ಮಾರ್ಚ 31, ಸೋಮವಾರದಂದು ನೂತನ ಭಾರತೀಯ ವರ್ಷಾರಂಭ. ಈ ದಿನವನ್ನು ಚಾಂದ್ರಮಾನ್ ಯುಗಾದಿ ಎಂದು ಕರೆಯಲಾಗುತ್ತದೆ. ಈ ದಿನದಂದೇ ಚತುರ್ಮುಖ ಬ್ರಹ್ಮದೇವನು ಅಖಿಲ ವಿಶ್ವವನ್ನು ಸೃಷ್ಟಿ ಮಾಡಿದ್ದರಿಂದ ಈ ದಿನಕ್ಕೆ ಯುಗಾದಿ ಎಂಬ ಸಂಜ್ಞೆ. ಈ ಬಾರಿಯ ಸಂವತ್ಸರದ ಹೆಸರು ಜಯ. ಶಾಲಿವಾಹನ ಶಕವರ್ಷ 1936. ಕಲಿಯುಗಾರಂಭದಿಂದ ಇಲ್ಲಿಯವರೆಗೆ 5115 ವರ್ಷಗಳು ಸಂದಿವೆ, ಬಾಕಿ 4,26,885 ವರ್ಷಗಳು ಉಳಿದಿವೆ. ಸಂವತ್ಸರ ವರ್ಷದ ಕೆಲವು ಮಾಹಿತಿಗಳನ್ನು ನೋಡೋಣ.
ಅಬ್ದಾದೌ ಮಿತ್ರಸಂಯುಕ್ತೋ ಮಂಗಲಸ್ನಾನಮಾಚರೇತ್ |
ವಸ್ತ್ರೈರಾಭರಣೈರ್ದೇಹಮಲಂಕೃತ್ಯ ದ್ವಿಜೈಃ ಸಹ ||
ದೇವದ್ವಿಜಾನ್ ಸಮಭ್ಯರ್ಚ ಪ್ರಗ್ರಹ್ಯ ಬ್ರಾಹ್ಮಣಾಶಿಷಃ |
ಭಕ್ಷಯಿತ್ವಾ ನಿಂಬಪತ್ರಂ ಶ್ರುಣುಯಾದ್ ವರ್ಷಜಂ ಫಲಮ್ ||
ವರ್ಷಾರಂಬದ ಶುಭ ಮುಹೂರ್ತದಲ್ಲಿ ಸುಗಂಧತೈಲಯುಕ್ತವಾದ ಅಭ್ಯಂಜನ ಸ್ನಾನವನ್ನು ಮಾಡಿ, ನೂತನ ವಸ್ತ್ರ ಆಭೂಷಣಗಳನ್ನು ಧರಿಸಿ ದೇವರ ಪೂಜೆ ದರ್ಶನಾದಿಗಳನ್ನು, ಬ್ರಾಹ್ಮಣರ ದರ್ಶನ ಆಶೀರ್ವಾದಗಳನ್ನು ಪಡೆಯಬೇಕು. ನಂತರ ನಿಂಬಪತ್ರ (ಬೇವಿನ ಎಲೆ) ಭಕ್ಷಣೆಯನ್ನು ಮಾಡಿ ಆ ವರ್ಷದ ಪಂಚಾಂಗ, ಸಂವತ್ಸರಾಧಿಪತಿಗಳ ಫಲವನ್ನು ಶ್ರವಣ ಮಾಡಬೇಕು.
ತೈಲಾಭ್ಯಂಗಸ್ನಾನಮಾದೌ ಚ ಕೃತ್ವಾ ಪೀಯೋಷೋತ್ಥಂ ಪಾರಿಭದ್ರಸ್ಯ ಪತ್ರಮ್ |
ಭಕ್ಷೇತ್ ಸೌಖ್ಯಂ ಮಾನವೋ ವ್ಯಾಧಿನಾಶಂ ವಿದ್ಯಾಯುಃ ಶ್ರೀರ್ವಿಂದತೇ ವರ್ಷಮೂಲೇ ||
ವರ್ಷಾರಂಭದಲ್ಲಿ ಮೊದಲು ತೈಲಸಹಿತ ಅಭ್ಯಂಗ ಸ್ನಾನವನ್ನು ಮಾಡಿ, ಅಮೃತದಿಂದ ಹುಟ್ಟಿಬಂದಿರುವ ಬೇವಿನ ಭಕ್ಷಣೆಯನ್ನು ಯಾರು ಮಾಡುತ್ತಾರೋ ಅವರು ಎಲ್ಲ ಅನಾರೋಗ್ಯ, ವ್ಯಾಧಿಗಳನ್ನು ಕಳೆದುಕೊಂಡು ವಿದ್ಯಾವಂತರೂ, ಆಯುಷ್ಯವಂತರೂ, ಸಕಲ ಐಶ್ವರ್ಯಶಾಲಿಗಳೂ ಆಗುತ್ತಾರೆ.
ಜಯ ನಾಮ ಸಂವತ್ಸರದ ಫಲ
ಸದಾನಂದಧಾನ್ಯಾದಿಕೀರ್ಣಾ ಧರಿತ್ರೀ ಪಯೋದಾವಲೀ ಸ್ಯಾತ್ ಪಯೋವೃಷ್ಟಿಕರ್ತ್ರೀ |
ವಿವಾಹೋರುಯಜ್ಞಾದಿ-ಸತ್ಕರ್ಮಸಿದ್ಧಿರ್ಜಯೇ ವಾಪಿರಾಮಕೂಪಾದಿವೃದ್ಧಿಃ ||
ಜಯನಾಮ ಸಂವತ್ಸರದಲ್ಲಿ ಸಕಾಲದಲ್ಲಿ ಉತ್ತಮ ಮಳೆಯಾಗಿ ಸುಖ ಸಮೃದ್ಧಿಯುಂಟಾಗುವುದು. ಧಾನ್ಯ ಸಮೃದ್ಧಿಯು ವಿಪುಲವಾಗಿ ಆಗುವುದು. ವಿವಾಹ, ಯಜ್ಞಯಾಗಾದಿ ಸತ್ಕರ್ಮಗಳು ಹೆಚ್ಚುವವು, ನದೀ, ಸರೋವರ, ಬಾವಿಗಳಲ್ಲಿ ಜಲದ ವೃದ್ಧಿಯಾಗುವುದು.
ಸಂವತ್ಸರಾಧಿಪತಿಗಳ ಫಲ
ರಾಜಾ – ಚಂದ್ರ, ಮಂತ್ರೀ – ಚಂದ್ರ, ಮೇಘಾಧಿಪತಿ – ರವಿ
ವರ್ಷಾಧಿಪತಿಯಾದ ಚಂದ್ರನಿಂದ ದೇಶದಾದ್ಯಂತ ಉತ್ತಮ ಮಳೆಯಾಗಿ ಧಾನ್ಯಾಭಿವೃದ್ಧಿಯಾಗುವುದು. ಗೋಸಂತತಿ ಹೆಚ್ಚಿ ಹಾಲು ಮತ್ತು ತತ್ಸಂಬಂಧೀ ಉತ್ಪಾದನೆಗಳು ಹೆಚ್ಚುವವು. ಜನರಲ್ಲಿ ಧಾರ್ಮಿಕ ಪ್ರವೃತ್ತಿ ಹೆಚ್ಚುವುದು. ವಿದ್ವಾಂಸರಿಗೆ ಮತ್ತು ಪಂಡಿತವರ್ಗದವರಿಗೆ ಯಶಃಪ್ರಾಪ್ತಿ ಮತ್ತು ಪ್ರಸಿದ್ಧಿ. ಪ್ರಜೆಗಳ ಆರೋಗ್ಯ ಉತ್ತಮವಾಗಿರುವುದು. ಚಂದ್ರನೂ ಮಂತ್ರೀಯೂ ಸಹ ಆಗಿರುವುದರಿಂದ ಉತ್ತಮ ಫಲ ಕೊಡುವನು. ಸರಕಾರ ಮತ್ತು ಜನರಲ್ಲಿ ಸಾಮರಸ್ಯ ಉಂಟಾಗುವುದು, ಅಭಿವೃದ್ಧಿಯಾಗುವುದು. ಹಣ್ಣುಗಳು ಮತ್ತು ಧಾನ್ಯಗಳು ಹೇರಳವಾಗಿ ಉಪಲಬ್ಧವಾಗುವವು. ಸಸ್ಯಾಭಿವೃದ್ಧಿ ಮುತ್ತು ಮುದಲಾದ ರತ್ನಗಳ ಉತ್ಪನ್ನ ಹೆಚ್ಚುವುದು. ಮೇಘಾಧಿಪತಿ ರವಿಯಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಮಳೆ ಅಲ್ಪ ಪ್ರಮಾಣದಲ್ಲಿ ಆಗುವುದು. ಬೆಳೆಗೆ ಹಾನಿಯಾಗಿ ನಷ್ಟವಾಗುವುದು. ಪ್ರಜೆಗಳಿಗೆ ಕಳ್ಳರ ಭಯ ಮತ್ತು ರೋಗಗಳ ಭಯ ಆಗುವುದು.
ರಸಾಧಿಪತಿಗಳಾದ ಶುಕ್ರ ಮತ್ತು ಶನಿಗಳಿಂದ ಉಪ್ಪು, ಕಬ್ಬು, ಎಳ್ಳು, ಲೋಹಗಳು, ಎಣ್ಣೆ, ಕಬ್ಬಿಣ, ಚಿನ್ನ, ಬೆಳ್ಳಿ ಮುಂತಾದವುಗಳ ಬೆಲೆ ಹೆಚ್ಚಾಗುವುದು. ನೀರಸಾಧಿಪತಿ ಬುಧನಿಂದ ಪಚ್ಚ ಮೊದಲಾದ ರತ್ನಗಳ ಮೌಲ್ಯ ಕಡಿಮೆಯಾಗುವುದು.
ಅಗ್ರಧಾನ್ಯಾಧಿಪತಿ (ಮುಂಗಾರಿ ಬೆಳೆಯ ಅಧಿಪ) ಬುಧನಿಂದಾಗಿ ಮಳೆ ಚನ್ನಾಗಿದ್ದು ಜಲದ ಅಭಿವೃದ್ಧಿಯಾಗುವುದು. ಪಶ್ಚಾದ್ಧಾನ್ಯಾಧಿಪತಿ (ಹಿಂಗಾರಿ ಬೆಳೆಯ ಅಧಿಪ) ಮಂಗಳನಾಗಿದ್ದು ಮಳೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುವುದು.
ಆರ್ದ್ರಾ ಪ್ರವೇಶ - ವರ್ಷಾರಂಭಕ್ಕೆ ಆರ್ದ್ರಾಪ್ರವೇಶವನ್ನು ನೋಡುವುದು ವಿಶೇಷವಾಗಿದೆ. ಸೂರ್ಯನು ಆರ್ದ್ರಾನಕ್ಷತ್ರವನ್ನು ಪ್ರವೇಶಿಸುವ ಮುಹೂರ್ತವೇ ಆರ್ದ್ರಾ ಪ್ರವೇಶ. ಇದರಿಂದ ಆ ವರ್ಷದ ಪರ್ಜನ್ಯದ ಅಂದಾಜು ಮಾಡಲಾಗುತ್ತದೆ. ಈ ವರ್ಷ ಆರ್ದ್ರಾ ಪ್ರವೇಶವು ಜ್ಯೇಷ್ಠ ಕೃಷ್ಣ ದಶಮೀ – 22 ಜೂನ್ ರವಿವಾರದಂದು ಆಗುವುದು. ಸೂರ್ಯನ ಆರ್ದ್ರಾ ಪ್ರವೇಶವು ಈ ವರ್ಷ ಲಾಭಪ್ರದವಾಗಿರುತ್ತದೆ, ಒಳ್ಳೆಯ ಮಳೆಯಾಗಿ ಧಾನ್ಯಾಭಿವೃದ್ಧಿಯಾಗುವುದು. ಮಂಗಲಕಾರ್ಯಗಳು ಹೆಚ್ಚುವವು.
ಯುಗಾದಿಯ ಮಹತ್ವ
ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಽಹನಿ – ಬ್ರಹ್ಮದೇವನು ಚೈತ್ರಮಾಸದ ಮೊದಲನೇಯ ದಿನದಂದೇ ಜಗತ್ತನು ಸೃಷ್ಟಿಮಾಡಿದನು. ಈ ದಿನ ಪ್ರಾತಃ ಕಾಲದಲ್ಲಿ ತೈಲಸ್ನಾನ, ಇಂದ್ರಧ್ವಜ ಅಥವಾ ಬ್ರಹ್ಮಧ್ವಜ ಪೂಜೆ, ನಿಂಬಭಕ್ಷಣ, ಪಂಚಾಂಗ ಶ್ರವಣಾದಿಗಳು ವಿಹಿತ.
ಯುಗಾದಿಯಂದು ಪ್ರಾತಃಕಾಲದಲ್ಲಿ ಎಣ್ಣೆಸ್ನಾನವನ್ನು ಅವಶ್ಯ ಮಾಡಬೇಕು. ಮಾಡದಿದ್ದರೆ ಪ್ರತ್ಯವಾಯ (ಪಾಪ, ದೋಷ) ಬರುವುದೆಂದು ಹೇಳಲ್ಪಟ್ಟಿದೆ. ಪಂಚಾಂಗ ಪೂಜೆ ಅಥವಾ ಸಂವತ್ಸರ ಪೂಜೆ ಮತ್ತು ಪಂಚಾಂಗ ಶ್ರವಣವನ್ನು ಸಹ ಮಾಡಬೇಕು.
ವರ್ಷಾರಂಭಕ್ಕೆ ಬೇವು ಮತ್ತು ಬೆಲ್ಲದ ಭಕ್ಷಣವು ವಿದಿತವಾಗಿದೆ. ನಿಂಬಭಕ್ಷಣವು ಆಯುಷ್ಯ ಮತ್ತು ಆರೋಗ್ಯವರ್ಧಕ. (ಬೇವಿನ ಹೂ ಮತ್ತು ಎಲೆ ಎಂದು ಎರಡರ ಉಲ್ಲೇಖವೂ ಇದೆ) ನಿಂಬ ಭಕ್ಷಣ ಮಂತ್ರ -
ಶತಾಯುರ್ವಜ್ರದೇಹತ್ವಂ ಸರ್ವಸಂಪತ್ಪ್ರದಂ ತಥಾ |
ಸರ್ವಾರಿಷ್ಟಹರಂ ಕುರ್ವೇ ನಿಂಬಪತ್ರಾಶನಂ ಶುಭಮ್ ||
ಪಂಚಾಂಗಶ್ರವಣದಿಂದ ವರ್ಷಾಧಿಪತಿಗಳ ಅನುಗ್ರಹದಿಂದ ವರ್ಷಪೂರ್ತಿ ಸುಖಪ್ರಾಪ್ತಿಯಾಗುವುದು.
ಚೈತ್ರ ಶುಕ್ಲ ಪ್ರತಿಪದೆಯಿಂದ ವಸಂತ ನವರಾತ್ರೋತ್ಸವ ಮತ್ತು ಶ್ರೀರಾಮ ನವರಾತ್ರೋತ್ಸವಗಳು ಸಹ ಆರಂಭವಾಗುವವು.
ಸೌರಮಾನದ ಪ್ರಕಾರ ವರ್ಷಾರಂಭವೂ 14 ಎಪ್ರಿಲ್ ಬೆಳಿಗ್ಗೆ 07-36ಕ್ಕೆ ಆಗುವುದು (ಮೇಷ ಸಂಕ್ರಮಣ).
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments