ಸೂರ್ಯ ಪ್ರತ್ಯಕ್ಷ ದೇವತೆ. ವೇದ ಗರ್ಭವೆನಿಸಿದ ಗಾಯತ್ರೀ ಮಂತ್ರದ ಪ್ರತಿಪಾದ್ಯ ದೇವತೆ. ಭಾರತೀಯ ವೈದಿಕ ಸಂಸ್ಕೃತಿಯ ಆಧಾರ ಸ್ವರೂಪ. ನಮ್ಮ ಎಲ್ಲ ಕರ್ಮಗಳು ಸೂರ್ಯನನ್ನು ಅನುಸರಿಸಿಯೇ ನಡೆಯುತ್ತವೆ, ಎಲ್ಲದಕ್ಕೂ ಸೂರ್ಯನು ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾನೆ. ಆದುದರಿಂದ ಸೂರ್ಯನನ್ನು ಶಾಸ್ತ್ರಗಳು ವಿಶ್ವದ ಕಣ್ಣು (ಜಗದೇಕ ಚಕ್ಷುಃ) ಎಂದು ಕರೆದಿವೆ. ಸಮಸ್ತ ಜೀವ ಜಡಾತ್ಮಕ ಜಗತ್ತಿನ ಎಕೈಕ ಪ್ರೇರಕ ಶಕ್ತಿಯು ಸೂರ್ಯ. ಸೂರ್ಯನು ಜಗತ್ತಿನ ಆತ್ಮನೆಂದು ಋಗ್ವೇದ ಕೊಂಡಾಡಿದೆ (ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ). “ಷು ಪ್ರೇರಣೇ” ಎಂಬ ಧಾತು ನಿಷ್ಪನ್ನವಾದ ಸೂರ್ಯ ಶಬ್ದದ ಅರ್ಥವೇ ಸರ್ವ ಪ್ರೇರಕನೆಂದು. ಎಲ್ಲ ಜೀವರಾಶಿಗಳಲ್ಲಿ ಚೈತನ್ಯ ರೂಪದಿಂದಿರುವ ಪರಮಾತ್ಮ ತತ್ತ್ವವು ಬಾಹ್ಯ ಲೋಕದಲ್ಲಿ ಸೂರ್ಯ ರೂಪದಿಂದ ಕರ್ಮ ಪ್ರೇರಕವಾಗಿದೆ (ಸುವತಿ ಕರ್ಮಣಿ ಲೋಕಂ ಪ್ರೇರಯತೀತಿ ಸೂರ್ಯಃ). ವೇದಕಾಲದಾರಭ್ಯ ಇಂದಿನ ವರೆಗೂ ಬ್ರಹ್ಮನಿಷ್ಠರು ಮೂರು ಸಂಧ್ಯಾಕಾಲದಲ್ಲಿ ಈ ಪ್ರತ್ಯಕ್ಷ ದೇವನ ಅಂತರ್ಗತ ಹಿರಣ್ಮಯ ಪುರುಷ ಪರತತ್ತ್ವ ನಾರಾಯಣನನ್ನೇ ಗಾಯತ್ರೀಯಲ್ಲಿ ಧ್ಯಾನಿಸುತ್ತಾರೆ ಮತ್ತು ಹೋಮಿಸುತ್ತಾರೆ.
ಯಾವ್ಯಾವ ದೇವತೆಗಳಿಂದ ಏನನ್ನು ಪ್ರಾರ್ಥಿಸಬೇಕು ಎಂಬುದನ್ನು ಹೇಳುವ ಒಂದು ಬಹಳ ಪ್ರಸಿದ್ಧವಾದ ಸುಭಾಶಿತವಿದೆ
ಆರೋಗ್ಯಂ ಭಾಸ್ಕರಾದಿಚ್ಛೇದ್ ಧನಮಿಚ್ಛೇದ್ಧುತಾಶನಾತ್ |
ಈಶ್ವರಾಜ್ಞಾನಮಿಚ್ಛೇತ್ ಮೋಕ್ಷಮಿಚ್ಛೇಜ್ಜನಾರ್ದನಾತ್ ||
ಆರೋಗ್ಯವನ್ನು ಸೂರ್ಯನಿಂದ, ಧನವನ್ನು ಅಗ್ನಿದೇವನಿಂದ, ಜ್ಞಾನವನ್ನು ಸದಾಶಿವನಿಂದ ಮತ್ತು ಸಂಸಾರ ಬಂಧನದಿಂದ ಮೋಕ್ಷವನ್ನು ವಿಷ್ಣುವಿನಿಂದ ಇಚ್ಛಿಸಬೇಕು. (ಇವುಗಳನ್ನು ಪಡೆಯಲು ಆ ದೇವತೆಗಳನ್ನು ಪ್ರಾರ್ಥಿಸಬೇಕು, ಪೂಜಿಸಬೇಕು ಎಂದರ್ಥ.) ಅಗ್ನಿಯನ್ನು ಯಜ್ಞದಿಂದ, ಶಿವನನ್ನು ಅಭಿಷೇಕದಿಂದ, ವಿಷ್ಣುವನ್ನು ಅಲಂಕಾರ-ಅರ್ಚನೆಗಳಿಂದ ಪೂಜಿಸಬೇಕು. ಸೂರ್ಯನಿಗೆ ನಮಸ್ಕಾರವೇ ಅತ್ಯಂತ ಪ್ರಿಯವಾದ ಪೂಜೆ. ಆದುದರಿಂದಲೇ “ನಮಸ್ಕಾರಪ್ರಿಯೋ ಭಾನುಃ” ಸೂರ್ಯನು ನಮಸ್ಕಾರ ಪ್ರಿಯ.
ತ್ರಿಸಂಧ್ಯಮರ್ಚಯೇತ್ ಸೂರ್ಯಂ ಸ್ಮರೆದ್ ಭಕ್ತ್ಯಾ ತು ಯೋ ನರಃ |
ನ ಸ ಪಶ್ಯತಿ ದಾರಿದ್ರ್ಯಂ ಜನ್ಮಜನ್ಮನಿ ಚಾರ್ಜುನ ||
(ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಮಾತು) ಹೇ ಅರ್ಜುನನೇ, ಯಾವ ಭಕ್ತನು ತ್ರಿಸಂಧ್ಯಾ ಕಾಲಗಳಲ್ಲಿ ಸೂರ್ಯನ ಅರ್ಚನೆ-ಸ್ಮರಣೆಯನ್ನು ಮಾಡುತ್ತಾನೋ, ಅವನು ಜನ್ಮ ಜನ್ಮಾಂತರಗಳಲ್ಲಿಯೂ ಸಹ ದಾರಿದ್ರ್ಯವನ್ನು ಹೊಂದುವುದಿಲ್ಲ.
ಸದಾಚಾರ ನಿಷ್ಠರಾದ ಬ್ರಾಹ್ಮಣರು ಇವತ್ತಿಗೂ ಮೂರು ಸಂಧ್ಯಾಕಾಲಗಳಲ್ಲಿ ಸೂರ್ಯನಿಗೆ ಅರ್ಘ್ಯ ಕೊಟ್ಟು ಗಾಯತ್ರಿಯನ್ನು ಜಪಿಸಿ ನಮಸ್ಕಾರ ಮಾಡುತ್ತಾರೆ. ಈ ಆಚರಣೆ ಪ್ರಾಚೀನಕಾಲದಿಂದ ಅನಾಚೂನವಾಗಿ ನಡೆದು ಬಂದಿದೆ. ನಮ್ಮ ಶಾಸ್ತ್ರಗಳು ಅನೇಕವಿಧವಾದ ಸೂರ್ಯ ನಮಸ್ಕಾರ ವಿಧಾನಗಳನ್ನು ಹೇಳಿವೆ. ವೇದಗಳಲ್ಲಿ ಸೌರಸೂಕ್ತ, ಅರುಣ ಪ್ರಶ್ನೆ, ಅಥರ್ವಣ ಸೂರ್ಯೋಪನಿಷತ್, ಚಾಕ್ಷುಷೋಪನಿಷತ್ ಮೊದಲಾದವುಗಳಲ್ಲಿ ಸೂರ್ಯ ಪ್ರಾರ್ಥನೆ ಬಂದಿದೆ. ಪುರಾಣ, ಆಗಮ ಗ್ರಂಥಗಳಲ್ಲಿಯೂ ಸಹ ಸೂರ್ಯನ ಪ್ರಾರ್ಥನೆಗಳು ಇವೆ.
ಪ್ರಸಕ್ತ ಶ್ರೀ ಆದಿತ್ಯ ಹೃದಯವು ಆದಿಕಾವ್ಯವಾದ ಶ್ರೀಮದ್‍ವಾಲ್ಮೀಕಿ ರಾಮಾಯಣದ ಯುದ್ಧಕಾಂಡದ ಭಾಗ. ಯುದ್ಧ ನಡೆಯುತ್ತಿರುವಾಗ ಶ್ರೀರಾಮನಿಗೆ ಅಗಸ್ತ್ಯ ಮಹರ್ಷಿಗಳು ಉಪದೇಶಿಸಿದ ಮಾಹಾಮಹಿಮವಾದ ಸ್ತೋತ್ರವಿದು. ಯುದ್ದದಲ್ಲಿ ಬಹಳವಾಗಿ ಬಳಲಿದಂತಹ ರಾವಣನು ಮತ್ತೆ ತನ್ನ ಶಕ್ತಿಸಂಗ್ರಹ ಮಾಡಿಕೊಂಡು ರಾಮನ ಮುಂದೆ ಬಂದು ನಿಲ್ಲುತ್ತಾನೆ. ಸಾಕ್ಷಾತ್ ಶ್ರೀಮನ್ನಾರಾಯಣನೇ ಆದ ಶ್ರೀರಾಮನು ತಾನೂ ಸಹ ಯುದ್ಧದಿಂದ ಚಿಂತಿತನಾದವನಂತೆ ವ್ಯಥೆ ಪಡುತ್ತಿರಲು, ದೇವತೆಗಳ ಸಹಿತ ಯುದ್ಧ ನಿರೀಕ್ಷಣೆಗಾಗಿ ಬಂದಿದ್ದ ಅಗಸ್ತ್ಯ ಮಹರ್ಷಿಗಳು ರಾಮನನ್ನು ಕುರಿತು – ಹೇ ಮಹಾಬಾಹುವಾದ ರಾಮನೇ ನಿನಗೆ ಸನಾತನವಾದ ರಹಸ್ಯವೊಂದನ್ನು ಹೇಳುವೆನು ಕೇಳು, ಇದರಿಂದ ಎಲ್ಲಾ ಶತ್ರುಗಳನ್ನೂ ಯುದ್ಧದಲ್ಲಿ ಗೆಲ್ಲುವೆ.
ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ ||
ಆದಿತ್ಯಹೃದಯವೆಂಬ ಪರಮ ಪುಣ್ಯಕರವಾದ, ಸರ್ವ ಶತ್ರುಗಳನ್ನೂ ನಾಶಗೊಳಿಸುವ, ಅಕ್ಷಯ ಫಲಪ್ರದವಾಗಿರುವ ಪರಮಪಾವನವಾದ ಜಯವನ್ನುಂಟುಮಾಡುವಂತಹ ಈ ಆದಿತ್ಯಹೃದಯವನ್ನು ಜಯಾಪೇಕ್ಷಿಗಳು ಸದಾ ಜಪಿಸಬೇಕು.
ಸರ್ವಮಂಗಲಮಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿಂತಾಶೋಕಪ್ರಶಮನಂ ಆಯುರ್ವರ್ಧನಮುತ್ತಮಮ್ ||
ಎಲ್ಲಾ ಮಂಗಳಗಳಿಗೂ ಮಂಗಳಕರವಾದ, ಎಲ್ಲಾ ಪಾಪಗಳನ್ನೂ ನಾಶಗೊಳಿಸುವ, ಚಿಂತೆ-ದುಃಖಗಳನ್ನು ಪರಿಹರಿಸುವ, ಆಯುಷ್ಯಾಭಿವೃದ್ಧಿಕರವಾದ ಉತ್ತಮಫಲಪ್ರದವಾದ ಸ್ತೋತ್ರವು ಇದಾಗಿದೆ.
ಈ ಸ್ತೋತ್ರದಲ್ಲಿ ಸೂರ್ಯನನ್ನು ಅನೇಕ ಅದ್ಭುತ ಮತ್ತು ರಹಸ್ಯನಾಮಗಳಿಂದ ಸ್ತುತಿಸಲಾಗಿದೆ. ವಿಶ್ವದ ಒಳಗೂ ಹೊರಗೂ ನಿಯಾಮಕ ಶಕ್ತಿಯಾದ ಸೂರ್ಯನ ತೇಜಸ್ಸನ್ನು ಸುಂದರವಾಗಿ ವರ್ಣಿಸಲಾಗಿದೆ.
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ||
ವೇದಗಳೂ ರವಿಯೇ, ಯಜ್ಞಗಳೂ ರವಿಯೇ, ಯಜ್ಞಗಳ ಫಲವೂ ಸಹ ರವಿಯೇ. ಅಷ್ಟೇ ಅಲ್ಲದೇ ಈ ಕೋಕದಲ್ಲಿ ನಡೆಯುವ ಎಲ್ಲ ಸಾತ್ವಿಕ ಶುಭಕರ್ಮಗಳಿವೆಯೋ ಅವೆಲ್ಲವೂ ರವಿಯ ಸ್ವರೂಪವೇ ಆಗಿವೆ.
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿದ್ ನಾವಸೀದತಿ ರಾಘವ ||
ಆಪತ್ತುಗಳು ಉಂಟಾದಾಗ, ಕಷ್ಟಗಳು ಬಂದಾಗ, ಏಕಾಂತದಲ್ಲಿರುವಾಗ, ಭಯವುಂಟಾದಾಗ ಯಾರು ಈ ಆದಿತ್ಯನನ್ನು ಸ್ಮರಿಸುತ್ತಾನೋ ಅಂಥವನು ಎಂದೆಂದಿಗೂ ವಿಷಾದವನ್ನು ಹೋಂದುವುದಿಲ್ಲ.
ಪರಾಶರ ಹೋರಾಶಾಸ್ತ್ರದಲ್ಲಿ “ಶ್ರೀರಾಮೋಽತಾರಃ ಸೂರ್ಯಸ್ಯ” ಶ್ರೀರಾಮನೇ ಸೂರ್ಯನಾರಾಯಣ ಎಂದು ಹೇಳಲಾಗಿದೆ. ಸ್ವತಃ ಪರಮಾತ್ಮನಾದ ಸೂರ್ಯವಂಶಿಯಾದ ಶ್ರೀರಾಮನು ತನ್ನದೇ ವಿಭೂತಿರೂಪನಾದ ಸೂರ್ಯನನ್ನು ಆದಿತ್ಯ ಹೃದಯದಿಂದ ಪ್ರಾರ್ಥಿಸಿ ಶತ್ರುಗಳ ಸಂಹಾರವನ್ನು ಮಾಡಿದನು. ಈ ಪ್ರಸಂಗವು ಆದಿತ್ಯ ಹೃದಯವೆಂಬ ದಿವ್ಯ ಸ್ತೋತ್ರಕ್ಕೆ ಮಹತ್ವವನ್ನು ತಂದುಕೊಡಲು ಮತ್ತು ಸೂರ್ಯಾಂತರ್ಗತವಾದ ತನ್ನ ಸ್ವರೂಪವನ್ನು ಪ್ರಕಟಪಡಿಸಲು ಶ್ರೀರಾಮಚಂದ್ರನು ಮಾಡಿದ ಲೀಲೆ ಮಾತ್ರ.
ಅನಾರೋಗ್ಯದಿಂದ ಬಳಲುವವರಿಗೆ ಅದರಲ್ಲೂ ಹೃದಯರೋಗ, ಕಣ್ಣಿನ ಸಮಸ್ಯೆಗಳು, ರಕ್ತದ ಸಮಸ್ಯೆಗಳು, ರಕ್ತದೊತ್ತಡ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು, ಖಿನ್ನತೆ ಮೊದಲಾದ ಮಾನಸಿಕ ರೋಗಗಳು, ಅಧೈರ್ಯ, ಅಂಜಿಕೆ ಮೊದಲಾದ ಅನೇಕ ಶಾರಿರಿಕ ಮತ್ತು ಮಾನಸಿಕ ರೋಗಗಳಿಗೆ ಸೂರ್ಯಾರಾಧನೆಯಿಂದ ಸಮಾಧಾನ ದೊರೆಯುತ್ತದೆ. ಮಂತ್ರಗಳು ಔಷಧಗಳ ಬಲವನ್ನು ಹೆಚ್ಚಿಸಲು ಸಹಾಯಕವಾಗಿರುತ್ತವೆ. ಸರ್ವ ಜಯಪ್ರದವೂ, ಆಯುಷ್ಯ ವರ್ಧಕವೂ, ಆರೋಗ್ಯ ಪ್ರದವೂ, ಸಕಲ ಕಾರ್ಯಸಾಧವೂ ಆದ ಆದಿತ್ಯ ಹೃದಯದ ಪಾರಾಯಣಗಳನ್ನು ಮಾಡಿ ಶ್ರೀಸೂರ್ಯನಾರಾಯಣನ ಅನುಗ್ರಹವನ್ನು ಪಡೆಯೋಣ. (ವಾಚಕರ ಅನುಕೂಲಕ್ಕಾಗಿ ಈ ಸ್ತೋತ್ರದ ಪಿಡಿಎಫ಼್ ಆವೃತ್ತಿಯನ್ನು ಸಹ ಲೇಖನದ ಕೊನೆಗೆ ಕೊಡಲಾಗಿದೆ.)
ಆದಿತ್ಯಹೃದಯಮ್
ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || ೧ ||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಾಗಮ್ಯಾಬ್ರವೀದ್ ರಾಮಮ್ ಅಗಸ್ತ್ಯೋ ಭಗವಾನ್‍ಋಷಿಃ || ೨ ||
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || ೩ ||
ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ || ೪ ||
ಸರ್ವಮಂಗಲಮಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿಂತಾಶೋಕಪ್ರಶಮನಂ ಆಯುರ್ವರ್ಧನಮುತ್ತಮಮ್ || ೫ ||
ರಶ್ಮಿಮಂತಂ ಸಮುದ್ಯಂತಂ ದೇವಾಸುರನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || ೬ ||
ಸರ್ವದೇವಾತ್ಮಕೋ ಹ್ಯೇಷಃ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || ೭ ||
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ || ೮ ||
ಪಿತರೋ ವಸವಃ ಸಾಧ್ಯಾ ಅಶ್ವಿನೌ ಮರುತೋ ಮನುಃ |
ವಾಯುರ್‌ವಹ್ನಿಃ ಪ್ರಜಾ ಪ್ರಾಣ ಋತುಕರ್ತಾ ಪ್ರಭಾಕರಃ || ೯ ||
ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ || ೧೦ ||
ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್‍ಮಥನಃ ಶಂಭುಸ್ತ್ವಷ್ಟಾ ಮಾರ್ತಾಂಡ ಅಂಶುಮಾನ್ || ೧೧ ||
ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ || ೧೨ ||
ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ |
ಘನವೃಷ್ಟಿರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || ೧೩ ||
ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾಃ ರಕ್ತಃ ಸರ್ವಭವೋದ್‍ಭವಃ || ೧೪ ||
ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ || ೧೫ ||
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || ೧೬ ||
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || ೧೭ ||
ನಮಃ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || ೧೮ ||
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || ೧೯ ||
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || ೨೦ ||
ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಭಿನಿಘ್ನಾಯ ರವಯೇ ಲೋಕಸಾಕ್ಷಿಣೇ || ೨೧ ||
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || ೨೨ ||
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ || ೨೩ ||
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || ೨೪ ||
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿದ್ ನಾವಸೀದತಿ ರಾಘವ || ೨೫ ||
ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || ೨೬ ||
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಽಗಸ್ತ್ಯೋ ಜಗಾಮ ಚ ಯಥಾಗತಮ್ || ೨೭ ||
ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || ೨೮ ||
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || ೨೯ ||
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ || ೩೦ ||
ಅಥ ರವಿರವದನ್ನಿರೀಕ್ಷ್ಯ ರಾಮಂ
ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ
ಸುರಗಣಮಧ್ಯಗತೋ ವಚಸ್ತ್ವರೇತಿ || ೩೧ ||
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments