Skip to main content

ಈ ಕೆಳಗಿನ ಗಿಡಮೂಲಿಕೆಗಳ ಬಳಕೆ ಮಧುಮೇಹ ರೋಗವನ್ನು ಹತೋಟಿಯಲ್ಲಿಡಲು ಖಂಡಿತ ಸಹಕಾರಿಯಾಗುವುದು.

ಈ ಕೆಳಗಿನ ಗಿಡಮೂಲಿಕೆಗಳ ಬಳಕೆ ಮಧುಮೇಹ ರೋಗವನ್ನು ಹತೋಟಿಯಲ್ಲಿಡಲು ಖಂಡಿತ ಸಹಕಾರಿಯಾಗುವುದು. 1. ಬೇವು: ಇದು ನಮ್ಮ ಪಿತ್ತಕೋಶವನ್ನು ಪ್ರಚೋದಿಸಿ ಕಾರ್ಯಾಚರಿಸುವಂತೆ ಮಾಡುವುದು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸಿ ಹೋಗಲಾಡಿಸುತ್ತದೆ. 2. ಅಮೃತ ಬಳ್ಳಿ: ನಮ್ಮ ಆಯುರ್ವೇದ ಇದನ್ನು ‘ಅಮೃತ’ ವೆಂದೇ ಹೇಳುತ್ತಿದೆ. ಇದು ಶಕ್ತಿವರ್ಧಕವೂ, ರೋಗನಿರೋಧಕವೂ ಆಗಿದೆ. ಇದು ಮಧುಮೇಹಕ್ಕೆ ಔಷಧವೆಂದೇ ಆಯುರ್ವೇದ ಹೇಳುತ್ತದೆ. ಇದು ಹೃದ್ರೋಗವನ್ನು, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕುಗ್ಗಿಸಿ, ತಗ್ಗಿಸುತ್ತದೆ. ಅಮೃತಬಳ್ಳಿಯನ್ನು ಕಬ್ಬು ತಿನ್ನುವಂತೆ ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆರಡು ಬಾರಿ ಜಗಿದು ರಸವನ್ನು ಸೇವಿಸಿರಿ. ಇಲ್ಲದಿದ್ದರೆ ಬಳ್ಳಿಯನ್ನು ಜಜ್ಜಿ ರಸ ತೆಗೆದು ಕುಡಿಯಿರಿ. ಬಳ್ಳಿಯ ಚೂರ್ಣವನ್ನು ತಯಾರಿಸಿ ಅರ್ಧ ಚಮಚ ಬಿಸಿ ನೀರಿನಲ್ಲಿ ಕದಡಿ ಕುಡಿಯಬೇಕು. ದಿನಕ್ಕೆರಡು ಸಲ ಊಟದ ಅರ್ಧಗಂಟೆ ಮೊದಲು ಸೇವಿಸಿರಿ. ಅಮೃತಬಳ್ಳಿಯ ಎಲೆಯನ್ನು ಕೂಡಾ ಹಲ್ಲಿನಿಂದ ಕಡಿದು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು. 3. ನೆಲ್ಲಿಕಾಯಿ: ಜೀವಕೋಶಗಳು ಇನ್‌ಸುಲಿನ್ ಹೀರುವಿಕೆಯಲ್ಲಿ ಹೆಚ್ಚಿನ ಕಾರ್ಯ ದಕ್ಷತೆ ತೋರಿಸುವ ಕಾರ್ಯದಲ್ಲಿ ಮೊದಲಿಗ ನಮ್ಮ ನೆಲ್ಲಿಕಾಯಿ. ಮೇಧೋಜೀರಕದ ಕಾರ್ಯಾಚರಣೆಯಲ್ಲಿ ಕ್ಷಮತೆಯನ್ನುಂಟು ಮಾಡುತ್ತದೆ. 4. ಜಂಬೂನೇರಳೆ: ಇದು ರಕ್ತದಲ್ಲಿರುವ ಸಕ್ಕರೆಯನ್ನು ಹೋಗಲಾಡಿಸುವುದರಲ್ಲಿ ಪ್ರವೀಣತೆ ಪಡೆದಿರುವ ಹಣ್ಣು- ಬೀಜವಾಗಿದೆ. ನಮ್ಮ ಮೇದೋಜೀರಕ ಗ್ರಂಥಿಯು ಹೆಚ್ಚೆಚ್ಚು ಇನ್ಸುಲಿನ್ ಸ್ರವಿಸುವಂತೆ ಉತ್ತೇಜನ ಕೊಡುತ್ತದೆ. ಜೀವಕೋಶಗಳ ಪ್ರತಿರೋಧಕ ಶಕ್ತಿ-ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹೆಚ್ಚಿನ ಕೊಬ್ಬಿನಾಂಶವನ್ನು ಕರಗಿಸುವ ತಾಕತ್ತು ಜಂಬೂ ನೇರಳೆಗೆ ಇದೆ. ಜೀವಕೋಶಗಳು ಇನ್ಸುಲಿನ್ ಹೀರುವಿಕೆಯ ಕೆಲಸವನ್ನು ದ್ವಿಗುಣಗೊಳಿಸುತ್ತವೆ. 5. ಹಾಗಲಕಾಯಿ: ಇದು ಕಹಿಯಾಗಿದ್ದರೂ ಮಾನವನ ದೇಹಕ್ಕೆ ಮಧುರ ಕೆಲಸವನ್ನು ಮಾಡುತ್ತದೆ. ಇದು ಔಷಧವಾಗಿ ಮಧುಮೇಹವನ್ನು ಹತೋಟಿಯಲ್ಲಿಡುವುದರಲ್ಲಿ ಬಹಳ ಪರಿಣಾಮಕಾರಿಯಾಗಿದೆ. ವಾತ-ಪಿತ್ತಾದಿಗಳನ್ನು ಇದು ವಾಸಿಮಾಡುವ ಪ್ರಬಲ ಔಷಧವಾಗಿದೆ. ಹಾಗಲಕಾಯಿ ಚಿಕ್ಕದಾಗಿ ತುಂಡರಿಸಿ, ಬಿಸಿಲಲ್ಲಿ ಒಣಗಿಸಿ-ಚೂರ್ಣ ಮಾಡಿ ದಿನಕ್ಕೆರಡು ಸಲ ಎರಡೆರಡು ಚಾ ಚಮಚ ನೀರಿನೊಂದಿಗೆ ಸೇವಿಸಿರಿ. ಬರೀ ಹೊಟ್ಟೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ. ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುವುದು. ಮಧುಮೇಹದಿಂದಾಗುವ ದೃಷ್ಟಿದೋಷ ಮತ್ತಿತ್ತರ ತೊಂದರೆಗಳು ಮಿತಿಮೀರದಂತೆ ಜಾಗ್ರತೆವಹಿಸುವ ಕಾರ್ಯ ಹಾಗಲಕಾಯಿ ಮಾಡುತ್ತದೆ. ಒಂದು ತಿಂಗಳು ಜಲಚಿಕಿತ್ಸೆ ಕೂಡಾ ಮಾಡಿದರೆ ಒಳ್ಳೆಯದು. 6. ಅರಿಷಿಣ: ರಕ್ತ ಶುದ್ಧ ಮಾಡುವುದರಲ್ಲಿ ಇದು ನಿಸ್ಸೀಮ. ಇದೊಂದು ಸೋಂಕು ನಿವಾರಕವಾಗಿ ಮಧುಮೇಹಿಗಳಿಗೆ ಉಪಕಾರಿಯಾಗಿ ಕೆಲಸ ಮಾಡುತ್ತದೆ. ಪಿತ್ತಜನಕಾಂಗಗಳ ಸೋಂಕುಗಳಿಗೂ ಇದು ಔಷಧವಾಗಿ ಕಾರ್ಯಾಚರಣೆ ಮಾಡುತ್ತದೆ. 7. ತುಳಸಿ: ತುಳಸಿ ಧಾರ್ಮಿಕವಾಗಿ ಪರಮಪವಿತ್ರ ಮಾತ್ರವಲ್ಲದೆ ಇದರ ಬಳಕೆಯಿಂದ ಹಲವು ರೋಗಗಳು ಗುಣಮುಖವಾಗುತ್ತವೆ. ಇದು ಮುಖ್ಯವಾಗಿ ಸೋಂಕು ಪ್ರತಿರೋಧಕ ಗುಣವನ್ನು ಹೊಂದಿದೆ. ಶ್ವಾಸಕಾಂಗಗಳ ಸೋಂಕು, ಚರ್ಮ ಇತ್ಯಾದಿ ಅಂಗಗಳ ಸೋಂಕುಗಳು ತುಳಸಿಯಿಂದಾಗಿ ತಡೆಗಟ್ಟಲು ಸಾಧ್ಯವಿದೆ. ಇದು ರೋಗನಿರೋಧಕವೂ ಆಗಿದೆ. 8. ನೆಲನೆಲ್ಲಿ: ಮುಖ್ಯವಾಗಿ ಪಿತ್ತಕೋಶವನ್ನು ಕಾರ್ಯಾಚರಿಸುವಲ್ಲಿ ಪ್ರಚೋದಕವಾಗಿ ಕಾರ್ಯಮಾಡುತ್ತದೆ. ಜೀರ್ಣಶಕ್ತಿಯ ತೊಂದರೆಯನ್ನು ನೀಗಿಸಿ, ಮಧುಮೇಹ ಗುಣಮುಖ ಮಾಡಲು ಇದು ಅತ್ಯಂತ ಉಪಕಾರಿ ಮೂಲಿಕೆ ಆಗಿದೆ. 9. ಮಧುನಾಶಿನಿ : ಮಧುನಾಶಿನಿ ಎಂಬ ಸಪ್ಪೆಸೊಪ್ಪನ್ನು ಕಷಾಯ ರೂಪದಲ್ಲಿ ತಯಾರಿಸಿ ಅಥವಾ ಚೂರ್ಣ ಮಾಡಿ ಕೂಡಾ ಸೇವಿಸಬಹುದು. ಮಧುನಾಶಿನಿ ಮಧುಮೇಹಕ್ಕೆ ಒಳ್ಳೆಯ ಮದ್ದು. 10. ಬಿಲ್ವಪತ್ರೆ : ನಾಲ್ಕು ಊಟದ ಚಮಚ ಬಿಲ್ವರಸವನ್ನು ಪ್ರತೀದಿನ ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಒಂದು ತಿಂಗಳಲ್ಲಿ ಪರಿಣಾಮಕಾರಿ ಶಮನ ಸಿಗುವುದು. ಬಿಲ್ವದಳ ಸೇವನೆಯಿಂದ ಮೇದೋಜಿರಕಾಂಗ ಪುನಃಶ್ಚೇತನಗೊಳ್ಳುತ್ತದೆ. ಕ್ರಮವಾಗಿ ಬಿಲ್ವದಳವನ್ನು ಅಗಿದು ತಿನ್ನಬೇಕು. ಇನ್‌ಸುಲಿನ್ ದ್ರವ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. 11. ಗೋರಿಕಾಯಿ ಬೀಜ: ಗೋರಿಕಾಯಿ ಬೀಜ ಒಣಗಿಸಿ ಹುಡಿ ಮಾಡಬೇಕು. 5 ಗ್ರಾಂ ಚೂರ್ಣ ಒಂದು ಬಟ್ಟಲು ನೀರಿನಲ್ಲಿ ಬೆರೆಸಿ, ಊಟಕ್ಕೆ ಮೊದಲು ಸೇವನೆ ಮಾಡಬೇಕು. 2-3 ಸಲ ಸೇವಿಸಬಹುದು. 12. ಸಪ್ತರಂಗಿ (ಏಕನಾಯಕ): ಸಪ್ತರಂಗಿಯ ಬೇರನ್ನು ನೀರಿನಲ್ಲಿ ಗಂಧ ತೇಯುವ ಹಾಗೆ ತೇಯ್ದು ಕಾಲು ಚಮಚದಷ್ಟು ಬಿಸಿನೀರಿನಲ್ಲಿ ಕಲಸಿ ಕುಡಿಯಬೇಕು. 13. ಜೇನುತುಪ್ಪ: ಜೇನುತುಪ್ಪ ಸೇವನೆಯಿಂದ ಪಿಷ್ಟ ಹಾಗೂ ಕೊಬ್ಬು (ಮೇದಸ್ಸು) ಸುಲಭದಲ್ಲಿ ಜೀರ್ಣವಾಗುವುದು. ಪಿತ್ತಕೋಶವು ಉತ್ತೇಜನಗೊಳ್ಳುವುದು. ಆದ್ದರಿಂದ ಮಧುಮೇಹಿಗಳಿಗೆ ಜೇನುತುಪ್ಪ ಔಷಧಿಯುಕ್ತ ಆಹಾರವೂ ಆಗಿರುತ್ತದೆ. 14. ವಿಜಯ ಸಾರ, (ಬೇಂಗ): ಇದು ಮೂತ್ರವನ್ನು ಹತೋಟಿಗೆ ತರುವುದಲ್ಲದೆ, ಮಧುಮೇಹವನ್ನು ಹದ್ದುಬಸ್ತಿಗೆ ತರಲು ಸಹಕಾರಿಯಾಗಿದೆ. ದೇಹದಲ್ಲಿ ಸಂಭವಿಸುವ ನರತಂತುಗಳ ಊತವನ್ನು ನಿಯಂತ್ರಣ ಮಾಡಿ, ನೋವು ನಿವಾರಕವಾಗಿ ಕಾರ್ಯಾಚರಿಸುತ್ತದೆ. 15. ಆಲದಮರ, ಅರಳೀಮರ ಮತ್ತು ಮುತ್ತುಗದ ಮರದ ಚಕ್ಕೆಯಿಂದ ಕಷಾಯ ತಯಾರಿಸಿ ಸೇವಿಸಬೇಕು. ತ್ರಿಫಲಾಚೂರ್ಣವನ್ನು ಒಂದು ಚಮಚದಷ್ಟು ದಿನಕ್ಕೆರಡು ಸಲ ಸೇವಿಸುವುದು ಕೂಡಾ ಉತ್ತಮ. ( ಅಳಲೆಕಾಯಿ, ತಾರೇ ಕಾಯಿ ಮತ್ತು ನೆಲ್ಲಿಕಾಯಿ). ಬೇವಿನ ಎಲೆಯ ರಸ ಅಥವಾ ಚೂರ್ಣ ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಬಹುದು. ಬೇವಿನ ಮರದ ತೊಗಟೆಯ ಕಷಾಯ ಮಾಡಿ ಕುಡಿಯುವುದೂ ಕೂಡಾ ಮಧುಮೇಹಕ್ಕೆ ಉತ್ತಮ ಔಷಧಿಯಾಗಿದೆ. ಪಾಡಪತ್ರೆ, ನಿಂಬೆ, ಹರಿದ್ರ, ನಿರೇಡು, ಧಾರುಹರಿದ್ರ, ವೆಗಿಸ, ಹಾಗಲ, ಬೇವು, ಅವಿಸ ಇತ್ಯಾದಿ ಮೂಲಿಕೆಗಳು ಮಧುಮೇಹ ಮತ್ತು ಅದರ ದುಷ್ಪರಿಣಾಮಗಳಿಂದ ಕಾಪಾಡುತ್ತವೆ. ಲೈಂಗಿಕ ಸಮಸ್ಯೆಯೂ ನಿವಾರಣೆಯಾಗುವುದು

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ