರುಗಳು. ಇಂತಹ ನವಗ್ರಹಗಳು ತಮ್ಮ ಅವಧಿಯಲ್ಲಿ (ದಶಾ ವರ್ಷಗಳಲ್ಲಿ) ಮನುಷ್ಯನ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ ಆಯಾ ದೆಶೆಗಳಲ್ಲಿ ತಮ್ಮ ಜಾತಕ ಪರಿಶೀಲಿಸಿಕೊಂಡು ಸೂಕ್ತ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು. ನವಗ್ರಹಗಳ ಫಲಾಫಲಗಳು ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಕರ್ಮ ಭಾವವು ಜಾತಕನ ವತ್ತಿ, ಮಾನ, ಗೌರವ, ಕೀರ್ತಿಗಳನ್ನು ತಿಳಿಸುತ್ತದೆ. ದಶಮದ ಶನಿಯು ಶುಭಕಾರಿಯಲ್ಲ. ...

ನವಗ್ರಹಗಳು

ನವಗ್ರಹಗಳು ದೊಡ್ಡನೆಬೆಟ್ಟು ಕೋಟೇಶ್ವರ ಈ ಭೂಮಿಯಲ್ಲಿ ವಾಸಿಸುವ ನಮ್ಮ ಮೇಲೆ ಸುತ್ತಲಿರುವ ಆಕಾಶಕಾಯಗಳು ವಿಶಿಷ್ಟ ಪರಿಪೂರ್ಣ ಬೀರುತ್ತವೆ. ಅಂತಹ ನವಗ್ರಹಗಳ ಹೆಸರು ನಿಮಗೆಲ್ಲ ಗೊತ್ತೇ ಇದೆ. ಆದರೆ ಅವುಗಳ ಸಂಪೂರ್ಣ ಪರಿಚಯ ಎಲ್ಲರಿಗೂ ಇರಲಾರದು. ಅವುಗಳ ಕಿರು ಪರಿಚಯವಿದು. ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇವುಗಳೇ ಒಂಬತ್ತು ನವಗ್ರಹಗಳು. ಇವುಗಳಲ್ಲಿ ರಾಹು ಕೇತುಗಳಿಗೆ ಪ್ರಕಾಶವಿರುವುದಿಲ್ಲ. ಇವು ಕೇವಲ ಛಾಯಾಗ್ರಹಗಳು. ಬುಧ, ಗುರು, ಶುಕ್ರರು ಶುಭ ಗ್ರಹರು. ರವಿ, ಕುಜ, ಶನಿ, ರಾಹು, ಕೇತುಗಳು ಪಾಪ ಗ್ರಹರು. ಪೂರ್ಣಚಂದ್ರನಾದರೆ ಶುಭ, ಅದೇ ಚಂದ್ರ ಕ್ಷೀಣನಾದರೆ ಅಶುಭ ಫಲ ನೀಡುತ್ತಾನೆ. ಮೊದಲಿಗೆ ರವಿ. ಇವನ ದಿಕ್ಕು ಪೂರ್ವ. ಇವನಿಗೆ ಪ್ರಿಯವಾದ ಬಣ್ಣ ಕೆಂಪು. ಪ್ರಿಯವಾದ ರತ್ನ ಮಾಣಿಕ್ಯ. ಇವನ ದೇವತೆ ಶಿವ. ಪ್ರಿಯವಾದ ಧಾನ್ಯ ಗೋಧಿ. ಈತನ ದೆಶೆ ಆರು ವರ್ಷ. ರವಿಗೆ ಪ್ರಿಯವಾದ ಸಸ್ಯ ಎಕ್ಕ. ಎರಡನೆಯವನು ಚಂದ್ರ. ಇವನ ದಿಕ್ಕು ವಾಯವ್ಯ. ಪ್ರಿಯವಾದ ಬಣ್ಣ ಬಿಳಿ. ಇವನ ರತ್ನ ಮುತ್ತು. ಈತನ ದೇವತೆ ದುರ್ಗಾ ಮಾತೆ. ಈತನ ಪ್ರಿಯವಾದ ಧಾನ್ಯ ಅಕ್ಕಿ. ಇವನ ದೆಶೆ ಹತ್ತು ವರ್ಷ. ಚಂದ್ರನಿಗೆ ಪ್ರಿಯವಾದದ್ದು ಪಾಲಾಶ ವೃಕ್ಷ. ಮೂರನೆಯವನು ಕುಜ (ಮಂಗಳ). ದಿಕ್ಕು ದಕ್ಷಿಣ. ಪ್ರಿಯವಾದ ಧಾನ್ಯ ತೊಗರಿ. ಇವನ ದೇವತೆ ಸುಬ್ರಹ್ಮಣ್ಯ. ಪ್ರಿಯವಾದ ರತ್ನ ಹವಳ. ಪ್ರಿಯವಾದ ವಸ್ತ್ರ ಕೆಂಪು. ಇವನ ದೆಶೆ ಏಳು ವರ್ಷ. ಕುಜನಿಗೆ ಪ್ರಿಯ...

ಜಾತಕವನ್ನು ನೋಡಿ ಕೆಳಗಿನ ಅಂಶಗಳನ್ನು ಪರಿಶೀಲಿಸಿಕೊಳ್ಳಬಹುದು.

ಜಾತಕದಲ್ಲಿ ಚಂದ್ರನು ಆರನೇ ಭಾವದಲ್ಲಿ ಇದ್ದರೆ ಜಾತಕರು ದ್ರವರೂಪದ ಪದಾರ್ಥಗಳನ್ನು ದಾನ ಮಾಡಬಾರದು. ಜಾತಕರು ರಾಜಕಾರಣಿಗಳು, ಸಮಾಜಸೇವಕರಾಗಿದ್ದರೆ ಅವರು ಕುಡಿಯುವ ನೀರಿನ ಅರವಟ್ಟಿಗೆಗಳನ್ನು ಕಟ್ಟಿಸಬಾರದು. ಜಾತಕದಲ್ಲಿನ ಉಚ್ಚ ಗ್ರಹಗಳು, ಸ್ವಗೃಹಿ ಗ್ರಹಗಳು, ಮಿತ್ರಗೃಹಿ ಗ್ರಹಗಳ ವಸ್ತುಗಳನ್ನು ದಾನ ಮಾಡಬಾರದು. ಶನಿ ಎಂಟನೇ ಭಾವದಲ್ಲಿದ್ದರೆ ಧರ್ಮಶಾಲೆಗಳನ್ನು, ಛತ್ರಗಳನ್ನು ಕಟ್ಟಿಸಬಾರದು. ಅವುಗಳ ಕಟ್ಟಡಕ್ಕೆ ದಾನವನ್ನೂ ಮಾಡಬಾರದು. ಗುರು ಹತ್ತನೇ ಭಾವದಲ್ಲಿ ಹಾಗೂ ಚಂದ್ರ ನಾಲ್ಕನೇ ಭಾವದಲ್ಲಿದ್ದರೆ ದೇವಸ್ಥಾನಗಳನ್ನು ಕಟ್ಟಿಸಬಾರದು. ಒಂದು ವೇಳೇ ಇದನ್ನು ಮೀರಿದರೆ ಮೊಕದ್ದಮೆಗಳನ್ನು ಎದುರಿಸಬೇಕಾಗಬಹುದು. ಶುಕ್ರ ಒಂಬತ್ತರಲ್ಲಿ ಇದ್ದರೆ ವಿಧವೆಯರಿಗೆ, ಯಾತ್ರಿಗಳಿಗೆ ಆರ್ಥಿಕ ಸಹಾಯ ಮಾಡಬಾರದು. ಚಂದ್ರ ಹನ್ನೆರಡನೇ ಭಾವದಲ್ಲಿದ್ದರೆ ಆ ಜಾತಕರು ವಿದ್ಯಾರ್ಥಿಗಳಿಗೆ ಉಚಿತವಾಗಿ ಏನನ್ನೂ ಕೊಡಬಾರದು. ವಿದ್ಯಾಲಯಗಳನ್ನು ಕಟ್ಟಿಸಬಾರದು ಹಾಗೂ ಸಾಧುಗಳಿಗೆ ಭೋಜನ ಹಾಕಬಾರದು. ಏಳನೇ ಭಾವದಲ್ಲಿ ಗುರು ಇದ್ದರೆ ಸಾಧುಗಳಿಗೆ ಮತ್ತು ಇತರರಿಗೆ ಬಟ್ಟೆಯನ್ನು ದಾನವಾಗಿ ಕೊಡಕೂಡದು. ಜಾತಕದಲ್ಲಿ ಹನ್ನೆರಡನೆ ಭಾವ ಹಾಗೂ ಎಂಟನೆ ಭಾವಸ್ಥಿತ ಗ್ರಹಗಳು ಪರಸ್ಪರ ವೈರಿಗಳಾಗಿದ್ದರೆ ಹಾಗೂ ಎರಡನೇ ಭಾವವು ಖಾಲಿ ಇದ್ದರೆ ಮತ್ತು ಹನ್ನೆರಡನೆ, ಎಂಟನೇ ಭಾವದ ದೃಷ್ಟಿಯು ಎರಡನೇ ಭಾವದ ಮೇಲೆ ಬೀಳುತ್ತದೆ. ಎರಡನೇ ಭಾವವು ಪೂಜಾ ಸ್ಥಾನವಾಗಿರುವುದರಿಂದ ಆ ಜಾತಕರು ದೇವಸ್ಥಾನ...

ವ್ಯಕ್ತಿತ್ವದ ಕನ್ನಡಿ ಜಾತಕ

ವ್ಯಕ್ತಿತ್ವದ ಕನ್ನಡಿ ಜಾತಕ ಗೌರಿಪುರ ಚಂದ್ರು 'ಕಣ್ಣು ಆರೋಗ್ಯದ ಕನ್ನಡಿ', 'ಹೃದಯ ಆರೋಗ್ಯದ ಕನ್ನಡಿ' ಎನ್ನುತ್ತದೆ ವಿಜ್ಞಾನ. ಹಿಂದೂ ಸಂಪ್ರದಾಯದಲ್ಲಿ ವ್ಯಕ್ತಿಯ ಆರೋಗ್ಯ, ಉನ್ನತಿ ಗ್ರಹಗಳ ಸ್ಥಾನಮಾನದ ಮೇಲೆ ಆಧರಿಸಿದೆ. ಜನ್ಮ ಲಗ್ನದಲ್ಲಿ ಪಾಪಗ್ರಹಗಳಿದ್ದಾಗ ವ್ಯಕ್ತಿಯ ಆರೋಗ್ಯ, ಅಭಿವೃದ್ಧಿ ಎಲ್ಲದರಲ್ಲೂ ಏರುಪೇರಾಗುತ್ತದೆ. ಕೆಲವೊಮ್ಮೆ ವೈದ್ಯರಿಗೂ ಗೋಚರವಾಗದಂತಹ ಅಥವಾ ವಾಸಿಯಾಗದ ಕಾಯಿಲೆಗಳು ಕಾಡುತ್ತವೆ. ಕರ್ಮ ಸಿದ್ಧಾಂತದ ಪ್ರಕಾರ ಅಂತಹ ಜಾತಕವನ್ನು ಪ್ರಾರಬ್ಧ ಕರ್ಮ ಕಾಡುತ್ತಿದೆ ಎನ್ನುತ್ತಾರೆ. ಇದನ್ನೇ ನಾವು ಸಂಕ್ಷಿಪ್ತವಾಗಿ 'ಪೂರ್ವ ಜನ್ಮ ಕೃತಂ ಪಾಪಂ ವ್ಯಾ ರೂಪಂ ಬಾಧಯೇತ್' ಎನ್ನುತ್ತೇವೆ. ಈ ಅಂಶವನ್ನು ಗಮನಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಗ್ರಹಗಳ ಚಲನವಲನದ ಮೇಲೆ ನಮ್ಮ ಆರೋಗ್ಯ, ಬೆಳವಣಿಗೆ, ಅಭಿವೃದ್ಧಿ ನಿಂತಿದೆ. ಗ್ರಹಗಳ ಚಲನವಲನವನ್ನು, ಅದರ ಸ್ಥಾನಮಾನವನ್ನು ಜಾತಕದ ಜನ್ಮ ಕುಂಡಲಿ ಸೂಚಿಸುತ್ತದೆ. ಇಲ್ಲಿ ಜನ್ಮ ಕುಂಡಲಿ ಕನ್ನಡಿಯಾಗುತ್ತದೆ. ಅಂದರೆ, ಜಾತಕ ಆರೋಗ್ಯದ ಕನ್ನಡಿ ಎಂದಾಯಿತು. ಜನ್ಮ ಕುಂಡಲಿಯಲ್ಲಿ ಏನಿದೆ? ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ರಾಶಿಯಲ್ಲಿ ಇದ್ದವೆಂದು ತಿಳಿಸುವ ವಿವರ ಅಥವಾ ನಕ್ಷೆಯೇ ಜನ್ಮ ಕುಂಡಲಿ. ಜನ್ಮ ಕುಂಡಲಿಯಲ್ಲಿ ಮುಖ್ಯವಾದುದೇ ಲಗ್ನ ಭಾವ. ಲಗ್ನ ಸ್ಥಾನವನ್ನು ಕುಂಡಲಿಯ ಮೊದಲ ಸ್ಥಾನ ಎನ್ನುತ್ತಾರೆ. ಲಗ್ನ ಸ್ಥಾನವನ್ನು ಆಧಾರವಾಗಿಟ್ಟ...