ದಿಟ್ಟೆ ಮನಸು ಏಕೆ ಕೊಟ್ಟೆ
ನನ್ನ ಸ್ಥಿತಿ-ಗತಿ ನೋಡಿಷ್ಟೆ
ಮುರುಕು ಮನೆ -ಅರಕು ಚಾಪೆ
ನನ್ನ ಮನೆಯು
ಮುರಿದ ಮನಸ್ಸು ಅರಿದ ಕನಸು
ನನ್ನ ಎದೆಯು
ಹೊಂಗೆ ನೆರಳು ಎನ್ನ ಸೂರು
ಮಾಗಿಯ ಚಳಿಗೆ
ನಿನಗೆ-ನಾ-ನನಗೆ ನೀ
ಬೇಸಿಗೆಯ ಬಿಸಿಲಿಗೆ
ನಿನಗೆ ನನ್ನ ನನಗೆ ನಿನ್ನ
ಮೆಲ್ನುಡಿಯ ತಂಗಾಳಿ
ಒಲವೇ ನಿನ್ನ ನನ್ನ ಮೈಗೆ
ವಸ್ತ್ರ ನಮ್ಮ ಪ್ರೀತಿ ಆಗಲಿಪವಿತ್ರ
ನಂಬಿಕೆಯೇ ನಿನಗೆ ನಾ ಕಟ್ಟುವ ತಾಳಿ
ಆದರ್ಶವ ಹಂಚೊಣ ಒಂದಾಗಿ ಬಾಳಿ
-ವಿ ಕೃಷ್ಣಮೊರ್ತಿಅಜ್ಜಹಳ್ಳಿ
Comments