Skip to main content

ವಾಸ್ತುವಿನಲ್ಲಿ ಸ್ವಸ್ತಿಕ್ ಮಹತ್ವ ಎಂ. ಮಹದೇವಸ್ವಾಮಿ

ವಾಸ್ತುವಿನಲ್ಲಿ ಸ್ವಸ್ತಿಕ್ ಮಹತ್ವ 'ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮಲ್ಲಿ ನಡೆಯುವ ಅನೇಕ ನಿಗೂಢ ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ಆದರೆ ಅಧ್ಯಾತ್ಮಿಕವಾಗಿ ಅದಕ್ಕೆ ಉತ್ತರ ದೊರೆಯುತ್ತದೆ.' ಹಿಂದೂಗಳಲ್ಲಿ ಸ್ವಸ್ತಿಕ್, ಕ್ರಿಶ್ಚಿಯನ್‌ರಲ್ಲಿ ಕ್ರಾಸ್, ರಷ್ಯನ್ನರಲ್ಲಿ ಕೀ ಪವಿತ್ರವಾದ ಚಿಹ್ನೆಗಳಾಗಿವೆ. ಸ್ವಸ್ತಿಕ್ ಚಿಹ್ನೆಯು ಅದ್ಭುತವಾದ ನಿಗೂಢ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಈ ಚಿಹ್ನೆಯು ವಾಸ್ತು ರಚನಾಶಾಸ್ತ್ರದಲ್ಲಿ ಸಹ ಅಪಾರವಾದ ಮಾಹಿತಿಯನ್ನು ನೀಡಿದೆ. ಈ ಚಿಹ್ನೆಯನ್ನು ನಮ್ಮ ಪುರಾತನ ಕಾಲದಿಂದಲೂ ಪೂರ್ವಿಕರು ಬಳಸುತ್ತಿದ್ದರು. ಇದರ ಶುಭ ಫಲವನ್ನು ತಲೆಮಾರಿನಿಂದ ತಲೆಮಾರಿಗೆ ಹೇಳುತ್ತಾ ಬೆಳೆಸಿ ಉಳಿಸಿಕೊಂಡು ಬಂದಿದ್ದೇವೆ. ಹರ್‌ನೆಸ್ಟ್ ಹರ್ಟ್‌ಮನ್ ಎಂಬ ಜರ್ಮನ್ ಖಗೋಳ ವಿಜ್ಞಾನಿಯು ಲಂಬಾ ಅಂಟಿನಾ ಎಂಬ ತನ್ನ ಉಪಕರಣದಿಂದ ಪ್ರಪಂಚದಲ್ಲಿರುವ ಪ್ರತಿ ವಸ್ತುವಿಗೂ, ಪ್ರತಿ ಸ್ಥಳಕ್ಕೂ, ಅಗೋಚರವಾದ ನಿಗೂಢವಾದ ಶಕ್ತಿಯಿದೆ ಎಂದು ತೋರಿಸಿಕೊಟ್ಟನು. ಅವನು ಸತ್ತ ಮನುಷ್ಯನ ದೇಹದ ಮೇಲೆ ಆ ಯಂತ್ರವನ್ನು ಇಟ್ಟಾಗ 0 (ಶೂನ್ಯ) ಭೋವಿಸ್ (ಶಕ್ತಿಯನ್ನು ಅಳೆಯುವ ಅಳತೆಗೋಲು) ಅನ್ನು ತೋರಿಸಿದೆ. ವಾಸ್ತು ಜಗತ್ತು: ವಿದ್ಯಾಲಯಗಳ ವಾಸ್ತು ಹೇಗಿರಬೇಕು ? ಜೆ.ಕೆ. ಜೈನ್ ವಿದ್ಯಾದದಾತಿ ವಿನಯಂ, ವಿದ್ಯಾ ವಿಹೀನಂ ಪಶು ಸಮಾನಂ. ಇವೆಲ್ಲ ಹಿಂದಿನವರು ಬರೆದು ಹಾಕಿದ ಪದ ಪುಂಜಗಳು. ಬಹಳ ಅರ್ಥಪೂರ್ಣ ಮತ್ತು ಚಿರನೂತನ. ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಗಸು. ಇದು ಮರೆಯಲಾರದ ಮತ್ತು ಮರೆಯಬಾರದ ಮಾತು. ಹಾಗೇನೆ ಹಳೆ ನೀತಿ-ಹೊಸ ರೀತಿ ಹೊಂದಿಸಿ ಬಾಳಿದರೆ ಅದೇ ಸ್ವರ್ಗೀಯ ಸ್ಥಿತಿ. ಇದಕ್ಕೆಲ್ಲ ಕಾರಣವಾಗುವುದು ಶಿಕ್ಷಣ. ಶಿಕ್ಷಣ ಎಂದರೆ ತಕ್ಷಣ ನೆನಪಾಗುವುದು ಪದವಿ. ಆದರೆ, ನೆನಪಿರಲಿ ಅದೇ ಸರ್ವಸ್ವ ಲ್ಲ. ಹೂವಿದ್ದರೆ ಸಾಲದು ಅದರೊಡನೆ ಪರಿಮಳವೂ ಬೇಕು. ಹಾಗೇನೆ ವಿದ್ಯೆಯೊಡನೆ ಬುದ್ಧಿಯು ಮೇಳೈಸಿರಬೇಕು. ಪ್ರತಿಭೆ ಹಾಸು ಹೊಕ್ಕಾಗಿರಬೇಕು. ಇವೆಲ್ಲವನ್ನು ಸೇರಿಸಿ ಬೆಳೆಯುವ ದೊಡ್ಡ ಗುಣ ವಿದ್ಯಾರ್ಥಿಗಳಲ್ಲಿರಬೇಕು. ಅಹಂಕಾರ ಅಧಃಪತನಕ್ಕೆ ದಾರಿ. ವಿದ್ಯಾವಂತ ಇದರ ಪ್ರವೇಶಕ್ಕೆ ಅವಕಾಶ ಕೊಡಲೇ ಬಾರದು. ಯಾಕೆಂದರೆ ಬೆಳೆ ಬೆಳೆದಲ್ಲಿ ಕಳೆಯೂ ಬೆಳೆಯುವುದು ಸಹಜ ತಾನೆ ಅದನ್ನು ಕಿತ್ತು ಬಿಸಕುವುದೇ ಜಾಣರ ಲಕ್ಷಣ. ವಿದ್ಯಾವಂತರ ಎರಡು ದಿವ್ಯಾಸ್ತ್ರಗಳೆಂದರೆ ಕರುಣೆ ಮತ್ತು ಕ್ಷಮೆ. ಕ್ಷಮಯಾಧರಿತ್ರಿ ಎಂಬುದು ವಿದ್ಯಾವಂತ ಜ್ಞಾನಿಗಳ ಬಾಯಿಯಿಂದ ಹೊರಹೊಮ್ಮಿದ ದಿವ್ಯವಾಣಿ ಅಲ್ಲವೇ ? ಇಂತಹ ವಿದ್ಯೆ ದೊರೆಯುವ ತಾಣವನ್ನು ನಾವು ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆ ಮುಂತಾದ ಹೆಸರುಗಳಿಂದ ಕರೆಯುತ್ತೇವೆ. ಅದೇ ಶಾರದೆಯ ಆಲಯವು ಕೂಡ. ದೇವಾಲಯ, ಮನುಷ್ಯಾಲಯಗಳಿಗೆ ಹೇಗೆ ವಾಸ್ತು ಬಲ ಬೇಕೋ ಹಾಗೇನೆ ವಿದ್ಯಾಲಯಕ್ಕೂ ಬೇಕು. ಕಾರಣ ಅನಿಶ್ಚಿತತೆಯ ಬದುಕಿನಲ್ಲಿ ನಿಶ್ಚಿತತೆಯನ್ನು ಹುಡುಕುವುದೇ ಜೀವನ. ಇಂತಹ ಜೀವನಕ್ಕೆ ರೂಪ ಕೊಡುವ ಕೆಲಸ ನಡೆಯುವುದೇ ಈ ವಿದ್ಯಾ ಸಂಸ್ಥೆಗಳಲ್ಲಿ . ಇದಕ್ಕೆ ಬೇಕು ದೈವಿಕ ಬಲ. ದೈವಿಕ ಬಲ ಎಂದರೆ ಪಂಚಭೂತಗಳ ಬೆಂಬಲ. ವಸ್ತು ಸ್ಥಿತಿಗಳನ್ನು ವಾಸ್ತವಿಕತೆಯೊಡನೆ ಮೇಳೈಸಿ ನಿರ್ಮಿಸುವ ಯಾವುದೇ ನಿರ್ಮಾಣವನ್ನು ವಾಸ್ತು ಎಂದು ಕರೆದರು ನಮ್ಮ ತ್ರಿಕಾಲ ಜ್ಞಾನಿಗಳಾದ ಋಷಿಮುನಿಗಳು. ಅದಕ್ಕೊಂದು ಶಾಸ್ತ್ರ ರೂಪ ಕೊಟ್ಟು ಗ್ರಂಥಸ್ಥಗೊಳಿಸಿ ಬೋಧಿಸಿದವರು ಆ ಮಹಾ ಮಹಿಮರು. ಶಾರದೆ ವಿದ್ಯಾಧಿದೇವತೆ. ಅವಳು ಎಲ್ಲರ ಪಂಚೇಂದ್ರಿಯಗಳ ಒಡತಿ. ಎಲ್ಲರ ತಾಯಿ. ಆಗರ್ಭ ಶ್ರೀಮಂತರನ್ನು ಸಾಮಾನ್ಯವಾಗಿ ಲಕ್ಷ್ಮೀ ಪತಿಗಳೆಂದು ಕರೆಯುವುದು ವಾಡಿಕೆ. ಆದರೆ, ಆಜನ್ಮ ವಿದ್ವಾಂಸರನ್ನು , ಜ್ಞಾನಿಗಳನ್ನು, ಋಷಿಮುನಿಗಳನ್ನು ಎಲ್ಲರನ್ನೂ ಕರೆಯುವುದು ಮಾತ್ರ ಸರಸ್ವತಿ ಪುತ್ರರೆಂದೇ. ಸರಸ್ವತಿಪತಿ ಎಂಬ ಶಬ್ದ ಎಲ್ಲೂ ಉಪಯೋಗಿಸಲ್ಪಟ್ಟಿಲ್ಲ. ಇದರಿಂದ ನಾವು ಅರಿಯಬಹುದು ಶಾರದೆಯ ಘನತೆ, ವಿದ್ಯೆಯ ಮಹತ್ವ. ಇದುವೇ ಇರುವ ವ್ಯತ್ಯಾಸ ಧನಸಂಪತ್ತು ಮತ್ತು ವಿದ್ಯಾ ಸಂಪತ್ತಿನ ನಡುವೆ. ಮಣ್ಣಿನ ಮುದ್ದೆಗೆ ಮಾನವರೂಪ ಕೊಡುವ ವಿದ್ಯಾಸಂಸ್ಥೆ ಹೇಗಿರಬೇಕು ? ವಾಸ್ತು ಶಾಸ್ತ್ರ ಈ ಕುರಿತು ಏನನ್ನು ನಿರೂಪಿಸುತ್ತದೆ ನೋಡೋಣ. ವಿದ್ಯಾಲಯಗಳನ್ನು ಪೂರ್ವಮುಖವಾಗಿ ನಿರ್ಮಿಸಿದರೆ ಪ್ರಸಿದ್ಧಿ ಮತ್ತು ಶ್ರೇಯಸ್ಸು ಬರುವುದು. ಉತ್ತರ ಮುಖವಾಗಿ ಕಟ್ಟಿದಲ್ಲಿ ಉತ್ತಮ ಫಲಿತಾಂಶದೊಡನೆ ವಿದ್ಯಾರ್ಥಿಗಳು ಬುದ್ಧಿವಂತರೂ ಆಗುವರು. ಪಶ್ಚಿಮ ದಿಕ್ಕಿಗೆ ಎದುರಾಗಿ ಕಟ್ಟಿದಲ್ಲಿ ವಿದ್ಯೆಯೊಡನೆ ಧಾರ್ಮಿಕ ಸಂಸ್ಕೃತಿ ಬೆಳೆದು ಬರುವುದು. ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರ ಬರುವಂತೆ ಕಟ್ಟಿದರೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಬಲ ಬರುವುದು. ಅರ್ಥಾತ್ ವೃತ್ತಿ ಪರತೆಗೆ ಹೆಚ್ಚಿನ ಒತ್ತು ಸಿಗುವುದು. ಆದರೆ ಯಾವುದೇ ಕಾರಣಕ್ಕೂ ಮೂಲೆ ದಿಕ್ಕುಗಳಿಗೆ ಮುಖ ಮಾಡಿ ವಿದ್ಯಾಲಯ ಕಟ್ಟಡ ಕಟ್ಟಬಾರದು.ಅಂದರೆ ನೈರುತ್ಯ ವಾಯುವ್ಯ, ಈಶಾನ್ಯ ಹಾಗೂ ಆಗ್ನೇಯ ದಿಕ್ಕುಗಳು ಸಿಂಹದ್ವಾ ಇಡಲು ನಿಷಿದ್ಧ. ಈ ಸಂಸ್ಥೆಗಳ ಎದುರಿನಿಂದ ಹಾದುಹೋಗುವ ಮಾರ್ಗವು ದಕ್ಷಿಣದಿಂದ ಉತ್ತರಕ್ಕೆ ತಗ್ಗಾಗಿ, ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿ ಹರಿದು ಹೋಗಿದ್ದರೆ ಸಂಸ್ಥೆಯ ಕೀರ್ತಿ ಹೆಚ್ಚುವುದು. ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ನೀರ ಹರಿವು ವಿದ್ಯಾಲಯಕ್ಕೆ ಶ್ರೇಯಸ್ಸನ್ನುಂಟು ಮಾಡುವುದು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ನೈರುತ್ಯದ ಕೊಠಡಿಯಲ್ಲಿ ಪೂರ್ವ ಅಥವಾ ಉತ್ರ ಮುಖ್ಮಾಡಿ ಕುಳಿತುಕೊಳ್ಳಬೇಕು. ಈ ಕೋಣೆಯ ನೆಲಮಟ್ಟ ಬೇರೆಲ್ಲ ಕಡೆಗಿಂತ ಹೆಚ್ಚು ಎತ್ತರವಾಗಿರಬೇಕು. ಅಧ್ಯಾಪಕ ಕಠಡಿ ಪಶ್ಚಿಮ ಅಥವಾ ದಕ್ಷಿಣದಲ್ಲಿ ಇರಬೇಕು. ಅವರೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಬೇಕು. ಪ್ರಯೋಗ ಶಾಲೆ ದಕ್ಷಿಣದಲ್ಲಿ ಉತ್ತಮ. ಗ್ರಂಥಾಲಯ ಉತ್ತರದಲ್ಲಿದ್ದು ವಾಚನಾಲಯವನ್ನು ಈಶಾನ್ಯದಲ್ಲಿ ವ್ಯವಸ್ಥೆಗೊಳಿಸಬೇಕು. ಪ್ರವಚನ ಮಂದಿರ ಅಂದರೆ ಪಾಠ ಹೇಳುವ ಕೊಠಡಿಗಳಿಗೆ ಪೂರ್ವ ಮತ್ತು ಉತ್ತರದ ಬದಿ ಹೆಚ್ಚು ಫಲದಾಯಕ. ಅಧ್ಯಾಪಕ ವೇದಿಕೆ ಪಶ್ಚಿಮ ಅಥವಾ ದಕ್ಷಿಣದ ಬದಿಯಲ್ಲಿರಬೇಕು. ಆಗ ಅವರು ಪೂರ್ವ ಹಾಗೂ ಉತ್ತರ ದಿಕ್ಕಿಗೆ ಮುಖ ಮಾಡಿ ಪಾಠ ಮಾಡಲು ಅನುಕೂಲಕರವಾಗುವುದು. ಹೀಗೆ ವ್ಯವಸ್ಥೆಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಆಟೋಟದ ಬಯಲು ಉತ್ತರ ಅಥವಾ ಪೂರ್ವದಲ್ಲಿ ನಿರ್ಮಿಸಬೇಕು. ಒಟ್ಟಾರೆಯಾಗಿ ಜ್ಞಾನಕಾರಕ ಹಾಗೂ ಶ್ರೇಯಸ್ಸನ್ನು ಅನುಗ್ರಹಿಸುವ ರವಿ, ಬುಧ, ಗುರು ಮತ್ತು ಶುಕ್ರ ಮಹಾಗ್ರಹಗಳ ಅನುಗ್ರಹ ವಿದ್ಯಾಸಂಸ್ಥೆಯ ಮೇಲೆ ಸಂಪೂರ್ಣವಾಗಿ ಇರಬೇಕು. ಅವರ ಅಧಿಪತ್ಯಕ್ಕೆ ಒಳಪಡುವ ದಿಕ್ಕುಗಳಿಗೆ ಯಾವುದೇ ನ್ಯೂನ್ಯತೆ ಉಂಟಾಗಬಾರದು. ಕೊರತೆಯಾದಲ್ಲಿ ನಿರೀಕ್ಷಿತ ಫಲಿತಾಂಶ ದೊರಕಲಾರದು. ಎಲ್ಲವೂ ಸರಿಯಾಗಿದ್ದು, ನಿರ್ಮಾಣ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಆದಲ್ಲಿ ವಿದ್ಯಾಮಂದಿರ ಜ್ಞಾನದೇಗುಲ ಆಗುವುದರಲ್ಲಿ ಯಾವುದೇ ಸಂಶಯ ಬೇಡ. ಆರೋಗ್ಯವಂತನಾದ ಮನುಷ್ಯನ ಮೇಲೆ ಇಟ್ಟಾಗ 6 ರಿಂದ 7 ಸಾವಿರ ಭೋವಿಸ್ ಕಂಪನ ಶಕ್ತಿಯನ್ನು ತೋರಿಸಿತು. ಭಾರತ ದೇಶಕ್ಕೆ ಬಂದು ದೇವರ ಗರ್ಭ ಗುಡಿಯಲ್ಲಿ ಈ ಯಂತ್ರವನ್ನು ಇಟ್ಟಾಗ 11 ಸಾವಿರ ಕಂಪನವನ್ನು ತೋರಿಸಿತು. ನಮ್ಮ ಹಿಂದೂ ಆರಾಧ್ಯ ಚಿಹ್ನೆ ಓಂ ಮೇಲೆ ಇಟ್ಟಾಗ 70 ಸಾವಿರ ಕಂಪನವನ್ನು ತೋರಿಸಿತು. ಅದೇ ಸ್ವಸ್ತಿಕ್ ಚಿಹ್ನೆಯ ಮೇಲೆ ಇಟ್ಟಾಗ 1 ಲಕ್ಷ ಭೋವಿಸ್ ಕಂಪನವನ್ನು ತೋರಿಸಿತು. ಇದರಿಂದ ಈ ಸ್ವಸ್ತಿಕ್ ಚಿಹ್ನೆಯ ಪ್ರಭಾವವನ್ನು ತಿಳಿಯಬಹುದು. ಈ ಚಿಹ್ನೆಯು ಶುಭ ಶಕ್ತಿಯನ್ನು ಪ್ರಸಾರ ಮಾಡುತ್ತದೆ. ಯಾವುದೇ ಸ್ಥಳದಲ್ಲಿ ಈ ಚಿಹ್ನೆಯನ್ನು ಇಟ್ಟಾಗ ಇದರಿಂದ ಅಗೋಚರವಾದ ನಿಗೂಢ ಶಕ್ತಿಯು, ಶುಭ ಶಕ್ತಿಯು, ಉತ್ಪತ್ತಿಯಾಗಿ ತನ್ನ ಸುತ್ತ ಪ್ರಸಾರ ಮಾಡುತ್ತದೆ. ಇದರಿಂದ ಆ ಸ್ಥಳದಲ್ಲಿ ಅಶುಭ ದೋಷಗಳು ನಿವಾರಣೆಯಾಗುತ್ತವೆ ಮತ್ತು ಇದರ ಅಪಾರವಾದ ನಿಗೂಢ ಶಕ್ತಿಯಿಂದ ದೃಷ್ಟಿ ದೋಷಗಳನ್ನು ಖಂಡಿತವಾಗಿ ನಿವಾರಿಸಬಹುದು. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುತ್ತದೆ. ಈ ಚಿಹ್ನೆಯನ್ನು ಮನೆಯ ಮುಂಬಾಗಿಲ ಮೇಲೆ ಸ್ಥಾಪಿಸಿದರೆ ರಸ್ತೆ ಕುತ್ತುಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಒಂದೇ ರೇಖೆಯಲ್ಲಿ ಮೂರು ಬಾಗಿಲುಗಳಿದ್ದರೆ ಮಧ್ಯದ ಬಾಗಿಲಿಗೆ ಸ್ವತ್ತಿಕ್ ಹಾಕಿದರೆ ದೋಷ ಪರಿಹಾರವಾಗುತ್ತದೆ ಮತ್ತು ವ್ಯಾಪಾರ ವ್ಯವಹಾರಸ್ಥರು ಖಂಡಿತವಾಗಿ ತಮ್ಮ ಅಂಗಡಿಗಳಲ್ಲಿ ಸ್ಥಾಪಿಸಬಹುದು. ನಮ್ಮ ವಾಸ್ತು ಶಾಸ್ತ್ರದ ಪ್ರಕಾರ ಸ್ವಸ್ತಿಕ್ ಚಿಹ್ನೆಯು ಗಣೇಶನ ಚಿಹ್ನೆಯಾಗಿದೆ. ವಾಸ್ತು ಸ್ಪರ್ಶದಿಂದ ಸುಖೀ ಮನೆ ಜೆ. ಕೆ. ಜೈನ್, ವಾಸ್ತು ತಜ್ಞರು ಮನೆಯ ಸಕಲ ಸುಖಕ್ಕೆ ವಾಸ್ತು ಕಾರಣ. ವಾಸ್ತು ಪ್ರಕಾರ ಮಣ್ಣಿನ ಗುಡಿಸಲು ನಿರ್ಮಿಸಿದರೂ ಅದು ಮಹಲಾಗಿ ಪರಿವರ್ತನೆಗೊಂಡು ಶುಭ ಪರಿಣಾಮ ಕೊಡುತ್ತದೆ ಎಂಬುದು ಋಷಿವಾಕ್ಯ. ಇದಕ್ಕೆ ಕಾರಣ ನಿವಾಸಿಗಳ ಜೀವನವನ್ನು ಸುಖ ಸಂಸಾರವನ್ನಾಗಿ ಪರಿವರ್ತಿಸುವ ಅದರ ತಾಕತ್ತು. ಹಣ ಇದೆಯೆಂದು ಬೇಕಾಬಿಟ್ಟಿ ಮನೆ ಕಟ್ಟಿಕೊಳ್ಳುವ ಬದಲು ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ, ವಾಸ್ತು ಶಾಸ್ತ್ರದ ಅನುಸಾರ ಮನೆ ಕಟ್ಟಿಕೊಂಡರೆ ಅದು ಮಂತ್ರಾಲಯವಾಗುತ್ತದೆ. ಪ್ರತಿಯೊಂದು ವಸ್ತುವಿಗೂ, ಜೀವಿಗೂ, ಪ್ರಕೃತಿ ಶಕ್ತಿಗೂ, ಆಕಾಶಕಾಯಕ್ಕೂ ಅದರದ್ದೇ ಆದ ಪ್ರಭಾವಿ ಶಕ್ತಿ ಇದೆ. ಇದು ಭರದಿಂದ ಹರಿಯುವ ತೊರೆಯಲ್ಲಿ ನೀರು ರಭಸದಿಂದ ಮುನ್ನುಗ್ಗುವಂತೆ. ನೀರು ಹರಿಯುವ ದಿಕ್ಕಿಗೆ ಈಜಾಡಿದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ವಾಸ್ತುವೆಂದರೆ ಮತ್ತೇನಿಲ್ಲ. ಸಹಜತೆಯೊಂದಿಗೆ ಸೌಹಾರ್ಧಯುತ ಹೊಂದಾಣಿಕೆ. ಪ್ರಕೃತಿ ಶಕ್ತಿಗಳೊಡನೆ ಘರ್ಷಣೆ ಮಾಡದೆ ಗೆಳತನ ಬೆಳೆಸಿದರೆ ಯಾವತ್ತೂ ಒಳಿತು. ಆಗ ಎಲ್ಲವೂ ಸುಖಮಯವಾಗಿರುತ್ತದೆ. ಉತ್ತರ ನಿರ್ಮಾಣ ಭಾಗದಲ್ಲಿ ವಾಸ್ತು ದೋಷವಿರಬಾರದು. ನೈರುತ್ಯ ಮತ್ತು ಈಶಾನ್ಯ ಚೆನ್ನಾಗಿದ್ದರೆ ಅಪಘಾತ, ಅಪಕೀರ್ತಿ, ಸಂಸಾರ ನಾಶವೆಂಬ ಸಂಕಷ್ಟಗಳಿರುವುದಿಲ್ಲ. ವಾಯುವ್ಯ ಚೆನ್ನಾಗಿದ್ದರೆ ಮಾನಸಿಕ ಶಾಂತಿ, ಕೋರ್ಟು ತಗಾದೆಗಳಿಲ್ಲದ ಜೀವನ ನಿಮ್ಮದಾಗುತ್ತದೆ. ನಿವೇಶನ ಸಮಕೋನದಲ್ಲಿದ್ದರೆ ಸಾಂಸಾರಿಕ ಶಾಂತಿ. ಆಗ್ನೇಯ ವಾಸ್ತು ಸರಿಯಿದ್ದರೆ ಕಲಹಗಳಿಲ್ಲದ ಸುಖೀ ದಾಂಪತ್ಯ. ಇವೆಲ್ಲ ಬತ್ತಲಾರದ, ಬರಡಾಗದ ನಿತ್ಯ ಸತ್ಯಗಳು. ವೇದದ ಉಕ್ತಿಗಿಂತ ಗಾದೆಯ ಮಾತೇ ಹೆಚ್ಚು ಪ್ರಸ್ತುತ ಎಂದು ಇದಕ್ಕೇ ಹೇಳುವುದು. ಋಷಿಮುನಿಗಳು ಆಚರಣೆಯಿಂದ ಜ್ಞಾನಿಗಳಾದರೆ ನಮ್ಮ ಜಾನಪದರು ಅನುಭವದಿಂದ ಜ್ಞಾನಿಗಳಾದರು. ಅವರು ಅಕ್ಷರ ಜ್ಞಾನಿಗಳಲ್ಲದಿದ್ದರೂ ಅನುಭವಿಸಿದ ಸುಖ ದುಃಖಗಳನ್ನು ಸಮಚಿತ್ತದಿಂದ ಸರಳ ಸತ್ಯದ ನಿರೂಪಣೆಯಿಂದ ಸಮಾಜಕ್ಕೆ ಧಾರೆ ಎರೆದವರು. ಅವರ ನಂಬುಗೆಗಳೆಲ್ಲ ಅನುಭವ ವೇದ್ಯವೇ ಹೊರತು ವಚನ ವೇದ್ಯಗಳಲ್ಲ. ಸತ್ಯ ಯಾವಾಗಲೂ ಸತ್ವಪೂರಿತವಾಗಿರುತ್ತದೆ. ಅದು ಸಂಶಯದಿಂದ ಕೂಡಿದ ಸಂಘರ್ಷದ ಸೋಪಾನವಲ್ಲ. ಮನುಷ್ಯನಿಗೆ ಆಸೆ ಇರಬೇಕು. ದುರಾಸೆ ಇರಬಾರದು. ಆಸೆ ಜೀವ ಚೈತನ್ಯ ಚಿಮ್ಮಿಸುತ್ತದೆ. ದುರಾಸೆ ಕುಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ. ದೊಡ್ಡವರ ಹಿಂದೆ ಹೋದವರು ಚಿಕ್ಕವರಾಗುತ್ತಾರೆ. ಚಿಕ್ಕವರ ಹಿಂದೆ ಹೋದವರು ದೊಡ್ಡವರಾಗುತ್ತಾರೆ. ಇದು ಎರಡೂ ನೆಮ್ಮದಿ ಕೊಡುವುದಿಲ್ಲ. ಹೀಗಾಗಿ ಸರಿ ಸಮಾನರೊಡನೆ ಓಡಾಡಬೇಕು. ಅವರ ಸತ್ಸಂಗ ಇರಬೇಕು. ಅಂದರೆ ವಾಸ್ತುವಿನ ಅನುಕರಣೆ ಬೇಡ. ಬದಲಾಗಿ ನಿರ್ಮಾಣದಲ್ಲಿ ಅದರ ಅಳವಡಿಕೆ ಸರಿಯಾಗಿರಲಿ. ನೈರುತ್ಯವನ್ನು ಎಂದೂ ಘಾಸಿಗೊಳಿಸಬೇಡಿ. ಹಾಗೇನೇ ಈಶಾನ್ಯವನ್ನು ವ್ಯತ್ಯಾಸಗೊಳಿಸುವ ಕಾರ್ಯಕ್ಕೆ ಕೈ ಹಾಕಬೇಡಿ. ನೈರುತ್ಯ ಯಾವಾಗಲೂ ಮುಚ್ಚಿರಬೇಕು. ಇದರಿಂದ ಅನಾಹುತಗಳು ಕದತಟ್ಟುವುದನ್ನು ತಪ್ಪಿಸಬಹುದು. ಈಶಾನ್ಯ ಯಾವಾಗಲೂ ತೆರೆದಿರಬೇಕು. ಈ ಮೂಲಕ ಅದು ಮನೆಗೆ ಭಾಗ್ಯದ ಬಾಗಿಲನ್ನೇ ತೆರೆದಿಡುತ್ತದೆ. ಇವು ಎರಡೂ ಸೂಕ್ಷ್ಮ ಸಂವೇದಿ ದಿಕ್ಕುಗಳು. ನಮಗೆ ಒದಗಿ ಬರಬಹುದಾದ ಎಲ್ಲಾ ತೊಂದರೆಗಳಿಂದ ಮುಕ್ತಿ ಹೊಂದಬೇಕಾದರೆ ಮೊದಲು ವಾಸ್ತು ಸರಿಪಡಿಸಬೇಕು. ಜಾತಕ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬೇಕು. ಪಂಚಭೂತಗಳು ಮತ್ತು ನವಗ್ರಹಗಳು ಬೇರೆ ಬೇರೆಯಾದರೂ ಮಾನವನ ಜೀವನದ ಮೇಲೆ ಪರಿಣಾಮ ಬೀರುವುದರಲ್ಲಿ ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸುತ್ತವೆ. ಆದ್ದರಿಂದ ವಾಸ್ತು ಕೆಟ್ಟರೆ ನವಗ್ರಹಗಳು ಕೈಬಿಟ್ಟರೆ ನಮ್ಮ ಜೀವನ ಬಟಾಬಯಲು. ಹಾಗಾಗದಿರಲೆಂಬುದೇ ನಮ್ಮ ಆಶಯ. ಪ್ರಭಾವ ನೀಡುವ ಶನಿಗ್ರಹ ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಗ್ರಹರಿಗೆ ಬಹು ಮುಖ್ಯ ಸ್ಥಾನವನ್ನು ಕೊಟ್ಟಿದ್ದಾರೆ. ಸಾಮಾನ್ಯರ ತಿಳಿವಳಿಕೆಯಲ್ಲಿ ಶನಿಗ್ರಹರು ಕೇವಲ ಮನುಷ್ಯನಿಗೆ ದುಃಖ ಕೊಡುವ, ಕಾಡಿಸುವ, ಕೋಪಿಷ್ಠ ಗ್ರಹರು ಎಂದಿದೆ. ಇದು ತಪ್ಪು ಗ್ರಹಿಕೆ. ಶನಿಗ್ರಹರು ಅತಿ ಸೂಕ್ಷ್ಮವಾದ, ಲೌಕಿಕ ಜ್ಞಾನಕ್ಕೆ ನಿಲುಕದ, ನಾನ ವಿಧದ ಪಾಠಗಳಿಂದ ಮನುಷ್ಯನನ್ನು ಶ್ರೇಷ್ಠತಮ ಬಾಳ್ವಿಕೆಯ ಸಜ್ಜುಗೊಳಿಸುವ ನಿಷ್ಠುರದ ಗುರುಗಳಾಗಿದ್ದಾರೆ. ಮನುಷ್ಯನ ಪೂರ್ವ ಕರ್ಮಫಲಗಳಿಗೆ ಅನುಗುಣವಾಗಿ ಎಚ್ಚರಿಕೆಯನ್ನು, ವಿವೇಕಾದರ್ಶಗಳನ್ನು, ಜ್ಞಾನ ಔನ್ನತ್ಯವನ್ನು ಕೊಡುವ ಮಹಾನುಭಾವರಾದ ಶನಿಗ್ರಹರು, ತಪ್ಪು ತಿದ್ದಿಕೊಂಡು ನಡೆಯುವವರಿಗೆ ಪ್ರಸನ್ನರಾಗುತ್ತರೆಯೇ ಹೊರತು ಭಕ್ತಿಭಾವಗಳಿಗೆ ಪರವಶರಾಗುವ ದೈವ-ಮಾತ್ರರಲ್ಲ. ದಾನ-ಧರ್ಮಾದಿ ಕಾರ್ಯಗಳಿಂದ ಶನಿಗ್ರಹರನ್ನು ಆದರಿಸಬಹುದಾದರೂ, ಅವರನ್ನು ಒಲಿಸಿಕೊಳ್ಳಲು ಇರುವುದು ಕೇವಲ ಒಂದೇ ದಾರಿ, ಅದೆಂದರೆ ಕರ್ಮಯೋಗ. ಜೀವನದಲ್ಲಿ ನೀತಿ, ನಿಯಮ, ನಿಷ್ಠೆ, ಸಂಪೂರ್ಣತೆಯನ್ನು ಅಳವಡಿಸಿಕೊಳ್ಳುವುದೇ ಕರ್ಮಯೋಗ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ