ಅಂಗಾರಕ ಮಂಗಳ ಗ್ರಹ –
ಭೂಮಿಪುತ್ರನಾದ ಮಂಗಳನು ಕ್ರೂರಗ್ರಹವೆಂದೇ ಶಾಸ್ತ್ರಗಳಲ್ಲಿ ಕರೆಯಲ್ಪಟ್ಟಿದ್ದಾನೆ. ಇವನ ಫಲವು ನೈಸರ್ಗಿಕವಾಗಿ ಅಶುಭವಾಗಿರುತ್ತದೆ. ಮಂಗಳನು ಉಗ್ರ ಸ್ವಾಭಾವದ ಪುರುಷ ಗ್ರಹ, ಅಗ್ನಿ ತತ್ತ್ವಕ್ಕೆ ಅಭಿಮಾನಿ, ದೇಹದಲ್ಲಿ ರಕ್ತ ಮತ್ತು ಪಿತ್ತದ ಕಾರಕ, ದಕ್ಷಿಣ ದಿಕ್ಕಿನ ಸೂಚಕ, ಸಹೋದರ ಕಾರಕ ಮತ್ತು ತಮೋಗುಣವನ್ನು ಹೊಂದಿರುವ ಗ್ರಹ. ಮಂಗಳನು ಮೇಷ ಮತ್ತು ವೃಶ್ಚಿಕರಾಶಿಯ ಅಧಿಪರಿಯಾಗಿರುತ್ತನೆ. ಮಕರವು ಅವನ ಉಚ್ಚ ಕ್ಷೇತ್ರ ಮತ್ತು ಕರ್ಕವು ನೀಚ ಕ್ಷೇತ್ರ. ಮೇಷ ಮೂಲತ್ರಿಕೋಣ ರಾಶಿಯಾಗಿದೆ.
ಸಂಪೂರ್ಣ ರಾಶಿಚಕ್ರವನ್ನು ಸುತ್ತಲು ಕುಜನು ತೆಗೆದುಕೊಳ್ಳುವ ಸರಿಸುಮಾರು ಕಾಲಾವಕಾಶ 18 ತಿಂಗಳುಗಳು. ಎಂದರೆ ಪ್ರತಿ ರಾಶಿಯಲ್ಲಿ 45 ದಿನಗಳ ಸಂಚಾರ. ಗುರು, ರಾಹು ಮತ್ತು ಶನಿಗಳಿಗೆ ಹೋಲಿಸಿದಾಗ ಈ ಕಾಲಾವಕಾಶ ಅಲ್ಪವಾದದ್ದೇ, ಆದರೆ ಕುಜನು ಪ್ರಖರ ಗ್ರಹ ಮತ್ತು ಶೀಘ್ರಫಲದಾಯಕನೂ ಆಗಿರುವದರಿಂದ ಈ ಗ್ರಹದ ಗೋಚಾರವು ನಮ್ಮ ಜೀವನದ ಕೆಲವು ವಿಷಯಗಳ ಮೇಲೆ ನಿಖರವಾದ ಪರಿಣಾಮಗಳನ್ನು ಬೀರಿತ್ತದೆ.
ಮಂಗಳನ ಕಾರಕತ್ತ್ವಗಳು –
ಸತ್ವಂ ಭೂಫಲಿತಂ ಸಹೋದರಗುಣಂ ಕ್ರೌರ್ಯಂ ರಣಂ ಸಾಹಸಂ
ವಿದ್ವೇಷಂ ಚ ಮಹಾನಸಾಗ್ನಿಕನಕಜ್ಞಾತ್ಯಸ್ತ್ರಚೋರಾನ್ರಿಪೂನ್ |
ಉತ್ಸಾಹಂ ಪರಕಾಮಿನೀರತಮಸತ್ಯೋಕ್ತಿಂ ಮಹೀಜಾದ್ವದೇತ್
ವೀರ್ಯಂ ಚಿತ್ತಸಮುನ್ನತಿಂ ಚ ಕಲುಷಂ ಸೇನಾಧಿಪತ್ಯಂ ಕ್ಷತಮ್ || (ಫಲದೀಪಿಕಾ)
ಬಲ, ಭೂಮಿಯ ಸಫಲತೆ, ಸಹೋದರನ ಗುಣ, ಕ್ರೂರತ್ವ, ಯುದ್ಧ, ಸಾಹಸ, ವಿರೋಧ, ಅಡಿಗೆಮನೆ, ಬೆಂಕಿ, ಚಿನ್ನ, ಸಂಬಂಧಿಕರು, ಆಯುಧ, ಕಳ್ಳರು, ಶತ್ರುಗಳು, ಉತ್ಸಾಹ, ಪರನಾರೀಯಲ್ಲಿ ಆಸಕ್ತಿ, ಸುಳ್ಳುಬುರುಕತನ, ವೀರ್ಯ, ಮನೋಧೈರ್ಯ, ಪಾಪಕೃತ್ಯ, ಸೇನಾಧಿಪತ್ಯ, ಗಾಯ, ಘಾಸಿಗೊಳ್ಳುವಿಕೆ ಇವುಗಳನ್ನು ಕುಜನಿಂದ ಚಿಂತಿಸಬೇಕು.
ಮಂಗಳನಿಂದ ಪ್ರಭಾವಿತ ಜಾತಕರ ಗುಣಗಳು -
ಸದಾ ಉತ್ಸಾಹ, ಕ್ರಿಯಶೀಲತೆ, ಚಟುವಟಿಕೆ. ಇವರು ಸ್ವಭಾವತಃ ಮುಂಗೋಪಿಗಳಾಗಿರುತ್ತಾರೆ, ಯಾವುದೇ ಪೂರ್ವಾಪರ ವಿಚಾರ ಮಾಡದೆಯೇ ನಿರ್ಧಾರಗಳನ್ನು ತೆಗೆದುಕೊಂಡು ಸ್ವತಃ ಸಮಸ್ಯೆಗೆ ಒಳಗಾಗುವುದು ಇವರ ಲಕ್ಷಣ. ಎಲ್ಲದರಲ್ಲಿ ತಲೆಹರಟೆ, ಸಿಟ್ಟು ಮಾಡಿಕೊಳ್ಳುವುದು, ದುಂದುವೆಚ್ಚ, ಕಲಹ ಪ್ರೇಮಿಗಳು. ಅಯೋಗ್ಯರ ಸಹವಾಸ, ದುರ್ವ್ಯಸನಿಗಳ ಸಂಗ, ಸಂಬಂಧಿಗಳ ಜೊತೆ ಜಗಳ, ಪರಸ್ತ್ರೀಯರಲ್ಲಿ ಆಸಕ್ತಿ, ಅನಾವಶ್ಯಕ ಸಾಲಮಾಡುವುದು. ಅಪಘಾತ ಯೋಗ, ಗಾಯಗಳಾಗುವುದು ಇವು ಕೆಲವು ಲಕ್ಷಣಗಳು.
ಮಂಗಳನ ಗೋಚಾರ -
ಮೇಲೆ ಹೇಳಲ್ಪಟ್ಟ ಕುಜನಿಂದ ವಿಚಾರಣೀಯ ಅಂಶಗಳು ಜನ್ಮಪತ್ರಿಕೆಗೆ ಸಂಭಂಧಿಸಿದಂತೆ ಆಗಿದ್ದರೂ, ಗೋಚಾರದಲ್ಲಿಯೂ ಚಿಂತನೀಯವಾಗಿರುತ್ತದೆ. ಅಶುಭ ಸ್ಥಾನಸ್ಥನಾದ ಮಂಗಳದಲ್ಲಿ ಅಲ್ಪಕಾಲದಲ್ಲಿ ಮೇಲ್ಕಂಡ ಪ್ರಭಾವಗಳು ಸಂಭವಿಸುತ್ತವೆ.
ಯಾವುದೇ ಜನ್ಮರಾಶಿಯಿಂದ ಕುಜನು 3-6-11 ನೇಯ ರಾಶಿಗಳಲ್ಲಿ ಸಂಚರಿಸುವಾಗ ಶುಭ ಫಲಪ್ರದನಾಗಿರುತ್ತಾನೆ. ಕನ್ಯಾ, ಮಿಥುನ ಮತ್ತು ಮಕರ ರಾಶಿಗಳಿಗೆ ಕುಜನು ಅನುಕ್ರಮವಾಗಿ 3, 6 ಮತ್ತು 11ನೇಯವನಾಗಿ ಬರುತ್ತಾನೆ. ಆದ್ದರಿಂದ ಈ ರಾಶಿಗಳಿಗೆ ಮಂಗಳನ ಗೋಚಾರಫಲವು ಶುಭವಾಗಿರುತ್ತದೆ. ಆದರೆ ಈ ಸ್ಥಾನಗಳ ವೇಧಗಳನ್ನು ಸಹ ಪರಾಮರ್ಶಿಸಬೇಕು. 3-6-11 ನೇಯ ಮಂಗಳನಿಗೆ 12-9-5 ನೇಯ ಸ್ಥಾನಗಳು ಅನುಕ್ರಮವಾಗಿ ವೇಧಸ್ಥಾನಗಳಾಗಿವೆ. ಮಂಗಳನು 12-3-5 ನೇಯವನಾಗಿ ಧನು, ಮೀನ ಮತ್ತು ಕರ್ಕರಾಶಿಗೆ ಗೋಚಾರವನ್ನು ಮಾಡುತ್ತನೆ. ಆದ್ದರಿಂದ ಈ ರಾಶಿಗಳಲ್ಲಿ ಯಾವುದೇ ಗ್ರಹಗಳ ವಾಸ್ತವ್ಯವು ಒಂದೆ ವೇಳೆ ಇದ್ದರೆ ಕನ್ಯಾ, ಮಿಥುನ ಮತ್ತು ಮಕರ ರಾಶಿಗಳಿಗೆ ಕುಜ ಶುಭ ಫಲವು ಇಲ್ಲವಾಗುತ್ತದೆ. ಪ್ರಸಕ್ತ ಧನು, ಮೀನ ಮತ್ತು ಕರ್ಕ ಈ ರಾಶಿಗಳಲ್ಲಿ ಯಾವ ಗ್ರಹಗಳ ವಾಸ್ತವ್ಯವೂ ಇಲ್ಲ, ಆದ್ದರಿಂದ ಕನ್ಯಾ, ಮಿಥುನ ಮತ್ತು ಮಕರ ರಾಶಿಗೆಳಿಗೆ ಕುಜನ ಗೋಚಾರದಿಂದ ಶುಭವಾಗಲಿದೆ.
ಶುಭ ಫಲ – ಕುಜ ಗೋಚಾರದ ಶುಭ ಫಲವು ಶೀಘ್ರವಾಗಿ ಅನುಭವಿಸಬಹುದು. ಕುಜರಾಶಿ ಪ್ರವೇಶದಿಂದ ಕೇವಲ ಎಂಟು-ಹತ್ತು ದಿನಗಳಲ್ಲಿ ಪರಿಣಾಮ ಗೋಚರಿಸುತ್ತದೆ. ಆರ್ಥಿಕ ಪರಿಸ್ಥಿತಿಯು ಒಮ್ಮೆಲೆ ಸುಧಾರಿಸುತ್ತದೆ. ನಿಂತು ಹೋದ, ವಿಳಂಬವಾಗುತ್ತಿರುವ ಕಾರ್ಯ ಕಲಾಪಗಳಿಗೆ ಬಿರುಸಿನ ವೇಗ ಸಿಗುತ್ತದೆ. ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳು ಪೂರ್ಣ ಸೋತು ಶರಣಾಗತರಾಗುತ್ತಾರೆ. ವ್ಯಾಪಾರ ವ್ಯವಸಾಯ ಉದ್ಯೋಗಗಳಲ್ಲಿ ಗುರುತರವಾದ ಲಾಭ. ಸಾಲಭಾದೆಯಿಂದ ಹೊರಗೆ ಬರುವ ಮಾರ್ಗ, ಹೊಸ ಆದಾಯದ ಯೋಜನೆಗಳು.
ಕನ್ಯಾ ಲಗ್ನ-ರಾಶಿ, ಮಿಥುನ ಲಗ್ನ-ರಾಶಿ ಮತ್ತು ಮಕರ ಲಗ್ನ-ರಾಶಿಯವರು ಕುಜ ಗೋಚಾರದಿಂದ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ.
ವೃಶ್ಚಿಕ
ದ್ವಾದಶ ರಾಶಿಗಳಿಗೆ ವೃಶ್ಚಿಕದಲ್ಲಿ ಕುಜ ಗೋಚಾರ ಫಲ -
ಮೇಷಾದಿರಾಶಿಗಳಿಗೆ ಕುಜನು ಗೋಚರಿಯಾಗಿ ಕೆಳಗಿನಂತೆ ಬರುತ್ತಾನೆ -
ವೃಶ್ಚಿಕ – 1ನೇಯ ಮಂಗಳ, ಧನು – 12, ಮಕರ – 11, ಕುಂಭ – 10, ಮೀನ – 9, ಮೇಷ – 8, ವೃಷಭ – 7, ಮಿಥುನ – 6, ಕರ್ಕ – 5, ಸಿಂಹ – 4, ಕನ್ಯಾ – 3, ತುಲಾ – 2 ನೇಯವನಾಗಿ ಮಂಗಳನ ಸಂಚಾರ.
ವೃಶ್ಚಿಕಕ್ಕೆ ಮಂಗಳನು ಒಂದನೇವನಾಗಿ ಬಂದು ಇದರಿಂದ ದೈಹಿಕ ಕಷ್ಟವನ್ನು ಸಹಿಸಬೇಕಾಗುತ್ತದೆ. ನಿರುಪಯುಕ್ತ ಪ್ರವಾಸಗಳು, ಉಷ್ಣ ಮತ್ತು ವಾತಕ್ಕೆ ಸಂಬಂಧಿತ ವಿಕಾರಗಳು, ಅಪಘಾತ ಯೋಗ, ಚಿಕ್ಕ ಗಾಯಗಳು, ಪರರಿಂದ ಪೀಡೆ ಉಪದ್ರವ, ಸ್ತ್ರೀಪಿಡೆ, ಕಾರ್ಯವಿಳಂಬ, ಆರ್ಥಿಕವಾಗಿ ಹಾನಿ, ಪರರಲ್ಲಿ ಅಸಮಾಧಾನ, ಮಾನಸಿಕ ಕ್ಲೇಶ, ಸಾಲದಿಂದ ಬಾಧೆ, ಅಭಿಮಾನದಲ್ಲಿ ಹೆಚ್ಚಳ, ವ್ಯರ್ಥ ವಾದವಿವಾದಗಳು ಮೊದಲಾದ ಕುಜನಿಗೆ ಸಂಬಂಧಿಸಿದ ಅಶುಭ ಫಲಗಳು.
ಅಷ್ಟಮವಾಗಿ ಮೇಷಕ್ಕೆ ಬರುವ ಕುಜನು ಅಪವಾದ ಮತ್ತು ಕಲಹಗಳನ್ನು ಉಂಟುಮಾಡುತ್ತಾನೆ. ಲೋಕಾಪವಾದ, ಜನಾಪವಾದ, ಅಪಕೀರ್ತಿ, ರಕ್ತದ ದೋಷ, ರಕ್ತದ ಒತ್ತಡ, ಅಪಘಾತ, ವಸ್ತುಗಳು ಕಳುವಾಗುವುದು, ಮನೆಯಲ್ಲಿ ಸ್ತ್ರಿಯರ ಜೊತೆಗೆ ಮನಸ್ತಾಪ, ಕೌಟುಂಬಿಕ ಕಲಹ, ಶಾರೀರಿಕ ಪೀಡೆ, ಗುಹ್ಯಕ್ಕೆ ಸಂಬಂಧಿತ ರೋಗಗಳು, ಅಗ್ನಿಯ ಭಯ ಮೊದಲಾದ ಅಶುಭ ಫಲಗಳು.
ಧನು ರಾಶಿಯವರಿಗೆ ಆರ್ಥಿಕವಾಗಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅತಿಶಯ ಖರ್ಚು, ಕೌಟುಂಬಿಕ ವಿರಸ, ಚೋರಭಯ, ಅಗ್ನಿಭಯ, ಉದ್ಯೋಗ ನೌಕರಿಗಳಲ್ಲಿ ಕಿರಿಕಿರಿ, ಹಳೆಯ ರೋಗದ ವೃದ್ಧಿ, ಶರೀರ ಪೀಡೆ, ಅಪಘಾತ, ಚಿಂತೆ, ಮಾನಸಿಕ ಉದ್ವೇಗ, ಸ್ವಜನರಿಂದ ವಿರೋಧ ಇತ್ಯಾದಿ ಅನಿಷ್ಟ ಫಲಗಳು.
ಕನ್ಯಾ, ಮಿಥುನ ಮತ್ತು ಮಕರ ರಾಶಿಯವರಿಗೆ ಈ ಗೋಚಾರವು ಅತ್ಯಂತ ಶುಭಪ್ರದವಾಗಿದ್ದು, ಎಲ್ಲ ಕೆಲಸಗಳಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಲಾಭಕರವಾದ ಪ್ರವಾಸ, ವಾದವಿವಾದ ಕೋರ್ಟು ಕಛೇರಿಗೆ ಸಂಬಂಧಿತ ವ್ಯವಹಾರಗಳಲ್ಲಿ ವಿಶೇಷ ಯಶ, ನೌಕರಿಯಲ್ಲಿ ಬಡ್ತಿ, ಉದ್ಯೋಗದಲ್ಲಿ ಲಾಭ, ಹೊಸ ವ್ಯವಹಾರದ ಸಂಧಿಗಳು, ಹೆಚ್ಚು ಸೃಜನಶೀಲತೆ, ಮುಂದಾಳುತ್ವವನ್ನು ವಹಿಸಿಕೊಳ್ಳುವುದು, ಆಕಸ್ಮಿಕವಾಗಿ ಧನಲಾಭ.
ವೃಷಭ – ದ್ರವ್ಯಚಿಂತೆ, ಸ್ತ್ರೀಯರಿಂದ ಪೀಡೆ, ವಿರಸ, ಕಲಹ, ಉದ್ಯೋಗದಲ್ಲಿ ಹಾನಿ.
ಕರ್ಕ – ಬುದ್ಧಿ ವೈಪರಿತ್ಯ, ಉದ್ಯೋಗದಲ್ಲಿ ಹಾನಿ, ಅತಿಯಾದ ಖರ್ಚು, ಋಣ ಬಾಧೆ, ಉದರ ಸಂಬಂಧಿತ ರೋಗ, ವಿವೇಕ ಹೀನತೆ, ಮಾನಸಿಕ ಕ್ಲೇಶ.
ಸಿಂಹ – ಮಾನಸಿಕ ಚಿಂತೆ, ಸ್ವಜನರಿಂದ ವಿರೋಧ, ಶತ್ರುಗಳಿಂದ ಪೀಡೆ, ಆಲಸ್ಯ, ಜಿಗುಪ್ಸೆ, ದುರ್ಜನರ ಸಹವಾಸ, ನೌಕರಿ ಉದ್ಯೋಗದಲ್ಲಿ ಹಿನ್ನಡೆ.
ತುಲಾ – ಶಾರೀರಿಕ ಪೀಡೆ, ಚಿಂತೆ, ಋಣಬಾಧೆ, ವೃಣಗಳಿಂದ ಪೀಡೆ, ಉದ್ಯೋಗದಲ್ಲಿ ಹಾನಿ.
ಕುಂಭ – ಶುಭ ಫಲ, ಕೀರ್ತಿ, ಯಶಸ್ಸು, ಮಾನಸನ್ಮಾನ, ಐಶ್ವರ್ಯ, ವೈಭವ, ಅಧಿಕಾರ ಪ್ರಾಪ್ತಿ, ನೌಕರಿಯಲ್ಲಿ ಸುಖಕರ ಬದಲಾವಣೆ, ದ್ರವ್ಯಲಾಭ.
ಮೀನ – ಬಳಗದವರಿಂದ ಉಪದ್ರವ, ಕೆಲಸಗಳಲ್ಲಿ ವಿಘ್ನಗಳು, ಮೂತ್ರಸಂಬಧಿತ ಪೀಡೆಗಳು, ಧಾರ್ಮಿಕ ಅನಾಸಕ್ತಿ.
ಜನ್ಮ ಕುಂಡಲಿಯಲ್ಲಿ ಮಂಗಳನ ಸ್ಥಿತಿಗತಿಗಳನ್ನು ಹೆಚ್ಚು ವಿಚಾರ ಮಾಡಬೇಕು. ಪ್ರಬಲ ಮತ್ತು ಶುಭ ಮಂಗಳನು ಜಾತಕದಲ್ಲಿ ಇದ್ದರೆ ಅಶುಭ ಫಲದಲ್ಲಿ ಹ್ರಾಸವಾಗುತ್ತದೆ. ಮಂಗಳ ಮಹಾದಶೆ ಮತ್ತು ಅಂತರ್ದಶೆ (ಭುಕ್ತಿ) ನಡೆಯುತ್ತಿರುವ ಜಾತಕರ ಮೇಲೆ ಈ ಗೋಚಾರ ಹೆಚ್ಚು ಫಭಾವ ಬೀರುತ್ತದೆ. ಸಧ್ಯ ಶನಿಯ ಸಾಡೇಸಾತೀ ಮತ್ತು ರಾಹು ಪ್ರಭಾವವಿರುವ ವೃಶ್ಚಿಕ ರಾಶಿಯವರಿಗೆ, ತುಲಾ ರಾಶಿಯವರಿಗೆ ಫಲದಲ್ಲಿ ತೀವ್ರತೆಯಿರುತ್ತದೆ.
ಮೇಲೆ ಹೇಳಿದ ಗೋಚಾರದ ಫಲಾದೇಶ ಸ್ಥೂಲವಾಗಿ ಎಲ್ಲರಿಗೂ ಅನ್ವಯವಾಗುತ್ತದೆ. ಯಾವುದೇ ನಿರ್ದಿಷ್ಟ ಫಲಾದೇಶ ಮತ್ತು ಪರಿಹಾರಕ್ಕಾಗಿ ಜಾತಕವನ್ನು ತೋರಿಸಿ ಉತ್ತಮ ಜ್ಯೋತಿಷ್ಯರಿಂದ ಮಾರ್ಗದರ್ಶನವನ್ನು ಪಡೆಯಬೇಕು. ಮಂಗಳನ ಜೊತೆಗೆ ಅನ್ಯಗ್ರಹಗಳ ಗೋಚಾರವು ನಡೆದಿರುವುದರಿಂದ ಮೇಲೆ ಹೇಳಿದ ಗೋಚಾರದ ಫಲಾದೇಶಗಳಲ್ಲಿ ಬದಲಾವಣೆಗಳು ಉಂಟಾಗಬಹುದು.
ಪರಿಹಾರೋಪಾಯಗಳು -
ಅಶುಭ ಫಲವುಳ್ಳ ರಾಶಿಯವರು ಕುಜ ಗೋಚಾರದ ಕಾಲ ಮುಗಿಯುವವರೆಗೆ (ನೋವೆಂಬರ್ 9) ಯಾವುದೇ ದೊಡ್ಡ ಹಣಕಾಸಿನ ವ್ಯವಹಾರ, ಸಾಲ ತೆಗೆದುಕೊಳ್ಳುವುದು ಕೊಡುವುದನ್ನು ಮಾಡಬಾರದು. ದೊಡ್ಡ ಖರೀದಿಗಳು ಸಹ ಸ್ವಲ್ಪ ದಿವಸ ಬೇಡ. ವಾಹನ ಚಲಿಸುವಾಗ ಜಾಗರೂಕತೆಯಿರಲಿ. ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ, ಯಾರ ಜೋತೆಗೂ ವಾಗ್ದಾನ, ವಾದವಿವಾದ, ಕಲಹಗಳಿಂದ ದೂರವಿಡಿ.
ಅಶುಭ ಫಲವಿರುವ ರಾಶಿಯವರು ಲಕ್ಷ್ಮೀನರಸಿಂಹ ದೇವರು, ದುರ್ಗಾದೇವಿ, ನಾಗ ಮತ್ತು ಸುಬ್ರಹ್ಮಣ್ಯ (ಷಣ್ಮುಖ) ಆರಾಧನೆ, ದರ್ಶನ, ಅಶ್ವತ್ಥ ಪ್ರದಕ್ಷಿಣೆ ಮಾಡಿದರೆ ಪರಿಹಾರ. ಕೆಲವು ಸ್ತೋತ್ರಗಳನ್ನು ಮುಂದಿನ ಲೇಖನಗಳಲ್ಲಿ ಕೊಡಲಿದ್ದೇನೆ, ಪಾರಾಯಣ ಮಾಡಬಹುದು. ಅಂಗಾರಕ ಅಭಿಷೇಕ, ಸ್ತೋತ್ರ, ಜಪ ಮಾಡುವುದರಿಂದಲೂ ಪರಿಹಾರ. ಕುಜ ಸಂತೋಷಕ್ಕೆ ಜಪಸಂಖ್ಯೆಯು 10,000. ಕನಿಷ್ಟ ಪಕ್ಷ ದಿನಕ್ಕೆ 108 ಸಂಖ್ಯೆಯಷ್ಟಾದರೂ ಜಪವನ್ನು ಮಾಡಬಹುದು. ತಾಮ್ರದ ಪಾತ್ರೆ, ಚನ್ನಂಗಿ ಬೇಳೆ, ಬೆಲ್ಲ, ಕೆಂಪು ಬಣ್ಣದ ವಸ್ತ್ರಗಳನ್ನು ದಕ್ಷಿಣಾಸಹಿತ ಸತ್ಪಾತ್ರ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ಅಶುಭ ಫಲ ಪರಿಹಾರ. ಬ್ರಾಹ್ಮಣ ಬ್ರಹ್ಮಚಾರಿಗಳಿಗೆ ವಟುಗಳಿಗೆ ದಾನ ವಿಶೇಷ. ಹವಳವನ್ನು ಸಹ ದಾನಮಾಡಬಹುದು.
ಕುಜ ಗೋಚಾರ ದೋಷ ಪರಿಹಾರಕ್ಕಾಗಿ ಜಪ ಮಂತ್ರ -
ಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿಹಸ್ತಂ ತಂ ಮಂಗಲಂ ಪ್ರಣಮಾಮ್ಯಹಮ್ ||
ಅಥವಾ
ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ ಸದಾ |
ವೃಷ್ಟಿಕೃದ್ ವೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ ||
ಪ್ರತಿನಿತ್ಯ 1000 ಅಥವಾ 108 ಜಪವನ್ನು ಮಾಡುವುದರಿಂದ ಶೀಘ್ರವಾಗಿ ಲಾಭ.
ವೃಶ್ಚಿಕದಲ್ಲಿ ಸಧ್ಯವುಂಟಾಗಿರುವ ಕುಜರಾಹು
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments