Skip to main content

ಚಾತುರ್ಮಾಸ

ಮನುಷ್ಯಮಾನದ ಒಂದು ವರ್ಷವು ದೇವತೆಗಳಿಗೆ ಒಂದು ದಿನ (ಅಹೋರಾತ್ರ). ಉತ್ತರಾಯಣವು ದೇವತೆಗಳ ಹಗಲು ಮತ್ತು ದಕ್ಷಿಣಾಯಣವು ರಾತ್ರಿ. ಸೂರ್ಯನ ಕರ್ಕರಾಶಿ ಪ್ರವೇಶದೊಂದಿಗೆ ದಕ್ಷಿಣಾಯಣವು ಪ್ರಾರಂಭವಾಗುತ್ತದೆ. ದಕ್ಷಿಣಾಯಣವು ಆರು ತಿಂಗಳುಗಳ ಕಾಲವಿರುತ್ತದೆ. ಈ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶೀಯಿಂದ ನಾಲ್ಕು ತಿಂಗಳುಗಳಷ್ಟು ಕಾಲವನ್ನು ದೇವತೆಗಳು ನಿದ್ರಿಸುವ ಸಮಯವೆಂದು ಕರೆಯಲಾಗಿದೆ. ಈ ನಾಲ್ಕು ತಿಂಗಳುಗಳ ಕಾಲ ಆಚರಿಸಲಾಗುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ. ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ. ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಶಯನೀ ಏಕಾದಶೀಯೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದ ಶುಕ್ಲೈಕಾದಶೀಯಂದು ಪರಮಾತ್ಮನು ನಿದ್ರೆಯಿಂದ ಎಚ್ಚರಗೊಳ್ಳುವುದರಿಂದ ಅಂದು ಜಾಗರೋತ್ಸವ ಅಥವಾ ಪ್ರಬೋಧೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಉತ್ಥಾನ ಏಕಾದಶೀ ಅಥವಾ ಪ್ರಬೋಧಿನಿ ಏಕಾದಶೀ ಎಂದು ಕರೆಯಲಾಗುತ್ತದೆ. ಚಾತುರ್ಮಾಸ ವ್ರತ ಎಲ್ಲರಿಗೂ ವಿಹಿತ- ಚಾತುರ್ಮಾಸ ವ್ರತವು ಮಹಾಪುಣ್ಯಪ್ರದವಾಗಿದ್ದು ಇದರ ಆಚರಣೆಯಿಂದ ಸರ್ವವಿಧ ಪಾಪರಾಶಿಗಳ ನಾಶವಾಗುತ್ತದೆ. ಇದಂ ವ್ರತಂ ಮಹಾಪುಣ್ಯಂ ಸರ್ವಪಾಪಹರಂ ಶುಭಮ್ | ಸರ್ವಾಪರಾಧಶಮನಂ ಸರ್ವೋಪದ್ರವನಾಶನಮ್ | ಸರ್ವೈರವಶ್ಯಂ ಕರ್ತವ್ಯಂ ಚತುರಾಶ್ರಮವಾಸಿಭಿಃ || (ಸ್ಕಂದಪುರಾಣ) ಈ ವ್ರತವು ಮಹಾಪುಣ್ಯಪ್ರದವಾಗಿದ್ದು ಎಲ್ಲ ಪಾಪಗಳನ್ನು ನಾಶ ಮಾಡುವಂತಹದ್ದಾಗಿದೆ, ಎಲ್ಲ ವಿಧವಾದ ಅಪರಾಧಗಳನ್ನು ಕ್ಷಮಿಸುವಂತಹದ್ದು, ಎಲ್ಲ ರೀತಿಯ ಉಪದ್ರವಗಳನ್ನು ನಾಶ ಮಾಡುವಂತಹದ್ದಾಗಿದೆ. ಈ ವ್ರತವನ್ನು ನಾಲ್ಕೂ ಆಶ್ರಮದ ಎಲ್ಲರೂ ಅವಶ್ಯವಾಗಿ ಆಚರಿಸಬೇಕು. ಚಾತುರ್ಮಾಸ ವ್ರತವು ನಿತ್ಯ ವ್ರತವಾಗಿದ್ದು ಎಲ್ಲ ವರ್ಣಾಶ್ರಮದವರಿಗೂ ವಿಹಿತವಾಗಿದೆ. ನಿತ್ಯ ವ್ರತವೆಂದರೆ ಕಡ್ಡಾಯವಾಗಿ ಪಾಲಿಸಬೇಕಾದಂತಹ ವ್ರತಗಳು, ಇವುಗಳನ್ನು ಬಿಟ್ಟಲ್ಲಿ ಪ್ರತ್ಯವಾಯವೆಂಬ ಮಹಾದೋSಷವು ಬರುತ್ತದೆಯೆಂದು ಧರ್ಮಶಾಸ್ತ್ರ ನಿರ್ಣಯವಿದೆ. ಚಾತುರ್ಮಾಸ ವ್ರತವು ಕೇವಲ ಬ್ರಾಹ್ಮಣ ಸ್ತ್ರಿಯರು, ಯತಿಗಳು-ಸನ್ಯಾಸಿಗಳು, ವಿಧವೆಯರು ಮಾತ್ರವೇ ಆಚರಿಸಬೇಕು, ಉಳಿದವರು ಆಚರಿಸಬಾರದು ಅಥವಾ ಆಚರಿಸದಿದ್ದರೆ ನಡೆಯುತ್ತದೆ – ಹೀಗೆಲ್ಲ ಅಜ್ಞಾನ ಮೂಲಕವಾದ ವಿಚಾರಗಳಿವೆ. ಧರ್ಮಶಾಸ್ತ್ರಗಳು ಈ ವ್ರತವನ್ನು ಪ್ರತಿಯೊಬ್ಬ ವೈದಿಕ-ಸನಾತನ ಧರ್ಮಾವಲಂಬಿಯನ್ನು ಕುರಿತು ಆದೇಶ ಮಾಡಿವೆ. ನಾಲ್ಕು ತಿಂಗಳುಗಳ ಕಾಲ ವ್ರತನಿಷ್ಠನಾಗಿದ್ದು ಪ್ರತಿಯೊಬ್ಬ ಸನಾತನ ಧರ್ಮಾವಲಂಬಿಯಾದವನು ಪಶ್ಚಾತ್ತಾಪಪೂರ್ವಕ ತನ್ನ ಪಾಪರಾಶಿಗಳನ್ನು ಕಳೆದುಕೊಳ್ಳಲೆಂದೆ ಪ್ರತಿವಾರ್ಷಿಕವಾಗಿ ಈ ವ್ರತದ ಅನುಷ್ಠಾನವಿರುತ್ತದೆ. ನಿತ್ಯಂ ಕಾರ್ಯಂ ಚ ಸರ್ವೇಷಾಂ ಏತದ್`ವ್ರತಚತುಷ್ಟಯಮ್ | ನಾರೀಭಿಶ್ಚ ನರೈರ್ವಾಽಪಿ ಚತುರಾಶ್ರಮವರ್ತಿಭಿಃ || ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರಿಯಃ ಶೂದ್ರೋ ವ್ರತೀ ತಥಾ | ಗೃಹೀ ವನಸ್ಥಃ ಕಟಿಚೋ ಬಹೂದಃ ಪರಮಹಂಸಕಃ | ನರಕಾನ್ನ ನಿವರ್ತಂತೇ ತ್ಯಕ್ತ್ವಾ ವ್ರತಚತುಷ್ಟಯಮ್ || (ಸ್ಕಂದಪುರಾಣ) ಎಲ್ಲ ಸ್ತ್ರೀಪುರುಷರು, ನಾಲ್ಕೂ ವರ್ಣದವರೂ (ಬ್ರಾಹ್ಮಣ-ಕ್ಷತ್ರೀಯ-ವೈಶ್ಯ-ಶೂದ್ರ), ನಾಲ್ಕೂ ಆಶ್ರಮದವರೂ (ಬ್ರಹ್ಮಚರ್ಯ-ಗ್ರಹಸ್ಥ-ವಾನಪ್ರಸ್ಥ-ಸನ್ಯಾಸ), ಎಲ್ಲ ಪ್ರಕಾರದ ಸನ್ಯಾಸಿಗಳು (ಕುಟೀಚರ-ಬಹೂದ-ಹಂಸ-ಪರಮಹಂಸ), ಇನ್ನಿತರ ಅನ್ಯ ವ್ರತಗಳನ್ನು ಮಾಡುತ್ತಿರುವವರು, ಎಲ್ಲರೂ ನಿತ್ಯವಾಸ ಈ ಚಾತುರ್ಮಾಸ್ಯ ವ್ರತವನ್ನು ಅವಶ್ಯವಾಗಿ ಆಚರಿಸಲೇಬೇಕು, ಇದನ್ನು ಆಚರಿಸದಿದ್ದರೆ ನರಕವು ತಪ್ಪಿದ್ದಲ್ಲ. ನಾಲ್ಕು ಮಾಸಗಳು – ನಾಲ್ಕು ವ್ರತಗಳು ಪ್ರಥಮೇ ಮಾಸಿ ಕರ್ತವ್ಯಂ ನಿತ್ಯಂ ಶಾಕವ್ರತಂ ಶುಭಮ್ | ದ್ವಿತೀಯೇ ಮಾಸಿ ಕರ್ತವ್ಯಂ ದಧಿವ್ರತಮನುತ್ತಮಮ್ || ಪಯೋವ್ರತಂ ತೃತೀಯೇ ತು ಚತುರ್ಥೇ ತು ನಿಶಾಮಯ | ದ್ವಿದಲಂ ಬಹುಬೀಜಂ ಚ ವರ್ಜಯೇತ್`ಶುದ್ಧಿಮಿಚ್ಛತಾ || ನಿತ್ಯಾನ್ಯೇತಾನಿ ವಿಪ್ರೇಂದ್ರ ವ್ರತಾನ್ಯಾಹುರ್ಮನೀಷಿಣಃ || (ಸ್ಕಂದಪುರಾಣ) ಮೊದಲನೇ ಮಾಸದಲ್ಲಿ ಶಾಕವ್ರತ, ಎರಡನೇ ಮಾಸದಲ್ಲಿ ದಧಿವ್ರತ, ಮೂರನೇಯ ಮಾಸದಲ್ಲಿ ಕ್ಷೀರವ್ರತ ಮತ್ತು ಕೊನೆಯ ನಾಲ್ಕನೇಯ ಮಾಸದಲ್ಲಿ ದ್ವಿದಲವ್ರತ, ನಿತ್ಯವಾದ ಈ ವ್ರತಗಳನ್ನು ಪಾಲಿಸಬೇಕು. ಚಾತುರ್ಮಾಸಕ್ಕೆ ಮಾಸಗಳ ಗಣನೆ ಶುಕ್ಲ ಏಕಾದಶೀಯಿಂದ ಮುಂದಿನ ಶುಕ್ಲ ಏಕಾದಶೀಯ ವರೆಗೆ. ಈ ವ್ರತಗಳನ್ನು ಆಚರಿಸುವುದೆಂದರೆ ಆಯಾ ಮಾಸಗಳಲ್ಲಿ ಅನುಕ್ರಮವಾಗಿ ಆಯಾ ವಸ್ತುಗಳನ್ನು ಸಂಕಲ್ಪಪೂರ್ವಕ ತ್ಯಾಗಮಾಡಬೇಕು. ಶಾಕವ್ರತ – (ಆಷಾಢ ಶುಕ್ಲೈಕಾದಶೀಯಿಂದ ಶ್ರಾವಣ ಶುಕ್ಲೈಕಾದಶೀ) ಈ ವ್ರತದಲ್ಲಿ ಶಾಕಗಳನ್ನು ಎಂದರೆ ಎಲ್ಲ ರೀತಿಯ ತರಕಾರಿಗಳನ್ನು ಆಹಾರವಾಗಿ ಸ್ವೀಕರಿಸಬಾರದು. ಬೇರುಗಳು, ಎಲೆ, ಮೊಳಕೆ, ತುದಿ (ಮುಂಭಾಗ), ಹಣ್ಣುಗಳು, ದಂಟು, ತೊಗಟೆ, ಚಿಗುರು, ಹೂವು, ಸಿಪ್ಪೆ ಇವುಗಳನ್ನು ಶಾಕ ಎಂದು ಕರೆಯಲಾಗುತ್ತದೆ – ಇವುಗಳು ಈ ವ್ರತದಲ್ಲಿ ಅಸ್ವೀಕಾರ್ಯಗಳಾಗಿವೆ. ಎಂದರೆ ಎಲ್ಲ ಎಲೆ-ಕೋಸು ತರಕಾರಿಗಳು, ಮಸಾಲೆ ಪದಾರ್ಥಗಳು, ಹಣ್ಣುಗಳು, ಬೇರುಗಳು ಆಹಾರ ಪದಾರ್ಥವಾಗಿ ಈ ಮಾಸದಲ್ಲಿ ಸ್ವೀಕರಿಸಬಾರದು. ಅಗಸೆ, ತುಳಸಿ, ನೆಲ್ಲಿ, ಮಾವುಗಳು ಶಾಕಗಳಾಗಿದ್ದರೂ ವರ್ಜ್ಯವಲ್ಲ. ಅಂತೆಯೇ ತೆಂಗಿನಕಾಯಿ, ಖರ್ಜೂರ, ಒಣಶುಂಠಿ, ಮೆಣಸುಗಳನ್ನು ಸಹ ಆಹಾರದಲ್ಲಿ ಬಳಸಬಹುದು. ದಧಿವ್ರತ – (ಶ್ರಾವಣ ಶುಕ್ಲೈಕಾದಶೀಯಿಂದ ಭಾದ್ರಪದ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಮೊಸರನ್ನು ತ್ಯಾಗಮಾಡಬೇಕು. ಮಜ್ಜಿಗೆಯು ಗ್ರಾಹ್ಯವಾಗಿದೆ. ಕ್ಷೀರವ್ರತ – (ಭಾದ್ರಪದ ಶುಕ್ಲೈಕಾದಶೀಯಿಂದ ಆಶ್ವೀನ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಹಾಲನ್ನು ತ್ಯಾಗಮಾಡಬೇಕು. ದ್ವಿದಳವ್ರತ – (ಆಶ್ವೀನ ಶುಕ್ಲೈಕಾದಶೀಯಿಂದ ಕಾರ್ತಿಕ ಶುಕ್ಲೈಕಾದಶೀ) ಈ ವ್ರತದಲ್ಲಿ ಎಲ್ಲ ರೀತಿಯ ದ್ವಿದಳಧಾನ್ಯಗಳನ್ನು ತ್ಯಾಗಮಾಡಬೇಕು. ತೊಗರೆ, ಹುರುಳಿ, ಕಡಲೆ, ಅವರೆ, ಉದ್ದು ಮೊದಲಾದ ಒಡೆದಾಗ ಎರಡಾಗಿ ಭಾಗವಾಗುವ ಧಾನ್ಯಗಳು ದ್ವಿದಳ ಧಾನ್ಯಗಳಾಗಿವೆ. ಮೇಲ್ಕಂಡ ಈ ವ್ರತಗಳು ಕಡ್ಡಾಯ-ನಿತ್ಯ ವ್ರತಗಳಾಗಿವೆ. ಈ ಮೇಲಿನ ವ್ರತಗಳಲ್ಲದೇ ಇನ್ನೂ ಅನೇಕ ಐಚ್ಛಿಕ ವ್ರತಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. (ಐಚ್ಛಿಕ ವಿಷಯವಾದುದರಿಂದ ವಿಸ್ತಾರಭಯದಿಂದ ಇಲ್ಲಿ ಬರೆಯುವುದಿಲ್ಲ, ಗ್ರಂಥಗಳಿಂದ, ಗುರು-ಹಿರಿಯರಿಂದ ತಿಳಿದುಕೊಳ್ಳಬಹುದು.) ಚಾತುರ್ಮಾಸದಲ್ಲಿ ಬರುವ ನಾಲ್ಕು ಮಾಸಗಳಾದ ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಿಗೆ ಕ್ರಮವಾಗಿ ಪರಮಾತ್ಮನ ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ ಈ ರೂಪಗಳು ಅಭಿಮಾನಿಗಳಾಗಿವೆ. ಚಾತುರ್ಮಾಸದ ಸಂಕಲ್ಪಗಳು ಸುಪ್ತೇ ತ್ವಯೀ ಜಗನ್ನಾಥ ಜಗತ್ಸುಪ್ತಂ ಭವೇದಿದಮ್ | ವಿಬುದ್ಧೇ ಚ ವಿಬುದ್ಧೇತ ಪ್ರಸನ್ನೋ ಮೇ ಭವಾಚ್ಯುತ || ಚತುರೋ ವಾರ್ಷಿಕಾನ್ ಮಾಸಾನ್ ದೇವ ದೇವ ಜಗತ್ಪತೇ | ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತವ ಕೇಶವ || ಗ್ರಹೀತೇಽಸ್ಮಿನ್ ವ್ರತೇ ದೇವ ದೇವ ಪಂಚತ್ವಂ ಯದಿ ಮೇ ಭವೇತ್ | ತದಾ ಭವೇತ್ ಸುಸಂಪೂರ್ಣಂ ಪ್ರಸಾದಾತ್ತೇ ಜನಾರ್ದನ || ಶಾಕವ್ರತ ಸಂಕಲ್ಪ– (ಆಷಾಢ ಶುಕ್ಲ ದ್ವಾದಶೀಯಿಂದ) ಶಾಕವ್ರತಂ ಮಯಾ ದೇವ ಗೃಹೀತಂ ಪುರಸತ್ತವ | ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತೇ ರಮಾಪತೇ || ವಾಸುದೇವ ಶುಭೇ ಮಾಸೇ ಶಾಕವ್ರತಮನುತ್ತಮಮ್ | ತ್ವತ್ಪ್ರೀತ್ಯರ್ಥಂ ಕರಿಷ್ಯೇಽಹಂ ನಿರ್ವಿಘ್ನಂ ಕುರು ಮಾಧವ || ಶಾಕವ್ರತ ಸಮರ್ಪಣ- (ಶ್ರಾವಣ ಶುಕ್ಲ ದ್ವಾದಶೀಯಂದು) ವಾಸುದೇವ ನಮಸ್ತುಭ್ಯಂ ಪ್ರಥಮೇ ಮಾಸಿ ಮತ್ಕೃತಮ್ | ಶಾಕವ್ರತಂ ಮಯಾ ತೇನ ಸಂತುಷ್ಟೋ ಭವ ಮಾಧವ || ದಧಿವ್ರತ ಸಂಕಲ್ಪ– (ಶ್ರಾವಣ ಶುಕ್ಲ ದ್ವಾದಶೀಯಿಂದ) ದಧಿ ಭಾದ್ರಪದೇ ಮಾಸಿ ವರ್ಜಯಿಷ್ಯೇ ಸದಾ ಹರೇ | ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ || ಸಂಕರ್ಷಣಾರವಿಂದಾಕ್ಷ ಕರಿಷ್ಯೇಽಹಂ ದಧಿವ್ರತಮ್ | ದ್ವಿತೀಯೇ ಮಾಸಿ ದೇವೇಶ ನಿರ್ವಿಘ್ನಂ ಕುರು ಮೇ ಪ್ರಭೋ || ಸಮರ್ಪಣ- (ಭಾದ್ರಪದ ಶುಕ್ಲ ದ್ವಾದಶೀಯಂದು) ಸಂಕರ್ಷಣ ನಮಸ್ತುಭ್ಯಂ ಶ್ರಾವಣೇ ಮತ್`ಕೃತೇನ ಚ | ದಧಿವ್ರತೇನ ದೇವೇಶ ಪ್ರೀತೋ ಭವ ಜನಾರ್ದನ || ಕ್ಷೀರವ್ರತ ಸಂಕಲ್ಪ– (ಭಾದ್ರಪದ ಶುಕ್ಲ ದ್ವಾದಶೀಯಿಂದ) ಕ್ಷೀರವ್ರತಮಿದಂ ದೇವ ಗೃಹೀತಂ ಪುರಸತ್ತವ | ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತೇ ರಮಾಪತೇ || ಪ್ರದ್ಯುಮ್ನ ತವ ತುಷ್ಟ್ಯರ್ಥಂ ಪ್ರೋಷ್ಟಪದ್ಯಾಂ ತೃತೀಯಕೇ | ನಿರ್ವಿಘ್ನಂ ಕುರು ದೇವೇಶ ಕರಿಷ್ಯೇಽಹಂ ಪಯೋವ್ರತಮ್ || ಸಮರ್ಪಣ- (ಆಶ್ವಯುಜ ಶುಕ್ಲದ್ವಾದಶೀಯಂದು) ಶ್ರೀಪ್ರದ್ಯುಮ್ನ ನಮಸ್ತುಭ್ಯಂ ಮಾಸಮಾರಭ್ಯ ಯತ್`ಕೃತಮ್ | ಇಷ್ಟದೋ ಭವ ಸರ್ವೇಶ ಗೃಹಿತ್ವಾ ತು ಪಯೋವ್ರತಮ್ || ದ್ವಿದಳವ್ರತ ಸಂಕಲ್ಪ– (ಆಶ್ವಯುಜ ಶುಕ್ಲದ್ವಾದಶೀಯಿಂದ) ಕಾರ್ತಿಕೇ ದ್ವಿದಲಂ ಧಾನ್ಯಂ ವರ್ಜಯಿಷ್ಯೇ ಸದಾ ಹರೇ | ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ || ಅನಿರುದ್ಧಂ ಸುರೈರ್ವಂದ್ಯ ದ್ವಿದಳವ್ರತಮುತ್ತಮಮ್ | ಕರೋಮಿ ಚರಮೇ ಮಾಸೇ ನಿರ್ವಿಘ್ನಂ ಕುರು ಮೇ ಪ್ರಭೋ || ಸಮರ್ಪಣ- (ಕಾರ್ತಿಕ ಶುಕ್ಲ ದ್ವಾದಶೀಯಂದು) ಅನಿರುದ್ಧ ನಮಸ್ತುಭ್ಯಂ ದ್ವಿದಲಾಖ್ಯವ್ರತೇನ ಚ | ಮತ್`ಕೃತೇನಾಶ್ವಿನೇ ಮಾಸೇ ಪ್ರಸನ್ನೋ ಭವ ಮೇ ಪ್ರಭೋ || ಚಾತುರ್ಮಾಸ ವ್ರತ ಸಮರ್ಪಣ ಮಂತ್ರ– (ಕಾರ್ತಿಕ ಶುಕ್ಲ ದ್ವಾದಶೀಯಂದು) ಇದಂ ವ್ರತ ಮಯಾ ದೇವ ಕೃತಂ ಪ್ರೀತ್ಯೈ ತವ ಪ್ರಭೋ | ನ್ಯೂನಂ ಸಂಪೂರ್ಣತಾಂ ಯಾತು ತ್ವತ್`ಪ್ರಸಾದಾಜ್ಜನಾರ್ದನ || ವರಾಹ ಪುರಾಣದಲ್ಲಿ ಚಾತುರ್ಮಾಸ ಮಹಾತ್ಮೆಯು ಬಹಳ ವಿಸ್ತಾರವಾಗಿ ನಿರೂಪಿತವಾಗಿದೆ. ಈ ಮಹಾತ್ಮೆಯಲ್ಲಿ ಅನೇಕ ಬೋಧಪ್ರದ ಕಥಾಪ್ರಸಂಗಗಳು ಬರುತ್ತವೆ. ಇವುಗಳ ಸಂಗ್ರಹವನ್ನು ಮುಂದೆ ಬರೆಯಲಿಕ್ಕಿದೆ, ಸಧ್ಯಕ್ಕೆ ಇಷ್ಟು ಸಾಕು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...