Skip to main content
ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ ಉತ್ತರದೇಶ ಮತ್ತು ದಕ್ಷಿಣದೇಶೀಯ ಎಂಬ ಎರಡು ಪ್ರಕಾರಗಳು ಪ್ರಸಿದ್ಧ. ನಾನು ಹೆಚ್ಚು ಉತ್ತರದೇಶೀಯ ಕುಂಡಲಿಪ್ರಕಾರವನ್ನು ಅನುಸರಿಸುತ್ತೇನೆ, ಈ ಪ್ರಕಾರಕ್ಕೆ ಕೆಲವು ಸೌಲಭ್ಯಗಳಿವೆ. ಆದರೆ ಎಲ್ಲ ಲೇಖನಗಳಲ್ಲಿ ಮೇಲೆ ಹೇಳಿದ ಎರಡೂ ಪ್ರಕಾರಗಳನ್ನು ಕೊಡುತ್ತೇನೆ. (ಕೆಳಗೆ ಕೊಟ್ಟಿರುವ ಎರಡು ಚಿತ್ರಗಳನ್ನು ನೋಡಿ, ಸ್ಥಾನಗಳನ್ನು ಎಣಿಸುವ ಪ್ರಕಾರವನ್ನು ತಿಳಿದುಕೊಳ್ಳಿ). ಈ ಜಾತಕಗಳನ್ನು ನೋಡುವ (ಅಥವಾ ಓದುವ) ರೀತಿಯು ಸ್ವಲ್ಪ ಭಿನ್ನವಾಗಿದ್ದು ಈ ಬಗ್ಗೆ ಮುಂಬರುವ ಲೇಖನಗಳಲ್ಲಿ ಹೇಳುತ್ತೇನೆ. ಜಾತಕವನ್ನು ಜನ್ಮ ಕುಂಡಲಿ, ಜನ್ಮ ಪತ್ರಿಕೆ, ಜನ್ಮ ಚಕ್ರ ಇತ್ಯಾದಿ ದೇಶ-ಭಾಷಾನುಸಾರಿಯಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜನ್ಮ ಸಮಯದ ಗ್ರಹಗಳ ಗತಿ ಮತ್ತು ಆಕಾಶದಲ್ಲಿ ಅವುಗಳ ಸ್ಥಾನವಿಶೇಷಗಳನ್ನು ಗಣಿತಾಗತವಾಗಿ ಚಿತ್ರಿಸುವುದನ್ನೆ ಜಾತಕವೆಂದು ಸ್ಥೂಲವಾಗಿ ಕರೆಯಬಹುದು. ಜಾತಕಗಳ ರಚನೆಗೆ ಪಂಚಾಂಗಗಳು ಅವಶ್ಯಕ. ಹೋರಾದಯಸ್ತನುಕುಟುಂಬಸಹೋತ್ಥಬಂಧು- ಪುತ್ರಾರಿಪತ್ನಿಮರಣಾನಿ ಶುಭಾಸ್ಪದಾಯಾಃ | ರಿಃಫಾಖ್ಯಮಿತ್ಯುಪಚಯಾನ್ಯರಿಕರ್ಮಲಾಭ- ದುಶ್ಚಿಕ್ಯಸಂಜ್ಞಿತಗೃಹಾಣಿ ನ ನಿತ್ಯಮೇಕೇ || (ಬೃಹಜ್ಜಾತಕ ೧-೧೫) ಕುಂಡಲಿಯ ಮೊದಲನೇಯ ಮನೆಯನ್ನು ಲಗ್ನವೆಂದು ಕರೆಯಲಾಗುತ್ತದೆ. ಇದು ಜನ್ಮಕಾಲದಲ್ಲಿ ಪೂರ್ವದಿಕ್ಕಿನಲ್ಲಿ ರಾಶಿಚಕ್ರದ ಮೇಲೆ ಉದಯಿಸುವ ಬಿಂದುವಾಗಿರುತ್ತದೆ (ಇದರ ಬಗ್ಗೆ ಮುಂದೆ ನೋಡೋಣ). ಲಗ್ನವನ್ನು ತನುವೆಂದು, ಎರಡನೇಯ ಮನೆಯನ್ನು ಕುಟುಂಬ, ಮೂರನ್ನು ಸಹೋತ್ಥ (ಭ್ರಾತಾ), ನಾಲ್ಕನ್ನು ಬಂಧು, ಐದನ್ನು ಪುತ್ರ, ಆರನ್ನು ಅರಿ (ಶತ್ರು), ಎಳನ್ನು ಪತ್ನಿ, ಎಂಟನ್ನು ಮರಣ, ಒಂಬತ್ತನ್ನು ಶುಭ, ಹತ್ತನ್ನು ಆಸ್ಪದ, ಹನ್ನೊಂದನ್ನು ಆಯ ಮತ್ತು ಹನ್ನೆರಡನೇಯ ಮನೆಯನ್ನು ರಿಃಫವೆಂದು ಕರೆಯಲಾಗುತ್ತದೆ. ಈ ಸ್ಥಾನಗಳಿಗೆ ಭಾವವೆಂಬ ಸಂಜ್ಞೆಯು ಇರುತ್ತದೆ. ಮೇಲೆ ಹೆಳಲ್ಪಟ್ಟ ಸ್ಥಾನಗಳಿಗೆ ಜ್ಯೋತಿಷ್ಯದಲ್ಲಿ ಅನೇಕ ಪಾರಿಭಾಷಿಕ ಸಂಜ್ಞೆಗಳಿವೆ, ಅವುಗಳನ್ನು ಭಾವಗಳಿಂದ ಸೂಚಿತ ಕಾರಕತ್ವವೆಂದು ಸ್ಥೂಲವಾಗು ಹೇಳಬಹುದು. ಹನ್ನೆರಡು ಭಾವಗಳಿಂದ ತಿಳಿಯಲ್ಪಡುವ ವಿಷಯಗಳನ್ನು ಮುಂದಿನ ಲೇಖನದಲ್ಲಿ ನೋಡೋಣ. ಮೇಲ್ಕಂಡ ಹನ್ನೆರಡು ಮನೆಗಳ ಪೈಕಿ ಕೆಲವನ್ನು ಸೇರಿಸಿಕೊಂಡು ಅನೇಕ ಸಂಜ್ಞೆಗಳನ್ನು ಮಾಡಲಾಗಿದೆ. ಉದಾಹರಣೆಗೆ ಕೇಂದ್ರವೆಂದರೆ 1,4,7,10ನೇಯ ಸ್ಥಾನಗಳು. ಇವುಗಳಲ್ಲಿ ಮಹತ್ವವಾದವುಗಳನ್ನು ನೋಡೋಣ. ಕೇಂದ್ರ: 1-4-7-10, ಪಣಪರ: 2-5-8-11, ಆಪೋಕ್ಲಿಮ: 3-6-9-12 ತ್ರಿಕೋಣ: 5-9, ಉಪಚಯ: 3-6-10-11, ಅನುಪಚಯ: ಉಪಚಯಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳು, ಇವುಗಳಲ್ಲದೇ ಇನ್ನೂ ಅನೇಕ ಸಂಜ್ಞೆಗಳಿರುತ್ತವೆ, ಪ್ರಾಸಂಗಿಕವಾಗಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ. ದ್ವಾದಶ ಭಾವ ವಿಚಾರ ಈ ಮಾಲಿಕೆಯ ಹಿಂದಿನ ಲೇಖನದಲ್ಲಿ ದ್ವಾದಶ ಭಾವಗಳ ಸಂಜ್ಞೆ ಮತ್ತು ಕೇಂದ್ರಾದಿ ಭಾವಗಳ ಪರಿಚಯಮಾಡಿಕೊಂಡದ್ದಾಯಿತು. ಈ ಲೇಖನದಲ್ಲಿ ಈ ಹನ್ನೆರಡು ಭಾವಗಳಿಂದ ಯಾವ ಯಾವ ವಿಚಾರಗಳನ್ನು ಮಾಡಬೇಕು ಎಂಬುವುದನ್ನು ನೋಡೋಣ. ಪ್ರಾಯಶಃ ಎಲ್ಲ ಜ್ಯೋತಿಷ್ಯ ಗ್ರಂಥಗಳಲ್ಲಿ ಈ ಬೆಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಈ ಲೇಖನಕ್ಕಾಗಿ ನಾನು ಪರಾಶರ ಹೋರಾ ಮತವನ್ನು ಅನುಸರಿಸಿದ್ದೇನೆ. (ಇದು ಪ್ರಾಚೀನ ಮತ್ತು ಪ್ರಚಲಿತ.) ಲಗ್ನಭಾವದಿಂದ ಶರೀರ (ತನು), ರೂಪ, ಬಲಾಬಲ, ಸುಖ-ದುಃಖ, ಸ್ವಭಾವಾದಿಗಳನ್ನು ವಿವೇಚಿಸಬೇಕು. ದ್ವಿತೀಯ ಭಾವದಿಂದ – ಧನ-ಧಾನ್ಯ, ಕುಟುಂಬ, ಮೃತ್ಯು, ಶತ್ರು, ಧಾತು, ರತ್ನ ತೃತೀಯ ಭಾವದಿಂದ – ಪರಾಕ್ರಮ, ಭೃತ್ಯ (ಸೇವಕರು), ಅಣ್ಣತಮ್ಮಂದಿರು, ಉಪದೇಶ, ಯಾತ್ರೆ, ತಂದೆ-ತಾಯಿಗಳ ಮರಣ ಚತುರ್ಥ ಭಾವದಿಂದ – ವಾಹನ, ಬಂಧುಗಳು, ತಾಯಿಯ ಸೌಖ್ಯ, ನಿಧಿ, ಗೃಹಸುಖ, ಬೇಸಾಯ ಪಂಚಮ ಭಾವದಿಂದ – ಯಂತ್ರ, ಮಂತ್ರ, ವಿದ್ಯೆ, ಬುದ್ಧಿ, ಪುತ್ರ, ರಾಜ್ಯ, ಹಾನಿ ಷಷ್ಠ್ಯ ಭಾವದಿಂದ – ಶಂಕೆ, ಶತ್ರುಗಳು, ವ್ರಣಗಳು, ರೋಗಗಳು, ಸೋದರಮಾವನ ಮರಣ ವಿಚಾರ, ಪತ್ನಿ, ಅತ್ತೆ ಆದಿ ಸಂಭಂದಿಕರು ಸಪ್ತಮ ಭಾವದಿಂದ – ಹೆಂಡತಿ, ಯಾತ್ರೆ, ವಾಣಿಜ್ಯ (ವ್ಯಾಪಾರ), ನಷ್ಟದೃಷ್ಟಿ, ತನ್ನ ಮರಣ ಅಷ್ಟಮ ಭಾವದಿಂದ – ಆಯುಷ್ಯ, ಸಂಗ್ರಾಮ, ಶತ್ರು, ದುರ್ಗ, ಕಳೆದುಕೊಂಡ ಸಂಪತ್ತು, ಪೂರ್ವಜನ್ಮ ವಿಚಾರ ನವಮ ಭಾವದಿಂದ – ಭಾಗ್ಯ, ಧರ್ಮ, ತೀರ್ಥಯಾತ್ರೆ, ದೈವಕೃಪೆ ದಶಮ ಭಾವದಿಂದ – ಕರ್ಮ, ರಾಜ್ಯ, ಮಾನ, ತಂದೆ, ಪಿತೃಗಳು, ವಿದೇಶವಾಸ, ಋಣ (ಸಾಲ) ಏಕಾದಶ ಭಾವದಿಂದ – ಪುತ್ರ, ಸ್ತ್ರೀ, ಕುಟುಂಬ, ಆಯ (ಲಾಭ), ವೃದ್ಧಿ, ಪಶು ಸಮೃದ್ಧಿ ದ್ವಾದಶ ಭಾವದಿಂದ – ವ್ಯಯ, ಶತ್ರುಗಳು, ಖರ್ಚುಗಳು, ದುಃಖ, ನಷ್ಟ ಇತ್ಯಾದಿ. ಯಾವುದೇ ಭಾವವು ಶುಭಗ್ರಹದಿಂದ ಸ್ಥಿತ, ದೃಷ್ಟ ಅಥವಾ ತನ್ನ ರಾಶಿಯ ಸ್ವಾಮಿಯಿಂದ ಸ್ಥಿತ ಅಥವಾ ದೃಷ್ಟವಾದರೆ, ಯುವಾದಿ ಶುಭ ಅವಸ್ಥೆಗಳಲ್ಲಿರುವಾಗ, ಆ ಭಾವದ ವೃದ್ಧಿಯಾಗುತ್ತದೆ. ಇದರ ವಿಪರೀತ ಸ್ಥಿತಿಯಿರುವಾಗ ಫಲ ಸಹ ವಿಪರೀತವಾಗಿರುತ್ತದೆ.

Comments

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಅವರ ಈ ಬ್ಲಾಗು ಜ್ಯೋತಿಷ್ಯಾಸಕ್ತರ ಸಾವಿರ ಪ್ರಶನೆಗಳಿಗೆ ಸಮರ್ಥ ಉತ್ತರ ನೀಡುವ ತಾಣ.

ದಿನಕೊಂದು ಲೇಖನ ಓದಿ ನಾನಂತೂ ದಾಹ ತೀರಿಸಿಕೊಳ್ಳುತ್ತೇನೆ. ನಿಮಗೂ ಸ್ವಾಗತ. ಸರಳ ಬಾಷೆ ಮತ್ತು ಸುಲಲತಿ ಶೈಲಿ ಇವರ ಹೆಗ್ಗಳಿಕೆ.

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...