Skip to main content

ಸರಸ್ವತಿ ಮುದ್ರೆ ಮಂತ್ರ

ಕುಲಜಾ ಸರಸ್ವತಿ ಮುದ್ರೆ ಮಂತ್ರ ಓಂ ಐಂ ಕುಲಜೇಸರಸ್ವತಿ ಐಂ ಸ್ವಾಹಾ ತೊದಲು ಮಾತು,ನೆನಪಿನ ಶಕ್ತಿಗಾಗಿ, ಅತಿಯಾದ ಮರೆವು,ದೀರ್ಘಕಾಲದ ನೆನಪಿನ ಶಕ್ತಿಗಾಗಿ,ಕೋಪನಿವಾರಣೆಗಾಗಿ, ಓದುವಾಗ,ಬರೆಯುವಾಗ,ನಿದ್ದೆಬರುವುದು,ಏಕಾಗ್ರತೆ ಕೆಡುವುದು,ಗ್ರಹಣ ಶಕ್ತಿ ಹೆಚ್ಚಿಸಿಸಲು,ಪರೀಕ್ಷೆಗೆ ಹೋಗುವಮುನ್ನ ೨೦ ನಿಮಿಷ ಜಪಿಸಿ ಹೋದರೆ ಪರೀಕ್ಷೆ ಚೆನ್ನಾಗಿ ಬರೆಯ ಬಹುದು,ಅಂಕ ಚೆನ್ನಾಗಿ ಗಳಿಸಬಹುದು, ಬುದ್ದಿ ಬ್ರಮಣೆಗೂ ಸಹ ಈ ಮುದ್ರೆ ಮಂತ್ರ ವನ್ನು ಜಪಿಸಬಹುದು,ಮೆದುಳಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ, ಮನಸ್ಥಿರತೆ ಉಂಟಾಗಲು,ಉತ್ತರಾಭಿಮುಖವಾಗಿ ಕುಳಿತು ೧೦೮ ಸಲ ಬ್ರಾಹ್ಮೀಮುಹೂರ್ತದಲ್ಲಿ ಜಪಿಸುವುದು ಸೂಕ್ತ ನೀಲಸರಸ್ವತಿ ಮುದ್ರೆ ಮತ್ತು ಮಂತ್ರ ಓಂ ಶ್ರೀಂ ಹ್ರೀಂ ಪ್ರಸೌಃ ಹುಂ ಪಟ್ ನೀಲಸರಸ್ವತೈ ನಮಃ ಓದುವಾಗ ಬರೆಯುವಾಗ ತಪ್ಪು ತಪ್ಪು ಮಾಡುವು,ಪ್ರಶ್ನೆಗೆ ತಕ್ಕ ಉತ್ತರ ಬರೆವ ಶಕ್ತಿ,ಚಾಣಾಕ್ಷತೆಗೆ,ಮನಸ್ಸಿನ ಸ್ಥಿರತೆಗಾಗಿ ಓದುವುದರಲ್ಲಿ ಆಸಕ್ತಿಗಾಗಿ,ಇಷ್ಟಪಟ್ಟು ಓದಲಿಕ್ಕಾಗಿ,ವಿಷಯದಲ್ಲಿಅಗಾದವಾದ ಪಾಂಡಿತ್ಯಪಡೆಯಲಿಕ್ಕಾಗಿ,ಗ್ರಹಿಕಾ ಶಕ್ತಿ ಕಡಿಮೆ ಇದ್ದವರಿಗೆ,ಜ್ಞಾನ ಶಕ್ತಿ,ಬುದ್ದಿಶಕ್ತಿ,ಕ್ರಿಯಾಶಕ್ತಿಗಾಗಿ,ಈಮುದ್ರೆ ಮಂತ್ರ ಉಪಯೋಗ ಅತ್ಯಂತ ಪ್ರಮುಖವಾಗಿದೆ.ಮೆದುಳಿನಲ್ಲಿರುವ ರಕ್ತನಾಳಗಳ ತೊಂದರೆಗಳಿಗೆ,ಹೆಪ್ಪುಗಟ್ಟುತ್ತಿದ್ದರೆ,ರಕ್ತಸರಾಗವಾಗಿ ಹರಿವಂತೆ ಮಾಡಲು,ಗ್ರಹಣ ಶಕ್ತಿ ಹೆಚ್ಚಿಸಲು,ಆಲಸ್ಯ-ಸೋಮಾರಿತನ,ಜಡತ್ವ,ಏಕಾಗ್ರತೆಗಾಗಿ ತೊದಲುನಿವಾರಣೆಗಾಗಿ ಕೂಡ ಈ ಮಂತ್ರ ಮುದ್ರೆಯನ್ನು ಉಪಯೋಗಿಸಬಹುದು.ನಿದ್ದೆದೂರವಾಗಿಸಬಲ್ಲ ಮಂತ್ರ ಇದಾಗಿದೆ,ಸ್ಪೂರ್ತಿತುಂಬುತ್ತದೆ,ಓದಿನಲ್ಲಿ ಆಸಕ್ತಿ ವೃದ್ದಿಸಲು ಖಾಲಿ ಉದರದಲ್ಲಿ ನಿತ್ಯ ಮುಂಜಾನೆ ೪ರಿಂದ ೬ ರ ಸಮಯದಲ್ಲಿ ಜಪಿಸುವುದು ಸೂಕ್ತ. ಘಟ ಸರಸ್ವತಿ ಮುದ್ರೆ ಮಂತ್ರ ಓಂ ಹ್ರೀಂ ದ್ರಾಂದ್ರೀಂ ಕ್ಲೀಂ ಬ್ಲೂಂ ಸಃ ಪ್ರೀಂ ಘಟಸರಸ್ವತೈ ನಮಃ ಓದದೆ-ಬರೆಯದೆ ಇದ್ದರು ಬುದ್ದಿವಂತರಾಗಿರಬೇಕೆಂದಾದರೆ,ನೆನಪಿನಶಕ್ತಿಗಾಗಿ,ವಿದ್ಯಾಸ್ತಂಭನಾ ನಿವಾರಣೆಗಾಗಿ,ಓದಿಗೆ ಮಾಟ,ಮಂತ್ರ ಮಾಡಿದ್ದರೆ ಅದನ್ನು ಹೋಗಲಾಡಿಸಲು ಓದದೆ-ಬರೆಯದೆ ಜ್ಞಾನಿಯಾಗಲು,ಸಕಲ ವಿದ್ಯಾ ಪಾರಂಗತರಾಗಲು,ಜ್ಞಾನ,ಕ್ರಿಯಾ,ಇಚ್ಚಾಶಕ್ತಿಗಳ ಪಡೆಯಲಿಕ್ಕಾಗಿ,ಐ ಎ ಎಸ್,ಐಪಿ ಎಸ್, ಸ್ಪರ್ದಾತ್ಮಕ ಪರೀಕ್ಷೆಗಳ ಬರೆಯುವವರಿಗಾಗಿ ಮತ್ತು ಜಯವನ್ನು ಪರೀಕ್ಷೆಗಳಲ್ಲಿ ಗಳಿಸಲಿಕ್ಕಾಗಿ,ವಾಕ್ ಚಾತುರ್ಯಕ್ಕೆ,ತಾಳ್ಮೆ,ಸಹನೆಗಳಿಗಾಗಿ ಈ ಮಂತ್ರ ಮತ್ತು ಮುದ್ರೆಯನ್ನು ಮಾಡುವುದರಿಂದ ಫಲಸಿಗುತ್ತದೆ. ಚಿತ್ರೇಶ್ವರಿ ಮುದ್ರೆ ಮತ್ತು ಮಂತ್ರ ಓಂ ಕ್ಲೀಂ ವದವದ ಚಿತ್ರೇಶ್ವರಿಸರಸ್ವತಿ ಐಂ ಸ್ವಾಹಾ ಏಕಾಗ್ರತೆಕೊರತೆ,ಎಲ್ಲರೊಂದಿಗೆ ಬೆರೆಯುವಿಕೆಯಲ್ಲಿ ಅಂಜಿಕೆ,ಆಸಕ್ತಿ,ವ್ಯವಸ್ಥಿತವಾಗಿ ಬರೆಯುವಿಕೆ,ಮಾತನಾಡುವಿಕೆಗಾಗಿ,ಚುರುಕುತನ,ಉನ್ಮಾದರೋಗನಿವಾರಣೆಗಾಗಿ,ಪ್ರಾಬ್ಲಂಸಾಲೋವಿಂಗ್ ಗಾಗಿ,ಗುರುನಿಂದನಾ ದೋಷನಿವಾರಣೆಗಾಗಿ,ನಿಗವಹಿಸುವಿಕೆ ಎಲ್ಲಾ ವಿಷಯದಲ್ಲಿ,ಉತ್ತರಾಭಿ ಮುಖವಾಗಿ ಮುಂಜಾನೆ ಸತತ ೧೦೮ ಸಲ ೬ತಿಂಗಳು ಜಪಿಸುವುದು .ಗರ್ಭಿಣಿಯು ಈ ಮಂತ್ರವನ್ನು ಮುದ್ರೆಯೊಂದಿಗೆ ಜಪಿಸಿದರೆ ಅವಳಿಗೆ ಜನಿಸುವ ಮಗು ಅತ್ಯಂತ ಚುರುಕಾಗಿರುತ್ತದೆ. ಮೆದುಳಿನ ಸಮಸ್ಯೆ ಇರುವವರು ಈ ಮುದ್ರೆ ಮಂತ್ರವನ್ನು ಮಾಡುವುದರಿಂದ ಮೆದುಳಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕೀರ್ತೇಶ್ವರಿ ಸರಸ್ವತಿ ಮುದ್ರೆ ಮತ್ತು ಮಂತ್ರ ಓಂ ಹ್ರೀಂ ಶ್ರೀಂ ಐಂ ವದ ವದ ಕೀರ್ತೇಶ್ವರಿ ಸರಸ್ವತೈ ಸ್ವಾಹಾ ವಯಸ್ಸಿಗೆ ತಕ್ಕ ಜ್ಞಾನಕ್ಕಾಗಿ,ವಾಕ್ ಚಾತುರ್ಯಕಾಗಿ,ವಿಷಯದಲ್ಲಿ ಅತಿಯಾದ ಅರಿವಿಗಾಗಿ,ಉಚ್ಚಾರ ದೋಷನಿವಾರಣೆಗಾಗಿ ಪ್ರಶ್ನೆಗೆ ತಕ್ಕ ಉತ್ತರ ಬರೆವ ಶಕ್ತಿ,ವಾಕ್ಯಸಂಯೋಜನೆ,ನಿರುತ್ಸಾಹ,ದುಗುಡ,ನಿವಾರಣೆಗಾಗಿ,ಕೀರ್ತಿ ಸಂಪಾದನೆಗಾಗಿ,ಓದು-ಬರಹದಲ್ಲಿ ನೈಪುಣ್ಯತೆ,ಚಾಣಾಕ್ಷತೆಗಾಗಿ,ಅಪಸ್ಮಾರ,(ಮೂರ್ಚೆರೋಗದವರು),ನೆನಪಿನಶಕ್ತಿ ಕುಂದಿದವರು,ಶ್ರವಣಶಕ್ತಿಗಾಗಿ,ಭಯ,ಹಾಸಿಗೆಯಲ್ಲಿ ಮೂತ್ರಿಸುವ ಮಕ್ಕಳಿಗಾಗಿ,ಯಾವುದೇಕಾರ್ಯದಲ್ಲಿ ಕೀರ್ತಿಗಾಗಿ,ಕೀಳಿರಿಮೆ,ದುಗುಡ ಸಂಕೋಚ ನಿವಾರಣೆಗಾಗಿ ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿ ಮುಖವಾಗಿ ಕುಳಿತು ಮುಂಜಾನೆ ೧೦ ರಿಂದ ೩೦ ನಿಮಿಷ ಜಪಿಸುವುದು ಸೂಕ್ತ.ಅಥವ ತಮ್ಮ ವಯಸ್ಸಿನಷ್ಟು ನಿಮಿಷಗಳಕಾಲ ಜಪಿಸುವುದು ಅತ್ಯಂತ ಸೂಕ್ತ(ಇದರಿಂದ ಪ್ರಯೋಜನ ಪಡೆದವರ ಉದಾ: ಕವಿ ಕಾಳಿದಾಸ) ಕಿಣಿ ಸರಸ್ವತಿ ಮುದ್ರೆ ಮತ್ತು ಮಂತ್ರ ಓಂ ಐಂ ಹ್ರೀಂ ಹ್ರೀಂ ಕಿಣಿ ಕಿಣಿ ವಿಚ್ಚೇ ಮಾಡಿದ್ದೇ ಮಾಡುತ್ತಾರೆ,ಹೇಳುವುದು,ಬರೆಯುವುದು ಸರಿಯಾಗಿ ಗೊತ್ತಿಲ್ಲ, ನೆನಪಿಅನಶಕ್ತಿ ಅಗಾದವಾಗುವುದಕ್ಕಾಗಿ,ಹೇಳಿದ ಮಾತು ಕೇಳದಂತವರಿಗೆ,ವಾಕ್ಯಸಂಯೋಜನಾ ಶಕ್ತಿ, ಮೆದುಳಿಗೆ ಸಂಬಂದಿಸಿದ ಎಲ್ಲಾ ಸಮಸ್ಯೆಗಳ ನಿವಾರಣೆಗಾಗಿ,ಏಕಾಗ್ರತೆಅಗಾದವಾಗುತ್ತದೆ,ಸ್ವೈಚ್ಚೆಯಿಂದ ತಮ್ಮ ಕೆಲಸ ತಾವು ಮಾಡಿಕೊಳ್ಳುವಂತೆ ಮಾಡಲು,ಓದುವಸಾಮರ್ತ್ಯ ವೃದ್ದಿಗಾಗಿ,ಸ್ಪರ್ಶಮಾಡಿದ್ದೆಲ್ಲಾ ನೆನಪಲ್ಲಿ ಉಳಿಸಿಕೊಳ್ಳಲಿಕ್ಕಾಗಿ ೧೦ರಿಂದ ೨೦ ನಿಮಿಷ ನಿತ್ಯಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಜಪಿಸುವುದು ಅತ್ಯಂತ ಸೂಕ್ತ. ವಿಶ್ವ ಜಯಸರಸ್ವತಿ ಮುದ್ರೆ ಮತ್ತು ಮಂತ್ರ ಓಂ ಹ್ರೀಂಹ್ರೀಂ ಐಂ ಜಯಸರಸ್ವತೈ ಸ್ವಾಹಾ ಹಲವಾರು ಕಲೆಗಳಲ್ಲಿ ಪ್ರಾವೀಣ್ಯತೆಗಾಗಿ ಉದಾ:೪-೫ ಬಾಷೆ ಮಾತನಾಡುವುದು,ಕಥೆ,ಚಿತ್ರಕತೆ,ಸಾಹಿತ್ಯ,ಸಂಗೀತ,ನಿರ್ದೇಶನ,ಸಾಹಿತ್ಯ ಎಲ್ಲವನ್ನು ಓಬ್ಬನೇ ಮಾಡುವ ಸಾಮರ್ತ್ಯಪಡೆಯಲು,(ಜಾತಕದಲ್ಲಿ ಬುಧ,ಕುಜ,ಗುರು ಶುಭರಿದ್ದರೆ ಈ ರೀತಿ ಆವ್ಯಕ್ತಿ ಇರುತ್ತಾರೆ)ಮಂಕು ಕವಿದಂತೆ ಇರುವವರು,ಕವಿ,ಕಾದಂಬರಿ ಕಾರರು,ಕಲಾವಿದರು,ಈ ಕಲೆ ಹೆಚ್ಚಾಗಿರುತ್ತದೆ,ಅಷ್ಟಸಿದ್ದಿಗಳಲ್ಲಿ ಇದು ಒಂದು ಸಿದ್ದಿಯಾಗಿದೆ,ಪ್ರಸಿದ್ದತೆಗಾಗಿ,ಸಾದನೆ ಮಾಡಿದರೆ ಮಾತ್ರ ಈ ವಿದ್ಯೆ ಪಡೆಯಲು ಸಾದ್ಯ,ಅದಿಕವಾದ ನೆನಪಿನಶಕ್ತಿಗಾಗಿ,ವಾಕ್ ವಲ್ಲಬರಾಗಲು,ಸಕಲಕಲಾವಲ್ಲಭರಾಗಲು, ಈ ಮಂತ್ರವನ್ನು ನಿತ್ಯ ಬ್ರಾಹ್ಮಿಮುಹೂರ್ತದಲ್ಲಿ ೧೦೮ ಸಲ ಸತತ ಅಭ್ಯಾಸಮಾಡಬೇಕು ಶದ್ದೆ ನಂಭಿಕೆ ಅಗತ್ಯವಾಗಿದ್ದರೆ ಮಾತ್ರ ಸಾದನೆಯಲ್ಲಿ ಯಶವನ್ನು ಕಾಣಲು ಸಾದ್ಯ. (ಹಾಸಿಗೆಯಲ್ಲಿ ಮೂತ್ರಿಸುವಮಕ್ಕಳಿಗೆಈ ಮಂತ್ರವನ್ನು ಮಲಗುವ ಮುನ್ನ ೧೦-೨೦ ನಿಮಿಷ ಜಪಿಸಿದರೆ ಆ ಮಗು ಹಾಸಿಗೆಯಲ್ಲಿ ಮೂತ್ರಮಾಡಿಕೊಳ್ಲುವುದಿಲ್ಲ,ಯಾವುದೇಕಾರ್ಯ ಕೈಗೊಳ್ಳುವ ಮುನ್ನ ಅಥವ ಹೊರಡುವಮುನ್ನ ಓಂ ಜಯಾಯ ನಮಃ ಓಂ ವಿಜಯಾಯ ನಮಃ ಈ ಮಂತ್ರವನ್ನು ಜಪಿಸಿ ನಿಮ್ಮ ಯಾವುದೇ ಕಾರ್ಯಕ್ಕೆ ಹೊರಡುವಮುನ್ನ ೧೦೮ ಸಲ ಉತ್ತರಭಿಮುಖವಾಗಿ ಕುಳಿತು ಜಪಿಸಿ ನಂತರ ಹೊರಟರೆ ಆಕಾರ್ಯ ಜಯವಾಗುತ್ತದೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ