*ಪರಿಣಾಮ*
ಇಳಿದದ್ದೇ ತಪ್ಪಾಯಿತುಪ್ರಿಯೆ
ನಿನ್ನ ಪ್ರೀತಿಯಹೊಳೆಯಲ್ಲಿ
ನಿತ್ಯ ಬೇಯುತ್ತಿದ್ದೇನೆ
ಈಗ ವಿರಹದ ಉರಿಯಲ್ಲಿ.
*ಐಕ್ಯ(ಲೀನ)*
ಅವಳ ಎದೆ (ಗೂಡಲ್ಲಿ)ಮೇಲೆ
ನಾನು ಬಂಗಾರದತುಂಡು
ಈ ಬಾಹುಗಳ ನಡುವೆಅವಳು
ಬಾಳೆಯದಿಂಡುಒಲವಲ್ಲಿ
ನಾವು ಐಕ್ಯಗೊಂಡು.
*ಅಶಾಶ್ವತ*
ದಿನಬಿಡದೆ ದೇವರ ಸ್ಮರಿಸಿದ
ಕನಕ,ಪುರಂದರರಿಲ್ಲ,ಅಕ್ಕ,ಬಸವರಿಲ್ಲ
ಗುರುರಾಜ,ಘಂಟಸಾಲರಿಲ್ಲ
ಗುಡಿ,ಚರ್ಚು,ಮಸೀದಿ,ಕಟ್ಟಿಸಿದ
ರಾಜ,ಪಾದ್ರಿ,ಮಹಮದೀಯರಿಲ್ಲ
ಎಂದಮೇಲೆ ಅಲ್ಪರಾದ ನಾವುಅಶಾಶ್ವತರಲ್ಲವೇ.
*ಮಡದಿ*
ಗಂಡನ ಮನೆಯಲ್ಲಿ
ಡಂಬಾಚಾರ(ಡೌಲು)
ತೋರದೆದಿಟ್ಟತನದಿಂದ
ಸಂಸಾರ ಮಾಡುವವಳೇ
ಮಡದಿ.
*ಮದುವೆ*
ಹಣ,ಅದಿಕಾರ,ಆಸ್ಥಿ,ವಯಸ್ಸು
ಇರುವಾಗ ಮದುವೆ
ಹಣ,ಅದಿಕಾರ,ಆಸ್ಥಿ,ವಯಸ್ಸು
ಇಲ್ಲದಿರುವಾಗ ಯಾಕದುವೆ.
*ಹೃದಯ ಮೀಸಲು*
ನನ್ನ ಹೃದಯದಲ್ಲಿಗೆಳತಿ......
ನಿನ್ನೊಬ್ಬಳಿಗೆ ಸ್ಥಾನ
ಏಕೆಂದರೆಎಲ್ಲರಿಗೂ ಸಮ್ಮತಿಸಲು
ಆಗಿಲ್ಲನನ್ನ ಹೃದಯ
ದೇವಸ್ಥಾನ.
-ವಿ ಕೃಷ್ಣಮೊರ್ತಿಅಜ್ಜಹಳ್ಳಿ
Comments