ಭಾರತೀಯ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶ್ವದಾದ್ಯಂತ ಶ್ರೇಷ್ಠವಾದ ಗೌರವ ಮತ್ತು ಮಾನ್ಯತೆ ಇದೆ. ಖಗೋಳ ಗಣಿತವನ್ನು ಜಗತ್ತಿಗೆ ಕೊಟ್ಟ ಹಿರಿಮೆ ವೈದಿಕ ವಾಙ್ಞಯಕ್ಕೆ ಸಲ್ಲುತ್ತದೆ. ವಿಶ್ವದ ಪ್ರಾಚೀನತಮ ಗ್ರಂಥವಾಗ ಋಗ್ವೇದದಲ್ಲಿ ಗ್ರಹ ನಕ್ಷತ್ರಗಳ ಕುರಿತಾದ ಜಿಜ್ಞಾಸೆ ಮಾನವನ ಇತಿಹಾಸದಲ್ಲಿ ಪ್ರಪ್ರಥಮಬಾರಿ ಕಂಡು ಬರುತ್ತದೆ.
ಜ್ಯೋತಿಷ್ಯವೆಂದರೆ ಬೆಳಕಿನ ಶಾಸ್ತ್ರ, ಬೆಳಕು ಕೊಡುವ ಸೂರ್ಯ-ಚಂದ್ರ-ನಕ್ಷತ್ರಾದಿ ಬೆಳಕಿನ ಪುಂಜಗಳ ಕುರಿತಾದ ಶಾಸ್ತ್ರ. ಜ್ಯೋತಿಗಳು ಎಂದರೆ ಅವಕಾಶದಲ್ಲಿ ಬೆಳಗುವ ಗೋಲಗಳು. “ಜ್ಯೋತೀಂಷಿ ಗ್ರಹನಕ್ಷತ್ರಾಃ ತದಧಿಕೃತಂ ಶಾಸ್ತ್ರಂ ಜ್ಯೋತಿಷ್ಯಮ್” ಆಕಾಶದಲ್ಲಿರುವ ಗ್ರಹನಕ್ಷತ್ರಾದಿ ಜ್ಯೋತಿಃ ಪುಂಜಗಳು ಮತ್ತು ಅವುಗಳನ್ನು ಆಧರಿಸಿರುವ ಶಾಸ್ತ್ರ ಜ್ಯೋತಿಷ್ಯ.
ಇವತ್ತು ಉಪಲಬ್ಧವಿರುವ ಎಲ್ಲ ಪ್ರಾಚೀನ ಜ್ಯೋತಿಷ್ಯ ಗ್ರಂಥಗಳಲ್ಲಿ ಲಗಧಾಚಾರ್ಯ ಪ್ರಣೀತವಾದ ವೇದಾಂಗ ಜ್ಯೋತಿಷ್ಯ ಪ್ರಾಚೀನತಮವಾಗಿದೆ. ಈ ಗ್ರಂಥದಲ್ಲಿ ಶಾಸ್ತ್ರಪ್ರಶಂಸೆಯನ್ನು ಹೀಗೆ ಮಾಡಲಾಗಿದೆ –
ಯಥಾ ಶಿಖಾ ಮಯೂರಾಣಾಂ ನಾಗಾನಾಂ ಮಣಯೋ ಯಥಾ |
ತದ್ವದ್‍ವೇದಾಂಗ ಶಾಸ್ತ್ರಾಣಾಂ ಜ್ಯೌತಿಷಂ ಮೂರ್ಧನಿ ಸ್ಥಿತಂ || (ವೇದಾಂಗ ಜ್ಯೋತಿಷ್ಯ 4)
ನವಿಲುಗಳ ತಲೆಯ ಮೇಲಿರುವ ಶಿಖೆಗಳಂತೆ, ನಾಗಗಳ ಹೆಡೆಯ ಮೇಲಿರುವ ಮಣಿಗಳಂತೆ, ಆರು ವೇದಾಂಗ ಶಾಸ್ತ್ರಗಳ ಮಧ್ಯದಲ್ಲಿ ಜ್ಯೋತಿಷ್ಯವು ಶಿರಸ್ಥಾನದಲ್ಲಿದೆ.
ಅಪ್ರತ್ಯಾಕ್ಷಾಣಿ ಶಾಸ್ತ್ರಾಣಿ ವಿವಾದಸ್ತೇಷು ಕೇವಲಂ |
ಪ್ರತ್ಯಕ್ಷಂ ಜ್ಯೋತಿಷಂ ಶಾಸ್ತ್ರಂ ಚಂದ್ರಾರ್ಕೌ ಯತ್ರ ಸಾಕ್ಷಣೌ ||
ಉಳಿದೆಲ್ಲ ಶಾಸ್ತ್ರಗಳು ಎನನ್ನೂ ನಿರ್ಣಯಿಸಲಾಗದೆ ಕೇವಲ ವಿವಾದಮಾಡುವ ಶಾಸ್ತ್ರಗಳಾಗಿವೆ (ಪರೋಕ್ಷವಾಗಿ ಉಪಕಾರಕಗಳಾಗಿವೆ), ಜ್ಯೋತಿಷ್ಯ ಶಾಸ್ತ್ರವು ಮಾತ್ರ ಪ್ರತ್ಯಕ್ಷ ಶಾಸ್ತ್ರವಾಗಿದೆ. ಇದರ ಪ್ರತ್ಯಕ್ಷತೆಗೆ ಸಾಕ್ಷಿಯಾಗಿ ಸೂರ್ಯ ಚಂದ್ರರೆ ಇದ್ದಾರೆ.
ಪ್ರಾಚೀನರು ಈ ಶಾಸ್ತ್ರವನ್ನು “ಕಾಲವಿಧಾನಶಾಸ್ತ್ರ”ವೆಂದು ಕರೆದಿರುತ್ತಾರೆ. ಸರಿಯಾದ ಕಾಲದಲ್ಲಿ ಮಾಡಲಾಗುವ ಕರ್ಮಗಳು ದೋಷಗಳನ್ನು ಕಳೆದು ಉತ್ತಮ ಫಲವನ್ನು ತಂದುಕೊಡುತ್ತವೆ. ಆದ್ದರಿಂದ ಸೂಕ್ತ ಕಾಲದ ಆಯ್ಕೆ ಅತ್ಯಂತ ಅವಶ್ಯಕ. ಇಂತಹ ಕಾಲಗಣನೆ ಮತ್ತು ನಿರ್ಣವನ್ನು ಬೋಧಿಸುವ ಜ್ಯೋತಿಷ್ಯ ಶಾಸ್ತ್ರಕ್ಕೆ ವೈದಿಕ ಕಾಲದಾರಭ್ಯ ಇವತ್ತಿನ ವರೆಗೂ ಅಸಾಧಾರಣ ಮಹತ್ವವಿದೆ.
ವೇದಾ ಹಿ ಯಜ್ಞಾರ್ಥಮಭಿಪ್ರವೃತ್ತಾಃ
ಕಾಲಾನುಪೂರ್ವಾ ವಿಹಿತಾಶ್ಚ ಯಜ್ಞಾಃ |
ತಸ್ಮಾದಿದಂ ಕಾಲವಿಧಾನಶಾಸ್ತ್ರಂ
ಯೋ ಜ್ಯೋತಿಷಂ ವೇದ ಸ ವೇದ ಯಜ್ಞಾನ್ || (ವೇದಾಂಗ ಜ್ಯೋತಿಷ್ಯ 3)
(ಚತುರ್ವಿಧ ಪುರುಷಾರ್ಥ ಸಾಧನೆಗಾಗಿ ವೇದೋಕ್ತವಾದ ಯಜ್ಞಯಾಗಾದಿಗಳನ್ನು ವೇದವು ವಿಧಾನ ಮಾಡುವದರಿಂದ) ವೇದಗಳಿಗೆ ಯಜ್ಞಗಳಲ್ಲಿ ಪ್ರವೃತ್ತಿಯಿದೆ. ಯಜ್ಞಗಳಾದರೋ ಪೂರ್ವನಿರ್ಧಾರಿತ ದಿನ-ಋತು-ಆಯನವೇ ಮೋದಲಾದ ಶುಭಕಾಲದಲ್ಲಿಯೇ ಮಾಡುವುದು ವಿಹಿತವಾಗಿದೆ. ಆದ್ದರಿಂದ ಈ ವಿದ್ಯೆಯು ಕಾಲವಿಧಾನ ಶಾಸ್ತ್ರವಾಗಿದೆ, ಯರು ಇದನ್ನು ಅರಿತಿದ್ದಾರೋ ಅವರು ವೇದಜ್ಞರು ಮತ್ತು ಯಜ್ಞಗಳನ್ನು ಚನ್ನಾಗಿ ತಿಳಿದುಕೊಂಡವರಾಗಿರುತ್ತಾರೆ.
ವೇದ ಮತ್ತು ಅವುಗಳಿಂದ ಪ್ರವೃತ್ತವಾದ ಯಜ್ಞವಿದ್ಯೆಗೆ ಅತ್ಯಂತ ಅವಶ್ಯಕವಾದ ಜ್ಯೋತಿಷ್ಯವನ್ನು ವೇದಗಳ ಕಣ್ಣು “ವೇದಸ್ಯ ಚಕ್ಷುಃ ಕಿಲ ಶಾಸ್ತ್ರಮೇತತ್” ಎಂದು ಹೊಗಳಲಾಗಿದೆ. ಕಣ್ಣುಗಳಿಲ್ಲದೆ ಉಳಿದೆಲ್ಲ ಅಂಗಗಳು ಎಷ್ಟು ಚನ್ನಾಗಿದ್ದರೂ ಅಪೂರ್ಣತೆಯು ಹೇಗೋ ಹಾಗೆ ಉಳಿದೆಲ್ಲ ಶಾಸ್ತ್ರಜ್ಞನಾಗಿದ್ದರೂ ಜ್ಯೋತಿಷ್ಯ ಜ್ಞಾನವಿರದಿದ್ದರೆ ಅಂತಹ ಜ್ಞಾನ ಅಪೂರ್ಣ.
ಜ್ಯೋತಿಷ್ಯ ಜ್ಞಾನದ ಮಹಾಫಲವನ್ನು ಗರ್ಗಸಂಹಿತೆಯಲ್ಲಿ ಹೀಗೆ ಹೇಳಲಾಗಿದೆ –
ಜ್ಯೋತಿಶ್ಚಕ್ರೇ ತು ಲೋಕಸ್ಯ ಸರ್ವಸ್ಯೋಕ್ತಂ ಶುಭಾಶುಭಂ |
ಜ್ಯೋತಿರ್ಜ್ಞಾನಂ ತು ಯೋ ವೇದ ಸ ಯಾತಿ ಪರಮಾಂ ಗತಿಮ್ ||
ಗ್ರಹ, ನಕ್ಷತ್ರ, ತಾರಾಸಮೂಹ, ರಾಶಿಚಕ್ರಗಳಿಂದ ಲೋಕದ ಎಲ್ಲರ ಶುಭಾಶುಭ ಫಲಗಳನ್ನು ಹೇಳಲಾಗುತ್ತದೆ, ಆದ್ದರಿಂದ ಅಂತಹ ಬೆಳಕಿನ ಶಾಸ್ತ್ರವಾದ ಜ್ಯೋತಿಷ್ಯದ ಜ್ಞಾನವನ್ನು ಯಾರು ಹೊಂದಿರುವರೋ ಅವರು ಪರಮಗತಿಯಾದ ಮೋಕ್ಷವನ್ನು ಹೊಂದುತ್ತಾರೆ.
ವಿನಾ ಏತದಖಿಲಂ ಶ್ರೌತಸ್ಮಾರ್ತಕರ್ಮ ನ ಸಿಧ್ಯತಿ |
ತಸ್ಮಾಜ್ಜಗತ್‍ವಿಧಾತಾಯೇದಂ ಬ್ರಹ್ಮಣಾ ರಚಿತಂ ಪುರಾ || (ನಾರದ ಸಂಹಿತಾ 1-7)
ಈ ಶಾಸ್ತ್ರವಿಲ್ಲದೆ ಎಲ್ಲ ವೈದಿಕ (ಶ್ರೌತ) ಮತ್ತು ಧರ್ಮಶಾಸ್ತ್ರೋಕ್ತವಾದ (ಸ್ಮಾರ್ತ) ಕರ್ಮಗಳು ಸಾಧಿಸುವುದು ಅಸಾಧ್ಯ. ಆದ್ದರಿಂದ ಲೋಕಕಲ್ಯಾಣಕ್ಕಾಗಿ ಹಿಂದೆ ವಿಧಾತೃನಾದ ಚತುರ್ಮುಖ ಬ್ರಹ್ಮನಿಂದ ಈ ಶಾಸ್ತ್ರವು ರಚಿಸಲ್ಪಟ್ಟಿತು.
ಹೀಗೆ ಬ್ರಹ್ಮದೇವನಿಂದ ರಚಿಸಲ್ಪಟ್ಟ ಈ ಶ್ರೇಷ್ಠವಾದ್ ಶಾಸ್ತ್ರವು ಭೂಮಂಡಲದಲ್ಲಿ ಹದಿನೆಂಟು ಋಷಿಗಳಿಂದ ಪ್ರಸಾರಿಸಲ್ಪಟ್ಟಿತು. ಈ ಋಷಿಗಳನ್ನು ಜ್ಯೋತಿಶ್ಶಾಸ್ತ್ರ ಪ್ರವರ್ತಕರೆಂದು ಕರೆಯಲಾಗುತ್ತದೆ. ನಾರದ ಸಂಹಿತೆಯಲ್ಲಿ ಇವರ ಹೆಸರನ್ನು ಹೀಗೆ ಪಟ್ಟಿಮಾಡಲಾಗಿದೆ –
ಬ್ರಹ್ಮಾಚಾರ್ಯೋ ವಸಿಷ್ಠೋಽತ್ರಿರ್ಮನುಃ ಪೌಲಸ್ತ್ಯಲೋಮಶೌ |
ಮರೀಚಿರಂಗಿರಾ ವ್ಯಾಸೋ ನಾರದಃ ಶೌನಕೋ ಭೃಗುಃ ||
ಚ್ಯವನೋ ಯವನೋ ಗರ್ಗಃ ಕಶ್ಯಪಶ್ಚ ಪರಾಶರಃ |
ಅಷ್ಟಾದಶೈತೇ ಗಂಭೀರಾ ಜ್ಯೋತಿಃಶಾಸ್ತ್ರ ಪ್ರವರ್ತಕಾಃ || (ನಾರದ ಸಂಹಿತ 1-2,3)
ಬ್ರಹ್ಮ, ಆಚಾರ್ಯ, ವಸಿಷ್ಠ, ಅತ್ರಿ, ಮನು, ಪೌಲಸ್ತ್ಯ, ಲೋಮಶ, ಮರೀಚಿ, ಅಂಗಿರಾ, ವೇದವ್ಯಾಸ, ನಾರದ, ಶೌನಕ, ಭೃಗು, ಚ್ಯವನ, ಯವನ, ಗರ್ಗ, ಕಶ್ಯಪ, ಪರಾಶರ ಈ ಹದಿನೆಂಟು ಶ್ರೇಷ್ಠರಾದ ಋಷಿಗಳು ಜ್ಯೋತಿಃಶಾಸ್ತ್ರದ ಪ್ರವರ್ತಕರಾಗಿರುತ್ತಾರೆ.
ಕಾಶ್ಯಪ ಸಂಹಿತೆಯಲ್ಲಿ ಕಂಡುಬರುವ ಪ್ರವರ್ತಕರ ಹೆಸರುಗಳು ಹೀಗೆ ಇವೆ –
ಸೂರ್ಯಃ ಪಿತಾಮಹೋವ್ಯಾಸಃ ವಸಿಷ್ಟೋಽತ್ರಿಃ ಪರಾಶರಃ |
ಕಶ್ಯಪೋ ನಾರದೋ ಗರ್ಗೋ ಮರೀಚಿರ್ಮನುರಂಗಿರಾಃ ||
ಲೋಮಶಃ ಪೌಲಿಶಶ್ಚೈವ ಚ್ಯವನೋ ಯವನೋ ಭೃಗುಃ |
ಶೌನಕೋಷ್ಟಾದಶಾಶ್ಚೇತೇ ಜ್ಯೋತಿ ಶಾಸ್ತ್ರಪ್ರವರ್ತಕಾಃ ||
ಸೂರ್ಯ, ಪಿತಾಮಹ (ಬ್ರಹ್ಮ), ವ್ಯಾಸ, ವಸಿಷ್ಠ, ಅತ್ರಿ, ಪರಾಶರ, ಕಶ್ಯಪ, ನಾರದ, ಗರ್ಗ, ಮರೀಚಿ, ಮನು, ಅಂಗಿರಾ, ಲೋಮಶ, ಪೌಲಿಶ, ಚ್ಯವನ, ಯವನ, ಭೃಗು, ಶೌನಕ ಈ ಹದಿನೆಂಟು ಋಷಿಗಳು ಜ್ಯೋತಿಷ್ಯ ಶಾಸ್ತ್ರದ ಪ್ರವರ್ತಕರಾಗಿದ್ದಾರೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments