Skip to main content

ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು

ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ.ಅಂತಹ ಬಲವಾದ ಯೋಗಗಳೆಂದರೆ:- ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ. ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:- *ಕುಜನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ* *ಬುದನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ *ಗುರುವಿನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ* *ಶುಕ್ರನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ* *ಶನಿಯಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ* *ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ* *ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾಹುಇದ್ದು ಮತ್ತೊಂದುಗ್ರಹ ೨೮ಡಿಗ್ರಿ ೩೦ ನಿಮಿಷದಲ್ಲಿ ಇದ್ದರೆ ) *ಜನ್ಮ ಕುಂಡಲಿಯಲ್ಲಿ ಮೂರು ಅಥವ ಮೂರಕ್ಕೂ ಹೆಚ್ಚು ಗ್ರಹಗಳು ಉಚ್ಚ ಅಥವ ಸ್ವಕ್ಷೇತ್ರಗತರಾಗಿದ್ದಲ್ಲಿ ಈ ಕಾಲಸರ್ಪದೋಷವು ಭಂಗವಾಗುತ್ತದೆ. *ಲಗ್ನಾಧಿಪತಿ,ಚಂದ್ರ,ರವಿ ಶುಭಭಾವಗಳಲ್ಲಿದ್ದಲ್ಲಿ ಅಂದರೆ ಈ ಗ್ರಹಗಳಲ್ಲಿ ಯಾರಾದರು(೧,೫,೯ರಲ್ಲಿ ಇದ್ದಲ್ಲಿ)ಕೇಂದ್ರಗಳಲ್ಲಿ ಇದ್ದಲ್ಲಿ ಕಾಳಸರ್ಪದೋಷ ಭಂಗವಾಗುತ್ತದೆ. *ದಶಮದಿಂದ ಚಥುರ್ಥದಲ್ಲಿ ಅಥವ ಚತುರ್ಥದಿಂದ ದಶಮದಲ್ಲಿ ಕಾಳಸರ್ಪದೋಷ ಉಂಟಾಗಿದ್ದರೆ ಹಾಗು ಆ ಎಲ್ಲಾ ಬಾವಗಳಲ್ಲಿ ಎಲ್ಲ ಗ್ರಹಗಳಿದ್ದರೆ ಕಾಳಸರ್ಪದೋಷ ನಿಶ್ಚಯವಾಗಿ ಭಂಗವಾಗುತ್ತದೆ. ಹನ್ನೆರಡು ಕಾಳಸರ್ಪ ದೋಷಗಳು ಮತ್ತು ಅವುಗಳ ಪರಿಣಾಮ,ದೋಷಪರಿಹಾರೋಪಾಯಗಳು ಅನಂತ: ರಾಹು ಲಗ್ನದಲ್ಲಿ(೧ರಲ್ಲಿ)ಕೇತು ಸಪ್ತಮದಲ್ಲಿ ಉಳಿದೆಲ್ಲಗ್ರಹಗಳು ಇವುಗಳ ಮದ್ಯೆ ಇದ್ದರೆ ಈ ದೋಷ ಉಂಟಾಗುತ್ತದೆ. ದೋಷಕ್ಕೆ ಕಾರಣ:- ಹುತ್ತವನ್ನು ಹಾಳು ಮಾಡುವುದರಿಂದ, ಹುತ್ತವನ್ನು ಹಾಳುಮಾಡಿ ವ್ಯವಸಾಯ ಮಾಡಿದ್ದರೆ,ಹುತ್ತದಮೇಲೆ ವಾಹನ ಹತ್ತಿಸಿದ್ದರೆ,ಊಟಕ್ಕೆ ವಿಷಹಾಕಿದ್ದರೆ ಈ ದೋಷ ಉಂಟಾಗುತ್ತದೆ. ಪರಿಣಾಮಗಳು:-ಜನ್ಮದಿಂದಲೂ ಏಳಿಗೆಯಾಗುವುದಿಲ್ಲ,ಅವಮಾನ,ನಿಂದನೆ,ಸಂಸಾರ ಜೀವನ ಸುಖವಿರುವುದಿಲ್ಲ,ಮಕ್ಕಳಾಗುವುದಿಲ್ಲ,ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ,ಕೋರ್ಟು ಕಛೇರಿ ಸುತ್ತಬೇಕಾಗುತ್ತದೆ,ಅಂಡೊತ್ಪತ್ತಿಯಲ್ಲಿ ಸಮಸ್ಯೆ,ಹೆಂಡತಿಬಿಟ್ಟು ಹೋಗುವಿಕೆ. ಪರಿಹಾರ:- ಸರ್ಪಶಿರಮುದ್ರೆ ದಾರಣೆಮಾಡಿ ನಿತ್ಯ ಈ ಮಂತ್ರವನ್ನು೧೦೮ಸಲ ಜಪಿಸಿದರೆ ಈ ದೋಷ ನಿವಾರಣೆಯಾಗುತ್ತದೆ. ಮಂತ್ರ:-ಓಂ ಫೋ ಅನಂತಮುಖಿ ಸ್ವಾಹಾ ಕುಲಿಕ ಕಾಳಸರ್ಪ ದೋಷ ಕಾರಣ:-ಸರ್ಪ ನಿದ್ರಾಭಂಗ ದೋಷದಿಂದ,ಸರ್ಪದ ಉದರಕ್ಕೆ ಹೊಡೆದು ಸಾಯಿಸಿದ್ದರೆ,ಈ ದೋಷ ಉಂಟಾಗುತ್ತದೆ. ಪರಿಣಾಮ:-ವೀರ್ಯಾಣುವಿನ ಸಮಸ್ಯೆ ಅಂಡಾಣು ಸಮಸ್ಯೆ ವೀರ್ಯದೋಷಗಳು ಉಂಟಾಗುತ್ತವೆ. ಪರಿಹಾರ:- ಕುಜ/ಸುಬ್ರಮಣ್ಯನ ಸೇವೆ ಮಾಡಿಸಿರಿ.ಈ ಮುದ್ರೆಯೊಂದಿಗೆ ಈ ಮಂತ್ರವನ್ನು ನಿತ್ಯ ೧೦೮ಸಲ ಜಪಿಸಿರಿ ನಿಮ್ಮ ದೋಷ ನಿವಾರಣೆಯಾಗುತ್ತದೆ.ಮಂತ್ರ:-ಓಂ ಪೂಂ ಪೂಂ ಪೂರ್ವ ಭೂಕಮುಖಿಸ್ವಾಹ. ವಾಸುಕಿ ಕಾಳಸರ್ಪ ದೋಷ ಕಾರಣ:-ಸರ್ಪಗಳ ಅಂಡಗಳದ್ವಂಸ ದಿಂದ,ಹಾವಿನ ಸಂತತಿಯನ್ನು ಹಾಳುಮಾಡುವುದರಿಂದ,ಹಾವಿನ ಮರಿಗಳನ್ನು ಸಾಯಿಸಿದ್ದರೆ. ಪರಿಣಾಮ:-ಚರ್ಮಕ್ಕೆ ಸಂಬಂದಿಸಿದ ರೋಗಗಳು ಮನೆಯವರಿಗೆಲ್ಲಾ ಬರುತ್ತದೆ ಇದು ಅಮವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಹೆಚ್ಚಾಗಿ ತೊಂದರೆ ಕೊಡುತ್ತದೆ,ಸೋದರ-ಸೋದರಿಯರೊಡನೆ ವೈರತ್ವ,ಯಾವುದರಲ್ಲು ಏಳಿಗೆಯಾಗುವುದಿಲ್ಲ,ದಿಡೀರನೆ ಹಣ,ಆಸ್ತಿಗಳನ್ನು ಕಳೆದುಕೊಳ್ಳುವಿಕೆ,ದಾಂಪತ್ಯ ಸುಖವಿರುವುದಿಲ್ಲ,ರತಿಸುಖ ಸಿಗುವುದಿಲ್ಲ,ಇದರಿಂದಾಗಿ ದಂಪತಿಗಳು ಅಡ್ಡದಾರಿ ಹಿಡಿಯಬಹುದು,ಶೀಘ್ರ ವೀರ್ಯಸ್ಕಲನ.ಜನನೇಂದ್ರಿಯ ಸಮಸ್ಯೆಯಿಂದ ಗರ್ಭದರಿಸಲು ಸಾದ್ಯವಾಗುವುದಿಲ್ಲ. ಪರಿಹಾರ:- ಮುದ್ರೆಯೊಂದಿಗೆ ಈ ಮಂತ್ರವನ್ನು ೧೦೮ ಸಲ ನಿತ್ಯ ಜಪಿಸಿರಿ ನಿಮ್ಮ ವಾಸುಕಿ ಕಾಳಸರ್ಪದೊಷವು ನಿವಾರಣೆಯಾಗುತ್ತದೆ.ಮಂತ್ರ:- ಓಂ ವಾಸಕಿ ಮುಖಿ ಸ್ವಾಹಾ ಪದ್ಮ ಕಾಳಸರ್ಪ ದೋಷ ಕಾರಣ:-ಹಾವಿನ ಬಾಲಕ್ಕೆ ಹೊಡೆದುಸಾಯಿಸಿದ್ದರೆ ಈ ದೋಷ ಬರುತ್ತದೆ. ಪರಿಣಾಮ:-ಗುಪ್ತ ಜನನಾಂಗಗಳ ರೋಗ,ರುಜಿನಗಳು ಬರುತ್ತವೆ ಕೀವು- ರಕ್ತಬರುವಂತಹ ಗಾಯ ಹುಣ್ಣುಗಳು ಈ ಅಂಗಗಳನ್ನು ಬಾದಿಸುತ್ತವೆ.ಶತೃಕಾಟ,ಗೃಹದಲ್ಲಿ ಜಗಳ, ಸರ್ಪಗಳ ದರ್ಶನ ಆಗಾಗ್ಗೆ ಆಗುತ್ತದೆ,ಕೆಲವೊಮ್ಮೆ ಸರ್ಪ ಮನೆಗೇ ಬರುತ್ತದೆ,ಯೋನಿ/ಶಿಶ್ನಗಳು ಗಾಯಗಳಿಂದಾಗಿ ಕೀವು-ರಕ್ತ ಸೋರುವಿಕೆ,ಇದರಿಂದ ರತಿಸುಖದಿಂದ ದೂರಾಗುವಿಕೆ,ದಾಂಪತ್ಯ ಕಲಹ, ವಿರಹಗಳು, ಪರಿಹಾರ:-ಷಷ್ಟಿದಿವಸ ಮುದ್ರೆ ಮಂತ್ರವನ್ನು ಜಪಿಸುವುದರಿಂದ ಈ ದೋಷ ನಿವಾರಣೆಯಾಗುತ್ತದೆ. ಮಹಾಪದ್ಮ ಕಾಳಸರ್ಪ ದೋಷ ಕಾರಣ:-ಸರ್ಪಗಳ ಸಂಮ್ಮಿಲ(ಸರ್ಪ ಸಂಭೋಗ)ವನ್ನು ನೋಡಿದರೆ,ನೋಡಿ ಆಡಿಕೊಂಡರೆ,ಅಮಾವಾಸ್ಯೆ/ಹುಣ್ಣಿಮೆಯಲ್ಲಿ ಈ ದೃಷ್ಯವನ್ನು ನೋಡಿದರೆ ಇಂತಹ ಸಮಯದಲ್ಲಿ ಸರ್ಪಗಳನ್ನು ದೂರಮಾಡಿದ್ದರೆ. ಪರಿಣಾಮ:-ಪ್ರೀತಿ-ಪ್ರೇಮ ವಿವಾಹಕ್ಕೆ ಅಡ್ಡಿ ಆತಂಕಗಳು ಪ್ರೇಮಿಗಳು ಬೇರಾಗುವಿಕೆ,ವಿವಾಹಾ ನಂತರ ದಂಪತಿಗಳು ದೂರಾಗುವಿಕೆ, ಪರಿಹಾರ:-ಮುದ್ರೆ ಯೊಂದಿಗೆ ಈ ಮಂತ್ರವನ್ನು ೨೦-೩೦ ನಿಮಿಷ ನಿತ್ಯ ಜಪಿಸುವುದರಿಂದ ಈ ದೋಷ ಪರಿಹಾರವಾಗುತ್ತದೆ ಮಂತ್ರ:- ಓಂ ಮಹಾ ಪದ್ಮಿನಿ ಮುಖಿ ಫೋ ಸ್ವಾಹಾ ತಕ್ಷಕ ಕಾಳಸರ್ಪ ದೋಷ ಕಾರಣ:-ಪುರುಷ ಹತ್ಯೆ,ಶಿಶುಹತ್ಯೆ,ಅಪಹರಣ,ಮಾಡಿದ್ದರೆ. ಪರಿಣಾಮ:-ಅಂತವರಿಗೆ ಗಂಡು ಸಂತಾನವಾಗದು,ಸ್ತ್ರೀಸುಖ/ಪುರುಷಸುಖ ಸಿಗುವುದಿಲ್ಲ.ಇಂತವರಿಗೆ ಅವಳಿ ಹೆಣ್ಣು ಮಕ್ಕಳಾಗುವ ಸಂಬವವಿರುತ್ತದೆ. ಪರಿಹಾರ:-ಮುದ್ರೆ ಮಂತ್ರವನ್ನು ಜಪಿಸುವುದು. ಕಾರ್ಕೋಟಕ ಕಾಳಸರ್ಪ ದೋಷ ಶಂಖಚೂಡ ಕಾಳಸರ್ಪ ದೋಷ ಕಾರಣ:-ಸ್ತ್ರೀ ಅಪಹರಣ,ವೇಶ್ಯಾವಾಟಿಕೆಗೆ ಬಲವಂತವಾಗಿ ಸ್ತ್ರೀಯನ್ನಾಗಲಿ ಪುರುಷರನ್ನಾಗಲಿ ದೂಡಿದ್ದರೆ, ಕಳೆದ ಜನ್ಮದಲ್ಲಿ ಈ ರೀತಿ ಮಾಡಿದ್ದರೆ.ಪರಸ್ತ್ರೀಯನ್ನು ಬಲವಂತವಾಗಿ ಅನುಭವಿಸಿದ್ದರೆ,ವಿವಾಹಕ್ಕೆ ಮುನ್ನ ಸ್ತ್ರೀ ಸುಖ ಪಡೆದಿದ್ದರೆ. ಪರಿಣಾಮ:-ಜೂಜು ಕೋರರಾಗುತ್ತಾರೆ,ರೇಸ್ ಹುಚ್ಚು,ಬೆಟ್ಟಿಂಗ್ ಹುಚ್ಚು,ಕಾಮಾಸಕ್ತಿ ಇರುವುದಿಲ್ಲ,ಪುರುಷನು ಸ್ತ್ರೀಯಂತೆ ವರ್ತಿಸುತ್ತಾನೆ, ಪರಿಹಾರ:-ಮುದ್ರೆ ಮಂತ್ರವನ್ನು ಜಪಿಸಿರಿ. ಪಾತಕ(ಘಾತಕ)ಕಾಳಸರ್ಪ ದೋಷ ಕಾರಣ:-ಸಮಾಜದಲ್ಲಿ ೯೯ ಜನರಿಗೆ ಈ ದೋಷ ವಿರುತ್ತದೆ, ಪರಸ್ತ್ರೀ ಅಪಹರಣ,ನರಹತ್ಯ,ಹುತ್ತಕ್ಕೆ ಬೆಂಕಿ, ಕೆಮಿಕಲ್ಸ್ ಹಾಕಿದ್ದರೆ. ಪರಿಣಾಮ:-ವ್ಯವಹಾರ ಹಾನಿ,ಉದ್ಯೋಗಮಾಡಲಾಗದು,ಇಂತವರು ವ್ಯಾಪಾರವನ್ನೇ ಮಾಡಿ ಬದುಕಬೇಕು,ಆದರೆ ವ್ಯಾಪಾರದಲ್ಲಿ ದ್ರೋಹಗಳು ನಡೆಯುತ್ತಿರುತ್ತವೆ,ಅದರಲ್ಲು ಹಿತಶತೃಗಳಿಂದ ದ್ರೋಹಗಳು,ಬುದ್ದಿಮಾಂದ್ಯ ಮಕ್ಕಳಜನನ,ಕಿಡ್ನಿಇಲ್ಲದ ಮಕ್ಕಳಜನನ. ಪರಿಹಾರ:-ಮುದ್ರೆ ಮಂತ್ರವನ್ನು ಜಪಿಸುವುದು. ವಿಷದರ(ವಿಶಕ್ತ)ಕಾಳಸರ್ಪ ದೋಷ ಕಾರಣ:-ದಂಪತಿಗಳ ಅಗಲಿಸಿದ್ದರೆ,ವಿಷಹಾಕಿದ್ದರೆ. ಪರಿಣಾಮ:-ಅಣ್ಣನೊಂದಿಗೆ ವಾದ-ವಿವಾದಗಳು ಜರುಗುವುವು, ಅಣ್ಣನಿಂದಲೇ ತೊಂದರೆ ಉಂಟಾಗುತ್ತಿರುತ್ತದೆ,ದೂರಪ್ರದೇಶದಲ್ಲಿವಾಸ,ಕೋರ್ಟ್ ಕೇಸಿಗೆ ಅಲೆಯುವಿಕೆ,ವಿವಾಹಾ ನಂತರ ಕೂದಲು ಉದುರುತ್ತದೆ,ಚರ್ಮರೋಗ,ಕಜ್ಜಿ,ಉಂಟಾಗುತ್ತದೆ,ಹೆಂಡತಿ ಮಕ್ಕಳು ವೇಶ್ಯಾವಾಟಿಕೆಯಲ್ಲಿ ತೊಡಗುವಿಕೆ,ಆಗಾಗ ಹಾವುಗಳು ಮನೆಗೆ ಬರುತ್ತವೆ,ಅಂಡಾಣು/ವೀರ್ಯಾಣುಗಳ ಚಲನೆಯಲ್ಲಿ ಮಂದಗತಿ ಉಂಟಾಗುತ್ತದೆ ಇದರಿಂದ ಸಂತಾನ ದೋಷ ಉಂಟಾಗುತ್ತದೆ,ಮಾತು ವಿಕೃತವಾಗುತ್ತದೆ,ರಾಹುದೋಷ ಉಂಟಾಗುತ್ತದೆ,ಅನಿದ್ರೆ,ಕಣ್ಣುಬೇನೆ,ಹೃದ್ರೋಗ ಪೀಡಿಸಲ್ಪಡುವವು ಜೀವನದ ಅಂತ್ಯವು ರಹಸ್ಯವಾಗಿರುವುದು. ಪರಿಹಾರ:- ಈ ಮುದ್ರೆ ಮಂತ್ರವನ್ನು ನಿತ್ಯ ೧೦೮ ಸಲ ಮುದ್ರೆಯೊಂದಿಗೆ ಜಪಿಸಿರಿ ಮಂತ್ರ:- ಓಂ ನವಕುಲಾಯ ವಿದ್ಮಹೇ ವಿಷದಂತಾಯ ಧೀಮಹೀ ತನ್ನೋ ವಿಷಧರ ಪ್ರಚೋದಯಾತ್ ಶೇಷನಾಗ ಕಾಳಸರ್ಪ ದೋಷ ಕಾರಣ:-ಒಂದು ಬೀದಿಗೆ ಸಾಮಾನ್ಯವಾಗಿ ೨೫ ಜನರಿಗೆ ಈ ದೋಷವಿರುತ್ತದೆ,ಪುಣ್ಯಕ್ಷೇತ್ರಗಳಲ್ಲಿ,ಮಠ,ದೇವಾಲಯ, ನಧಿ,ಕೊಳಗಳ ತೀರದಲ್ಲಿ ರತಿಸುಖವನ್ನು ಪಡೆದಿದ್ದರೆ ಈ ದೋಷವು ಬರುತ್ತದೆ,ಇಂತಹ ಸ್ಥಳಗಳಲ್ಲಿ ಕಾಮ,ಪ್ರೇಮದ ಛೇಷ್ಟೆಯನ್ನು ಮಾಡಿದ್ದರೆ ಈ ದೋಷಬರುತ್ತದೆ. ಪರಿಣಾಮ:-ಕಣ್ಣಿನದೋಷ,ಹೃದಯದ ರೋಗ,ಅಂಗವಿಕಲ ಮಕ್ಕಳ ಜನನ,ತಲೆದಪ್ಪ ಮಕ್ಕಳಜನನ,ಕಣ್ಣುದಪ್ಪ,ಕುಬ್ಜಮಕ್ಕಳ ಜನನ, ಪರಿಹಾರ:-ವಿಷ್ಣುವಿನ ಜಪವನ್ನು ನಿತ್ಯ ಜಪಿಸುವುದು ಮತ್ತು ಮುದ್ರೆ ಮಂತ್ರವನ್ನು ಜಪಿಸುವುದು. -sangraha

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ