ದೇವಾನಾಂ ಚ ಋಷಿಣಾಂ ಚ ಗುರುಂ ಕಾಂಚನ ಸನ್ನಿಭಮ್ |
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ||
(ದೇವತೆಗಳಿಗೂ ಮತ್ತು ಋಷಿಗಳಿಗೂ ಗುರುವಾದ, ಚಿನ್ನದ ಕಾಂತಿಗೆ ಸದೃಶವಾದ ಕಾಂತಿಯುಳ್ಳ, ಮೂರೂ ಲೋಕದಲ್ಲಿ ಅತುಲನೀಯ ಬುದ್ಧಿವಂತನಾದ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.)
ಇದು ಪ್ರಸಿದ್ಧವಾದ ಪುರಾಣೋಕ್ತ ಗುರು ಜಪಮಂತ್ರ. ಶ್ರೀವೇದವ್ಯಾಸ ವಿರಚಿತ ನವಗ್ರಹ ಸ್ತೋತ್ರಾಂತರ್ಗತವಾದದ್ದು. ಪ್ರತಿನಿತ್ಯ ಜಪಿಸುವುದರಿಂದ ಶೀಘ್ರವಾಗಿ ಫಲಪ್ರಾಪ್ತಿಯಾಗುತ್ತದೆ. ಗುರು ಪ್ರಸಾದಕ್ಕಾಗಿ ಜಪಸಂಖ್ಯೆ 19000.
ಈ ಕೆಳಗಿನ ಮಂತ್ರವು ಬ್ರಹ್ಮಾಂಡಪುರಾಣೋಕ್ತ ಪೀಡಾಪರಿಹಾರಕ ಸ್ತೋತ್ರಾಂತರ್ಗತವಾಗಿದೆ. ಇದೂ ಸಹ ಶೀಘ್ರ ಫಲಪ್ರದ ಮಂತ್ರವಾಗಿದೆ,
ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ |
ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ ||
(ದೇವತೆಗಳ ಮಂತ್ರಿಯಾದ, ವಿಶಾಲವದ ನೇತ್ರಗಳುಳ್ಳ (ದೃಷ್ಟಿಯುಳ್ಳ), ಸರ್ವದಾ ಲೋಕಹಿತವನ್ನೇ ಚಿಂತಿಸುತ್ತಿರುವ, ಅನೇಕ ಶಿಷ್ಯರಿಂದ ಸಂಪನ್ನನಾದ ಹೇ ದೇವಗುರು ನನಗೆ ಒದಗಿದ ಪೀಡೆಗಳನ್ನು ಪರಿಹರಿಸು.)
ಈ ಮಂತ್ರವನ್ನು ಪ್ರತಿನಿತ್ಯ ಕನಿಷ್ಟ ಪಕ್ಷ 108 ಬಾರಿಯಷ್ಟು ಜಪಿಸುವುದರಿಂದ ಗುರು ಗೋಚಾರ ಸೂಚಿತ ಅನಿಷ್ಟಗಳ ನಿವೃತ್ತಿಯಾಗುತ್ತದೆ.
ಮೇಲಿನ ಎರಡೂ ಮಂತ್ರಗಳನ್ನು ಗುರು ಅಶುಭ ಗೋಚಾರವಿರುವ ರಾಶಿಯವರು ಅವಶ್ಯವಾಗಿ ಜಪಿಸಬೇಕು. ಗುರು ಪ್ರಸನ್ನತೆಗಾಗಿ ಪ್ರತೀ ಗುರುವಾರದಂದು ಗುರುಗಳ ಮಠ, ದೇವಸ್ಥಾನಗಳ ದರ್ಶನವನ್ನು ಮಾಡಬೇಕು. ಗುರು-ಆಚಾರ್ಯ, ದೈವ ನಿಂದೆಯನ್ನು ಸರ್ವಥಾ ಮಾಡಬಾರದು. ಗುರುಸಮಾನರಾದವರ ಸೇವೆಯನ್ನು ಮಾಡಬೇಕು. ಗುರು ಪೀಡಾಪರಿಹಾರಕ್ಕಾಗಿ ಸುವರ್ಣ ದಾನ, ಕಂಚಿನ ಪಾತ್ರೆ, ಪುಷ್ಕರಾಜ ಮಣಿ, ಕಡಲೆ, ಸಕ್ಕರೆ, ಹಳದೀ ಬಣ್ಣದ ವಸ್ತ್ರಗಳು ಮೊದಲಾದವುಗಳ ದಾನವನ್ನು ಸಹ ಮಾಡಬಹುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments