Skip to main content

ಫಲಜ್ಯೋತಿಷ್ಯ – ಶುಭಾರಂಭ

|| ಶ್ರೀ ಶ್ರೀ ವಿಶ್ವಂಭರಮೂರ್ತಯೇ ನಮಃ || || ಶ್ರೀ ಗಜಾನನಾಯ ನಮಃ || ಶ್ರೀ ಸರಸ್ವತ್ಯೈ ನಮಃ || ಶ್ರೀ ವೇದವ್ಯಾಸಾಯ ನಮಃ || ಶ್ರೀಶನಂಘ್ರಿಸರೋಜಭೃಂಗ ಮ | ಹೇಶಸಂಭವ ಮನ್ಮನದೊಳು ಪ್ರ | ಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ | ನೀ ಸಲಹು ಸಜ್ಜನರ ವೇದ | ವ್ಯಾಸಕರುಣಾಪಾತ್ರ ಮಹದಾ | ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು || ಶೂರ್ಪಕರ್ಣದ್ವಯ ವಿಜಿತಕಂ | ದರ್ಪಶರ ಉದಿತಾರ್ಕಸನ್ನಿಭ | ಸರ್ಪವರಕಟಿಸೂತ್ರ ವೈಕ್ರತಗಾತ್ರ ಸುಚರಿತ್ರ | ಸ್ವರ್ಪಿತಾಂಕುಶಪಾಶಕರ ಖಳ | ದರ್ಪಭಂಜನ ಕರ್ಮಸಾಕ್ಷಿಗ | ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ || ಏಕವಿಂಶತಿಮೋದಕಪ್ರಿಯ | ಮೂಕರನು ವಾಗ್ಮಿಗಳ ಮಾಳ್ಪೆ ಕೃ | ಪಾಕರೇಶ ಕೃತಜ್ಞಕಾಮದ ಕಾಯೋ ಕೈಪಿಡಿದು | ಲೇಖಕಾಗ್ರಣಿ ಮನ್ಮನದ ದು | ರ್ವ್ಯಾಕುಲವ ಪರಿಹರಿಸು ದಯದಿ ಪಿ- ನಾಕಿಭಾರ್ಯಾತನುಜ ಮೃಧ್ಭವ ಪ್ರಾರ್ಥಿಸುವೆ ನಿನಗೆ || ಜಯ ಜಯತು ವಿಘ್ನೇಶ ತಾಪ | ತ್ರಯವಿನಾಶನ ವಿಶ್ವಮಂಗಳ | ಜಯ ಜಯತು ವಿದ್ಯಾಪ್ರದಾಯಕ ವೀತಭಯಶೋಕ | ಜಯ ಜಯತು ಚಾರ್ವಾಂಗ ಕರುಣಾ | ನಯದಿಂದಲಿ ನೋಡಿ ಜನುಮಾ | ಮಯಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ || ಜ್ಯೋತಿಷ್ಯ ಹಾಗು ವಾಸ್ತುಶಾಸ್ತ್ರ ಭಾವಿಕ ಬಳಗಕ್ಕೆ ಆದರದ ನಮಸ್ಕಾರಗಳು. ಈ ಅಂತರ್ಜಾಲ ತಾಣ ಮುಖ್ಯವಾಗಿ ಫಲಜ್ಯೋತಿಷ್ಯಶಾಸ್ತ್ರದ ಕುರಿತದ್ದಾಗಿದೆ. ಜ್ಯೋತಿಷ್ಯ ಮತ್ತು ಸಂಬಂಧಿತ ಶಾಸ್ತ್ರಗಳ ಬಗ್ಗೆ ಜನರಲ್ಲಿ ಶುದ್ಧ ಅರಿವು ಮೂಡಿಸುವುದು ಧ್ಯೇಯ. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಇವತ್ತಿನ ಯುವ ಜನಾಂಗಕ್ಕೆ ಸುಲಭವಾಗಿ ಪರಿಚಯಿಸಿವುದು ಆಶಯವಾಗಿದೆ. ವಿವಿಧ ಜ್ಯೋತಿಷ್ಯ, ಗ್ರಹಗತಿ, ಗೋಚಾರ, ಪಂಚಾಂಗ, ವಾಸ್ತುಶಾಸ್ತ್ರ, ಧರ್ಮಶಾಸ್ತ್ರ, ಹಬ್ಬಗಳು, ವ್ರತಗಳು ಮೊದಲಾದ ನಮ್ಮ ದೈನಂದಿನ ಧಾರ್ಮಿಕ ಮತ್ತು ವ್ಯವಹಾರಗಳಿಗೆ ಬೇಕಾದ ಶಾಸ್ತ್ರೀಯ ವಿಷಯಗಳ ಕುರಿತಾದ ಮಾಹಿತಿಪರ ಲೇಖನಗಳನ್ನು ಈ ತಾಣದಲ್ಲಿ ಕೊಡಲಾಗುವುದು. ಗುರು ಹಿರಿಯರ ಅನುಗ್ರಹದಿಂದ ಈ ಪ್ರಯತ್ನ ಸಫಲವಾಗಲಿ ಯಶಸ್ವಿಯಾಗಲಿ ಎಂದು ಕುಲಸ್ವಾಮಿ ಶ್ರೀಲಕ್ಷ್ಮೀವೆಂಕಟೇಶ ದೇವರಲ್ಲಿ ಬೇಡಿಕೊಳ್ಳುವೆನು. ಸಜ್ಜನರಾದ ಓದುಗರು ಪ್ರೋತ್ಸಾಹ ಪೂರ್ವಕವಾಗಿ ಶುಭಹಾರೈಸಬೇಕು. ಆದಿತ್ಯಾದಿ ನವಗ್ರಹಾಃ ಶುಭಕರಾ ಮೇಷಾದಯೋ ರಾಶಯೋ ನಕ್ಷತ್ರಾಣಿ ಸ-ಯೋಗಾಶ್ಚ ತಿಥಯಸ್ತದ್-ದೇವತಾಸ್ತದ್-ಗಣಾಃ | ಮಾಸಾಬ್ದಾ ಋತವಸ್ತಥೈವ ದಿವಸಾಃ ಸಂಧ್ಯಾಸ್ತಥಾ ರಾತ್ರಯಃ ಸರ್ವೇ ಸ್ಥಾವರ-ಜಂಗಮಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ಶುಭಕರಗಳಾದ ಆದಿತ್ಯಾದಿ ನವಗ್ರಹರು, ಮೇಷಾದಿ ಹನ್ನೆರಡು ರಾಶಿಗಳು, ನಕ್ಷತ್ರಗಳು, ಯೋಗಗಳ ಸಹಿತವಾದ ತಿಥಿಗಳು, ಅವುಗಳ ಅಭಿಮಾನಿ ದೇವತಾ ಗಣಗಳು, ಮಾಸಗಳು-ವರ್ಷಗಳು, ಋತುಗಳು, ದಿವಸಗಳು, ಸಂಧ್ಯಾಕಾಲ, ರಾತ್ರಿಗಳು ಮತ್ತು ವಿಶ್ವದ ಎಲ್ಲ ಚರಾಚರ (ಸ್ಥಾವರ-ಜಂಗಮ) ತತ್ತ್ವಗಳು ನಮಗೆ ಪ್ರತಿದಿನವು ಮಂಗಳವನ್ನುಂಟುಮಾಡಲಿ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...