ಜಾತಕನ ಕುಂಡಲಿಯಲ್ಲಿ ಗುರು ಮತ್ತು ಚಂದ್ರ ಒಂದೇ ಸ್ಥಾನದಲ್ಲಿದ್ದರೆ ಅಥವಾ ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರು ಗ್ರಹವಿದ್ದರೆ ಅಂತಹ ಜಾತಕನಿಗೆ ಗಜಕೇಸರಿ ಯೋಗವಿದೆ ಎನ್ನುತ್ತಾರೆ. ಇದನ್ನು ಕೆಲವೊಮ್ಮೆ ಕೇಸರಿ ಯೋಗ ಎಂದೂ ಕರೆಯುತ್ತಾರೆ. ಕುಂಡಲಿಯ ಲಗ್ನ ಭಾವದಿಂದ 1, 4, 7 ಮತ್ತು 10ನೇ ಸ್ಥಾನಗಳನ್ನು ಚಂದ್ರ ಕೇಂದ್ರಸ್ಥಾನಗಳೆನ್ನುತ್ತಾರೆ.
ಗುರು ಗ್ರಹವು ಐಶ್ವರ್ಯ, ಜ್ಞಾನ, ಜನಪ್ರಿಯತೆ, ಅದೃಷ್ಟ ಮತ್ತು ಸಂತಾನ ಭಾಗ್ಯದ ಸಂಕೇತವಾಗಿದೆ. ಚಂದ್ರನು ಮನೋಕಾರಕ, ಮೃದುಭಾಷಿ, ಸಂವಾಹಕ, ಸಂತೋಷ ಮತ್ತು ಅಭಿವೃದ್ಧಿಯ ಸಂಕೇತನಾಗಿದ್ದಾನೆ. ಆ ಕಾರಣದಿಂದಲೇ ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರುವಿನ ಇರುವಿಕೆಗೆ ವಿಶೇಷ ಗಮನವನ್ನು ನಮ್ಮ ಪ್ರಾಚೀನರು ಕೊಟ್ಟಿದ್ದಾರೆ.
ಜಾತಕದಲ್ಲಿ ಗಜಕೇಸರಿ ಯೋಗವು ಶ್ರೇಯಸ್ಸನ್ನು, ಜೀವನದಲ್ಲಿ ಅಭಿವೃದ್ಧಿಯನ್ನು ಸೂಚಿಸುತ್ತದೆ. ಅಂತಹವರು ಉತ್ತಮ ಆದಾಯ ಗಳಿಸುತ್ತಾರೆ. ದೀರ್ಘಾಯುಷ್ಯ ಉಳ್ಳವರಾಗಿರುತ್ತಾರೆ. ಅಷ್ಟೇ ಅಲ್ಲ, ಸಾಮಾಜಿಕ ಜೀವನದಲ್ಲಿ ಪ್ರತಿಷ್ಠೆ, ಗೌರವವನ್ನು ಪಡೆಯುತ್ತಾರೆ. ಜೀವನದಲ್ಲಿ ಎದುರಾಗುವ ಅಡಚಣೆಗಳನ್ನು ನಿವಾರಿಸಿಕೊಂಡು ಉತ್ತಮ ಜೀವನ ನಡೆಸುತ್ತಾರೆ.
ವೇದಿಕ್ ಅಸ್ಟ್ರಾಲಜಿ ಪ್ರಕಾರ ಗಜಕೇಸರಿ ಯೋಗವು ಅತ್ಯಂತ ಶ್ರೇಷ್ಠ ಯೋಗವಾಗಿದೆ. ಆನೆ (ಗಜ) ಮತ್ತು ಸಿಂಹ (ಕೇಸರಿ) ಎರಡೂ ಬಲಿಷ್ಠ ಪ್ರಾಣಿಗಳು. ತಮ್ಮ ನಡೆ, ನುಡಿಗಳಿಂದ ಬೇರೆ ಪ್ರಾಣಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಪರಾಶರ ಮುನಿಗಳು ಹೇಳುವಂತೆ, ಗಜಕೇಸರಿ ಯೋಗವುಳ್ಳ ಜಾತಕನು ಅಧಿಕ ಸಾಮರ್ಥ್ಯ ಉಳ್ಳವನಾಗಿರುತ್ತಾನೆ, ಐಷಾರಾಮಿ ಜೀವನವನ್ನು ನಡೆಸುತ್ತಾನೆ. ತನ್ನ ವೃತ್ತಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ. ಉತ್ತಮ ವಾಚಾಳಿಯೂ, ಕ್ರಿಯಾತ್ಮಕ ಚಟುವಟಿಕೆ, ವಾದಗಳಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಸ್ವಭಾವತಃ ಬುದ್ಧಿವಂತರಾಗಿರುತ್ತಾನೆ.
ಆನೆಯು ಸ್ವಭಾವತಃ ಬುದ್ಧಿವಂತ ಪ್ರಾಣಿ. ಅದರ ಶಿರ (ತಲೆ) ಮುತ್ಸುದ್ಧಿತನದ ಸಂಕೇತ. ಆ ಕಾರಣದಿಂದಲೇ ಕರಿಮುಖ (ಆನೆಯ ಮುಖ ಹೊತ್ತ ಗಣಪ) ಜ್ಞಾನ ಪ್ರದಾಯಕ. ಆದರೆ ಇಲ್ಲೊಂದು ಅಂಶವನ್ನು ಗಮನಿಸಬೇಕು. ಹೇಗೆ ಗಜ ಗಾಂಭೀರ್ಯಕ್ಕೆ ಹೆಸರಾಗಿದ್ದರೂ, ತನ್ನ ಸಾಮರ್ಥ್ಯವನ್ನು ಕಂಡು ಬೀಗುವುದಿಲ್ಲವೋ ಹಾಗೆ, ಗಜಕೇಸರಿ ಯೋಗವುಳ್ಳವರು ಸ್ವಭಾವತಃ ಪ್ರಭಾವಶಾಲಿಗಳಾಗಿದ್ದರೂ ಅಹಂಕಾರ ಪಡುವುದಿಲ್ಲ. ಸ್ವಪ್ರತಿಷ್ಠೆಯನ್ನು ಮೆರೆಯುವುದಿಲ್ಲ. ಅವರಿಗೆ ತಮ್ಮ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಅರಿವು ಇರುತ್ತದೆ.
ಗಜಕೇಸರಿ ಯೋಗವು ಸಾಮಾನ್ಯವಾಗಿ ಶೇ. 20 ರಿಂದ 33ರಷ್ಟು ಜನರ ಕುಂಡಲಿಯಲ್ಲಿ ಕಂಡು ಬರುತ್ತದೆ ಎನ್ನುವ ಲೆಕ್ಕಾಚಾರವೂ ಇದೆ. ಆದರೆ ಗ್ರಹಸ್ಥಾನಗಳನ್ನು ಆಧರಿಸಿ ಯೋಗದ ಅವಧಿಯನ್ನು ತೀರ್ಮಾನಿಸುತ್ತಾರೆ.
ಧನಯೋಗ ಮತ್ತು ಗಜಯೋಗ
ಗುರು ಮತ್ತು ಚಂದ್ರ ಗ್ರಹವು ಐಶ್ವರ್ಯ, ಅಭಿವೃದ್ಧಿಯ ಸಂಕೇತವಾಗಿರುವುದರಿಂದ ಈ ಯೋಗವಿರುವ ಜಾತಕನು ಐಷಾರಾಮಿ ಜೀವನವನ್ನು ನಡೆಸುತ್ತಾನೆ. ಸಾಕಷ್ಟು ಹಣ ಗಳಿಸುವ ಅವಕಾಶವು ಅವನಿಗೆ ಬಂದೊದಗುತ್ತದೆ.
ಉನ್ನತ ಹುದ್ದೆ
ಸಿಂಹ ಮೃಗ ರಾಜನಾದರೆ, ಆನೆ ವನರಾಜ. ಅಂದರೆ ಗಜಕೇಸರಿ ಯೋಗವುಳ್ಳವರಿಗೆ ರಾಜನಾಗುವ ಯೋಗವಿರುತ್ತದೆ ಎಂದಾಗುತ್ತದೆ. ಹಾಗೆಂದೇ ಈ ಯೋಗವುಳ್ಳವರು ತಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ ಎನ್ನುವ ಅಭಿಪ್ರಾಯವಿದೆ.
ಬುಧನ ಪ್ರಭಾವ
ಜಾತಕನ ಕುಂಡಲಿಯಲ್ಲಿರುವ ಚಂದ್ರನ ಕೇಂದ್ರ ಸ್ಥಾನದ ಮನೆಯಲ್ಲಿ ಬುಧ ಗ್ರಹವಿದ್ದರೆ ಗಜಕೇಸರಿ ಯೋಗದ ಪ್ರಭಾವ ಹೆಚ್ಚುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಅಂತಹ ಅಭಿಪ್ರಾಯಗಳು ಸರ್ವತಾ ಸತ್ಯ ಎಂದು ಹೇಳಲಿಕ್ಕೆ ಆಗುವುದಿಲ್ಲ. ಕಾರಣ ಶೇ. 90ರಷ್ಟು ಕುಂಡಲಿಗಳಲ್ಲಿ ಅಂತಹ ಭಾವ ಕಂಡು ಬರುತ್ತದೆ. ಮತ್ತೊಂದು ನಂಬಿಕೆಯಂತೆ, ಶುಕ್ರ ಗ್ರಹವೇನಾದರೂ ಲಗ್ನ ಭಾವದಿಂದ ಆರು ಮತ್ತು ಎಂಟನೆಯ ಮನೆಯಲ್ಲಿದ್ದರೆ ಅಂತಹ ಜಾತಕನಿಗೆ ಗಜಕೇಸರಿ ಯೋಗವಿದ್ದರೂ ನಿಷ್ಪ್ರಯೋಜನವಾಗುತ್ತದೆ.
ಮಾಹಿತಿ ನೀಡುವ ಜನ್ಮ ಕುಂಡಲಿ ಎ.ಎನ್.ರಾಮಮೂರ್ತಿ
ವ್ಯಕ್ತಿಯ ಹುಟ್ಟಿದ ದಿನಾಂಕ, ಸಮಯ, ಸ್ಥಳದ ಆಧಾರದ ಮೇಲೆ ಸಿದ್ಧಪಡಿಸುವ ಜಾತಕ ಕುಂಡಲಿಯಲ್ಲಿ 12 ಮನೆಗಳು ಇರುತ್ತವೆ.
ಜಾತಕ ಕುಂಡಲಿಯಲ್ಲಿರುವ 12 ಮನೆಗಳಿಂದ ಪ್ರತಿಯೊಂದು ಮನೆಯಿಂದಲೂ ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಆತ ಜೀವಿಸಿರುವವರೆಗೆ ಯಾವ ವಿಷಯದಲ್ಲಿ ಎಂಥ ಅನುಭವ ಉಂಟಾಗುವುದು ಎಂಬ ಮಾಹಿತಿ ತಿಳಿಯಲು ಸಾಧ್ಯವಾಗುತ್ತದೆ.
*1 ನೇ ಮನೆಯನ್ನು ಲಗ್ನವೆಂದು ಪರಿಗಣಿಸಲಾಗುವುದು. ಇದರಿಂದ ವ್ಯಕ್ತಿಯ ಗುಣ ಸ್ವಭಾವ, ದೈಹಿಕ ಲಕ್ಷಣಗಳು, ಬಣ್ಣ, ಲುಕ್, ದೈಹಿಕವಾಗಿ ಸದೃಢನೋ ಅಲ್ಲವೋ ಮುಂತಾದ ವಿಷಯಗಳನ್ನು ತಿಳಿಯಬಹುದು.
*2ನೇ ಮನೆಯಿಂದ ವ್ಯಕ್ತಿಯ ವಿದ್ಯೆ, ಹಣಕಾಸು, ಕಣ್ಣು, ಮುಖಭಾವ, ಹಲ್ಲು ಮುಂತಾದವುಗಳನ್ನು ತಿಳಿಯಬಹುದು. ಹಣದ ವಿಚಾರದಲ್ಲಿ ಹಣ ಗಳಿಸುವ ಅಥವಾ ನಷ್ಟವಾಗುವ ಸಾಧ್ಯತೆ ಇದೆಯಾ, ಹಾಗಿದ್ದರೆ ಆ ಸಮಯ ಯಾವಾಗ, ಯಾವ ಕೆಲಸದಲ್ಲಿ ಹಣ ತೊಡಗಿಸಬೇಕು, ತೊಡಗಿಸಬಾರದು, ಹಣ ಸಂಪಾದನೆಯ ಮೂಲವೇನು ಮುಂತಾದವುಗಳನ್ನು ತಿಳಿಯಬಹುದು.
*3ನೇ ಮನೆಯಿಂದ ಸೋದರ, ಸೋದರಿಯರ ಬಾಂಧವ್ಯ ಹೇಗಿರುತ್ತದೆ, ಅವರು ಶತ್ರುಗಳಾಗುತ್ತಾರೋ ಅಥವಾ ಒಳ್ಳೆಯವರಾಗಿರುತ್ತಾರೋ, ವ್ಯಕ್ತಿಯ ಧೈರ್ಯ ಸಾಹಸ, ತೀರ್ಥಯಾತ್ರೆ, ಪ್ರವಾಸ ಮುಂತಾದ ವಿಷಯಗಳನ್ನು ತಿಳಿಯಬಹುದು.
*4 ನೇ ಮನೆಯಿಂದ ತಾಯಿ, ಆಸ್ತಿ, ವಾಹನ, ಸಂಸಾರ ಸುಖ, ವಿದ್ಯೆಯ ಗುಣಮಟ್ಟ ಮೊದಲಾದ ವಿಷಯಗಳನ್ನು ತಿಳಿಯಬಹುದು. ಜತೆಗೆ ವ್ಯಕ್ತಿಯ ಜೀವನದಲ್ಲಿ ಆಸ್ತಿ, ವಾಹನ ಖರೀದಿಸುವ ಯೋಗ ಇದೆಯೇ, ಇಲ್ಲವೇ, ಆಸ್ತಿ ಗಳಿಸುವ ಸಾಧ್ಯತೆ ಅಥವಾ ಕಳೆದುಕೊಳ್ಳುವ ಸಾಧ್ಯತೆ ಇದೆಯೇ, ವ್ಯಕ್ತಿಯ ಜೀವನ ಸುಖಮಯವಾಗಿರುತ್ತದೆಯೇ ಎಂಬುದು ತಿಳಿದು ಬರುತ್ತದೆ.
*5ನೇ ಮನೆಯಿಂದ ಬುದ್ಧಿ ಸ್ಥಾನ, ಪೂರ್ವ ಪುಣ್ಯ, ಮಕ್ಕಳ ಭಾಗ್ಯ, ದೇವರು, ನಂಬಿಕೆ ಮುಂತಾದ ವಿಷಯಗಳನ್ನು ತಿಳಿಯಬಹುದು. ವ್ಯಕ್ತಿಯ ಬುದ್ಧಿ ಹೇಗೆ ಕೆಲಸ ಮಾಡುತ್ತದೆ, ಒಳ್ಳೆಯ ಆಲೋಚನೆ ಅಥವಾ ಕೆಟ್ಟ ಆಲೋಚನೆ, ವ್ಯಕ್ತಿಗೆ ಮಕ್ಕಳ ಭಾಗ್ಯ ಇದೆಯೇ, ಇಲ್ಲವೇ, ವ್ಯಕ್ತಿಯು ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಎಂಬ ವಿಷಯ ಗೊತ್ತಾಗುತ್ತದೆ.
*6 ನೇ ಮನೆಯಿಂದ ಮಿತ್ರರು ಅಥವಾ ಶತ್ರುಗಳು ಇರುತ್ತಾರೋ, ಶತ್ರುಗಳನ್ನು ಜಯಿಸುತ್ತಾರೋ ಇಲ್ಲವೋ, ರೋಗ, ರುಜಿನ, ಸಾಲ, ಋಣ ಬಾಧೆಗಳು ಮುಂತಾದ ವಿಷಯ ತಿಳಿಯಬಹುದು.
*7ನೇ ಮನೆಯಿಂದ ವೈವಾಹಿಕ ಜೀವನ ಹೇಗಿರುತ್ತದೆ, ಸುಖವೋ, ದುಃಖವೋ ಒಂದಕ್ಕಿಂತ ಹೆಚ್ಚು ಮದುವೆ ಇದೆಯೇ, ಪ್ರೇಮ ವಿವಾಹವೇ ಅಥವಾ ಹಿರಿಯರು ನೋಡಿದ ಸಂಬಂಧದ ವಿವಾಹವೇ, ವಿಚ್ಛೇದನ ಇದ್ದರೆ ಯಾವಾಗ, ಮದುವೆಗೆ ಸೂಕ್ತ ಸಮಯ ಯಾವಾಗ, ಸಂಗಾತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆಯೇ ಎಂಬುದು ಗೊತ್ತಾಗುತ್ತದೆ.
*8 ನೇ ಮನೆಯಿಂದ ವ್ಯಕ್ತಿಯ ಸಾವು ಯಾವ ರೀತಿಯದ್ದಾಗಿರುತ್ತದೆ, ಸಹಜವಾದುದೇ ಅಥವಾ ಅಸಹಜವಾದುದೇ, ವ್ಯಕ್ತಿಗೆ ವಾಹನ ಅಪಘಾತ ಇದೆಯೇ, ಅಪಘಾತದ ಸಮಯ, ವ್ಯಕ್ತಿಯ ಆಯಸ್ಸು, ಅಲ್ಪಾವಧಿಯೇ, ಮಧ್ಯಮವೇ ಅಥವಾ ದೀರ್ಘಾಯುಷ್ಯವೇ ಮುಂತಾದ ವಿಷಯ ತಿಳಿಯಬಹುದು.
*9ನೇ ಮನೆಯಿಂದ ವ್ಯಕ್ತಿಯು ಅದೃಷ್ಟವಂತನೋ, ದುರಾದೃಷ್ಟವಂತನೋ, ತಂದೆಯ ಸ್ಥಾನಮಾನ, ಭಾಂದವ್ಯ, ಪಿತೃ ದೇವತೆಗಳ ಆಶೀರ್ವಾದ ಇದೆಯೋ ಇಲ್ಲವೋ, ಹೊರ ದೇಶದ ಅವಕಾಶಗಳು ಹೇಗಿದೆ, ಹೊರ ದೇಶಕ್ಕೆ ಹೋದರೆ ಒಳ್ಳೆಯದು ಇದೆಯೇ, ಇಲ್ಲವೇ ತೊಂದರೆ ಇದೆಯಾ ಮುಂತಾದ ವಿಷಯ ತಿಳಿಯಬಹುದು.
*10 ನೇ ಮನೆಯಿಂದ ವ್ಯಕ್ತಿಯ ಉದ್ಯೋಗ ಸ್ಥಾನಮಾನ ಸ್ವಂತ ಉದ್ಯೋಗ, ಸರಕಾರಿ, ಖಾಸಗಿ ಉದ್ಯೋಗವೇ, ವ್ಯಕ್ತಿಗೆ ಉದ್ಯೋಗದಲ್ಲಿ ಒಳ್ಳೆಯ ಹೆಸರು ಅಥವಾ ಕೆಟ್ಟ ಹೆಸರು ಬರುವುದೋ, ಇದು ಕರ್ಮ ಸ್ಥಾನವೋ, ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡುವನೋ ಮುಂತಾದ ವಿಷಯ ತಿಳಿಯಬಹುದು.
*11 ನೇ ಮನೆಯಿಂದ ವ್ಯಕ್ತಿ ಜೀವನದ ಆಸೆಗಳು ಪೂರ್ಣವಾಗುತ್ತದೆಯೇ ಇಲ್ಲವೇ, ಯಾವ ವಿಷಯದಲ್ಲಿ ಲಾಭ ಗಳಿಸುತ್ತಾನೆ ಮುಂತಾದ ವಿಷಯ ತಿಳಿಯಬಹುದು.
*12 ನೇ ಮನೆಯಿಂದ ವ್ಯಕ್ತಿಯ ಅಂತ್ಯ ಹೇಗಿರುತ್ತದೆ, ಮುಂದಿನ ಜನ್ಮ ಯಾವ ರೀತಿ ಇರುತ್ತದೆ. ಜೀವನದಲ್ಲಿ ಯಾವ ರೀತಿ ನಷ್ಟಗಳನ್ನು ಅನುಭವಿಸುತ್ತಾನೆ ಮೊದಲಾದ ವಿಷಯಗಳನ್ನು ತಿಳಿದುಕೊಳ್ಳಬಹುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments