ಚಾಮರಾಜ ನಗರ ತಾಲೋಕು ಮೈಸೂರು ಜಿಲ್ಲೆ
ಸಿಂಗಾನಲ್ಲೂರು ಬಳಿಯ ಗಾಜನೂರಿನ
ಪುಟ್ಟಸ್ವಾಮಯ್ಯನವರ ಪುತ್ರರಾಗಿ ಜನಿಸಿದಿರಿ
ತಂದೆಯೊಂದಿಗೆ ಗುಬ್ಬಿವೀರಣ್ಣನವರ
ನಾಟಕಕಂಪನಿಯ ಗರಡಿಯಲ್ಲಿ ಪಳಗಿದಿರಿ
ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದನೀವು
"ಆಡುಮುಟ್ಟದ ಸೊಪ್ಪಿಲ್ಲ ರಾಜ್ ಮಾಡದ ಪಾತ್ರವಿಲ್ಲ"ಎಂಬ
ಹೆಸರಿಗೆ ಪಾತ್ರರಾದಿರಿ
ಪಾರ್ವತಮ್ಮನವರ ಕೈಹಿದಿದ ನೀವು
ಶಿವ,ರಾಘವ,ಪುನೀತರೆಂಬಪುತ್ರರತ್ನಗಳನ್ನು ಪಡೆದಿರಿ
ಆದರ್ಶಗಳ ಬಿಟ್ಟುಕೊಡದ ರಾಜರಂತೆ ಇದ್ದನೀವು
ರಾಜಕುಮಾರರೆಂದು ಪ್ರಖ್ಯಾತಿ ಪಡೆದಿರಿ
ನಿಮ್ಮ ಕಲಾಸೇವೆ,ಪ್ರತಿಭೆಗೆಬೆಂಗಳೂರು
ವಿಶ್ವವಿದ್ಯಾಲಯದಿಂದಗೌರವ ಡಾಕ್ಟರೇಟ್ ಪಡೆದಿರಿ
ಕರ್ನಾಟಕದಲ್ಲಿ ಕನ್ನಡದ ಉಳಿವಿಗಾಗಿ ಪಣತೊಟ್ಟುನಿಂತಿರಿ
ಕರುನಾಡ ಜನತೆಯ ಹೃದಯ ಗುಡಿಯಲಿ ನೆಲೆಯಾದಿರಿ
ಅಭಿಮಾನಿಗಳ ಆರಾದ್ಯದೈವ ನೀವಾದಿರಿ
ಪದ್ಮಭೂಷಣ,ದಾದಾಪಾಲ್ಕೆ,ಗಾನಗಂದರ್ವಪ್ರಶಸ್ತಿಗಳ ಸರಮಾಲೆ ದರಿಸಿದಿರಿ
ಕಲಾದೇವಿಯ ಮುಕುಟಮಣಿನೀವಾದಿರಿ
ದಾನ,ದ್ಯಾನ,ನೀತಿ,ಯೋಗಬಿಡದೆ ಬಾಳಲ್ಲಿ ಅಳವಡಿಸಿಕೊಂಡಿರಿ
ಕನ್ನಡ ಜನರ ಎದೆಯಂಬರದ ದೃವತಾರೆ ನೀವಾದಿರಿ
-ವಿ ಕೃಷ್ಣಮೊರ್ತಿಅಜ್ಜಹಳ್ಳಿ
Comments