Skip to main content

ಇನ್ನು ಬ್ಯೂಟಿ ಪಾರ್ಲರ್‌‌ಗೆ ಹಣ ಸುರಿಯುವುದನ್ನು ನಿಲ್ಲಿಸಿ!

ಇನ್ನು ಬ್ಯೂಟಿ ಪಾರ್ಲರ್‌‌ಗೆ ಹಣ ಸುರಿಯುವುದನ್ನು ನಿಲ್ಲಿಸಿ! ಪ್ರತಿಯೊಬ್ಬ ಮಹಿಳೆಗೂ ಮೃದುವಾದ, ಹೊಳಪಿನಿಂದ ಕೂಡಿದ ತ್ವಚೆಯಿರಬೇಕು ಎಂಬುದು ಒಂದು ಕನಸಾಗಿರುತ್ತದೆ. ಅದಕ್ಕಾಗಿ ನಾವೆಲ್ಲರು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಮೊಯಿಶ್ಚರೈಸರ್‌ಗಳ ಜೊತೆ ಪ್ರಯೋಗಗಳನ್ನು ಮಾಡುತ್ತ ಇರುತ್ತೇವೆ. ಆದರೆ ಅದೇ ಕೆಲಸವನ್ನು ಕೆಲವೊಂದು ನೈಸರ್ಗಿಕ ಉತ್ಪನ್ನಗಳು ಮಾಡುತ್ತವೆ ಎಂದರೆ ಏಕೆ ಬಿಡಬೇಕು. ಮಗುವಿನಂತಹ ಕೋಮಲ ತ್ವಚೆ ಪಡೆಯುವ ಇರಾದೆಯೇ? ಹೌದು ಸೌಂದರ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಅನಾವಶ್ಯಕವಾಗಿ ಬ್ಯೂಟಿ ಪಾರ್ಲರ್ ಗೆ ಹಣ ಖರ್ಚು ಮಾಡುತ್ತೇವೆ, ಆದರೆ ಇಲ್ಲಿ ಬಳಸಲಾಗಿರುವ ಸೌಂದರ್ಯ ವರ್ಧಕಗಳು ನಿಮ್ಮ ತ್ವಚೆಯ ಚರ್ಮದ ಆರೋಗ್ಯಕವಾಗಿರುವುದಿಲ್ಲ. ಕೆಲವೊಂದು ರಾಸಾಯನಿಕಗಳಿಂದ ಕೂಡಿದ ಮೊಯಿಶ್ಚರೈಸರ್‌ಗಳು ನಿಮ್ಮ ತ್ವಚೆಗೆ ಹೊಳಪನ್ನು ನೀಡುತ್ತವೆ. ಆದರೆ ಸ್ವಾಭಾವಿಕ ಉತ್ಪನ್ನಗಳು ನಿಮ್ಮ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮವನ್ನುಂಟು ಮಾಡುವುದಿಲ್ಲ. ಬನ್ನಿ ಇವುಗಳ ಕುರಿತು ಮತ್ತಷ್ಟು ಮಾಹಿತಿಯನ್ನು ನೋಡೋಣ... 1.. ಹಾಲಿನ ಪುಡಿಯ ಫೇಸ್ ಪ್ಯಾಕ್‌ ಹಾಲಿನ ಪುಡಿಯ ಫೇಸ್ ಪ್ಯಾಕ್‌ ವಿಶೇಷವಾಗಿ ಶುಷ್ಕ ತ್ವಚೆಯುಳ್ಳವರಿಗೆ ಇದು ಅತ್ಯ೦ತ ಪೋಷಕ ಗುಣವುಳ್ಳ ಒ೦ದು ಫೇಸ್ ಪ್ಯಾಕ್‌ ಆಗಿರುತ್ತದೆ. ಸಾಮಗ್ರಿಗಳು *ಹಾಲಿನ ಪುಡಿ *ಕಡ್ಲೆಹಿಟ್ಟು *ಬಾದಾಮಿ ಪುಡಿ *ಅರಿಶಿನ *ಹಾಲಿನ ಕೆನೆ *ಲಿ೦ಬೆರಸ *ಪನ್ನೀರು *ಆಲಿವ್ ಎಣ್ಣೆ 2. ಹಾಲಿನ ಪುಡಿಯ ಫೇಸ್ ಪ್ಯಾಕ್‌ ಎರಡು ಟೇಬಲ್ ಚಮಚಗಳಷ್ಟು ಹಾಲಿನ ಪುಡಿ, ಎರಡು ಟೇಬಲ್ ಚಮಚಗಳಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಬಾದಾಮಿ ಪುಡಿಗಳನ್ನು ಮಿಶ್ರಗೊಳಿಸಿರಿ. ಈಗ ಒ೦ದು ಟೇಬಲ್ ಚಮಚದಷ್ಟು ಹಾಲಿನ ಕೆನೆ ಹಾಗೂ ಒ೦ದು ಟೇಬಲ್ ಚಮಚದಷ್ಟು ಲಿ೦ಬೆಯ ರಸಗಳನ್ನು ಈ ಮಿಶ್ರಣಕ್ಕೆ ಸೇರಿಸಿರಿ ಹಾಗೂ ಜೊತೆಗೆ ಕೆಲವು ಹನಿಗಳಷ್ಟು ಪನ್ನೀರು ಹಾಗೂ ಆಲಿವ್ ಎಣ್ಣೆಯನ್ನೂ ಸೇರಿಸಿರಿ. ಈ ಮಿಶ್ರಣವನ್ನು ಒ೦ದು ಪೇಸ್ಟ್ ನ ರೂಪಕ್ಕೆ ತ೦ದು, ಅದನ್ನು ನಿಮ್ಮ ಮುಖ ಹಾಗೂ ನಿಮ್ಮ ಮೈಮೇಲೆಲ್ಲಾ ಹದವಾದ ಮಾಲೀಸಿನೊ೦ದಿಗೆ ಲೇಪಿಸಿಕೊಳ್ಳಿರಿ. ಈ ಪ್ಯಾಕ್ ಅನ್ನು ಮೈಮೇಲೆ ಹಾಗೆಯೇ ಕೆಲಕಾಲ ಒಣಗಲು ಬಿಡಿರಿ ಹಾಗೂ ತದನ೦ತರ ಉಗುರುಬೆಚ್ಚಗಿನ ನೀರಿನಿ೦ದ ಅದನ್ನು ತೊಳೆದು ತೆಗೆಯಿರಿ. ಈ ಪ್ಯಾಕ್‌ನ ಗರಿಷ್ಟ ಲಾಭವನ್ನು ಪಡೆದುಕೊಳ್ಳುವ೦ತಾಗಲು ಈ ನೈಸರ್ಗಿಕವಾದ "ಸೌ೦ದರ್ಯ ಮಿಶ್ರಣ" ವನ್ನು ವಾರಕ್ಕೆ ಕನಿಷ್ಟ ಮೂರು ಬಾರಿಯಾದರೂ ಹಚ್ಚಿಕೊಳ್ಳಿರಿ. 3. ಓಟ್ ಮೀಲ್ ಫೇಸ್ ಪ್ಯಾಕ್ ಒ೦ದು ಕಪ್ ನಷ್ಟು ಚೆನ್ನ೦ಗಿ ಬೇಳೆ (ಕೆ೦ಪು ಬೇಳೆ), ಕಾಲು ಕಪ್ ನಷ್ಟು ಕಚ್ಚಾ ಅಕ್ಕಿ, ಹಾಗೂ ಎ೦ಟರಿ೦ದ ಒ೦ಬತ್ತರಷ್ಟು ಬಾದಾಮಿಗಳನ್ನು ತೆಗೆದುಕೊ೦ಡು ಈ ಮೂರೂ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಪುಡಿಮಾಡಿಟ್ಟುಕೊಳ್ಳಿರಿ. ಈಗ ಈ ಮೂರೂ ಪುಡಿಗಳನ್ನು ಒ೦ದು ಬಟ್ಟಲಿನಲ್ಲಿ ಮಿಶ್ರಗೊಳಿಸಿರಿ ಹಾಗೂ ಈ ಮಿಶ್ರಣಕ್ಕೆ ಅರ್ಧ ಕಪ್ ನಷ್ಟು ಓಟ್ಸ್ ಹಾಗೂ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ 4. ಓಟ್ ಮೀಲ್ ಫೇಸ್ ಪ್ಯಾಕ್ ಈಗ ಈ ಮಿಶ್ರಣಕ್ಕೆ ಪನ್ನೀರನ್ನು ಸೇರಿಸಿಕೊಳ್ಳುವುದರ ಮೂಲಕ ದಪ್ಪನಾದ ಪೇಸ್ಟ್ ಅನ್ನು ತಯಾರು ಮಾಡಿಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ಮೈಮೇಲೆಲ್ಲಾ ಹಚ್ಚಿಕೊ೦ಡು ಅದನ್ನು ಕೆಲಕಾಲದವರೆಗೆ ಹಾಗೆಯೇ ಮೈಮೇಲೆಯೇ ಒಣಗಲು ಬಿಡಿರಿ. ಒಮ್ಮೆ ಈ ಪೇಸ್ಟ್ ಮೈಮೇಲೆ ಒಣಗಿದ ಬಳಿಕ, ಪೇಸ್ಟ್ ಅನ್ನು ಹದವಾಗಿ ಉಜ್ಜಿ ತೆಗೆಯಿರಿ ಹಾಗೂ ಸಾದಾ ನೀರಿನಿ೦ದ ತೊಳೆಯಿರಿ. ಶುಷ್ಕ ತ್ವಚೆಯುಳ್ಳವರು ಈ ಫೇಸ್ ಪ್ಯಾಕ್‌‌ಗೆ ಹಾಲಿನ ಕೆನೆಯನ್ನು ಸೇರಿಸಿಕೊಳ್ಳುವುದು ಒ೦ದು ಒಳ್ಳೆಯ ಉಪಾಯವಾಗಿರುತ್ತದೆ. 5. ಮೊಡವೆಗಳು ಇನ್ನೆ೦ದಿಗೂ ನಿಮ್ಮನ್ನು ಕಾಡದಿರಲಿ ಗುಳ್ಳೆಗಳು ಹಾಗೂ ಮೊಡವೆಗಳನ್ನು ಗುಣಪಡಿಸಲು ಇದು ಅತ್ಯ೦ತ ಪರಿಣಾಮಕಾರಿಯಾದ ಪರಿಹಾರೋಪಾಯವಾಗಿದೆ. ನಿಮಗೆ ಬೇಕಾದುದಿಷ್ಟೇ.... ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ, ಒ೦ದು ಟೇಬಲ್ ಚಮಚದಷ್ಟು ಅರಿಶಿನದ ಪುಡಿ, ಹಾಗೂ ಮೂರು ಟೇಬಲ್ ಚಮಚಗಳಷ್ಟು ಪನ್ನೀರು. ಈಗ, ಈ ಮೂರೂ ಘಟಕಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಯವಾದ ಪೇಸ್ಟ್ ಅನ್ನು ಸಿದ್ಧಗೊಳಿಸಿಕೊ೦ಡು ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿರಿ. ಹಚ್ಚಿದ ಇಪ್ಪತ್ತು ನಿಮಿಷಗಳ ಬಳಿಕ ಈ ಪೇಸ್ಟ್ ಅನ್ನು ತೊಳೆದು ತೆಗೆದುಬಿಡಿರಿ. 6. ಮೊಡವೆಗಳು ಇನ್ನೆ೦ದಿಗೂ ನಿಮ್ಮನ್ನು ಕಾಡದಿರಲಿ ಈ ಫೇಸ್ ಪ್ಯಾಕ್ ನಿಮ್ಮ ಮುಖದ ಮೇಲೆ ಈಗಿರಬಹುದಾದ ಗುಳ್ಳೆಗಳು ಹಾಗೂ ಮೊಡವೆಗಳನ್ನು ನಿವಾರಿಸುವುದಷ್ಟೇ ಅಲ್ಲ, ಜೊತೆಗೆ ಭವಿಷ್ಯದಲ್ಲಿ ಎ೦ದೆ೦ದಿಗೂ ಗುಳ್ಳೆಗಳು ಹಾಗೂ ಮೊಡವೆಗಳು ಮುಖದ ಮೇಲೆ ಉ೦ಟಾಗುವುದನ್ನು ತಡೆಗಟ್ಟುತ್ತದೆ. ಕಾ೦ತಿಯುಕ್ತ ಹಾಗೂ ಕಲೆರಹಿತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಈ ಪೇಸ್ಟ್ ಅನ್ನು ದಿನನಿತ್ಯವೂ ಮುಖದ ಮೇಲೆ ಲೇಪಿಸಿಕೊಳ್ಳಿರಿ 7. ಗೌರವರ್ಣಕ್ಕಾಗಿ ತ್ವಚೆಯು ಯಾವುದೇ ಪ್ರಕಾರದ್ದಾಗಿರಲಿ, ಗೌರವರ್ಣದ ತ್ವಚೆಯನ್ನು ಹ೦ಬಲಿಸುತ್ತಿರುವವರಿಗಾಗಿ ಇದು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಒ೦ದು ವೇಳೆ ನಿಮ್ಮದು ಶುಷ್ಕ ತ್ವಚೆಯಾಗಿದ್ದಲ್ಲಿ ಹಾಗೆಯೇ ಸುಮ್ಮನೆ ಶ್ರೀ ಗ೦ಧದೆಣ್ಣೆಯನ್ನು ಬಳಸಿರಿ. ಒ೦ದು ವೇಳೆ ತ್ವಚೆಯು ತೈಲಯುಕ್ತವಾದುದಾಗಿದ್ದರೆ ಶ್ರೀ ಗ೦ಧದ ಪುಡಿಯನ್ನು ಬಳಸಿರಿ. ಒ೦ದು ಟೇಬಲ್ ಚಮಚದಷ್ಟು ಕಾಳಿನ ಹಿಟ್ಟು, ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ ಅಥವಾ ಎಣ್ಣೆ, ಒ೦ದು ಟೀ ಚಮಚದಷ್ಟು ಅರಿಶಿನದ ಪುಡಿ ಹಾಗೂ ಪನ್ನೀರು ಇವುಗಳನ್ನು ಬಳಸಿಕೊ೦ಡು ನಯವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ 8. ಗೌರವರ್ಣಕ್ಕಾಗಿ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಲೇಪಿಸಿಕೊ೦ಡು ಅದನ್ನು ಹಾಗೆಯೇ ಮುಖದ ಮೇಲೆಯೇ ಒಣಗಲು ಅವಕಾಶ ಕಲ್ಪಿಸಿ. ನಿಮ್ಮ ಮುಖವನ್ನು ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿರಿ. ಕಾ೦ತಿಯುಕ್ತ ಹಾಗೂ ಗೌರವರ್ಣದ ತ್ವಚೆಯನ್ನು ಪಡೆದುಕೊಳ್ಳುವ೦ತಾಗಲು ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸಿರಿ. 9. ಬಾಳೆಹಣ್ಣಿನ ಪ್ಯಾಕ್ ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿರಿ. ವಿಟಮಿನ್ E ಯ ಕ್ಯಾಪ್ಸೂಲ್ ಗಳಿ೦ದ ತೈಲವನ್ನು ಪಡೆದುಕೊಳ್ಳಿರಿ. ಈಗ ಜಜ್ಜಿಟ್ಟಿರುವ ಬಾಳೆಹಣ್ಣು, ವಿಟಮಿನ್ E ಯುಳ್ಳ ತೈಲ, ಹಾಗೂ ಒ೦ದು ಟೀ ಚಮಚದಷ್ಟು ಜೇನು ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಪ್ಯಾಕ್ ಅನ್ನು ಈಗ ಮುಖದ ಮೇಲೆ ಲೇಪಿಸಿಕೊ೦ಡು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮುಖದ ಮೇಲೆ ಇರಗೊಡಿರಿ. ಈ ಫೇಸ್ ಪ್ಯಾಕ್, ನಿಮ್ಮ ತ್ವಚೆಯನ್ನು ಆರೋಗ್ಯಕರವನ್ನಾಗಿ, ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಮಾಡುವುದರ ಜೊತೆಗೆ ತ್ವಚೆಯನ್ನು ತಾರುಣ್ಯಪೂರ್ಣವಾಗಿಸುತ್ತದೆ. ಶುಷ್ಕ ತ್ವಚೆಯ ಸಮಸ್ಯೆಯುಳ್ಳವರ ಪಾಲಿಗೆ ಇದೊ೦ದು ಅತ್ಯುತ್ತಮವಾದ ಫೇಸ್ ಪ್ಯಾಕ್ ಆಗಿದೆ. 10. ಹುಣಸೆ ಹಣ್ಣು ಕಣ್ಣಿನ ಸುತ್ತ ಇರುವ ವೃತ್ತಗಳಿಗಾಗಿ ಕೆಲವೊಮ್ಮೆ ನಿಮ್ಮ ಕಣ್ಣುಗಳ ಸುತ್ತ ಇರುವ ವೃತ್ತಗಳು ನಿಮ್ಮ ಸೌಂದರ್ಯವನ್ನು ಮಂಕುಗೊಳಿಸುತ್ತವೆ. ಆದ್ದರಿಂದ ಈ ಕಲೆಗಳಿಂದ ಮುಕ್ತರಾಗಲು, ಹುಣಸೆಹಣ್ಣಿನ ಪೇಸ್ಟ್ ಬಳಸಿ. ಇದು ತ್ವಚೆಯನ್ನು ಬೆಳ್ಳಗೆ ಮಾಡುವುದರ ಜೊತೆಗೆ ಕಣ್ಣಿನ ಸುತ್ತಿನ ವೃತ್ತಗಳನ್ನು ಸಹ ನಿವಾರಿಸುತ್ತದೆ. ಇದಕ್ಕಾಗಿ ಹುಣಸೆಹಣ್ಣಿನ ಪೇಸ್ಟನ್ನು ಕಣ್ಣಿನ ಸುತ್ತ ಹತ್ತು ನಿಮಿಷ ಬಿಡಿ. ನಂತರ ಹಾಲಿನಲ್ಲಿ ಇದನ್ನು ತೊಳೆಯಿರಿ. 12/13 ಪಪ್ಪಾಯಿ ಹಣ್ಣು *ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ