Skip to main content

ಪಂಚಾಂಗ ಪರಿಚಯ – ದಿವಸಗಳು

ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವನ್ನು ನಾವು “ಹಗಲು” ಎಂತಲೂ, ಮತ್ತು ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲವನ್ನು “ರಾತ್ರಿ” ಎಂತಲೂ ಕರೆಯುತ್ತೆವೆ. ಹಗಲು ಮತ್ತು ರಾತ್ರಿಗಳನ್ನು ಸೇರಿಸಿ ಒಂದು ದಿನ ಅಥವಾ ದಿವಸ ಎಂದು ಕರೆಯುತ್ತೆವೆ. ಹಗಲಿನ ಪ್ರಮಾಣವನ್ನು “ದಿನಮಾನ” ಎಂತಲೂ, ರಾತ್ರಿಯ ಪ್ರಮಾಣವನ್ನು “ರಾತ್ರಿಮಾನ” ಎಂತಲೂ ಕರೆಯಲಾಗಿದೆ. ಆಯನಗತಿಯ ಪ್ರಭಾವದಿಂದ ಈ ದಿನಮಾನ – ರಾತ್ರಿಮನಗಳ ಪ್ರಮಾಣ ಸಮಾನವಾಗಿರದೆ, ಬದಲಾಗುತ್ತಲಿರುತ್ತದೆ. ದಿನಮಾನ ವಿಷಯವನ್ನು ಮುಂದೆ ವಿಷದವಾಗಿ ಹೇಳಲಿದ್ದೆನೆ. ಧರ್ಮಾಚರಣೆಗಳಿಗೆ ಅನುಗುಣವಾಗಿ ದಿವಸ ಅಥವಾ ದಿನ ಶಬ್ದವನ್ನು ವ್ಯವಹಾರಿಕವಾಗಿ ಎರಡು ಅರ್ಥಗಳಲ್ಲಿ ಬಳಸಲಾಗುತ್ತದೆ. ಮೊದಲನೇಯದಾಗಿ ದಿವಸವನ್ನು ಹಗಲು ಎಂಬರ್ಥದಲ್ಲಿ ಉಪಯೋಗಿಸಲಾಗುತ್ತದೆ. ಎರಡನೇಯದಾಗಿ ಹಗಲು ಮತ್ತು ರಾತ್ರಿ ಸೇರಿ ಆಗುವ ೨೪ ಘಂಟೆಗಳ ಕಾಲಾವಧಿಯನ್ನು ಸಹ ದಿವಸವೆಂದೆ ಕರೆಯಲಾಗುತ್ತದೆ. ಇದಕ್ಕೆ ಜ್ಯೋತಿಷ್ಯದಲ್ಲಿ “ಅಹೋರಾತ್ರ” ಎಂದು ಕರೆಯಲಾಗಿದೆ. ಪಂಚಾಂಗಗಣಿತದ ಪ್ರಕಾರ ನಲ್ಕು ಪ್ರಕಾರದ ದಿವಸಗಳಿವೆ. ಚಾಂದ್ರ ದಿವಸ, ಸಾವನ ದಿವಸ, ಸೌರ ದಿವಸ, ನಾಕ್ಷತ್ರ ದಿವಸ. (೧) ಚಾಂದ್ರ ದಿವಸ (Lunar Day) – ಪಂಚಾಂಗದಲ್ಲಿ ಮೊದಲನೇಯ ಅಂಗವಾದ “ತಿಥಿ”ಯೇ ಚಾಂದ್ರ ದಿವಸವಾಗಿದೆ. ಇದು ಸೂರ್ಯ-ಚಂದ್ರರ ಗತಿಗಳನ್ನು ಅನುಸರಿಸುತ್ತದೆ. ಇದರ ಗಣಿತವನ್ನು ಮುಂದೆ ತಿಥಿಯ ಬಗ್ಗೆ ಹೇಳುವಾಗ ವಿಷದೀಕರಿಸುತ್ತೆನೆ. (೨) ಸಾವನ ದಿವಸ (Civil Day) – ಎರಡು ಅನುಗತ ಸೂರ್ಯೋದಯಗಳ ಮಧ್ಯದ ಕಾಲಾವಧಿಯು ಒಂದು ಸಾವನ ದಿವಸ. ದಿನಮಾನದ ಹಾಗೆ ಇದೂ ಸಹ ವ್ಯತ್ಯಾಸವಾಗುತ್ತಿರುತ್ತದೆ. ಇದನ್ನು “ಮೇದಿನಿ ದಿವಸ” ಎಂತಲೂ ಕರೆಯುತ್ತಾರೆ. (೩) ಸೌರ ದಿವಸ (Solar Day) – ಇದು ಕಾಂತಿವೃತ್ತದಲ್ಲಿ ಸೂರ್ಯನ ಚಲನೆಗೆ ಸಂಬಂಧಿಸಿದಂತೆ ಇರುತ್ತದೆ. ಭೂಮಿಯ ಮೇಲಿನ ವೀಕ್ಷಕನಿಗೆ ಅನುಗುಣವಾಗಿ ಸೂರ್ಯನ ಪಥವೆ “ಕಾಂತಿವೃತ್ತ” ಅಥವಾ “ಅಪಾಮಂಡಲ”. ಕಾಂತಿವೃತ್ತವು ಹೆಸರೇ ಸೂಚಿಸುವಂತೆ ೩೬೦ ಅಂಶಗಳಷ್ಟಿರುತ್ತದೆ. ಈ ಕಾಂತಿವೃತ್ತದಲ್ಲಿ ೧ ಅಂಶ (೧ ಡಿಗ್ರಿ) ಚಲಿಸಲು ಸೂರ್ಯನಿಗೆ ಸಂದುವ ಅವಧಿಯೇ ಒಂದು ಸೌರ ದಿವಸ. (೪) ನಾಕ್ಷತ್ರ ದಿವಸ (Sidereal Day) – ಯಾವುದೇ ನಕ್ಷತ್ರ ಅಥವಾ ಗ್ರಹ ಅಥವಾ ಕೇವಲ ಒಂದು ಬಿಂದು, ನಕ್ಷತ್ರ ಚಕ್ರವನ್ನು ಒಂದು ಸಾರಿ ಸುತ್ತಲು ತಗಲುವ ಸಮಯ. ಇದು ಭುಮಿಯ ಮೇಲೆ ನಕ್ಷತ್ರ ಚಕ್ರಗತಿಗೆ ಅನುಗುಣವಾಗಿರುತ್ತದೆ (ಇದರ ವಿಷದೀಕರಣ ಮುಂದೆ ಮಾಡುತ್ತೆನೆ) . ಇದು ೨೩ಗಂಟೆ ೫೬ನಿಮಿಷ ೪.೦೯ಸೆಕೆಂಡುಗಳಷ್ಟು ಸರಾಸರಿಯಾಗಿರುತ್ತದೆ. ಒಂದು ದಿವಸವು ೨೪ಗಂಟೆ(ಹೋರಾ)ಯದ್ದಾಗಿರುತ್ತದೆ. ಭಾರತೀಯ ಕಾಲಗಣನೆಯಲ್ಲಿ ಒಂದು ದಿವಸವು ೬೦ಘಟಿ ಅಥವಾ ಘಳಿಗೆಯಾಗಿರುತ್ತದೆ. ಒಂದು ದಿನವನ್ನು ೬೦ಭಾಗಗಳಾಗಿ ಮಾಡಿ ಗಣಿತಹಾಕುವ ಪ್ರಾಚೀನ ಪ್ರಕಾರವಿದು. ಒಂದು ಘಟಿಯು ಮತ್ತೆ ೬೦ವಿಘಟಿಯಷ್ಟಾಗಿರುತ್ತದೆ. ೬೦ ಘಟಿ = ೨೪ ಗಂಟೆಗಳು ೨^೧/೨ ಘಟಿ (೨.೫ ಘಟಿ) = ೧ ಗಂಟೆ ೧ ಘಟಿ = ೨೪ ನಿಮಿಷ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...