ಹೆಣ್ಣಿನ ಜನುಮ ದೊಡ್ಡದುಯಾರು ಅದ
ಸಣ್ಣದೆಂದೆನ ಬೇಡಿಅಣ್ಣ ತಮ್ಮ ಬಂಧು ಬಳಗ
ಹೆಣ್ಣಿನ ಜನುಮ ದೊಡ್ಡದು ಬಲುದೊಡ್ಡದು "ಪಲ್ಲವಿ"
ಹುಟ್ಟಿದ ಮನೆ,ಮಂದಿ ಬಿಟ್ಟುಕಾಲಿಟ್ಟ ಮನೆ,ಮನ
ಬೆಳಗಿಮೊಜಗಕ್ಕೆ ಮಾದರಿಯಾಗಿ ಬಾಳುವ"ಹೆಣ್ಣಿನ"
ತಾಯಾಗಿ,ತಂಗಿಯಾಗಿ,ಮಗಳಾಗಿ,ಮಡದಿಯು
ತಾನಾಗಿಪ್ರೀತಿ,ವಾತ್ಸಲ್ಯ,ಅನುರಾಗಕ್ಕೆ ಬೆಸುಗೆಯಾಗಿ
ಪ್ರತಿನಿತ್ಯ ಪರಪಂಚದೊಳಗೆ(ಬಳಲುವ)ಬಾಳುವ "ಹೆಣ್ಣಿನ"
ಕಾರ್ಯೇಷುದಾಸಿ,ಕರಣೇಶು ಮಂತ್ರಿ
ರೂಪೇಚ ಲಕ್ಷ್ಮಿ,ಶಯನೇಶು ರಂಬ
ಕ್ಷಮಯಾದರಿತ್ರಿ,ಭೋಜ್ಯೇಶು ಮಾತೆಯಾಗಿ ಬಾಳುವ"ಹೆಣ್ಣಿನ"
ಸತ್ಯಕ್ಕೆ ಸಾವಿತ್ರಿ,ಸೀತೆ,ಅಹಲ್ಯೆಯಾಗಿ
ಧರ್ಮಕ್ಕೆ ಚಂದ್ರಮತಿ,ಚಂದ್ರಹಾಸೆಯಾಗಿ
ತ್ಯಾಗಕ್ಕೆ ಶಾಂತಲೆ,ಶಕುಂತಲೆಯಾಗಿ ಬಾಳುವ"ಹೆಣ್ಣಿನ"
ಕೀರ್ತಿಯಲಿ ಚನ್ನಮ್ಮ ಸ್ಪೂರ್ತಿಗೆ
ಸಂಚಿ ಹೊನ್ನಮ್ಮಧೀರತ್ವಕ್ಕೆ ವನಕೆ ಓಬವ್ವ,ಅಕ್ಕಯ್ಯ(ಅಕ್ಕಮಹಾದೇವಿ)
ಕನ್ನಡ ನಾಡಿಗೆ ಹೆಸರಾಗಿ ಬಾಳಿದ "ಹೆಣ್ಣಿನ"
-ಕೃಷ್ಣಮೊರ್ತಿ
Comments