Skip to main content

ವಾಸಿ ಮತ್ತು ವೇಶಿಯೋಗಗಳು – ಭಾಗ ೧

ನಾವು ಜ್ಯೋತಿಷಿಗಳ ಹತ್ತಿರ ಹೋದಾಗ ರಾಜಯೋಗ, ವಿಪರೀತ ರಾಜಯೋಗ, ಮೃತ್ಯುಯೋಗ, ಷಡಷ್ಟಕ ಯೋಗ, ಕಾಳಸರ್ಪ ಯೋಗ ಇತ್ಯಾದಿ ಅನೇಕ ಭಯಜನಕ ಯೋಗನಾಮಗಳನ್ನು ಕೇಳುತ್ತೇವೆ. ಆದರೆ ಈ ಭಯ ಹುಟ್ಟಿಸುವ ಯೋಗಗಳ ಗುರಿ ಭಯಜನಕ ಯೋಗಗಳಾಗಿ ಮಾತ್ರ, ಜೀವಮಾನದ ಕೇವಲ ಕೆಲವು ಸಂದರ್ಭ ಅಥವಾ ಕಾಲಖಂಡಗಳಲ್ಲಿ ಅವುಗಳು ಅನುಭವಕ್ಕೆ ಬರುತ್ತವೆ. ಇದರರ್ಥ ಇವು ನಿರರ್ಥಕ ಅಥವಾ ಉಪೇಕ್ಷಣೀಯವೆಂದು ಸರ್ವಥಾ ಅಲ್ಲ, ಇಂಥ ಯೋಗಗಳಿದ್ದಾಗ ಸೂಕ್ತ ಉಪಾಯ ಅಗತ್ಯ. ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿವೆ, ಕೆಲವು ಜಾತಕದಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸತಕ್ಕಂಥವು. ಇವುಗಳ ಪ್ರಾಮುಖ್ಯತೆ ಎಷ್ಟೆಂದರೆ ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಇವುಗಳ ಪ್ರಭಾವ-ಫಲಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಆಯುರ್ಮಾನವಿಡೀ ಇವುಗಳ ಪ್ರಭಾವ. ಇವು ದೋಷಗಳಲ್ಲ, ಆದ್ದರಿಂದ ಯಾವುದೇ ಪ್ರಾಯಶ್ಚಿತ್ತ, ಶಾಂತಿಕರ್ಮಗಳ ಅವಶ್ಯಕತೆಯೂ ಇಲ್ಲ. ಆದರೆ ಈ ಯೋಗಗಳನ್ನು ಗುರುತಿಸಿಕೊಂಡು ಇವುಗಳಿಂದ ಆಗುವ ಫಲಾಫಲಗಳನ್ನು ಅರಿತು ನಾವು ನಮ್ಮ ಜೀವನದ ಪ್ರತಿಯೊಂದು ಕೆಲಸ ಕಲಾಪಗಳಲ್ಲಿ ಮಾರ್ಗದರ್ಶಕಗಳಾಗಿ ಇವುಗಳನ್ನು ಬಳಸಿಕೊಳ್ಳಬಹುದು. ಇವತ್ತಿನ ಪ್ರಾಯಃ ಅನೇಕ ಜ್ಯೋತಿಷ್ಯರು ಇಂಥ ಉಪಯುಕ್ತ, ಸಹಾಯಕ ಯೋಗಗಳ ಬಗ್ಗೆ ತಾಳಿರುವ ನಿರ್ಲಕ್ಷ ವಿಚಿತ್ರವಾದದ್ದು (ಬೆದರಿಕೆ ಯೋಗ ಹೇಳಿ ಹೇಳಿ ಅಭ್ಯಾಸವಾಗಿದ್ದಿರಬಹುದೇನೋ!). ಇಂಥಹ ಕೆಲವು ಯೋಗಗಳನ್ನು ಪರಿಚಯಿಸಿದರೆ ವಾಚಕವೃಂದಕ್ಕೆ ಸಹಾಯಕವಾಗುವುದು ಎಂದು ನಂಬಿದ್ದೇನೆ. ಈ ಲೇಖನಗಳಲ್ಲಿ ವಾಸಿ ಮತ್ತು ವೇಶಿಯೋಗಗಳೆಂಬ ಎರಡು ಅತ್ಯಂತ ಸರಳ ಯೋಗಗಳ ಬಗ್ಗೆ ನೋಡೋಣ. ಈ ಎರಡೂ ಯೋಗಗಳು ಸೂರ್ಯ ಅಥವಾ ರವಿಯು ಇರುವ ಮನೆಯಿಂದ ತಿಳಿಯಲ್ಪಡುತ್ತವೆ. ಚಂದ್ರ, ರಾಹು, ಕೇತುಗಳು ಈ ಯೋಗದಲ್ಲಿ ವಿನಾಯಿತರು. ವಾಸಿಯೋಗ - ಚಂದ್ರನನ್ನು ಹೊರತುಪಡಿಸಿ ರವಿಯಿಂದ ಹನ್ನೆರಡನೇಯ ಮನೆಯಲ್ಲಿ ಯಾವುದೇ ಗ್ರಹ ಅಥವಾ ಗ್ರಹಗಳು ಇದ್ದಾಗ ಈ ಯೋಗ ಎರ್ಪಡುತ್ತದೆ. (ರಾಹು-ಕೇತುಗಳು ಅಪವಾದವೆಂದು ಲಕ್ಷ್ಯದಲ್ಲಿರಲಿ) ಇಲ್ಲಿ ಗ್ರಹಗಳ ಶುಭಾಶುಭ ಪ್ರಯುಕ್ತ ಎರಡು ಯೋಗಗಳುಂಟಾಗುತ್ತವೆ. ಶುಭಗ್ರಹಗಳಾದ ಬುಧ-ಗುರು-ಶುಕ್ರ ಇವರು ರವಿಯಿಂದ ಹನ್ನೆರಡರಲ್ಲಿ ಇದ್ದಾಗ ಶುಭವಾಸಿ ಯೋಗ. ಅಶುಭ ಅಥವಾ ಪಾಪಗ್ರಹಗಳಾದ ಕುಜ(ಮಂಗಳ)-ಶನಿ ಇವರಿಂದ ಅಶುಭವಾಸಿ ಯೋಗ. ಗ್ರಹಗಳು ತಮ್ಮ ಸ್ವಕ್ಷೇತ್ರ, ಮೂಲತ್ರಿಕೋಣ, ಉಚ್ಚ, ಮಿತ್ರಾದಿ ರಾಶಿಗಳಲ್ಲಿ ರವಿಯಿಂದ ಹನ್ನೆರಡನೇಯವರಾದರೆ ಯೋಗದ ಶುಭಫಲದಾಯಕ ಸಾಮರ್ಥ್ಯ, ಪ್ರಾಬಲ್ಯ ಹೆಚ್ಚು. ಇದಕ್ಕೆ ವಿಪರೀತ ಗ್ರಹಗಳು ನೀಚ, ಅಸ್ತ, ಶತ್ರು ಕ್ಷೇತ್ರಗಳಲ್ಲಿ ಇದ್ದಾಗ ಅಶುಭಫಲದ ಪ್ರಾಬಲ್ಯ. ಇನ್ನು ಈ ಯೋಗದ ಫಲಾದೇಶವನ್ನು ನೋಡಿ – ಶುಭವಾಸಿಯೋಗದಲ್ಲಿ ಹುಟ್ಟಿರುವವರು ತನ್ನ ಕಾರ್ಯದಲ್ಲಿ ದಕ್ಷನಾಗಿರುತ್ತಾನೆ. ಪ್ರಸನ್ನನು, ನಿಪುಣನು, ವಿದ್ಯಾವಂತನು, ಗುಣವಂತನು, ಚತುರನೂ ಆಗಿರುತ್ತಾನೆ. ಕೌಟುಂಬಿಕ ಸುಖ ಹೇರಳವಾಗಿರುತ್ತದೆ. ಆಪ್ತೇಷ್ಟರು ಬಂಧುಗಳು ಸದಾ ಇವನನ್ನು ಆಶ್ರಯಿಸಿರುತ್ತಾರೆ (ಇದು ಇಂದಿನ ಕಾಲಕ್ಕೆ ಕೆಲವರಿಗೆ ಸ್ವಲ್ಪ ಕಷ್ಟದಾಯಕವಾಗಬಹುದು!). ಈ ಯೋಗಜಾತರು ಮುಗ್ಧರು ಮತ್ತು ತುಸು ಮೃದು ಸ್ವಭಾವದವರಾಗಿರುತ್ತಾರೆ, ಆದ್ದರಿಂದ ಕೆಲವೊಮ್ಮೆ ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಸಂಭವವಿರುತ್ತದೆ. ಯಾರಿಗೂ ಯಾವುದೆ ವಾಯಿದೆ ಅಥವಾ ಕರಾರನ್ನು ಮಾಡುವಾಗ ದೊಡ್ಡವರ, ಪರಿಣಿತರ ಸಲಹೆಯನ್ನು ಪಡೆಯುವುದು ಯೋಗ್ಯ. ನನ್ನ ಅನುಭವದಲ್ಲಿ ಈ ಯೋಗದವರು ಸ್ವಲ್ಪ ಕೈಗಟ್ಟಿ (ಹಣಕಾಸಿನ ವ್ಯವಹಾರದಲ್ಲಿ) ಮಾಡಿಕೊಂಡರೆ ಒಳ್ಳೆಯದು. ಈ ಯೋಗದವರಿಗೆ ಪರದೇಶಕ್ಕಿಂತಲೂ ಸ್ವದೇಶದಲ್ಲಿ ಹೆಚ್ಚು ಅಭಿವೃದ್ಧಿ. ಅಶುಭವಾಸಿಯೋಗ ಜಾತಕರಿಗೆ ತನ್ನ ಊರು, ದೇಶವನ್ನು ಬಿಡುವ ಪ್ರಸಂಗ ಬರುತ್ತದೆ. ಪ್ರಬಲವಾದ ಅಶುಭಗ್ರಹ ರವಿಯಿಂದ ದ್ವಾದಶದಲ್ಲಿದ್ದರೆ ಪರದೇಶಗಮನ ಯೋಗ (ಇಚ್ಛುಕರಿಗೆ ಇದು ಸುಯೋಗ). ಆದರೆ ಪರದೇಶಗಮನದಿಂದ ಲಾಭವೆನ್ನುವುದು ಸುಳ್ಳು, ಬರೀ ಗಮನವಷ್ಟೇ, ವ್ಯರ್ಥ ಪರಿಶ್ರಮ ಲಾಭ ಮಾತ್ರ. ಈ ಜಾತಕರು ತಮ್ಮ ಜೀವನದಲ್ಲಿ ಕೆಲವೊಮ್ಮೆ ದೊಡ್ಡ ಪ್ರಮಾದಗಳನ್ನೆ ಮಾಡಿಬಿಡುತ್ತಾರೆ, ತತ್ಪರಿಣಾಮವಾಗಿ ಅದು ಅವರನ್ನು ಜೀವನದುದ್ದಕ್ಕೂ ಸತಾಯಿಸುತ್ತಿರುತ್ತದೆ. ಇವುರು ಮುಂಗೋಪಿಗಳು, ಜಗಳಗಂಟರೂ, ಸೇಡು ತಿರಿಸಿಕೊಳ್ಳುವ ಮನೋಭಾವವನ್ನು ಹೊಂದಿರುತ್ತಾರೆ. ದಕ್ಷತೆಯೆಂಬುದು ಇವರಲ್ಲಿ ದೋಷ. ರವಿಗೆ ಹನ್ನೆರಡರಲ್ಲಿ ಮಂಗಳನಿರಲು ಅತೀ ಚಪಲತೆ, ಎಲ್ಲದರಲ್ಲಿಯೂ ನಿರ್ಲಕ್ಷ. ಈ ಜಾತಕರು ಯಾವಾಗಲೂ ತಮಗಿಂತ ಹಿರಿಯರ ಸಹವಾಸದಲ್ಲಿರುವುದು ಸೂಕ್ತ. ಭಾವನೆಗಳ ಮೇಲೆ ನಿಯಂತ್ರಣ ಅತೀ ಅವಶ್ಯಕ. ಚಿಕ್ಕಂದಿನಿಂದಲೇ ಸರಿಯಾದ ಸಂಸ್ಕಾರಗಳನ್ನು ರೂಢಿಸಿಕೊಂಡು ತಾಳ್ಮೆಯಿಂದ ಬಾಳುವುದೊಂದೇ ಮಾರ್ಗ. ದುಶ್ಚಟಗಳ ತ್ಯಾಗ ಅಥವಾ ನಿಯಂತ್ರಣಮಾಡಬೇಕು. ಈ ಜಾತಕರಿಗೆ ದುಷ್ಟ ಸಹವಾಸ ಬಹುಬೇಗ ಆಗುತ್ತದೆ, ಆ ಕಾರಣದಿಂದಾಗಿ ದುಷ್ಕಾರ್ಯಗಳಲ್ಲಿ ಪ್ರಯುಕ್ತರಾಗುತ್ತಾರೆ, ಸದಾ ಎಚ್ಚರಿಕೆ ಬೇಕು. ದೈವೋಪಾಸನೆ, ಒಳ್ಳೆಯ ಆಹಾರ, ಸಂಯಮ ಇವು ಮಾತ್ರ ಉಪಾಯ. ಒಂದು ವೇಳೆ ಶುಭ ಮತ್ತು ಅಶುಭ ಎರಡೂ ಗ್ರಹಗಳು ರವಿಯಿಂದ ಹನ್ನೆರಡರಲ್ಲಿ ಬರಲು ಶುಭಾಶುಭ ಫಲಗಳನ್ನು ತಿಳಿಯಬೇಕು. ರವಿಯಿಂದ ದ್ವಾದಶದಲ್ಲಿರುವ ಗ್ರಹಗಳ ಕಾರಕತ್ವಗಳನ್ನು ನೋಡಿ ಫಲನಿರ್ದೇಶ ಮಾಡಬೇಕು. ಬುಧ-ಗುರು-ಶುಕ್ರ ಮತ್ತು ಕುಜ-ಶನಿ ಇವರ ನಡುವೆ ಅನೇಕ ಯೋಗಗಳು ಎರ್ಪಡುತ್ತವೆ, ಅವುಗಳನ್ನು ಅಭ್ಯಸಿಸಿ ಫಲನಿರ್ದೇಶ ಮಾಡಬಹುದು. (ಇದಕ್ಕೆ ಯೋಗ್ಯ ಮಾರ್ಗದರ್ಶನ ಅಗತ್ಯ.) ದಶಾಕ್ರಮದಲ್ಲಿ ವಾಸಿಯೋಗಕ್ಕೆ ಕಾರಣವಾದ ಗ್ರಹದ ದಶೆ ವಿಶೇಷವಾಗಿ ಪರಿಣಾಮಕಾರಿಯಾಗಿರುತ್ತದೆ. ರವಿ ಮಹರ್ದಶೆಯಲ್ಲಿ ವಾಸಿಯೋಗಕಾರಕ ಗ್ರಹದ ಅಂತರ್ದಶೆಯಲ್ಲಿ ಶುಭಾಶುಭ ಫಲಗಳನ್ನು ನೋಡಬಹುದು. ನೋಡಿ, ಯಾವ ರೀತಿ ನಾವು ಈ ಸುಲಭ ಯೋಗಗಳನ್ನು ಅರಿತುಕೊಳ್ಳುವುದರ ಮೂಲಕ ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳಬಹುದು. ಜ್ಯೋತಿಷ್ಯವು ಈ ರೀತಿ ಜೀವನಯೋಗವಾಗಿಯೂ ಉಪಯುಕ್ತ. ವಾಸಿ ಮತ್ತು ವೇಶಿಯೋಗಗಳು – ಭಾಗ ೨ ಕಳೆದ ಲೇಖನದಲ್ಲಿ ವಾಸಿಯೋಗವನ್ನು ತಿಳಿದದ್ದಾಯಿತು. ರವಿಯ ಸ್ಥಿತಿಯಿಂದ ನೋಡಲ್ಪಡುವ ಈ ಯೋಗಗಳು ಇವತ್ತು ಅಷ್ಟು ಪ್ರಚಾರವನ್ನು ಪಡೆದಿಲ್ಲವೆಂಬುದು ನಿಜ, ಆದರೆ ಈ ಯೋಗಗಳು ಮಾರ್ಗದರ್ಶಕವಾಗಿವೆ. ರವಿಯಿಂದ ಹನ್ನೆರಡನೆಯ ಮನೆಯಿಂದ ವಾಸಿಯೋಗವು ಎರ್ಪಡುವಂತೆ ಎರಡನೇಯ ಮನೆಯಲ್ಲಿ ಪ್ರಸಕ್ತ ವೇಶಿಯೋಗವನ್ನು ನೋಡಬೇಕು. ರವಿಯಿಂದ ಎರಡನೇಯ ಮನೆಯಲ್ಲಿ ಚಂದ್ರನಲ್ಲದೆ ಬೇರೆ ಯಾವುದೇ ಗ್ರಹ ಅಥವಾ ಗ್ರಹಗಳಿದ್ದರೆ ವೇಶಿಯೋಗ ಉಂಟಾಗುತ್ತದೆ. ಈ ಯೋಗದಲ್ಲಿಯೂ ಸಹ ರಾಹು-ಕೇತುಗಳು ಲೆಕ್ಕಕ್ಕೆ ಇಲ್ಲ. ರವಿಯಿಂದ ಎರಡನೇಯ ಮನೆಯಲ್ಲಿ ಶುಭಗ್ರಹಗಳಿದ್ದರೆ ಶುಭವೇಶಿಯೋಗ, ಪಾಪಗ್ರಹಗಳಿದ್ದರೆ ಅಶುಭವೇಶಿಯೋಗವೆಂಬ ಎರಡು ಯೋಗಗಳು ಉಂಟಾಗುತ್ತವೆ. ಶುಭವೇಶಿಯೋಗ ಜಾತಕರು ಸೌಮ್ಯಸ್ವಭಾವದವರಾಗಿರುತ್ತಾರೆ. ಈ ವ್ಯಕ್ತಿಗಳಲ್ಲಿ ಉತ್ತಮ ವಾಕ್ಪತುತ್ವ, ಭಾಷಣ-ಮಾತಿನ ಕೌಶಲ್ಯವಿರುತ್ತದೆ. ಇವರು ತಮ್ಮ ಮಾತಿನಿಂದ ಯಾರನ್ನಾದರು ಪ್ರಭಾವಿತರನ್ನಾಗಿಸಬಹುದು. ಇವರಲ್ಲಿ ಕಾರ್ಯದಕ್ಷತೆ, ಶ್ರೆದ್ಧೆ ನೈಜ ಗುಣಗಳಾಗಿರುತ್ತವೆ. ಈ ಎಲ್ಲ ಗುಣಗಳು ಒಬ್ಬ ಒಳ್ಳೆಯ ಆಡಳಿತಗಾರನಲ್ಲಿ ಇರಬೇಕಾದ ಗುಣಗಳು. ಆದ್ದರಿಂದ ಈ ಯೋಗದವರು ಆಡಳಿತ, ನಿರ್ವಾಹಕ ಶಿಕ್ಷಣವನ್ನು (Management & Administration) ಆಯ್ದುಕೊಂಡರೆ ಸಹಜವಾಗಿ ಉನ್ನತಿಯಾಗುತ್ತದೆ. ವ್ಯಕ್ತಿಗಳನ್ನು ನಿಯಂತ್ರಿಸುವ ಕೌಶಲ್ಯವಿರುವುದರಿಂದ ಈ ಜಾತಕರು ತಮ್ಮ ಜೀವಿತಾವಧಿಯಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತ ಮುನ್ನಡೆಯುತ್ತಾರೆ. ಆರ್ಥಿಕವಾಗಿ ಉತ್ತಮ ಸ್ಥಿತಿಯು ಯಾವಾಗಲು ಇರುತ್ತದೆ. ಈ ಯೋಗದ ಸ್ತ್ರೀಜಾತಕರು ಬಹಳ ಯಶವನ್ನು ಸಾಧಿಸುತ್ತಾರೆ. ತನ್ನ ಪ್ರತಿಸ್ಪರ್ಧಿಗಳು, ಶತ್ರುಗಳನ್ನು ಪೀಡಿಸುವ ಸ್ವಭಾವವು ಇವರಲ್ಲಿ ಕಂಡುಬರುತ್ತದೆ. ಇದು ಸ್ವಲ್ಪ ಬೇಡವಾದ ಗುಣ. ಸಾಧ್ಯವಾದಷ್ಟು ಜಂಬ, ಆಕ್ರಾಮಕ ಮಾತುಗಾರಿಕೆಯ ಮೇಲೆ ನಿಯಂತ್ರಣವನ್ನು ಇಡಬೇಕು, ದೊಡ್ಡಸ್ಥಿಕೆ, ಸಂಪತ್ತಿನ ದಿಖಾವೆಗಳನ್ನು ಮಾಡದಿರುವುದು ಒಳ್ಳೆಯದು. ಪಾಪಗ್ರಹರ ಪ್ರಯುಕ್ತ ಅಶುಭವೇಶಿಯೋಗವು ಅನಿಷ್ಟ ಸಹವಾಸವನ್ನು ಉಂಟುಮಾಡುತ್ತದೆ. ಇವರು ಅಯೂಗ್ಯರನ್ನು ಆಯಸ್ಕಾಂತದಂತೆ ಸೆಳೆಯುತ್ತಿರುತ್ತಾರೆ. ತಲೆಯಲ್ಲಿ ಯಾವಾಗಲು ಯಾವುದಾದರೊಂದು ದುರಾಲೋಚನೆ ನಡೆದೇ ಇರುತ್ತದೆ. ಇವರು ಯಾರ ಜೊತೆಯು ದೀರ್ಘಾವಧಿಯ ಸಂಬಂಧವನ್ನು ಇಡಲಾರರು, ಇದು ವ್ಯವಹಾರಗಳಲ್ಲಿ ಹಾನಿಯನ್ನುಂಟುಮಾಡುತ್ತದೆ. ತಮಗಿಂದ ಹೆಚ್ಚು ಜಾಣರು ಮತ್ತು ಸಜ್ಜನರ ಸಹವಾಸವೇ ಇವರ ಸ್ವಭಾವಕ್ಕೆ ಮದ್ದು. ಇಂಥವರ ಜಾತಕದಲ್ಲಿ ಬೇರೆ ಯೋಗಗಳನ್ನು ಪರಿಶಿಲಿಸಿ ಫಲಾದೇಶ ಮಾಡಿದರೆ ಸಹಾಯಕ.

Comments

Unknown said…
ಹೇಗೆ ನೀವು ಇಂದು ಮಾಡುತ್ತಿರುವೆ? ಲಾರ್ಡ್ habat ನಾನು ಮತ್ತು ನಾವು ಈಗ 2% ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ನಾನು ಹೇಗೆ ಸಂತೋಷ ತಿಳಿಸಲು ತಿಳಿಸಬೇಕು. orbitfinanceloancompany@gmail.com.comwe ಮೂಲಕ ಸಂಪರ್ಕಿಸಿ ಲಾರ್ಡ್ habat ಸಾಲ ಕಂಪನಿ ವ್ಯಕ್ತಿಗಳು, ವ್ಯಾಪಾರ ಸಂಸ್ಥೆಗಳು, ವಿಮೆ, ಇತ್ಯಾದಿ ಜೀವನ ಅವಕಾಶ ಸಾಲ ನೀಡುತ್ತದೆ ಯಾವುದೇ ಹಣಕಾಸಿನ ತೊಂದರೆ ಅಥವಾ ಬಂಡವಾಳ ಸಾಲ ಅಗತ್ಯವನ್ನು ನೀವು ಅಥವಾ ನಿಮ್ಮ ಬಿಲ್ಲುಗಳನ್ನು ಪಾವತಿಸಲು ಸಾಲ ಅಗತ್ಯವಿದೆ ನಾವು ಎಲ್ಲಾ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಕಳೆದ ಒಂದು ವಿಷಯ ಮಾಡಲು ಇಲ್ಲಿ ಕಾರಣ ಯಾವುದೇ ಹುಡುಕಲು. ನಮಗೆ ಇಮೇಲ್: orbitfinanceloancompany@gmail.com
Dr Purva Pius said…
Hello Everybody,
My name is Mrs Sharon Sim. I live in Singapore and i am a happy woman today? and i told my self that any lender that rescue my family from our poor situation, i will refer any person that is looking for loan to him, he gave me happiness to me and my family, i was in need of a loan of S$250,000.00 to start my life all over as i am a single mother with 3 kids I met this honest and GOD fearing man loan lender that help me with a loan of S$250,000.00 SG. Dollar, he is a GOD fearing man, if you are in need of loan and you will pay back the loan please contact him tell him that is Mrs Sharon, that refer you to him. contact Dr Purva Pius,via email:(urgentloan22@gmail.com) Thank you.

BORROWERS APPLICATION DETAILS


1. Name Of Applicant in Full:……..
2. Telephone Numbers:……….
3. Address and Location:…….
4. Amount in request………..
5. Repayment Period:………..
6. Purpose Of Loan………….
7. country…………………
8. phone…………………..
9. occupation………………
10.age/sex…………………
11.Monthly Income…………..
12.Email……………..

Regards.
Managements
Email Kindly Contact: urgentloan22@gmail.com

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...