ಯಾದವ ನೀ ಬಾ ಯದುಕುಲನಂದನ |
ಮಾಧವ ಮಧುಸೂಧನ ಬಾರೋ ||ಪಲ್ಲವಿ||
ಸೋದರ ಮಾವನ ಮಧುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ ||ಅನುಪಲ್ಲವಿ||
ಚರಣ
ಶಂಖಚಕ್ರವು ಕೈಯಲಿ ಹೊಳೆಯುತ |
ಬಿಂಕದ ಗೋವಳ ನೀ ಬಾರೋ ||
ಅಕಳಂಕ ಮಹಿಮನೆ ಆದಿನಾರಾಯಣ |
ಬೇಕೆಂಬ ಭಕುತರಿಗೊಲಿಬಾರೋ ||1||
ಕಣಕಾಲಂದುಗೆ ಘಲುಘಲುರೆನುತಲಿ |
ಝಣಝಣ ವೇಣುನಾದದಲಿ ||
ಚಿಣಿಕೋಲು ಚೆಂಡು ಬುಗುರಿಯನಾಡುತ |
ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ||2||
ಖಗವಾಹನನೇ ಬಗೆಬಗೆ ರೂಪನೇ |
ನಗುಮೊಗದರಸನೇ ನೀ ಬಾರೋ ||
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ|
ಪುರಂದರವಿಠಲ ನೀ ಬಾರೋ ||3||
ರಚನೆ: ಪುರಂದರ ದಾಸ
ರಾಗ : ಮೋಹನ
ತಾಳ : ಖಂಡ ಛಾಪು
ಭಾಷೆ : ಕನ್ನಡ
ಕಂಡು ಕಂಡು ನೀ ಎನ್ನ ಕೈ ಬಿಡುವರೇ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ ||
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1||
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ಕಡುನೊಂದೆ ನಾನು
ಸನಕಾದಿಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||2||
ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||3||
ರಾಗ: ನಾದನಾಮಕ್ರಿಯ
ತಾಳ: ಆದಿ
ರಚನೆ : ಪುರಂದರ ದಾಸರು
ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ
ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧||
ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||೨||
ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು ||೩||
ಪಲ್ಲವಿ
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ
ಚರಣ
ನಷ್ಟ ಮೊದಲಾದಂಥ ಕಷ್ಟ ಬಿಡಿಸೊ
ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತಜನರೊಳು ಎನ್ನ ಸೇರಿಸೊ
ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ [೧]
ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ
ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ
ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ [೨]
ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ
ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ [೩]
ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ
ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ
ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ
ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದೀ
ಮುಕ್ತನಾಗಬೇಕು ಎಂದುಮುತ್ತಿನ ಆರತಿ ಎತ್ತುವೇನೋ
ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ
ರಾಗ : ಶುದ್ಧಧನ್ಯಾಸಿ
ತಾಳ : ಖಂಡ ಛಾಪು
ರಚನೆ : ಪುರಂದರ ದಾಸರು
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ||ಪ ||
ಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ ಹರಿದಾಡುವಾಗಲಿ
ಕೋಟಿ ವಿನೋದದಿ ನೋಡದೆ ನಾ ಮಾಡಿದ ಪಾಪ ಬಿಟ್ಟೋಡಿ ಹೋಗೊಹಾಗೆ||
ಊರಿಗೆ ಹೋಗಲಿ ಊರೊಳಗಿರಲಿ ಹಗೆಬಂದಗಲಿ ಕಾದಿರಲಿ
ವಾರಿಜನಾಭ ನರಸಾರಥಿ ಸನ್ನುತ ಸಾರಿ ಸಾರಿಗೆ ನಾ ಬೀಸರದಾಗೆ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಕೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ ||
ಸಂತತ ಹರಿ ನಿನ್ನ ಸಾಸಿರ ನಾಮವು ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠ್ಠಲ ರಾಯನ ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ ||
ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||
ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ ಕರುಣಾನಿಧಿ ಎಂದೆನಿಸಿ ಮೆರೆವನ ||
ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ||
ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ ||
ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು
ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ ||
ಕಂಡೆ ನಾ ಗೋವಿಂದನಾ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ (ಪ)
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ (೧)
ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲವಂದ್ಯನ
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ (೨)
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತರಕ್ಷಕನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ (೩)
ರಚನೆ : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ
ಪಲ್ಲವಿ
ಹೇ ವಾಣಿ ಹೇ ವಾಣಿ ಹೇ ವಾಣಿ
ಹೇ ವಾಣಿ ಹೇ ವಾಣಿ
ಚರಣ
1. ಐಂ ಬೀಜ ವಾಸೇ ಹೇ ವಾಣಿ, ಆನಂದ ಧಾರೆ ಹೇ ವಾಣಿ
ಶ್ರೀ ಕಾಳಿದಾಸ ನೇತ್ರಿ ಹೇ ವಾಣಿ, ಕಾವ್ಯ ಪ್ರಕಾಶೆ ಹೇ ವಾಣಿ
2. ಓಂಕಾರ ವೆದ್ಯೇ ಹೇ ವಾಣಿ, ಭವರೋಗ ವೈದ್ಯೆ ಹೇ ವಾಣಿ
ಸುಶ್ವೇತ ವರ್ಣೆ ಹೇ ವಾಣಿ, ಅಮೃತ ಪ್ರಕಾಶೆ ಹೇ ವಾಣಿ
3. ಪುಸ್ತಕ ಹಸ್ತೆ ಹೇ ವಾಣಿ, ವೇದ ಸ್ವರೂಪಿಣಿ ಹೇ ವಾಣಿ
ಲಸದಕ್ಷ ಮಾಲೆ ಹೇ ವಾಣಿ, ನಾದ ಪ್ರಕಾಶೆ ಹೇ ವಾಣಿ
4. ಹಂಸಾದಿ ರೂಡೆ ಹೇ ವಾಣಿ, ಹಂಸೈ ರುಪಾಸ್ಯೆ ಹೇ ವಾಣಿ
ವಿವೇಕ ಹಂಸೆ ಹೇ ವಾಣಿ, ಸೋಹಂ ಪ್ರಕಾಶೆ ಹೇ ವಾಣಿ
5. ವೀಣಾ ವಿನೋದಿನಿ ಹೇ ವಾಣಿ, ಯೋಗ ಪ್ರಕಾಶೆ ಹೇ ವಾಣಿ
ವರಸಿದ್ಧಿ ದಾಯಿನಿ ಹೇ ವಾಣಿ, ಶ್ರೀ ಸಚ್ಚಿದಾನಂದಿ ಹೇ ವಾಣಿ
ಪಲ್ಲವಿ
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ
ಅನುಪಲ್ಲವಿ
ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ
ಚರಣ
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ(1)
ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ ಸೊಸೆಯ(2)
ರಚನೆ : ಪುರಂದರ ದಾಸರು
ರಾಗ: ವಸಂತ
ತಾಳ : ಆದಿ
ಭಾಷೆ : ಕನ್ನಡ
ಪಲ್ಲವಿ
ಕೊಡು ಬೇಗ ದಿವ್ಯಮತಿ ಸರಸ್ವತಿ ||
ಅನುಪಲ್ಲವಿ
ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ||
ಚರಣ
ಇಂದಿರಾ ರಮಣನ ಹಿರಿಯ ಸೋಸಯು ನಿನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ||1||
ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||2||
ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ||3||
ರಾಗ : ಮೋಹನ ಕಲ್ಯಾಣಿ
ರಚನೆ : ಬೆಂಗಳೂರು ರಾಮಮೂರ್ತಿ
ಸಂಗೀತ ಸಾಮ್ರಾಜ್ಯ ಸಂಚಾರಿಣಿ ಶೃಂಗಾರ ಶ್ರಿಂಗೇರಿ ಪುರವಾಸಿನಿ|ಪಲ್ಲವಿ|
ಉನ್ನತ ಪಾಂಡ್ಯ ಕೇರಳ ವಾಸಿನಿ ಸನ್ನುತ ಶ್ರೀಚಕ್ರ ಮಧ್ಯ ನಿವಾಸಿನಿ
ಕಾಲಡಿ ಶಂಕರ ಹೃದಯ ನಿವಾಸಿನಿ ಕಾಲ ಪಾಲಕ ಬ್ರಹ್ಮ ವಿಶ್ವಾಸಿನಿ|ಅ.ಪ.|
ಗಾಂಧಾರ ಪಂಚಮ ದೈವತ ರೂಪಿಣಿ
ನಿಷಾದ ಮಧ್ಯಮ ಸಪ್ತ ಸ್ವರೂಪಿಣಿ
ಮಂದಾರ ಕುಸುಮ ಮಣಿಮಯ ತೇಜೋ
ಮಾಧುರ್ಯ ಮೋಹನಕಲ್ಯಾಣಿ ಸ್ವರೂಪಿಣಿ||ಚರಣ||
ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ನಿಲ್ಲ ಬಾರದೆ || ಪಲ್ಲವಿ ||
ಲೋಲಲೋಚನೆ ತಾಯೆ
ನಿರುತ ನಂಬಿದೆ ನಿನ್ನ || ಅನುಪಲ್ಲವಿ ||
ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ || ೧ ||
ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ ||
ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ ||
ಪಲ್ಲವಿ
ಸರಸ್ವತಿ ನಮೋಸ್ತುತೇ ಶಾರದೆ ವಿದ್ಯಾಪ್ರದೆ
ಅನುಪಲ್ಲವಿ
ಕರಧೃತ ವೀಣಾ ಪುಸ್ತಕ ವರಮಣಿ ಮಾಲಾಲಂಕೃತ
ಚರಣ
ನರಹರಿ ಸುತ ವಿಧಿ ಲಾಲಿತ ನವಮಣಿಯುತ ಕಂಭುಗಳೇ
ಸುರ ಸೇವಿತ ಪದಯುಗಳೇ ಸುಧಾಕರ ಸಮಧವಳೇ
ಜಯ ಜಯ ಹೇ ಭಗವತಿ ಸುರ ಭಾರತಿ, ತವ ಚರಣೌ ಪ್ರಣಮಾಮಹ
ನಾದ ಬ್ರಹ್ಮಮಯಿ ಜಯ ವಾಗೀಶ್ವರಿ, ಶರಣಂ ತೇ ಗಚ್ಚಾಮಹ
ತ್ವಮಸಿ ಶರಣ್ಯ ತ್ರಿಭುವನ ಧನ್ಯಾ, ಸುರ ಮುನಿ ವಂಧಿತ ಚರಣ
ನವ ರಸ ಮಧುರ ಕವಿತಾ ಮುಖರ, ಸ್ಮಿತ ರುಚಿ ರುಚಿರಾ ಭರಣ
ಆಸಿನಾ ಭವ ಮಾನಸ ಹಂಸೆ, ಕುಂದ ತುಹಿನ ಶಶಿ ಧವಳೇ
ಹರ ಜಗತ್ ಗುರು ಬೋಧಿ ವಿಕಾಸಂ, ಸ್ತಿತ ಪಂಕಜ ತನು ವಿಮಲೆ
ಲಲಿತ ಕಲಾಮಯಿ ಜ್ಞಾನ ವಿಭಾಮಯಿ ವೀಣಾ ಪುಸ್ತಕ ಧಾರಿಣಿ
ಮಥಿರ ಸ್ತಾಮ್ನೋ ತವ ಪದ ಕಮಲ, ಅಯಿ ಕುಂಟ ವಿಷ ಹಾರಿಣಿ
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ
ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ
ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ
ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ
ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ
ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
ಚಲನ ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಕರೀಂ ಖಾನ್
ಗಾಯಕಿ : ಎಸ್.ಜಾನಕಿ
ಜಯ ಗೌರಿ ಜಗದೀಶ್ವರಿ
ಕಾವುದೆನ್ನ ಕಲಾ ಸಾಗರಿ||
ಸುಮುಧರ ಗಾನ ಸುಲಲಿತ ತಾನ
ಬೇಡುವೆನು ನಾ ಸುಧಾಮಯಿದಾನ
ಧಿಮಿ ಕೀಟ ತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದ ನೀ||
ಲಯ ಭಯ ಹಾರಿ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವ ಜಾಯೆ ಪ್ರಭಾವದಿ ಕಾಯೆ
ತಾಯೆ ಮಾಯೆ ದೇವಿಯೆ||
ರಚನೆ : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ
ಪಲ್ಲವಿ
ಹೇ ವಾಣಿ ಹೇ ವಾಣಿ ಹೇ ವಾಣಿ
ಹೇ ವಾಣಿ ಹೇ ವಾಣಿ
ಚರಣ
1. ಐಂ ಬೀಜ ವಾಸೇ ಹೇ ವಾಣಿ, ಆನಂದ ಧಾರೆ ಹೇ ವಾಣಿ
ಶ್ರೀ ಕಾಳಿದಾಸ ನೇತ್ರಿ ಹೇ ವಾಣಿ, ಕಾವ್ಯ ಪ್ರಕಾಶೆ ಹೇ ವಾಣಿ
2. ಓಂಕಾರ ವೆದ್ಯೇ ಹೇ ವಾಣಿ, ಭವರೋಗ ವೈದ್ಯೆ ಹೇ ವಾಣಿ
ಸುಶ್ವೇತ ವರ್ಣೆ ಹೇ ವಾಣಿ, ಅಮೃತ ಪ್ರಕಾಶೆ ಹೇ ವಾಣಿ
3. ಪುಸ್ತಕ ಹಸ್ತೆ ಹೇ ವಾಣಿ, ವೇದ ಸ್ವರೂಪಿಣಿ ಹೇ ವಾಣಿ
ಲಸದಕ್ಷ ಮಾಲೆ ಹೇ ವಾಣಿ, ನಾದ ಪ್ರಕಾಶೆ ಹೇ ವಾಣಿ
4. ಹಂಸಾದಿ ರೂಡೆ ಹೇ ವಾಣಿ, ಹಂಸೈ ರುಪಾಸ್ಯೆ ಹೇ ವಾಣಿ
ವಿವೇಕ ಹಂಸೆ ಹೇ ವಾಣಿ, ಸೋಹಂ ಪ್ರಕಾಶೆ ಹೇ ವಾಣಿ
5. ವೀಣಾ ವಿನೋದಿನಿ ಹೇ ವಾಣಿ, ಯೋಗ ಪ್ರಕಾಶೆ ಹೇ ವಾಣಿ
ವರಸಿದ್ಧಿ ದಾಯಿನಿ ಹೇ ವಾಣಿ, ಶ್ರೀ ಸಚ್ಚಿದಾನಂದಿ ಹೇ ವಾಣಿ
ವಂದಿಸುವದಾದಿಯಲಿ ಗಣನಾಥನ ||
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ||
ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು ||
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ ||
ಪಲ್ಲವಿ
ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ
ಅನುಪಲ್ಲವಿ
ವರದ ಅಭಯಕರ ಕಮಲೇ ಶರಣಾಗತ ವತ್ಸಲೇ
ಚರಣ
ಪರಂಧಾಮ ಪ್ರಕೀರ್ತಿತೆ ಪಶುಪಾಶ ವಿಮೋಚಿತೆ
ಪನ್ನಗಾಭರಣಯುತೆ ನಾಗಗಾಂಧಾರಿ ಪುಜಿತಾಬ್ಜಪದೆ
ಸದಾ ನಂದಿತೆ ಸಂಪದೆ ವರ ಗುರುಗುಹ ಜನನಿ
ಮದಶಮನಿ ಮಹಿಷಾಸುರ ಮರ್ಧಿನಿ ಮಂದಗಮನಿ
ಮಂಗಳ ವರ ಪ್ರದಾಯಿನಿ
ರಚನೆ: ಶ್ರೀ ಗೋಪಾಲ ದಾಸರು
ಭಾಷೆ : ಕನ್ನಡ
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ ||
ಪಾರ್ವತಿ ಭಕ್ತರ ಸಾರಥಿ (ಸುರಜನ) ವಂದಿತೆ
ಸುರಪತಿ ಗಜಮುಖ ಮೂರುತಿ ಮಾತೆ||
ಮನದಭಿಮಾನಿಯೇ ನೆನೆವೆನು ನಿನ್ನ
ಅನುಸರಿಸೆನ್ನನು (ಕನಿಕರಿಸೆನ್ನನು) ಅಂಬುಜ ಪಾಣಿ||
ಮಂಗಳೆ ಮೃಡನ ಅಂತರಂಗಳೇ ಹರಿಪದ
ಭೃಂಗಳೆ ತೊಂಗಳೇ ಪನ್ನಗ ವೇಣಿ||
ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ
ಕಾಣಿಸಿ ಕೊಡುವಂತ ಶೂಲಿಯ ರಾಣಿ||
ರಚನೆ : ಪುರಂದರದಾಸರು
ರಾಗ : ಸಿಂಧು ಭೈರವಿ
ತಾಳ : ಆದಿ
ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ
ಪಂಕಜ ನೇತ್ರಂ ಪರಮ ಪವಿತ್ರಂ
ಶಂಖ ಚಕ್ರಧರ ಚಿನ್ಮಯ ರೂಪಂ
ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಾಂ
ತುಂಬುರು ನಾರದ ಗಾನವಿಲೋಲಂ
ಮಕರ ಕುಂಡಲಧಾರ ಮದನ ಗೋಪಾಲಂ
ಭಕ್ತ ಪೋಷಕ ಶ್ರೀ ಪುರಂದರ ವಿಠಲಂ
ರಾಗ : ಸಾವೇರಿ
ರಚನೆ : ಪುರಂದರ ದಾಸರು
ಪಲ್ಲವಿ
ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ ||
ಅನುಪಲ್ಲವಿ
ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ||
ಚರಣ
ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ||೧||
ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ ||೨||
ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ ||೩||
ಓಡಿ ಬಾರಯ್ಯ ವೈಕುಂಠಪತಿ ನಿನ್ನ
ರಚನೆ : ಪುರಂದರ ದಾಸ
ರಾಗ : ಭೈರವಿ
ತಾಳ : ಆದಿ
ಪಲ್ಲವಿ
ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ಅನುಪಲ್ಲವಿ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ
ಪಾಡಿ ಪೊಗಳುವೇನು ಪರಮ ಪುರುಷ ಹರಿಯೆ
ಚರಣ
ಕೆಂದಾವರೆ ಪೋಲ್ವ ಪಾದಗಳಿಂದ ರಂಗ
ಧಿಂ ಧಿಂ ಧಿಮಿಕೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ಗಲುಗಲುರೆನ್ನಲು
ಕುಂದಣ ಉಡಿದಾರ ಝಣ ಝಣ ಎನ್ನಲು
ಮಂಗಳಾತ್ಮಕ ಮೋಹನಕಾಯ ರಂಗ
ಸಂಗೀತಲೋಲ ಸದ್ಗುಣ ಶೀಲ
ಅಂಗನೆಯರಿಗೆಲ್ಲ ಅತಿಪ್ರಿಯನಾದ
ಶುಭಾಂಗ ಶ್ರೀಪುರಂದರ ವಿಠಲರಾಯ
ರಚನೆ : ಮುತ್ತಯ್ಯ ಭಾಗವತರ್
ರಾಗ : ಶುದ್ಧ ಧನ್ಯಾಸಿ
ತಾಳ : ಆದಿ
ಭಾಷೆ : ಸಂಸ್ಕೃತ
ಪಲ್ಲವಿ
ಹಿಮಗಿರಿ ತನಯೇ ಹೇಮಲತೆ ಅಂಬ
ಈಶ್ವರಿ ಶ್ರೀಲಲಿತೆ ಮಾಮವ
ಅನುಪಲ್ಲವಿ
ರಮಾ ವಾಣಿ ಸಂಸೇವಿತ ಸಕಲೇ
ರಾಜರಾಜೇಶ್ವರಿ ರಾಮ ಸಹೋದರಿ
ಚರಣ
ಪಾಶಾಂಕುಶೇಶು ದಂಡಕರೇ ಅಂಬ
ಪರಾತ್ಪರೆ ನಿಜ ಭಕ್ತಪರೇ
ಅಚಾಂಬರೇ ಹರಿಕೇಶ ವಿಲಾಸೇ
ಆನಂದ ರೂಪೇ ಅಮಿತ ಪ್ರತಾಪೇ
ಪಲ್ಲವಿ
ಜಾಲಂಧರ ಸುಪೀಠಸ್ತೇ ಜಪಾಕುಸುಮ ಭಾಸುರೆ
ಅನುಪಲ್ಲವಿ
ಬಾಲಾರ್ಕ ಕೋಟಿ ಪ್ರಭೆ ಬಾಲೆ ಪರಿಪಾಲಿಸೌ
ಚಿಟ್ಟೆಸ್ವರ
ಗ ,ಗಪ ದ,ದನಿ ಸ,ಸನಿ |ನಿದದಪ ಗ,ಗಪ ಗಪಗಸ||
ಗ,ಗಪ ಗಪಗಪ ದನಿದಪ |ದಪಗಸ ನಿದಪಗ ಸನಿದಪ||
ಗಪದನಿ ಸಗಪಗ ಸಗಸ, |ಸನಿದನಿ ಪದಗಪ ದಪಗಸ||
ಚರಣ
ಭವರೋಗ ನಿವಾರಿಣಿಭಕ್ತಜನ ಪರಿಪಾಲಿನಿ
ನವಶಕ್ತಿ ಸ್ವರೂಪಿಣಿನಾದ ಹರಿಕೇಶ ರಾಜ್ಞಿ
(ಚಿಟ್ಟೆಸ್ವರ)
ರಚನೆ : ಮುತ್ತಯ್ಯ ಭಾಗವತರ್
ರಾಗ : ನವರಸ ಕನ್ನಡ
ತಾಳ : ಆದಿ
ಭಾಷೆ : ಸಂಸ್ಕೃತ
ಪಲ್ಲವಿ
ದುರ್ಗಾದೇವಿ ದುರಿತ ನಿವಾರಿಣಿ
ಅನುಪಲ್ಲವಿ
ಸ್ವರ್ಗಾಪವರ್ಗ ಸೌಖ್ಯದಾಯಿನೀ
ಸುರೇಶ ಪಾಲಿನಿ ಸಲಹು ಜನನಿ
ಚರಣ
ಪ್ರಾಣಾಗ್ನಿ ಸಂಯೋಗದಿ ಜನಿಸಿದ
ಪ್ರಣವ ನಾದ ಸಪ್ತ ಸ್ವರ ರೂಪಿಣಿ
ವೀಣಾದಿ ವಾದ್ಯ ನೃತ್ಯ ಗಾನ
ವಿನೋದಿನಿ ಹರಿಕೇಶ ಭಾಮಿನಿ
ರಚನೆ : ಮುತ್ತಯ್ಯ ಭಾಗವತರ್
ರಾಗ : ಮೋಹನ ಕಲ್ಯಾಣಿ
ತಾಳ : ಆದಿ
ಭಾಷೆ : ಕನ್ನಡ
ಪಲ್ಲವಿ
ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ
ಅನುಪಲ್ಲವಿ
ಭವದಲಿ ಬರಿದೇ ನವೆಯದೇ ನೋಯದೇ
ತವ ಸುವಿಲಾಸದಿ ತಣಿಯುವೆ ಸುಖಿಸುವೆ
ಚರಣ
ವೃಜಿನಂಗಳನು ವಿದಲಿಪ ಮಾತೆಯ
ತ್ರಿಜಗಜ್ಜನನಿಯ ತ್ರಿಗುಣಾತೀತೆಯ
ನಿಜ ಭಕ್ತಾವನ ಸುರವರ ಸುರಭಿಯ
ಅಜ ಸನ್ನುತೆ ಶ್ರೀ ಹರಿಕೇಶಾಂಗಿಯ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments