ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳು
ಸಾಮಾನ್ಯವಾಗಿ ಸಂತಾನ ದೋಷಕ್ಕೆ,ಗರ್ಭಪಾತಕ್ಕೆ ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳನ್ನು ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.ಆಗಿಂದಾಗ್ಗೆ ಆಗುವ ಗರ್ಭಪಾತ, ಗರ್ಭಕೋಶದ ಸಮಸ್ಯೆ,ಅಂಡಾಣು ಸಮಸ್ಯೆ,ವೀರ್ಯಾಣು ಕೊರತೆ,ತಿಂಗಳ ಮುಟ್ಟಿನ ಸಮಸ್ಯೆಯಿಂದ ಸಂತಾನಕ್ಕೆ ತೊಂದರೆಯಾಗುವುದು ಸರ್ವೇಸಾಮಾನ್ಯವಾಗಿರುತ್ತದೆ. ಅಲ್ಲದೆ ಸ್ತ್ರೀಯರಲ್ಲಿ ಸಪ್ತದಾತುವಿನಲ್ಲಿ( ರಸ,ರಕ್ತ,ಮಾಂಸ,ಅಸ್ತಿ,ಮಜ್ಜೆ ಶುಕ್ರ,ಮೇದಸ್ಸು(ಕೊಬ್ಬು)ಇವುಗಳ ಅಸಮತೋಲನ ದಿಂದಲೂ ಕೂಡ ಗರ್ಭದರಿಸಿದ ನಂತರ ಶಿಶುವಿಗೆ ಅಂಗವೈಕಲ್ಯತೆ ಉಂಟಾಗುವ ಸಾದ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಇಂತಹ ಸಮಯದಲ್ಲಿ ಗರ್ಭ ಧರಿಸಿದ ಸ್ತ್ರೀಯು ತನ್ನ ಗರ್ಭವನ್ನು ಸುರಕ್ಷಿತವಾಗಿರಿಸಿಕೊಂಡು ಆರೋಗ್ಯಯುತವಾದ ರೂಪಯುತವಾದ,ವಿದ್ಯಾವಂತನಾಗಬಲ್ಲಂತ ಒಳ್ಳೆಯ ಮಗುವನ್ನು ಪಡೆಯಲಿಚ್ಚಿಸುವ ಸ್ತ್ರೀಯರು ತಮ್ಮ ಗರ್ಭದಾರಣೆಯ ನಂತರ ೩,೬,೮ನೇ ತಿಂಗಳಿನಲ್ಲಿ ಕುಶ್ಮಾಂಡಪೂಜೆಯನ್ನು ಮಾಡುವುದರಿಂದ ತಮಗೆ ಜನಿಸುವ ಮಗುವು ಈ ಮೇಲಿನ ಯಾವುದೇ ತೊಂದರೆಯಿಂದ ಮುಕ್ತವಾಗಿ ಯಾವುದೇ ತೊಂದರೆಇಲ್ಲದೆ ಸುಖ ಪ್ರಸವವನ್ನು ಗರ್ಬಿಣಿಯು ಪಡೆಯುವಲ್ಲಿ ಯಶವನ್ನು ಹೊಂದುವಳು.ಒಂದುವೇಳೆ ಗರ್ಭದಲ್ಲಿನ ಶಿಶುವಿಗೇನಾದರು ಅಂಗಾಗವು ವಿಕಲವಾಗಿದೆಯೆಂಬ ವಿಷಯವು ಗರ್ಭದಲ್ಲಿದ್ದಾಗಲೇ ತಿಳಿದಲ್ಲಿ ಈ ಕುಶ್ಮಾಂಡಬಲಿ ಪೂಜೆಮಾಡುವುದರಿಂದ ಆ ನ್ಯೂನತೆಯಿಂದ ಗರ್ಭದಲ್ಲಿರುವ ಮಗುವನ್ನು ರಕ್ಷಿಸಬಹುದಾಗಿದೆ.
ಅದೂ ಅಲ್ಲದೆ ನಮಗೆ ಯಾರಾದರು ಮಕ್ಕಳಾಗದಿರುವಂತೇನಾದರು ಮಾಟ ಮಾಡಿಸಿದ್ದರೆ, ಪಿಶಾಚಿಶಾಪದಿಂದ ಆಗಾಗ್ಗೆ ಗರ್ಭಪಾತಗಳಾಗುತ್ತಿದ್ದಲ್ಲಿ,ಸಂತಾನವೇ ಆಗಿರದಿದ್ದಲ್ಲಿ,ಜನನಾಂಗ ದೋಷದಿಂದಾಗಿ ಅಂಡಾಣುವಿಗೆ ತೊಂದರೆಯಿಂದಾಗಿ ,ಗರ್ಭಕೋಶದ ಕಾಯಿಲೆಯಿಂದ ಸಂತಾನವಾಗದೆ ಇದ್ದಲ್ಲಿ ಇಂತಹ ಎಲ್ಲಾ ಸಮಸ್ಯೆಗಳನಿವಾರಣೆಗಾಗಿ ಹುಣ್ಣಿಮೆ ಅಥವ ಅಮಾವಾಸ್ಯೆ ಅಥವ ತ್ರಯೋದಶಿ ತಿಥಿ ಇರುವ ದಿನ ಸಾಯಂಕಾಲ ಅಥವ ರಾತ್ರಿಯಲ್ಲಿ ಈ ಕುಶ್ಮಾಂಡಫಲದ ಪೂಜೆಯನ್ನು ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸಂತಾನವು ಲಭಿಸುತ್ತದೆ.
ಸಂತಾನ ವಿಚಾರಕ್ಕೆ ಕುಶ್ಮಾಂಡಫಲ ಪೂಜೆಯ ವಿಧಾನ:
ಒಂದು ಸಾದಾರಣವಾದ ಬೂದುಕುಂಬಳಕಾಯನ್ನು ತಗೆದುಕೊಂಡು ಅದನ್ನು ಮದ್ಯಬಾಗದಲ್ಲಿ ಒಂದು ತ್ರಿಕೋನಾಕಾರವಾಗಿ ಕತ್ತರಿಸಿ ಕುಂಬಳಕಾಯ ಒಳಗೆ ರಕ್ತಚಂದನ ಅಥವ ಕುಂಕುಮವನ್ನು ಹಾಕಿ ಜೊತೆಯಲ್ಲಿ ೭ ಒಂದು ರೂಪಾಯಿ ಕಾಯಿನ್ ಹಾಕಿ ಮುಚ್ಚಿ ನಂತರ ಕುಂಬಳಕಾಯಿಗೆ ಅರಿಸಿಣ ಕುಂಕುಮಾದಿ ಅಕ್ಷತೆ ಹೂಗಳಿಂದ ಶೋಡಶೋಪಚಾರಪೂಜೆಯನ್ನು ಮಾಡಿ ಓಂ ಕುಶ್ಮಾಂಡದೇವಿಭ್ಯ ನಮಃ(ಕುಶ್ಮಾಂಡದೇವತಾಭ್ಯೋನಮಃ) ಎಂದು ೨೧ ಸಲ ಹೇಳಿ ಪೂಜಿಸುವುದು.
ಗರ್ಭಿಣಿಯು ಈ ಪೂಜಿಸಿದ ಕುಂಬಳಕಾಯಿಯನ್ನು ಕೈಯಿಂದ ೭ ಸಲ ಸಂಪೂರ್ಣವಾಗಿ ಎರಡು ಹಸ್ತದಲ್ಲಿ ಮುಟ್ಟಿ ವಂದನಾಪೂರ್ವಕವಾದ ನಮಸ್ಕಾರವನ್ನು ಕುಶ್ಮಾಂಡಕ್ಕೆ ಮಾಡುವುದು.
ಸಾದಾರಣವಾಗಿ ನೀವು ವಾಸಮಾಡುವ ಮನೆಯಲ್ಲಿ ವಾಸ್ತುದೋಷವಿದ್ದಲ್ಲಿ ಅಥವ ನಿಮ್ಮ ಮನೆಯಲ್ಲಿ ಯಾರಿಗಾದರು ಆಗಿಂದಾಗ್ಗೆ ಆಕಸ್ಮಿಕ ಅಪಘಾತಗಳು ಸಂಬವಿಸುತ್ತಿದ್ದಲ್ಲಿ ಈ ಕುಶ್ಮಾಂಡಪೂಜೆಯನ್ನು ಮಾಡುವುದರಿಂದ ಈ ತೊಂದರೆ ನಿವಾರಣೆಯಾಗುತ್ತದೆ.ಕುಂಬಳಕಾಯಿಯನ್ನು ತ್ರಿಕೋನಾಕಾರವಾಗಿ ಕತ್ತರಿಸಿ ತಗೆದು ಅದರಒಳಗೆ ರಕ್ತಚಂದನ(ಕುಂಕುಮ) ೧೩ ಒಂದು ರೂಪಾಯಿನ ಕಾಯಿನ್ ಗಳನ್ನು ಹಾಕಿ ಪೂಜಿಸುವುದು.ಈ ಪೂಜೆ ಮಾಡುವುದರಿಂದ ಮಲ.ಮೂತ್ರಾದಿ,ಗುಪ್ತಾಂಗಗಳ,ನವದ್ವಾರಗಳ,ನವದಾತುಗಳ ಯಾವುದೇ ತೊಂದರೆ ಇದ್ದಲ್ಲಿ ನಿವಾರಣೆಯಾಗುವುದು.
-saMgraha
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments