Skip to main content

ಬಂಧಕಶಕ್ತಿಯೇ ರಾಹು-ಕೇತು

ಬಂಧಕಶಕ್ತಿಯೇ ರಾಹು-ಕೇತು ಸೂರ್ಯನ ಮಂಡಲದಲ್ಲಿ ಭೂಮಿಗೆ ಆಕರ್ಷಣೆ ಇರುವ ಏಳು ಗ್ರಹಗಳೂ (ಸೂರ್ಯನೂ ಸೇರಿ), 27 ನಕ್ಷತ್ರಗಳೂ, 12 ರಾಶಿಗಳಲ್ಲಿ ತ್ರಿಸರ್ಗ ಸೃಷ್ಟಿಯು ಹರಡಿಕೊಂಡಿದೆ. ಈ ಆಕರ್ಷಣೆ ಸೂರ್ಯ ಗ್ರಹದ್ದು, ಏಕಮೇವವಾಗಿ, ಸೂರ್ಯನ ಏಕ ತೇಜಸ್ಸು ಸಮಸ್ತ ಗ್ರಹಗೋಲವನ್ನು ತಿರುಗುತ್ತ ಸೃಷ್ಟಿ ಇರುವಿಕೆಗೆ ಆಧಾರವಾಗಿದೆ. ಇದಲ್ಲದೇ ಇನ್ನೂ ಕೋಟ್ಯಂತರ ಗೋಲಗಳೂ ಇವೆ. ಆದರೆ ಇವೇ ಏಕೆ ಹೆಣೆಯಲಾಗಿದೆ? ಇಷ್ಟು ಕರಾರುವಾಕ್ಕಾಗಿ ಜೋಡಿಸಿದಂತೆ ಇರುವುದು, ಅದು ತನ್ನಿಂತಾನೇ ಆಗುವಂಥದ್ದಲ್ಲ ಎಂದು ಬಾಲರಿಗೂ ತಿಳಿಯುವುದು. ಈ ಜೋಡಣೆ ಅನೂಹ್ಯ ಎಂದಿರುವರು ಆಂಗ್ಲ ವಿಜ್ಞಾನಿಗಳು. ಈ ಅನೂಹ್ಯವನ್ನೇ ವೇದಗಳು 'ಪರಬ್ರಹ್ಮ' ಎಂದಿರುವುದು. ಶಬ್ದಗಳು ಬೇರೆಯಾದರೆ ಅರ್ಥ ಬೇರೆಯಾಗಬೇಕೆಂಬ ನಿಯಮವೇನಿಲ್ಲವಷ್ಟೆ! ಹಾಗಾಗಿ ನಾವು ಗ್ರಹಗಳ ಕಾರಕತ್ವ ಅರ್ಥ ಮಾಡಿಕೊಳ್ಳಬೇಕಾದರೆ, ಭಗವಂತನ ಆ 'ಅನೂಹ್ಯ'ದ ಇರುವನ್ನು ಒಪ್ಪಿಯೇ ಮುನ್ನಡೆಯಬೇಕಾಗುತ್ತದೆ. ಈ ಗ್ರಹಗಳಿಗೆ ತಮ್ಮದೇ ಆದ ದೈವಶಕ್ತಿ ಚೇತನರಿದ್ದಾರೆ. ಆಯಾ ಗ್ರಹರ ಹೆಸರಲ್ಲೇ ಆ ಚೇತನರನ್ನು ಕರೆಯಲಾಗುವುದು. ಈ ಗ್ರಹಗಳು ತಮ್ಮ ಕಕ್ಷೆಯಲ್ಲಿ ಇದ್ದು, ಸುತ್ತುತ್ತಾ ಭೂಮಿಯನ್ನು ಒಳಗೊಂಡು ಸೂರ್ಯನನ್ನು ಸುತ್ತುವುದು. ಈ ತ್ರಿಪುಟಿಯನ್ನೇ 'ತ್ರಿಕಾಲ'ದ ಹೊರಪರಿಧಿ ಎನ್ನುವುದು. ನಾವು ಬದುಕುವುದು ಒಳಪರಿಧಿಯಲ್ಲಿ. ಈ ತಿರುಗುವ ಸಾಲಿಗೆ ಸೂರ್ಯನು ಬಾರನು, ಆತ ಸ್ಥಿರ, ಮತ್ತೆಲ್ಲವೂ ಆತನಿಂದ ಚರ. ಆತನೊಬ್ಬ ಸ್ಥಾವರ ಅನಂತ ಶಕ್ತಿ, ಮಿಕ್ಕೆಲ್ಲ ಜಂಗಮ. ಈ ಓಟದಲ್ಲಿ ರಾಹು-ಕೇತು ಗ್ರಹರು ಬಹು ಕಾಲಾ ನಂತರ ಶಕ್ತಿ ರೂಪರಾಗಿ ಜ್ಯೋತಿರ್ಮಂಡಲದಲ್ಲಿ ಇರಲಾರರು. ಇವರ ಚಲನೆ ಹಿಮ್ಮುಖ ಮತ್ತು ಛಾಯಾ ಸ್ವರೂಪ. 360 ಡಿಗ್ರಿಯಲ್ಲಿ ಪೂರ್ವದ ತುದಿ ಮತ್ತು ಪಶ್ಚಿಮದ ತುದಿಯ ವೃಷಭ-ವೃಶ್ಚಿಕ ಪರ್ಯಂತ ಈ ಛಾಯಾಗ್ರಹರು ಹರಡಿಕೊಂಡಿರುವರು. ಒಂದು ಗ್ರಹ ಮಾಡುವ ಕೆಲಸ ಮತ್ತೊಂದರಿಂದ ಪ್ರಭಾವಿತ ಆಗೇ ತೀರುವುದು. ಇದು ಕಾಲ ಪುರುಷನ ಬಂಧಕಶಕ್ತಿ. ಆ ಅಮೃತಕ್ಕೆ ಗುರು-ಚಂದ್ರರು ಅಧಿಗ್ರಹರಾದರೆ, ವಿಷಕ್ಕೆ ರಾಹು-ಕೇತುಗಳು ಅಧಿಕಾರ ವಹಿಸುತ್ತಾರೆ. ಜೀವರಾಶಿಗೆ ಉಂಟಾಗುವ ಸಕಲ ರಾಜಸೀಯ, ತಾಮಸೀಯ ಸುಖೋಪ ಭೋಗಕ್ಕೆ (ರಾಹು-ಕೇತುಗಳು) ಮತ್ತು ಸರ್ವದೋಷ, ನೋವು, ಹಿಂಸೆ, ಮಲಿನತೆಗೆ ಅಧಿಗ್ರಹ ಆಗಿರುತ್ತಾರೆ. ಇವರ ಹಿಂಚಲನೆ ಸರ್ಪಗಳ ಹೋಲುವ ಹಾಗಿದೆ. ಹೀಗಾಗಿ ಅವರಿಗೆ ಸರ್ಪಗಳ ರುಂಡ-ಮುಂಡ ಆಕೃತಿಯಲ್ಲಿ ನಿಯಮಿಸಲಾಗಿದೆ. ಇವರು ತಾಮಸ ಗ್ರಹರಾಗಿರುವುದರಿಂದಲೂ, ಸರ್ಪ ಸರೀಸೃಪಗಳು ತಾಮಸ ಸೃಷ್ಟಿಯಾಗಿರುವುದರಿಂದಲೂ, ರಾಹು-ಕೇತುಗಳನ್ನು 'ಸರ್ಪಾಧಿಗ್ರಹ' ಎಂದೂ ಕರೆಯಲಾಗಿದೆ. ಜ್ಯೋತಿಷ್ಯದಲ್ಲಿ ಇದರ ಕಾರಕತ್ವ ಬಗ್ಗೆ ಅನೇಕಾನೇಕ ವಿವರಗಳಿವೆ. ಅದರಲ್ಲಿ ಮುಖ್ಯವಾಗಿ 'ರಾಹು-ಕಾಲ' ಮತ್ತು ರಾಹು-ಕೇತು ಯೋಗಾಪಯೋಗಗಳ ಬಗ್ಗೆ ಗಮನಹರಿಸೋಣ. ಸಪ್ತ ಗ್ರಹರಲ್ಲಿ ಯಾರು 10 ಅಂಶದಿಂದ ಹತ್ತಿರರಿದ್ದಾರೋ, ಆ ಗ್ರಹದ ರಾಶಿಯ ಗುಣವನ್ನು ತಮ್ಮ ತಾಮಸ ಶಕ್ತಿಯಿಂದ ಭೂಮಿಗೆ ರವಾನಿಸುವರು. ಆಯಾ ಗ್ರಹ ಭಾವದಿಂದ ಮಿತ್ರ, ಶತ್ರು ಭಾವಗಳು ಜಗದಲ್ಲಿ ಮೆರುಗು ಪಡೆಯುವುದು. ಈ ಸಮಸ್ತ ಕಾಲಚಕ್ರಕ್ಕೆ ಅಭಿಮಾನಿ ದೇವತೆಗಳೂ, ಪ್ರತ್ಯಾಭಿಮಾನಿಗಳೂ, ಸೇರಿ, 'ಶಿಂಶುಮಾರ' ಮಂಡಲ ಎಂದು ಹೆಸರಾಗುವುದು. 'ಶಿಂಶುಮಾರ' ಎಂದರೆ ಸಾಕ್ಷಾತ್ ಕಾಲಪುರುಷನಾದ ಶ್ರೀಮನ್ನಾರಾಯಣನೇ ಆಗಿದ್ದಾನೆ. ಹೇಗೆ ಚೇಳು ನಿಮಿರಿ ನಿಂತರೆ ಮುಂಬದಿ-ಹಿಂಬದಿ ಕಾಣುವುದೋ ಹಾಗೆ ನಭೋಮಂಡಲದಲ್ಲಿ ಆಶ್ವಿನ್ಯಾದಿ ಮಹಾ ಮಂಡಲ ಕಾಣುವುದು, ಹೀಗಾಗಿ 'ಶಿಂಶುಮಾರ' ಎಂದರೆ 'ಚೇಳು' ಎಂಬ ಹೆಸರು. ಆದರೆ ಚೇಳು ಎಂಬ ಜೀವಿ ಅಲ್ಲ! ಈ ನಿಮಿರಿ ನಿಂತ ಆಧಾರ ಶಕ್ತಿಯ ಎರಡು ತುದಿಯಲ್ಲಿ ಈ ರಾಹು-ಕೇತು ಬಿಂದುಗಳಾಗಿ ಆಶ್ರಿತರಾಗಿದ್ದಾರೆ. ಅವರ ತಾಮಸ ಶಕ್ತಿ ಭೂಮಿ-ಚಂದ್ರ, ಸೂರ್ಯ 180 ಡಿಗ್ರಿ ನೇರಕ್ಕೆ ಬಂದಾಗಲೆಲ್ಲ ಗ್ರಹಣಗಳು ಸಂಭವಿಸುತ್ತವೆ. ಈ ಗ್ರಹಣಗಳು ಶಕ್ತಿಯುಕ್ತ ಕಾಲಗಳಾಗಿ ಮಾರ್ಪಾಡಾಗುತ್ತದೆ. ಈ ಅತಿ ಕಾಲದ ಪ್ರಭಾವ ಪ್ರಾಕೃತಿಕ ವಿಕೋಪಕ್ಕೂ, ಜೀವನ ಕ್ಷೋಭೆಗೂ ಕಾರಣವಾದರೆ, ಜ್ಞಾನಿಗಳ-ಸಾಧಕರ ಪುಣ್ಯ ಶಕ್ತಿ ವರ್ಧನೆಗೂ ನಿಮಿತ್ತವಾಗುತ್ತದೆ. ಹಾಗಾಗಿ ಯಾವ ಕಾಲವೂ ಸ್ವತಃ ದುಷ್ಟವೂ ಅಲ್ಲ, ಸುಖವೂ ಅಲ್ಲ. ಅರಿತು ನಡೆದರೆ ಯಾವ ಕಾಲವೂ ಸುಖವಾಗಬಲ್ಲದು. ಅವರವರ ತಿಳಿವಳಿಕೆ, ನಂಬಿಕೆಗೆ ಬಿಟ್ಟ ವಿಚಾರ. ಈ ಛಾಯಾ ಬಿಂದುಗಳ ನಿರ್ಮಿಸಿ, ಅವರಲ್ಲಿಹ ಶಕ್ತಿ ಜೀವ ಪಡೆದು ಕರ್ಮಾಕರ್ಮ ಲೋಕದಲ್ಲಿ ಹರಡಲಿ ಎಂದೇ ಭಗವಂತನು ನಿಯೋಜಿಸಿರುವ, ಈ ನಿಟ್ಟಿನಲ್ಲಿ ರಾಹು ಅತಿ ಬಲ ಹೊಂದಿರುವಾತ. ಇವನ ಕಾಲ ಪ್ರತಿದಿನ ಒಂದು ಮುಹೂರ್ತದಷ್ಟು ಭೂಕಕ್ಷೆಗೆ ಪ್ರಭಾವ ಮಾಡಲಿ ಎಂದು ಅಮೃತ ಮಂಥನದ ಪುರಾಣದಲ್ಲಿ ಉಲ್ಲೇಖವಿದೆ. ಭಾಗವತದ ಸೃಷ್ಟಿ ಪ್ರಕರಣ, ಮಹಾಭಾರತ, ಮೃತ್ಯು ಪುರಾಣಾದಿಗಳಲ್ಲಿ ಅನೇಕ ವಿವರಗಳಿವೆ. ಸಾವಧಾನ ಅಧ್ಯಯನ ಮಾಡದೇ, ಶಾಸ್ತ್ರ ವಿಚಾರಗಳನ್ನು ಮೌಢ್ಯ ಎನ್ನುವ ಮೂಢತೆಗೆ ಕೆಲ ವಿಚಾರದ ಹೆಸರಿನಲ್ಲಿ ಸೋಗು ಹಾಕುತ್ತಾರೆ ಮತ್ತು ಅದೇ ನಂಬಿಕೆಯ ವಿಷಯದಲ್ಲಿ ಜನರನ್ನು ವಂಚಿಸಿಯೂ ಸೋಗು ಹಾಕುತ್ತಾರೆ. ಎರಡೂ ಅಪಾಯವಲ್ಲದೆ ಮತ್ತೇನು!? ಮೌಢ್ಯ ಎಂದು ಒದರುವರು ಎಂದೂ ಶಾಸ್ತ್ರಗಳ ಓದಥೈಸಿಲ್ಲ, ನಂಬಿಕೆ ಎಂದು ಹಾರುವರು ಸಹ ಶಾಸ್ತ್ರಗಳ ಶೋಭಿಸಿಲ್ಲ! ಹಾಗಾಗಿ ಪಾಪ! ಶಾಸ್ತ್ರಗಳೇ ಎಂದೂ ಬಡಪಾಯಿಯಾಗಿ ಬಿಡುತ್ತವೆ. ಇನ್ನು ಈ ರಾಹು ಕಾಲದ ವಿಷಯದಲ್ಲಿ ಪ್ರಾಚೀನರು ಕೆಲ ವಿಧಿ-ನಿಷೇಧ ಮಾಡಿದ್ದಾರೆ. ಅದು ಅತ್ಯಂತ ಪ್ರಕೃತಿಬದ್ಧವಾಗಿದೆ. ಯಾವುದು ಪ್ರಕೃತಿ ತತ್ತ್ವಗಳಿಗೆ ಪೂರಕವೋ ಅದು ವಿಜ್ಞಾನವೇ ಆಗಿರುತ್ತದೆ, ಆಗಲು ಸಾಧ್ಯ. ಬರಿದೇ ಭೌತಿಕ ಸುಖ ಭೋಗ ನಿರ್ಮಾಣ ಆಧುನಿಕತೆ ಎಂದಿಗೂ ಶುದ್ಧ ವಿಜ್ಞಾನ ಎನಿಸಲಾರದು. ಬರಿದೇ ರಾಹು-ಕೇತು ನಕ್ಷತ್ರ ಕಾರಕತ್ವದ ವಿಷಯ ಅನೇಕ ನೂರು ಪುಸ್ತಕದಲ್ಲಿ ಓದಬಹುದು. ಆದರೆ ಹಿಂಬದಿಯ ಇಂಥ ಮೂಲ ಚಿಂತನೆ ಅರಿತು, ನಂತರ ಆ ಇತರ ಓದು ನಿಜ ಪ್ರಯೋಜನಕ್ಕೆ ಬಂದೀತು. ಆಶ್ಲೇಷ ನಕ್ಷತ್ರದವರು ಜನಪ್ರಿಯರು ಆಶ್ಲೇಷ ನಕ್ಷತ್ರವು ನೋಡಲು ಚಕ್ರ ಆಕಾರದಲ್ಲಿದ್ದು ಆರು ನಕ್ಷತ್ರಗಳಿಂದ ಕೂಡಿದೆ. ಹೀಗಾಗಿ ರುದ್ರಾಕ್ಷಿ ಸ್ತ್ರೀಯರಾದರೆ ಷಷ್ಠಿ ಮುಖ ರುದ್ರಾಕ್ಷಿ ಧರಿಸುವುದು. ಈ ನಕ್ಷತ್ರದವರು ತಮ್ಮ ಹೆಸರಿನ ಮೊದಲ ಅಕ್ಷರ ಡಿ, ಡು, ಡೆ ಅಥವಾ ಡೊ ಗಳಿಂದ ಆರಂಭಿಸಿದರೆ ಒಳ್ಳೆಯದು. ಈ ನಕ್ಷತ್ರಕ್ಕೆ ಅಧಿಪತಿ ಆದಿಶೇಷ. ರಜ್ಜುಕೂಟದಲ್ಲಿ ಪಾದರಜ್ಜು, ನಾಡಿಗಳಲ್ಲಿ ಅಂತ್ಯ ಎಂದರೆ ಕಫ ಪ್ರಕೃತಿ ಆಗಿದೆ. ಪಂಚಮ ಶನಿ, ಸಾಡೆಸಾತ್. ಅಷ್ಟಮ ಶನಿ ಕಾಲದಲ್ಲಿ ಈ ಸಂಬಂಧ ಅನಾರೋಗ್ಯ ಬರುವುದು. ರಾಮಾಯಣದಲ್ಲಿ ಲಕ್ಷ್ಮಣ ಮತ್ತು ಶತ್ರುಘ್ನರು ಈ ನಕ್ಷತ್ರದಲ್ಲಿ ಜನಿಸಿದವರು. ಭಾರತದ ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಈಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಜನ್ಮನಕ್ಷತ್ರ ಇದೇ ಆಗಿದೆ. ವಾಮಾಚಾರ, ವಶೀಕರಣ, ನಾಗದೇವರಿಗೆ ಸಂಬಂಧಿಸಿದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮತ್ತು ನಾಗಮಂಡಲಗಳನ್ನು ಈ ನಕ್ಷತ್ರ ದಿನ ಮಾಡಬಹುದು. ಇತರ ಯಾವುದೇ ಕಾರ್ಯಗಳಿಗೆ ಉತ್ತಮವಲ್ಲ. ಈ ನಕ್ಷತ್ರದಲ್ಲಿ ಜನಿಸಿದವನು ಜನಪ್ರಿಯನೂ, ಹಠವಾದಿಯೂ, ಹಿಡಿದ ಕೆಲಸ ಮಾಡತಕ್ಕವನೂ, ಕೋಪಿಷ್ಟನೂ ಆಗುವನು. ಸ್ತ್ರೀ ಆಗಿದ್ದರೆ ಕೋಪಿಷ್ಟಳೂ, ಕಫ ಸಂಬಂಧ ದೋಷ ಉಳ್ಳವಳೂ, ಗರ್ವದಿಂದ ಕೂಡಿದವಳು ಆಗುವಳು. ಈ ನಕ್ಷತ್ರದಲ್ಲಿ ಋತುಮತಿಯಾದರೆ ಪತಿಗೆ ವಿರುದ್ಧವಾಗಿ ಮಾತಾಡತಕ್ಕವಳೂ, ಕುಟಿಲ ಬುದ್ಧಿ ಉಳ್ಳವಳೂ, ವಶೀಕರಣ ವಿದ್ಯೆಗೆ ಆಕರ್ಷಿತಳಾಗುವಳು. ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯು ಅತ್ತೆ ಇದ್ದ ಮನೆಗೆ ಹೋದರೆ ಗಂಡಾಂತರ ಎಂದು ಎಲ್ಲರ ಭಾವನೆ. ಆದರೆ ಗಜಕೇಸರಿ ಯೋಗವಿದ್ದರೆ, ವೃಶ್ಚಿಕ ರಾಶಿಯಲ್ಲಿ ಮತ್ತು ಮೀನ ರಾಶಿಯ ಗುರು ಗೃಹದ ದೃಷ್ಟಿ ಇದ್ದರೆ ಈ ದೋಷವಿಲ್ಲ ವಿವಾಹ ಆಗಬಹುದು. ಹಾಗಾಗಿ ಆಶ್ಲೇಷ ನಕ್ಷತ್ರ ಇದ್ದ ಸ್ತ್ರೀಯರಿಗೆ ಅತ್ತೆ ಇಲ್ಲದ ಮನೆಗೆ ವಿವಾಹ ಆಗಬೇಕೆಂಬ ನಂಬಿಕೆ ಸತ್ಯವಲ್ಲ. ನಕ್ಷತ್ರದ ಅಕ್ಷರಗಳಲ್ಲಿ ಹೆಸರಿದ್ದರೆ ಪಚ್ಚೆ ಹರಳಿನ ಉಂಗುರವನ್ನು ಧರಿಸಬೇಕು. ಸಮಾಜದಲ್ಲಿ ಹೆಸರು ಪಡೆಯಬೇಕಾದರೆ ಸಾಧಕ ತಾರೆಗಳಾದ ಚಿತ್ರ (ರ,ರಿ) ಧನಿಷ್ಟ (ಗ,ಗಿ) ಮತ್ತು ಮೃಗಶಿರ(ಕ,ಕಿ) ಗಳಿಂದ ಆರಂಭದ ಹೆಸರು ಇಟ್ಟರೆ ಉತ್ತಮ. ಪ್ರಾರಂಭದ ದೆಸೆ ಬುಧ 17 ವರ್ಷ. 1, 4, 8, 11, 30, 35, 52 ವರ್ಷಗಳಲ್ಲಿ ಕಂಟಕವಿದ್ದು ಪೂರ್ಣ ಆಯುಷ್ಯ 78. ಗಜಕೇಸರಿ ಯೋಗವಿದ್ದರೆ ಒಂದು ಸಾವಿರ ತಿಂಗಳ ಆಯುಷ್ಯ ಇರುವುದು. ಇವರಿಗೆ ಪುಷ್ಯಮಾಸ, ಷಷ್ಟಿ ತಿಥಿ, ಬುಧವಾರದ ದಿನ. ವೃಷಭದಲ್ಲಿ ಚಂದ್ರನಿರುವ ಕಾಲದಲ್ಲಿ ಚಂದ್ರನಿದ್ದ ದಿನ ದೂರದ ಪ್ರಯಾಣ ಮಾಡಬಾರದು. ವಿದ್ಯಾಕ್ಷೇತ್ರದಲ್ಲಿ ಇವರಿಗೆ ತರ್ಕಶಾಸ್ತ್ರ,ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಗಣಿತ ಹಿಡಿಸುವುದು. ಉದ್ಯೋಗವಾದರೆ ಅಂಚೆ, ತಂತಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವರು. ಅಶ್ವಿನಿ (ಶುಕ್ರವಾರ) ಮೂಲ(ಭಾನುವಾರ) ಹೊಸಬಟ್ಟೆ ಧರಿಸಲು, ಆಭರಣ ಖರೀದಿಸಲು, ಮಗುವಿಗೆ ನಾಮಕರಣ ಮಾಡಲು ಉತ್ತಮ ದಿನಗಳು. ಉತ್ತರೆ(ಭಾನುವಾರ) ಉತ್ತರಾಷಾಢ (ಶುಕ್ರವಾರ) ದಿನಗಳಲ್ಲಿ ಭೂಮಿ ಖರೀದಿ, ಗೃಹಾರಂಭ, ಗೃಹಪ್ರವೇಶ, ವಾಹನ ಖರೀದಿ, ವಿವಾಹಾದಿ ಮಂಗಳ ಕಾರ್ಯಗಳಿಗೆ ಉತ್ತಮ ದಿನಗಳು. ಚಿತ್ರ, ಧನಿಷ್ಠ (ಶುಕ್ರವಾರ) ಮೃಗಶಿರ(ಸೋಮವಾರ) ಮಕ್ಕಳಿಗೆ ಅಕ್ಷರ ಅಭ್ಯಾಸ ಆರಂಭಿಸಲು, ಶಾಲೆಗೆ ಸೇರಿಸಲು, ಸಂಗೀತ, ನೃತ್ಯಕ್ಕೆ ಸೇರಲು, ಉದ್ಯೋಗ ಸೇರಲು ಉತ್ತಮ ದಿನಗಳು. ಭರಣಿ, ಹುಬ್ಬ ಮತ್ತು ಪೂರ್ವಾಷಾಢ ದಿನಗಳಲ್ಲಿ ಪ್ರಯಾಣ ಮಾಡಬಾರದು. ಹಾಗೆಯೇ ಈ ದಿನ ವೈದ್ಯರ ಬಳಿ ಹೋಗಿ ರೋಗ ಪರೀಕ್ಷಿಸಬಾರದು. ಸ್ವಾತಿ, ಶತಃಭಿಷ ಮತ್ತು ಆರಿದ್ರ ದಿನಗಳಲ್ಲಿ ಎಲ್ಲ ವಿಷಯಗಳಲ್ಲೂ ಜಾಗ್ರತೆ ಇರಬೇಕು. ಮೊದಲನೇ ಪಾದಕ್ಕೆ ಧನು ನವಾಂಶ ಹೋರಾಟ ಜೀವನ. ಸಣ್ಣ ಉದ್ಯೋಗ ಸೇರಿ ದೊಡ್ಡ ಉದ್ಯೋಗ ಪಡೆಯುವಿರಿ. 2ನೇ ಪಾದಕ್ಕೆ ಮಕರ ನವಾಂಶ. ಭೂ ಮತ್ತು ಕೃಷಿ ಸಂಬಂಧ ವ್ಯವಹಾರಗಳಲ್ಲಿ ಸೇರಿದರೆ ಹೆಸರು ಪಡೆಯುವಿರಿ. 3ನೇ ಪಾದ ಕುಂಭ ನವಾಂಶ. ಸ್ವಂತ ಮನೆ ಪಡೆಯುವಿರಿ. ವಾಹನ ಯೋಗದ ಫಲ. 4ನೇ ಪಾದ ಮೀನ ನವಾಂಶ ಉದ್ಯೋಗ ಸಂಬಂಧ ವಿದೇಶ ಪ್ರಯಾಣ ಯೋಗವಿದೆ. ಆದರೆ ಪಾದದ ಆರೋಗ್ಯ ಬಗ್ಗೆ ವಿಶೇಷ ಎಚ್ಚರಿಕೆ ಇರಬೇಕು. ಆಶ್ಲೇಷ ನಕ್ಷತ್ರ ಶುಕ್ರವಾರ, ಶನಿವಾರ ಇದ್ದ ದಿನಗಳಲ್ಲಿ ದೂರದ ಪಯಣ ಮಾಡಬೇಡಿ. ಅವಘಡಕ್ಕೆ ತುತ್ತಾಗುವಿರಿ. ಸಂಖ್ಯಾ ಶಾಸ್ತ್ರದಂತೆ ತಾರೀಖು 5, 14, 23 ಆಗಿದ್ದು ಈ ನಕ್ಷತ್ರ ದಿನ ಬಂದರೆ ಉತ್ತಮ ಫಲ ಸಿಗಲಿದೆ. ಆಶ್ಲೇಷ ನಕ್ಷತ್ರದ ವಧು/ವರರಿಗೆ ಸಿಗಲಿರುವ ಬಾಳಸಂಗಾತಿ ನಕ್ಷತ್ರ ಕೃತಿಕೆ, ಪುಷ್ಯ, ಚಿತ್ರ, ಜ್ಯೇಷ್ಠ, ಮೂಲ, ಧನಿಷ್ಠ, ಅಶ್ವಿನಿ ಗಳಾದರೆ ಉತ್ತಮವಾಗಿ ಕೂಡಿಬರುತ್ತದೆ. ದಿಕ್ಕು ದೆಸೆ: ಗುರುವಿನ ಕೃಪೆಯಾಗದ ತನಕ ಮನೆ ಕಟ್ಟಲು ಗುರುವಿನ ಅನುಗ್ರಹ ಬೇಕು. ಇಲ್ಲಿ ಗುರುವಿನ ಅನುಗ್ರಹ ಎಂದರೆ, ಜಾತಕದಲ್ಲಿರುವ ಗುರು ಬಲ ಎಂದರ್ಥ. ಕಾಂಚಾಣಂ ಕಾರ್ಯ ಸಿದ್ಧಿಃ ಎನ್ನುವ ಕಾಲದಲ್ಲಿ ಗುರುವಿನಿಂದ ಆಗುವ ಪ್ರಯೋಜನವೇನು ಎಂಬುದನ್ನು ತಿಳಿದುಕೊಳ್ಳೋಣ. ಮನೆ ಕಟ್ಟುವ ಮುಂಚೆ ಮನೆಯನ್ನು ಯಾರ ಹೆಸರಿನಲ್ಲಿ ಕಟ್ಟಿಸಬೇಕಾಗಿ ಇರುತ್ತದೆಯೋ ಅವರು ಒಳ್ಳೆಯ ಜ್ಯೋತಿಷರ ಹತ್ತಿರ ತಮ್ಮ ಜಾತಕವನ್ನು ತೋರಿಸಬೇಕು. ತಮ್ಮ ಜಾತಕದಲ್ಲಿ ಗ್ರಹಗತಿಗಳ ಪ್ರಭಾವ ಹೇಗಿದೆ ಎಂದು ತಿಳಿದುಕೊಂಡು ನಿಮಗೆ ಗುರುಬಲ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮಗೆ ಆ ವರ್ಷ ಗುರುವಿನ ಬಲ ಇಲ್ಲದಿದ್ದರೆ ಆ ವರ್ಷ ಯಾವುದೇ ಶುಭ ಕಾರ್ಯವನ್ನು ಅಂದರೆ ಮನೆ ಕಟ್ಟುವುದು, ಅಂಗಡಿ, ಹೋಟೆಲ್, ಬೇಕರಿ, ಫ್ಯಾನ್ಸಿ ಸ್ಟೋರ್, ಇತ್ಯಾದಿ ಹೊಸ ಕಾರ್ಯಗಳನ್ನು ಮಾಡದೆ ಇರುವುದೇ ಬಹಳ ಒಳ್ಳೆಯದು. ಒಂದು ವೇಳೆ ನೀವು ಹೊಸ ಕಾರ್ಯಗಳನ್ನು ಪ್ರಾರಂಭಿಸಿದರೆ ಎರಡು ಮೂರು ತಿಂಗಳಿನಲ್ಲಿಯೇ ಹಣ ಕಾಸಿನ ತೊಂದರೆಗಳು ಬಂದು ನಿಮ್ಮಲ್ಲಿರುವ ಹಣ ಖಾಲಿಯಾಗಿ ಬೇರೆ ಯಾರಿಂದಲೂ ಸರಿಯಾದ ಸಮಯಕ್ಕೆ ಹಣ ದೊರೆಯದೆ ನಿಮ್ಮ ಕೆಲಸ ಕಾರ್ಯಗಳು ಅರ್ಧದಲ್ಲಿಯೇ ನಿಂತು ಹೋಗುತ್ತವೆ ಹಾಗೂ ನೀವು ಪುನಃ ಕೆಲಸ ಪ್ರಾರಂಭಿಸುವಾಗ ಅದೇ ಕೆಲಸಕ್ಕೆ ಎರಡರಷ್ಟು ಹಣ ಖರ್ಚು ಬರುತ್ತದೆ ಹಾಗೂ ಮನಸ್ಸಿನ ನೆಮ್ಮದಿಯು ಹಾಳಾಗಿ ಸಾಲದ ಬಾಧೆಗೆ ಒಳಗಾಗಿ ಸಾಲ ತೀರಿಸಲಾರದೆ ಕಂಗಲಾಗುತ್ತೀರಿ. ಆದ್ದರಿಂದ ನಿಮ್ಮ ಎಲ್ಲ ಕೆಲಸ ಕಾರ್ಯಗಳಿಗೂ ಎಲ್ಲ ಗ್ರಹಗಳಿಗಿಂತ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಯಾರೇ ಆಗಲಿ ಒಳ್ಳೆಯ ಜ್ಯೋತಿಷಿಗಳಲ್ಲಿ ಜಾತಕವನ್ನು ತೋರಿಸಿದಾಗ ನಿಮ್ಮ ಜಾತಕದಲ್ಲಿ ಜನ್ಮ ಲಗ್ನದಿಂದ 1-4-7-10-5-9 ಕೇಂದ್ರ ತ್ರಿಕೋಣದಲ್ಲಿ ಶುಭ ಗ್ರಹಗಳು ಇದ್ದು ಈ ಸ್ಥಾನಗಳು ಉಚ್ಚವಿದ್ದು ಸ್ವಕ್ಷೇತ್ರವಾಗಿದ್ದರೆ ಹಾಗೂ ಗೋಚಾರ ಗ್ರಹ ಗತಿಗಳು ಶುಭವಾಗಿದ್ದರೆ ಅತ್ಯಧಿಕ ಶುಭ ಫಲವೆಂದು ತಿಳಿಯಬೇಕು. ಅದೇ ರೀತಿ ದಶಾ ಭುಕ್ತಿಗಳು ಶುಭವಾಗಿದ್ದರೆ ನಿಮ್ಮ ಕಾರ್ಯಗಳಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲದೆ ನೆರವೇರುತ್ತವೆ ಎಂದು ತಿಳಿಯಬೇಕು. ಮನೆ ಕಟ್ಟುವ ಮುಂಚೆ ನಿಮಗೆ ಗುರುವಿನ ಬಲ ಇದ್ದರೆ ಮನೆಯ ಕಾರ್ಯಕ್ಕೆ ಎಷ್ಟೇ ಅಡ್ಡಿ, ಆತಂಕ, ತೊಂದರೆಗಳು ಬಂದರೂ ಒಂದುವೇಳೆ ಮಧ್ಯದಲ್ಲಿ ಹಣಕಾಸಿನ ತೊಂದರೆ ಬಂದರೂ ಬೇರೆ ಮಾರ್ಗದಿಂದ ಹಣ ದೊರೆತು ಮನೆ ಕಟ್ಟುವಿಕೆಯ ಕಾರ್ಯವು ಪರಿಪೂರ್ಣವಾಗಿ ನೆರವೇರುತ್ತದೆ. ಒಂದು ವೇಳೆ ನಿಮ್ಮ ಜಾತಕ ಇಲ್ಲದಿದ್ದರೆ ಗೋಚಾರ ರೀತಿಯಿಂದಲಾದರೂ ನಿಮ್ಮನ್ನು ಕರೆಯುವ ಹೆಸರಿಗೆ ಗುರುವಿನ ಬಲ ಅತಿ ಅಗತ್ಯವಾಗಿ ಬೇಕಾಗಿರುತ್ತದೆ. ಹೀಗೆ ಗುರುಬಲ ಇರುವಾಗ ಶುಭದಿನ ಶುಭಲಗ್ನ, ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ, ಅಭಿಲಾಷೆಗಳು ನೆರವೇರುತ್ತವೆ. ಇದೇ ಗುರುಬಲದ ಜತೆಗೆ ಗೋಚರದಲ್ಲಿ ಇತರೆ ಗ್ರಹಗಳ ಪ್ರಭಾವ ಶುಭವಾಗಿ ಇದೆಯೇ ಇಲ್ಲವೇ ತಿಳಿದುಕೊಂಡು ಕಾರ್ಯ ಆರಂಭಿಸಿದರೆ ಯಾವುದೇ ತೊಂದರೆಗಳು ಬರದೆ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತದೆ. ಪುಷ್ಯ ನಕ್ಷತ್ರಕ್ಕೆ ಶುಭ ತರುವ ನೀಲ ರತ್ನರಾಜ ಜೈನ್ ನಕ್ಷತ್ರಗಳಲ್ಲಿ ಶ್ರೇಷ್ಠ ನಕ್ಷತ್ರವೇ ಪುಷ್ಯ. ಎಲ್ಲ ನಕ್ಷತ್ರಗಳಿಗೆ ಗುರುವಿನ ಸ್ಥಾನ ಪಡೆದಿದೆ. ಬಾಣದ ಆಕೃತಿಯಲ್ಲಿ 3 ನಕ್ಷತ್ರಗಳಿಂದ ಕೂಡಿದ ನಕ್ಷತ್ರ ಇದಾಗಿದೆ. ಹಾಗಾಗಿಯೇ ಈ ನಕ್ಷತ್ರವಿದ್ದ ದಿನ ಮಕ್ಕಳಿಗೆ 'ಸ್ವರ್ಣ ಪ್ರಾಶನ' ಎಂಬ ಆಯುರ್ವೇದ ಔಷಧ ನೀಡಿದರೆ ರಾಮಬಾಣದಂತೆ ಉತ್ತಮ ಫಲ ನೀಡಿ ಅವರು ಬುದ್ಧಿವಂತರಾಗುವರು. ಈ ನಕ್ಷತ್ರದವರ ಹೆಸರಿನ ಮೊದಲ ಅಕ್ಷರ ಹು, ಹೆ, ಹೊ ಮತ್ತು ಡ ಗಳಿಂದ ಆರಂಭವಾದರೆ ಶುಭವಾಗುವುದು. ಈ ನಕ್ಷತ್ರ ಸಂಜಾತರು 'ಗುರುಬ್ರಹ್ಮಾ ಗುರುವಿಷ್ಣು ಗುರುರ್ದ್ರೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೇ ಶ್ರೀ ಗುರವೇ ನಮಃ॥ ಮಂತ್ರ ದಿನಾ ಹೇಳಿದರೆ ತುಂಬಾ ಬುದ್ಧಿವಂತರಾಗುವರು. ಈ ನಕ್ಷತ್ರದ ಅಧಿಪತಿ ಗುರು ಎಂದರೆ ನೀವು ಶ್ರೀ ಗುರುರಾಘವೇಂದ್ರ ಸ್ವಾಮಿ ಅಥವಾ ಶಿರಡಿ ಸಾಯಿಬಾಬರ ದರ್ಶನ ಮಾಡುವುದು. ಜೈನರ 15ನೇ ತೀರ್ಥಂಕರ ಧರ್ಮನಾಥರು ಜನಿಸಿದ ನಕ್ಷತ್ರ. ಪ್ರಖ್ಯಾತ ಚಲನಚಿತ್ರ ನಟ ದಿ॥ ರಾಜಕಪೂರ್ ಅವರು ಇದೇ ನಕ್ಷತ್ರದಲ್ಲಿ ಜನಿಸಿದವರು. ಈ ನಕ್ಷತ್ರದಲ್ಲಿ ಜನಿಸಿದವನು ಲೈಂಗಿಕ ಆಸಕ್ತಿ ಉಳ್ಳವನೂ, ಚಂಚಲ ಸ್ವಭಾವದವನೂ, ಉತ್ತಮ ಶಾಸ್ತ್ರಜ್ಞನೂ, ಗೌರವ ವ್ಯಕ್ತಿ, ಎಲ್ಲರಿಂದಲೂ ಪ್ರಶಂಸೆ ಪಡೆಯುವ ವ್ಯಕ್ತಿ ಆಗುವನು. ಸ್ತ್ರೀ ಆಗಿದ್ದರೆ ಕಾರ್ಯದಕ್ಷಳೂ, ರೂಪವಂತಳೂ, ದೇವ ಬ್ರಾಹ್ಮಣರಲ್ಲಿ ಭಕ್ತಿ ಉಳ್ಳವಳು ಆಗುವಳು. ಈ ನಕ್ಷತ್ರದಲ್ಲಿ ಋತುಮತಿಯಾದರೆ ಪುತ್ರ ಸಂತಾನ ಉಳ್ಳವಳೂ, ಐಶ್ವರ್ಯವಂತಳೂ, ಉತ್ತಮ ಆಯುಷ್ಯ ಉಳ್ಳವಳು ಆಗುವಳು. ಆದರೆ ಶನಿ ನೀಚ ರಾಶಿಯಲ್ಲಿ ಆಗಲೀ ಅಥವಾ ಕರ್ಕ ರಾಶಿಯಲ್ಲಿದ್ದಾಗ ಆದರೆ ಸಾಡೆಸಾತ್ ಶನಿ ಕಾಲದಲ್ಲಿ ಸ್ತನಸಂಬಂಧ ಅರ್ಬುದ ರೋಗ ಬರುವ ಸಾಧ್ಯತೆ ಇದೆ. ಈ ನಕ್ಷತ್ರ ಮಧ್ಯನಾಡಿಯಲ್ಲಿದ್ದು ಪಿತ್ತ ಸಂಬಂಧ ಅನಾರೋಗ್ಯ ಬರಲಿದೆ. ಕಟಿರಜ್ಜುಕೂಟ ಇರುವುದರಿಂದ ಸಾಡೆಸಾತ್ ಶನಿ ಕಾಲದಲ್ಲಿ ಸೊಂಟ ನೋವು ಬರಬಹುದು. ಇವರಿಗೆ ಪುಷ್ಯಮಾಸ, ಷಷ್ಠಿ ತಿಥಿ, ಅನುರಾಧಾ ನಕ್ಷತ್ರವಿದ್ದ ದಿನ, ಬುಧವಾರ ಘಾತ ಆಗಿರುವುದು. ಪ್ರಯಾಣ ಮಾಡಬಾರದು. ಜ್ಯೇಷ್ಠ (ಬುಧವಾರ) ರೇವತಿ (ಶುಕ್ರವಾರ) ದಿನಗಳಲ್ಲಿ ಹೊಸ ಬಟ್ಟೆ ಧರಿಸಲು, ಆಭರಣ ಖರೀದಿಸಲು, ಮಗುವಿಗೆ ನಾಮಕರಣ ಮಾಡಲು ಉತ್ತಮ ದಿನಗಳು. ಹುಬ್ಬ (ಬುಧವಾರ) ಪೂರ್ವಾಷಾಢ (ಗುರುವಾರ) ದಿನಗಳಲ್ಲಿ ಭೂಮಿ ಖರೀದಿಸಲು, ಗೃಹ ಆರಂಭ ಮಾಡಲು, ವಾಹನ ಖರೀದಿಸಲು ಉತ್ತಮ ದಿನಗಳು. ಹಸ್ತ (ಭಾನುವಾರ) ರೋಹಿಣಿ, ಶ್ರವಣ (ಸೋಮವಾರ) ದಿನಗಳಲ್ಲಿ ಅಕ್ಷರ ಅಭ್ಯಾಸ, ಶಾಲೆಗೆ ಸೇರಿಸಲು, ಉನ್ನತ ವ್ಯಾಸಂಗ ಮಾಡಲು, ಉದ್ಯೋಗಕ್ಕೆ ಸೇರಲು, ವಿವಾಹಾದಿ ಮಂಗಳ ಕಾರ್ಯಗಳಿಗೆ ಉತ್ತಮ ದಿನಗಳಾಗಿವೆ. ಮಖೆ, ಮೂಲ, ಅಶ್ವಿನಿ ಮತ್ತು ಚಂದ್ರನು ಕುಂಭ ರಾಶಿಯಲ್ಲಿದ್ದಾಗ ದೂರ ಪ್ರಯಾಣ ಮಾಡಬಾರದು. ಮೃಗಶಿರ, ಧನಿಷ್ಟ ಮತ್ತು ಚಿತ್ರ ನಕ್ಷತ್ರ ದಿನಗಳಲ್ಲಿ ಜಾಗ್ರತೆ ಇರಬೇಕು. ವಿವಾಹವನ್ನು ಪುಷ್ಯ ನಕ್ಷತ್ರ ಇದ್ದ ದಿನ ಮಾಡಬಾರದು. ಉಳಿದಂತೆ ಪಟ್ಟಾಭಿಷೇಕ, ಶಿಷ್ಯನನ್ನು ಆರಿಸಲು, ಉಪನಯನ ಮಾಡಲು, ಗೃಹ ಪ್ರವೇಶ, ಗೃಹಾರಂಭ, ದೇವಸ್ಥಾನದ ಅಡಿಪಾಯ ಹಾಕಲು, ಗುರುಗಳ ಆಶೀರ್ವಾದ ಪಡೆಯಲು ಮತ್ತು ಇನ್ನಿತರ ಕಾರ್ಯಗಳಿಗೆ ಉತ್ತಮ ದಿನಗಳು. ಪುಷ್ಯ ನಕ್ಷತ್ರ ಪಂಚಮತಿಥಿ. ಗುರುವಾರ ಬಂದರೆ ಗುರುಪುಷ್ಯ ಯೋಗ. ಈ ಯೋಗದಲ್ಲಿ ಜನಿಸಿದವನು ಕುಲ ದೀಪಕನೂ, ಪಂಡಿತನೂ ಆಗುವನು. ಭಾನುವಾರ ದಿನ ಪುಷ್ಯನಕ್ಷತ್ರ ಇದ್ದಾಗ ಮರಣ ಹೊಂದಿದರೆ ಉತ್ತಮ ಸದ್ಗತಿ ಪಡೆಯುವನು. ಪುಷ್ಯ ನಕ್ಷತ್ರ ಬುಧವಾರ, ಶುಕ್ರವಾರ ದಿನಗಳಲ್ಲಿ ಬಂದರೆ ಪ್ರಯಾಣ, ಶುಭ ಕಾರ್ಯ ಮಾಡಬಾರದು. ನಕ್ಷತ್ರದ ದೆಸೆ ಶನಿ 19 ವರ್ಷ. ಪಥಮ 19 ತಿಂಗಳು, 19 ವರ್ಷ,36,43,50,70,76,86 ಕಂಟಕದ ವರ್ಷಗಳಾಗಿದ್ದು ಪೂರ್ಣ ಆಯುಷ್ಯ 90 ವರ್ಷ ಆಗಿರುವುದು. 8,17,26 ತಾರೀಖುಗಳಾಗಿದ್ದು ಶನಿವಾರ ದಿನ ಬಂದರೆ ಉತ್ತಮ ದಿನಗಳಾಗಿವೆ. ತ್ರಿಮುಖ ರುದ್ರಾಕ್ಷಿ ಇವರ ಇಷ್ಟಾರ್ಥ ಆಗಿರುತ್ತದೆ. ಜನ್ಮ ನಕ್ಷತ್ರದಲ್ಲಿ ಹೆಸರಿದ್ದರೆ ನೀಲ ಹರಳಿನ ಉಂಗುರ ಮಧ್ಯಬೆರಳಲ್ಲಿ ಧರಿಸುವುದು. ಹೆಸರನ್ನು ರೋಹಿಣಿ, ಹಸ್ತ ಮತ್ತು ಶ್ರವಣ ಜನ್ಮ ನಕ್ಷತ್ರದಲ್ಲಿ ಇಟ್ಟರೆ ಪ್ರಖ್ಯಾತಾಂತರಾಗುವರು. ಪ್ರಥಮ ಪಾದ ಸಿಂಹ ನವಾಂಶ ಸರಕಾರಿ ಅಧಿಕಾರಿ ಆಗುವನು, ಎರಡನೇ ಪಾದ ಕನ್ಯಾ ನವಾಂಶ ಬ್ಯಾಂಕ್ ಅಧಿಕಾರಿ ಆಗುವನು, 3ನೇ ಪಾದ ತುಲಾ ನವಾಂಶ ಉದ್ಯಮಿಯು ವ್ಯಾಪಾರಸ್ಥನಾಗುವನು, 4ನೇ ಪಾದ ವೃಶ್ಚಿಕ ನವಾಂಶ ರೋಗಿಷ್ಟನಾಗುವನು. ಜ್ಯೋತಿಷ್ಯ, ಕಲೆ, ಸಾಹಿತ್ಯ ಇವನ ಇಷ್ಟವಾದ ಹವ್ಯಾಸ ಆಗಿರುವುದು. ಇವರು ವಿವಾಹ ಆಗಲಿರುವ ಬಾಳ ಸಂಗಾತಿಯ ನಕ್ಷತ್ರಗಳು ಅಶ್ವಿನಿ, ಭರಣಿ, ರೋಹಿಣಿ, ಪುನರ್ವಸು, ಆಶ್ಲೇಷ, ಹಸ್ತ, ಸ್ವಾತಿ, ಉತ್ತರಾಷಾಡ, ಶ್ರವಣ, ಪೂರ್ವಭಾದ್ರ, ರೇವತಿ ಗಳಾದರೆ ಮದುವೆ ಆಗಲು ಕೂಡಿ ಬರುತ್ತವೆ. ಸಕ್ಕರೆಗೆ ರಾಮಬಾಣ ಮಧುಮೇಹ ರೋಗವೇ ಅಲ್ಲ, ಇದೊಂದು ಲಕ್ಷಣವಷ್ಟೆ. ಭಾರತವೊಂದರಲ್ಲೇ ಮೂರು ಕೋಟಿಗೂ ಹೆಚ್ಚು ಜನ ಈ ಸಮಸ್ಯೆಯಿಂದ ನರಳುತ್ತಿದ್ದಾರೆ. ಇದಕ್ಕೆ ಕಾರಣಗಳೆಂದರೆ ದೇಹದಲ್ಲಿ ಇನ್ಸುಲಿನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಆಗುವುದು ಅಥವಾ ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಲ್ಲಿ ಗ್ಲೂಕೋಸ್ ಪ್ರಮಾಣ ಊಟದ ನಂತರ 70ರಿಂದ 120 ಎಂಜಿಎಸ್ ಮತ್ತು ಊಟದ ನಂತರ 110ರಿಂದ 140 ಎಂಜಿಎಸ್ ಇರುತ್ತದೆ. ಅದಕ್ಕಿಂತ ಹೆಚ್ಚಿದ್ದರೆ ವ್ಯಕ್ತಿ ಮಧುಮೇಹದಿಂದ ನರಳುತ್ತಿದ್ದಾನೆ ಅಂತರ್ಥ. ಇದಕ್ಕೆ ಹಲವಾರು ಕಾರಣಗಳಿವೆ. ನಿತ್ಯ ಸೇವಿಸುವ ಆಹಾರ ಸಿಹಿ, ಕಹಿ, ಒಗರು ಹೀಗೆ ಯಾವುದೇ ಆಗಿದ್ದರೂ ಅದು ಪಿತ್ತ ಜನಕಾಂಗಗಳಲ್ಲಿ ಗ್ಲುಕೋಸ್ ಆಗಿ ಪರಿವರ್ತನೆ ಆಗುತ್ತದೆ. ಇದನ್ನು ದೇಹದ ಇತರೇ ಭಾಗಗಳಿಗೆ ಸರಬರಾಜು ಮಾಡುವುದು ರಕ್ತದ ಕೆಲಸ. ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆ ಆದಾಗ ಅಥವಾ ಸಂಪೂರ್ಣವಾಗಿ ಇಲ್ಲದಿದ್ದಾಗ ಗ್ಲುಕೋಸ್ ಕಣಗಳು ಜೀವಕೋಶದೊಳಗೆ ಹೋಗದೆ ರಕ್ತದಲ್ಲೇ ಉಳಿಯುತ್ತದೆ. ಇದ್ದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಜಾಸ್ತಿಯಾಗುತ್ತದೆ. ಅದನ್ನು ಮಧುಮೇಹ ಅನ್ನುತ್ತೇವೆ. ಮಧುಮೇಹ ಎರಡು ಪ್ರಕಾರಗಳಲ್ಲಿ ಕಾಣಿಸಬಹುದು. ಮೊದಲನೆಯದು ಇನ್ಸುಲಿನ್ ಅವಲಂಬಿತ ಮಧುಮೇಹ. ಈ ವಿಧಾನದ ಜುವೆನಿಲ್ ಅಥವಾ ಟೈಪ್ 1 ಮಧುಮೇಹ. ಈ ಮಧುಮೇಹ ಹೊಂದಿರುವವರಲ್ಲಿ ಇನ್ಸ್ಸುಲಿನ್ ಸೃವಿಸುವುದೇ ಇಲ್ಲ. ಇದನ್ನು 16 ವರ್ಷದೊಳಗಿನವರಲ್ಲೇ ಹೆಚ್ಚಾಗಿ ಕಾಣುತ್ತೇವೆ. ಬಾಹ್ಯವಾಗಿ ನೀಡುವ ಇನ್ಸುಲಿನ್ ಮೇಲೆ ಅವಲಂಬಿತರಾಗಿರುತ್ತಾರೆ. ಎರಡನೆ ಪ್ರಕಾರ ಇನ್ಸುಲಿನ್ ಅವಲಂಬಿಸದ ಮಧುಮೇಹ. ಇದು ಯುವಕರು ಹಾಗೂ ವಯಸ್ಕರಲ್ಲಿ ಕಾಣಿಸುತ್ತದೆ. ರೋಗದ ಲಕ್ಷಣಗಳೆಂದರೆ ಬಾಯಾರಿಕೆ, ಅತಿಯಾದ ಮೂತ್ರ ವಿಸರ್ಜನೆ, ಹಸಿವೆಯಾಗುವುದು, ದೃಷ್ಟಿಕೋನದಲ್ಲಿ ವ್ಯತ್ಯಾಸ ಸೇರಿದಂತೆ ಇನ್ನೂ ಹಲವಾರು ಕಾರಣದಿಂದ ಬರಬಹುದು. ಈ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿ ಮುಖ್ಯವಾದ ಸಮಸ್ಯೆಗಳೆಂದರೆ ಮೂತ್ರಪಿಂಡ, ಹೃದಯ, ನರ, ವಸಡು, ದಂತ ಹಾನಿಗೆ ಒಳಗಾಗುತ್ತದೆ. ಹೋಮಿಯೋಪಥಿ ವೈದ್ಯ ಪದ್ಧತಿಯಲ್ಲಿ ಗುಣಮಟ್ಟದ ಚಿಕಿತ್ಸೆ ಇದ್ದು, ವ್ಯಕ್ತಿಯ ಮನಸ್ಸಿಗೆ ಅನುಗುಣವಾಗಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಇದನ್ನು ಗುಣಪಡಿಸಬಹುದು. ದೋಷ ರಹಿತ ಲಗ್ನವು ವಿವಾಹಕ್ಕೆ ಶುಭ ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ವಿವಾಹಕ್ಕೆ ಶುಭ ಗಳಿಗೆ, ಶುಭ ಯೋಗವನ್ನು ಪ್ರತಿಯೊಬ್ಬರೂ ನೋಡುತ್ತಾರೆ. ಇದಕ್ಕೆ ಜ್ಯೋತಿಷ್ಯದಲ್ಲಿ ಕೆಲವು ಯೋಗಗಳು ಇವೆ. 6ನೇ ಮನೆಯಲ್ಲಿ ರವಿ ಲಗ್ನದಲ್ಲಿ ಗುರು ಮತ್ತು ಅಷ್ಟಮದಲ್ಲಿ ಶುಕ್ರನಿದ್ದರೆ ಒಳ್ಳೆಯ ಯೋಗ. 6ನೇ ಮನೆಯಲ್ಲಿ ರವಿ ಅಷ್ಟಮದಲ್ಲಿ ಶುಕ್ರ ಲಗ್ನದಲ್ಲಿ ಗುರು ಮತ್ತು ದಶಮದಲ್ಲಿ ಚಂದ್ರನಿದ್ದರೆ ಒಳ್ಳೆಯ ಯೋಗ. ಲಗ್ನದಲ್ಲಿ ಗುರು ದಶಮದಲ್ಲಿ ಚಂದ್ರ ಷಷ್ಟದಲ್ಲಿ ರವಿ, ಏಕಾದಶದಲ್ಲಿ ಶನಿ ಮತ್ತು ತೃತೀಯದಲ್ಲಿ ಕುಜನಿದ್ದರೆ ಒಳ್ಳೆಯ ಯೋಗ. ಏಕಾದಶದಲ್ಲಿ ಶನಿ ಮತ್ತು ತೃತೀಯದಲ್ಲಿ ಕುಜನು ನವಮದಲ್ಲಿ ಗುರು ಇದ್ದರೆ ಒಳ್ಳೆಯ ಯೋಗ. ಲಗ್ನದಲ್ಲಿ ಗುರು, ಷಷ್ಟದಲ್ಲಿ ಶನಿ ಮತ್ತು ದಶಮದಲ್ಲಿ ರವಿ ಇರಬೇಕು. ಷಷ್ಟದಲ್ಲಿ ಒಂದು ಪಾಪಗ್ರಹ ಬುಧ ಶುಕ್ರರು ನವಮದಲ್ಲಿ ಇರಬೇಕು. ಇದು ಒಳ್ಳೆಯದು. ಈ ಯೋಗದಲ್ಲಿ ಮದುವೆಯಾದವರಿಗೆ ಧನ, ವಾಹನ ಮತ್ತು ಸಂಪತ್ತು ಇದ್ದು ಸುಖದಿಂದ ಇರುತ್ತಾರೆ. ಮಿಥುನ ಮತ್ತು ಕನ್ಯಾ ಲಗ್ನದಲ್ಲಿ ಬಲಿಷ್ಟನಾದ ಬುಧನಿದ್ದರೆ ನಂದ ಯೋಗವಾಗುತ್ತದೆ. ಈ ಯೋಗ ವಿವಾಹಕ್ಕೆ ಬಹಳ ಒಳ್ಳೆಯದು. ವೃಷಭ ಮತ್ತು ತುಲಾ ರಾಶಿಯಲ್ಲಿ ಬಲಿಷ್ಟನಾದ ಶುಕ್ರನಿದ್ದು, ಇದನ್ನು ಗುರು ನೋಡಿದರೆ ಇದು ಭದ್ರ ಯೋಗ. ಇದು ವಿವಾಹಕ್ಕೆ ಒಳ್ಳೆಯದು. ಗುರು ಬುಧರು ಬಲಿಷ್ಟರಾಗಿ ಲಗ್ನದಲ್ಲಿ ಇದ್ದರೆ ಜೀಮೂತ ಯೋಗ. ಇದು ಮದುವೆಗೆ ಒಳ್ಳೆಯದು. ಧನು ಅಥವಾ ಮೀನ ಲಗ್ನದಲ್ಲಿ ಬಲಿಷ್ಟನಾದ ಗುರು ಇದ್ದು, ಬುಧ ಅಥವಾ ಶುಕ್ರನು ಕೇಂದ್ರದಲ್ಲಿದ್ದರೆ ಜೀವಾಖ್ಯ ಎಂಬ ಶುಭ ಯೋಗವಾಗುವುದು. ಗುರು ಶುಕ್ರರು ಬಲಿಷ್ಟರಾಗಿ ಲಗ್ನದಲ್ಲಿದ್ದರೆ ಸ್ಥಾವರ ಎಂಬ ಶುಭ ಯೋಗವಾಗುವುದು. ಇದು ವಿವಾಹಕ್ಕೆ ಒಳ್ಳೆಯದು. ಶುಕ್ರ ಬುಧರು ಬಲಿಷ್ಟರಾಗಿ ಲಗ್ನದಲ್ಲಿದ್ದರೆ ಜಯ ಎಂಬ ಶುಭ ಯೋಗವಾಗುವುದು. ಬುಧ, ಗುರು, ಶುಕ್ರರು ಬಲಿಷ್ಟರಾಗಿ ಲಗ್ನದಲ್ಲಿದ್ದರೆ ವಿಜಯ ಎಂಬ ಶುಭ ಯೋಗವಾಗುವುದು. ವಿವಾಹ ಲಗ್ನದ ತೃತೀಯದಲ್ಲಿ ಗುರು, ಪಂಚಮದಲ್ಲಿ ಬುಧ ಶುಕ್ರರು, ಷಷ್ಟದಲ್ಲಿ ರವಿ ಬಲಿಷ್ಟರಾಗಿದ್ದರೆ ಇದು ಶುಭ ಯೋಗ. ಕುಜನು ತೃತೀಯದಲ್ಲಿ, ಶನಿಯು ಷಷ್ಟದಲ್ಲಿ ಅಥವಾ ಏಕಾದಶದಲ್ಲಿ, ದಶಮದಲ್ಲಿ ರವಿ ಲಗ್ನದಲ್ಲಿ ಗುರು ಇದ್ದರೆ ಮಂಗಳ ನಾಮ ಯೋಗವಾಗುವುದು. ಇದು ಬಹಳ ಶುಭ ಯೋಗ. ಲಗ್ನದಲ್ಲಿ ಬಲಿಷ್ಟ ಶುಭ ಗ್ರಹ ತೃತೀಯ ಷಷ್ಟ ಅಥವಾ ಏಕಾದಶದಲ್ಲಿ ಬಲಿಷ್ಠ ಪಾಪಗ್ರಹಗಳು ಇದ್ದರೆ ಪ್ರಬಲ ಎಂಬ ಶುಭ ಯೋಗವಾಗುವುದು. ಮೇಲಿನ ಯೋಗಗಳು ವಿವಾಹಕ್ಕೆ ಶ್ರೇಷ್ಠವಾಗಿದೆ. ಇದು ಪತಿ ಪತ್ನಿಯರಿಗೆ ಸುಖ, ಸಂತತಿ, ಸಂಪತ್ತು ಇತ್ಯಾದಿಗಳನ್ನು ನೀಡುತ್ತದೆ. ಕುಜ, ಶನಿ, ಶುಕ್ರ ಮತ್ತು ಗುರುವು ಕ್ರಮವಾಗಿ ಅಪೋಕ್ಲಿಮ ರಾಶಿಗಳು. ಅಂದರೆ ಕುಜನು ತೃತೀಯದಲ್ಲಿ, ಶನಿಯು ಷಷ್ಟದಲ್ಲಿ, ಶುಕ್ರನು ನವಮದಲ್ಲಿ ಮತ್ತು ಗುರುವು ದ್ವಾದಶದಲ್ಲಿ ಇರಬೇಕು. ಇದು ಮಹಾವಿಷ್ಣು ಯೋಗವಾಗುತ್ತದೆ. ಈ ಯೋಗದಲ್ಲಿ ದಂಪತಿಗಳಿಗೆ ಸಕಲ ಸುಖ ಲಭಿಸುತ್ತದೆ. ಶನಿ, ಗುರು, ರವಿ ಮತ್ತು ಕುಜನು ಕ್ರಮವಾಗಿ ಉಪಚಯ ರಾಶಿಗಳು. ಅಂದರೆ ತೃತೀಯದಲ್ಲಿ ಶನಿ ಗುರುವು ಷಷ್ಟದಲ್ಲಿ ರವಿಯು ದಶಮದಲ್ಲಿ ಮತ್ತು ಕುಜನು ಲಾಭದಲ್ಲಿ ಇರಬೇಕು. ಇದನ್ನು ಷಷ್ಟ ಯೋಗ ಎಂದು ಕರೆಯುತ್ತಾರೆ. ಈ ಯೋಗದಲ್ಲಿ ದಂಪತಿಗಳಿಗೆ ಸಕಲ ಸುಖ ಲಭಿಸುತ್ತದೆ. ವಿವಾಹಾದಿ ಶುಭ ಕಾರ್ಯಗಳಲ್ಲಿ ಗ್ರಹಗಳು ದುಷ್ಟ ಫಲವನ್ನು ನೀಡುವ ಭಾವಗಳಲ್ಲಿ ಉಚ್ಛ ಸ್ವಕ್ಷೇತ್ರ ಅಥವಾ ಸ್ವಷಡ್ವರ್ಗ ಸ್ಥಿತರಾದರೆ ಆ ಗ್ರಹಗಳು ಅನಿಷ್ಟ ಫಲವನ್ನು ನಾಶ ಮಾಡಿ ಶುಭ ಫಲವನ್ನು ನೀಡುತ್ತದೆ. ಆದರೆ ಭಾವ ಶುದ್ಧಿ ಹೇಳಿದ ಸ್ಥಾನಗಳನ್ನು ತ್ಯಜಿಸಲೇಬೇಕು. ಆದ್ದರಿಂದ ವಿವಾಹದಲ್ಲಿ ಸಪ್ತಮ ಶುದ್ಧಿಯು ಅವಶ್ಯ. ಅಂದರೆ ಸಪ್ತಮದಲ್ಲಿ ಯಾವ ಗ್ರಹನೂ ಇರಬಾರದು. ಇದಕ್ಕೆ ವ್ಯತ್ಯಯವಾದರೆ ಅಶುಭ ಫಲವು ಲಘು ಆಗುತ್ತದೆ. ಆಜನ ಜಾತಕದಲ್ಲಿಯೂ ವಿವಾಹ ಕಾಲದಲ್ಲಿಯೂ ಗ್ರಹಗಳು ಶುಭ ಫಲವನ್ನು ಸೂಚಿಸುವುದಾದರೆ ಅತ್ಯಂತ ಸುಖಮಯ ದಾಂಪತ್ಯ ಜೀವನ ಇರುತ್ತದೆ. ಆದ್ದರಿಂದ ವಿವಾಹ ಲಗ್ನವು ದೋಷ ರಹಿತ ಆಗಿರಬೇಕು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...