ವಾಸಿ ಮತ್ತು ವೇಶಿಯೋಗಗಳ ಸಾಲಿನಲ್ಲಿ ಸೇರುವ ಸೂರ್ಯನಿಂದ ನೋಡಲ್ಪಡುವ ಈ ಯೋಗವು ರಾಜಯೋಗವೆಂದೇ ಜ್ಯೋತಿಷ್ಯ ಗ್ರಂಥಗಳಲ್ಲಿ ಪರಿಗಣಿಸಲ್ಪಟ್ಟಿದೆ. ಇಂದಿನ ಕಾಲದಲ್ಲಿ ರಾಜಾದಿಗಳು ಇಲ್ಲವಾದರು ಮಹಾಜನರೆಂದು, ಪ್ರಭಾವೀ ವ್ಯಕ್ತಿಗಳೆಂದು ಕರೆಯಲ್ಪಡುವ ಅತ್ಯಂತ ಯಶಸ್ವಿ ವ್ಯಕ್ತಿಗಳ ಜಾತಕದಲ್ಲಿ ಈ ಯೋಗವು ಸ್ಪಷ್ಟವಾಗಿ ಕಾಣಸಿಗುತ್ತದೆ. ಈ ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ, ಇವರು ಜನಸಾಮಾನ್ಯರಿಗೆ ಆದರ್ಶಪ್ರಾಯರಾಗಿರುತ್ತಾರೆ.
ರವಿಯ ಇಕ್ಕೆಲಗಳಲ್ಲಿ ಎಂದರೆ ದ್ವಿತೀಯ ಮತ್ತು ದ್ವಾದಶಗಳಲ್ಲಿ ಚಂದ್ರನನ್ನು ಹೊರತುಪಡಿಸಿ ಉಳಿದ ಗ್ರಹಗಳು ಇದ್ದಾಗ ಉಭಯಚರಿ ಯೋಗವೆಂದು ಹೇಳಲಾಗುತ್ತದೆ. ಈ ಉಳಿದಗ್ರಹಗಳು ಶುಭಗ್ರಹಗಳಾಗಿದ್ದರೆ ಶುಭಉಭಯಚರಿ ಯೋಗ, ಪಾಪಗ್ರಹಗಳಾಗಿದ್ದರೆ ಅಶುಭಉಭಯಚರಿ ಯೋಗ ಎರ್ಪಡುತ್ತದೆ.
ಜಾತಕ ಪಾರಿಜಾತ ಮತ್ತು ಫಲದೀಪಿಕಾ ಗ್ರಂಥಗಳು ಈ ಯೋಗವನ್ನು ಸುಂದರವಾಗಿ ವಿವರಿಸುತ್ತವೆ -
ಸೌಮ್ಯಾನ್ವಿತೋಭಯಚಾರಿಪ್ರಭವಾ ನರೇಂದ್ರಾ-
ಸ್ತತ್ತುಲ್ಯವಿತ್ತಸುಖಶೀಲದಯಾನುರಕ್ತಾಃ |
ಪಾಪಾನ್ವಿತೋಭಯಚರೌ ಯದಿ ಪಾಪಕೃತ್ಯಾ
ರೋಗಾಭಿಭೂತಪರಕರ್ಮರತಾ ದರಿದ್ರಾಃ || (ಜಾ.ಪಾ ರಾಜಯೋಗಾಧ್ಯಾಯ-೧೨೪)
ಚಾರ್ವಾಂಗಃ ಪ್ರಿಯವಾಕ್ಪ್ರಪಂಚರಸಿಕೋ ವಾಗ್ಮೀ ಯಶಸ್ವೀ ಧನೀ (ಫ.ದೀ ೬-೯)
ಲೋಕೇ ಸ್ಯಾದಪಕೀರ್ತಿದುಃಖಿತಮನಾ ವಿದ್ಯಾರ್ಥಭಾಗ್ಯೈಶ್ಚ್ಯುತೋ (ಫ-ದೀ ೬-೧೦)
ಶುಭಉಭಯಚರಿಯೋಗಜಾತನು ರಾಜ ಅಥವಾ ರಾಜತುಲ್ಯ (ರಾಜಸಮಾನ), ಧನ, ಸುಖ, ಶೀಲವಂತನು ಅತ್ಯಂತ ದಯಾಲುವು ಆಗಿರುತ್ತಾನೆ. ಅಂತೆಯೇ ಆಕರ್ಷಕ ಅಂಗಾಂಗಗಳುಳ್ಳವನು, ಪ್ರಿಯಭಾಷಿಯು, ಲೋಕರಂಜಕವಾಗಿ ಮಾತನಾಡುವವನು, ಉತ್ತಮ ಮಾತುಗಾರನು, ಯಶಸ್ವಿಯು ಮತ್ತು ಧನವಂತನು ಆಗಿರುತ್ತಾನೆ.
ಅಶುಭಉಭಯಚರಿಯೋಗಜಾತನು ಮೇಲ್ಕಂಡ ಗ್ರಂಥಗಳ ಪ್ರಕಾರ ಸದಾ ಪಾಪಕರ್ಮಗಳಲ್ಲಿ ನಿರತನು, ರೋಗಿಯು, ದಾಸ್ಯವೃತ್ತಿಯಿಂದ ಜೀವಿಸುವವನು ಮತ್ತು ದರಿದ್ರನು ಆಗುತ್ತಾನೆ. ಹಾಗು ಲೋಕದಲ್ಲಿ ಅಪಕೀರ್ತಿಯನ್ನು ಹೊಂದುವವನು, ವಿದ್ಯೆ, ಭಾಗ್ಯ ಮತ್ತು ಧನರಹಿತನು ಆಗುತ್ತಾನೆ. ಈ ರೀತಿಯ ಅಶುಭಯೋಗವುಳ್ಳ ಜಾತಕರು ಯೋಗನಿಮಿತ್ತಕರಾದ ಗ್ರಹಗಳನ್ನು ಪ್ರೀತಿಪಡಿಸುವುದರಿಂದ ಸನ್ಮಾರ್ಗಿಗಳಾಗಬಹುದು.
ಮೇಲಿನ ಶ್ಲೋಕದಲ್ಲಿ ಈ ಯೋಗದ ಜಾತಕರನ್ನು ಪ್ರಿಯವಾಕ್ (ಪ್ರಿಯವಾದ ಮಾತುಗಳನ್ನು ಆಡುವವರು), ಪ್ರಪಂಚರಸಿಕ (ಲೋಕದ ಜನರನ್ನು ರಂಜಿಸುವವರು) ಮತ್ತು ವಾಗ್ಮೀ (ಶ್ರೇಷ್ಠ ಮಾತುಗಾರನು) ಎಂದು ಮಾತುಗಾರಿಕೆಯ ಕಲೆಯನ್ನು ಇವರಲ್ಲಿ ವಿಶೇಷವಾಗಿ ಪ್ರಶಂಸಿಲಲಾಗಿದೆ. ಇಂಥಹ ಶುಭಯೋಗವುಳ್ಳವರು ಈ ಗುಣಗಳಿಗೆ ಯುಕ್ತವಾದ ಉದ್ಯೋಗ, ವೃತ್ತಿಯನ್ನು ಅನುಸರಿಸಿದರೆ ಯಶಸ್ಸು ಖಂಡಿತವಾಗಿ ಲಭಿಸುತ್ತದೆ.
ಜ್ಯೋತಿಷ್ಯದಲ್ಲಿ ಯೋಗಗಳು ಹೇರಳವಾಗಿವೆ. ಅನೇಕ ಯೋಗಗಳನ್ನು ಜಾತಕದಲ್ಲಿ ಗುರುತಿಸಿಕೊಂಡು ಸದುಪಯೋಗವನ್ನು ಪಡೆಯಬಹುದಾಗಿದೆ. ಆದರೆ ಇವತ್ತು ಇಂಥಹ ಉಪಯುಕ್ತ ಅಂಶಗಳ ಬಗೆಗೆ ಗಮನಕೊಡದೆ ಜ್ಯೋತಿಷ್ಯವನ್ನು ಕೇವಲ ಭಯಹುಟ್ಟಿಸುವ ಶಾಸ್ತ್ರವೆಂಬಂತೆ ಬಳಸಲಾಗುತ್ತಿದೆ. ಜಾತಕವನ್ನು ಕೇಳಲು ಬಂದವರು ಮೊದಲೇ ಗೊಂದಲದಲ್ಲಿರುತ್ತಾರೆ, ಅಂತವರಿಗೆ ಕಾಳಸರ್ಪಯೋಗ, ಪಂಚಮಾರಿಷ್ಟ, ಕುಜರಾಹು, ನಕ್ಷತ್ರದೋಷ, ಪಿತೃದೋಷ, ಮಾಟ ಮೊದಲಾದವುಗಳನ್ನು ಥಟ್ಟನೆ ಹೇಳಿ ಮತ್ತಷ್ಟು ಕಂಗೆಡಿಸಲಾಗುತ್ತದೆ. ಬರೀ ಶಾಂತಿಕರ್ಮ ಮತ್ತು ಉಪಾಯಗಳನ್ನು ಮಾಡಿಸಿಕೊಳ್ಳುವುದರಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತಿದ್ದರೆ, ಯಾರಿಗೂ ದುಃಖ, ಕಷ್ಟಗಳು ಬರುತ್ತಲೇ ಇರಲಿಲ್ಲ. ನಮಗೆ ಸಮಸ್ಯೆಗಳು ಎಕೆ ಬರುತ್ತಲಿವೆ ಎಂದು ಮೂಲಶೋಧನೆಯನ್ನು ಪ್ರತಿಯೊಬ್ಬರು ಮಾಡಬೇಕು. ಇವತ್ತು ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಆವಶ್ಯಕತೆ ಎಂದಿಗಿಂತ ಹೆಚ್ಚಾಗಿದೆ. ಜೀವನದಲ್ಲಿ ಶಿಸ್ತು, ದೇವರಲ್ಲಿ ಭಕ್ತಿ, ಧಾರ್ಮಿಕತೆಗಳು ಮಾತ್ರ ಉದ್ಧಾರಕ್ಕೆ ಮೂಲ ಸಾಧನಗಳಾಗಿವೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments