ಬಂತು ಯುಗಾದಿ ಮನೆ ಮನೆಗೆ
ತುಂಬಿ ತಳಿರು ತೋರಣ ಹೊಸ್ತಿಲಿಗೆ
ಬಣ್ಣ ಬಣ್ಣದ ರಂಗವಲ್ಲಿಮುಂಬಾಗಿಲಿಗೆ
ಅಬ್ಯಂಜನ ಸ್ನಾನ ಜಿಡ್ದು ಹಿಡಿದ ಮೈ ಮನಗಳಿಗೆ
ಸಿಹಿ ಬೆಲ್ಲ ಕಹಿ ಬೇವುಎಲ್ಲ ನಾಲಿಗೆಗೆ
ನೋವು ನಲಿವು ಸಮ ಪಾಲು ಎಲ್ಲರ ಬಾಳ್ವೆಗೆ
ಎಲೆ ಉದುರಿ ಮರಚಿಗುರಿ ಚೈತ್ರ ವಾಯ್ತು ಜಗಕೆ
ಮೈತೊಳೆದು ಮಡಿಯುಟ್ಟು ಬೇವು ಬೆಲ್ಲತಿಂದರಾಯ್ತು ಯುಗಾದಿ ಜನಕೆ.
-ಕೃಷ್ಣಮೊರ್ತಿ
Comments